ಯಾಕೋಬನು 3 : 1 (IRVKN)
{ನಾಲಿಗೆಯನ್ನು ಹತೋಟಿಯಲ್ಲಿಡುವ ವಿಷಯ} [PS] [* ಮತ್ತಾ 23:8; ರೋಮಾ. 2:20,21; 1 ತಿಮೊ. 1:7:] ನನ್ನ ಸಹೋದರರೇ, ಬೋಧಕರಾದ ನಮಗೆ ಕಠಿಣವಾದ ತೀರ್ಪು ಆಗುವುದೆಂದು ತಿಳಿದುಕೊಂಡು ಬಹಳ ಜನರು ಬೋಧಕರಾಗಬೇಡಿರಿ.
ಯಾಕೋಬನು 3 : 2 (IRVKN)
[† 1 ಅರಸು. 8:46; ಜ್ಞಾ. 20:9; ಪ್ರಸಂಗಿ. 7:20:] ಅನೇಕ ವಿಷಯಗಳಲ್ಲಿ ನಾವೆಲ್ಲರೂ ತಪ್ಪುಮಾಡುವವರಾಗಿದ್ದಾರೆ. [‡ ಮತ್ತಾ 5:22; 12:37:] ಒಬ್ಬನು ಮಾತಿನಲ್ಲಿ ತಪ್ಪಿ ನಡೆಯದಿದ್ದರೆ ಅವನು ಸರ್ವಸುಗುಣವುಳ್ಳವನೂ [§ ಯಾಕೋಬ. 1:26:] ತನ್ನ ಇಡೀ ದೇಹವನ್ನೆಲ್ಲಾ ಸ್ವಾಧೀನಪಡಿಸಿಕೊಳ್ಳುವುದಕ್ಕೆ ಸಮರ್ಥನೂ ಆಗಿದ್ದಾನೆ.
ಯಾಕೋಬನು 3 : 3 (IRVKN)
ಕುದುರೆಗಳು ನಮ್ಮ ಇಚ್ಚೆಯಂತೆ ನಡೆಯುವ ಹಾಗೆ [* ಕೀರ್ತ 32:9:] ಅವುಗಳ ಬಾಯಿಗೆ ಕಡಿವಾಣ ಹಾಕುತ್ತೇವೆ. ಆಗ ಅವುಗಳ ದೇಹವನ್ನೆಲ್ಲಾ ನಮಗೆ ಬೇಕಾದ ಕಡೆಗೆ ತಿರುಗಿಸುವುದಕ್ಕೆ ಆಗುತ್ತದೆ.
ಯಾಕೋಬನು 3 : 4 (IRVKN)
ಹಡಗುಗಳನ್ನು ಸಹ ಗಮನಿಸಿರಿ. ಅವು ಬಹು ದೊಡ್ಡವುಗಳಾಗಿದ್ದರೂ ಬಲವಾದ ಗಾಳಿಯಿಂದ ದಿಕ್ಕು ತಪ್ಪುತ್ತದೆ. ಆದರೂ ನಾವಿಕನು ಬಹಳ ಸಣ್ಣ ಚುಕ್ಕಾಣಿಯಿಂದ ಅವುಗಳನ್ನು ತಾನು ಹೋಗ ಬೇಕಾದ ಕಡೆಗೆ ತಿರುಗಿಸಿಕೊಳ್ಳುತ್ತಾನೆ.
ಯಾಕೋಬನು 3 : 5 (IRVKN)
ಹಾಗೆಯೇ ನಾಲಿಗೆಯು ಕೂಡ ಚಿಕ್ಕ ಅಂಗವಾಗಿದ್ದರೂ [† ಕೀರ್ತ 12:3,4; 73:8,9 ] ದೊಡ್ಡ ಕಾರ್ಯಗಳನ್ನು ಮಾಡುವ ಬಗ್ಗೆ ಕೊಚ್ಚಿಕೊಳ್ಳುತ್ತದೆ. ಬೆಂಕಿಯ ಸಣ್ಣ ಕಿಡಿ ದೊಡ್ಡ ಕಾಡನ್ನೂ ಸುಡುತ್ತದೆ.
ಯಾಕೋಬನು 3 : 6 (IRVKN)
[‡ ಕೀರ್ತ 120:2-4; ಜ್ಞಾ. 16:27:] ನಾಲಿಗೆಯೂ ಸಹ ಬೆಂಕಿಯೇ. ನಾಲಿಗೆಯೂ ಅಧರ್ಮ ಲೋಕರೂಪವಾಗಿ ನಮ್ಮ ಅಂಗಗಳ ನಡುವೆ ಇಡಲ್ಪಟ್ಟಿದೆ. [§ ಮತ್ತಾ 15:18:] ಅದು ದೇಹವನ್ನೆಲ್ಲಾ ಕೆಡಿಸುತ್ತದೆ. ತಾನೇ ನರಕವೆಂಬ ಬೆಂಕಿ ಹೊತ್ತಿಸಿಕೊಳ್ಳುತ್ತಾ ಇಡೀ ಬಾಳಿಗೆ ಬೆಂಕಿ ಹಚ್ಚುತ್ತದೆ. [PE][PS]
ಯಾಕೋಬನು 3 : 7 (IRVKN)
ಸಕಲ ಜಾತಿಯ ಮೃಗ, ಪಕ್ಷಿ, [* ಸರೀಸೃಪಗಳು] ಹರಿದಾಡುವ ಜಂತು, ಜಲಚರಗಳನ್ನೂ ಮನುಷ್ಯರು ಹತೋಟಿಗೆ ತರುವುದುಂಟು ಮತ್ತು ತಂದದ್ದುಂಟು.
ಯಾಕೋಬನು 3 : 8 (IRVKN)
ಆದರೆ ನಾಲಿಗೆಯನ್ನು ಯಾವ ಮಾನವನೂ ಹತೋಟಿಗೆ ತರಲಾರನು. ಅದು ಸುಮ್ಮನಿರಲಾರದ ಕೆಡುಕಾಗಿದೆ. [† ಕೀರ್ತ 140. 3; ರೋಮಾ. 3:13] ಮರಣಕರವಾದ ವಿಷದಿಂದ ತುಂಬಿದೆ.
ಯಾಕೋಬನು 3 : 9 (IRVKN)
ಅದೇ ನಾಲಿಗೆಯಿಂದ ನಮ್ಮ ಕರ್ತನಾದ ತಂದೆಯನ್ನು ಕೊಂಡಾಡುತ್ತೇವೆ, ಅದುದರಿಂದಲೇ [‡ ಆದಿ 1:26:] ದೇವರ ಹೋಲಿಕೆಗೆ ಸಮಾನವಾಗಿ ಸೃಷ್ಟಿಸಲ್ಪಟ್ಟ ಮನುಷ್ಯರನ್ನು ನಾವು ಶಪಿಸುತ್ತೇವೆ.
ಯಾಕೋಬನು 3 : 10 (IRVKN)
ಅದೇ ಬಾಯಿಂದ ಸ್ತುತಿ ಮತ್ತು ಶಾಪ ಎರಡೂ ಬರುತ್ತವೆ. ನನ್ನ ಸಹೋದರರೇ,
ಯಾಕೋಬನು 3 : 11 (IRVKN)
ಒಂದೇ ಬುಗ್ಗೆಯಿಂದ ಸಿಹಿ ನೀರು ಮತ್ತು ಕಹಿ ನೀರು ಎರಡು ಹೊರಡುವುದುಂಟೇ?
ಯಾಕೋಬನು 3 : 12 (IRVKN)
ನನ್ನ ಸಹೋದರರೇ, ಅಂಜೂರದ ಮರವು ಎಣ್ಣೆ ಮರದ ಕಾಯಿ ಬಿಡುವುದೋ? ದ್ರಾಕ್ಷಿ ಬಳ್ಳಿಯಲ್ಲಿ ಅಂಜೂರದ ಹಣ್ಣು ಬಿಡುವುದೋ? ಹಾಗೆಯೇ ಉಪ್ಪುನೀರಿನ ಬುಗ್ಗೆಯಿಂದ ಸಿಹಿ ನೀರು ಬರುವುದಿಲ್ಲ. [PS]
ಯಾಕೋಬನು 3 : 13 (IRVKN)
{ನಿಜವಾದ ಜ್ಞಾನದ ಲಕ್ಷಣಗಳು} [PS] ನಿಮ್ಮಲ್ಲಿ ಜ್ಞಾನಿಯೂ, ಬುದ್ಧಿವಂತನೂ ಯಾರು? ಅಂಥವನು [§ ಯಾಕೋಬ. 2:18:] ಒಳ್ಳೆಯ ನಡತೆಯಿಂದ, [* ಯಾಕೋಬ. 1:21:] ಜ್ಞಾನದ ಲಕ್ಷಣವಾದ ವಿನಯಶೀಲತೆಯ ಕ್ರಿಯೆಗಳಿಂದ ಅದನ್ನು ತೋರಿಸಲಿ.
ಯಾಕೋಬನು 3 : 14 (IRVKN)
ಆದರೆ [† ವ. 16; 2 ಕೊರಿ 12:20; ಗಲಾ. 5:20; ಫಿಲಿ. 1:17; 2:3:] ತೀಕ್ಷ್ಣವಾದ ಮತ್ಸರವೂ, ಸ್ವಾರ್ಥಾಭಿಲಾಶೆಯೂ ನಿಮ್ಮ ಹೃದಯದೊಳಗೆ ಇರುವುದಾದರೆ ನೀವು ಸತ್ಯಕ್ಕೆ ವಿರೋಧವಾಗಿ ಸುಳ್ಳಾಡಿ ಹೊಗಳಿಕೊಳ್ಳಬೇಡಿರಿ.
ಯಾಕೋಬನು 3 : 15 (IRVKN)
[‡ ಯಾಕೋಬ. 1:17:] ಅದು ಮೇಲಿಂದ ಬಂದ ಜ್ಞಾನವಲ್ಲ. ಅದು ಭೂಸಂಬಂಧವಾದದ್ದು, ಲೌಕಿಕವಾದುದು, [§ 2 ಥೆಸ. 2:9,10; 1 ತಿಮೊ. 4:1; ಪ್ರಕ 2:24:] ದೆವ್ವಗಳಿಗೆ ಸಂಬಂಧಪಟ್ಟದ್ದು.
ಯಾಕೋಬನು 3 : 16 (IRVKN)
ಮತ್ಸರವೂ, ಹಗೆತನವೂ ಇರುವ ಕಡೆ ಗೊಂದಲಗಳೂ, ಸಕಲ ವಿಧದ ನೀಚ ಕೃತ್ಯಗಳೂ ಇರುವವು.
ಯಾಕೋಬನು 3 : 17 (IRVKN)
ಆದರೆ [* 1 ಕೊರಿ 2:6,7:] ಮೇಲಿಂದ ಬರುವ ಜ್ಞಾನವು ಮೊದಲು ಪರಿಶುದ್ಧವಾದದ್ದು ಆಮೇಲೆ [† ಇಬ್ರಿ. 12:11:] ಸಮಾಧಾನಕರವಾದದ್ದು, ವಿನಯವುಳ್ಳದ್ದು, ಸಂತೋಷವಾಗಿ ಒಪ್ಪಿಕೊಳ್ಳುವಂಥದ್ದು, [‡ ಲೂಕ 6:36:] ಕರುಣೆ ಮತ್ತು ಒಳ್ಳೆ ಫಲಗಳಿಂದ ತುಂಬಿರುವಂಥದ್ದು, ಪಕ್ಷಪಾತವಿಲ್ಲದ್ದು, [§ ರೋಮಾ. 12:9:] ಪ್ರಾಮಾಣಿಕವಾದ್ದದು ಆಗಿದೆ.
ಯಾಕೋಬನು 3 : 18 (IRVKN)
[* ಮತ್ತಾ 5:9:] ಸಮಾಧಾನವನ್ನು ಉಂಟುಮಾಡುವವರು ಸಮಾಧಾನವೆಂಬ ಬೀಜವನ್ನು [† ಗಲಾ. 6:7,8:] ಬಿತ್ತಿ ನೀತಿಯೆಂಬ ಫಲವನ್ನು ಕೊಯ್ಯುವರು. [PE]
❮
❯