ನ್ಯಾಯಸ್ಥಾಪಕರು 10 : 1 (IRVKN)
ತೋಲಾ ಅಬೀಮೆಲೆಕನ ಮರಣದ ತರುವಾಯ ಇಸ್ಸಾಕಾರ್ ಕುಲದ ಪೂವನ ಮಗನೂ, ದೋದೋವಿನ ಮೊಮ್ಮಗನೂ ಆಗಿದ್ದ ತೋಲನು ಇಸ್ರಾಯೇಲ್ಯರನ್ನು ರಕ್ಷಿಸಿವುದಕ್ಕೋಸ್ಕರ ಎದ್ದನು. ಅವನು ಎಫ್ರಾಯೀಮ್ ಬೆಟ್ಟದ ಸೀಮೆಯ ಶಾಮೀರೆಂಬ ಊರಲ್ಲಿ ವಾಸವಾಗಿದ್ದನು.
ನ್ಯಾಯಸ್ಥಾಪಕರು 10 : 2 (IRVKN)
ಇಪ್ಪತ್ತಮೂರು ವರ್ಷಗಳವರೆಗೆ ಇಸ್ರಾಯೇಲರನ್ನು ಪಾಲಿಸಿದ ನಂತರ, ಅವನು ಸತ್ತು ಶಾಮೀರಿನಲ್ಲಿ ಹೂಣಲ್ಪಟ್ಟನು.
ನ್ಯಾಯಸ್ಥಾಪಕರು 10 : 3 (IRVKN)
ಯಾಯೀರ್ ತೋಲನ ಮರಣದ ತರುವಾಯ ಗಿಲ್ಯಾದ್ಯನಾದ ಯಾಯೀರನು ಎದ್ದು ಇಸ್ರಾಯೇಲರನ್ನು ಇಪ್ಪತ್ತೆರಡು ವರ್ಷ ಪಾಲಿಸಿದನು.
ನ್ಯಾಯಸ್ಥಾಪಕರು 10 : 4 (IRVKN)
ಇವನಿಗೆ ಮೂವತ್ತು ಮಂದಿ ಮಕ್ಕಳಿದ್ದರು. ಇವರಿಗೆ ಮೂವತ್ತು ಸವಾರಿ ಕತ್ತೆಗಳೂ, ಗಿಲ್ಯಾದ್ ದೇಶದಲ್ಲಿ ಮೂವತ್ತು ಊರುಗಳೂ ಇದ್ದವು. ಅವುಗಳಿಗೆ ಇಂದಿನ ವರೆಗೂ [* ಧರ್ಮೋ 3: 14 ]ಯಾಯೀರನ ಗ್ರಾಮಗಳೆಂದು ಹೆಸರಿದೆ.
ನ್ಯಾಯಸ್ಥಾಪಕರು 10 : 5 (IRVKN)
ಯಾಯೀರನು ಸತ್ತು ಕಾಮೋನಿನಲ್ಲಿ ಹೂಣಲ್ಪಟ್ಟನು.
ನ್ಯಾಯಸ್ಥಾಪಕರು 10 : 6 (IRVKN)
ಅಮ್ಮೋನಿಯರ ಕಾಟವು ಇಸ್ರಾಯೇಲರು ಪುನಃ ಯೆಹೋವನ ದೃಷ್ಟಿಯಲ್ಲಿ ದ್ರೋಹಿಗಳಾದರು. ಅವರು ಆತನನ್ನು ಬಿಟ್ಟು ಬಾಳ್, ಅಷ್ಟೋರೆತ್ ಎಂಬ ದೇವತೆಗಳನ್ನೂ, ಅರಾಮ್ಯರು, [† 1 ಅರಸು. 11:5,7, 33 ]ಚೀದೋನ್ಯರು, ಮೋವಾಬ್ಯರು, ಅಮ್ಮೋನಿಯರು, ಫಿಲಿಷ್ಟಿಯರು ಇವರ ದೇವತೆಗಳನ್ನೂ ಪೂಜಿಸತೊಡಗಿದರು. ಧರ್ಮೋ 31: 16. ಯೆಹೋವನನ್ನು ಮರೆತು ಆತನನ್ನು ಆರಾಧಿಸುವುದನ್ನು ಬಿಟ್ಟೇಬಿಟ್ಟರು.
ನ್ಯಾಯಸ್ಥಾಪಕರು 10 : 7 (IRVKN)
ಆದುದರಿಂದ ಆತನು ಇಸ್ರಾಯೇಲರ ಮೇಲೆ ಕೋಪಗೊಂಡು ಅವರನ್ನು ಫಿಲಿಷ್ಟಿಯರ ಮತ್ತು ಅಮ್ಮೋನಿಯರ ಕೈಗೆ ಒಪ್ಪಿಸಿಬಿಟ್ಟನು.
ನ್ಯಾಯಸ್ಥಾಪಕರು 10 : 8 (IRVKN)
ಇವರು ಅಂದಿನಿಂದ ಹದಿನೆಂಟು ವರ್ಷಗಳ ವರೆಗೆ ಯೊರ್ದನಿನ ಆಚೆ ಗಿಲ್ಯಾದಿನಲ್ಲಿದ್ದ ಇಸ್ರಾಯೇಲರನ್ನು ಬಹಳವಾಗಿ ಪೀಡಿಸುತ್ತಾ, ಕುಗ್ಗಿಸುತ್ತಾ ಇದ್ದರು. ಈ ದೇಶವು ಮೊದಲು ಅಮೋರಿಯರದಾಗಿತ್ತು.
ನ್ಯಾಯಸ್ಥಾಪಕರು 10 : 9 (IRVKN)
ಇದಲ್ಲದೆ ಅಮ್ಮೋನಿಯರು ಯೊರ್ದನ್ ಹೊಳೆಯನ್ನು ದಾಟಿ, ಯೆಹೂದ, ಬೆನ್ಯಾಮೀನ್, ಎಫ್ರಾಯೀಮ್ ಕುಲಗಳೊಡನೆ ಯುದ್ಧಮಾಡಿದ್ದರಿಂದ ಇಸ್ರಾಯೇಲರಿಗೆ ಬಹಳ ಕಷ್ಟವಾಯಿತು.
ನ್ಯಾಯಸ್ಥಾಪಕರು 10 : 10 (IRVKN)
ಆಗ ಅವರು ಯೆಹೋವನಿಗೆ, “ನಾವು ನಮ್ಮ ದೇವರಾದ ನಿನ್ನನ್ನು ಬಿಟ್ಟು, ಬಾಳನ ಪ್ರತಿಮೆಗಳನ್ನು ಪೂಜಿಸಿ, ನಿನಗೆ ವಿರುದ್ಧವಾಗಿ ಪಾಪಮಾಡಿದ್ದೇವೆ” ಎಂದು ಮೊರೆಯಿಟ್ಟರು.
ನ್ಯಾಯಸ್ಥಾಪಕರು 10 : 11 (IRVKN)
ಆತನು ಅವರಿಗೆ, “[§ ವಿಮೋ 14:30; ಅರಣ್ಯ 21:21- 32 ]ಐಗುಪ್ತ, ಅಮೋರಿಯ, ಅಮ್ಮೋನಿಯ, ಫಿಲಿಷ್ಟಿಯ, ಚೀದೋನ್ಯ, ಅಮಾಲೇಕ್ಯ, ಮಾವೋನ್ಯ ಇವೇ
ನ್ಯಾಯಸ್ಥಾಪಕರು 10 : 12 (IRVKN)
ಮೊದಲಾದ ಜನಾಂಗಗಳು ನಿಮ್ಮನ್ನು ಪೀಡಿಸಿದಾಗ ನೀವು ನನಗೆ ಮೊರೆಯಿಟ್ಟಿರಿ; ನಾನು ಅವರಿಂದ ನಿಮ್ಮನ್ನು ಬಿಡಿಸಿದರೂ
ನ್ಯಾಯಸ್ಥಾಪಕರು 10 : 13 (IRVKN)
[* ಯೆರೆ 2: 13 ]ನೀವು ಪುನಃ ನನ್ನನ್ನು ಬಿಟ್ಟು, ಅನ್ಯದೇವತೆಗಳನ್ನು ಸೇವಿಸುತ್ತಾ ಬಂದಿರಿ. ಆದುದರಿಂದ ನಾನು ಇನ್ನು ಮುಂದೆ ನಿಮ್ಮನ್ನು ರಕ್ಷಿಸುವುದೇ ಇಲ್ಲ.
ನ್ಯಾಯಸ್ಥಾಪಕರು 10 : 14 (IRVKN)
[† ಧರ್ಮೋ 32:37- 38 ]ಹೋಗಿ, ನೀವು ಆರಿಸಿಕೊಂಡ ದೇವತೆಗಳಿಗೆ ಮೊರೆಯಿಡಿರಿ; ಅವು ನಿಮ್ಮನ್ನು ಈ ಇಕ್ಕಟ್ಟಿನಿಂದ ಬಿಡಿಸಲಿ” ಅಂದನು.
ನ್ಯಾಯಸ್ಥಾಪಕರು 10 : 15 (IRVKN)
ಅವರು ತಿರುಗಿ ಯೆಹೋವನಿಗೆ, “ನಾವು ಪಾಪ ಮಾಡಿದ್ದೇವೆ; ನಿನಗೆ ಸರಿಕಾಣುವ ಪ್ರಕಾರ ನಮಗೆ ಮಾಡು; ಆದರೆ ಈ ಸಾರಿ ಹೇಗೂ ನಮ್ಮನ್ನು ರಕ್ಷಿಸಬೇಕು” ಎಂದು ಮೊರೆಯಿಟ್ಟು ಅನ್ಯದೇವತೆಗಳನ್ನು ತಮ್ಮಲ್ಲಿಂದ ತೆಗೆದು ಹಾಕಿ ಯೆಹೋವನನ್ನು ಸೇವಿಸುವವರಾದರು.
ನ್ಯಾಯಸ್ಥಾಪಕರು 10 : 16 (IRVKN)
ಯೆಶಾ 63:9 ಆಗ ಆತನ ಮನಸ್ಸು ಇಸ್ರಾಯೇಲರ ಸಂಕಟದ ನಿಮಿತ್ತ ಬಹಳವಾಗಿ ನೊಂದಿತು.
ನ್ಯಾಯಸ್ಥಾಪಕರು 10 : 17 (IRVKN)
ಅಮ್ಮೋನಿಯರು ದಂಡೆತ್ತಿ ಬಂದು ಗಿಲ್ಯಾದಿನಲ್ಲಿ ಇಳಿದುಕೊಳ್ಳಲು ಇಸ್ರಾಯೇಲರು ಸೇರಿ ಮಿಚ್ಪೆಯಲ್ಲಿ ಪಾಳೆಯಮಾಡಿಕೊಂಡರು.
ನ್ಯಾಯಸ್ಥಾಪಕರು 10 : 18 (IRVKN)
ಗಿಲ್ಯಾದಿನ ಜನರೂ ಅಧಿಪತಿಗಳೂ, “ನಮ್ಮಲ್ಲಿ ಅಮ್ಮೋನಿಯರೊಡನೆ ಯುದ್ಧಕ್ಕೆ ಕೈಹಾಕುವವನು ಯಾರು? ಅಂಥವನನ್ನು ಗಿಲ್ಯಾದಿನವರೆಲ್ಲರ ಮೇಲೆ ನಾಯಕನನ್ನಾಗಿ ಮಾಡುವೆವು” ಎಂದು ತಮ್ಮ ತಮ್ಮೊಳಗೆ ಮಾತನಾಡಿಕೊಂಡರು.

1 2 3 4 5 6 7 8 9 10 11 12 13 14 15 16 17 18