ಮಾರ್ಕನು 2 : 1 (IRVKN)
ಯೇಸು ಒಬ್ಬ ರೋಗಿಯ ಪಾಪವನ್ನು ಕ್ಷಮಿಸಿ ಅವನ ರೋಗವನ್ನು ಸ್ವಸ್ಥಪಡಿಸಿದ್ದಕ್ಕೆ ಶಾಸ್ತ್ರಿಗಳ ಆಕ್ಷೇಪ
ಮತ್ತಾ 9:1-8; ಲೂಕ 5:17-26
ಕೆಲವು ದಿನಗಳಾದ ಮೇಲೆ ಯೇಸು ಕಪೆರ್ನೌಮಿಗೆ ಹಿಂತಿರುಗಿ ಬಂದನು. ಆತನು ಮನೆಯಲ್ಲಿದ್ದಾನೆಂಬ ವರ್ತಮಾನವು ಜನರಲ್ಲಿ ಹಬ್ಬಿತ್ತು.
ಮಾರ್ಕನು 2 : 2 (IRVKN)
ಆಗ ಬಹು ಜನರು ಅಲ್ಲಿ ಕೂಡಿಬಂದಿದ್ದರಿಂದ ಬಾಗಿಲಿನ ಬಳಿಯಲ್ಲಿಯೂ ಕೂಡ ಸ್ಥಳವಿರಲಿಲ್ಲ. ಯೇಸು ಅವರಿಗೆ ದೇವರ ವಾಕ್ಯವನ್ನು ಹೇಳುತ್ತಿದ್ದನು.
ಮಾರ್ಕನು 2 : 3 (IRVKN)
ಅಷ್ಟರಲ್ಲಿ ಕೆಲವರು ಒಬ್ಬ ಪಾರ್ಶ್ವವಾಯು ರೋಗಿಯನ್ನು ಆತನ ಬಳಿಗೆ ತಂದರು; ನಾಲ್ಕು ಮಂದಿಯು ಆತನನ್ನು ಹೊತ್ತುಕೊಂಡಿದರು.
ಮಾರ್ಕನು 2 : 4 (IRVKN)
ಜನರು ಗುಂಪಾಗಿದ್ದುದರಿಂದ ಅವರು ಆತನ ಹತ್ತಿರಕ್ಕೆ ಬರಲು ಸಾಧ್ಯವಾಗದೆ ಆತನು ನಿಂತ ಸ್ಥಳಕ್ಕೆ ಸರಿಯಾಗಿ ಮನೆಯ ಮೇಲ್ಛಾವಣಿಯನ್ನು ತೆರೆದು ಕಿಂಡಿಯೊಂದನ್ನು ಮಾಡಿ ಪಾರ್ಶ್ವವಾಯು ರೋಗಿಯನ್ನು ಮಲಗಿದ್ದ ಹಾಸಿಗೆಯ ಸಮೇತ ಕೆಳಗಿಳಿಸಿದರು.
ಮಾರ್ಕನು 2 : 5 (IRVKN)
ಯೇಸು ಅವರ ನಂಬಿಕೆಯನ್ನು ನೋಡಿ ಆ ಪಾರ್ಶ್ವವಾಯು ರೋಗಿಗೆ, “ಮಗನೇ, ನಿನ್ನ[* ಕೀರ್ತ 103:3; ಲೂಕ 7: 48 ]ಪಾಪಗಳು ಕ್ಷಮಿಸಲ್ಪಟ್ಟಿವೆ” ಎಂದು ಹೇಳಿದನು.
ಮಾರ್ಕನು 2 : 6 (IRVKN)
ಆದರೆ ಶಾಸ್ತ್ರಿಗಳಲ್ಲಿ ಕೆಲವರು ಅಲ್ಲಿ ಕುಳಿತುಕೊಂಡಿದ್ದು;
ಮಾರ್ಕನು 2 : 7 (IRVKN)
“ಈತನು ಯಾಕೆ ಹೀಗೆ ಮಾತನಾಡುತ್ತಾನೆ? ಇದು ದೇವದೂಷಣೆ. ದೇವರೊಬ್ಬನೇ ಹೊರತು ಮತ್ತಾರು ಪಾಪಗಳನ್ನು ಕ್ಷಮಿಸಬಲ್ಲರು?” ಎಂದು ತಮ್ಮ ಮನಸ್ಸಿನಲ್ಲಿ ಆಲೋಚಿಸಿಕೊಳ್ಳುತ್ತಿದ್ದರು.
ಮಾರ್ಕನು 2 : 8 (IRVKN)
ಹೀಗೆ ಆಲೋಚಿಸಿಕೊಳ್ಳುತ್ತಿದ್ದುದನ್ನು ಕೂಡಲೆ ಯೇಸು ತನ್ನ ಆತ್ಮದಲ್ಲಿ ತಿಳಿದುಕೊಂಡು ಅವರಿಗೆ, “ನೀವು ನಿಮ್ಮ ಮನಸ್ಸಿನಲ್ಲಿ ಯಾಕೆ ಹೀಗೆ ಯೋಚಿಸುತ್ತೀರಿ?
ಮಾರ್ಕನು 2 : 9 (IRVKN)
ಯಾವುದು ಸುಲಭ? ಪಾರ್ಶ್ವವಾಯು ರೋಗಿಗೆ ‘ನಿನ್ನ ಪಾಪಗಳು ಕ್ಷಮಿಸಲ್ಪಟ್ಟಿವೆ ಅನ್ನುವುದೋ’ ಅಥವಾ ‘ಎದ್ದು ನಿನ್ನ ಹಾಸಿಗೆಯನ್ನು ತೆಗೆದುಕೊಂಡು ನಡೆ’ ಅನ್ನುವುದೋ?
ಮಾರ್ಕನು 2 : 10 (IRVKN)
ಆದರೆ ಪಾಪಗಳನ್ನು ಕ್ಷಮಿಸಿಬಿಡುವುದಕ್ಕೆ ಮನುಷ್ಯಕುಮಾರನಿಗೆ ಭೂಲೋಕದಲ್ಲಿ ಅಧಿಕಾರ ಉಂಟೆಂಬುದನ್ನು ನೀವು ತಿಳಿಯಬೇಕು” ಎಂದು ಹೇಳಿ ಪಾರ್ಶ್ವವಾಯು ರೋಗಿಯನ್ನು ನೋಡಿ
ಮಾರ್ಕನು 2 : 11 (IRVKN)
[† ಯೋಹಾ 5:8; ಅ. ಕೃ. 3: 6 ]“ಎದ್ದು ನಿನ್ನ ಹಾಸಿಗೆಯನ್ನು ಎತ್ತಿಕೊಂಡು ನಿನ್ನ ಮನೆಗೆ ಹೋಗೆಂದು ನಿನಗೆ ಹೇಳುತ್ತೇನೆ” ಅಂದನು.
ಮಾರ್ಕನು 2 : 12 (IRVKN)
ಅವನು ಕೂಡಲೆ ಎದ್ದು ತನ್ನ ಹಾಸಿಗೆಯನ್ನು ತೆಗೆದುಕೊಂಡು ಎಲ್ಲರ ಮುಂದೆ ಹೊರಟುಹೋದನು. ಅದನ್ನು ನೋಡಿದವರೆಲ್ಲರು ಆಶ್ಚರ್ಯಚಕಿತರಾದರು, “ಇದುವರೆಗೆ ನಾವು ಇಂಥದನ್ನು ಎಂದಿಗೂ ನೋಡಿದ್ದೇ” ಇಲ್ಲವೆಂದು ಹೇಳುತ್ತಾ ದೇವರಿಗೆ ಮಹಿಮೆ ಸಲ್ಲಿಸಿದರು.
ಮಾರ್ಕನು 2 : 13 (IRVKN)
ಯೇಸು ಲೇವಿಯನ್ನು ಕರೆದದ್ದು
ಮತ್ತಾ 9:9-13; ಲೂಕ 5:27-32
ಯೇಸು ಹೊರಟು ತಿರುಗಿ ಸಮುದ್ರದ ಬಳಿಗೆ ಹೋದನು. ಜನರು ಗುಂಪಾಗಿ ಆತನ ಬಳಿಗೆ ಬಂದಾಗ ಆತನು ಅವರಿಗೆ ಉಪದೇಶ ಮಾಡಿದನು.
ಮಾರ್ಕನು 2 : 14 (IRVKN)
ಆತನು ಅಲ್ಲಿಂದ ಹೋಗುತ್ತಿರುವಾಗ ಸುಂಕ ವಸೂಲಿಮಾಡುವ ಸ್ಥಳದಲ್ಲಿ ಕುಳಿತಿದ್ದ ಅಲ್ಫಾಯನ ಮಗನಾದ ಲೇವಿಯನ್ನು ನೋಡಿ, “ನನ್ನನ್ನು ಹಿಂಬಾಲಿಸು” ಎಂದು ಅವನನ್ನು ಕರೆಯಲು, ಅವನು ಎದ್ದು ಯೇಸುವನ್ನು ಹಿಂಬಾಲಿಸಿದನು.
ಮಾರ್ಕನು 2 : 15 (IRVKN)
ಅನಂತರ ಯೇಸುವು ಆ ಲೇವಿಯನ ಮನೆಯೊಳಗೆ ಊಟಮಾಡುತ್ತಿರುವಾಗ, ಬಹು ಮಂದಿ ತೆರಿಗೆಯವರೂ ಸುಂಕದವರೂ, ಪಾಪಿಗಳೂ ಯೇಸುವಿನ ಮತ್ತು ಆತನ ಶಿಷ್ಯರ ಸಂಗಡ ಊಟಕ್ಕೆ ಕುಳಿತುಕೊಂಡರು. § ಪಾಠಾಂತರ: ಅಂಥವರು ಬಹುಮಂದಿ ಇದ್ದರು; ಯೇಸುವನ್ನು ಹಿಂಬಾಲಿಸಿದರು. ಯೇಸುವು ಪಾಪಿಗಳ ಸಂಗಡ ಊಟಮಾಡುವುದನ್ನು ಫರಿಸಾಯರಾದ ಶಾಸ್ತ್ರಿಗಳು ಕಂಡು ಇಂಥವರಲ್ಲಿ ಬಹು ಮಂದಿ ಯೇಸುವನ್ನು ಹಿಂಬಾಲಿಸಿದವರಾಗಿದ್ದರು.
ಮಾರ್ಕನು 2 : 16 (IRVKN)
ಫರಿಸಾಯರಾದ ಶಾಸ್ತ್ರಿಗಳು ಆತನು ಪಾಪಿಗಳ ಮತ್ತು ಸುಂಕದವರ ಸಂಗಡ ಊಟ ಮಾಡುವುದನ್ನು ಕಂಡು ಆತನ ಶಿಷ್ಯರಿಗೆ, “ಈತನು ಸುಂಕದವರ ಮತ್ತು ಪಾಪಿಗಳ ಸಂಗಡ ಏಕೆ ಊಟಮಾಡುತ್ತಾನೆ?” ಎಂದು ಕೇಳಿದರು.
ಮಾರ್ಕನು 2 : 17 (IRVKN)
ಯೇಸು ಅದನ್ನು ಕೇಳಿ ಅವರಿಗೆ, “ಕ್ಷೇಮದಿಂದಿರುವವರಿಗೆ ವೈದ್ಯನು ಬೇಕಾಗಿಲ್ಲ; ಕ್ಷೇಮವಿಲ್ಲದವರಿಗೆ ಬೇಕು. ನಾನು ನೀತಿವಂತರನ್ನು ಕರೆಯುವುದಕ್ಕೆ ಬಂದಾತನಲ್ಲ, ಪಾಪಿಗಳನ್ನು ಕರೆಯುವುದಕ್ಕೆ ಬಂದವನು” ಅಂದನು.
ಮಾರ್ಕನು 2 : 18 (IRVKN)
ಉಪವಾಸದ ಕುರಿತಾದ ಪ್ರಶ್ನೆ
ಮತ್ತಾ 9:14-17; ಲೂಕ 5:33-38
ಯೋಹಾನನ ಶಿಷ್ಯರೂ ಫರಿಸಾಯರೂ ಉಪವಾಸ ಮಾಡುತ್ತಿದ್ದರು. ಅವರು ಆತನ ಬಳಿಗೆ ಬಂದು ಯೋಹಾನನ ಶಿಷ್ಯರೂ ಫರಿಸಾಯರೂ ಉಪವಾಸಮಾಡುತ್ತಾರಲ್ಲಾ? “ನಿನ್ನ ಶಿಷ್ಯರು ಏಕೆ ಉಪವಾಸಮಾಡುವುದಿಲ್ಲ?” ಎಂದು ಕೇಳಿದರು.
ಮಾರ್ಕನು 2 : 19 (IRVKN)
ಅದಕ್ಕೆ ಯೇಸು ಅವರಿಗೆ, [* ಯೋಹಾ 3: 29 ]“ಮದುವೆಯ ಜನರು ತಮ್ಮ ಸಂಗಡ ಮದಲಿಂಗನು ಇರುವಲ್ಲಿ ಉಪವಾಸಮಾಡುವುದುಂಟೇ? ಮದಲಿಂಗನು ತಮ್ಮ ಸಂಗಡ ಇರುವ ತನಕ ಅವರು ಉಪವಾಸ ಮಾಡಲಾರರು.
ಮಾರ್ಕನು 2 : 20 (IRVKN)
ಆದರೆ ಮದಲಿಂಗನನ್ನು ಅವರ ಬಳಿಯಿಂದ ತೆಗೆದುಕೊಂಡು ಹೋಗುವ ಕಾಲ ಬರುತ್ತದೆ. ಆ ಕಾಲದಲ್ಲಿ ಅವರು ಉಪವಾಸ ಮಾಡುವರು.
ಮಾರ್ಕನು 2 : 21 (IRVKN)
“ಯಾರೂ ಹೊಸ ಬಟ್ಟೆಯ ತುಂಡನ್ನು ಹಳೆಯ ವಸ್ತ್ರಕ್ಕೆ ತ್ಯಾಪೆ ಹಚ್ಚುವುದಿಲ್ಲ. ಹಚ್ಚಿದರೆ ಆ ಹೊಸ ತ್ಯಾಪೆಯು ಹಳೆಯ ವಸ್ತ್ರವನ್ನು ಹಿಂಜುವುದರಿಂದ ಹರಕು ಹೆಚ್ಚಾಗುತ್ತದೆ.
ಮಾರ್ಕನು 2 : 22 (IRVKN)
ಮತ್ತು ಹಳೆಯ ಮೇಕೆ ಅಥವಾ ಯಾವುದೆ ಪ್ರಾಣಿಗಳ ಚರ್ಮದಿಂದ ಮಾಡಿದ ಚೀಲ. ಬುದ್ದಲಿಗಳಲ್ಲಿ ಹೊಸ ದ್ರಾಕ್ಷಾರಸವನ್ನು ಯಾರೂ ಹಾಕಿಡುವುದಿಲ್ಲ, ಹಾಕಿದರೆ ಆ ದ್ರಾಕ್ಷಾರಸವು ಬುದ್ದಲಿಗಳನ್ನು ಒಡೆದು ದ್ರಾಕ್ಷಾರಸವು ಮತ್ತು ಬುದ್ದಲಿಗಳು ಎರಡೂ ನಾಶವಾಗುವವು. ಆದುದರಿಂದ ಹೊಸ ದ್ರಾಕ್ಷಾರಸವನ್ನು ಹೊಸ ಬುದ್ದಲಿಗಳಲ್ಲಿ ಹಾಕಿಡತಕ್ಕದ್ದು” ಎಂದು ಹೇಳಿದನು.
ಮಾರ್ಕನು 2 : 23 (IRVKN)
ಮನುಷ್ಯಕುಮಾರನು ಸಬ್ಬತ್ ದಿನದ ಒಡೆಯನು
ಮತ್ತಾ 12:1-14; ಲೂಕ 6:1-11
ಯೇಸು ಸಬ್ಬತ್ ದಿನದಲ್ಲಿ ಧಾನ್ಯ ಅಥವಾ ಕಾಳು ಪೂರ್ಣವಾಗಿ ಬೆಳೆದ, ಫಸಲು ಕೊಡುವ. ಪೈರಿನ ಹೊಲಗಳನ್ನು ಹಾದುಹೋಗುತ್ತಿರುವಾಗ, ಆತನ ಶಿಷ್ಯರು ತೆನೆಗಳನ್ನು ಮುರಿದು ತಿಂದರು.
ಮಾರ್ಕನು 2 : 24 (IRVKN)
ಫರಿಸಾಯರು ಆತನನ್ನು, “ನೋಡು, ಇವರು ಸಬ್ಬತ್ ದಿನದಲ್ಲಿ ಧರ್ಮಸಮ್ಮತವಲ್ಲದ್ದನ್ನು ಏಕೆ ಮಾಡುತ್ತಾರೆ?” ಎಂದು ಕೇಳಿದರು.
ಮಾರ್ಕನು 2 : 25 (IRVKN)
ಆಗ ಯೇಸು ಅವರಿಗೆ, “ದಾವೀದನು ತಾನೂ ತನ್ನ ಸಂಗಡ ಇದ್ದವರೂ ಆಹಾರವಿಲ್ಲದೆ ಹಸಿದಾಗ ಏನು ಮಾಡಿದನೆಂಬುದನ್ನು ನೀವು ಎಂದಾದರೂ ಓದಲಿಲ್ಲವೋ?
ಮಾರ್ಕನು 2 : 26 (IRVKN)
1 ಸಮು 21: 6. ]ಅವನು ಮಹಾಯಾಜಕನಾದ ಅಬಿಯಾತರನ ಕಾಲದಲ್ಲಿ ದೇವಮಂದಿರದೊಳಕ್ಕೆ ಹೋಗಿ ಯಾಜಕರು ಹೊರತು ಮತ್ತಾರೂ ತಿನ್ನಬಾರದ ನೈವೇದ್ಯದ ರೊಟ್ಟಿಗಳನ್ನು ತಾನು ತಿಂದು ತನ್ನ ಸಂಗಡ ಇದ್ದವರಿಗೂ ಕೊಟ್ಟನಲ್ಲಾ?” ಎಂದು ನುಡಿಯುತ್ತಾ,
ಮಾರ್ಕನು 2 : 27 (IRVKN)
[* ವಿಮೋ 23:12; ಧರ್ಮೋ 5: 14 ]“ಸಬ್ಬತ್ ದಿನವು ಮನುಷ್ಯರಿಗೋಸ್ಕರ ಮಾಡಲಾಯಿತೇ ಹೊರತು ಮನುಷ್ಯರನ್ನು ಸಬ್ಬತ್ ದಿನಕ್ಕಾಗಿ ಮಾಡಲಿಲ್ಲ.
ಮಾರ್ಕನು 2 : 28 (IRVKN)
ಹೀಗಿರಲಾಗಿ ಮನುಷ್ಯಕುಮಾರನು ಸಬ್ಬತ್ ದಿನಕ್ಕೂ ಒಡೆಯನಾಗಿದ್ದಾನೆ” ಎಂದು ಯೇಸು ಹೇಳಿದನು.

1 2 3 4 5 6 7 8 9 10 11 12 13 14 15 16 17 18 19 20 21 22 23 24 25 26 27 28