ಙ್ಞಾನೋಕ್ತಿಗಳು 12 : 1 (IRVKN)
ತಿಳಿವಳಿಕೆಯನ್ನು ಪ್ರೀತಿಸುವವನು ಶಿಕ್ಷಣವನ್ನು ಪ್ರೀತಿಸುತ್ತಾನೆ, [QBR2] ಮೂರ್ಖನು ಗದರಿಕೆಯನ್ನು ದ್ವೇಷಿಸುತ್ತಾನೆ. [QBR]
ಙ್ಞಾನೋಕ್ತಿಗಳು 12 : 2 (IRVKN)
ಯೆಹೋವನು ಒಳ್ಳೆಯವನಿಗೆ ದಯೆತೋರಿಸುವನು, [QBR2] ಕುಯುಕ್ತಿಯುಳ್ಳವನನ್ನು ಕೆಟ್ಟವನೆಂದು ನಿರ್ಣಯಿಸುವನು. [QBR]
ಙ್ಞಾನೋಕ್ತಿಗಳು 12 : 3 (IRVKN)
ಯಾರೂ ದುಷ್ಟತನದಿಂದ ಸ್ಥಿರನಾಗನು, [QBR2] ಶಿಷ್ಟನು ಯಾವಾಗಲೂ ದೃಢಮೂಲನೇ. [QBR]
ಙ್ಞಾನೋಕ್ತಿಗಳು 12 : 4 (IRVKN)
ಗುಣವತಿಯಾದ ಸ್ತ್ರೀಯು ಪತಿಯ ತಲೆಗೆ ಕಿರೀಟ, [QBR2] ಮಾನ ಕಳೆಯುವವಳು ಪತಿಯ ಎಲುಬಿಗೆ ಕ್ಷಯ. [QBR]
ಙ್ಞಾನೋಕ್ತಿಗಳು 12 : 5 (IRVKN)
ಶಿಷ್ಟರ ಉದ್ದೇಶ ನ್ಯಾಯ, [QBR2] ದುಷ್ಟರ ಆಲೋಚನೆ ಮೋಸ. [QBR]
ಙ್ಞಾನೋಕ್ತಿಗಳು 12 : 6 (IRVKN)
ಕೆಟ್ಟವರ ಮಾತು ರಕ್ತಕ್ಕೆ ಹೊಂಚು, [QBR2] ಯಥಾರ್ಥವಂತರ ನುಡಿ ಪ್ರಾಣರಕ್ಷಣೆ. [QBR]
ಙ್ಞಾನೋಕ್ತಿಗಳು 12 : 7 (IRVKN)
ದುರ್ಜನರು ಕೆಡವಲ್ಪಟ್ಟು ನಿರ್ಮೂಲರಾಗುವರು, [QBR2] ಸಜ್ಜನರ ಮನೆಯು ಸ್ಥಿರವಾಗಿ ನಿಲ್ಲುವುದು. [QBR]
ಙ್ಞಾನೋಕ್ತಿಗಳು 12 : 8 (IRVKN)
ಬುದ್ಧಿವಂತನನ್ನು ಅವನ ಬುದ್ಧಿಗೆ ತಕ್ಕಂತೆ ಹೊಗಳುವರು, [QBR2] ವಕ್ರಬುದ್ಧಿಯುಳ್ಳವನನ್ನು ತಿರಸ್ಕರಿಸುವರು. [QBR]
ಙ್ಞಾನೋಕ್ತಿಗಳು 12 : 9 (IRVKN)
ಹೊಟ್ಟೆಗಿಲ್ಲದ ಡಾಂಭಿಕನಿಗಿಂತಲೂ [QBR2] ಸೇವಕನುಳ್ಳ ಸಾಧಾರಣ ಮನುಷ್ಯನ ಸ್ಥಿತಿಯೇ ಲೇಸು. [QBR]
ಙ್ಞಾನೋಕ್ತಿಗಳು 12 : 10 (IRVKN)
ಶಿಷ್ಟನು ತನ್ನ ಪಶುಗಳ ಕ್ಷೇಮವನ್ನು ಲಕ್ಷಿಸುತ್ತಾನೆ, [QBR2] ದುಷ್ಟನ ವಾತ್ಸಲ್ಯವೋ ಕ್ರೂರತನವೇ. [QBR]
ಙ್ಞಾನೋಕ್ತಿಗಳು 12 : 11 (IRVKN)
ದುಡಿದು ಹೊಲಗೇಯುವವನು ಹೊಟ್ಟೆತುಂಬಾ ಉಣ್ಣುವನು, [QBR2] ವ್ಯರ್ಥಕಾರ್ಯಾಸಕ್ತನು ಬುದ್ಧಿಹೀನನೇ. [QBR]
ಙ್ಞಾನೋಕ್ತಿಗಳು 12 : 12 (IRVKN)
ಕೆಡುಕರ ಕೊಳ್ಳೆಯು ದುಷ್ಟರಿಗೆ ಇಷ್ಟ, [QBR2] ಆದರೆ ಶಿಷ್ಟರ ಬುಡ ಫಲದಾಯಕ. [QBR]
ಙ್ಞಾನೋಕ್ತಿಗಳು 12 : 13 (IRVKN)
ದುಷ್ಟನು ತನ್ನ ತುಟಿಗಳ ದೋಷದಿಂದ ಬೋನಿಗೆ ಬೀಳುವನು, [QBR2] ಶಿಷ್ಟನು ಇಕ್ಕಟ್ಟಿನಿಂದ ಪಾರಾಗುವನು. [QBR]
ಙ್ಞಾನೋಕ್ತಿಗಳು 12 : 14 (IRVKN)
ಬಾಯಿಯ ಫಲವಾಗಿ ಮನುಷ್ಯನು ಬೇಕಾದಷ್ಟು ಸುಖವನ್ನು ಅನುಭವಿಸುವನು, [QBR2] ಅವನ ಕೈಕೆಲಸದ ಫಲವು ಅವನಿಗೆ ಪ್ರಾಪ್ತವಾಗುವುದು. [QBR]
ಙ್ಞಾನೋಕ್ತಿಗಳು 12 : 15 (IRVKN)
ಮೂರ್ಖನ ನಡತೆ ಅವನ ದೃಷ್ಟಿಗೆ ಸರಿ, [QBR2] ಜ್ಞಾನಿಯು ಉಚಿತಾಲೋಚನೆಯನ್ನು ಗಮನಿಸುವನು. [QBR]
ಙ್ಞಾನೋಕ್ತಿಗಳು 12 : 16 (IRVKN)
ಮೂರ್ಖನ ಸಿಟ್ಟು ತಟ್ಟನೆ ರಟ್ಟಾಗುವುದು, [QBR2] ಜಾಣನು ಅವಮಾನವನ್ನು ಮರೆಮಾಡುವನು. [QBR]
ಙ್ಞಾನೋಕ್ತಿಗಳು 12 : 17 (IRVKN)
ಸತ್ಯವನ್ನಾಡುವವನು ನ್ಯಾಯವನ್ನು ತೋರ್ಪಡಿಸುವನು, [QBR2] ಸುಳ್ಳುಸಾಕ್ಷಿಯು ಅಸತ್ಯವನ್ನು ನುಡಿಯುವನು. [QBR]
ಙ್ಞಾನೋಕ್ತಿಗಳು 12 : 18 (IRVKN)
ಕತ್ತಿ ತಿವಿದ ಹಾಗೆ ದುಡುಕಿ ಮಾತನಾಡುವವರುಂಟು, [QBR2] ಜ್ಞಾನವಂತರ ಮಾತು ಸ್ವಸ್ಥತೆಯನ್ನು ತರುವುದು. [QBR]
ಙ್ಞಾನೋಕ್ತಿಗಳು 12 : 19 (IRVKN)
ಸತ್ಯದ ತುಟಿ ಶಾಶ್ವತ, [QBR2] ಸುಳ್ಳಿನ ನಾಲಿಗೆ ಕ್ಷಣಿಕ. [QBR]
ಙ್ಞಾನೋಕ್ತಿಗಳು 12 : 20 (IRVKN)
ಕೇಡನ್ನು ಕಲ್ಪಿಸುವವರ ಹೃದಯದಲ್ಲಿ ಮೋಸ, [QBR2] ಹಿತೋಪದೇಶಕರ ಮನಸ್ಸಿನಲ್ಲಿ ಉಲ್ಲಾಸ. [QBR]
ಙ್ಞಾನೋಕ್ತಿಗಳು 12 : 21 (IRVKN)
ಸಜ್ಜನರಿಗೆ ಯಾವ ಹಾನಿಯೂ ಸಂಭವಿಸದು, [QBR2] ದುರ್ಜನರಿಗೆ ಕೇಡು ತುಂಬಿ ತುಳುಕುವುದು. [QBR]
ಙ್ಞಾನೋಕ್ತಿಗಳು 12 : 22 (IRVKN)
ಸುಳ್ಳುತುಟಿ ಯೆಹೋವನಿಗೆ ಅಸಹ್ಯವಾಗಿವೆ. [QBR2] ಸತ್ಯವಂತರು ಆತನಿಗೆ ಆನಂದ ತರುತ್ತಾರೆ. [QBR]
ಙ್ಞಾನೋಕ್ತಿಗಳು 12 : 23 (IRVKN)
ಜಾಣನು ತನ್ನ ಜ್ಞಾನವನ್ನು ಗುಪ್ತಪಡಿಸುವನು, [QBR2] ಮೂಢರ ಮನಸ್ಸು ಮೂರ್ಖತನವನ್ನು ಪ್ರಕಟಿಸುವುದು. [QBR]
ಙ್ಞಾನೋಕ್ತಿಗಳು 12 : 24 (IRVKN)
ಚುರುಕುಗೈಯವನಿಗೆ ರಾಜ್ಯಾಧಿಕಾರ, [QBR2] ಮೈಗಳ್ಳನಿಗೆ ದಾಸತ್ವದ ಬದುಕು. [QBR]
ಙ್ಞಾನೋಕ್ತಿಗಳು 12 : 25 (IRVKN)
ಕಳವಳವು ಮನಸ್ಸನ್ನು ಕುಗ್ಗಿಸುವುದು, [QBR2] ಕನಿಕರದ ಮಾತು ಅದನ್ನು ಹಿಗ್ಗಿಸುವುದು. [QBR]
ಙ್ಞಾನೋಕ್ತಿಗಳು 12 : 26 (IRVKN)
ಸನ್ಮಾರ್ಗಿಯು ನೆರೆಯವನಿಗೆ ಮಾರ್ಗತೋರಿಸುವನು, [QBR2] ದುರ್ಮಾರ್ಗಿಯು ಮಾರ್ಗತಪ್ಪಿಸುವನು. [QBR]
ಙ್ಞಾನೋಕ್ತಿಗಳು 12 : 27 (IRVKN)
ಮೈಗಳ್ಳನು ಹಿಡಿದ ಬೇಟೆಯನ್ನೂ ಅನುಭವಿಸಲಾರನು, [QBR2] ಸನ್ಮಾರ್ಗದಲ್ಲಿ ನಡೆಯುವವನಿಗೆ ಅಮೂಲ್ಯ ಸಂಪತ್ತು ದೊರಕುವುದು. [QBR]
ಙ್ಞಾನೋಕ್ತಿಗಳು 12 : 28 (IRVKN)
ಧರ್ಮಮಾರ್ಗದಿಂದ ಜೀವಲಾಭವು, [QBR2] ಆ ಮಾರ್ಗದಲ್ಲಿ ಮರಣವಿಲ್ಲ. [PE]

1 2 3 4 5 6 7 8 9 10 11 12 13 14 15 16 17 18 19 20 21 22 23 24 25 26 27 28

BG:

Opacity:

Color:


Size:


Font: