ನೆಹೆಮಿಯ 12 : 1 (IRVKN)
{ಯಾಜಕರ ಮತ್ತು ಲೇವಿಯರ ಪಟ್ಟಿ} [PS] ಶೆಯಲ್ತಿಯೇಲನ ಮಗನಾದ ಜೆರುಬ್ಬಾಬೆಲ್ ಮತ್ತು ಯೇಷೂವ ಇವರೊಡನೆ ಯೆಹೂದ ದೇಶಕ್ಕೆ ಬಂದ ಯಾಜಕರು ಮತ್ತು ಲೇವಿಯರು ಯಾರಾರೆಂದರೆ: ಸೆರಾಯ, ಯೆರೆಮೀಯ, ಎಜ್ರ,
ನೆಹೆಮಿಯ 12 : 2 (IRVKN)
ಅಮರ್ಯ, ಮಲ್ಲೂಕ್, ಹಟ್ಟೂಷ್,
ನೆಹೆಮಿಯ 12 : 3 (IRVKN)
ಶೆಕನ್ಯ, ರೆಹುಮ್, ಮೆರೇಮೋತ್,
ನೆಹೆಮಿಯ 12 : 4 (IRVKN)
ಇದ್ದೋ, ಗಿನ್ನೆತೋನ್, ಅಬೀಯ,
ನೆಹೆಮಿಯ 12 : 5 (IRVKN)
ಮಿಯ್ಯಾಮೀನ್, ಮಾದ್ಯ, ಬಿಲ್ಗ,
ನೆಹೆಮಿಯ 12 : 6 (IRVKN)
ಶೆಮಾಯ, ಯೋಯಾರೀಬ್, ಯೆದಾಯ,
ನೆಹೆಮಿಯ 12 : 7 (IRVKN)
ಸಲ್ಲೂ, ಆಮೋಕ್, ಹಿಲ್ಕೀಯ, ಯೆದಾಯ ಇವರು ಯೇಷೂವನ ಕಾಲದಲ್ಲಿ ಯಾಜಕರ ಮತ್ತು ಅವರ ಬಂಧುಗಳ ಪ್ರಧಾನರು. [PE][PS]
ನೆಹೆಮಿಯ 12 : 8 (IRVKN)
ಲೇವಿಯರಲ್ಲಿ: ಯೇಷೂವ, ಬಿನ್ನೂಯ್, ಕದ್ಮೀಯೇಲ್, ಶೇರೇಬ್ಯ, ಯೆಹೂದ ಮತ್ತು ಮತ್ತನ್ಯ ಇವರು. ಮತ್ತನ್ಯನೂ ಅವನ ಸಹೋದರರೂ ಕೃತಜ್ಞತಾಸ್ತುತಿಯ ನಾಯಕರಾಗಿದ್ದರು.
ನೆಹೆಮಿಯ 12 : 9 (IRVKN)
ಇವರ ಸಹೋದರರಾದ ಬಕ್ಬುಕ್ಯ, ಉನ್ನೀ ಎಂಬುವವರು ಭಜನಸೇವೆಯಲ್ಲಿ ಇವರೆದುರಾಗಿ ನಿಂತುಕೊಳ್ಳುತ್ತಿದ್ದರು. [PE][PS]
ನೆಹೆಮಿಯ 12 : 10 (IRVKN)
ಯೇಷೂವನು, ಯೋಯಾಕೀಮನನ್ನೂ, ಯೋಯಾಕೀಮನ ಎಲ್ಯಾಷೀಬನನ್ನೂ, ಎಲ್ಯಾಷೀಬನು ಯೋಯಾದನನ್ನೂ,
ನೆಹೆಮಿಯ 12 : 11 (IRVKN)
ಯೋಯಾದನು ಯೋನಾತಾನನನ್ನೂ, ಯೋನಾತಾನನು ಯದ್ದೂವನನ್ನೂ ಪಡೆದರು.
ನೆಹೆಮಿಯ 12 : 12 (IRVKN)
ಯೋಯಾಕೀಮನ ಕಾಲದಲ್ಲಿ ಯಾಜಕರಾಗಿದ್ದ ಗೋತ್ರಪ್ರಧಾನರು: ಸೆರಾಯನ ಗೋತ್ರದ ಮೆರಾಯ, ಯೆರೆಮೀಯನ ಗೋತ್ರದ ಹನನ್ಯ,
ನೆಹೆಮಿಯ 12 : 13 (IRVKN)
ಎಜ್ರನ ಗೋತ್ರದ ಮೆಷುಲ್ಲಾಮ್, ಅಮರ್ಯನ ಗೋತ್ರದ ಯೆಹೋಹಾನಾನ್,
ನೆಹೆಮಿಯ 12 : 14 (IRVKN)
ಮಲ್ಲೂಕಿಯ ಗೋತ್ರದ ಯೋನಾತಾನ್, ಶೆಬನ್ಯನ ಗೋತ್ರದ ಯೋಸೇಫ್,
ನೆಹೆಮಿಯ 12 : 15 (IRVKN)
ಹಾರಿಮನ ಗೋತ್ರದ ಅದ್ನ, ಮೆರಾಯೋತನ್ ಗೋತ್ರದ ಹೆಲ್ಕೈ,
ನೆಹೆಮಿಯ 12 : 16 (IRVKN)
ಇದ್ದೋವಿನ ಗೋತ್ರದ ಜೆಕರ್ಯ, ಗಿನ್ನೆತೋನನ ಗೋತ್ರದ ಮೆಷುಲ್ಲಾಮ್,
ನೆಹೆಮಿಯ 12 : 17 (IRVKN)
ಅಬೀಯನ ಗೋತ್ರದ ಜಿಕ್ರೀ, ಮಿನ್ಯಾಮೀನನ ಮತ್ತು ಮೋವದ್ಯನ ಗೋತ್ರದ ಪಿಲ್ಟೈ,
ನೆಹೆಮಿಯ 12 : 18 (IRVKN)
ಬಿಲ್ಗಾ ಗೋತ್ರದ ಶೆಮ್ಮೂವ, ಶೆಮಾಯನ ಗೋತ್ರದ ಯೆಹೋನಾತಾನ್,
ನೆಹೆಮಿಯ 12 : 19 (IRVKN)
ಯೋಯಾರೀಬನ ಗೋತ್ರದ ಮತ್ತೆನೈ, ಯೆದಾಯನ ಗೋತ್ರದ ಉಜ್ಜೀ,
ನೆಹೆಮಿಯ 12 : 20 (IRVKN)
ಸಲ್ಲೈ ಗೋತ್ರದ ಕಲ್ಲೈ, ಆಮೋಕನ ಗೋತ್ರದ ಏಬೆರ್,
ನೆಹೆಮಿಯ 12 : 21 (IRVKN)
ಹಿಲ್ಕೀಯನ ಗೋತ್ರದ ಹಷಬ್ಯ, ಯೆದಾಯನ ಗೋತ್ರದ ನೆತನೇಲ್ ಇವರು.
ನೆಹೆಮಿಯ 12 : 22 (IRVKN)
ಎಲ್ಯಾಷೀಬ್, ಯೋಯಾದ, ಯೋಹಾನಾನ್, ಯದ್ದೂವ ಇವರ ಕಾಲಗಳಲ್ಲಿದ್ದ ಲೇವಿಯರ ಗೋತ್ರ ಪ್ರಧಾನರ ಪಟ್ಟಿಯೂ ಪಾರಸಿಯನಾದ ದಾರ್ಯಾವೆಷ [* ದಾರ್ಯಾವೆಷ ಪರ್ಷಿಯ ರಾಜನಾದ ಡೇರಿಯಸ್.] ರಾಜನ ಆಳ್ವಿಕೆಯವರೆಗಿದ್ದ ಯಾಜಕರ ಪಟ್ಟಿಯೂ ಇದ್ದವು.
ನೆಹೆಮಿಯ 12 : 23 (IRVKN)
ಎಲ್ಯಾಷೀಬನ ಮೊಮ್ಮಗನಾದ ಯೋಹಾನಾನನ ಕಾಲದ ವರೆಗಿದ್ದ ಲೇವಿಯ ಗೋತ್ರಪ್ರಧಾನರ ಪಟ್ಟಿಯು ಪೂರ್ವಕಾಲ ವೃತ್ತಾಂತವೆಂಬ ಗ್ರಂಥದಲ್ಲಿ ಬರೆದಿರುತ್ತದೆ.
ನೆಹೆಮಿಯ 12 : 24 (IRVKN)
ಈ ಲೇವಿಯರ ಗೋತ್ರಪ್ರಧಾನರಲ್ಲಿ ಯೇಷೂವನ ಮಗನೂ ಯೋಚಾದಾಕನ ಮೊಮ್ಮಗನೂ ಅದ ಯೋಯಾಕೀಮ್, ದೇಶಾಧಿಪತಿಯಾದ ನೆಹೆಮೀಯ, ಯಾಜಕನೂ ಧರ್ಮೋಪದೇಶಕನಾದ ಎಜ್ರ ಇವರ ಕಾಲದಲ್ಲಿದ್ದವರು:
ನೆಹೆಮಿಯ 12 : 25 (IRVKN)
ಹಷಬ್ಯ, ಶೇರೇಬ್ಯ, ಯೇಷೂವ, ಬಿನ್ನೂಯ್, ಕದ್ಮೀಯೇಲ್ ಇವರು. ದೇವರ ಮನುಷ್ಯನಾದ ದಾವೀದನ ಅಪ್ಪಣೆಯ ಮೇರೆಗೆ ಇವರೂ ಇವರ ಸಹೋದರರೂ ಸರದಿಗೆ ಎರಡೆರಡು ವರ್ಗಗಳಾಗಿ ಪರಸ್ಪರ ಹಾಡುತ್ತಾ, ಕೀರ್ತನೆಯನ್ನೂ ಕೃತಜ್ಞತಾಸ್ತುತಿಯನ್ನೂ ಮಾಡುತ್ತಿದ್ದರು.
ನೆಹೆಮಿಯ 12 : 26 (IRVKN)
ಇವರಲ್ಲದೆ ಬಾಗಿಲುಗಳ ಬಳಿಯಲ್ಲಿದ್ದ ಉಗ್ರಾಣಗಳನ್ನು ಕಾಯತ್ತಿದ್ದ ದ್ವಾರಪಾಲಕರು: ಮತ್ತನ್ಯ, ಬಕ್ಬುಕ್ಯ, ಓಬದ್ಯ, ಮೆಷುಲ್ಲಾಮ್, ಟಲ್ಮೋನ್, ಅಕ್ಕೂಬ್ ಎಂಬುವವರು. [PS]
ನೆಹೆಮಿಯ 12 : 27 (IRVKN)
{ಪೌಳಿಗೋಡೆಯ ಪ್ರತಿಷ್ಠೆ} [PS] ಯೆರೂಸಲೇಮಿನ ಪೌಳಿಗೋಡೆಯನ್ನು ಪ್ರತಿಷ್ಠಿಸುವ ಸಮಯ ಬಂದಾಗ ಆಯಾ ಸ್ಥಳಗಳಲ್ಲಿದ್ದ ಲೇವಿಯರನ್ನು, ಕೀರ್ತನೆ ಗಾಯನಗಳಿಂದಲೂ ತಾಳ, ಸ್ವರಮಂಡಲ ಹಾಗು ಕಿನ್ನರಿ ಇವುಗಳಿಂದಲೂ ಪ್ರತಿಷ್ಠೆಯ ಉತ್ಸವವನ್ನು ಆಚರಿಸುವುದಕ್ಕಾಗಿ ಯೆರೂಸಲೇಮಿಗೆ ಕರೆಸಿಕೊಂಡರು.
ನೆಹೆಮಿಯ 12 : 28 (IRVKN)
ಆಗ ಯೆರೂಸಲೇಮಿನ ಸುತ್ತಣ ಪ್ರಾಂತ್ಯಗಳಲ್ಲಿ ತಮಗೋಸ್ಕರ ಹಳ್ಳಿಗಳನ್ನು ಕಟ್ಟಿಕೊಂಡಿದ್ದ ಗಾಯಕ ಮಂಡಳಿಯವರು ಯೊರ್ದನ್ ಹೊಳೆಯ ತಗ್ಗು, ಯೆರೂಸಲೇಮಿನ ಸುತ್ತಣಪ್ರದೇಶ, ನೆಟೋಫಾತ್ಯರ ಗ್ರಾಮ,
ನೆಹೆಮಿಯ 12 : 29 (IRVKN)
ಬೆತ್ ಗಿಲ್ಗಾಲ್, ಗೆಬ ಮತ್ತು ಅಜ್ಮಾವೇತ್, ಊರುಗಳಿಗೆ ಸೇರಿರುವ ಹಳ್ಳಿಗಳು ಇವುಗಳಿಂದ ಸೇರಿ ಬಂದರು.
ನೆಹೆಮಿಯ 12 : 30 (IRVKN)
ಯಾಜಕರೂ ಲೇವಿಯರೂ ತಮ್ಮನ್ನು ಶುದ್ಧಿಪಡಿಸಿಕೊಂಡ ಮೇಲೆ ಜನರನ್ನೂ, ಊರುಬಾಗಿಲುಗಳನ್ನೂ, ಗೋಡೆಯನ್ನು ಶುದ್ಧಪಡಿಸಿದರು.
ನೆಹೆಮಿಯ 12 : 31 (IRVKN)
ಆನಂತರ ನಾನು ಯೆಹೂದ ಪ್ರಮುಖರನ್ನು ಗೋಡೆಯ ಮೇಲೆ ಕರೆದುಕೊಂಡು ಬಂದು, ಆರಾಧನೆ ಮಂಡಳಿಯವರಿಗೆ ಎರಡು ದೊಡ್ಡ ಗುಂಪುಗಳಾಗಿ ಆಲ್ಲಿ ನಿಲ್ಲಬೇಕೆಂದು ಅಪ್ಪಣೆಮಾಡಿದನು. ಒಂದು ಗುಂಪಿನವರು ಮೆರವಣಿಗೆಯಿಂದ ಗೋಡೆಯ ಮೇಲೆ ತಿಪ್ಪೆಬಾಗಿಲಿನಿಂದ ಬಲಗಡೆಗೆ ಹೋದರು.
ನೆಹೆಮಿಯ 12 : 32 (IRVKN)
ಅವರ ಹಿಂದೆ ಯೆಹೂದ ಪ್ರಭುಗಳ ಅರ್ಧ ಜನರೊಡನೆ ಹೋಷಾಯನೂ,
ನೆಹೆಮಿಯ 12 : 33 (IRVKN)
ತುತ್ತೂರಿ ಹಿಡಿದಿರುವ ಯಾಜಕರೊಡನೆ ಅಜರ್ಯ, ಎಜ್ರ, ಮೆಷುಲ್ಲಾಮ್,
ನೆಹೆಮಿಯ 12 : 34 (IRVKN)
ಯೆಹೂದ, ಬೆನ್ಯಾಮೀನ್, ಶೆಮಾಯ, ಯೆರೆಮೀಯ ಎಂಬುವರೂ
ನೆಹೆಮಿಯ 12 : 35 (IRVKN)
ಆಸಾಫ್ ಸಂತಾನದ ಜಕ್ಕೂರನಿಗೆ ಹುಟ್ಟಿದ ಮೀಕಾಯನ ವಂಶದವನೂ, ಮತ್ತನ್ಯನ ಮರಿಮಗನೂ ಶೆಮಾಯನ ಮೊಮ್ಮಗನೂ ಯೋನಾತಾನನ ಮಗನೂ, ಆದ ಜೆಕರ್ಯನೂ
ನೆಹೆಮಿಯ 12 : 36 (IRVKN)
ದೇವರ ಮನುಷ್ಯನಾದ ದಾವೀದನ ವಾದ್ಯಗಳನ್ನು ಹಿಡಿದಿರುವ ಇವನ ಬಂಧುಗಳಾದ ಶೆಮಾಯ, ಅಜರೇಲ್, ಮಿಲಲೈ, ಗಿಲಲೈ, ಮಾಯೈ, ನೆತನೇಲ್, ಯೆಹೂದ, ಹಾನಾನೀ ಎಂಬುವರೂ ಹೋದರು, ಧರ್ಮೋಪದೇಶಕನಾದ ಎಜ್ರನು ಇವರ ಮುಂದಾಳಾಗಿ ಹೊರಟನು.
ನೆಹೆಮಿಯ 12 : 37 (IRVKN)
ಇವರು ಬುಗ್ಗೆ ಬಾಗಿಲನ್ನು ಹಾದು ನೆಟ್ಟಗೆ ದಾವೀದನಗರದ ಸೋಪಾನಗಳ ಮಾರ್ಗವಾಗಿ ಗೋಡೆಯನ್ನು ಅನುಸರಿಸಿ ಅರಮನೆಯ ಮೇಲಣ ದಿನ್ನೆಯನ್ನು ಹತ್ತಿ ಪೂರ್ವದಿಕ್ಕಿನಲ್ಲಿರುವ ನೀರು ಬಾಗಿಲಿನವರೆಗೆ ಹೋದರು.
ನೆಹೆಮಿಯ 12 : 38 (IRVKN)
ಅವರನ್ನು ಎದುರುಗೊಳ್ಳುವ ಹಾಗೆ ಆರಾಧನೆ ಮಂಡಳಿಯ ಎರಡನೆಯ ಗುಂಪಿನವರೂ, ನಾನೂ, ಉಳಿದ ಅರ್ಧಜನರೂ ಗೋಡೆಯ ಮೇಲೆ ಒಲೆಬುರುಜಿನಿಂದ ಅಗಲವಾದ ಗೋಡೆಯವರೆಗೂ
ನೆಹೆಮಿಯ 12 : 39 (IRVKN)
ಅಲ್ಲಿಂದ ಎಫ್ರಾಯೀಮ್ ಬಾಗಿಲು, ಯೆಷಾನಾ ಬಾಗಿಲು, ಮೀನು ಬಾಗಿಲು, ಹನನೇಲ್ ಗೋಪುರ, ಹಮ್ಮೇಯಾ ಬುರುಜು ಇವುಗಳ ಮಾರ್ಗವಾಗಿ ಕುರಿ ಬಾಗಿಲಿನವರೆಗೂ ಹೋಗಿ ಸೆರೆಮನೆಯ ಬಾಗಿಲಿನ ಬಳಿಯಲ್ಲಿ ನಿಂತೆವು.
ನೆಹೆಮಿಯ 12 : 40 (IRVKN)
ದೇವಾಲಯದ ಎರಡು ಆರಾಧನಾ ಮಂಡಳಿಯ ಗುಂಪಿನವರೂ, ನಾನೂ, ನನ್ನ ಜೊತೆಯಲ್ಲಿದ್ದ ಅರ್ಧ ಮಂದಿ ಅಧಿಕಾರಿಗಳೂ
ನೆಹೆಮಿಯ 12 : 41 (IRVKN)
ತುತ್ತೂರಿ ಹಿಡಿದಿರುವ ಯಾಜಕರಾದ ಎಲ್ಯಾಕೀಮ್, ಮಾಸೇಯ, ಮಿನ್ಯಾಮೀನ್, ಮೀಕಾಯ, ಎಲ್ಯೋವೇನೈ, ಜೆಕರ್ಯ, ಹನನ್ಯ ಇವರೂ
ನೆಹೆಮಿಯ 12 : 42 (IRVKN)
ಮಾಸೇಯ, ಶೆಮಾಯ, ಎಲ್ಲಾಜಾರ್, ಉಜ್ಜೀ, ಯೆಹೋಹಾನಾನ್, ಮಲ್ಕೀಯ, ಏಲಾಮ್, ಎಜೆರ್, ಎಂಬುವರು ದೇವಾಲಯದ ಬಳಿಯಲ್ಲಿ ನಿಂತಿರಲು ಗಾಯಕರು ಹಾಡತೊಡಗಿದರು. ಇಜ್ರಹ್ಯನು ಇವರ ನಾಯಕನು.
ನೆಹೆಮಿಯ 12 : 43 (IRVKN)
ದೇವರು ತಮಗೆ ವಿಶೇಷ ಆನಂದವನ್ನು ಉಂಟುಮಾಡಿದ್ದರಿಂದ, ಜನರು ಆ ದಿನದಲ್ಲಿ ಅನೇಕ ಯಜ್ಞಗಳನ್ನು ಸಮರ್ಪಿಸಿ ತಮ್ಮ ಹೆಂಡತಿ ಮಕ್ಕಳೊಡನೆ ಮಹೋತ್ಸವಮಾಡಿದರು. ಯೆರೂಸಲೇಮಿನ ಉತ್ಸವದ ಹರ್ಷಧ್ವನಿಯು ಬಹಳ ದೂರದವರೆಗೂ ಕೇಳಿಸಿತು. [PS]
ನೆಹೆಮಿಯ 12 : 44 (IRVKN)
{ದೇವಾಲಯ ಸೇವಕರ ಜೀವನಾಂಶದ ವ್ಯವಸ್ಥೆ} [PS] ಸೇವೆಮಾಡುತ್ತಿದ್ದ ಯಾಜಕರ ಮತ್ತು ಲೇವಿಯರ ವಿಷಯದಲ್ಲಿ ಯೆಹೂದ್ಯರಿಗೆ ಬಹು ಸಂತೋಷವುಂಟಾಗಿದ್ದರಿಂದ ಆ ದಿನದಲ್ಲಿ ಅವರು ಧರ್ಮವಿಧಿಯ ಪ್ರಕಾರ ಆಯಾ ಊರುಗಳ ಭೂಮಿಯಿಂದ ಯಾಜಕರಿಗೂ ಲೇವಿಯರಿಗೂ ಸಿಕ್ಕತಕ್ಕ ಭಾಗಗಳನ್ನು ಅಂದರೆ ದೇವರಿಗಾಗಿ ಪ್ರತ್ಯೇಕಿಸತಕ್ಕ ವಸ್ತುಗಳು, ಪ್ರಥಮಫಲ, ದಶಮಾಂಶ ಇವುಗಳನ್ನು ಸಂಗ್ರಹಮಾಡತಕ್ಕ ಕೊಠಡಿಗಳ ಮೇಲೆ ಪಾರುಪತ್ಯಗಾರರನ್ನು ನೇಮಿಸಿದರು.
ನೆಹೆಮಿಯ 12 : 45 (IRVKN)
ಆ ಯಾಜಕರೂ ಲೇವಿಯರೂ ತಮ್ಮ ದೇವರ ಸೇವೆಯ ಸಂಬಧದಲ್ಲಿಯೂ ಶುದ್ಧೀಕರಣ ಸಂಬಂಧದಲ್ಲಿಯೂ ತಮ್ಮ ಕರ್ತವ್ಯವನ್ನು ಜಾಗರೂಕತೆಯಿಂದ ನೆರವೇರಿಸುತ್ತಿದ್ದರು. ಅವರಂತೆ ಗಾಯಕರೂ ದ್ವಾರಪಾಲಕರೂ ಸಹ ದಾವೀದನಿಂದಲೂ ಅವನ ಮಗನಾದ ಸೊಲೊಮೋನನಿಂದಲೂ ಸ್ಥಾಪಿತವಾದ ಕ್ರಮಾನುಸಾರವಾಗಿ ನಡೆಯುತ್ತಿದ್ದರು.
ನೆಹೆಮಿಯ 12 : 46 (IRVKN)
ಪೂರ್ವಕಾಲದಲ್ಲಿ ಅಂದರೆ ದಾವೀದನ ಮತ್ತು ಆಸಾಫನ ಕಾಲದಲ್ಲಿ ಗಾಯನಮಂಡಳಿಯ ನಾಯಕರು, ದೇವರಿಗೆ ಕೃತಜ್ಞತಾಸ್ತುತಿ ಸಲ್ಲಿಸುವ ಕೀರ್ತನೆಗಳು ಇದ್ದವು.
ನೆಹೆಮಿಯ 12 : 47 (IRVKN)
ಜೆರುಬ್ಬಾಬೆಲ್ ಮತ್ತು ನೆಹೆಮೀಯ ಇವರ ಕಾಲಗಳಲ್ಲಿ ಎಲ್ಲಾ ಇಸ್ರಾಯೇಲರು ಗಾಯಕರಿಗೂ ದ್ವಾರಪಾಲಕರಿಗೂ ಪ್ರತಿದಿನ ಜೀವನಾಂಶವನ್ನು ಕೊಡುತ್ತಿದ್ದರು. ಇವರು ಅವುಗಳಲ್ಲಿ ದಶಮಾಂಶವನ್ನು ಲೇವಿಯರಿಗೂ ಮತ್ತು ಲೇವಿಯರು ತಮ್ಮದರಲ್ಲಿಯ ದಶಮಾಂಶವನ್ನು ಆರೋನನ ಮಕ್ಕಳಿಗೂ ಕೊಡುತ್ತಿದ್ದರು. [PE]
❮
❯