ಯೆಹೋಶುವ 12 : 1 (IRVKN)
ಇಸ್ರಾಯೇಲ್ಯರು ಸೋಲಿಸಿದ ಅರಸರ ಪಟ್ಟಿ ಇಸ್ರಾಯೇಲ್ಯರು ಯೊರ್ದನ್ ನದಿಯ ಪೂರ್ವ ದಿಕ್ಕಿನಲ್ಲಿ ಅರ್ನೋನ್ ಕಣಿವೆ ಮೊದಲುಗೊಂಡು ಹೆರ್ಮೋನ್ ಪರ್ವತದವರೆಗಿದ್ದ ಪ್ರದೇಶವನ್ನೂ ಕಣಿವೆ ಪ್ರದೇಶದ ಪೂರ್ವಭಾಗವನ್ನೂ ಸ್ವಾಧೀನ ಮಾಡಿಕೊಂಡು ಅವುಗಳಲ್ಲಿದ್ದ ಅರಸರನ್ನು ಸಂಹರಿಸಿದರು.
ಯೆಹೋಶುವ 12 : 2 (IRVKN)
ಅವರಲ್ಲಿ ಮೊದಲನೆಯವನು ಹೆಷ್ಬೋನಿನಲ್ಲಿದ್ದ ಅಮೋರಿಯರ ಅರಸನಾಗಿದ್ದವನು ಸೀಹೋನ್. ಇವನು ಅರ್ನೋನ್ ಕಣಿವೆಯ ಅಂಚಿನಲ್ಲಿರುವ ಅರೋಯೇರ್ ಪಟ್ಟಣವು ಮತ್ತು ಕಣಿವೆಯಲ್ಲಿಯೇ ಇದ್ದ ಪಟ್ಟಣಗಳು ಇವುಗಳು ಮೊದಲುಗೊಂಡು ಅಮ್ಮೋನಿಯರ ಮೇರೆಯಾಗಿರುವ ಯಬ್ಬೋಕ್ ಹೊಳೆಯವರೆಗಿರುವ ಗಿಲ್ಯಾದಿನ ಅರ್ಧಪ್ರಾಂತ್ಯವು
ಯೆಹೋಶುವ 12 : 3 (IRVKN)
ಹಾಗೂ ಯೊರ್ದನ್ ನದಿಯ ಪೂರ್ವದಲ್ಲಿ ಕಿನ್ನೆರೋತ್ ಸಮುದ್ರದಿಂದ ಲವಣಸಮುದ್ರವೆನಿಸಿಕೊಳ್ಳುವ ಅರಾಬ್ ಸಮುದ್ರದ ಹತ್ತಿರವಿರುವ ಬೇತಯೆಷಿಮೋತಿನವರೆಗೂ ದಕ್ಷಿಣದಲ್ಲಿರುವ ಪಿಸ್ಗಾ ಬೆಟ್ಟದ ಬುಡದವರೆಗೂ ಇರುವ ಕಣಿವೆ ಪ್ರದೇಶವು ಇವೇ ಅವನ ರಾಜ್ಯ:
ಯೆಹೋಶುವ 12 : 4 (IRVKN)
ಅಷ್ಟರೋತ್ ಹಾಗೂ ಎದ್ರೈ ಎಂಬ ಊರುಗಳಲ್ಲಿ ವಾಸವಾಗಿದ್ದ ರೆಫಾಯರ ವಂಶಸ್ಥರು ಬಾಷಾನಿನ ಅರಸನೂ ಆದ ಓಗನು ಸಂಹರಿಸಲ್ಪಟ್ಟವರಲ್ಲಿ ಎರಡನೆಯವನು.
ಯೆಹೋಶುವ 12 : 5 (IRVKN)
ಇವನ ರಾಜ್ಯ ಹೆರ್ಮೋನ್ ಬೆಟ್ಟದ ಮೇಲಿನ ಸೀಮೆ, ಸಲ್ಕಾ ಪಟ್ಟಣವು, ಗೆಷೂರ್ಯರ ಮತ್ತು ಮಾಕತೀಯರ ಮೇರೆವರೆಗೆ ಇದ್ದ ಬಾಷಾನಿನ ಸೀಮೆ, ಹೆಷ್ಬೋನಿನ ಅರಸನಾದ ಸೀಹೋನನ ಮೇರೆಯವರೆಗೆ ಇದ್ದ ಗಿಲ್ಯಾದಿನ ಅರ್ಧ ಪ್ರಾಂತ್ಯದ ವರೆಗಿದ್ದಿತ್ತು.
ಯೆಹೋಶುವ 12 : 6 (IRVKN)
ಯೆಹೋವನ ಸೇವಕನಾದ ಮೋಶೆಯೂ, ಇಸ್ರಾಯೇಲ್ಯರ ಸಹಿತವಾಗಿ ಆ ಇಬ್ಬರನ್ನು ಸೋಲಿಸಿ ಅವರ ರಾಜ್ಯಗಳನ್ನು ರೂಬೇನ್ಯರಿಗೂ, ಗಾದ್ಯರಿಗೂ, ಮನಸ್ಸೆಯ ಅರ್ಧ ಗೋತ್ರದವರಿಗೂ ಸ್ವತ್ತಾಗಿ ಕೊಟ್ಟನು.
ಯೆಹೋಶುವ 12 : 7 (IRVKN)
ಯೆಹೋಶುವನು ಇಸ್ರಾಯೇಲರ ಸಹಿತವಾಗಿ ಯೊರ್ದನ್ ನದಿಯ ಪಶ್ಚಿಮದಲ್ಲಿ ಲೆಬನೋನ್ ಕಣಿವೆಯಲ್ಲಿದ್ದ ಬಾಲ್ಗಾದಿನಿಂದ ಸೇಯೀರಿನ ದಾರಿಯಲ್ಲಿದ್ದ ಹಾಲಾಕ್ ಪರ್ವತದವರೆಗೂ ವಿಸ್ತರಿಸಿಕೊಂಡಿದ್ದ ಬೆಟ್ಟದ ಮೇಲಿನ ಪ್ರದೇಶಗಳು,
ಯೆಹೋಶುವ 12 : 8 (IRVKN)
ಇಳುಕಲ್ಲಿನ ಪ್ರದೇಶಗಳು, ಕಣಿವೆ ಪ್ರದೇಶಗಳು, ಬೆಟ್ಟಗಳ ಬುಡದಲ್ಲಿರುವ ಸೀಮೆಗಳು, ಅರಣ್ಯದ ದಕ್ಷಿಣ ಪ್ರಾಂತ್ಯ ಇವುಗಳನ್ನು ಆಳುತ್ತಿದ್ದ ಹಿತ್ತಿಯ, ಅಮೋರಿಯ, ಕಾನಾನ, ಪೆರಿಜ್ಜೀಯ, ಹಿವ್ವಿಯ, ಯೆಬೂಸಿಯ ಅರಸರನ್ನೂ ಸೋಲಿಸಿ, ಅವರ ದೇಶಗಳನ್ನು ಇಸ್ರಾಯೇಲರ ಕುಲದವರಿಗೆ ಶಾಶ್ವತ ಆಸ್ತಿಯಾಗಿ ಕೊಟ್ಟನು. ಆ ಅರಸರ ಪಟ್ಟಿಯು ಹೇಗೆಂದರೆ,
ಯೆಹೋಶುವ 12 : 9 (IRVKN)
ಯೆರಿಕೋವಿನ ಅರಸನು - 1 ಬೇತೇಲ್ ಬಳಿಯಲ್ಲಿರುವ ಆಯಿ ಎಂಬ ಊರಿನ ಅರಸನು - 1
ಯೆಹೋಶುವ 12 : 10 (IRVKN)
ಯೆರೂಸಲೇಮಿನ ಅರಸನು - 1 ಹೆಬ್ರೋನಿನ ಅರಸನು - 1
ಯೆಹೋಶುವ 12 : 11 (IRVKN)
ಯರ್ಮೂತಿನ ಅರಸನು - 1 ಲಾಕೀಷಿನ ಅರಸನು - 1
ಯೆಹೋಶುವ 12 : 12 (IRVKN)
ಎಗ್ಲೋನಿನ ಅರಸನು - 1 ಗೆಜೆರಿನ ಅರಸನು - 1
ಯೆಹೋಶುವ 12 : 13 (IRVKN)
ದೆಬೀರಿನ ಅರಸನು - 1 ಗೆದೆರಿನ ಅರಸನು - 1
ಯೆಹೋಶುವ 12 : 14 (IRVKN)
ಹೊರ್ಮದ ಅರಸನು - 1 ಅರಾದಿನ ಅರಸನು - 1
ಯೆಹೋಶುವ 12 : 15 (IRVKN)
ಲಿಬ್ನದ ಅರಸನು - 1 ಅದುಲ್ಲಾಮಿನ ಅರಸನು - 1
ಯೆಹೋಶುವ 12 : 16 (IRVKN)
ಮಕ್ಕೇದದ ಅರಸನು - 1 ಬೇತೇಲಿನ ಅರಸನು - 1
ಯೆಹೋಶುವ 12 : 17 (IRVKN)
ತಪ್ಪೂಹದ ಅರಸನು - 1 ಹೇಫೆರಿನ ಅರಸನು - 1
ಯೆಹೋಶುವ 12 : 18 (IRVKN)
ಅಫೇಕದ ಅರಸನು - 1 ಲಷ್ಷಾರೋನಿನ ಅರಸನು - 1
ಯೆಹೋಶುವ 12 : 19 (IRVKN)
ಮಾದೋನಿನ ಅರಸನು - 1 ಹಾಚೋರಿನ ಅರಸನು.
ಯೆಹೋಶುವ 12 : 20 (IRVKN)
ಶಿಮ್ರೋನ್ಮೆರೋನಿನ ಅರಸನು - 1 ಅಕ್ಷಾಫಿನ ಅರಸನು - 1
ಯೆಹೋಶುವ 12 : 21 (IRVKN)
ತಾನಕದ ಅರಸನು - 1 ಮೆಗಿದ್ದೋವಿನ ಅರಸನು - 1
ಯೆಹೋಶುವ 12 : 22 (IRVKN)
ಕೆದೆಷಿನ ಅರಸನು - 1 ಕರ್ಮೆಲ್ ಬೆಟ್ಟದ ಯೊಕ್ನೆಯಾಮದ ಅರಸನು - 1
ಯೆಹೋಶುವ 12 : 23 (IRVKN)
ದೋರ್ ಪ್ರಾಂತ್ಯದ ದೋರಿನ ಅರಸನು - 1 ಗಿಲ್ಗಾಲಿನ ಅರಸನು - 1
ಯೆಹೋಶುವ 12 : 24 (IRVKN)
ತಿರ್ಚದ ಅರಸನು - 1 ಒಟ್ಟು 31 ಮಂದಿ ಅರಸರು.

1 2 3 4 5 6 7 8 9 10 11 12 13 14 15 16 17 18 19 20 21 22 23 24