ನೆಹೆಮಿಯ 1 : 1 (IRVKN)
ನೆಹೆಮೀಯನ ಪ್ರಾರ್ಥನೆ ಹಕಲ್ಯನ ಮಗನಾದ ನೆಹೆಮೀಯನ ಚರಿತ್ರೆ: ಇಪ್ಪತ್ತನೆಯ ವರ್ಷದ ಮಾರ್ಗಶಿರ್ಷ ಮಾಸದಲ್ಲಿ* ಮಾರ್ಗಶಿರ್ಷ ಮಾಸದಲ್ಲಿ ಖಿಸ್ಲೆವ್ ಅಥವಾ “ಕಿಸ್ಲೇವ್” ತಿಂಗಳು ಬಾಬಿಲೋನಿಯನ್ ಕ್ಯಾಲೆಂಡರ್ನ ಒಂಬತ್ತನೆಯ ತಿಂಗಳಾಗಿದೆ, ಇದು ಹೀಬ್ರೂ ಕ್ಯಾಲೆಂಡರ್ನಲ್ಲಿ ನವೆಂಬರ್ ಮಧ್ಯದಿಂದ ಡಿಸೆಂಬರ್ ಮಧ್ಯದವರೆಗಿನ ಕಾಲಾವಧಿಯಾಗಿದೆ. ನಾನು ಶೂಷನ್ ಪಟ್ಟಣದ ಅರಮನೆಯಲ್ಲಿದ್ದಾಗ, † ನಾನು ಶೂಷನ್ ಪಟ್ಟಣದ ಅರಮನೆಯಲ್ಲಿದ್ದಾಗ, ಪಾರಸಿಯ ಸಾಮ್ರಾಜ್ಯದ ಅರಸನಾಗಿದ್ದ ಮೊದಲನೆಯ ಅರ್ತಷಸ್ತನ ಆಳ್ವಿಕೆಯಲ್ಲಿ ಅಂದರೆ ಕ್ರಿ.ಪೂ. 465-425 ವರ್ಷಗಳಲ್ಲಿ, ನೆಹೆಮೀಯನು ಎಲಾಮ್ ದೇಶದ ರಾಜಧಾನಿಯಾದ ಶೂಷನ್ ಪಟ್ಟಣದ ಅರಮನೆಯಲ್ಲಿ ವಾಸಿಸುತ್ತಿದ್ದನು.
ನೆಹೆಮಿಯ 1 : 2 (IRVKN)
ನನ್ನ ಸಹೋದರಲ್ಲಿ ಒಬ್ಬನಾದ ಹನಾನೀಯನೂ, ಬೇರೆ ಕೆಲವರು ಯೆಹೂದ ಜನರೊಂದಿಗೆ, ನನ್ನ ಬಳಿಗೆ ಬಂದರು. ಸೆರೆಯಾಳುಗಳಾಗಿ ಹೋಗಿದ್ದವರಲ್ಲಿ ಕೆಲವು ಯೆಹೂದ್ಯರು ತಪ್ಪಿಸಿಕೊಂಡು ನನ್ನ ಬಳಿಗೆ ಬಂದಾಗ ಯೆರೂಸಲೇಮಿನ ಸಮಾಚಾರವನ್ನು ನಾನು ಅವರ ಹತ್ತಿರ ವಿಚಾರಿಸಿದೆನು.
ನೆಹೆಮಿಯ 1 : 3 (IRVKN)
ಅವರು ನನಗೆ, “ಸೆರೆಯವರೊಳಗಿಂದ ತಪ್ಪಿಸಿಕೊಂಡು ಬಂದು ಆ ಸಂಸ್ಥಾನದಲ್ಲಿ ವಾಸಿಸುತ್ತಿರುವವರು ಮಹಾ ಕಷ್ಟನಿಂದೆಗಳಿಗೆ ಒಳಗಾಗಿದ್ದಾರೆ; ಯೆರೂಸಲೇಮಿನ ಪೌಳಿಗೋಡೆಯು ಕೆಡವಲ್ಪಟ್ಟಿದೆ; ಅದರ ಬಾಗಿಲುಗಳು ಬೆಂಕಿಯಿಂದ ಸುಡಲ್ಪಟ್ಟಿವೆ” ಎಂದು ಹೇಳಿದರು.
ನೆಹೆಮಿಯ 1 : 4 (IRVKN)
ನಾನು ಈ ವರ್ತಮಾನವನ್ನು ಕೇಳಿದ ಕ್ಷಣವೇ ನೆಲದ ಮೇಲೆ ಬಿದ್ದು ಅತ್ತೆನು; ಹಲವು ದಿನಗಳವರೆಗೂ ಶೋಕಿಸುತ್ತಾ ಉಪವಾಸವಾಗಿದ್ದು ಪರಲೋಕದ ದೇವರ ಮುಂದೆ ವಿಜ್ಞಾಪನೆ ಮಾಡುತ್ತಾ ಇದ್ದೆನು.
ನೆಹೆಮಿಯ 1 : 5 (IRVKN)
ಆ ವಿಜ್ಞಾಪನೆಗಳಲ್ಲಿ ನಾನು, “ಯೆಹೋವನೇ, ಮಹೋನ್ನತನೂ, ಭಯಭಕ್ತಿಗೂ ಪಾತ್ರನಾಗಿರುವ ಪರಲೋಕದ ದೇವರೇ, ನಿನ್ನನ್ನು ಪ್ರೀತಿಸಿ ನಿನ್ನ ಆಜ್ಞೆಗಳನ್ನು ಅನುಸರಿಸುವವರಿಗೆ ಮಾಡಿದ ಕೃಪಾವಾಗ್ದಾನಗಳನ್ನು ನೆರವೇರಿಸುವವನೇ,
ನೆಹೆಮಿಯ 1 : 6 (IRVKN)
ಕೃಪೆಮಾಡಿ ನನ್ನ ಮೊರೆಗೆ ಕಿವಿಗೊಡು, ನನ್ನನ್ನು ಕಟಾಕ್ಷಿಸು, ನಿನ್ನ ಸೇವಕನ ಪ್ರಾರ್ಥನೆಯನ್ನು ಲಾಲಿಸಬೇಕು. ನಾನು ಈಗ ಹಗಲಿರುಳೂ ನಿನ್ನ ಸನ್ನಿಧಿಯಲ್ಲಿ ನಿನ್ನ ಸೇವಕರಾದ ಇಸ್ರಾಯೇಲರಿಗಾಗಿ ಪ್ರಾರ್ಥಿಸುತ್ತಾ ಅವರು ನಿನಗೆ ವಿರುದ್ಧವಾಗಿ ಮಾಡಿದ ಪಾಪಗಳನ್ನು ಅರಿಕೆ ಮಾಡುತ್ತಾ ಇದ್ದೇನೆ; ನಾನೂ, ನನ್ನ ಪೂರ್ವಿಕರೂ ಆ ಪಾಪಗಳಲ್ಲಿ ಪಾಲುಗಾರರಾಗಿದ್ದೇವೆ.
ನೆಹೆಮಿಯ 1 : 7 (IRVKN)
ನಾವು ನಿನಗೆ ದ್ರೋಹಿಗಳಾಗಿ ನಡೆಯುತ್ತಾ ಬಂದೆವು; ನೀನು ನಿನ್ನ ಸೇವಕನಾದ ಮೋಶೆಯ ಮುಖಾಂತರ ಕೊಟ್ಟ ಆಜ್ಞಾವಿಧಿನ್ಯಾಯಗಳನ್ನು ನಾವು ಕೈಗೊಳ್ಳಲಿಲ್ಲ.
ನೆಹೆಮಿಯ 1 : 8 (IRVKN)
ಆದರೂ, ನಿನ್ನ ಸೇವಕನಾದ ಮೋಶೆಗೆ ಹೇಳಿದ ಮಾತನ್ನು ನೆನಪಿಸಿಕೊಳ್ಳಿರಿ; ‘ನೀವು ಅವಿಧೇಯರಾಗಿ ನಡೆಯುವುದಾದರೆ ನಾನು ನಿಮ್ಮನ್ನು ಜನಾಂಗಗಳ ಮದ್ಯ ಚದುರಿಸಿಬಿಡುವೆನು;
ನೆಹೆಮಿಯ 1 : 9 (IRVKN)
ನನಗೆ ಅಭಿಮುಖರಾಗಿ ನನ್ನ ಆಜ್ಞೆಗಳನ್ನು ಅನುಸರಿಸಿ ನಡೆಯುವುದಾದರೆ ನಿಮ್ಮ ಜನರು ಆಕಾಶದ ಕೊನೆಯವರೆಗೆ ಒಯ್ಯಲ್ಪಟ್ಟರೂ ನಾನು ಅವರನ್ನು ಅಲ್ಲಿಂದ ಕೂಡಿಸಿ, ನನ್ನ ನಾಮಸ್ಥಾಪನೆಗೋಸ್ಕರ ಆರಿಸಿದ ಸ್ಥಳಕ್ಕೆ ಮತ್ತೆ ಬರಮಾಡುವೆನು’ ಎಂದು ಹೇಳಿರುವೆಯಲ್ಲಾ; ಆ ಮಾತನ್ನು ಸ್ಮರಿಸಿರಿ.
ನೆಹೆಮಿಯ 1 : 10 (IRVKN)
“ಅವರು ನಿನ್ನ ಸೇವಕರೂ, ನೀನು ನಿನ್ನ ಮಹಾಶಕ್ತಿ, ಭುಜಪರಾಕ್ರಮಗಳಿಂದ ವಿಮೋಚಿಸಿದ ನಿನ್ನ ಪ್ರಜೆಗಳೂ ಆಗಿರುತ್ತಾರಲ್ಲಾ.
ನೆಹೆಮಿಯ 1 : 11 (IRVKN)
ಯೆಹೋವನೇ, ಕೃಪೆಮಾಡು; ನಿನ್ನ ಸೇವಕನಾದ ನನ್ನ ಪ್ರಾರ್ಥನೆಗೂ, ನಿನ್ನ ನಾಮ ಸ್ಮರಣೆಯಲ್ಲಿ ಆನಂದಿಸುವ ನಿನ್ನ ಭಕ್ತರ ಪ್ರಾರ್ಥನೆಗೂ ಕಿವಿಗೊಡು. ನಿನ್ನ ಸೇವಕನು ಈಹೊತ್ತು ಈ ಮನುಷ್ಯನ ದಯೆಗೆ ಪಾತ್ರನಾಗಿ ಸಫಲನಾಗುವಂತೆ ಅನುಗ್ರಹಿಸಬೇಕು” ಎಂದು ಪ್ರಾರ್ಥಿಸಿದೆನು.
❮
❯
1
2
3
4
5
6
7
8
9
10
11