ಅರಣ್ಯಕಾಂಡ 8 : 1 (IRVKN)
{ದೇವಸ್ಥಾನದಲ್ಲಿನ ದೀಪಗಳನ್ನು ಹಚ್ಚುವ ಕ್ರಮ} [PS] ಯೆಹೋವನು ಮೋಶೆಯ ಸಂಗಡ ಮಾತನಾಡಿ, ಹೇಳಿದ್ದೇನೆಂದರೆ:
ಅರಣ್ಯಕಾಂಡ 8 : 2 (IRVKN)
“ಆರೋನನು ದೇವಸ್ಥಾನದ ದೀಪಗಳನ್ನು ಕ್ರಮಪಡಿಸುವಾಗ ಆ ಏಳು ದೀಪಗಳು ದೀಪಸ್ತಂಭದ ಎದುರಾಗಿರುವ ಸ್ಥಳಕ್ಕೆ ಬೆಳಕುಕೊಡುವಂತೆ ಅವುಗಳನ್ನು ಇಡಬೇಕೆಂದು ಅವನಿಗೆ ಆಜ್ಞಾಪಿಸು” ಎಂದು ಹೇಳಿದನು. [PE][PS]
ಅರಣ್ಯಕಾಂಡ 8 : 3 (IRVKN)
ಯೆಹೋವನು ಮೋಶೆಗೆ ಆಜ್ಞಾಪಿಸಿದಂತೆಯೇ ಆರೋನನು ಮಾಡಿದನು. ದೀಪಸ್ತಂಭದ ಎದುರಿನ ಪ್ರದೇಶಕ್ಕೆ ಬೆಳಕುಕೊಡುವಂತೆ ಆ ದೀಪಗಳನ್ನು ಕ್ರಮವಾಗಿ ಇಟ್ಟನು.
ಅರಣ್ಯಕಾಂಡ 8 : 4 (IRVKN)
ದೀಪಸ್ತಂಭವೂ, ಅದರ ಬುಡದ ಭಾಗವೂ, ಪುಷ್ಪಾಲಂಕಾರಗಳೂ ಬಂಗಾರದ ನಕಾಸಿ ಕೆಲಸದಿಂದ ಮಾಡಲ್ಪಟ್ಟಿತ್ತು. ಯೆಹೋವನು ತೋರಿಸಿದ ಮಾದರಿಯಂತೆ ಮೋಶೆ ಅದನ್ನು ಮಾಡಿಸಿದನು. [PS]
ಅರಣ್ಯಕಾಂಡ 8 : 5 (IRVKN)
{ಲೇವಿಯರನ್ನು ಶುದ್ಧೀಕರಿಸಿ ಉದ್ಯೋಗಕ್ಕೆ ಸೇರಿಸಿದ್ದು} [PS] ಯೆಹೋವನು ಮೋಶೆಯ ಸಂಗಡ ಮಾತನಾಡಿ ಆಜ್ಞಾಪಿಸಿದ್ದೇನೆಂದರೆ,
ಅರಣ್ಯಕಾಂಡ 8 : 6 (IRVKN)
“ನೀನು ಇಸ್ರಾಯೇಲರಿಂದ ಲೇವಿಯರನ್ನು ಪ್ರತ್ಯೇಕಿಸಿ ಶುದ್ಧೀಕರಿಸಿಬೇಕು.
ಅರಣ್ಯಕಾಂಡ 8 : 7 (IRVKN)
ಅವರನ್ನು ಶುದ್ಧೀಕರಿಸಬೇಕಾದ ಕ್ರಮ ಹೇಗೆಂದರೆ: ನೀನು ಅವರ ಮೇಲೆ ದೋಷಪರಿಹಾರಕ ಜಲವನ್ನು ಚಿಮುಕಿಸಬೇಕು. ಅವರು ಸರ್ವಾಂಗ ಕ್ಷೌರಮಾಡಿಸಿಕೊಳ್ಳಲಿ. ಅವರು ತಮ್ಮ ಬಟ್ಟೆಗಳನ್ನು ಒಗೆದುಕೊಂಡು ತಮ್ಮನ್ನು ಶುದ್ಧಪಡಿಸಿಕೊಳ್ಳಬೇಕು.
ಅರಣ್ಯಕಾಂಡ 8 : 8 (IRVKN)
ತರುವಾಯ ಅವರು ಸರ್ವಾಂಗಹೊಮಕ್ಕಾಗಿ ಒಂದು ಹೋರಿಯನ್ನೂ ಅದರೊಡನೆ ಸಮರ್ಪಿಸಬೇಕಾದ ಧಾನ್ಯನೈವೇದ್ಯ ಅಂದರೆ ಎಣ್ಣೆ ಬೆರೆಸಿದ ಗೋದಿಯ ಹಿಟ್ಟನ್ನೂ ದೋಷಪರಿಹಾರಕ ಯಜ್ಞಕ್ಕಾಗಿ ಮತ್ತೊಂದು ಹೋರಿಯನ್ನು ತೆಗೆದುಕೊಳ್ಳಬೇಕು.
ಅರಣ್ಯಕಾಂಡ 8 : 9 (IRVKN)
ಆಗ ನೀನು ಲೇವಿಯರನ್ನು ದೇವದರ್ಶನ ಗುಡಾರದ ಮುಂದೆ ಕರೆದುಕೊಂಡು ಬಂದು ಇಸ್ರಾಯೇಲರ ಸಮೂಹವನ್ನೆಲ್ಲಾ ಕೂಡಿಸಬೇಕು.
ಅರಣ್ಯಕಾಂಡ 8 : 10 (IRVKN)
ಲೇವಿಯರನ್ನು ಯೆಹೋವನ ಸನ್ನಿಧಿಯಲ್ಲಿ ನಿಲ್ಲಿಸಿದಾಗ, ಇಸ್ರಾಯೇಲರು ತಮ್ಮ ಕೈಗಳನ್ನು ಲೇವಿಯರ ಮೇಲೆ ಇಡಬೇಕು.
ಅರಣ್ಯಕಾಂಡ 8 : 11 (IRVKN)
ಲೇವಿಯರು ಯೆಹೋವನ ಸೇವಾಕಾರ್ಯವನ್ನು ಮಾಡುವವರಾಗುವಂತೆ ಆರೋನನು ಇಸ್ರಾಯೇಲರ ನಿಮಿತ್ತ ಅವರನ್ನು ಯೆಹೋವನ ಸನ್ನಿಧಿಯಲ್ಲಿ ನೈವೇದ್ಯದಂತೆ ಸಮರ್ಪಿಸಬೇಕು. [PE][PS]
ಅರಣ್ಯಕಾಂಡ 8 : 12 (IRVKN)
“ಲೇವಿಯರು ಆ ಹೋರಿಗಳ ತಲೆಯ ಮೇಲೆ ತಮ್ಮ ಕೈಗಳನ್ನಿಡಬೇಕು. ನಂತರ ನೀನು ಯೆಹೋವನಿಗೆ ದೋಷಪರಿಹಾರಕ ಯಜ್ಞವಾಗಿ ಒಂದು ಹೋರಿಯನ್ನೂ, ಸರ್ವಾಂಗಹೋಮವಾಗಿ ಮತ್ತೊಂದು ಹೋರಿಯನ್ನು ಸಮರ್ಪಿಸಬೇಕು. ಅವರಿಗೋಸ್ಕರ ದೋಷಪರಿಹಾರವನ್ನು ಮಾಡಬೇಕು.
ಅರಣ್ಯಕಾಂಡ 8 : 13 (IRVKN)
ನೀನು ಆರೋನನ ಮತ್ತು ಅವನ ಮಕ್ಕಳ ಮುಂದೆ ಲೇವಿಯರನ್ನು ನಿಲ್ಲಿಸಿ ಅವರನ್ನು ನೈವೇದ್ಯದಂತೆ ಯೆಹೋವನಿಗೆ ಸಮರ್ಪಿಸಬೇಕು.
ಅರಣ್ಯಕಾಂಡ 8 : 14 (IRVKN)
ಹೀಗೆ ನೀನು ಲೇವಿಯರನ್ನು ಇಸ್ರಾಯೇಲರಿಂದ ಪ್ರತ್ಯೇಕಿಸಿದಾಗ ಅವರು ನನ್ನ ಸೊತ್ತಾಗುವರು. [PE][PS]
ಅರಣ್ಯಕಾಂಡ 8 : 15 (IRVKN)
“ಅದಾದ ನಂತರ ಲೇವಿಯರು ದೇವದರ್ಶನದ ಗುಡಾರದ ಸೇವಾಕಾರ್ಯವನ್ನು ಮಾಡಬೇಕು. ನೀನು ಅವರನ್ನು ಶುದ್ಧೀಕರಿಸಿ ನೈವೇದ್ಯದಂತೆ ಸಮರ್ಪಿಸಬೇಕು.
ಅರಣ್ಯಕಾಂಡ 8 : 16 (IRVKN)
ಇಸ್ರಾಯೇಲರಲ್ಲಿ ಇವರು ನನಗೆ ಸಂಪೂರ್ಣವಾಗಿ ಸಮರ್ಪಿತರಾದವರು. ಇಸ್ರಾಯೇಲರಲ್ಲಿ ಚೊಚ್ಚಲ ಮಕ್ಕಳಿಗೆ ಬದಲಾಗಿ ನಾನು ಲೇವಿಯರನ್ನು ನನ್ನ ಸ್ವಂತಕ್ಕಾಗಿ ತೆಗೆದುಕೊಂಡಿದ್ದೇನೆ.
ಅರಣ್ಯಕಾಂಡ 8 : 17 (IRVKN)
ಇಸ್ರಾಯೇಲರಲ್ಲಿರುವ ಚೊಚ್ಚಲಾದ ಮನುಷ್ಯರೂ ಪಶುಗಳೂ ಎಲ್ಲಾ ನನ್ನ ಸ್ವಂತ ಸೊತ್ತು. ಐಗುಪ್ತ ದೇಶದಲ್ಲಿದ್ದ ಚೊಚ್ಚಲಾದುದನ್ನು ನಾನು ಸಂಹರಿಸಿದಾಗ ಇಸ್ರಾಯೇಲರ ಚೊಚ್ಚಲಾದುದನ್ನು ನನ್ನ ಸ್ವಂತಕ್ಕಾಗಿ ಪ್ರತಿಷ್ಠಿಸಿಕೊಂಡೆನು.
ಅರಣ್ಯಕಾಂಡ 8 : 18 (IRVKN)
ನಾನು ಇಸ್ರಾಯೇಲರ ಚೊಚ್ಚಲಮಕ್ಕಳಿಗೆ ಬದಲಾಗಿ ಲೇವಿಯರನ್ನು ತೆಗೆದುಕೊಂಡಿದ್ದೇನೆ.
ಅರಣ್ಯಕಾಂಡ 8 : 19 (IRVKN)
ಇಸ್ರಾಯೇಲರಿಗಾಗಿ ದೇವದರ್ಶನ ಗುಡಾರದ ಸೇವಾಕಾರ್ಯವನ್ನು ನಡಿಸುವುದಕ್ಕೂ ದೋಷಪರಿಹಾರವನ್ನು ಮಾಡುವುದಕ್ಕೂ ಲೇವಿಯರನ್ನು ಆರೋನನ ಮತ್ತು ಅವನ ಮಕ್ಕಳ ವಶಕ್ಕೆ ಕೊಟ್ಟಿದ್ದೇನೆ. ಹೀಗಿರುವುದರಿಂದ ಇಸ್ರಾಯೇಲರು ದೇವಾಲಯದ ಹತ್ತಿರಕ್ಕೆ ಬಂದಾಗ ಅವರಿಗೆ ಅಪಾಯವು ಸಂಭವಿಸುವುದಿಲ್ಲ.” [PE][PS]
ಅರಣ್ಯಕಾಂಡ 8 : 20 (IRVKN)
ಯೆಹೋವನು ಲೇವಿಯರ ವಿಷಯದಲ್ಲಿ ಆಜ್ಞಾಪಿಸಿದಂತೆಯೇ ಮೋಶೆ, ಆರೋನರೂ ಮತ್ತು ಇಸ್ರಾಯೇಲರ ಸಮೂಹದವರೆಲ್ಲರೂ ಮಾಡಿದರು.
ಅರಣ್ಯಕಾಂಡ 8 : 21 (IRVKN)
ಲೇವಿಯರು ತಮ್ಮನ್ನು ಶುದ್ಧಪಡಿಸಿಕೊಂಡು ಬಟ್ಟೆಗಳನ್ನು ಒಗೆದುಕೊಂಡರು. ಆರೋನನು ಅವರನ್ನು ನೈವೇದ್ಯದಂತೆ ಯೆಹೋವನ ಸನ್ನಿಧಿಯಲ್ಲಿ ಸಮರ್ಪಿಸಿ, ಅವರನ್ನು ಶುದ್ಧೀಕರಿಸುವುದಕ್ಕಾಗಿ ಅವರಿಗೋಸ್ಕರ ದೋಷಪರಿಹಾರವನ್ನು ಮಾಡಿದನು. [PE][PS]
ಅರಣ್ಯಕಾಂಡ 8 : 22 (IRVKN)
ಆ ಮೇಲೆ ಲೇವಿಯರು ತಮಗೆ ನೇಮಕವಾದ ಕೆಲಸವನ್ನು ದೇವದರ್ಶನ ಗುಡಾರದಲ್ಲಿ ಆರೋನನ ಮತ್ತು ಅವನ ಮಕ್ಕಳ ಕೈಕೆಳಗೆ ಆರಂಭಿಸಿದರು. ಅವರ ವಿಷಯದಲ್ಲಿ ಯೆಹೋವನು ಮೋಶೆಗೆ ಆಜ್ಞಾಪಿಸಿದಂತೆಯೇ ಮಾಡಿದರು.
ಅರಣ್ಯಕಾಂಡ 8 : 23 (IRVKN)
ಪುನಃ ಯೆಹೋವನು ಮೋಶೆಯ ಸಂಗಡ ಮಾತನಾಡಿ ಹೇಳಿದ್ದೇನೆಂದರೆ,
ಅರಣ್ಯಕಾಂಡ 8 : 24 (IRVKN)
“ಲೇವಿಯರು ಅನುಸರಿಸಬೇಕಾದ ಪದ್ಧತಿ ಏನೆಂದರೆ: ಇಪ್ಪತ್ತೈದು ವರ್ಷ ಮೊದಲುಗೊಂಡು ಹೆಚ್ಚಿನ ವಯಸ್ಸಿನವರು ದೇವದರ್ಶನ ಗುಡಾರದ ಸೇವಮಂಡಳಿಗೆ ಸೇರಬೇಕು.
ಅರಣ್ಯಕಾಂಡ 8 : 25 (IRVKN)
ಅವರು ಐವತ್ತು ವರ್ಷದವರಾದ ನಂತರ ಆ ಮಂಡಳಿಯನ್ನು ಬಿಟ್ಟು ದೇವಾಲಯದ ಸೇವಾಕಾರ್ಯದಿಂದ ಬಿಡುಗಡೆಯಾಗುವರು.
ಅರಣ್ಯಕಾಂಡ 8 : 26 (IRVKN)
ಅಂಥವರು ತಮ್ಮ ಸ್ವಕುಲದವರ ಜೊತೆಯಲ್ಲಿ ದೇವದರ್ಶನ ಗುಡಾರವನ್ನು ಕಾಯುವ ಸೇವೆಯನ್ನು ಮಾಡಬಹುದೇ ಹೊರತು ಅವರಿಂದ ಬೇರೆ ಸೇವಾಕಾರ್ಯವನ್ನು ಮಾಡಿಸಬಾರದು. ಲೇವಿಯರು ಕಾಪಾಡಬೇಕಾದ ಕರ್ತವ್ಯಗಳನ್ನು ನೀನು ಹೀಗೆ ಅವರಿಗೆ ನೇಮಿಸಬೇಕು.” [PE]

1 2 3 4 5 6 7 8 9 10 11 12 13 14 15 16 17 18 19 20 21 22 23 24 25 26

BG:

Opacity:

Color:


Size:


Font: