ಮಾರ್ಕನು 13 : 1 (IRVKN)
{ಯುಗದ ಸಮಾಪ್ತಿಯ ಗುರುತುಗಳು} (ಮತ್ತಾ 24; ಲೂಕ 21:5-36) [PS] ಯೇಸು ದೇವಾಲಯದಿಂದ ಹೊರಗೆ ಹೋಗುತ್ತಿದ್ದಾಗ ಆತನ ಶಿಷ್ಯರಲ್ಲಿ ಒಬ್ಬನು ಆತನಿಗೆ, “ಗುರುವೇ, ನೋಡು, ಎಂಥಾ [* ಭಾರಿ, ಅಥವಾ ದೊಡ್ಡ. ] ಅದ್ಭುತವಾದ ಕಲ್ಲುಗಳು! ಎಂಥಾ ಮಹಾಕಟ್ಟಡಗಳು!” ಎಂದು ಹೇಳಿದನು.
ಮಾರ್ಕನು 13 : 2 (IRVKN)
ಯೇಸು, “ಈ ದೊಡ್ಡ ಕಟ್ಟಡಗಳನ್ನು ನೋಡುತ್ತೀಯಲ್ಲವೇ? ಇಲ್ಲಿ ಕಲ್ಲಿನ ಮೇಲೆ ಕಲ್ಲು ಉಳಿಯುವುದಿಲ್ಲ; ಎಲ್ಲವೂ ಕೆಡವಲ್ಪಡುವುದು” ಎಂದನು. [PE][PS]
ಮಾರ್ಕನು 13 : 3 (IRVKN)
ಬಳಿಕ ಆತನು [† ಆಲಿವ್ ಮರಗಳ ಗುಡ್ಡ. ] ಎಣ್ಣೆ ಮರಗಳ ಗುಡ್ಡದ ಮೇಲೆ ದೇವಾಲಯಕ್ಕೆ ಎದುರಾಗಿ ಕುಳಿತುಕೊಂಡಿದ್ದಾಗ ಪೇತ್ರ, ಯಾಕೋಬ, ಯೋಹಾನ ಹಾಗೂ ಅಂದ್ರೆಯ,
ಮಾರ್ಕನು 13 : 4 (IRVKN)
ಇವರು ಪ್ರತ್ಯೇಕವಾಗಿ ಆತನಿಗೆ, “ಇವೆಲ್ಲಾ ಯಾವಾಗ ಆಗುವವು? ಇವೆಲ್ಲವು ನೆರವೇರುವುದಕ್ಕೆ ಸೂಚನೆ ಏನು? ನಮಗೆ ಹೇಳು” ಎಂದು ಆತನನ್ನು ಕೇಳಿದರು.
ಮಾರ್ಕನು 13 : 5 (IRVKN)
ಯೇಸು ಅವರಿಗೆ ಹೇಳಿದ್ದೇನಂದರೆ, “ಯಾರೂ ನಿಮ್ಮನ್ನು ಮೋಸಗೊಳಿಸದಂತೆ ಎಚ್ಚರಿಕೆಯಾಗಿರಿ.
ಮಾರ್ಕನು 13 : 6 (IRVKN)
ಅನೇಕರು ಬಂದು ನನ್ನ ಹೆಸರನ್ನು ಹೇಳಿಕೊಂಡು, [‡ ನಾನೇ ಆತನಾಗಿದ್ದೇನೆ] ‘ನಾನೇ ಕ್ರಿಸ್ತನು’ ಎಂದು ಹೇಳಿ ಎಷ್ಟೋ ಜನರನ್ನು ಮೋಸಗೊಳಿಸುವರು.
ಮಾರ್ಕನು 13 : 7 (IRVKN)
ಇದಲ್ಲದೆ ಯುದ್ಧಗಳಾಗುವುದನ್ನೂ, ಯುದ್ಧವಾಗುವ ಹಾಗಿದೆ ಎಂಬ ಸುದ್ದಿಗಳನ್ನೂ ನೀವು ಕೇಳುವಾಗ ಕಳವಳಪಡಬೇಡಿರಿ. ಹಾಗಾಗುವುದು ಅಗತ್ಯ. ಆದರೂ ಇದು ಇನ್ನೂ ಅಂತ್ಯಕಾಲವಲ್ಲ.
ಮಾರ್ಕನು 13 : 8 (IRVKN)
ಜನಾಂಗಕ್ಕೆ ವಿರೋಧವಾಗಿ ಜನಾಂಗವೂ, ರಾಜ್ಯಕ್ಕೆ ವಿರೋಧವಾಗಿ ರಾಜ್ಯವೂ ಏಳುವವು. ಮತ್ತು ನಾನಾ ಕಡೆಗಳಲ್ಲಿ ಭೂಕಂಪಗಳೂ, ಬರಗಾಲಗಳೂ, ಉಂಟಾಗುವವು. ಆದರೆ ಇವೆಲ್ಲಾ ಪ್ರಸವ ವೇದನೆಯ ಪ್ರಾರಂಭ ಮಾತ್ರ. [PE][PS]
ಮಾರ್ಕನು 13 : 9 (IRVKN)
“ಆದರೆ ನೀವು ನಿಮ್ಮ ವಿಷಯದಲ್ಲಿ ಎಚ್ಚರಿಕೆಯಾಗಿರಿ. ಜನರು ನಿಮ್ಮನ್ನು ನ್ಯಾಯವಿಚಾರಣೆಯ ಸಭೆಗಳಿಗೆ ಎಳೆದುಕೊಂಡು ಹೋಗುವರು. ಸಭಾಮಂದಿರಗಳಲ್ಲಿ ನಿಮ್ಮನ್ನು ಹೊಡೆಯುವರು, ನನ್ನ ನಿಮಿತ್ತವಾಗಿ ನಿಮ್ಮನ್ನು ಅಧಿಕಾರಿಗಳ ಮತ್ತು ಅರಸುಗಳ ಮುಂದೆ ಅವರಿಗೆ ಸಾಕ್ಷಿಗಳಾಗಿ ನಿಲ್ಲಿಸುವರು,
ಮಾರ್ಕನು 13 : 10 (IRVKN)
ಆದರೆ ಮೊದಲು ಎಲ್ಲಾ ಜನಾಂಗಗಳಿಗೆ ಸುವಾರ್ತೆಯು ಸಾರಲ್ಪಡಬೇಕು. [PE][PS]
ಮಾರ್ಕನು 13 : 11 (IRVKN)
“ನಿಮ್ಮನ್ನು ಹಿಡಿದುಕೊಂಡು ಹೋಗಿ ಒಪ್ಪಿಸುವಾಗ ಏನು ಹೇಳಬೇಕು ಎಂದು ಮುಂಚಿತವಾಗಿಯೇ ಚಿಂತಿಸಬೇಡಿರಿ, ನೀವು ಏನು ಹೇಳಬೇಕೋ ಅದು ನಿಮಗೆ ಆ ಗಳಿಗೆಯಲ್ಲಿ ಕೊಡಲ್ಪಡುವುದು, ಏಕೆಂದರೆ ಮಾತನಾಡುವವರು ನೀವಲ್ಲ, ಆದರೆ ಪವಿತ್ರಾತ್ಮನೇ ನಿಮ್ಮ ಮೂಲಕವಾಗಿ ಮಾತನಾಡುವನು,
ಮಾರ್ಕನು 13 : 12 (IRVKN)
ಇದಲ್ಲದೆ ಸಹೋದರನು ಸಹೋದರನನ್ನೂ, ತಂದೆಯು ಮಗನನ್ನೂ ಮರಣಕ್ಕೆ ಒಪ್ಪಿಸುವರು. ಮಕ್ಕಳು ಹೆತ್ತವರಿಗೆ ವಿರೋಧವಾಗಿ ಎದ್ದು ಅವರನ್ನು ಕೊಲ್ಲಿಸುವರು,
ಮಾರ್ಕನು 13 : 13 (IRVKN)
ಮತ್ತು ನನ್ನ ಹೆಸರಿನ ನಿಮಿತ್ತವಾಗಿ ಎಲ್ಲರೂ ನಿಮ್ಮನ್ನು ದ್ವೇಷಿಸುವರು, ಆದರೆ ಕೊನೆಯವರೆಗೂ ತಾಳುವವನೇ ರಕ್ಷಣೆ ಹೊಂದುವನು.” [PE][PS]
ಮಾರ್ಕನು 13 : 14 (IRVKN)
“ಇದಲ್ಲದೆ [§ ದಾನಿ. 9:27; 12:11:] ವಿನಾಶಕಾರಕ ಅಸಹ್ಯ ಮೂರ್ತಿಯು ನಿಲ್ಲಬಾರದ ಸ್ಥಳದಲ್ಲಿ ನಿಂತಿರುವುದನ್ನು ನೀವು ನೋಡುವಾಗ (ಇದನ್ನು ಓದುವವನು ತಿಳಿದುಕೊಳ್ಳಲಿ). ಯೂದಾಯದಲ್ಲಿ ಇರುವವರು ಬೆಟ್ಟಗಳಿಗೆ ಓಡಿಹೋಗಲಿ.
ಮಾರ್ಕನು 13 : 15 (IRVKN)
ಮಾಳಿಗೆಯ ಮೇಲಿದ್ದವನು ಕೆಳಗೆ ಇಳಿದು ಮನೆಯೊಳಕ್ಕೆ ಹೋಗದಿರಲಿ; ಮನೆಯೊಳಗಿಂದ ಏನನ್ನೂ ತೆಗೆದುಕೊಳ್ಳದಿರಲಿ.
ಮಾರ್ಕನು 13 : 16 (IRVKN)
ಹೊಲದಲ್ಲಿರುವವನು ತನ್ನ ಹೊದಿಕೆಯನ್ನು ತೆಗೆದುಕೊಳ್ಳುವುದಕ್ಕೆ ಹಿಂದಿರುಗಿ ಹೋಗದಿರಲಿ. [PE][PS]
ಮಾರ್ಕನು 13 : 17 (IRVKN)
“ಆದರೆ ಆ ದಿನಗಳಲ್ಲಿ ಗರ್ಭಿಣಿಯರಿಗೂ, ಹಾಲು ಕುಡಿಸುವ ತಾಯಂದಿರಿಗೂ ಆಗುವ ಕಷ್ಟ ಎಷ್ಟೆಂದು ಹೇಳಲಿ!
ಮಾರ್ಕನು 13 : 18 (IRVKN)
ಆ ದಿನಗಳು [* ದಾನಿ. 12:1:] ಸಂಕಟದ ದಿನಗಳಾಗಿರುವುದರಿಂದ ಇದೆಲ್ಲಾ ಚಳಿಗಾಲದಲ್ಲಿ ಆಗಬಾರದೆಂದು ಪ್ರಾರ್ಥನೆ ಮಾಡಿರಿ.
ಮಾರ್ಕನು 13 : 19 (IRVKN)
ಅಂಥ ಸಂಕಟವು ದೇವರು ಜಗತ್ತನ್ನು ಸೃಷ್ಟಿಸಿದ ದಿನದಿಂದ ಮೊದಲುಗೊಂಡು ಈ ದಿನದವರೆಗೂ ಆಗಲಿಲ್ಲ; ಇನ್ನು ಮುಂದೆ ಆಗುವುದೂ ಇಲ್ಲ.
ಮಾರ್ಕನು 13 : 20 (IRVKN)
ಕರ್ತನು ಆ ದಿನಗಳನ್ನು ಕಡಿಮೆ ಮಾಡದಿದ್ದರೆ ಒಂದು ನರಪ್ರಾಣಿಯಾದರೂ ಉಳಿಯುವುದಿಲ್ಲ. ಆದರೆ ತಾನು ಆರಿಸಿಕೊಂಡವರಿಗಾಗಿ ಆ ದಿನಗಳನ್ನು ಕಡಿಮೆ ಮಾಡಿದ್ದಾನೆ. [PE][PS]
ಮಾರ್ಕನು 13 : 21 (IRVKN)
“ಆಗ ಯಾರಾದರೂ ನಿಮಗೆ, ಇಗೋ, ಕ್ರಿಸ್ತನು ಇಲ್ಲಿದ್ದಾನೆ! ಅಗೋ, ಆತನು ಅಲ್ಲಿದ್ದಾನೆ! ಎಂದು ಹೇಳಿದರೆ ನಂಬಬೇಡಿರಿ.
ಮಾರ್ಕನು 13 : 22 (IRVKN)
ಏಕೆಂದರೆ ಸುಳ್ಳು ಕ್ರಿಸ್ತರೂ, ಸುಳ್ಳುಪ್ರವಾದಿಗಳೂ ಎದ್ದು ಸಾಧ್ಯವಾದರೆ ದೇವರು ಆರಿಸಿಕೊಂಡವರನ್ನು ಮೋಸಗೊಳಿಸುವುದಕ್ಕೋಸ್ಕರ ಸೂಚಕಕಾರ್ಯಗಳನ್ನೂ ಅದ್ಭುತಕಾರ್ಯಗಳನ್ನೂ ಮಾಡಿ ತೋರಿಸುವರು.
ಮಾರ್ಕನು 13 : 23 (IRVKN)
ನೀವಂತೂ ಜಾಗರೂಕರಾಗಿರಿ. ನಾನು ನಿಮಗೆ ಎಲ್ಲವುಗಳನ್ನು ಮುಂದಾಗಿಯೇ” ಹೇಳಿದ್ದೇನೆ. [PE][PS]
ಮಾರ್ಕನು 13 : 24 (IRVKN)
ಇದಲ್ಲದೆ ಆ ದಿನಗಳ ಸಂಕಟವು ತೀರಿದ ನಂತರ; [QBR] [† ಯೆಶಾ 13:10; 34:4:] “ ‘ಸೂರ್ಯನು ಕತ್ತಲಾಗಿ ಹೋಗುವನು. [QBR]
ಮಾರ್ಕನು 13 : 25 (IRVKN)
ಚಂದ್ರನು ತನ್ನ ಬೆಳಕು ಕೊಡದೆ ಇರುವನು. [QBR] ನಕ್ಷತ್ರಗಳು ಆಕಾಶದಿಂದ ಬೀಳುವವು. [QBR] ಮತ್ತು ಪರಲೋಕದಲ್ಲಿ ಶಕ್ತಿಗಳು ಕದಲುವವು.’
ಮಾರ್ಕನು 13 : 26 (IRVKN)
ಆಗ [‡ ದಾನಿ. 7:13, 14:] ಮನುಷ್ಯಕುಮಾರನು ಮಹಾಬಲದಿಂದಲೂ ಮಹಿಮೆಯಿಂದಲೂ ಮೇಘಗಳಲ್ಲಿ ಬರುವುದನ್ನು ಅವರು ನೋಡುವರು.
ಮಾರ್ಕನು 13 : 27 (IRVKN)
ಮತ್ತು ಆತನು ತನ್ನ ದೂತರನ್ನು ಕಳುಹಿಸಿ ಭೂಮಿಯ ಕಟ್ಟಕಡೆಯಿಂದ ಆಕಾಶದ ಕಟ್ಟಕಡೆಯವರೆಗೆ ತಾನು ಆರಿಸಿಕೊಂಡವರನ್ನು ನಾಲ್ಕುದಿಕ್ಕುಗಳಿಂದ ಒಟ್ಟುಗೂಡಿಸುವನು.” [PS]
ಮಾರ್ಕನು 13 : 28 (IRVKN)
{ಅಂಜೂರ ಮರದ ಪಾಠ} [PS] “ಅಂಜೂರ ಮರವನ್ನು ನೋಡಿ ಒಂದು ಪಾಠವನ್ನು ಕಲಿತುಕೊಳ್ಳಿ. ಅದರ ಕೊಂಬೆಗಳಲ್ಲಿ ಇನ್ನೂ ಎಳೆದಾಗಿ ಎಲೆಗಳು ಚಿಗುರುವಾಗ ಬೇಸಿಗೆಯು ಸಮೀಪಿಸಿತು ಎಂದು ಅರಿತುಕೊಳ್ಳುತ್ತಿರಲ್ಲಾ.
ಮಾರ್ಕನು 13 : 29 (IRVKN)
ಹಾಗೆಯೇ ಇವೆಲ್ಲವೂ ಆಗುವುದನ್ನು ನೀವು ನೋಡುವಾಗ ಬಾಗಿಲ ಹತ್ತಿರದಲ್ಲಿಯೇ ಇದ್ದೆ ಎಂದು ತಿಳಿದುಕೊಳ್ಳಿರಿ.
ಮಾರ್ಕನು 13 : 30 (IRVKN)
ಇದೆಲ್ಲವೂ ನೆರವೇರುವವರೆಗೂ ಈ ಸಂತತಿಯು ಅಳಿದು ಹೋಗುವುದೇ ಇಲ್ಲವೆಂದು ನಾನು ನಿಮಗೆ ಸತ್ಯವಾಗಿ ಹೇಳುತ್ತೇನೆ.
ಮಾರ್ಕನು 13 : 31 (IRVKN)
ಆಕಾಶವೂ, ಭೂಮಿಯೂ ಅಳಿದು ಹೋಗುವವು; ಆದರೆ ನನ್ನ ವಾಕ್ಯವು ಅಳಿದು ಹೋಗುವುದೇ ಇಲ್ಲ.” [PS]
ಮಾರ್ಕನು 13 : 32 (IRVKN)
{ಆ ದಿನವೂ ಗಳಿಗೆಯೂ ಯಾರಿಗೂ ತಿಳಿಯದು} [PS] “ಇದಲ್ಲದೆ ಆ ದಿನದ ಮತ್ತು ಆ ಗಳಿಗೆಯ ವಿಷಯವಾಗಿ ನನ್ನ ತಂದೆಗೆ ಹೊರತು ಮತ್ತಾರಿಗೂ ತಿಳಿಯದು, ಪರಲೋಕದಲ್ಲಿರುವ ದೂತರಿಗಾಗಲಿ, ಮಗನಿಗಾಗಲಿ ತಿಳಿಯದು.
ಮಾರ್ಕನು 13 : 33 (IRVKN)
ಆ ಕಾಲವು ಯಾವಾಗ ಬರುವುದು ಎಂದು ನಿಮಗೆ ತಿಳಿಯದೆ ಇರುವುದರಿಂದ ನೀವು [§ ಮಾರ್ಕ 14:38; ಮತ್ತಾ 26:41; ಎಫೆ 6:18:] ಎಚ್ಚರವಾಗಿರಿ, [* ಕೆಲವು ಪ್ರತಿಗಳಲ್ಲಿ ಜಾಗರೂಕರಾಗಿರಿ, ದೇವರನ್ನು ಪ್ರಾರ್ಥಿಸಿರಿ. ] ಜಾಗರೂಕರಾಗಿರಿ.
ಮಾರ್ಕನು 13 : 34 (IRVKN)
ಅದು [† ಮತ್ತಾ 25:14; ಲೂಕ 19:12:] ಒಬ್ಬ ಮನುಷ್ಯನು ತನ್ನ ಮನೆಯನ್ನು ಬಿಟ್ಟು ದೂರಪ್ರಯಾಣಕ್ಕೆ ಹೋಗುವಾಗ ತನ್ನ ಸೇವಕರಿಗೆ ಮನೇ ಅಧಿಕಾರವನ್ನು ಒಪ್ಪಿಸಿಕೊಟ್ಟು ಪ್ರತಿಯೊಬ್ಬನಿಗೆ ಅವನವನ ಕೆಲಸಗಳನ್ನು ಕೊಟ್ಟು ಬಾಗಿಲು ಕಾಯುವವನಿಗೆ, ನೀನು ಜಾಗರೂಕನಾಗಿರಬೇಕೆಂದು ಆಜ್ಞಾಪಿಸಿದವನ ಹಾಗೆ ಇರುತ್ತದೆ” ಎಂದು ನಾನು ನಿಮಗೆ ಹೇಳುತ್ತಿದ್ದೇನೆ. [PE][PS]
ಮಾರ್ಕನು 13 : 35 (IRVKN)
“ಮನೆ ಯಜಮಾನನು ಸಂಜೆಯಲ್ಲಿಯೋ, ಮಧ್ಯರಾತ್ರಿಯಲ್ಲಿಯೋ, ಕೋಳಿ ಕೂಗುವಾಗಲೋ ಬೆಳಕಾಗುವಾಗಲೋ ಯಾವಾಗ ಬರುತ್ತಾನೋ ನಿಮಗೆ ಗೊತ್ತಿಲ್ಲದ ಕಾರಣ ಎಚ್ಚರವಾಗಿರಿ!
ಮಾರ್ಕನು 13 : 36 (IRVKN)
ಆತನು ಫಕ್ಕನೆ ಬಂದು ನೀವು ನಿದ್ರೆ ಮಾಡುತ್ತಿರುವುದನ್ನು ಕಂಡಾನು.
ಮಾರ್ಕನು 13 : 37 (IRVKN)
ನಾನು ನಿಮಗೆ ಹೇಳುತ್ತಿರುವುದನ್ನು ಎಲ್ಲರಿಗೂ ಹೇಳುತ್ತಿದ್ದೇನೆ; ಎಚ್ಚರವಾಗಿರಿ!” ಎಂದನು. [PE]

1 2 3 4 5 6 7 8 9 10 11 12 13 14 15 16 17 18 19 20 21 22 23 24 25 26 27 28 29 30 31 32 33 34 35 36 37

BG:

Opacity:

Color:


Size:


Font: