ಮಾರ್ಕನು 15 : 1 (IRVKN)
ಪಿಲಾತನ ಮುಂದೆ ಯೇಸುವಿನ ವಿಚಾರಣೆ
ಮತ್ತಾ 27:12-26; ಲೂಕ 23:1-25; ಯೋಹಾ 18:28-19:16
ಬೆಳಗಾದ ಕೂಡಲೆ ಮುಖ್ಯಯಾಜಕರೂ, ಹಿರಿಯರೂ, ಶಾಸ್ತ್ರಿಗಳೂ, ಹಿರೀಸಭೆಯ ಸದಸ್ಯರೆಲ್ಲರೂ ಒಟ್ಟುಗೂಡಿ ಆಲೋಚನೆ ಮಾಡಿಕೊಂಡು ಯೇಸುವನ್ನು ಕಟ್ಟಿಸಿ ಕರೆದುಕೊಂಡು ಹೋಗಿ ಪಿಲಾತನಿಗೆ ಒಪ್ಪಿಸಿದರು.
ಮಾರ್ಕನು 15 : 2 (IRVKN)
ಪಿಲಾತನು ಆತನನ್ನು, “ನೀನು ಯೆಹೂದ್ಯರ ಅರಸನೋ” ಎಂದು ಕೇಳಲು ಆತನು, “ನೀನೇ ಹೇಳಿದ್ದೀ” ಎಂದು ಉತ್ತರಕೊಟ್ಟನು.
ಮಾರ್ಕನು 15 : 3 (IRVKN)
ಮುಖ್ಯಯಾಜಕರು ಆತನ ಮೇಲೆ ತುಂಬಾ ದೂರು ಹೇಳುತ್ತಿದ್ದರು.
ಮಾರ್ಕನು 15 : 4 (IRVKN)
ಆಗ ಪಿಲಾತನು ಪುನಃ ಯೇಸುವನ್ನು, “ನೀನು ಏನೂ ಉತ್ತರಕೊಡುವುದಿಲ್ಲವೇ? ಇವರು ನಿನ್ನ ಮೇಲೆ ತುಂಬಾ ದೂರುಗಳನ್ನು ಹೇಳುತ್ತಿದ್ದಾರೆ ನೋಡು” ಎಂದು ಹೇಳಿದನು.
ಮಾರ್ಕನು 15 : 5 (IRVKN)
ಆದರೆ ಯೇಸು ಏನೂ ಉತ್ತರಕೊಡಲಿಲ್ಲ. ಅದನ್ನು ನೋಡಿ ಪಿಲಾತನು ಆಶ್ಚರ್ಯಪಟ್ಟನು.
ಮಾರ್ಕನು 15 : 6 (IRVKN)
ಪ್ರತಿ ಪಸ್ಕಹಬ್ಬದಲ್ಲಿ ಜನರು ಬೇಡಿದ ಒಬ್ಬ ಸೆರೆಯಾಳನ್ನು ಬಿಡುಗಡೆ ಮಾಡುವುದು ಪಿಲಾತನ ಅಧಿಕಾರಕ್ಕೆ ಸೇರಿದ ಪದ್ಧತಿಯಾಗಿತ್ತು.
ಮಾರ್ಕನು 15 : 7 (IRVKN)
ಅಲ್ಲಿ ಬರಬ್ಬನೆಂಬುವನೊಬ್ಬನಿದ್ದನು; ಇವನನ್ನು ದಂಗೆಯಲ್ಲಿ ಕೊಲೆ ಮಾಡಿದ ದಂಗೆಗಾರರೊಂದಿಗೆ ಬಂಧಿಸಿದ್ದರು.
ಮಾರ್ಕನು 15 : 8 (IRVKN)
ಜನರು ಪಿಲಾತನ ಬಳಿಗೆ ಹೋಗಿ, ನೀನು ನಮಗೆ ಮಾಡುತ್ತಾ ಬಂದ ಪದ್ಧತಿಯ ಪ್ರಕಾರ ಮಾಡು ಎಂದು ಕೇಳಿಕೊಳ್ಳುತ್ತಿದ್ದರು.
ಮಾರ್ಕನು 15 : 9 (IRVKN)
(9-10)ಮುಖ್ಯಯಾಜಕರು ಅಸೂಯೆಯಿಂದ ಯೇಸುವನ್ನು ಒಪ್ಪಿಸಿಕೊಟ್ಟಿದ್ದಾರೆಂದು ಪಿಲಾತನು ಗ್ರಹಿಸಿಕೊಂಡು, “ನಾನು ಯೆಹೂದ್ಯರ ಅರಸನನ್ನು ನಿಮಗೆ ಬಿಟ್ಟುಕೊಡಬೇಕನ್ನುತ್ತಿರೋ?” ಎಂದು ಅವರನ್ನು ಕೇಳಿದನು.
ಮಾರ್ಕನು 15 : 10 (IRVKN)
ಮಾರ್ಕನು 15 : 11 (IRVKN)
ಆದರೆ ಮುಖ್ಯಯಾಜಕರು, ಬರಬ್ಬನನ್ನೇ ಬಿಟ್ಟುಕೊಡಬೇಕೆಂದು ಬೇಡಿಕೊಳ್ಳಿರಿ ಎಂಬುದಾಗಿ ಜನರನ್ನು ಪ್ರೇರೇಪಿಸಿದರು.
ಮಾರ್ಕನು 15 : 12 (IRVKN)
ಅದಕ್ಕೆ ಪಿಲಾತನು ತಿರುಗಿ ಅವರನ್ನು, “ಹಾಗಾದರೆ ನೀವು ಹೇಳುವ ಯೆಹೂದ್ಯರ ಅರಸನನ್ನು ನಾನೇನು ಮಾಡಲಿ?” ಎಂದು ಕೇಳಿದನು.
ಮಾರ್ಕನು 15 : 13 (IRVKN)
ಅವರು, “ಅವನನ್ನು ಶಿಲುಬೆಗೆ ಹಾಕಿಸು” ಎಂದು ಮತ್ತಷ್ಟು ಕೂಗಿಕೊಂಡರು.
ಮಾರ್ಕನು 15 : 14 (IRVKN)
ಪಿಲಾತನು, “ಏಕೆ? ಇವನು ಏನು ಅಪರಾಧ ಮಾಡಿದ್ದಾನೆ?” ಅಂದನು. ಆದರೆ ಅವರು, “ಅವನನ್ನು ಶಿಲುಬೆಗೆ ಹಾಕಿಸು” ಎಂದು ಇನ್ನೂ ಹೆಚ್ಚಾಗಿ ಆರ್ಭಟಿಸಿ ಕೂಗಿಕೊಂಡರು.
ಮಾರ್ಕನು 15 : 15 (IRVKN)
ಅದಕ್ಕೆ ಪಿಲಾತನು ಜನಸಮೂಹವನ್ನು ಮೆಚ್ಚಿಸಬೇಕೆಂದು ಬರಬ್ಬನನ್ನು ಅವರಿಗೆ ಬಿಟ್ಟುಕೊಟ್ಟು ಯೇಸುವನ್ನು ಕೊರಡೆಗಳಿಂದ ಹೊಡಿಸಿ, ಶಿಲುಬೆಗೆ ಹಾಕುವುದಕ್ಕೆ ಒಪ್ಪಿಸಿದನು.
ಮಾರ್ಕನು 15 : 16 (IRVKN)
ಯೇಸುವನ್ನು ಪರಿಹಾಸ್ಯಮಾಡಿದ್ದು
ಮತ್ತಾ 27:27-56; ಲೂಕ 23:26-49; ಯೋಹಾ 19:17-30
ಸಿಪಾಯಿಗಳು ಆತನನ್ನು ಅಧಿಪತಿಯ ಅರಮನೆಯ ಅಂಗಳದೊಳಗೆ ಕರೆದುಕೊಂಡು ಹೋಗಿ, ತಮ್ಮ ಪಡೆಯನ್ನೆಲ್ಲವನ್ನೂ ಒಟ್ಟಿಗೆ ಸೇರಿಸಿಕೊಂಡರು.
ಮಾರ್ಕನು 15 : 17 (IRVKN)
ಯೇಸುವಿಗೆ ನಸುಗೆಂಪು ಮೇಲಂಗಿಯನ್ನು ಹೊದಿಸಿ ಮುಳ್ಳಿನ ಕಿರೀಟವನ್ನು ಹೆಣೆದು ಆತನ ತಲೆಯ ಮೇಲೆ ಇಟ್ಟರು.
ಮಾರ್ಕನು 15 : 18 (IRVKN)
ಅನಂತರ, “ಯೆಹೂದ್ಯರ ಅರಸನೇ, ನಿನಗೆ ನಮಸ್ಕಾರ” ಎಂದು ಆತನಿಗೆ ಅಪಹಾಸ್ಯಮಾಡಿ ವಂದಿಸಿದರು.
ಮಾರ್ಕನು 15 : 19 (IRVKN)
ಬೆತ್ತದಿಂದ ಆತನ ತಲೆಯ ಮೇಲೆ ಹೊಡೆದು, ಆತನ ಮೇಲೆ ಉಗುಳಿ, ಆತನ ಮುಂದೆ ಮೊಣಕಾಲೂರಿ ನಮಸ್ಕರಿಸಿದರು.
ಮಾರ್ಕನು 15 : 20 (IRVKN)
ಹೀಗೆ ಆತನನ್ನು ಪರಿಹಾಸ್ಯ ಮಾಡಿದ ಮೇಲೆ ಆ ನಸುಗೆಂಪು ಮೇಲಂಗಿಯನ್ನು ತೆಗೆದು ಆತನ ಬಟ್ಟೆಗಳನ್ನು ಆತನಿಗೆ ತೊಡಿಸಿ ಆತನನ್ನು ಶಿಲುಬೆಗೆ ಹಾಕುವುದಕ್ಕೆ ತೆಗೆದುಕೊಂಡು ಹೋದರು.
ಮಾರ್ಕನು 15 : 21 (IRVKN)
ಯೇಸುವನ್ನು ಶಿಲುಬೆಗೇರಿಸಿದ್ದು ಆಗ ಹೊಲದಿಂದ ಹೊರಟು ಆ ಮಾರ್ಗವಾಗಿ ಬರುತ್ತಿದ್ದ ಒಬ್ಬನನ್ನು ಆತನ ಶಿಲುಬೆಯನ್ನು ಹೊರುವುದಕ್ಕೆ ಒತ್ತಾಯಪಡಿಸಿದರು. ಅವನು ಯಾರೆಂದರೆ, ಅಲೆಕ್ಸಾಂದ್ರ ಹಾಗೂ ರೂಫ ಎಂಬುವರ ತಂದೆಯಾದ ಕುರೇನೆ ಪಟ್ಟಣದ ಸೀಮೋನನು.
ಮಾರ್ಕನು 15 : 22 (IRVKN)
ಬಳಿಕ ಆತನನ್ನು ‘ಗೊಲ್ಗೊಥಾ’ ಎಂಬ ಸ್ಥಳಕ್ಕೆ ಕರೆದುಕೊಂಡು ಬಂದರು. ‘ಗೊಲ್ಗೊಥಾ’ ಅಂದರೆ “ತಲೆಬುರುಡೆಗಳು ಇರುವ ಸ್ಥಳ” ಎಂದರ್ಥ.
ಮಾರ್ಕನು 15 : 23 (IRVKN)
ಅಲ್ಲಿ ಆತನಿಗೆ ರಕ್ತಬೋಳ* ದೇಹದ ನೋವನ್ನು ಹೊಗಲಾಡಿಸುವ ಒಂದು ದ್ರವ್ಯ ಬೆರಸಿದ ದ್ರಾಕ್ಷಾರಸವನ್ನು ಕೊಟ್ಟರು; ಆದರೆ ಆತನು ಅದನ್ನು ಕುಡಿಯಲಿಲ್ಲ.
ಮಾರ್ಕನು 15 : 24 (IRVKN)
ಅವರು ಆತನನ್ನು ಶಿಲುಬೆಗೆ ಹಾಕಿ ಆತನ ಬಟ್ಟೆಗಳಲ್ಲಿ ಯಾವುದು ಯಾರಿಗೆ ಸಿಗಬೇಕೆಂದು ಚೀಟು ಹಾಕಿ ಪಾಲುಮಾಡಿಕೊಂಡರು.
ಮಾರ್ಕನು 15 : 25 (IRVKN)
ಆತನನ್ನು ಶಿಲುಬೆಗೆ ಹಾಕುವಾಗ ಮೂಲ: ಮೂರು ತಾಸಾಗಿತ್ತು. ಬೆಳಿಗ್ಗೆ ಒಂಭತ್ತು ಗಂಟೆಯಾಗಿತ್ತು.
ಮಾರ್ಕನು 15 : 26 (IRVKN)
“ಈತನು ಯೆಹೂದ್ಯರ ಅರಸನು” ಎಂದು ಆತನ ಮೇಲೆ ಹೊರಿಸಿದ್ದ ದೋಷಾರೋಪಣೆಯನ್ನು, ಶಿಲುಬೆಯ ಮೇಲೆ ಬರೆಯಲಾಗಿತ್ತು.
ಮಾರ್ಕನು 15 : 27 (IRVKN)
ಅದಲ್ಲದೆ ಇಬ್ಬರು ಕಳ್ಳರನ್ನು ತಂದು ಒಬ್ಬನನ್ನು ಆತನ ಬಲಗಡೆಯಲ್ಲಿ ಮತ್ತೊಬ್ಬನನ್ನು ಎಡಗಡೆಯಲ್ಲಿ ಆತನ ಸಂಗಡ ಶಿಲುಬೆಗೆ ಹಾಕಿದರು.
ಮಾರ್ಕನು 15 : 28 (IRVKN)
(28-29) 28 ನೆಯ ವಚನವು ಕೆಲವು ಮೂಲಪ್ರತಿಗಳಲ್ಲಿ ಇಲ್ಲ. ಯೆಶಾ 53:12; ಲೂಕ 22:37 ಆತನು ಅಧರ್ಮಿಗಳ ಸಂಗಡ ಎಣಿಸಲ್ಪಟ್ಟನು ಎಂಬ ಶಾಸ್ತ್ರವಚನವು ಹೀಗೆ ನೆರವೇರಿತು. ಅಲ್ಲಿ ಹಾದುಹೋಗುವವರು ತಲೆ ಆಲ್ಲಾಡಿಸಿ “ಆಹಾ, ದೇವಾಲಯವನ್ನು ಕೆಡವಿ ಮೂರು ದಿನದಲ್ಲಿ ಪುನಃ ಕಟ್ಟುವವನೇ,
ಮಾರ್ಕನು 15 : 29 (IRVKN)
ಮಾರ್ಕನು 15 : 30 (IRVKN)
ಶಿಲುಬೆಯಿಂದ ಇಳಿದು ನಿನ್ನನ್ನು ರಕ್ಷಿಸಿಕೋ” ಎಂದು ಆತನನ್ನು ಅಪಹಾಸ್ಯ ಮಾಡಿದರು.
ಮಾರ್ಕನು 15 : 31 (IRVKN)
ಅದೇ ಮೇರೆಗೆ ಮುಖ್ಯಯಾಜಕರೂ ಶಾಸ್ತ್ರಿಗಳೂ, “ಅವನು ಮತ್ತೊಬ್ಬರನ್ನು ರಕ್ಷಿಸಿದನು; ತನ್ನನ್ನು ತಾನೇ ರಕ್ಷಿಸಿಕೊಳ್ಳಲಾರನು.
ಮಾರ್ಕನು 15 : 32 (IRVKN)
ಇಸ್ರಾಯೇಲರ ಅರಸನಾದ ಈ ಕ್ರಿಸ್ತನು ಈಗ ಶಿಲುಬೆಯಿಂದ ಇಳಿದು ಬರಲಿ; ಇಳಿದು ಬಂದರೆ ನಾವು ನೋಡಿ ನಂಬುತ್ತೇವೆ” ಎಂದು ತಮ್ಮತಮ್ಮೊಳಗೆ ಅಣಕಿಸುತ್ತಾ ಮಾತನಾಡುತ್ತಿದ್ದರು. ಆತನೊಂದಿಗೆ ಶಿಲುಬೆಗೆ ಹಾಕಲ್ಪಟ್ಟವರು ಸಹ ಆತನನ್ನು ನಿಂದಿಸುತ್ತಿದ್ದರು.
ಮಾರ್ಕನು 15 : 33 (IRVKN)
ಯೇಸುವಿನ ಮರಣ § ಮೂಲ: ಆರು ಗಂಟೆ. ಹನ್ನೆರಡು ಗಂಟೆಯಿಂದ * ಮೂಲ: ಒಂಭತ್ತು ತಾಸಿನ ತನಕ. ಮೂರು ಗಂಟೆಯ ತನಕ ಆ ದೇಶದ ಮೇಲೆಲ್ಲಾ ಕತ್ತಲೆ ಕವಿಯಿತು.
ಮಾರ್ಕನು 15 : 34 (IRVKN)
ಮೂರು ಗಂಟೆಗೆ ಯೇಸು, ಕೀರ್ತ 22:1: “ಎಲೋಹಿ, ಎಲೋಹಿ, ಲಮಾಸಬಕ್ತಾನೀ?” ಅಂದರೆ “ನನ್ನ ದೇವರೇ, ನನ್ನ ದೇವರೇ, ಯಾಕೆ ನನ್ನನ್ನು ಕೈಬಿಟ್ಟಿದ್ದೀ?” ಎಂದು ಮಹಾಧ್ವನಿಯಿಂದ ಕೂಗಿದನು.
ಮಾರ್ಕನು 15 : 35 (IRVKN)
ಹತ್ತಿರ ನಿಂತಿದ್ದವರಲ್ಲಿ ಕೆಲವರು ಅದನ್ನು ಕೇಳಿ, “ನೋಡಿರಿ, ಆತನು ಎಲೀಯನನ್ನು ಕರೆಯುತ್ತಾನೆ” ಅಂದರು.
ಮಾರ್ಕನು 15 : 36 (IRVKN)
ಆಗ ಒಬ್ಬನು ಓಡಿಹೋಗಿ ಸ್ಪಂಜಿನಿಂದ ಹುಳಿ ದ್ರಾಕ್ಷಾರಸವನ್ನು ತುಂಬಿ ಕೋಲಿನ ತುದಿಗೆ ಸಿಕ್ಕಿಸಿ, “ಇವನನ್ನು ಶಿಲುಬೆಯಿಂದ ಬಿಡುಗಡೆ ಮಾಡಿ ಇಳಿಸುವುದಕ್ಕೆ ಎಲೀಯನು ಬರುವನೋ, ಏನೋ ಕಾದು ನೋಡೋಣ” ಎಂದು ಹೇಳಿ ಅದನ್ನು ಕುಡಿಯುವುದಕ್ಕೆ ಆತನಿಗೆ ಕೊಟ್ಟನು.
ಮಾರ್ಕನು 15 : 37 (IRVKN)
ಆದರೆ ಯೇಸು ಮಹಾಧ್ವನಿಯಿಂದ ಕೂಗಿ ಪ್ರಾಣ ಬಿಟ್ಟನು.
ಮಾರ್ಕನು 15 : 38 (IRVKN)
ಆಗ ದೇವಾಲಯದ ತೆರೆಯು ಮೇಲಿಂದ ಕೆಳಗಿನವರೆಗೂ ಹರಿದು ಎರಡು ಭಾಗವಾಯಿತು.
ಮಾರ್ಕನು 15 : 39 (IRVKN)
ಯೇಸು ಹೀಗೆ ಪ್ರಾಣಬಿಟ್ಟದ್ದನ್ನು ಎದುರಿಗೆ ನಿಂತು ನೋಡುತ್ತಿದ್ದ ಶತಾಧಿಪತಿಯು, “ನಿಜವಾಗಿ ಈ ಮನುಷ್ಯನು ದಾನಿ. 3:25: ದೇವಕುಮಾರನೇ” ಅಂದನು.
ಮಾರ್ಕನು 15 : 40 (IRVKN)
(40-41)ಇದಲ್ಲದೆ ಅಲ್ಲಿ ಸ್ತ್ರೀಯರು ಸಹ ದೂರದಿಂದ ನೋಡುತ್ತಿದ್ದರು. ಅವರಲ್ಲಿ, ಆತನು ಗಲಿಲಾಯದಲ್ಲಿದ್ದಾಗ ಆತನನ್ನು ಹಿಂಬಾಲಿಸಿ ಸೇವೆಮಾಡುತ್ತಿದ್ದವರಾದ § ಲೂಕ 8:2, 3: ಮಗ್ದಲದ ಮರಿಯಳು, ಚಿಕ್ಕ ಯಾಕೋಬನ ಮತ್ತು ಯೋಸೆಯನ ತಾಯಿಯಾದ ಮರಿಯಳು, * ಮಾರ್ಕ 16:1: ಸಲೋಮೆ ಎಂಬುವರು ಹಾಗೂ ಆತನ ಸಂಗಡ ಯೆರೂಸಲೇಮಿಗೆ ಬಂದಿದ್ದ ಇನ್ನೂ ಅನೇಕ ಸ್ತ್ರೀಯರು ಇದ್ದರು.
ಮಾರ್ಕನು 15 : 41 (IRVKN)
ಯೇಸುವಿನ ದೇಹವನ್ನು ಸಮಾಧಿಯಲ್ಲಿಟ್ಟದ್ದು
ಮತ್ತಾ 27:57-61; ಲೂಕ 23:50-56; ಯೋಹಾ 19:38-42
ಮಾರ್ಕನು 15 : 42 (IRVKN)
ಆಗಲೇ ಸಂಜೆಯಾಗಿತ್ತು; ಮತ್ತು ಆ ದಿನವು ‘ಸಿದ್ಧತೆಯ’ ದಿನ, ಅಂದರೆ ಸಬ್ಬತ್ ದಿನದ ಹಿಂದಿನ ದಿನವಾಗಿತ್ತು.
ಮಾರ್ಕನು 15 : 43 (IRVKN)
ಹೀಗಿರಲಾಗಿ ಅರಿಮಥಾಯದ ಯೋಸೇಫನೆಂಬುವನು ಅಲ್ಲಿಗೆ ಬಂದನು. ಅವನು ಯೆಹೂದ್ಯರ ಹಿರೀಸಭೆಯ ಗೌರವಸ್ಥನಾದ ಸದ್ಯಸನೂ, ದೇವರ ರಾಜ್ಯವನ್ನು ಎದುರುನೋಡುತ್ತಿದ್ದವನು ಆಗಿದ್ದನು. ಅವನು ಧೈರ್ಯದಿಂದ ಪಿಲಾತನ ಬಳಿಗೆ ಹೋಗಿ ಯೇಸುವಿನ ದೇಹವನ್ನು ತನಗೆ ಕೊಡಿಸಬೇಕೆಂದು ಬೇಡಿಕೊಂಡನು.
ಮಾರ್ಕನು 15 : 44 (IRVKN)
ಪಿಲಾತನು, ಅವನು ಇಷ್ಟು ಬೇಗ ಸತ್ತು ಹೋದನೋ ಎಂದು ಹೇಳಿ ಆಶ್ಚರ್ಯಪಟ್ಟು ಶತಾಧಿಪತಿಯನ್ನು ಕರೆಸಿ, ಅವನು ಆಗಲೇ ಸತ್ತನೋ ಎಂದು ಅವನನ್ನು ಕೇಳಿದನು.
ಮಾರ್ಕನು 15 : 45 (IRVKN)
ಆತನು ಸತ್ತದ್ದನ್ನು ಶತಾಧಿಪತಿಯಿಂದ ತಿಳಿದುಕೊಂಡು ಅವನ ಪಾರ್ಥಿವ ಶರೀರವನ್ನು ಯೋಸೇಫನಿಗೆ ಕೊಡಿಸಿದನು.
ಮಾರ್ಕನು 15 : 46 (IRVKN)
ಯೋಸೇಫನು ನಾರುಮಡಿಯನ್ನು ಕೊಂಡುತಂದು ಯೇಸುವನ್ನು ಶಿಲುಬೆಯಿಂದ ಇಳಿಸಿ ನಾರುಮಡಿಯಲ್ಲಿ ಸುತ್ತಿ ಬಂಡೆಯಲ್ಲಿ ಕೊರೆದಿದ್ದ ಸಮಾಧಿಯಲ್ಲಿಟ್ಟು ಸಮಾಧಿಯ ಬಾಗಿಲಿಗೆ ಕಲ್ಲನ್ನು ಉರುಳಿಸಿದನು.
ಮಾರ್ಕನು 15 : 47 (IRVKN)
ಮಗ್ದಲದ ಮರಿಯಳೂ ಮತ್ತು ಯೋಸೆಯನ ತಾಯಿ ಮರಿಯಳೂ ಯೇಸುವನ್ನಿಟ್ಟಿದ್ದ ಸ್ಥಳವನ್ನು ನೋಡಿದರು.

1 2 3 4 5 6 7 8 9 10 11 12 13 14 15 16 17 18 19 20 21 22 23 24 25 26 27 28 29 30 31 32 33 34 35 36 37 38 39 40 41 42 43 44 45 46 47