ಯಾಕೋಬನು 2 : 1 (IRVKN)
{ಪಕ್ಷಪಾತವನ್ನು ಕುರಿತದ್ದು} [PS] ನನ್ನ ಸಹೋದರರೇ, [* 1 ಕೊರಿ 2:8,] ಮಹಿಮೆಯುಳ್ಳ ನಮ್ಮ ಕರ್ತನಾದ ಯೇಸು ಕ್ರಿಸ್ತನಲ್ಲಿ ನಂಬಿಕೆಯಿಟ್ಟವರಾದ ನೀವು [† ವ. 9; ಯಾಜ 19:15; ಧರ್ಮೋ 1:17; 10:17; ಜ್ಞಾ. 24:23; ರೋಮಾ. 2:11; ಎಫೆ 6:9:] ಪಕ್ಷಪಾತಿಗಳಾಗಿರಬಾರದು.
ಯಾಕೋಬನು 2 : 2 (IRVKN)
ಹೇಗೆಂದರೆ ಒಬ್ಬ ಮನುಷ್ಯನು ಚಿನ್ನದ ಉಂಗುರಗಳನ್ನು ಮತ್ತು ಉತ್ತಮವಾದ ವಸ್ತ್ರಗಳನ್ನೂ ಹಾಕಿಕೊಂಡು ನಿಮ್ಮ ಸಭೆಯೊಳಗೆ ಬಂದಾಗ ಮತ್ತು ಒಬ್ಬ ಬಡ ಮನುಷ್ಯನು ಕೊಳಕು ಬಟ್ಟೆಗಳನ್ನು ಧರಿಸಿಕೊಂಡು ಬಂದಾಗ,
ಯಾಕೋಬನು 2 : 3 (IRVKN)
ನೀವು ಉತ್ತಮವಾದ ವಸ್ತ್ರಗಳನ್ನು ಧರಿಸಿಕೊಂಡು ಬಂದಿರುವವನನ್ನು ಗೌರವದಿಂದ ನೋಡಿ ಅವನಿಗೆ “ನೀವು ಇಲ್ಲಿ ಈ ಗೌರವ ಆಸನದಲ್ಲಿ ಕುಳಿತುಕೊಳ್ಳಿರಿ” ಎಂತಲೂ, ಆ ಬಡ ಮನುಷ್ಯನಿಗೆ [‡ ಜ್ಞಾ. 18:23:] “ನೀನು ಅಲ್ಲಿ ನಿಂತುಕೋ” ಇಲ್ಲವೇ “ಇಲ್ಲಿ ನನ್ನ ಕಾಲ್ಮಣೆಯ ಬಳಿ ಕುಳಿತುಕೋ” ಎಂತಲೂ ಹೇಳಿದರೆ,
ಯಾಕೋಬನು 2 : 4 (IRVKN)
ನೀವು ನಿಮ್ಮ ನಿಮ್ಮಲ್ಲಿ [§ ಯೋಹಾ 7:24:] ಭೇದಭಾವ ಮಾಡುವವರಾಗಿದ್ದು, ತಾರತಮ್ಯ ಆಲೋಚನೆಗಳಂತೆ ನಡೆಯುವ ನಿರ್ಧಾರ ಮಾಡುವವರಾಗಿರುತ್ತೀರಿ ಅಲ್ಲವೇ? [PE][PS]
ಯಾಕೋಬನು 2 : 5 (IRVKN)
ನನ್ನ ಪ್ರಿಯ ಸಹೋದರರೇ, ಕೇಳಿರಿ ದೇವರು [* 1 ಕೊರಿ 1:27,28; ಯೋಬ. 34:19:] ಈ ಲೋಕದಲ್ಲಿನ ಬಡವರನ್ನು [† 2 ಕೊರಿ 8:9; ಪ್ರಕ 2:9; ಲೂಕ 12:21:] ನಂಬಿಕೆಯಲ್ಲಿ ಐಶ್ವರ್ಯವಂತರನ್ನಾಗಿಯೂ, [‡ ಯಾಕೋಬ. 1:12:] ತನ್ನನ್ನು ಪ್ರೀತಿಸುವವರಿಗೆ [§ ಮತ್ತಾ 5:3; ಲೂಕ 6:20; 12:32:] ತಾನು ವಾಗ್ದಾನ ಮಾಡಿದ ರಾಜ್ಯಕ್ಕೆ ಬಾಧ್ಯರಾಗಿಯೂ ಇರಬೇಕೆಂದು ಆರಿಸಿಕೊಳ್ಳಲಿಲ್ಲವೇ?
ಯಾಕೋಬನು 2 : 6 (IRVKN)
ನೀವಾದರೋ [* 1 ಕೊರಿ 11:22:] ಬಡವರನ್ನು ಅವಮಾನಪಡಿಸಿದ್ದೀರಿ. ನಿಮ್ಮನ್ನು ಬಾಧಿಸಿ [† ಅ. ಕೃ. 8:3; 16:19; 18:12:] ನ್ಯಾಯಸ್ಥಾನದ ಮುಂದೆ ಎಳೆದುಕೊಂಡು ಹೋಗುವವರು ಐಶ್ವರ್ಯವಂತರಲ್ಲವೋ?
ಯಾಕೋಬನು 2 : 7 (IRVKN)
ನೀವು ಕರೆಯಲ್ಪಟ್ಟ ಆ [‡ ಯೆಶಾ 63:19; ಆಮೋ. 9:12; ಅ. ಕೃ. 15:17:] ಶ್ರೇಷ್ಠವಾದ ನಾಮವನ್ನು ದೂಷಿಸುವವರು ಅವರಲ್ಲವೋ? [PE][PS]
ಯಾಕೋಬನು 2 : 8 (IRVKN)
ಆದರೂ ಧರ್ಮಶಾಸ್ತ್ರಕ್ಕೆ ಸರಿಯಾಗಿ [§ ಯಾಜ 19:18:] “ನಿನ್ನ ನೆರೆಯವನನ್ನು ನಿನ್ನಂತೆಯೇ ಪ್ರೀತಿಸಬೇಕು” ಎಂಬ ರಾಜಾಜ್ಞೆಯನ್ನು ನೆರವೇರಿಸುವವರಾದರೆ, ನೀವು ಒಳ್ಳೆಯದನ್ನೇ ಮಾಡುವವರಾಗಿರುವಿರಿ.
ಯಾಕೋಬನು 2 : 9 (IRVKN)
ಒಂದು ವೇಳೆ ಅದನ್ನು ಬಿಟ್ಟು ನೀವು [* ವ. 1:] ಪಕ್ಷಪಾತಿಗಳಾಗಿದ್ದರೆ ಪಾಪಮಾಡುವವರಾಗಿದ್ದು ಅಪರಾಧಿಗಳೆಂದು ಧರ್ಮಶಾಸ್ತ್ರದ ಪ್ರಕಾರ ತೀರ್ಮಾನಿಸಲ್ಪಡುತ್ತೀರಿ.
ಯಾಕೋಬನು 2 : 10 (IRVKN)
ಏಕೆಂದರೆ ಯಾರಾದರೂ ಧರ್ಮಶಾಸ್ತ್ರವನ್ನೆಲ್ಲಾ ಕೈಕೊಂಡು ನಡೆದು ಅದರಲ್ಲಿ ಒಂದೇ ಒಂದು ವಿಷಯದಲ್ಲಿ ತಪ್ಪಿದರೆ [† ಮತ್ತಾ 5:19; ಗಲಾ. 3:10:] ಅಂಥವರು ಎಲ್ಲಾ ವಿಷಯಗಳಲ್ಲಿಯೂ ಅಪರಾಧಿಯಾಗಿರುತ್ತಾರೆ.
ಯಾಕೋಬನು 2 : 11 (IRVKN)
ಏಕೆಂದರೆ [‡ ವಿಮೋ 20:13,14:] ವ್ಯಭಿಚಾರ ಮಾಡಬಾರದೆಂದು ಹೇಳಿದವನೇ ನರಹತ್ಯ ಮಾಡಬಾರದೆಂತಲೂ ಹೇಳಿದನು. ಆದಕಾರಣ ನೀನು ವ್ಯಭಿಚಾರಮಾಡದೆ ಇದ್ದರೂ ನರಹತ್ಯ ಮಾಡಿದರೆ ಧರ್ಮಶಾಸ್ತ್ರವನ್ನು ಮೀರಿದವನಾಗಿರುತ್ತಿ.
ಯಾಕೋಬನು 2 : 12 (IRVKN)
ನೀವು [§ ಅಥವಾ, ಬಿಡುಗಡೆಯಾದವರಿಗೆ ಇರುವ. ಯಾಕೋಬ. 1:25:] ಬಿಡುಗಡೆಯನ್ನುಂಟು ಮಾಡುವ ಧರ್ಮಶಾಸ್ತ್ರದ ಪ್ರಕಾರ ತೀರ್ಪುಹೊಂದುವವರಿಗೆ ತಕ್ಕಂತೆ ಮಾತನಾಡಿರಿ ಮತ್ತು ವಿಧೇಯರಾಗಿರಿ.
ಯಾಕೋಬನು 2 : 13 (IRVKN)
ಏಕೆಂದರೆ [* ಯೋಬ. 22:6-11; ಕೀರ್ತ 18:25; ಜ್ಞಾ. 21:13; ಲೂಕ 6:38:] ಕರುಣೆ ತೋರಿಸದೆ ಇರುವವನಿಗೆ ನ್ಯಾಯತೀರ್ಪಿನಲ್ಲಿ ಕರುಣೆಯು ತೋರಿಸಲ್ಪಡುವುದಿಲ್ಲ. ಕರುಣೆಯು ನ್ಯಾಯತೀರ್ಪಿನ ಮೇಲೆ ಜಯ ಹೊಂದುತ್ತದೆ. [PS]
ಯಾಕೋಬನು 2 : 14 (IRVKN)
{ನಂಬಿಕೆಯೊಂದೇ ಸಾಲದು ಅದರಂತೆ ನಡೆಯಬೇಕೆಂಬ ಬೋಧನೆ} [PS] ನನ್ನ ಸಹೋದರರೇ, ಒಬ್ಬನು ತನಗೆ ನಂಬಿಕೆಯುಂಟೆಂದು ಹೇಳಿಕೊಂಡು [† ಯಾಕೋಬ. 1:22:] ತಕ್ಕ ಕ್ರಿಯೆಗಳಿಲ್ಲದವನಾಗಿದ್ದರೆ ಪ್ರಯೋಜನವೇನು? ಅಂಥ ನಂಬಿಕೆಯು ಅವನನ್ನು ರಕ್ಷಿಸುವುದೋ?
ಯಾಕೋಬನು 2 : 15 (IRVKN)
ನಿಮ್ಮಲ್ಲಿ [‡ ಯೋಬ. 31:19,20:] ಒಬ್ಬ ಸಹೋದರನಿಗೆ ಇಲ್ಲವೆ ಒಬ್ಬ ಸಹೋದರಿಗೆ ಉಡಲು ಬಟ್ಟೆಯೂ ಮತ್ತು ದಿನನಿತ್ಯದ ಆಹಾರವೂ ಅಗತ್ಯವಾಗಿರುವಾಗ,
ಯಾಕೋಬನು 2 : 16 (IRVKN)
ನಿಮ್ಮಲ್ಲಿ ಒಬ್ಬನು ಅವರಿಗೆ ದೈಹಿಕ ಅವಶ್ಯಕತೆಗಳನ್ನು ಪೂರೈಸದೆ “ಸಮಾಧಾನದಿಂದ ಹೋಗಿರಿ, ಬೆಚ್ಚಗೆ ಬೆಂಕಿಕಾಯಿಸಿಕೊಳ್ಳಿ, ಹೊಟ್ಟೆ ತುಂಬಾ ಊಟಮಾಡಿ” ಎಂದು [§ 1 ಯೋಹಾ 3:17,18:] ಹೇಳಿದರೆ ಪ್ರಯೋಜನವೇನು?
ಯಾಕೋಬನು 2 : 17 (IRVKN)
ಹಾಗೆಯೇ ಕ್ರಿಯೆಗಳಿಲ್ಲದ ನಂಬಿಕೆಯು ನಿರ್ಜೀವವಾದದು.
ಯಾಕೋಬನು 2 : 18 (IRVKN)
ಆದರೂ ಒಬ್ಬನು; “ನಿನಗೆ ನಂಬಿಕೆಯುಂಟು ಮತ್ತು ನನಗೆ ಕ್ರಿಯೆಗಳುಂಟು” [* ರೋಮಾ. 3:28; ಇಬ್ರಿ. 11:33:] ನೀನು ಕ್ರಿಯೆಗಳಿಲ್ಲದೆ ನಿನ್ನ ನಂಬಿಕೆಯನ್ನು ನನಗೆ ತೋರಿಸು. [† ಮತ್ತಾ 7:16,17; ಗಲಾ. 5:6:] ನಾನು ನನ್ನ ಕ್ರಿಯೆಗಳ ಮುಖಾಂತರ ನನ್ನ ನಂಬಿಕೆಯನ್ನು ತೋರಿಸುತ್ತೇನೆ ಎಂದು ಹೇಳುವನಲ್ಲವೇ.
ಯಾಕೋಬನು 2 : 19 (IRVKN)
[‡ ಧರ್ಮೋ 6:4; 1 ಕೊರಿ 8:6:] ದೇವರು ಒಬ್ಬನೇ ಎಂದು ನೀನು ನಂಬುತ್ತೀ; ಹಾಗೆ ನಂಬುವುದು ಸರಿ. ಆದರೆ [§ ಮತ್ತಾ 8:29; ಲೂಕ 4:33,34; ಅ. ಕೃ. 16:17; 19:15:] ದೆವ್ವಗಳು ಸಹ ಹಾಗೆಯೇ ನಂಬಿ ಹೆದರಿ ನಡುಗುತ್ತವೆ.
ಯಾಕೋಬನು 2 : 20 (IRVKN)
ಅವಿವೇಕಿಯೇ, ಕ್ರಿಯೆಗಳಿಲ್ಲದ ನಂಬಿಕೆಯು ವ್ಯರ್ಥವಾದದ್ದು ಎಂದು ನಿನಗೆ ಸಾಬಿತುಪಡಿಸಬೇಕೋ?
ಯಾಕೋಬನು 2 : 21 (IRVKN)
ನಮ್ಮ ಪಿತೃವಾದ ಅಬ್ರಹಾಮನು ತನ್ನ ಮಗನಾದ ಇಸಾಕನನ್ನು ಯಜ್ಞವೇದಿಯ ಮೇಲೆ ಅರ್ಪಿಸಿದಾಗ [* ಆದಿ 22:9,12,16-18] ನೀತಿವಂತನೆಂಬ ನಿರ್ಣಯವನ್ನು ಹೊಂದಿದ್ದು ನಂಬಿಕೆಯ ಕ್ರಿಯೆಗಳಿಂದಲ್ಲವೇ?
ಯಾಕೋಬನು 2 : 22 (IRVKN)
ಅವನ ನಂಬಿಕೆಯು [† ಇಬ್ರಿ. 11:17:] ಕ್ರಿಯೆಗಳೊಂದಿಗೆ ಕಾರ್ಯಮಾಡಿತ್ತು ಮತ್ತು ಆ [‡ 1 ಥೆಸ. 1:3:] ಕ್ರಿಯೆಗಳಿಂದಲೇ ಅವನ ನಂಬಿಕೆಯ ಉದ್ದೇಶವು ನೆರವೇರಿತು ಎಂದು ಕಾಣುತ್ತೇವಲ್ಲಾ.
ಯಾಕೋಬನು 2 : 23 (IRVKN)
[§ ಆದಿ 15:6; ರೋಮಾ. 4:3; ಗಲಾ. 3:6:] “ಅಬ್ರಹಾಮನು ದೇವರನ್ನು ನಂಬಿದನು ಮತ್ತು ಆ ನಂಬಿಕೆ ಅವನ ಲೆಕ್ಕಕ್ಕೆ ನೀತಿಯೆಂದು ಎಣಿಸಲ್ಪಟ್ಟಿತು” ಎಂಬ ಧರ್ಮಶಾಸ್ತ್ರದ ಮಾತು ಹೀಗೆ ನೆರವೇರಿತು. ಆದ್ದರಿಂದ ಅಬ್ರಹಾಮನು [* 2 ಪೂರ್ವ 20:7; ಯೆಶಾ 41:8:] ದೇವರ ಸ್ನೇಹಿತನೆಂದು ಕರೆಯಲ್ಪಟ್ಟನು.
ಯಾಕೋಬನು 2 : 24 (IRVKN)
ಆದುದರಿಂದ ಮನುಷ್ಯನು, ಕ್ರಿಯೆಗಳಿಂದ ನೀತಿವಂತನೆಂದು ನಿರ್ಣಯಿಸಲ್ಪಡುತ್ತಾನೆ ಹೊರತು ಬರೀ ನಂಬಿಕೆಯಿಂದಲ್ಲ ಎಂದು ನೋಡುತ್ತೀರಿ.
ಯಾಕೋಬನು 2 : 25 (IRVKN)
ಅದೇ ರೀತಿಯಾಗಿ ವೇಶ್ಯೆಯಾದ [† ಇಬ್ರಿ. 11:31:] ರಾಹಾಬಳು [‡ ಯೆಹೋ. 2:1-22; 6:23:] ಗೂಢಚಾರರನ್ನು ತನ್ನ ಮನೆಯಲ್ಲಿ ಸೇರಿಸಿಕೊಂಡು, ಬೇರೆ ದಾರಿಯಿಂದ ಅವರನ್ನು ಕಳುಹಿಸಿದ ಕ್ರಿಯೆಗಳಿಂದಲೇ ನೀತಿವಂತಳೆಂಬ, ನಿರ್ಣಯವನ್ನು ಹೊಂದಿದಳಲ್ಲವೇ?
ಯಾಕೋಬನು 2 : 26 (IRVKN)
ಆತ್ಮವಿಲ್ಲದ ದೇಹವು ಸತ್ತದ್ದಾಗಿರುವ ಪ್ರಕಾರವೇ ಕ್ರಿಯೆಗಳಿಲ್ಲದ ನಂಬಿಕೆಯೂ ಸತ್ತದ್ದಾಗಿದೆ. [PE]

1 2 3 4 5 6 7 8 9 10 11 12 13 14 15 16 17 18 19 20 21 22 23 24 25 26

BG:

Opacity:

Color:


Size:


Font: