ಫಿಲಿಪ್ಪಿಯವರಿಗೆ 1 : 1 (IRVKN)
{ಪೀಠಿಕೆ} [PS] ಕ್ರಿಸ್ತ ಯೇಸುವಿನ ದಾಸರಾದ ಪೌಲ ಮತ್ತು ತಿಮೊಥೆಯರು, ಫಿಲಿಪ್ಪಿಯದಲ್ಲಿ ಕ್ರಿಸ್ತ ಯೇಸುವಿನ ಮೂಲಕ [* 2 ಕೊರಿ 1:1; ಕೊಲೊ 1:2] ದೇವಜನರಾಗಿರುವವರೆಲ್ಲರಿಗೂ ಮತ್ತು ಅವರೊಂದಿಗಿರುವ [† ಅ. ಕೃ. 20:28; 1 ತಿಮೊ. 3:1-7; ತೀತ. 1:6-9] ಸಭಾಧ್ಯಕ್ಷರಿಗೂ ಹಾಗೂ [‡ 1 ತಿಮೊ. 3:8,12] ಸಭಾಸೇವಕರಿಗೂ ಬರೆಯುವುದೇನೆಂದರೆ,
ಫಿಲಿಪ್ಪಿಯವರಿಗೆ 1 : 2 (IRVKN)
ನಮ್ಮ ತಂದೆಯಾದ ದೇವರಿಂದಲೂ, ಕರ್ತನಾದ ಯೇಸು ಕ್ರಿಸ್ತನಿಂದಲೂ ನಿಮಗೆ ಕೃಪೆಯೂ, ಶಾಂತಿಯೂ ಲಭಿಸಲಿ. [PS]
ಫಿಲಿಪ್ಪಿಯವರಿಗೆ 1 : 3 (IRVKN)
{ಕೃತಜ್ಞತಾಸ್ತುತಿಯೂ ಪ್ರಾರ್ಥನೆಗಳೂ} [PS] [3-4] [§ ರೋಮಾ. 1:9; ಎಫೆ 1:16] ನಾನು ನಿಮ್ಮನ್ನು ನೆನಪಿಸಿಕೊಳ್ಳುವಾಗೆಲ್ಲಾ ನನ್ನ ದೇವರಿಗೆ ಸ್ತೋತ್ರಸಲ್ಲಿಸುತ್ತೇನೆ, ನಾನು ನಿಮಗಾಗಿ ದೇವರನ್ನು ಪ್ರಾರ್ಥಿಸುವ ಎಲ್ಲಾ ಸಮಯಗಳಲ್ಲಿಯೂ ಸಂತೋಷದಿಂದಲೇ ಪ್ರಾರ್ಥಿಸುವವನಾಗಿದ್ದೇನೆ.
ಫಿಲಿಪ್ಪಿಯವರಿಗೆ 1 : 4 (IRVKN)
[NIL]
ಫಿಲಿಪ್ಪಿಯವರಿಗೆ 1 : 5 (IRVKN)
ನೀವು ಮೊದಲಿನಿಂದ ಇಂದಿನವರೆಗೂ [* ಫಿಲಿ. 2:12; 4:15; ಅ. ಕೃ. 16:12-40] ಸುವಾರ್ತಾಪ್ರಚಾರದಲ್ಲಿ ಸಹಕಾರಿಗಳಾಗಿದ್ದೀರೆಂದು [† ರೋಮಾ. 1:8] ನನ್ನ ದೇವರಿಗೆ ಕೃತಜ್ಞತಾಸ್ತುತಿ ಮಾಡುತ್ತೇನೆ.
ಫಿಲಿಪ್ಪಿಯವರಿಗೆ 1 : 6 (IRVKN)
ಈ ಒಳ್ಳೆಯ ಕೆಲಸವನ್ನು ನಿಮ್ಮಲ್ಲಿ ಪ್ರಾರಂಭಿಸಿದಾತನು ಅದನ್ನು ನಡಿಸಿಕೊಂಡು ಯೇಸು ಕ್ರಿಸ್ತನು ಬರುವ ದಿನದೊಳಗಾಗಿ [‡ ಕೀರ್ತ 138:8; 1 ಥೆಸ. 5:24] ಪೂರ್ಣತೆಗೆ ತರುವನೆಂದು ನನಗೆ ಭರವಸವುಂಟು.
ಫಿಲಿಪ್ಪಿಯವರಿಗೆ 1 : 7 (IRVKN)
ನಿಮ್ಮೆಲ್ಲರನ್ನು ಕುರಿತು ನನಗೆ ಹೀಗನ್ನಿಸುವುದು ಸೂಕ್ತವೇ ಸರಿ. [§ ಅ. ಕೃ. 20:23; 26:29; ಕೊಲೊ 4:18; 2 ತಿಮೊ. 2:9; ಎಫೆ 3:1] ನಾನು ಬಂಧನದಲ್ಲಿರುವಾಗಲೂ, [* ವ. 16] ಸುವಾರ್ತೆಯ ಕುರಿತಾದ ವಾದ-ಪ್ರತಿವಾದಗಳಲ್ಲಿಯು ನೀವೆಲ್ಲರೂ ನನ್ನೊಂದಿಗೆ ದೇವರ ಕೃಪೆಯಲ್ಲಿ ಪಾಲುಗಾರರಾಗಿದ್ದೀರೆಂದು [† 2 ಕೊರಿ 7:3] ನಿಮ್ಮನ್ನು ನನ್ನ ಹೃದಯದಲ್ಲಿರಿಸಿಕೊಂಡಿದ್ದೇನೆ.
ಫಿಲಿಪ್ಪಿಯವರಿಗೆ 1 : 8 (IRVKN)
ಕ್ರಿಸ್ತ ಯೇಸುವಿಗಿರುವಂಥ ಕನಿಕರದಿಂದ [‡ ಫಿಲಿ. 4:1; ರೋಮಾ. 1:11; 1 ಥೆಸ. 3:6; 2 ತಿಮೊ. 1:4] ನಿಮ್ಮೆಲ್ಲರಿಗೋಸ್ಕರ ಎಷ್ಟೋ ಹಂಬಲಿಸುತ್ತೇನೆ. [§ ರೋಮಾ. 1:9; 9:1] ಇದಕ್ಕೆ ದೇವರೇ ಸಾಕ್ಷಿ.
ಫಿಲಿಪ್ಪಿಯವರಿಗೆ 1 : 9 (IRVKN)
ಮತ್ತು [* 1 ಥೆಸ. 3:12; 2 ಥೆಸ. 1:3] ನಿಮ್ಮ ಪ್ರೀತಿಯು ಇನ್ನೂ ಅಧಿಕವಾಗಿ ಹೆಚ್ಚುತ್ತಾ [† ಕೊಲೊ 1:9; 3:10; ಫಿಲೆ. 6] ಪೂರ್ಣ ಜ್ಞಾನ ವಿವೇಕಗಳಿಂದ ಕೂಡಿರಬೇಕೆಂದು ನಾನು ನಿಮಗೋಸ್ಕರ ಪ್ರಾರ್ಥಿಸುತ್ತೇನೆ.
ಫಿಲಿಪ್ಪಿಯವರಿಗೆ 1 : 10 (IRVKN)
ಹೀಗೆ [‡ ರೋಮಾ. 2:18] ಉತ್ತಮ ಕಾರ್ಯಗಳು ಯಾವವೆಂಬುದನ್ನು ನೀವು ವಿವೇಚಿಸುವವರಾಗಬೇಕೆಂತಲೂ ಹಾಗೂ ಕ್ರಿಸ್ತನು ಬರುವ ದಿನದಲ್ಲಿ ನೀವು [§ 1 ಥೆಸ. 3:13; 5:23] ಸರಳರಾಗಿಯೂ, ನಿರ್ಮಲರಾಗಿಯೂ,
ಫಿಲಿಪ್ಪಿಯವರಿಗೆ 1 : 11 (IRVKN)
ಯೇಸು ಕ್ರಿಸ್ತನ ಮೂಲಕವಾಗಿರುವ [* ಕೊಲೊ 1:6,10; ಯಾಕೋಬ 3:18] ನೀತಿಯೆಂಬ ಫಲದಿಂದ ತುಂಬಿದವರಾಗಿಯೂ ಇರಬೇಕೆಂದು [† ಎಫೆ 1:12,14] ದೇವರಿಗೆ ಘನತೆಯನ್ನೂ ಸ್ತೋತ್ರವನ್ನೂ ಸಲ್ಲಿಸಬೇಕೆಂತಲೂ ಬೇಡಿಕೊಳ್ಳುತ್ತೇನೆ. [PS]
ಫಿಲಿಪ್ಪಿಯವರಿಗೆ 1 : 12 (IRVKN)
{ಸುವಾರ್ತೆಯ ಅಭಿವೃದ್ಧಿ} [PS] ಸಹೋದರರೇ, ನನಗೆ ಸಂಭವಿಸಿರುವಂಥವುಗಳೆಲ್ಲವೂ ಸುವಾರ್ತೆಯ ಪ್ರಸಾರಣೆಗೆ ಸಹಾಯವಾಯಿತೆಂದು ನೀವು ತಿಳಿಯಬೇಕೆಂಬುದಾಗಿ ಅಪೇಕ್ಷಿಸುತ್ತೇನೆ.
ಫಿಲಿಪ್ಪಿಯವರಿಗೆ 1 : 13 (IRVKN)
[‡ ಲೂಕ 21:13] ಹೇಗೆಂದರೆ ನನ್ನ ಸೆರೆವಾಸವು ಕ್ರಿಸ್ತನ ನಿಮಿತ್ತವೇ ಎಂದು [§ ಅ. ಕೃ. 28:30,31; 2 ಕೊರಿ 2:9] ಅರಮನೆಯ ಕಾವಲುಗಾರರೆಲ್ಲರಿಗೂ ಹಾಗೂ ಉಳಿದವರೆಲ್ಲರಿಗೂ ತಿಳಿಯಲ್ಪಟ್ಟಿತು.
ಫಿಲಿಪ್ಪಿಯವರಿಗೆ 1 : 14 (IRVKN)
ಇದಲ್ಲದೆ ಸಹೋದರರಲ್ಲಿ ಬಹಳ ಜನರು ನನ್ನ ಬಂಧನದಿಂದಲೇ ಕರ್ತನಲ್ಲಿ ಭರವಸವುಳ್ಳವರಾಗಿ [* ಅ. ಕೃ. 4:31] ದೇವರ ವಾಕ್ಯವನ್ನು ನಿರ್ಭಯದಿಂದ ಹೇಳುವುದಕ್ಕೆ ಇನ್ನೂ ಹೆಚ್ಚು ಧೈರ್ಯಹೊಂದಿದ್ದಾರೆ.
ಫಿಲಿಪ್ಪಿಯವರಿಗೆ 1 : 15 (IRVKN)
[† 2 ಕೊರಿ 11:13] ಕೆಲವರು ಹೊಟ್ಟೆಕಿಚ್ಚುಪಟ್ಟು ಭೇದ ಹುಟ್ಟಿಸಬೇಕೆಂಬ ಮನಸ್ಸಿನಿಂದ ಮತ್ತು ಬೇರೆ ಕೆಲವರು ಒಳ್ಳೆಯ ಭಾವದಿಂದ ಕ್ರಿಸ್ತನನ್ನು ಪ್ರಚುರಪಡಿಸುತ್ತಾರೆ.
ಫಿಲಿಪ್ಪಿಯವರಿಗೆ 1 : 16 (IRVKN)
ಇವರಂತೂ ನಾನು [‡ ವ. 7] ಸುವಾರ್ತೆಯ ವಿಷಯದಲ್ಲಿ ಉತ್ತರ ಹೇಳುವುದಕ್ಕಾಗಿ ಇಲ್ಲಿ ಹಾಕಲ್ಪಟ್ಟಿದ್ದೆನೆಂದು ತಿಳಿದು ಪ್ರೀತಿಯಿಂದ ಪ್ರಸಿದ್ಧಿಪಡಿಸುತ್ತಿದ್ದಾರೆ.
ಫಿಲಿಪ್ಪಿಯವರಿಗೆ 1 : 17 (IRVKN)
ಆ ಬೇರೆ ತರದವರಾದರೋ ನಾನು ಬೇಡಿಯಿಂದ ಬಂಧಿತನಾಗಿರುವಾಗಲೂ ನನಗೆ ಸಂಕಟವನ್ನು ಹೆಚ್ಚಿಸಬೇಕೆಂದು ಯೋಚಿಸಿ, ಪ್ರಾಮಾಣಿಕವಲ್ಲದ ಸ್ವಾರ್ಥ ಉದ್ದೇಶದಿಂದ ಕ್ರಿಸ್ತನನ್ನು [§ ಫಿಲಿ. 2:3; ಯಾಕೋಬ 3:14] ಪ್ರಸಿದ್ಧಿಪಡಿಸುತ್ತಾರೆ.
ಫಿಲಿಪ್ಪಿಯವರಿಗೆ 1 : 18 (IRVKN)
ಹೇಗಾದರೇನು? ಯಾವ ರೀತಿಯಿಂದಾದರೂ ಸರಿಯೇ ಕಪಟದಿಂದಾಗಲಿ ಅಥವಾ ಸತ್ಯದಿಂದಾಗಲಿ ಕ್ರಿಸ್ತನನ್ನು ಪ್ರಸಿದ್ಧಿಪಡಿಸುವುದುಂಟು, ಇದಕ್ಕೆ ನಾನು ಸಂತೋಷಿಸುತ್ತೇನೆ, ಮುಂದೆಯೂ ಸಂತೋಷಿಸುವೆನು.
ಫಿಲಿಪ್ಪಿಯವರಿಗೆ 1 : 19 (IRVKN)
ಯಾಕೆಂದರೆ [* 2 ಕೊರಿ 1:11] ನಿಮ್ಮ ವಿಜ್ಞಾಪನೆಯಿಂದಲೂ ಮತ್ತು [† ಅ. ಕೃ. 16:7; ಗಲಾ. 3:5] ಯೇಸು ಕ್ರಿಸ್ತನ ಆತ್ಮನ ಸಹಾಯದಿಂದಲೂ ಇದು ನನ್ನ ಬಿಡುಗಡೆಗೆ ಅನುಕೂಲವಾಗುವುದೆಂದು ಬಲ್ಲೆನು.
ಫಿಲಿಪ್ಪಿಯವರಿಗೆ 1 : 20 (IRVKN)
ಹೇಗೆಂದರೆ [‡ ರೋಮಾ. 5:5; 2 ತಿಮೊ. 2:15] ನಾನು ಯಾವ ವಿಷಯದಲ್ಲಾದರೂ ನಾಚಿಕೆಪಡದೆ ಎಂದಿನಂತೆ ಈಗಲೂ ಸಹ ತುಂಬಾ ಧೈರ್ಯದಿಂದಿರುವುದರಿಂದ [§ ರೋಮಾ. 14:8] ಬದುಕಿದರೂ ಸರಿಯೇ ಅಥವಾ ಸತ್ತರೂ ಸರಿಯೇ [* 1 ಕೊರಿ 6:20] ನನ್ನ ಶರೀರದ ಮೂಲಕ ಕ್ರಿಸ್ತನಿಗೆ ಮಹಿಮೆಯುಂಟಾಗಬೇಕೆಂದು ನನ್ನ ಬಹು ಅಭಿಲಾಷೆಯಾಗಿದೆ, ಹಾಗೆಯೇ ಆಗುವುದೆಂಬ ಭರವಸೆವುಂಟು.
ಫಿಲಿಪ್ಪಿಯವರಿಗೆ 1 : 21 (IRVKN)
[† ಗಲಾ. 2:20] ನನಗಂತೂ ಬದುಕುವುದೆಂದರೆ ಕ್ರಿಸ್ತನೇ, ಸಾಯುವುದು ಲಾಭವೇ.
ಫಿಲಿಪ್ಪಿಯವರಿಗೆ 1 : 22 (IRVKN)
ಶರೀರದಲ್ಲಿಯೇ ಬದುಕಬೇಕಾದ್ದಲ್ಲಿ ನನ್ನ ಕೆಲಸಮಾಡಿ ಫಲಹೊಂದಲು ನನಗೆ ಸಾಧ್ಯವಾಗುವುದು. ಹೀಗಿರಲಾಗಿ ನಾನು ಯಾವುದನ್ನಾರಿಸಿಕೊಳ್ಳಬೇಕೆನ್ನುವುದು ನನಗೆ ತಿಳಿಯದು.
ಫಿಲಿಪ್ಪಿಯವರಿಗೆ 1 : 23 (IRVKN)
[‡ 2 ಕೊರಿ 5:8] ಈ ಎರಡರ ನಡುವೆ ಸಿಕ್ಕಿಕೊಂಡಿದ್ದೇನೆ, [§ 2 ತಿಮೊ. 4:6] ಇಲ್ಲಿಂದ ಹೊರಟು [* ಯೋಹಾ 12:26] ಕ್ರಿಸ್ತನ ಜೊತೆಯಲ್ಲಿರಬೇಕೆಂಬುದೇ ನನ್ನ ಅಭಿಲಾಷೆ, ಅದು ಅತ್ಯುತ್ತಮವಾಗಿದೆ.
ಫಿಲಿಪ್ಪಿಯವರಿಗೆ 1 : 24 (IRVKN)
ಆದರೆ ನಾನಿನ್ನೂ ಶರೀರದಲ್ಲಿ ವಾಸಮಾಡಿಕೊಂಡಿರುವುದು ನಿಮಗೋಸ್ಕರ ಬಹು ಅವಶ್ಯಕವಾಗಿದೆ.
ಫಿಲಿಪ್ಪಿಯವರಿಗೆ 1 : 25 (IRVKN)
ಆದ್ದರಿಂದ ನಿಮಗೆ ಕ್ರಿಸ್ತನಂಬಿಕೆಯಲ್ಲಿ ಅಭಿವೃದ್ಧಿಯೂ [† ರೋಮಾ. 15:13] ಆನಂದವೂ ಉಂಟಾಗುವುದಕ್ಕೋಸ್ಕರ ನಾನು ಜೀವದಿಂದುಳಿದು ನಿಮ್ಮೆಲ್ಲರ ಬಳಿಯಲ್ಲಿರುವೆನೆಂದು ದೃಢವಾಗಿ ನಂಬಿದ್ದೇನೆ.
ಫಿಲಿಪ್ಪಿಯವರಿಗೆ 1 : 26 (IRVKN)
ಹೀಗೆ ನಾನು ತಿರುಗಿ ನಿಮ್ಮ ಬಳಿಗೆ ಬರುವುದರಿಂದ [‡ 2 ಕೊರಿ 1:14] ನೀವು ಕ್ರಿಸ್ತ ಯೇಸುವಿನ ವಿಷಯವಾಗಿ ಉಲ್ಲಾಸಪಡುವುದಕ್ಕೆ ನನ್ನಿಂದ ಅಧಿಕ ಆಸ್ಪದವಿರುವುದು. [PS]
ಫಿಲಿಪ್ಪಿಯವರಿಗೆ 1 : 27 (IRVKN)
{ಕ್ರೈಸ್ತರು ಸುವಾರ್ತೆಗೆ ಯೋಗ್ಯರಾಗಿ ನಡೆದುಕೊಳ್ಳಬೇಕೆಂಬ ಬೋಧನೆ} [PS] [§ ಎಫೆ 4:1] ಹೇಗೂ ಕ್ರಿಸ್ತನ ಸುವಾರ್ತೆಗೆ ಯೋಗ್ಯರಾಗಿ ನಡೆದುಕೊಳ್ಳಿರಿ. ಆಗ ನಾನು ಬಂದು ನಿಮ್ಮನ್ನು ನೋಡಿದರೂ ಸರಿಯೇ, ದೂರದಲ್ಲಿದ್ದು ನಿಮ್ಮ ಸುದ್ದಿಯನ್ನು ಕೇಳಿದರೂ ಸರಿಯೇ, ನೀವು ನಿಮ್ಮ ವಿರೋಧಿಗಳಿಗೆ ಯಾವ ವಿಷಯದಲ್ಲಾದರೂ ಹೆದರದೆ ಏಕಮನಸ್ಸಿನಿಂದ [* 1 ಕೊರಿ 16:13] ದೃಢವಾಗಿ ನಿಂತು ಸುವಾರ್ತೆಯಲ್ಲಿಟ್ಟ ನಂಬಿಕೆಗೋಸ್ಕರ [† ಫಿಲಿ. 2:2] ಐಕಮತ್ಯದಿಂದ ಹೋರಾಡುವವರಾಗಿದ್ದೀರೆಂದು ನಾನು ತಿಳಿದುಕೊಳ್ಳುವೆನು.
ಫಿಲಿಪ್ಪಿಯವರಿಗೆ 1 : 28 (IRVKN)
ನೀವು ಹೀಗಿರುವುದು ವಿರೋಧಿಗಳ ನಾಶನಕ್ಕೂ, [‡ ಅ. ಕೃ. 14:22] ನಿಮ್ಮ ರಕ್ಷಣೆಗೂ ಒಂದು ಗುರುತಾಗಿದೆ. ಅದು ದೇವರಿಂದಾದ ಮುನ್ಸೂಚನೆಯಾಗಿದೆ.
ಫಿಲಿಪ್ಪಿಯವರಿಗೆ 1 : 29 (IRVKN)
ಕ್ರಿಸ್ತನ ಮೇಲೆ ನಂಬಿಕೆಯಿಡುವುದು ಮಾತ್ರವಲ್ಲ [§ ಮತ್ತಾ 5:12; ಅ. ಕೃ. 14:22] ಆತನಿಗೋಸ್ಕರ ಬಾಧೆಯನ್ನನುಭವಿಸುವುದು ನಿಮಗೆ ವರವಾಗಿ ದೊರಕಿದೆ.
ಫಿಲಿಪ್ಪಿಯವರಿಗೆ 1 : 30 (IRVKN)
ಹೀಗೆ ನೀವು [* ಅ. ಕೃ. 16:19-40] ನನ್ನಲ್ಲಿ ಕಂಡಂಥ ಮತ್ತು ಈಗ ನನ್ನ ಕುರಿತಾಗಿ ಕೇಳುವಂಥ [† ಕೊಲೊ 1:29; 2:1] ಅದೇ ಹೋರಾಟವು ನಿಮಗೂ ಉಂಟು. [PE]

1 2 3 4 5 6 7 8 9 10 11 12 13 14 15 16 17 18 19 20 21 22 23 24 25 26 27 28 29 30

BG:

Opacity:

Color:


Size:


Font: