ಲೂಕನು 3 : 1 (IRVKN)
ಸ್ನಾನಿಕನಾದ ಯೋಹಾನನು ಉಪದೇಶ
ಮತ್ತಾ 3:1-12; ಮಾರ್ಕ 1:1-8; ಯೋಹಾ 1:19-28 ಚಕ್ರವರ್ತಿಯಾದ ತಿಬೇರಿಯನು ಆಳ್ವಿಕೆಗೆ ಬಂದ ಹದಿನೈದನೆಯ ವರ್ಷದಲ್ಲಿ, ಪೊಂತ್ಯ ಪಿಲಾತನು ಯೂದಾಯಕ್ಕೆ ಅಧಿಪತಿಯೂ, ಹೆರೋದನು ಗಲಿಲಾಯಕ್ಕೆ ಉಪರಾಜನೂ, ಅವನ ತಮ್ಮನಾದ ಫಿಲಿಪ್ಪನು ಇತುರಾಯ ತ್ರಕೋನೀತಿ ಸೀಮೆಗಳಿಗೆ ಉಪರಾಜನೂ, ಲುಸನ್ಯನು ಅಬಿಲೇನೆಗೆ ಉಪರಾಜನೂ ಆಗಿರುವಲ್ಲಿ
ಲೂಕನು 3 : 2 (IRVKN)
ಅನ್ನನು ಮತ್ತು ಕಾಯಫನೂ ಮಹಾಯಾಜಕರಾಗಿದ್ದ ಕಾಲದಲ್ಲಿ ಜಕರೀಯನ ಮಗನಾದ ಯೋಹಾನನಿಗೆ ಮರುಭೂಮಿಯಲ್ಲಿ ದೇವರ ವಾಕ್ಯವು ಪ್ರಕಟವಾಯಿತು.
ಲೂಕನು 3 : 3 (IRVKN)
ಆತನು ಯೊರ್ದನ್ ಹೊಳೆಯ ಸುತ್ತಲಿರುವ ಪ್ರಾಂತ್ಯದಲ್ಲೆಲ್ಲಾ ಸಂಚರಿಸಿ ಜನರಿಗೆ, ನೀವು ಪಾಪ ಕ್ಷಮಾಪಣೆಗಾಗಿ ಪಶ್ಚಾತ್ತಾಪದ ದೀಕ್ಷಾಸ್ನಾನ ಮಾಡಿಸಿಕೊಳ್ಳಬೇಕೆಂದು ಸಾರಿ ಹೇಳುತ್ತಿದ್ದನು.
ಲೂಕನು 3 : 4 (IRVKN)
(4-6)ಇದು ಯೆಶಾಯನೆಂಬ ಪ್ರವಾದಿಯ ಗ್ರಂಥದಲ್ಲಿ ಬರೆದಿರುವ ಮಾತಿಗೆ ಅನುಸಾರವಾಗಿ ನಡೆಯಿತು. ಆ ಮಾತು ಏನೆಂದರೆ, “ ‘ಕರ್ತನ ದಾರಿಯನ್ನು ಸಿದ್ಧಮಾಡಿರಿ, ಆತನ ಹಾದಿಗಳನ್ನು ನೆಟ್ಟಗೆ ಮಾಡಿರಿ. ಎಲ್ಲಾ ಹಳ್ಳಕೊಳ್ಳಗಳು ಮುಚ್ಚಲ್ಪಡುವವು, ಎಲ್ಲಾ ಬೆಟ್ಟಗುಡ್ಡಗಳು ತಗ್ಗಿಸಲ್ಪಡುವುದು, ಡೊಂಕಾಗಿರುವಂಥದು ನೆಟ್ಟಗಾಗುವುದು, ಕೊರಕಲಾದ ದಾರಿಗಳು ಸಮವಾಗುವವು. ಎಲ್ಲಾ ಮನುಷ್ಯರೂ ದೇವರಿಂದಾಗುವ ರಕ್ಷಣೆಯನ್ನು ಕಾಣುವರು’ ಎಂಬುದಾಗಿ ಮರುಭೂಮಿಯಲ್ಲಿ ಕೂಗುವವನ ಶಬ್ದವದೆ” ಎಂಬುದೇ.
ಲೂಕನು 3 : 7 (IRVKN)
ಹೀಗಿರಲಾಗಿ ಯೋಹಾನನು ತನ್ನಿಂದ ದೀಕ್ಷಾಸ್ನಾನ ಮಾಡಿಸಿಕೊಳ್ಳುವುದಕ್ಕಾಗಿ ಹೊರಟುಬಂದ ಜನರ ಗುಂಪಿಗೆ, “ಎಲೈ ಸರ್ಪಸಂತತಿಯವರೇ, ಮುಂದೆ ಕಾಣಬರುವ ದೇವರ ಕೋಪದಿಂದ ತಪ್ಪಿಸಿಕೊಳ್ಳುವುದಕ್ಕೆ ನಿಮಗೆ ಎಚ್ಚರಿಕೆಕೊಟ್ಟವರಾರು?
ಲೂಕನು 3 : 8 (IRVKN)
ಹಾಗಾದರೆ ಮಾನಸಾಂತರಕ್ಕೆ ಯೋಗ್ಯವಾದ ಫಲಗಳನ್ನು ತೋರಿಸಿರಿ. ‘ಅಬ್ರಹಾಮನು ನಮಗೆ ತಂದೆಯಲ್ಲವೇ’ ಎಂದು ನಿಮ್ಮೊಳಗೆ ಅಂದುಕೊಳ್ಳಬೇಡಿರಿ. ದೇವರು ಅಬ್ರಹಾಮನಿಗೆ ಈ ಕಲ್ಲುಗಳಿಂದಲೂ ಮಕ್ಕಳನ್ನು ಹುಟ್ಟಿಸಬಲ್ಲನೆಂದು ನಿಮಗೆ ಹೇಳುತ್ತೇನೆ.
ಲೂಕನು 3 : 9 (IRVKN)
ಈಗಲೇ ಮರಗಳ ಬೇರಿಗೆ ಕೊಡಲಿ ಹಾಕಿಯದೆ; ಒಳ್ಳೆಯ ಫಲವನ್ನು ಕೊಡದ ಪ್ರತಿಯೊಂದು ಮರವನ್ನು ಕಡಿದು ಬೆಂಕಿಯಲ್ಲಿ ಹಾಕುವರು” ಎಂದು ಹೇಳಿದನು.
ಲೂಕನು 3 : 10 (IRVKN)
ಆಗ ಆ ಗುಂಪಿನವರು, “ಹಾಗಾದರೆ ನಾವೇನು ಮಾಡಬೇಕು?” ಎಂದು ಆತನನ್ನು ಕೇಳಿದ್ದಕ್ಕೆ,
ಲೂಕನು 3 : 11 (IRVKN)
ಆತನು, “ಎರಡು ಅಂಗಿಗಳುಳ್ಳವನು ಇಲ್ಲದವನಿಗೆ ಒಂದು ಕೊಡಲಿ; ಆಹಾರವುಳ್ಳವನು ಇಲ್ಲದವನಿಗೆ ಕೊಡಲಿ” ಎಂದು ಅವರಿಗೆ ಹೇಳಿದನು.
ಲೂಕನು 3 : 12 (IRVKN)
ಸುಂಕ ವಸೂಲಿಗಾರರು ಸಹ ದೀಕ್ಷಾಸ್ನಾನ ಮಾಡಿಸಿಕೊಳ್ಳಬೇಕೆಂದು ಬಂದು, “ಗುರುವೇ, ನಾವೇನು ಮಾಡಬೇಕು” ಎಂದು ಆತನನ್ನು ಕೇಳಲು,
ಲೂಕನು 3 : 13 (IRVKN)
ಆತನು, “ನೇಮಿಸಲ್ಪಟ್ಟಿದ್ದಕ್ಕಿಂತ ಹೆಚ್ಚಾಗಿ ಏನೂ ತೆಗೆದುಕೊಳ್ಳಬೇಡಿರಿ” ಎಂದು ಅವರಿಗೆ ಹೇಳಿದನು.
ಲೂಕನು 3 : 14 (IRVKN)
ಸಿಪಾಯಿಗಳು ಸಹ ಬಂದು, “ನಾವು ಏನು ಮಾಡಬೇಕು” ಎಂದು ಆತನನ್ನು ಕೇಳಿದಾಗ ಆತನು ಅವರಿಗೆ, “ಯಾರನ್ನಾದರೂ ಬೆದರಿಸಿ ದುಡ್ಡು ಕಸಿದುಕೊಳ್ಳಬೇಡಿರಿ; ಯಾರ ಮೇಲೆಯೂ ಸುಳ್ಳುದೂರು ಹೇಳಬೇಡಿರಿ. ನಿಮ್ಮ ಸಂಬಳದಲ್ಲಿ ತೃಪ್ತರಾಗಿರಿ” ಎಂದು ಹೇಳಿದನು.
ಲೂಕನು 3 : 15 (IRVKN)
ಹೀಗಿರುವಲ್ಲಿ ಇಸ್ರಾಯೇಲ್ ಜನರು ಬರಬೇಕಾದ ಕ್ರಿಸ್ತನನ್ನು ಎದುರು ನೋಡುವವರಾಗಿದ್ದದರಿಂದ ಅವರೆಲ್ಲರೂ ಯೋಹಾನನ ವಿಷಯವಾಗಿ ಇವನೇ ಆ ಕ್ರಿಸ್ತನಾಗಿರಬಹುದೋ ಏನೋ ಎಂದು ತಮ್ಮ ಮನಸ್ಸಿನಲ್ಲಿ ವಿಚಾರಮಾಡಿಕೊಳ್ಳುತ್ತಿರಲು,
ಲೂಕನು 3 : 16 (IRVKN)
ಯೋಹಾನನು ಅವರೆಲ್ಲರಿಗೆ, “ನಾನಂತೂ ನಿಮಗೆ ನೀರಿನ ದೀಕ್ಷಾಸ್ನಾನ ಮಾಡಿಸುವವನು; ಆದರೆ ನನಗಿಂತ ಶಕ್ತನು ಬರುತ್ತಾನೆ. ಆತನ ಕೆರಗಳ ಬಾರನ್ನು ಬಿಚ್ಚುವುದಕ್ಕೂ ನಾನು ಯೋಗ್ಯನಲ್ಲ. ಆತನು ಪವಿತ್ರಾತ್ಮನಲ್ಲಿಯೂ ಮತ್ತು ಬೆಂಕಿಯಲ್ಲಿಯೂ ನಿಮಗೆ ದೀಕ್ಷಾಸ್ನಾನ ಮಾಡಿಸುವನು.
ಲೂಕನು 3 : 17 (IRVKN)
ಆತನು ಮೊರವನ್ನು ಕೈಯಲ್ಲಿ ಹಿಡಿದಿದ್ದಾನೆ. ತನ್ನ ಕಣದಲ್ಲಿಯ ರಾಶಿಯನ್ನು ತೂರಿ ಹಸನುಮಾಡಿ ಗೋದಿಯನ್ನು ತನ್ನ ಕಣಜದಲ್ಲಿ ತುಂಬಿಕೊಳ್ಳುವನು. ಹೊಟ್ಟನ್ನು ಆರದ ಬೆಂಕಿಯಲ್ಲಿ ಸುಟ್ಟುಬಿಡುವನು” ಎಂದು ಉತ್ತರಕೊಟ್ಟನು.
ಲೂಕನು 3 : 18 (IRVKN)
ಇನ್ನು ಬೇರೆ ಅನೇಕ ಮಾತುಗಳಿಂದ ಆತನು ಇಸ್ರಾಯೇಲ್ ಜನರಿಗೆ ಬುದ್ಧಿಹೇಳಿ ಶುಭವಾರ್ತೆಯನ್ನು ಸಾರುತ್ತಿದ್ದನು.
ಲೂಕನು 3 : 19 (IRVKN)
ಆದರೆ ಉಪರಾಜನಾದ ಹೆರೋದನು ತನ್ನ ಅಣ್ಣನ ಹೆಂಡತಿಯಾದ ಹೆರೋದ್ಯಳ ನಿಮಿತ್ತವಾಗಿಯೂ, ತಾನು ಮಾಡಿದ್ದ ಎಲ್ಲಾ ದುಷ್ಕೃತ್ಯಗಳ ನಿಮಿತ್ತವಾಗಿಯೂ ಯೋಹಾನನಿಂದ ಗದರಿಸಲ್ಪಟ್ಟಿದರಿಂದ,
ಲೂಕನು 3 : 20 (IRVKN)
ಆತನನ್ನು ಸೆರೆಮನೆಯಲ್ಲಿ ಹಾಕಿಸಿ ತನ್ನ ದುಷ್ಕೃತ್ಯಗಳ ಪಟ್ಟಿಯನ್ನು ಇನ್ನೂ ಹೆಚ್ಚಿಸಿಕೊಂಡನು.
ಲೂಕನು 3 : 21 (IRVKN)
ಯೇಸುವಿನ ದೀಕ್ಷಾಸ್ನಾನ
ಮತ್ತಾ 3:13-17; ಮಾರ್ಕ 1:9-11 ಜನರೆಲ್ಲಾ ದೀಕ್ಷಾಸ್ನಾನ ಮಾಡಿಸಿಕೊಂಡಾಗ ಯೇಸು ಸಹ ದೀಕ್ಷಾಸ್ನಾನ ಮಾಡಿಸಿಕೊಂಡು ಪ್ರಾರ್ಥನೆ ಮಾಡುತ್ತಿರುವಾಗ ಆಕಾಶವು ತೆರೆಯಲ್ಪಟ್ಟಿತು
ಲೂಕನು 3 : 22 (IRVKN)
ಮತ್ತು ಪವಿತ್ರಾತ್ಮನು ದೇಹಾಕಾರನಾಗಿ ಪಾರಿವಾಳದ ಹಾಗೆ ಆತನ ಮೇಲೆ ಇಳಿದನು. ಆಗ, “ನೀನು ಪ್ರಿಯನಾಗಿರುವ ನನ್ನ ಮಗನು, ನಿನ್ನನ್ನು ನಾನು ಮೆಚ್ಚಿದ್ದೇನೆ” ಎಂಬ ವಾಣಿಯು ಪರಲೋಕದಿಂದ ಬಂದಿತು.
ಲೂಕನು 3 : 23 (IRVKN)
ಯೇಸು ಕ್ರಿಸ್ತನ ವಂಶಾವಳಿ ಯೇಸು ಉಪದೇಶಮಾಡುವುದಕ್ಕೆ ಪ್ರಾರಂಭಿಸಿದಾಗ ಸುಮಾರು ಮೂವತ್ತು ವರ್ಷದವನಾಗಿದ್ದನು. ಆತನು ಜನರ ಎಣಿಕೆಯಲ್ಲಿ ಯೋಸೇಫನ ಮಗನು. ಯೋಸೇಫನು ಹೇಲಿಯನ ಮಗನು;
ಲೂಕನು 3 : 24 (IRVKN)
ಹೇಲಿಯನು ಮತ್ಥಾತನ ಮಗನು; ಮತ್ಥಾತನನು ಲೇವಿಯ ಮಗನು; ಲೇವಿಯನು ಮೆಲ್ಖಿಯನ ಮಗನು; ಮೆಲ್ಖಿಯನು ಯನ್ನಾಯನ ಮಗನು;
ಲೂಕನು 3 : 25 (IRVKN)
ಯನ್ನಾಯನು ಯೋಸೇಫನ ಮಗನು; ಯೋಸೇಫನು ಮತ್ತಥೀಯನ ಮಗನು; ಮತ್ತಥೀಯನು ಆಮೋಸನ ಮಗನು; ಆಮೋಸನು ನಹೂಮನ ಮಗನು; ನಹೂಮನು ಎಸ್ಲಿಯ ಮಗನು; ಎಸ್ಲಿಯನು ನಗ್ಗಾಯನ ಮಗನು; ನಗ್ಗಾಯನು ಮಹಾಥನ ಮಗನು;
ಲೂಕನು 3 : 26 (IRVKN)
ಮಹಾಥನು ಮತ್ತಥೀಯನ ಮಗನು; ಮತ್ತಥೀಯನು ಶಿಮೀಯನ ಮಗನು; ಶಿಮೀಯನು ಯೋಸೇಖನ ಮಗನು; ಯೋಸೇಖನು ಯೂದನ ಮಗನು; ಯೂದನು ಯೋಹಾನನ ಮಗನು;
ಲೂಕನು 3 : 27 (IRVKN)
ಯೋಹಾನನು ರೇಸನ ಮಗನು; ರೇಸನು ಜೆರುಬ್ಬಾಬೆಲನ ಮಗನು, ಜೆರುಬ್ಬಾಬೆಲನು ಸಲಥಿಯೇಲನ ಮಗನು; ಸಲಥಿಯೇಲನು ನೇರಿಯನ ಮಗನು;
ಲೂಕನು 3 : 28 (IRVKN)
ನೇರಿಯನು ಮೆಲ್ಖಿಯನ ಮಗನು; ಮೆಲ್ಖಿಯನು ಅದ್ದಿಯನ ಮಗನು; ಅದ್ದಿಯನು ಕೋಸಾಮನ ಮಗನು; ಕೋಸಾಮನು ಎಲ್ಮದಾಮನ ಮಗನು; ಎಲ್ಮದಾಮನು ಏರನ ಮಗನು;
ಲೂಕನು 3 : 29 (IRVKN)
ಏರನು ಯೆಹೋಷುವನ ಮಗನು; ಯೆಹೋಷುವನು ಎಲಿಯೇಜರನ ಮಗನು; ಎಲಿಯೇಜರನು ಯೋರೈಮನ ಮಗನು; ಯೋರೈಮನು ಮತ್ಥಾತನ ಮಗನು; ಮತ್ಥಾತನು ಲೇವಿಯನ ಮಗನು;
ಲೂಕನು 3 : 30 (IRVKN)
ಲೇವಿಯನು ಸಿಮಿಯೋನನ ಮಗನು; ಸಿಮಿಯೋನನು ಯೂದನ ಮಗನು; ಯೂದನು ಯೋಸೇಫನ ಮಗನು; ಯೋಸೇಫನು ಯೋನಾಮನ ಮಗನು; ಯೋನಾಮನು ಎಲಿಯಕೀಮನ ಮಗನು;
ಲೂಕನು 3 : 31 (IRVKN)
ಎಲಿಯಕೀಮನು ಮೆಲೆಯಾನ ಮಗನು; ಮೆಲೆಯಾನು ಮೆನ್ನನ ಮಗನು; ಮೆನ್ನನು ಮತ್ತಾಥನ ಮಗನು; ಮತ್ತಾಥನು ನಾಥಾನನ ಮಗನು; ನಾಥಾನನು ದಾವೀದನ ಮಗನು;
ಲೂಕನು 3 : 32 (IRVKN)
ದಾವೀದನು ಇಷಯನ ಮಗನು; ಇಷಯನು ಓಬೇದನ ಮಗನು; ಓಬೇದನು ಬೋವಜನ ಮಗನು; ಬೋವಜನು ಸಲ್ಮೋನನ ಮಗನು; ಸಲ್ಮೋನನು ನಹಶೋನನ ಮಗನು;
ಲೂಕನು 3 : 33 (IRVKN)
ನಹಶೋನನು ಅಮ್ಮಿನಾದಾಬನ ಮಗನು; ಅಮ್ಮಿನಾದಾಬನು ಅದ್ಮಿನನ ಮಗನು; ಅದ್ಮಿನನು ಆರ್ನೈಯನ ಮಗನು; ಆರ್ನೈಯನು ಎಸ್ರೋನನ ಮಗನು; ಎಸ್ರೋನನು ಪೆರೆಚನ ಮಗನು;
ಲೂಕನು 3 : 34 (IRVKN)
ಪೆರೆಚನು ಯೂದನ ಮಗನು; ಯೂದನು ಯಾಕೋಬನ ಮಗನು; ಯಾಕೋಬನು ಇಸಾಕನ ಮಗನು; ಇಸಾಕನು ಅಬ್ರಹಾಮನ ಮಗನು; ಅಬ್ರಹಾಮನು ತೇರನ ಮಗನು; ತೇರನು ನಾಹೋರನ ಮಗನು;
ಲೂಕನು 3 : 35 (IRVKN)
ನಾಹೋರನು ಸೆರೂಗನ ಮಗನು; ಸೆರೂಗನು ರೆಗೂವನ ಮಗನು; ರೆಗೂವನು ಪೆಲೆಗನ ಮಗನು; ಪೆಲೆಗನು ಹೇಬೆರನ ಮಗನು; ಹೇಬೆರನು ಸಾಲನ ಮಗನು;
ಲೂಕನು 3 : 36 (IRVKN)
ಸಾಲನು ಕಯಿನಾನನ ಮಗನು; ಕಯಿನಾನನು ಅರ್ಫಕ್ಷಾದನ ಮಗನು; ಅರ್ಫಕ್ಷಾದನು ಶೇಮನ ಮಗನು; ಶೇಮನು ನೋಹನ ಮಗನು; ನೋಹನು ಲಾಮೆಕನ ಮಗನು;
ಲೂಕನು 3 : 37 (IRVKN)
ಲಾಮೆಕನು ಮೆತೂಷಲನ ಮಗನು; ಮೆತೂಷಲನು ಹನೋಕನ ಮಗನು; ಹನೋಕನು ಯೆರೆದನ ಮಗನು; ಯೆರೆದನು ಮಹಲಲೇಲನ ಮಗನು; ಮಹಲಲೇಲನು ಕಯಿನಾನನ ಮಗನು;
ಲೂಕನು 3 : 38 (IRVKN)
ಕಯಿನಾನನು ಎನೋಷನ ಮಗನು; ಎನೋಷನು ಸೇಥನ ಮಗನು; ಸೇಥನು ಆದಾಮನ ಮಗನು ಆದಾಮನು ದೇವರ ಮಗನು.
❮
❯
1
2
3
4
5
6
7
8
9
10
11
12
13
14
15
16
17
18
19
20
21
22
23
24
25
26
27
28
29
30
31
32
33
34
35
36
37
38