ಫಿಲಿಪ್ಪಿಯವರಿಗೆ 2 : 1 (IRVKN)
ಯೇಸುವಿನ ದೀನತೆಯನ್ನು ಅನುಸರಿಸಬೇಕು ಕ್ರಿಸ್ತನಿಂದ ಪ್ರೋತ್ಸಾಹ, ಪ್ರೀತಿಯ ಸಾಂತ್ವನ, * ಅ. ಕೃ. 15:2 ಪವಿತ್ರಾತ್ಮನ ಅನ್ಯೋನ್ಯತೆ, † ಕೊಲೊ 3:12 ಕಾರುಣ್ಯದಯಾರಸಗಳು ಉಂಟಾಗುವುದಾದರೆ,
ಫಿಲಿಪ್ಪಿಯವರಿಗೆ 2 : 2 (IRVKN)
ನೀವೆಲ್ಲರು ‡ ರೋಮಾ. 12:16 ಒಂದೇ ಮನಸ್ಸುವುಳ್ಳವರಾಗಿ, ಒಂದೇ ಪ್ರೀತಿಯುಳ್ಳವರಾಗಿ, ಅನ್ಯೋನ್ಯಭಾವವುಳ್ಳವರಾಗಿ ಹಾಗೂ ಒಂದೇ ಗುರಿಯಿಟ್ಟುಕೊಂಡವರಾಗಿ § ಯೋಹಾ 3:29; 15:11 ನನ್ನ ಸಂತೋಷವನ್ನು ಪರಿಪೂರ್ಣಮಾಡಿರಿ.
ಫಿಲಿಪ್ಪಿಯವರಿಗೆ 2 : 3 (IRVKN)
* ಫಿಲಿ. 1:17 ಸ್ವಾರ್ಥದಿಂದಾಗಲಿ, † ಗಲಾ 5:26 ಒಣ ಹೆಮ್ಮೆಯಿಂದಾಗಲಿ ಯಾವುದನ್ನೂ ಮಾಡದೆ, ‡ ಎಫೆ 4:2; 5:21; ರೋಮಾ. 12:10 ಪ್ರತಿಯೊಬ್ಬನು ದೀನಭಾವದಿಂದ ಮತ್ತೊಬ್ಬರನ್ನು ತನಗಿಂತಲೂ ಶ್ರೇಷ್ಠರೆಂದು ಎಣಿಸಲಿ.
ಫಿಲಿಪ್ಪಿಯವರಿಗೆ 2 : 4 (IRVKN)
§ ರೋಮಾ. 15:2 ನಿಮ್ಮಲ್ಲಿ ಪ್ರತಿಯೊಬ್ಬನು ಸ್ವಹಿತವನ್ನು ಮಾತ್ರ ನೋಡದೆ ಪರಹಿತವನ್ನು ಸಹ ನೋಡಲಿ.
ಫಿಲಿಪ್ಪಿಯವರಿಗೆ 2 : 5 (IRVKN)
* ರೋಮಾ. 15:3 ಕ್ರಿಸ್ತ ಯೇಸುವಿನಲ್ಲಿದ್ದಂಥ ಮನಸ್ಸು ನಿಮ್ಮಲ್ಲಿಯೂ ಇರಲಿ.
ಫಿಲಿಪ್ಪಿಯವರಿಗೆ 2 : 6 (IRVKN)
ಆತನು † ಯೋಹಾ 5:18; 10:33 ದೇವಸ್ವರೂಪನಾಗಿದ್ದರೂ, ದೇವರಿಗೆ ಸರಿಸಮಾನನಾಗಿರುವನೆಂಬ ಅಮೂಲ್ಯ ಪದವಿಯನ್ನು ಬಿಡಲೊಲ್ಲೆನು ಎಂದೆಣಿಸದೆ,
ಫಿಲಿಪ್ಪಿಯವರಿಗೆ 2 : 7 (IRVKN)
‡ 2 ಕೊರಿ 8:9; 13:4 ತನ್ನನ್ನು ಬರಿದು ಮಾಡಿಕೊಂಡು § ಯೆಶಾ 42:1; ಮತ್ತಾ 20:28 ದಾಸನ ರೂಪವನ್ನು ಧರಿಸಿಕೊಂಡು * ರೋಮಾ. 8:3; ಗಲಾ. 4:4; ಯೋಹಾ 1:14 ಮನುಷ್ಯರಿಗೆ ಸಮನಾದನು. ಮನುಷ್ಯನಾಕಾರದಲ್ಲಿ ಕಾಣಿಸಿಕೊಂಡನು.
ಫಿಲಿಪ್ಪಿಯವರಿಗೆ 2 : 8 (IRVKN)
ಆತನು ತನ್ನನ್ನು ತಗ್ಗಿಸಿಕೊಂಡು † ಇಬ್ರಿ. 5:8; ಮತ್ತಾ 26:39; ಯೋಹಾ 10:18; ರೋಮಾ. 5:19 ಮರಣವನ್ನು ‡ ಇಬ್ರಿ. 12:2 ಅಂದರೆ ಶಿಲುಬೆಯ ಮರಣವನ್ನಾದರೂ ಹೊಂದುವಷ್ಟು ವಿಧೇಯನಾದನು.
ಫಿಲಿಪ್ಪಿಯವರಿಗೆ 2 : 9 (IRVKN)
§ ಯೋಹಾ 10:17; ಯೆಶಾ 52:13; 53:12; ಇಬ್ರಿ. 2:9 ಈ ಕಾರಣದಿಂದ * ಅ. ಕೃ. 2:33; ಮತ್ತಾ 28:18 ದೇವರು ಆತನನ್ನು ಅತ್ಯುನ್ನತ ಸ್ಥಾನಕ್ಕೆ ಏರಿಸಿ, † ಎಫೆ 1:21; ಇಬ್ರಿ. 1:4 ಎಲ್ಲಾ ಹೆಸರುಗಳಿಗಿಂತ ಶ್ರೇಷ್ಠವಾದ ಹೆಸರನ್ನು ಆತನಿಗೆ ದಯಪಾಲಿಸಿದ್ದಾನೆ.
ಫಿಲಿಪ್ಪಿಯವರಿಗೆ 2 : 10 (IRVKN)
ಆದ್ದರಿಂದ ‡ ಪ್ರಕ 5:13; ಎಫೆ 1:10 ಸ್ವರ್ಗ ಮರ್ತ್ಯ ಪಾತಾಳಗಳಲ್ಲಿರುವವರೆಲ್ಲರೂ § ಯೆಶಾ 45:23; ರೋಮಾ. 14:11 ಯೇಸುವಿನ ಹೆಸರಿನಲ್ಲಿ ಮೊಣಕಾಲೂರಿ ಅಡ್ಡಬಿದ್ದು,
ಫಿಲಿಪ್ಪಿಯವರಿಗೆ 2 : 11 (IRVKN)
ತಂದೆಯಾದ ದೇವರ ಮಹಿಮೆಗಾಗಿ ಪ್ರತಿಯೊಂದು ನಾಲಿಗೆಯು ಯೇಸು ಕ್ರಿಸ್ತನನ್ನು * ರೋಮಾ. 14:9; ಯೋಹಾ 13:13 ಕರ್ತನೆಂದು ಅರಿಕೆಮಾಡುವುದು.
ಫಿಲಿಪ್ಪಿಯವರಿಗೆ 2 : 12 (IRVKN)
ನಕ್ಷತ್ರಗಳಂತೆ ಪ್ರಕಾಶಿಸುವುದು ಹೀಗಿರುವಲ್ಲಿ ನನ್ನ ಪ್ರಿಯರೇ, † ಫಿಲಿ. 1:5; 4:15 ನೀವು ನನ್ನ ಮಾತನ್ನು ಯಾವಾಗಲೂ ಅನುಸರಿಸಿದಂತೆ ಈಗಲೂ ಅನುಸರಿಸಿರಿ. ನಾನು ನಿಮ್ಮಲ್ಲಿರುವಾಗ ಮಾತ್ರವಲ್ಲದೆ, ನಾನಿಲ್ಲದಿರುವಾಗಲೂ ಬಹು ಹೆಚ್ಚಾಗಿ ಮನೋಭೀತಿಯಿಂದ ನಡುಗುವವರಾಗಿ ನಿಮ್ಮ ನಿಮ್ಮ ರಕ್ಷಣೆಯನ್ನು ಸಾಧಿಸಿಕೊಳ್ಳಿರಿ.
ಫಿಲಿಪ್ಪಿಯವರಿಗೆ 2 : 13 (IRVKN)
ಯಾಕೆಂದರೆ ‡ 1 ಕೊರಿ 12:6; 15:10; ಇಬ್ರಿ. 13:21 ದೇವರೇ ತನ್ನ § 1 ತಿಮೊ. 2:4 ಸುಚಿತ್ತವನ್ನು ನೆರವೇರಿಸಬೇಕೆಂದು ನಿಮ್ಮಲ್ಲಿ ಉದ್ದೇಶವನ್ನೂ ಮತ್ತು ಪ್ರಯತ್ನವನ್ನೂ ಉಂಟುಮಾಡುವವನಾಗಿದ್ದಾನೆ.
ಫಿಲಿಪ್ಪಿಯವರಿಗೆ 2 : 14 (IRVKN)
ಗೊಣಗುಟ್ಟದೆಯೂ, ವಿವಾದಗಳಿಲ್ಲದೆಯೂ ಎಲ್ಲವನ್ನು ಮಾಡಿರಿ.
ಫಿಲಿಪ್ಪಿಯವರಿಗೆ 2 : 15 (IRVKN)
ಹೀಗೆ ನೀವು ನಿರ್ದೋಷಿಗಳೂ ಹಾಗೂ ಯಥಾರ್ಥಮನಸ್ಸುಳ್ಳವರೂ ಆಗಿದ್ದು * ಧರ್ಮೋ 32:5; ಮತ್ತಾ 17:17; ಲೂಕ 9:41 ವಕ್ರಬುದ್ಧಿಯುಳ್ಳ ಮೂರ್ಖ ಜಾತಿಯ ಮಧ್ಯದಲ್ಲಿ † ಮತ್ತಾ 5:45; ಎಫೆ 5:1 ದೇವರ ನಿಷ್ಕಳಂಕರಾದ ಮಕ್ಕಳಾಗಿರುವಿರಿ.
ಫಿಲಿಪ್ಪಿಯವರಿಗೆ 2 : 16 (IRVKN)
ಇವರೊಳಗೆ ನೀವು ಸರ್ವರಿಗೂ ‡ ಅ. ಕೃ. 5:20 ಜೀವದಾಯಕ ವಾಕ್ಯವನ್ನು ತೋರಿಸಿಕೊಡುವವರಾಗಿದ್ದು, ಲೋಕದೊಳಗೆ § ಮತ್ತಾ 5:14,16; ತೀತ 2:10 ಹೊಳೆಯುವ ನಕ್ಷತ್ರಗಳಂತೆ ಕಾಣಿಸುತ್ತೀರಿ. ನೀವು ಹೀಗೆ ನಡೆದರೆ * ಗಲಾ. 2:2; 4:11; 1 ಥೆಸ. 3:5 ನಾನು ಸುವಾರ್ತೆಗಾಗಿ ಓಡಿದ ಓಟವು ವ್ಯರ್ಥವಲ್ಲ, ನಾನು ಪ್ರಯಾಸಪಟ್ಟದ್ದೂ ವ್ಯರ್ಥವಲ್ಲ ಎಂಬ † 2 ಕೊರಿ 1:14 ಹೊಗಳಿಕೆಯು ಕ್ರಿಸ್ತನ ದಿನದಲ್ಲಿ ನನಗೆ ಉಂಟಾಗುವುದು.
ಫಿಲಿಪ್ಪಿಯವರಿಗೆ 2 : 17 (IRVKN)
‡ ರೋಮಾ. 15:16 ನಿಮ್ಮ ನಂಬಿಕೆಯೆಂಬ ಯಜ್ಞವನ್ನು ದೇವರಿಗರ್ಪಿಸುವ ಸೇವೆಯಲ್ಲಿ ನಾನೇ § 2 ತಿಮೊ. 4:6; 2 ಕೊರಿ 12:15 ಪಾನದ್ರವ್ಯವಾಗಿ ಅರ್ಪಿತವಾಗಬೇಕಾದರೂ ನನಗೆ ಸಂತೋಷವೇ, ನಿಮ್ಮೆಲ್ಲರೊಂದಿಗೂ ಸಂತೋಷ ಪಡುತ್ತೇನೆ.
ಫಿಲಿಪ್ಪಿಯವರಿಗೆ 2 : 18 (IRVKN)
ಹಾಗೆಯೇ ನೀವೂ ಸಂತೋಷಿಸಿರಿ, ನನ್ನೊಂದಿಗೆ ಸಂತೋಷಪಡಿರಿ.
ಫಿಲಿಪ್ಪಿಯವರಿಗೆ 2 : 19 (IRVKN)
ಎಪಫ್ರೊದೀತನ್ನೂ ತಿಮೊಥೆಯನ್ನೂ ಆದರೆ ನಾನು * 1 ಕೊರಿ 4:17; 1 ಥೆಸ. 3:2 ತಿಮೊಥೆಯನನ್ನು ಬೇಗನೆ ನಿಮ್ಮ ಬಳಿಗೆ ಕಳುಹಿಸಬೇಕೆಂದು ಕರ್ತನಾದ ಯೇಸುವಿನಲ್ಲಿ ನಿರೀಕ್ಷಿಸುತ್ತೇನೆ. ಅವನ ಮುಖಾಂತರ ನಿಮ್ಮ ಸಂಗತಿಗಳನ್ನು ತಿಳಿದು ನಾನೂ ಆದರಣೆ ಹೊಂದಿದೆನು.
ಫಿಲಿಪ್ಪಿಯವರಿಗೆ 2 : 20 (IRVKN)
† 1 ಕೊರಿ 16:10 ಅವನ ಹಾಗೆ ನಿಮ್ಮ ಯೋಗಕ್ಷೇಮವನ್ನು ಕುರಿತು ಯಥಾರ್ಥವಾಗಿ ಚಿಂತಿಸುವವರು ನನ್ನ ಬಳಿಯಲ್ಲಿ ಬೇರೆ ಯಾರೂ ಇಲ್ಲ.
ಫಿಲಿಪ್ಪಿಯವರಿಗೆ 2 : 21 (IRVKN)
‡ 2 ತಿಮೊ. 3:2; 1 ಕೊರಿ 10:24 ಎಲ್ಲರೂ ಸ್ವಕಾರ್ಯಗಳ ಮೇಲೆ ಮನಸ್ಸಿಡುತ್ತಾರೆಯೇ ಹೊರತು ಯೇಸು ಕ್ರಿಸ್ತನ ಕಾರ್ಯಗಳ ಮೇಲೆ ಮನಸ್ಸಿಡುವುದಿಲ್ಲ.
ಫಿಲಿಪ್ಪಿಯವರಿಗೆ 2 : 22 (IRVKN)
ಆದರೆ ತಿಮೊಥೆಯನ ಯೋಗ್ಯತೆಯನ್ನು ನೀವು ತಿಳಿದುಕೊಂಡಿದ್ದೀರಿ. § 1 ಕೊರಿ 4:17; 1 ತಿಮೊ. 1:2; 1 ತಿಮೊ. 1:2 ಮಗನು ತಂದೆಗೆ ಹೇಗೋ * 2 ತಿಮೊ. 3:10 ಹಾಗೆಯೇ ಅವನು ನನ್ನ ಜೊತೆಯಲ್ಲಿ ಸುವಾರ್ತಾಪ್ರಚಾರಕ್ಕಾಗಿ ಸೇವೆಮಾಡಿದನೆಂಬುದು ನಿಮಗೆ ಗೊತ್ತುಂಟು.
ಫಿಲಿಪ್ಪಿಯವರಿಗೆ 2 : 23 (IRVKN)
ಆದ್ದರಿಂದ ನನ್ನ ವಿಷಯವು ಹೇಗಾಗುವುದೋ ಅದನ್ನು ತಿಳಿದ ಕೂಡಲೆ ಅವನನ್ನೇ ಕಳುಹಿಸುವುದಕ್ಕೆ ಬಯಸುತ್ತೇನೆ.
ಫಿಲಿಪ್ಪಿಯವರಿಗೆ 2 : 24 (IRVKN)
† ಫಿಲಿ. 1:25; ಫಿಲೆ. 22 ಇದಲ್ಲದೆ ನಾನು ಸಹ ಬೇಗನೆ ಬರುವೆನೆಂದು ಕರ್ತನಲ್ಲಿ ದೃಢವಾಗಿ ನಂಬಿದ್ದೇನೆ.
ಫಿಲಿಪ್ಪಿಯವರಿಗೆ 2 : 25 (IRVKN)
‡ ಫಿಲಿ. 4:18 ನನ್ನ ಕೊರತೆಯನ್ನು ನೀಗುವುದಕ್ಕೆ ನೀವು ಕಳುಹಿಸಿದಂಥ, ನನ್ನ ಸಹೋದರನೂ, ಜೊತೆಸೇವಕನೂ, ಸಹಸೇನಾನಿಯೂ ಆಗಿರುವಂಥ ಎಪಫ್ರೊದೀತನನ್ನು ನಿಮ್ಮ ಬಳಿಗೆ ಕಳುಹಿಸುವುದು ಅವಶ್ಯವೆಂದು ಭಾವಿಸಿದ್ದೇನೆ.
ಫಿಲಿಪ್ಪಿಯವರಿಗೆ 2 : 26 (IRVKN)
ಅವನು ನಿಮ್ಮೆಲ್ಲರನ್ನು ಕುರಿತು ಹಂಬಲಿಸುತ್ತಿದ್ದನು ಮತ್ತು ತಾನು ಅಸ್ವಸ್ಥನಾಗಿದ್ದ ಸುದ್ದಿಯನ್ನು ನೀವು ಕೇಳಿದ್ದರಿಂದ ಅವನು ನೊಂದುಕೊಂಡನು.
ಫಿಲಿಪ್ಪಿಯವರಿಗೆ 2 : 27 (IRVKN)
ಅವನು ರೋಗದಲ್ಲಿ ಬಿದ್ದು ಸಾಯುವ ಹಾಗಿದ್ದನೆಂಬುದು ನಿಜವೇ, ಆದರೆ ದೇವರು ಅವನನ್ನು ಕರುಣಿಸಿದನು. ಅವನನ್ನು ಮಾತ್ರವಲ್ಲದೆ ನನಗೆ ದುಃಖದ ಮೇಲೆ ದುಃಖವು ಬಾರದಂತೆ ನನ್ನನ್ನೂ ಕರುಣಿಸಿದನು.
ಫಿಲಿಪ್ಪಿಯವರಿಗೆ 2 : 28 (IRVKN)
ಆದ್ದರಿಂದ ನೀವು ಅವನನ್ನು ನೋಡಿ ತಿರುಗಿ ಸಂತೋಷಪಡಬೇಕೆಂತಲೂ ನನ್ನ ದುಃಖ ಕಡಿಮೆಯಾಗಬೇಕೆಂತಲೂ ನಾನು ಅವನನ್ನು ಅತಿ ತವಕದಿಂದ ಕಳುಹಿಸಿದ್ದೇನೆ.
ಫಿಲಿಪ್ಪಿಯವರಿಗೆ 2 : 29 (IRVKN)
(29-30)ಹೀಗಿರಲಾಗಿ § ಫಿಲಿ. 4:10 ನೀವೇ ನನಗೆ ಮಾಡಬೇಕೆಂದಿರುವ ಉಪಚಾರದಲ್ಲಿ ಕೊರತೆಯಾದದ್ದನ್ನು ತುಂಬುವುದಕ್ಕಾಗಿ * ಅ. ಕೃ. 20:24 ಅವನು ಜೀವದ ಆಸೆಯನ್ನು ತೊರೆದು ಕ್ರಿಸ್ತನ ಸೇವೆಯ ನಿಮಿತ್ತ ಸಾಯುವ ಸ್ಥಿತಿಯಲ್ಲಿದುದ್ದರಿಂದ ನೀವು ಅವನನ್ನು ಪೂರ್ಣ ಸಂತೋಷದಿಂದ ಕರ್ತನ ಹೆಸರಿನಲ್ಲಿ ಸೇರಿಸಿಕೊಳ್ಳಿರಿ. † 1 ಕೊರಿ 16:18; 1 ಥೆಸ. 5:12,13; 1 ತಿಮೊ. 5:17 ಅಂಥವರನ್ನು ಮಾನ್ಯರೆಂದೆಣಿಸಿರಿ.
ಫಿಲಿಪ್ಪಿಯವರಿಗೆ 2 : 30 (IRVKN)
❮
❯