ನ್ಯಾಯಸ್ಥಾಪಕರು 14 : 1 (IRVKN)
ಸಂಸೋನನ ವಿವಾಹವೂ ಒಗಟೂ [* ಇಬ್ರಿ. 11: 32 ]ಸಂಸೋನನು ಗಟ್ಟಾ ಇಳಿದು ತಿಮ್ನಾ ಊರಿಗೆ ಹೋಗಿ ಅಲ್ಲಿನ ಫಿಲಿಷ್ಟಿಯರ ಹೆಣ್ಣುಗಳಲ್ಲಿ ಒಬ್ಬಳನ್ನು ನೋಡಿ, ತಿರುಗಿ ತಂದೆತಾಯಿಗಳ ಬಳಿಗೆ ಬಂದು
ನ್ಯಾಯಸ್ಥಾಪಕರು 14 : 2 (IRVKN)
ಅವರಿಗೆ, “ನಾನು ತಿಮ್ನಾ ಊರಲ್ಲಿ ಒಬ್ಬ ಫಿಲಿಷ್ಟಿಯ ಹೆಣ್ಣನ್ನು ನೋಡಿದ್ದೇನೆ; ಆಕೆಯನ್ನು ನನಗೆ ಮದುವೆ ಮಾಡಿಕೊಡಿರಿ” ಎಂದು ಹೇಳಿದನು.
ನ್ಯಾಯಸ್ಥಾಪಕರು 14 : 3 (IRVKN)
ಆಗ ಅವರು ಅವನಿಗೆ, “ಸುನ್ನತಿಯಿಲ್ಲದ ಫಿಲಿಷ್ಟಿಯರ ಹೆಣ್ಣನ್ನು ಮದುವೆ ಮಾಡಿಕೊಳ್ಳಬೇಕೆಂದಿರುತ್ತೀಯಲ್ಲಾ; ನಿನ್ನ ಬಂಧುಗಳಲ್ಲಿಯೂ, ನಮ್ಮ ಎಲ್ಲಾ ಜನರಲ್ಲಿಯೂ ನಿನಗೆ ಹೆಣ್ಣು ಸಿಕ್ಕುವುದಿಲ್ಲವೋ?” ಎಂದು ಕೇಳಲು ಅವನು, “ನನಗೋಸ್ಕರ ಆಕೆಯನ್ನೇ ತೆಗೆದುಕೊಳ್ಳಬೇಕು; ಆಕೆಯನ್ನೇ ಮೆಚ್ಚಿಕೊಂಡಿದ್ದೇನೆ” ಅಂದನು.
ನ್ಯಾಯಸ್ಥಾಪಕರು 14 : 4 (IRVKN)
ಫಿಲಿಷ್ಟಿಯರ ಕೇಡಿಗೆ ಕಾರಣ ಹುಡುಕುತ್ತಿದ್ದ ಯೆಹೋವನ ಪ್ರೇರಣೆಯಿಂದಲೇ ಈ ಸಂಗತಿ ಉಂಟಾಯಿತೆಂಬುದು ಅವನ ತಂದೆತಾಯಿಗಳಿಗೆ ಗೊತ್ತಿರಲಿಲ್ಲ. [† ನ್ಯಾಯ 13:1; 15: 11 ]ಆ ಕಾಲದಲ್ಲಿ ಫಿಲಿಷ್ಟಿಯರು ಇಸ್ರಾಯೇಲರ ಮೇಲೆ ದೊರೆತನ ನಡೆಸುತ್ತಿದ್ದರು.
ನ್ಯಾಯಸ್ಥಾಪಕರು 14 : 5 (IRVKN)
ಸಂಸೋನನು ತನ್ನ ತಂದೆತಾಯಿಗಳ ಸಹಿತ ತಿಮ್ನಾ ಊರಿಗೆ ಹೊರಟು ಅಲ್ಲಿನ ದ್ರಾಕ್ಷಿ ತೋಟಗಳ ಬಳಿಗೆ ಬಂದಾಗ, ಒಂದು ಪ್ರಾಯದ ಸಿಂಹವು ಗರ್ಜಿಸುತ್ತಾ ಅವನೆದುರಿಗೆ ಬಂದಿತು.
ನ್ಯಾಯಸ್ಥಾಪಕರು 14 : 6 (IRVKN)
ಅವನ ಕೈಯಲ್ಲಿ ಏನೂ ಇಲ್ಲದಿದ್ದರೂ, [‡ 1 ಸಮು 11: 6 ]ಯೆಹೋವನ ಆತ್ಮವು ಅವನ ಮೇಲೆ ಫಕ್ಕನೆ ಬಂದದ್ದರಿಂದ ಆ ಸಿಂಹವನ್ನು ಹೋತ ಮರಿಯನ್ನೋ ಎಂಬಂತೆ ಸೀಳಿಬಿಟ್ಟನು. ಈ ಸಂಗತಿಯನ್ನು ತಂದೆತಾಯಿಗಳಿಗೆ ತಿಳಿಸಲಿಲ್ಲ.
ನ್ಯಾಯಸ್ಥಾಪಕರು 14 : 7 (IRVKN)
ಅನಂತರ ಅವನು ಊರೊಳಗೆ ಹೋಗಿ ಆ ಸ್ತ್ರೀಯನ್ನು ಮಾತನಾಡಿಸಿ ಆಕೆಯನ್ನು ಮೆಚ್ಚಿಕೊಂಡನು.
ನ್ಯಾಯಸ್ಥಾಪಕರು 14 : 8 (IRVKN)
ಕೆಲವು ದಿನಗಳಾದ ಮೇಲೆ ಅವನು ಆಕೆಯನ್ನು ವರಿಸುವುದಕ್ಕೋಸ್ಕರ ತಿರುಗಿ ಆ ಊರಿಗೆ ಹೋಗುತ್ತಿದ್ದಾಗ ದಾರಿಯ ಸಮೀಪದಲ್ಲಿ ಬಿದ್ದಿದ್ದ ಸಿಂಹದ ಹೆಣವನ್ನು ನೋಡುವುದಕ್ಕೆ ಹೋಗಲು ಅದರ ಒಡಲಲ್ಲಿ ಜೇನುಹುಳಗಳನ್ನೂ, ಜೇನನ್ನೂ ಕಂಡು,
ನ್ಯಾಯಸ್ಥಾಪಕರು 14 : 9 (IRVKN)
ಆ ಜೇನನ್ನು ಕೈಯಲ್ಲಿ ತೆಗೆದುಕೊಂಡು ತಿನ್ನುತ್ತಾ ಹೋದನು; ತನ್ನ ತಂದೆತಾಯಿಗಳಿಗೂ ಕೊಟ್ಟನು; ಅವರೂ ತಿಂದರು. ಆದರೆ ಸತ್ತ ಸಿಂಹದ ದೇಹದಿಂದ ತಾನು ಜೇನು ತೆಗೆದುಕೊಂಡನೆಂದು ಅವರಿಗೆ ತಿಳಿಸಲಿಲ್ಲ.
ನ್ಯಾಯಸ್ಥಾಪಕರು 14 : 10 (IRVKN)
ಸಂಸೋನನ ಒಗಟು ಸಂಸೋನನ ತಂದೆಯು ಹೆಣ್ಣಿನ ಮನೆಗೆ ಬಂದ ಮೇಲೆ ಸಂಸೋನನು ಯೌವನಸ್ಥರ ಪದ್ದತಿಯ ಪ್ರಕಾರ ಅಲ್ಲಿ ಔತಣವನ್ನು ಸಿದ್ಧಮಾಡಿಸಿದನು.
ನ್ಯಾಯಸ್ಥಾಪಕರು 14 : 11 (IRVKN)
ಅವರು ಅವನನ್ನು ನೋಡಿದಾಗ ತಮ್ಮಲ್ಲಿಂದ ಮೂವತ್ತು ಮಂದಿಯನ್ನು ಆರಿಸಿ ಅವನ ಜೊತೆಯಲ್ಲಿರಿಸಿದರು.
ನ್ಯಾಯಸ್ಥಾಪಕರು 14 : 12 (IRVKN)
ಸಂಸೋನನು ಇವರಿಗೆ, “[§ ಜ್ಞಾನೋ 1:6; ಯೆಹೆ. 17: 2 ]ನಾನು ನಿಮಗೆ ಒಂದು ಒಗಟನ್ನು ಹೇಳುತ್ತೇನೆ; ನೀವು ಔತಣದ * ಆದಿ 29: 27. ಏಳು ದಿನಗಳಲ್ಲಿಯೇ ಅದನ್ನು ಬಿಚ್ಚಿ ಅದರ ಅರ್ಥವನ್ನು ಹೇಳಿದರೆ ನಿಮಗೆ † 2 ಅರಸು. 5: 5. ಮೂವತ್ತು ದುಪ್ಪಟಿಗಳನ್ನೂ ಮೂವತ್ತು ವಿಶೇಷವಸ್ತ್ರಗಳನ್ನೂ ಕೊಡುವೆನು.
ನ್ಯಾಯಸ್ಥಾಪಕರು 14 : 13 (IRVKN)
ನಿಮ್ಮಿಂದ ಆಗದೆ ಹೋದರೆ ನೀವು ನನಗೆ ಮೂವತ್ತು ನಾರು ಬಟ್ಟೆಯ ನಿಲುವಂಗಿಗಳನ್ನು (ದುಪ್ಪಟಿಗಳನ್ನೂ), ಮೂವತ್ತು ವಿಶೇಷವಸ್ತ್ರಗಳನ್ನೂ ಕೊಡಬೇಕು” ಅನ್ನಲು ಅವರು ಅವನಿಗೆ, “ನಿನ್ನ ಒಗಟನ್ನು ಹೇಳು, ಕೇಳೋಣ” ಎಂದು ಹೇಳಿದರು.
ನ್ಯಾಯಸ್ಥಾಪಕರು 14 : 14 (IRVKN)
ಆಗ ಅವನು, “ತಿಂದುಬಿಡುವಂಥದರಿಂದ ತಿನ್ನತಕ್ಕದ್ದು ದೊರಕಿತು; ಕ್ರೂರವಾದದ್ದರಿಂದ ಮಧುರವಾದದ್ದು ಹುಟ್ಟಿತು” ಎಂದು ಹೇಳಿದನು. ಮೂರು ದಿನಗಳಾದರೂ ಅವರು ಅದನ್ನು ಬಿಡಿಸಲಾರದೆ ಹೋದರು.
ನ್ಯಾಯಸ್ಥಾಪಕರು 14 : 15 (IRVKN)
ಅವರು ‡ ಅಥವಾ ನಾಲ್ಕನೆಯ ದಿನ. ಏಳನೆಯ ದಿನದಲ್ಲಿ ಸಂಸೋನನ ಹೆಂಡತಿಗೆ, “ನಿನ್ನ ಗಂಡನನ್ನು ಮರುಳುಗೊಳಿಸಿ ಅವನಿಂದ ಒಗಟಿನ ಅರ್ಥವನ್ನು ತಿಳಿದುಕೋ; ಇಲ್ಲವಾದರೆ ನಾವು ನಿನ್ನನ್ನೂ, ನಿನ್ನ ತಂದೆಯ ಮನೆಯವರನ್ನೂ ಬೆಂಕಿಯಿಂದ ಸುಟ್ಟುಬಿಡುವೆವು; ನಮಗಿರುವುದೆಲ್ಲವನ್ನೂ ಕಸಿದುಕೊಳ್ಳುವುದಕ್ಕೆ ನಮ್ಮನ್ನು ಇಲ್ಲಿಗೆ ಕರೆಸಿದಿರೋ” ಅಂದರು.
ನ್ಯಾಯಸ್ಥಾಪಕರು 14 : 16 (IRVKN)
ಆಕೆಯು ಸಂಸೋನನ ಮುಂದೆ ಅಳುತ್ತಾ, “ನೀನು ನನ್ನನ್ನು ಪ್ರೀತಿಸುವುದಿಲ್ಲ, ದ್ವೇಷಿಸುತ್ತೀಯಷ್ಟೆ; ನನ್ನ ಜನರಿಗೆ ಒಗಟನ್ನು ಹೇಳಿದ್ದೀ, ಅದರ ಅರ್ಥವನ್ನು ನನಗೆ ತಿಳಿಸಲಿಲ್ಲವಲ್ಲಾ” ಎಂದು ತೊಂದರೆಪಡಿಸಿದಳು. ಅವನು ಆಕೆಗೆ, “ಅದನ್ನು ನನ್ನ ತಂದೆತಾಯಿಗಳಿಗೂ ಹೇಳಲಿಲ್ಲ; ನಿನಗೆ ಹೇಳುವೆನೋ?” ಎಂದು ಉತ್ತರ ಕೊಟ್ಟನು.
ನ್ಯಾಯಸ್ಥಾಪಕರು 14 : 17 (IRVKN)
ಆಕೆಯು ಔತಣದ ಏಳು ದಿನಗಳಲ್ಲಿಯೂ ಅವನ ಮುಂದೆ ಅಳುತ್ತಿದ್ದಳು. ಏಳನೆಯ ದಿನದಲ್ಲಿ ಆಕೆಯು ಬಹಳವಾಗಿ ಪೀಡಿಸಿದ್ದರಿಂದ ಅವನು ಹೇಳಿಬಿಟ್ಟನು. ಆಕೆಯು ಒಗಟಿನ ಅರ್ಥವನ್ನು ತನ್ನ ಜನರಿಗೆ ತಿಳಿಸಿದಳು.
ನ್ಯಾಯಸ್ಥಾಪಕರು 14 : 18 (IRVKN)
ಅವರು ಏಳನೆಯ ದಿನ ಸೂರ್ಯ ಮುಳುಗುವುದಕ್ಕಿಂತ ಮೊದಲು ಅವನಿಗೆ, “ಜೇನಿಗಿಂತ ಸಿಹಿಯಾದದ್ದು ಯಾವುದು? ಸಿಂಹಕ್ಕಿಂತ ಬಲಿಷ್ಠವಾದದ್ದು ಯಾವುದು?” ಎಂದು ಹೇಳಲು ಅವನು, “§ ನೀವು ಒಗಟನ್ನು ಬಿಚ್ಚಿದ್ದು ನನ್ನ ಪ್ರಣಯಿನಿಯ ಮೂಲಕ ಎಂಬುದು ಇದರರ್ಥ. ನೀವು ನನ್ನ ಕಡಸಿನಿಂದ ಉಳದೇ ಹೋಗಿದ್ದರೆ ಒಗಟನ್ನು ಬಿಚ್ಚುವುದು ನಿಮ್ಮಿಂದಾಗುತ್ತಿರಲಿಲ್ಲ” ಅಂದನು.
ನ್ಯಾಯಸ್ಥಾಪಕರು 14 : 19 (IRVKN)
ಯೆಹೋವನ ಆತ್ಮವು ಫಕ್ಕನೆ ಅವನ ಮೇಲೆ ಬಂದಿತು; ಅವನು [* ನ್ಯಾಯ 1: 18 ]ಅಷ್ಕೆಲೋನಿಗೆ ಹೋಗಿ ಅಲ್ಲಿನ ಮೂವತ್ತು ಮಂದಿಯನ್ನು ಹೊಡೆದು, ಅವರ ವಸ್ತ್ರಗಳನ್ನು ಸುಲುಕೊಂಡು ಒಗಟನ್ನು ಬಿಚ್ಚಿದವರಿಗೆ ತಂದುಕೊಟ್ಟನು. ಮತ್ತು ಕೋಪಗೊಂಡವನಾಗಿ ತನ್ನ ತಂದೆಯ ಮನೆಗೆ ಹೋದನು.
ನ್ಯಾಯಸ್ಥಾಪಕರು 14 : 20 (IRVKN)
ಇತ್ತ ಸಂಸೋನನ ಹೆಂಡತಿಯನ್ನು ಆ ಮೂವತ್ತು ಮಂದಿಯಲ್ಲಿ ಅವನಿಗೆ ಸ್ನೇಹಿತನಾಗಿದ್ದವನಿಗೆ ಮದುವೆಮಾಡಿಕೊಟ್ಟರು.
❮
❯
1
2
3
4
5
6
7
8
9
10
11
12
13
14
15
16
17
18
19
20