ಮಿಕ 2 : 1 (IRVKN)
{ಬಡವರನ್ನು ದೋಚಿಕೊಳ್ಳುವವರಿಗೆ ದಂಡನೆ} [PS] ತಮ್ಮ ಹಾಸಿಗೆಯಲ್ಲಿ ಮಲಗಿರುವಾಗಲೇ ಅನ್ಯಾಯವನ್ನು ಯೋಚಿಸಿ, [QBR] ಕೇಡನ್ನು ಕಲ್ಪಿಸುವವರ ಗತಿಯನ್ನು ಏನು ಹೇಳಲಿ. [QBR] ಉದಯದ ಬೆಳಕಿನಲ್ಲಿ ಅದನ್ನು ನಡಿಸುವರು, ಅದು ಅವರ ಕೈವಶವಷ್ಟೇ. [QBR]
ಮಿಕ 2 : 2 (IRVKN)
ಹೊಲಗದ್ದೆಗಳನ್ನು ದುರಾಶೆಯಿಂದ ಆಕ್ರಮಿಸಿಕೊಳ್ಳುತ್ತಾರೆ. [QBR] ಮನೆಗಳನ್ನು ಲೋಭದಿಂದ ಅಪಹರಿಸುತ್ತಾರೆ. [QBR] ಮನೆಯನ್ನೂ, ಮನೆಯವನನ್ನೂ ಮತ್ತು ಅವನ ಸ್ವತ್ತನ್ನೂ ತುಳಿದುಬಿಡುತ್ತಾರೆ. [QBR]
ಮಿಕ 2 : 3 (IRVKN)
ಆದಕಾರಣ ಯೆಹೋವನು ಇಂತೆನ್ನುತ್ತಾನೆ, [QBR] “ಇಗೋ ಈ ವಂಶಕ್ಕೆ ನಾನೇ ಕೇಡನ್ನು ಕಲ್ಪಿಸುತ್ತೇನೆ, [QBR] ಅದರ ಭಾರದಿಂದ ನಿಮ್ಮ ಕುತ್ತಿಗೆಗಳನ್ನು ತಪ್ಪಿಸಿಕೊಳ್ಳಲಾರಿರಿ, [QBR] ನೀವು ತಲೆಯೆತ್ತಿ ನಡೆಯುವುದಕ್ಕಾಗದು. [QBR] ಅದು ಕೆಟ್ಟ ಕಾಲವೇ ಸರಿ. [QBR]
ಮಿಕ 2 : 4 (IRVKN)
ಆ ದಿನದಲ್ಲಿ ಜನರು ನಿಮ್ಮ ವಿಷಯವಾಗಿ ಅಪಹಾಸ್ಯ ಮಾಡಿ ಲಾವಣಿಕಟ್ಟಿ ಹಾಡುವರು. [QBR] ‘ಅಯ್ಯೋ, ನಾವು ತೀರಾ ಸೂರೆಹೋದೆವಲ್ಲಾ ಯೆಹೋವನು ನಮ್ಮವರ ಸ್ವತ್ತನ್ನು ಪರಾಧೀನಮಾಡುತ್ತಿದ್ದಾನೆ. [QBR] ಅಯ್ಯೋ, ಅದನ್ನು ನಮ್ಮಿಂದ ತೊಲಗಿಸಿದ್ದಾನಲ್ಲಾ, ನಮ್ಮ ಭೂಮಿಯನ್ನು ದೇವದ್ರೋಹಿಗಳಿಗೆ ಹಂಚಿಕೊಟ್ಟಿದ್ದಾನೆ’ ” ಎಂದು [QBR] ಶೋಕಗೀತವಾಗಿ ಹಾಡುವರು. [QBR]
ಮಿಕ 2 : 5 (IRVKN)
ಹೀಗಿರಲು ಯೆಹೋವನ ಸಭೆಯವರ [QBR] ಭೂಮಿಯ ಮೇಲೆ ಚೀಟು ಹಾಕಿ ನೂಲೆಳೆಯಲಿಕ್ಕೆ ನಿಮ್ಮಲ್ಲಿ ಯಾರೂ ಇರುವುದಿಲ್ಲ.
ಮಿಕ 2 : 6 (IRVKN)
{ಸುಳ್ಳು ಪ್ರವಾದಿಗಳು} [PS] ಆಹಾ, ಆ ಕೆಡುಕರು “ಪ್ರವಾದನೆ ಮಾಡಬೇಡಿರಿ. [QBR] ಇಂಥ ವಿಷಯಗಳಲ್ಲಿ ಪ್ರವಾದನೆಯನ್ನು ಎತ್ತಬಾರದು, [QBR] ದೂಷಣೆಗಳು ತೊಲಗುವುದೇ ಇಲ್ಲ” ಎಂದು ಪ್ರವಾದನೆ ಮಾಡುತ್ತಾರೆ. [QBR]
ಮಿಕ 2 : 7 (IRVKN)
ಯಾಕೋಬ ವಂಶವೇ, [QBR] “ಯೆಹೋವನ ಆತ್ಮವು ತಾಳ್ಮೆಯಿಲ್ಲದ್ದೋ? [QBR] ಇಂಥ ಕೃತ್ಯಗಳು ಆತನವೋ” ಎಂದು ಏಕೆ ಹೇಳುತ್ತೀ? [QBR] ನನ್ನ ನುಡಿಗಳು ಸನ್ಮಾರ್ಗಿಗಳಿಗೆ ಹಿತಕರವಷ್ಟೇ. [QBR]
ಮಿಕ 2 : 8 (IRVKN)
ನನ್ನ ಜನರೋ ಕೆಲವು ಕಾಲದಿಂದ ಶತ್ರುಗಳಾಗಿ ಎದ್ದಿದ್ದಾರೆ. [QBR] ಜಗಳವನ್ನೊಲ್ಲದೆ ನಿರ್ಭಯವಾಗಿ ಹೋಗಿ ಬರುವವರ ಮೇಲಂಗಿಯನ್ನು ಕಿತ್ತುಕೊಳ್ಳುತ್ತೀರಿ. [QBR]
ಮಿಕ 2 : 9 (IRVKN)
ನನ್ನ ಜನರ ಸ್ತ್ರೀಯರನ್ನು, ಅವರ ಪ್ರಿಯವಾದ ಮನೆಗಳಿಂದ ತಳ್ಳಿಹಾಕುತ್ತೀರಿ. [QBR] ಅವರ ಸಣ್ಣ ಮಕ್ಕಳಿಗೆ ನನ್ನ ಆಶೀರ್ವಾದದ [* ಆಶೀರ್ವಾದದ ಮಹಿಮೆಯ] ಹಕ್ಕನ್ನು ಇನ್ನೆಂದಿಗೂ ಸಿಕ್ಕದಂತೆ ತಪ್ಪಿಸುತ್ತೀರಿ. [QBR]
ಮಿಕ 2 : 10 (IRVKN)
ಏಳಿರಿ, ತೊಲಗಿರಿ, ಈ ದೇಶವು ನಿಮ್ಮ ಸುಖವಸತಿಯಾಗದು. [QBR] ನಾಶನವನ್ನು, ವಿಪರೀತ ನಾಶನವನ್ನು ಉಂಟುಮಾಡುವ ಹೊಲಸು ಇದಕ್ಕೆ ಅಂಟಿಕೊಂಡಿದೆ. [QBR]
ಮಿಕ 2 : 11 (IRVKN)
ಗಾಳಿಯನ್ನೂ, ಮೋಸವನ್ನೂ ಹಿಂಬಾಲಿಸುವ ಸುಳ್ಳುಗಾರನೊಬ್ಬನು, [QBR] “ನಾನು ದ್ರಾಕ್ಷಾರಸ, ಮಧ್ಯಗಳ ವಿಷಯವಾಗಿ ನಿನಗೆ ಪ್ರವಾದನೆ ಮಾಡುವೆನು” ಎಂದು ಹೇಳಿದರೆ, [QBR] ಈ ಜನರು ಅಂಥವನನ್ನು ಪ್ರವಾದಿಯನ್ನಾಗಿ ಸ್ವೀಕರಿಸಿಕೊಳ್ಳುವರು.
ಮಿಕ 2 : 12 (IRVKN)
{ಇಸ್ರಾಯೇಲಿನ ರಕ್ಷಣೆಯ ವಾಗ್ದಾನ} [PS] ಯಾಕೋಬೇ ನಿನ್ನವರೆಲ್ಲರನ್ನು ಒಂದುಗೂಡಿಸುವೆನು. [QBR] ಇಸ್ರಾಯೇಲಿನ ಉಳಿದ ಜನರನ್ನು ಒಟ್ಟಿಗೆ ಸೇರಿಸುವೆನು. [QBR] ಅವರನ್ನು ಹಟ್ಟಿಯಲ್ಲಿನ ಕುರಿಗಳಂತೆ ಒಟ್ಟಿಗೆ ಇಡುವೆನು. [QBR] ಹುಲ್ಲುಗಾವಲಿನ ಮಧ್ಯದಲ್ಲಿನ ಮಂದೆಯ ಹಾಗೆ ಗುಂಪು ಕೂಡಿಸುವೆನು. ಜನರು ದೊಡ್ಡ ಶಬ್ದಮಾಡುವರು. [QBR]
ಮಿಕ 2 : 13 (IRVKN)
ಹೊಡೆದು ಹೋಗುವವನು ಅವರ ಮುಂದೆ ಹೊರಟಿದ್ದಾನೆ. [QBR] ಅವರೂ ಬಾಗಿಲನ್ನು ಒಡೆದು ನುಗ್ಗಿ ಹೊರಟಿದ್ದಾರೆ. [QBR] ಅವರ ಅರಸನು ಅವರ ಮುಂದೆ ತೆರಳಿದ್ದಾನೆ. [QBR] ಯೆಹೋವನು ಅವರ ಮುಂಭಾಗದಲ್ಲಿ ನಡೆಯುತ್ತಿದ್ದಾನೆ. [PE]

1 2 3 4 5 6 7 8 9 10 11 12 13

BG:

Opacity:

Color:


Size:


Font: