ನೆಹೆಮಿಯ 11 : 1 (IRVKN)
{ಯೆರೂಸಲೇಮಿನಲ್ಲಿ ವಾಸಿಸುತ್ತಿದ್ದವರ ಪಟ್ಟಿ} [PS] ಇಸ್ರಾಯೇಲರ ಪ್ರಮುಖರು ಮಾತ್ರ ಯೆರೂಸಲೇಮಿನಲ್ಲಿ ವಾಸಿಸುತ್ತಿದ್ದರು. ಉಳಿದ ಜನರೊಳಗೆ ಹತ್ತು ಜನರಲ್ಲಿ ಒಂಭತ್ತು ಜನ ತಮ್ಮ ತಮ್ಮ ಊರುಗಳಲ್ಲಿ ವಾಸಮಾಡುತ್ತಿದ್ದರು, ಒಬ್ಬನು ಮಾತ್ರ ಪವಿತ್ರನಗರವಾಗಿರುವ ಯೆರೂಸಲೇಮಿನಲ್ಲಿ ವಾಸಮಾಡಬೇಕು ಎಂದು ಚೀಟು ಹಾಕಿ ಅವನನ್ನು ಗೊತ್ತು ಮಾಡುತ್ತಿದ್ದರು.
ನೆಹೆಮಿಯ 11 : 2 (IRVKN)
ಮತ್ತು ಸ್ವಇಚ್ಛೆಯಿಂದ ಯೆರೂಸಲೇಮಿನಲ್ಲಿ ವಾಸಿಸುವುದಕ್ಕೆ ಮನಸ್ಸು ಮಾಡಿದಂಥವರನ್ನು ಜನರು ಆಶೀರ್ವದಿಸಿದರು. [PE][PS]
ನೆಹೆಮಿಯ 11 : 3 (IRVKN)
ಯೆರೂಸಲೇಮಿನಲ್ಲಿ ವಾಸಿಸುತ್ತಿದ್ದ ಯೆಹೂದ ಸಂಸ್ಥಾನ ಪ್ರಧಾನರು ಯಾರಾರೆಂದರೆ: ಇಸ್ರಾಯೇಲರೂ, ಯಾಜಕರೂ, ಲೇವಿಯರೂ, ದೇವಾಲಯದ ಸೇವಕರು, ಸೊಲೊಮೋನನ ಸೇವಕರ ವಂಶದವರೂ ತಮ್ಮ ತಮ್ಮ ಸ್ವತ್ತುಗಳಿರುವ ಯೆಹೂದ ದೇಶದ ಪಟ್ಟಣಗಳಲ್ಲಿ ವಾಸಿಸುತ್ತಿದ್ದರು. [PE][PS]
ನೆಹೆಮಿಯ 11 : 4 (IRVKN)
ಯೆರೂಸಲೇಮಿನಲ್ಲಿ, ಯೆಹೂದ ಮತ್ತು ಬೆನ್ಯಾಮೀನ್ ಕುಲಗಳವರಲ್ಲಿ ಕೆಲವರು ವಾಸವಾಗಿದ್ದರು. ಯೆಹೂದ ಕುಲದವರಲ್ಲಿ: ಅತಾಯನು, ಇವನು ಉಜ್ಜೀಯನ ಮಗ; ಇವನು ಜೆಕರ್ಯನ ಮಗ; ಇವನು ಅಮರ್ಯನ ಮಗ; ಇವನು ಶೆಫಟ್ಯನ ಮಗ; ಇವನು ಮಹಲಲೇಲನ ಮಗ, ಇವನು ಪೆರೆಚ್ ಸಂತಾನದವನು.
ನೆಹೆಮಿಯ 11 : 5 (IRVKN)
ಇನ್ನೊಬ್ಬನು ಮಾಸೇಯ, ಇವನು ಬಾರೂಕನ ಮಗ; ಇವನು ಕೊಲ್ಹೋಜೆಯ ಮಗ; ಇವನು ಹಜಾಯನ ಮಗ; ಇವನು ಅದಾಯನ ಮಗ; ಇವನು ಯೋಯಾರೀಬನ ಮಗ; ಇವನು ಜೆಕರ್ಯನ ಮಗ, ಇವನು ಶೇಲಹನ ಸಂತಾನದವನು.
ನೆಹೆಮಿಯ 11 : 6 (IRVKN)
ಯೆರೂಸಲೇಮಿನಲ್ಲಿ ವಾಸಿಸುತ್ತಿದ್ದ ಪೆರೆಚ್ ಸಂತಾನದ ರಣವೀರರು ನಾನೂರ ಆರುವತ್ತೆಂಟು ಮಂದಿ. [PE][PS]
ನೆಹೆಮಿಯ 11 : 7 (IRVKN)
ಬೆನ್ಯಾಮೀನ್ ಕುಲದವರಲ್ಲಿ: ಸಲ್ಲು, ಇವನು ಮೆಷುಲ್ಲಾಮನ ಮಗ; ಇವನು ಯೋವೇದನ ಮಗ; ಇವನು ಪೆದಾಯನ ಮಗ; ಇವನು ಕೋಲಾಯನ ಮಗ; ಇವನು ಮಾಸೇಯನ ಮಗ; ಇವನು ಈತೀಯೇಲನ ಮಗ; ಇವನು ಯೆಶಾಯನ ಮಗ.
ನೆಹೆಮಿಯ 11 : 8 (IRVKN)
ರಣವೀರರಾದ ಗಬ್ಬೈ ಮತ್ತು ಸಲ್ಲೈ ಹಾಗು ಒಂಭೈನೂರಿಪ್ಪತ್ತೆಂಟು ಮಂದಿ.
ನೆಹೆಮಿಯ 11 : 9 (IRVKN)
ಜಿಕ್ರಿಯನ ಮಗನಾದ ಯೋವೇಲನು ಇವರ ನಾಯಕನು. ಹಸ್ಸೆನೂವನ ಮಗನಾದ ಯೆಹೂದನು ಪಟ್ಟಣದ ಎರಡನೆಯ ಪುರಾಧಿಕಾರಿಯಾಗಿದ್ದನು.
ನೆಹೆಮಿಯ 11 : 10 (IRVKN)
ಯಾಜಕರಲ್ಲಿ: ಯೋಯಾರೀಬನ ಮಗನಾದ ಯೆದಾಯ, ಮತ್ತು ಯಾಕೀನ್,
ನೆಹೆಮಿಯ 11 : 11 (IRVKN)
ಅಹೀಟೂಬನ ಸಂತಾನದವನಾದ ಮೆರಾಯೋತನಿಂದ ಹುಟ್ಟಿದ ಚಾದೋಕನ ಮರಿಮಗನೂ, ಮೆಷುಲ್ಲಾಮನ ಮೊಮ್ಮಗನೂ ಹಿಲ್ಕೀಯನ ಮಗನೂ, ದೇವಾಲಯದ ಅಧಿಪತಿಯೂ ಆದ ಸೆರಾಯ ಇವರು.
ನೆಹೆಮಿಯ 11 : 12 (IRVKN)
ಮತ್ತು ದೇವಾಲಯದ ಸೇವೆ ನಡೆಸುತ್ತಿದ್ದ ಇವರ ಬಂಧುಗಳು ಒಟ್ಟು ಎಂಟುನೂರ ಇಪ್ಪತ್ತೆರಡು ಮಂದಿ. ಇವರಲ್ಲದೆ ಅದಾಯನೆಂಬುವನು ಇನ್ನೊಬ್ಬನು. ಇವನು ಯೆರೋಹಾಮನ ಮಗ; ಇವನು ಪೆಲಲ್ಯನ ಮಗ; ಇವನು ಅಮ್ಚೀಯನ ಮಗ; ಇವನು ಜೆಕರ್ಯನ ಮಗ; ಇವನು ಪಷ್ಹೂರನ ಮಗ; ಇವನು ಮಲ್ಕೀಯನ ಮಗ.
ನೆಹೆಮಿಯ 11 : 13 (IRVKN)
ಗೋತ್ರಪ್ರಧಾನರಾದ ಈ ಅದಾಯನ ಬಂಧುಗಳು ಇನ್ನೂರ ನಲ್ವತ್ತೆರಡು ಮಂದಿ. ಅಮಷ್ಷೈ ಎಂಬುವನು ಮತ್ತೊಬ್ಬನು. ಇವನು ಅಜರೇಲನ ಮಗ; ಇವನು ಅಹಜೈಯನ ಮಗ; ಇವನು ಮೆಷಿಲ್ಲೇಮೋತನ ಮಗ; ಇವನು ಇಮ್ಮೇರನ ಮಗ.
ನೆಹೆಮಿಯ 11 : 14 (IRVKN)
ರಣವೀರರಾಗಿದ್ದ ಈ ಅಮಷ್ಷೈಯ ಬಂಧುಗಳು ನೂರಿಪ್ಪತ್ತೆಂಟು ಮಂದಿ. ಹಗ್ಗೆದೋಲೀಮನ ಮಗನಾದ ಜಬ್ದೀಯೇಲನು ಇವರ ನಾಯಕನು. [PE][PS]
ನೆಹೆಮಿಯ 11 : 15 (IRVKN)
ಲೇವಿಯರಲ್ಲಿ: ಹಷ್ಷೂಬನ ಮಗನೂ, ಅಜ್ರೀಕಾಮನ ಮೊಮ್ಮಗನೂ, ಹಷಬ್ಯನ ಮರಿಮಗನೂ, ಬುನ್ನೀ ವಂಶದವನೂ ಆದ ಶೆಮಾಯನು.
ನೆಹೆಮಿಯ 11 : 16 (IRVKN)
ಲೇವಿಗೋತ್ರ ಪ್ರಧಾನರಲ್ಲಿ: ದೇವಾಲಯದ ಹೊರಗಿನ ಕಾರ್ಯಗಳ ಮೇಲ್ವಿಚಾರಕನಾದ ಶಬ್ಬೆತೈ, ಯೋಜಾಬಾದ್ ಎಂಬುವವರು,
ನೆಹೆಮಿಯ 11 : 17 (IRVKN)
ಮೀಕನ ಮಗನೂ, ಜಬ್ದೀಯನ ಮೊಮ್ಮಗನೂ, ಆಸಾಫನ ಮರಿಮಗನೂ, ಪ್ರಾರ್ಥನೆಯ ಸಮಯದಲ್ಲಿ ಕೃತಜ್ಞತಾಸ್ತುತಿಯನ್ನು ಆರಂಭಿಸುತ್ತಾ ಆರಾಧನೆಯಲ್ಲಿ ಜನರನ್ನು ನಡೆಸುತ್ತಿದ್ದ ಮತ್ತನ್ಯ, ತನ್ನ ಬಂಧುಗಳಲ್ಲಿ ದ್ವಿತೀಯ ಸ್ಥಾನದವನಾದ ಬಕ್ಬುಕ್ಯ, ಶಮ್ಮೂವನ ಮಗನೂ, ಗಾಲಾಲನ ಮೊಮ್ಮಗನೂ, ಯೆದೂತೂನನ ಮರಿಮಗನೂ ಆದ ಅಬ್ದ ಎಂಬುವವರು,
ನೆಹೆಮಿಯ 11 : 18 (IRVKN)
ಪರಿಶುದ್ಧ ನಗರದಲ್ಲಿದ್ದ ಎಲ್ಲಾ ಲೇವಿಯರು ಒಟ್ಟು ಇನ್ನೂರ ಎಂಭತ್ತನಾಲ್ಕು ಮಂದಿ.
ನೆಹೆಮಿಯ 11 : 19 (IRVKN)
ದ್ವಾರಪಾಲಕರಲ್ಲಿ; ಅಕ್ಕೂಬ್, ಟಲ್ಮೋನರೂ ಮತ್ತು ಬಾಗಿಲುಗಳನ್ನು ಕಾಯುತ್ತಿದ್ದ ಇವರ ಬಂಧುಗಳೂ ಒಟ್ಟು ನೂರ ಎಪ್ಪತ್ತೆರಡು ಮಂದಿ. [PE][PS]
ನೆಹೆಮಿಯ 11 : 20 (IRVKN)
ಉಳಿದ ಇಸ್ರಾಯೇಲರೂ, ಯಾಜಕರೂ, ಲೇವಿಯರೂ ತಮ್ಮ ತಮ್ಮ ಸ್ವತ್ತುಗಳಿರುವ ಯೆಹೂದದ ಎಲ್ಲಾ ಪಟ್ಟಣಗಳಲ್ಲಿ ವಾಸಮಾಡುತ್ತಿದ್ದರು.
ನೆಹೆಮಿಯ 11 : 21 (IRVKN)
ದೇವಾಲಯದ ಸೇವಕರು ಓಪೇಲ್ ಗುಡ್ಡದಲ್ಲಿ ವಾಸಿಸುತ್ತಿದ್ದರು. ಚೀಹ, ಗಿಷ್ಪ ಎಂಬುವವರು ಇವರ ನಾಯಕರಾಗಿದ್ದರು.
ನೆಹೆಮಿಯ 11 : 22 (IRVKN)
ದೇವಾಲಯದ ಕೆಲಸದ ಸಂಬಂಧವಾಗಿ ಗಾಯಕರಾದ ಆಸಾಫ್ಯರಿಗೆ ಸೇರಿದ ಬಾನೀಯನ ಮಗನೂ, ಹಷಬ್ಯನ ಮೊಮ್ಮಗನೂ, ಮತ್ತನ್ಯನ ಮರಿಮಗನೂ, ಮೀಕನ ವಂಶದವನಾದ ಆದ ಉಜ್ಜೀಯು ಯೆರೂಸಲೇಮಿನಲ್ಲಿದ್ದ ಲೇವಿಯರ ನಾಯಕನಾಗಿದ್ದನು.
ನೆಹೆಮಿಯ 11 : 23 (IRVKN)
ಗಾಯಕರ ಅನುದಿನದ ಖರ್ಚಿಗಾಗಿ ಒಂದು ನಿಯಮ ಇತ್ತು.
ನೆಹೆಮಿಯ 11 : 24 (IRVKN)
ಮೆಷೇಜಬೇಲನ ಮಗನೂ, ಜೆರಹನ ಸಂತಾನದವನೂ, ಯೆಹೂದ ಕುಲದವನೂ ಆದ ಪೆತಹ್ಯನು ಪ್ರಜೆಗಳ ಎಲ್ಲಾ ಕಾರ್ಯಗಳ ಸಂಬಂಧದಲ್ಲಿ ರಾಜನ ಕಾರ್ಯಭಾರಿಯಾಗಿದ್ದನು. [PE][PS]
ನೆಹೆಮಿಯ 11 : 25 (IRVKN)
ಭೂಸ್ವಾಸ್ಥ್ಯವಿದ್ದವರು ವಾಸಿಸುತ್ತಿದ್ದ ಊರುಗಳು: ಕಿರ್ಯತರ್ಬ, ದೀಬೋನ್, ಯೆಕಬ್ಜೆಯೇಲ್ ಇವುಗಳೂ ಮತ್ತು ಇವುಗಳ ಗ್ರಾಮಗಳು,
ನೆಹೆಮಿಯ 11 : 26 (IRVKN)
ಯೇಷೂವ, ಮೋಲಾದ, ಬೇತ್ಪೆಲೆಟ್ ಇವುಗಳೂ ಮತ್ತು ಇವುಗಳ ಗ್ರಾಮಗಳು,
ನೆಹೆಮಿಯ 11 : 27 (IRVKN)
ಹಚರ್‌ ಷೂವಾಲ್ ಹಾಗು ಬೇರ್ಷೆಬ ಇವುಗಳೂ ಮತ್ತು ಇವುಗಳ ಗ್ರಾಮಗಳು,
ನೆಹೆಮಿಯ 11 : 28 (IRVKN)
ಚಿಕ್ಲಗ್, ಮೆಕೋನವೂ ಇವುಗಳೂ ಮತ್ತು ಇವುಗಳ ಗ್ರಾಮಗಳು,
ನೆಹೆಮಿಯ 11 : 29 (IRVKN)
ಏನ್ರಿಮ್ಮೋನ್, ಚೊರ್ರ, ಯರ್ಮೂತ್ ಇವುಗಳೂ ಮತ್ತು ಇವುಗಳ ಗ್ರಾಮಗಳು,
ನೆಹೆಮಿಯ 11 : 30 (IRVKN)
ಜನೋಹ, ಅದುಲ್ಲಾಮ್ ಇವುಗಳ ಮತ್ತು ಇವುಗಳ ಗ್ರಾಮಗಳು ಮತ್ತು ಲಾಕೀಷ್ ಇದರ ಪ್ರಾಂತ್ಯಗಳು, ಅಜೇಕವೂ ಅದರ ಗ್ರಾಮಗಳು ಯೆಹೂದ ಕುಲದವರ ನಿವಾಸ ಸ್ಥಾನಗಳಾಗಿದ್ದವು. ಅವರು ಬೇರ್ಷೆಬದಿಂದ ಹಿನ್ನೋಮ್ ಕಣಿವೆಯವರೆಗೂ ವಾಸಮಾಡುತ್ತಿದ್ದರು. [PE][PS]
ನೆಹೆಮಿಯ 11 : 31 (IRVKN)
ಬೆನ್ಯಾಮೀನ್ ಕುಲದವರು ಗೆಬ ಊರಿನಿಂದ, ಮಿಕ್ಮಾಷ್, ಅಯ್ಯಾ ಹಾಗು ಬೇತೇಲ್ ಎಂಬ ಗ್ರಾಮಗಳವರೆಗೂ ವಾಸಮಾಡುತ್ತಿದ್ದರು.
ನೆಹೆಮಿಯ 11 : 32 (IRVKN)
ಅನಾತೋತ್, ನೋಬ್, ಅನನ್ಯ,
ನೆಹೆಮಿಯ 11 : 33 (IRVKN)
ಹಾಚೋರ್, ರಾಮಾ, ಗಿತ್ತಯಿಮ್,
ನೆಹೆಮಿಯ 11 : 34 (IRVKN)
ಹಾದೀದ್, ಚೆಬೋಯಿಮ್, ನೆಬಲ್ಲಾಟ್,
ನೆಹೆಮಿಯ 11 : 35 (IRVKN)
ಲೋದ್, ಓನೋ, ಗೇಹರಾಷೀಮ್ ಎಂಬ ಗ್ರಾಮಗಳೂ ಬೆನ್ಯಾಮೀನ್ ಕುಲದವರ ನಿವಾಸ ಸ್ಥಾನಗಳಾಗಿದ್ದವು.
ನೆಹೆಮಿಯ 11 : 36 (IRVKN)
ಲೇವಿಯರಲ್ಲಿ ಕೆಲವು ವರ್ಗಗಳವರು ಯೆಹೂದ್ಯರೊಂದಿಗೂ, ಕೆಲವರು ಬೆನ್ಯಾಮೀನ್ಯರೊಂದಿಗೂ ವಾಸಮಾಡುತ್ತಿದ್ದರು. [PE]

1 2 3 4 5 6 7 8 9 10 11 12 13 14 15 16 17 18 19 20 21 22 23 24 25 26 27 28 29 30 31 32 33 34 35 36

BG:

Opacity:

Color:


Size:


Font: