ಮಿಕ 2 : 1 (IRVKN)
ಬಡವರನ್ನು ದೋಚಿಕೊಳ್ಳುವವರಿಗೆ ದಂಡನೆ ತಮ್ಮ ಹಾಸಿಗೆಯಲ್ಲಿ ಮಲಗಿರುವಾಗಲೇ ಅನ್ಯಾಯವನ್ನು ಯೋಚಿಸಿ, ಕೇಡನ್ನು ಕಲ್ಪಿಸುವವರ ಗತಿಯನ್ನು ಏನು ಹೇಳಲಿ. ಉದಯದ ಬೆಳಕಿನಲ್ಲಿ ಅದನ್ನು ನಡಿಸುವರು, ಅದು ಅವರ ಕೈವಶವಷ್ಟೇ.
ಮಿಕ 2 : 2 (IRVKN)
ಹೊಲಗದ್ದೆಗಳನ್ನು ದುರಾಶೆಯಿಂದ ಆಕ್ರಮಿಸಿಕೊಳ್ಳುತ್ತಾರೆ. ಮನೆಗಳನ್ನು ಲೋಭದಿಂದ ಅಪಹರಿಸುತ್ತಾರೆ. ಮನೆಯನ್ನೂ, ಮನೆಯವನನ್ನೂ ಮತ್ತು ಅವನ ಸ್ವತ್ತನ್ನೂ ತುಳಿದುಬಿಡುತ್ತಾರೆ.
ಮಿಕ 2 : 3 (IRVKN)
ಆದಕಾರಣ ಯೆಹೋವನು ಇಂತೆನ್ನುತ್ತಾನೆ, “ಇಗೋ ಈ ವಂಶಕ್ಕೆ ನಾನೇ ಕೇಡನ್ನು ಕಲ್ಪಿಸುತ್ತೇನೆ, ಅದರ ಭಾರದಿಂದ ನಿಮ್ಮ ಕುತ್ತಿಗೆಗಳನ್ನು ತಪ್ಪಿಸಿಕೊಳ್ಳಲಾರಿರಿ, ನೀವು ತಲೆಯೆತ್ತಿ ನಡೆಯುವುದಕ್ಕಾಗದು. ಅದು ಕೆಟ್ಟ ಕಾಲವೇ ಸರಿ.
ಮಿಕ 2 : 4 (IRVKN)
ಆ ದಿನದಲ್ಲಿ ಜನರು ನಿಮ್ಮ ವಿಷಯವಾಗಿ ಅಪಹಾಸ್ಯ ಮಾಡಿ ಲಾವಣಿಕಟ್ಟಿ ಹಾಡುವರು. ‘ಅಯ್ಯೋ, ನಾವು ತೀರಾ ಸೂರೆಹೋದೆವಲ್ಲಾ ಯೆಹೋವನು ನಮ್ಮವರ ಸ್ವತ್ತನ್ನು ಪರಾಧೀನಮಾಡುತ್ತಿದ್ದಾನೆ. ಅಯ್ಯೋ, ಅದನ್ನು ನಮ್ಮಿಂದ ತೊಲಗಿಸಿದ್ದಾನಲ್ಲಾ, ನಮ್ಮ ಭೂಮಿಯನ್ನು ದೇವದ್ರೋಹಿಗಳಿಗೆ ಹಂಚಿಕೊಟ್ಟಿದ್ದಾನೆ’ ” ಎಂದು ಶೋಕಗೀತವಾಗಿ ಹಾಡುವರು.
ಮಿಕ 2 : 5 (IRVKN)
ಹೀಗಿರಲು ಯೆಹೋವನ ಸಭೆಯವರ ಭೂಮಿಯ ಮೇಲೆ ಚೀಟು ಹಾಕಿ ನೂಲೆಳೆಯಲಿಕ್ಕೆ ನಿಮ್ಮಲ್ಲಿ ಯಾರೂ ಇರುವುದಿಲ್ಲ.
ಮಿಕ 2 : 6 (IRVKN)
ಸುಳ್ಳು ಪ್ರವಾದಿಗಳು ಆಹಾ, ಆ ಕೆಡುಕರು “ಪ್ರವಾದನೆ ಮಾಡಬೇಡಿರಿ. ಇಂಥ ವಿಷಯಗಳಲ್ಲಿ ಪ್ರವಾದನೆಯನ್ನು ಎತ್ತಬಾರದು, ದೂಷಣೆಗಳು ತೊಲಗುವುದೇ ಇಲ್ಲ” ಎಂದು ಪ್ರವಾದನೆ ಮಾಡುತ್ತಾರೆ.
ಮಿಕ 2 : 7 (IRVKN)
ಯಾಕೋಬ ವಂಶವೇ, “ಯೆಹೋವನ ಆತ್ಮವು ತಾಳ್ಮೆಯಿಲ್ಲದ್ದೋ? ಇಂಥ ಕೃತ್ಯಗಳು ಆತನವೋ” ಎಂದು ಏಕೆ ಹೇಳುತ್ತೀ? ನನ್ನ ನುಡಿಗಳು ಸನ್ಮಾರ್ಗಿಗಳಿಗೆ ಹಿತಕರವಷ್ಟೇ.
ಮಿಕ 2 : 8 (IRVKN)
ನನ್ನ ಜನರೋ ಕೆಲವು ಕಾಲದಿಂದ ಶತ್ರುಗಳಾಗಿ ಎದ್ದಿದ್ದಾರೆ. ಜಗಳವನ್ನೊಲ್ಲದೆ ನಿರ್ಭಯವಾಗಿ ಹೋಗಿ ಬರುವವರ ಮೇಲಂಗಿಯನ್ನು ಕಿತ್ತುಕೊಳ್ಳುತ್ತೀರಿ.
ಮಿಕ 2 : 9 (IRVKN)
ನನ್ನ ಜನರ ಸ್ತ್ರೀಯರನ್ನು, ಅವರ ಪ್ರಿಯವಾದ ಮನೆಗಳಿಂದ ತಳ್ಳಿಹಾಕುತ್ತೀರಿ. ಅವರ ಸಣ್ಣ ಮಕ್ಕಳಿಗೆ ನನ್ನ ಆಶೀರ್ವಾದದ* ಆಶೀರ್ವಾದದ ಮಹಿಮೆಯ ಹಕ್ಕನ್ನು ಇನ್ನೆಂದಿಗೂ ಸಿಕ್ಕದಂತೆ ತಪ್ಪಿಸುತ್ತೀರಿ.
ಮಿಕ 2 : 10 (IRVKN)
ಏಳಿರಿ, ತೊಲಗಿರಿ, ಈ ದೇಶವು ನಿಮ್ಮ ಸುಖವಸತಿಯಾಗದು. ನಾಶನವನ್ನು, ವಿಪರೀತ ನಾಶನವನ್ನು ಉಂಟುಮಾಡುವ ಹೊಲಸು ಇದಕ್ಕೆ ಅಂಟಿಕೊಂಡಿದೆ.
ಮಿಕ 2 : 11 (IRVKN)
ಗಾಳಿಯನ್ನೂ, ಮೋಸವನ್ನೂ ಹಿಂಬಾಲಿಸುವ ಸುಳ್ಳುಗಾರನೊಬ್ಬನು, “ನಾನು ದ್ರಾಕ್ಷಾರಸ, ಮಧ್ಯಗಳ ವಿಷಯವಾಗಿ ನಿನಗೆ ಪ್ರವಾದನೆ ಮಾಡುವೆನು” ಎಂದು ಹೇಳಿದರೆ, ಈ ಜನರು ಅಂಥವನನ್ನು ಪ್ರವಾದಿಯನ್ನಾಗಿ ಸ್ವೀಕರಿಸಿಕೊಳ್ಳುವರು.
ಮಿಕ 2 : 12 (IRVKN)
ಇಸ್ರಾಯೇಲಿನ ರಕ್ಷಣೆಯ ವಾಗ್ದಾನ ಯಾಕೋಬೇ ನಿನ್ನವರೆಲ್ಲರನ್ನು ಒಂದುಗೂಡಿಸುವೆನು. ಇಸ್ರಾಯೇಲಿನ ಉಳಿದ ಜನರನ್ನು ಒಟ್ಟಿಗೆ ಸೇರಿಸುವೆನು. ಅವರನ್ನು ಹಟ್ಟಿಯಲ್ಲಿನ ಕುರಿಗಳಂತೆ ಒಟ್ಟಿಗೆ ಇಡುವೆನು. ಹುಲ್ಲುಗಾವಲಿನ ಮಧ್ಯದಲ್ಲಿನ ಮಂದೆಯ ಹಾಗೆ ಗುಂಪು ಕೂಡಿಸುವೆನು. ಜನರು ದೊಡ್ಡ ಶಬ್ದಮಾಡುವರು.
ಮಿಕ 2 : 13 (IRVKN)
ಹೊಡೆದು ಹೋಗುವವನು ಅವರ ಮುಂದೆ ಹೊರಟಿದ್ದಾನೆ. ಅವರೂ ಬಾಗಿಲನ್ನು ಒಡೆದು ನುಗ್ಗಿ ಹೊರಟಿದ್ದಾರೆ. ಅವರ ಅರಸನು ಅವರ ಮುಂದೆ ತೆರಳಿದ್ದಾನೆ. ಯೆಹೋವನು ಅವರ ಮುಂಭಾಗದಲ್ಲಿ ನಡೆಯುತ್ತಿದ್ದಾನೆ.
❮
❯
1
2
3
4
5
6
7
8
9
10
11
12
13