ಯೆರೆಮಿಯ 6 : 1 (IRVKN)
ಯೆರೂಸಲೇಮಿನ ಜನರಿಗೆ ಎಚ್ಚರಿಕೆ
ಯೆರೆಮಿಯ 6 : 2 (IRVKN)
“ಬೆನ್ಯಾಮೀನ್ ಕುಲದವರೇ, ಯೆರೂಸಲೇಮಿನೊಳಗಿಂದ ವಲಸೆ ಹೋಗಿರಿ, ತೆಕೋವದಲ್ಲಿ ಕೊಂಬನ್ನೂದಿರಿ, ಬೇತ್ ಹಕ್ಕೆರೆಮಿನಲ್ಲಿ ಧ್ವಜವನ್ನೆತ್ತಿರಿ, ಏಕೆಂದರೆ ಉತ್ತರ ದಿಕ್ಕಿನಿಂದ ಅತಿನಾಶಕರವಾದ ವಿಪತ್ತು ತಲೆದೋರುತ್ತಿದೆ. ಚೀಯೋನ್ ನಗರಿಯು ಸೊಂಪಾದ ಹಸುರುಗಾವಲಿಗೆ ಸಮಾನವಾಗಿ ನನಗೆ ಕಾಣುತ್ತದೆ.
ಯೆರೆಮಿಯ 6 : 3 (IRVKN)
ಕುರುಬರು ತಮ್ಮ ಹಿಂಡುಗಳೊಡನೆ ಅಲ್ಲಿಗೆ ಬಂದು ಅದರೆದುರಿಗೆ ಸುತ್ತಲೂ ತಮ್ಮ ಗುಡಾರಗಳನ್ನು ಹಾಕುವರು; ಪ್ರತಿಯೊಬ್ಬನೂ ತನ್ನ ತನ್ನ ಸ್ಥಳದಲ್ಲಿ ಮೇಯಿಸಿಬಿಡುವನು.
ಯೆರೆಮಿಯ 6 : 4 (IRVKN)
ಇವರು, ಚೀಯೋನಿಗೆ ವಿರುದ್ಧವಾಗಿ ಸನ್ನದ್ಧರಾಗಿರಿ, ಏಳಿರಿ, ಮಧ್ಯಾಹ್ನಕ್ಕೆ ಅದರ ಮೇಲೆ ನುಗ್ಗುವ! ಅಯ್ಯೋ, ಇದೇನು! ನಮಗೆ ಹೊತ್ತು ತಿರುಗಿತಲ್ಲಾ, ಸಂಜೆಯ ನೆರಳುಗಳು ಉದ್ದವಾದವು ಅನ್ನುವರು.
ಯೆರೆಮಿಯ 6 : 5 (IRVKN)
ಎದ್ದು ರಾತ್ರಿಯಲ್ಲಿ ಅದರ ಮೇಲೆ ಬಿದ್ದು ಅಲ್ಲಿನ ಅರಮನೆಗಳನ್ನು ಹಾಳುಮಾಡೋಣ ಅಂದುಕೊಳ್ಳುವರು.
ಯೆರೆಮಿಯ 6 : 6 (IRVKN)
ಸೇನಾಧೀಶ್ವರನಾದ ಯೆಹೋವನು, ಮರಗಳನ್ನು ಕಡಿದುಬಿಡಿರಿ, ಯೆರೂಸಲೇಮಿನ ಎದುರಿಗೆ ದಿಬ್ಬಹಾಕಿರಿ. ಇದೇ ನೀವು ದಂಡಿಸತಕ್ಕ ಪಟ್ಟಣ; ಅದರೊಳಗೆ ಬರೀ ದಬ್ಬಾಳಿಕೆಯೇ ತುಂಬಿದೆ.
ಯೆರೆಮಿಯ 6 : 7 (IRVKN)
ತೊಟ್ಟಿಯು ತನ್ನಲ್ಲಿನ ನೀರನ್ನು ತಿಳಿಯಾಗಿ ಇಟ್ಟುಕೊಳ್ಳುವಂತೆ ಈ ಪಟ್ಟಣವು ತನ್ನಲ್ಲಿನ ದುಷ್ಟತನವನ್ನು ನಿಚ್ಚಳವಾಗಿ ಇಟ್ಟುಕೊಂಡಿದೆ. ಅಲ್ಲಿ ಬಲಾತ್ಕಾರದ ಮತ್ತು ಕೊಳ್ಳೆಯ ಸುದ್ದಿಯೇ ಕೇಳಿಬರುತ್ತದೆ; ರೋಗಗಳೂ, ಗಾಯಗಳೂ ಸದಾ ನನ್ನ ಕಣ್ಣಿಗೆ ಬೀಳುತ್ತವೆ.
ಯೆರೆಮಿಯ 6 : 8 (IRVKN)
ಯೆರೂಸಲೇಮೇ, ನಾನು ನಿನ್ನನ್ನು ಅಗಲಿ ನಾಶಪಡಿಸಿ ನಿರ್ಜನ ದೇಶವನ್ನಾಗಿ ಮಾಡದಂತೆ ರಕ್ಷಿಸಿಕೊಳ್ಳಲು ಶಿಕ್ಷಣವನ್ನು ಹೊಂದು ಎಂದು ಹೇಳಿದ್ದಾನೆ.
ಯೆರೆಮಿಯ 6 : 9 (IRVKN)
ಸೇನಾಧೀಶ್ವರನಾದ ಯೆಹೋವನು, ಇಸ್ರಾಯೇಲಿನ ಶೇಷವನ್ನು ದ್ರಾಕ್ಷಿಯ ಹಕ್ಕಲನ್ನೋ ಎಂಬಂತೆ ಆಯಬೇಕು; ದ್ರಾಕ್ಷಿಯ ಹಣ್ಣನ್ನು ಕೀಳುವವನಂತೆ ನೀನು ನಿನ್ನ ಕೈಯನ್ನು ತಿರುಗಿ ರೆಂಬೆಗಳಲ್ಲಿ ಹಾಕು ಎಂದು ಹೇಳುತ್ತಾನೆ.
ಯೆರೆಮಿಯ 6 : 10 (IRVKN)
ದಂಗೆಕೋರ ಯೆಹೂದ ನಾನು, ಯಾರ ಸಂಗಡ ಮಾತನಾಡಿ ಅವರು ಗಮನಿಸುವಂತೆ ಸಾಕ್ಷಿಕೊಡಲಿ? ಇಗೋ, ಅವರ ಕಿವಿ ಮುಚ್ಚಲ್ಪಟ್ಟಿವೆ.* ಅವರ ಕಿವಿ ಮುಚ್ಚಲ್ಪಟ್ಟಿವೆ. ಅವರ ಕಿವಿಗಳು ಸುನ್ನತಿ ಇಲ್ಲದವು, ಅಯ್ಯೋ, ಯೆಹೋವನ ಮಾತು ಅವರಿಗೆ ತಿರಸ್ಕಾರ, ಅದರಲ್ಲಿ ಅವರಿಗೆ ಆನಂದವೇ ಇಲ್ಲ.
ಯೆರೆಮಿಯ 6 : 11 (IRVKN)
ಆದಕಾರಣ ಯೆಹೋವನ ರೋಷವು ನನ್ನಲ್ಲಿ ತುಂಬಿ ತುಳುಕುತ್ತದೆ; ತಡೆದು ತಡೆದು ನನಗೆ ಸಾಕಾಯಿತು. ಬೀದಿಯಲ್ಲಿನ ಮಕ್ಕಳ ಮೇಲೂ, ಯುವಕರ ಸಂಘದ ಮೇಲೂ ಅದನ್ನು ಹೊಯ್ದು ಬಿಡಬೇಕು. ಗಂಡನೂ, ಹೆಂಡತಿಯೂ, ಮುದುಕನೂ, ಮುಪ್ಪಿನ ಮುದುಕನೂ ಅಂತು ಎಲ್ಲರೂ ಅಪಹರಿಸಲ್ಪಡುವರು.
ಯೆರೆಮಿಯ 6 : 12 (IRVKN)
ಅವರ ಹೆಂಡತಿ, ಮನೆ, ಹೊಲ ಮತ್ತು ಗದ್ದೆ ಇವೆಲ್ಲವುಗಳು ಅನ್ಯರ ಪಾಲಾಗುವವು. ದೇಶದ ನಿವಾಸಿಗಳ ಮೇಲೆ ಕೈಮಾಡುವೆನಷ್ಟೆ ಎಂದು ಯೆಹೋವನು ಹೇಳಿದ್ದಾನೆ.
ಯೆರೆಮಿಯ 6 : 13 (IRVKN)
ಚಿಕ್ಕವರು ಮೊದಲುಗೊಂಡು ದೊಡ್ಡವರ ತನಕ ಎಲ್ಲರೂ ಬಾಚಿಕೊಳ್ಳುತ್ತಲೇ ಇದ್ದಾರೆ; ಪ್ರವಾದಿಗಳು ಮೊದಲುಗೊಂಡು ಯಾಜಕರವರೆಗೆ ಸಕಲರು ಮೋಸಮಾಡುತ್ತಾರೆ.
ಯೆರೆಮಿಯ 6 : 14 (IRVKN)
ಸಮಾಧಾನವಿಲ್ಲದಿದ್ದರೂ, ಸಮಾಧಾನ ಎಂದು ಹೇಳಿ ನನ್ನ ಜನರ ಗಾಯವನ್ನು ಮೇಲೆ ಮೇಲೆ ವಾಸಿಮಾಡಿದ್ದಾರೆ.
ಯೆರೆಮಿಯ 6 : 15 (IRVKN)
ಅಸಹ್ಯಕಾರ್ಯಗಳನ್ನು ಮಾಡಿ ಅವಮಾನಕ್ಕೆ ಗುರಿಯಾದರೂ ಎಳ್ಳಷ್ಟೂ ನಾಚಿಕೆಪಡಲಿಲ್ಲ, ಲಜ್ಜೆಯ ಗಂಧವನ್ನೂ ತಿಳಿಯಲಿಲ್ಲ. ಆದಕಾರಣ ನಾನು ದಂಡಿಸುವ ಸಮಯದಲ್ಲಿ ಅವರು ಮುಗ್ಗರಿಸುವರು, ಬೀಳುವವರ ಸಂಗಡ ಬಿದ್ದೇ ಹೋಗುವರು” ಎಂದು ಯೆಹೋವನು ನುಡಿಯುತ್ತಾನೆ.
ಯೆರೆಮಿಯ 6 : 16 (IRVKN)
ಯೆಹೋವನ ಮಾರ್ಗವನ್ನು ತಿರಸ್ಕರಿಸಿದ ಯೆಹೂದ ಯೆಹೋವನು, “ದಾರಿಗಳು ಕೂಡುವ ಸ್ಥಳದಲ್ಲಿ ನಿಂತುಕೊಂಡು ನೋಡಿ ಪುರಾತನ ಮಾರ್ಗಗಳು ಯಾವುವು. ಆ ಸನ್ಮಾರ್ಗವು ಎಲ್ಲಿ? ಎಂದು ವಿಚಾರಿಸಿ ಅದರಲ್ಲೇ ನಡೆಯಿರಿ; ಇದರಿಂದ ನಿಮ್ಮ ಆತ್ಮಗಳಿಗೆ ವಿಶ್ರಾಂತಿ ಸಿಕ್ಕುವುದು ಎಂದು ಅಪ್ಪಣೆಕೊಟ್ಟಾಗ ಅವರು ‘ಅದರಲ್ಲಿ ನಾವು ನಡೆಯುವುದೇ ಇಲ್ಲ’ ಎಂದರು.
ಯೆರೆಮಿಯ 6 : 17 (IRVKN)
‘ತುತ್ತೂರಿಯ ಶಬ್ದವನ್ನು ಕೇಳಿರಿ’ ಎಂದು ನಾನು ಅವರ ಮೇಲೆ ಕಾವಲುಗಾರರನ್ನು ನೇಮಿಸಲು, ‘ನಾವು ಕೇಳುವುದಿಲ್ಲ’ ಎಂದು ಹೇಳಿದರು.
ಯೆರೆಮಿಯ 6 : 18 (IRVKN)
ಆದಕಾರಣ, ಜನಾಂಗಗಳೇ, ಕೇಳಿರಿ! ಜನಸಮೂಹವೇ, ಅವರಲ್ಲಿ ನಡೆದದ್ದನ್ನು ಮನಸ್ಸಿಗೆ ತಂದುಕೋ!
ಯೆರೆಮಿಯ 6 : 19 (IRVKN)
ಭೂಲೋಕವೇ, ಕೇಳು! ಆಹಾ, ಈ ಜನರು ನನ್ನ ಮಾತುಗಳನ್ನು ಕೇಳದೆ, ನನ್ನ ಧರ್ಮಬೋಧನೆಯನ್ನು ಅಸಡ್ಡೆಮಾಡಿದ್ದರಿಂದ ಇವರ ಆಲೋಚನೆಗಳ ಫಲವಾದ ಕೇಡನ್ನು ಇವರ ಮೇಲೆ ಬರಮಾಡುವೆನು.
ಯೆರೆಮಿಯ 6 : 20 (IRVKN)
ನೀವು ಶೆಬದ ಧೂಪವನ್ನು ಮತ್ತು ದೂರ ದೇಶದ ಒಳ್ಳೆಯ ಬಜೆಯನ್ನು ನನಗೆ ಅರ್ಪಿಸುವುದರಿಂದ ಏನು ಪ್ರಯೋಜನ? ನಿಮ್ಮ ಹೋಮಗಳು ನನಗೆ ಮೆಚ್ಚಿಕೆಯಲ್ಲ, ನಿಮ್ಮ ಯಜ್ಞಗಳು ನನಗೆ ಇಷ್ಟವಿಲ್ಲ.
ಯೆರೆಮಿಯ 6 : 21 (IRVKN)
ಆದಕಾರಣ ಇಗೋ, ನಾನು ಈ ಜನರ ಮುಂದೆ ಅಡ್ಡಿಆತಂಕಗಳನ್ನು ಒಡ್ಡುವೆನು. ತಂದೆ ಮಕ್ಕಳು ಅವುಗಳನ್ನೂ ಎಡವುವರು, ನೆರೆಹೊರೆಯವರೂ ನಾಶವಾಗುವರು ಇದೇ ಯೆಹೋವನಾದ ನನ್ನ ಮಾತು” ಎಂದು ನುಡಿಯುತ್ತಾನೆ.
ಯೆರೆಮಿಯ 6 : 22 (IRVKN)
ಉತ್ತರ ದಿಕ್ಕಿನಿಂದ ಆಕ್ರಮಣ “ಆಹಾ, ಉತ್ತರ ದಿಕ್ಕಿನಿಂದ ಜನಸಮೂಹ ಬರುತ್ತದೆ, ಮಹಾ ಜನಾಂಗವು ಎಬ್ಬಿಸಲ್ಪಟ್ಟು ಲೋಕದ ಕಟ್ಟಕಡೆಯಿಂದ ಹೊರಡುತ್ತದೆ.
ಯೆರೆಮಿಯ 6 : 23 (IRVKN)
ಬಿಲ್ಲನ್ನೂ, ಈಟಿಯನ್ನೂ ಹಿಡಿದುಕೊಂಡಿದ್ದಾರೆ, ಅವರು ಕ್ರೂರರು, ನಿಷ್ಕರುಣಿಗಳು; ಅವರ ಧ್ವನಿಯು ಸಮುದ್ರದಂತೆ ಬೋರ್ಗರೆಯುತ್ತದೆ, ಕುದುರೆಗಳನ್ನು ಹತ್ತಿದ್ದಾರೆ. ಚೀಯೋನ್ ನಗರಿಯೇ, ಆ ಸೈನ್ಯವು ಶೂರನಂತೆ ನಿನ್ನ ಮೇಲೆ ಯುದ್ಧಸನ್ನದ್ಧವಾಗಿದೆ” ಎಂದು ಯೆಹೋವನು ನುಡಿಯುತ್ತಾನೆ.
ಯೆರೆಮಿಯ 6 : 24 (IRVKN)
ನಾವು ಅದರ ಸುದ್ದಿಯನ್ನು ಕೇಳಿದೆವು, ನಮ್ಮ ಕೈಗಳು ಜೋಲುಬಿದ್ದವು, ಪ್ರಸವವೇದನೆಯಂತಿರುವ ಯಾತನೆಯು ನಮ್ಮನ್ನು ಹಿಡಿದಿದೆ.
ಯೆರೆಮಿಯ 6 : 25 (IRVKN)
ಊರ ಹೊರಗೆ ಹೋಗಬೇಡಿರಿ, ದಾರಿಯಲ್ಲಿ ನಡೆಯಬೇಡಿರಿ; ಶತ್ರುವಿನ ಕತ್ತಿಯಿದೆ, ಸುತ್ತುಮುತ್ತಲು ದಿಗಿಲು.
ಯೆರೆಮಿಯ 6 : 26 (IRVKN)
ನನ್ನ ಪ್ರಜೆಯೆಂಬ ಯುವತಿಯೇ, ಗೋಣಿತಟ್ಟನ್ನು ಸುತ್ತಿಕೊಂಡು, ಬೂದಿಯಲ್ಲಿ ಬಿದ್ದು ಹೊರಳಾಡು. ಇದ್ದೊಬ್ಬ ಮಗನನ್ನು ಕಳೆದುಕೊಂಡಂತೆ ದುಃಖಪಟ್ಟು ಘೋರಪ್ರಲಾಪ ಮಾಡು; ಕೊಳ್ಳೆಗಾರನು ತಟ್ಟನೆ ನಮ್ಮ ಮೇಲೆ ಬೀಳುವನಷ್ಟೆ.
ಯೆರೆಮಿಯ 6 : 27 (IRVKN)
ಯೆಹೋವನು ನನಗೆ, “ನಾನು ನಿನ್ನನ್ನು ನನ್ನ ಜನವೆಂಬ ಅದಿರಿಗೆ ಶೋಧಕನನ್ನಾಗಿ ನೇಮಿಸಿದ್ದೇನೆ; ನೀನು ಅವರ ನಡತೆಯನ್ನು ಪರೀಕ್ಷಿಸಿ ತಿಳಿದುಕೊಳ್ಳಬೇಕು.
ಯೆರೆಮಿಯ 6 : 28 (IRVKN)
ಅವರೆಲ್ಲರೂ ಕೇವಲ ದ್ರೋಹಿಗಳು, ಚಾಡಿ ಹೇಳುತ್ತಾ ತಿರುಗಾಡುವವರು. ಅವರು ತಾಮ್ರ ಮತ್ತು ಕಬ್ಬಿಣ, ಅವರೆಲ್ಲರೂ ಭ್ರಷ್ಟರೇ.
ಯೆರೆಮಿಯ 6 : 29 (IRVKN)
ತಿದಿಯು (ಶ್ವಾಸಕೋಶ) ಬುಸುಬುಸುಗುಟ್ಟುತ್ತದೆ, ಸೀಸವು ಉರಿಯಿಂದ ಸುಟ್ಟುಹೋಗುತ್ತದೆ. ಅಕ್ಕಸಾಲಿಗನು ಎಷ್ಟು ಶೋಧಿಸಿದರೂ ನಿಷ್ಪ್ರಯೋಜನ, ಕಲ್ಮಷವು ತೆಗೆಯಲ್ಪಡುವುದಿಲ್ಲ.
ಯೆರೆಮಿಯ 6 : 30 (IRVKN)
ಯೆಹೋವನಾದ ನಾನು ಇವರನ್ನು ನೂಕಿಬಿಟ್ಟಿದ್ದರಿಂದ ಇವರು ‘ಕಂದು ಬೆಳ್ಳಿ’ ಎನಿಸಿಕೊಳ್ಳುವರು” ಎಂದು ಹೇಳಿದ್ದಾನೆ.

1 2 3 4 5 6 7 8 9 10 11 12 13 14 15 16 17 18 19 20 21 22 23 24 25 26 27 28 29 30