ಯಾಕೋಬನು 1 : 1 (IRVKN)
{ಕಷ್ಟಗಳನ್ನೂ ದುಷ್ಪ್ರೇರಣೆಗಳನ್ನೂ ಕುರಿತದ್ದು} [PS] ದೇವರಿಗೂ [* ರೋಮಾ. 1:1; 2 ಪೇತ್ರ. 1:1; ಯೂದ 1:] ಕರ್ತನಾದ ಯೇಸು ಕ್ರಿಸ್ತನಿಗೂ ದಾಸನಾಗಿರುವ [† ಅ. ಕೃ. 12:17:] ಯಾಕೋಬನು ಅನ್ಯದೇಶಗಳಲ್ಲಿ [‡ 1 ಪೇತ್ರ. 1:1:] ಚದುರಿರುವ ಇಸ್ರಾಯೇಲ್ಯರ [§ ಲೂಕ 22:30; ಅ. ಕೃ. 26:7:] ಹನ್ನೆರಡು ಗೋತ್ರದವರಿಗೂ ಬರೆಯುವುದೇನೆಂದರೆ, “ನಿಮಗೆ ಶುಭವಾಗಲಿ.”
ಯಾಕೋಬನು 1 : 2 (IRVKN)
ನನ್ನ ಸಹೋದರರೇ, ನೀವು [* 1 ಪೇತ್ರ. 1:6:] ನಾನಾವಿಧವಾದ ಕಷ್ಟಗಳನ್ನು ಅನುಭವಿಸುವಾಗ [† ಮತ್ತಾ 5:12; ಅ. ಕೃ. 5:41; ಕೊಲೊ 1:11:] ಅದನ್ನು ಕೇವಲ ಆನಂದಕರವಾದದ್ದೆಂದು ತಿಳಿಯಿರಿ.
ಯಾಕೋಬನು 1 : 3 (IRVKN)
ಏಕೆಂದರೆ [‡ 1 ಪೇತ್ರ. 1:7:] ನಿಮ್ಮ ನಂಬಿಕೆಗೆ ಆಗುವ ಪರಿಶೋಧನೆಯು ನಿಮಗೆ [§ ರೋಮಾ. 5:6; ಯಾಕೋಬ 5:11; ಇಬ್ರಿ. 10:36; 2 ಪೇತ್ರ. 1:6] ತಾಳ್ಮೆಯನ್ನುಂಟು ಮಾಡುತ್ತದೆಂದು ನೀವು ತಿಳಿಯಿರಿ.
ಯಾಕೋಬನು 1 : 4 (IRVKN)
ಆ ತಾಳ್ಮೆಯು ಸಂಪೂರ್ಣವಾಗಿ ನಿಮ್ಮಲ್ಲಿ ಫಲಿಸಲಿ, ಆಗ [* 1 ಥೆಸ. 5:23; ಮತ್ತಾ 5:48:] ನೀವು ಸರ್ವಸುಗುಣಸಂಪನ್ನರೂ, ಪರಿಪೂರ್ಣರೂ, ಯಾವುದಕ್ಕೂ ಕಡಿಮೆಯಿಲ್ಲದವರೂ ಆಗುವಿರಿ.
ಯಾಕೋಬನು 1 : 5 (IRVKN)
[† 1 ಅರಸು. 3:9-12; ಜ್ಞಾ. 2:3-6:] ನಿಮ್ಮಲ್ಲಿ ಯಾರಿಗಾದರು ಜ್ಞಾನದ ಕೊರತೆಯಿರುವುದಾದರೆ ಅವರು ದೇವರನ್ನು ಬೇಡಿಕೊಳ್ಳಲಿ, [‡ ಮಾರ್ಕ 11:24; ಯೋಹಾ 14:13; 1 ಯೋಹಾ 3:22; 5:14,15:] ಅದು ಅವರಿಗೆ ದೊರಕುವುದು. ಯಾಕೆಂದರೆ ದೇವರು ಹಂಗಿಸದೆ ಎಲ್ಲರಿಗೂ ಉದಾರವಾಗಿ ಕೊಡುವಾತನಾಗಿದ್ದಾನೆ.
ಯಾಕೋಬನು 1 : 6 (IRVKN)
ಆದರೆ ದೇವರ ಬಳಿ ಬೇಡುವವನು [§ ಮತ್ತಾ 21:21:] ಸ್ವಲ್ಪವೂ ಸಂದೇಹಪಡದೆ [* ಮಾರ್ಕ 11:24:] ನಂಬಿಕೆಯಿಂದ ಬೇಡಿಕೊಳ್ಳಲಿ. ಸಂದೇಹಪಡುವವನು [† ಯೆಶಾ 57:20; ಎಫೆ 4:14:] ಗಾಳಿಯಿಂದ ಬಡಿಯಲ್ಪಟ್ಟ ಸಮುದ್ರದ ಅಲೆಯಂತೆ ಅತ್ತಿತ್ತ ಅಲೆಯುತ್ತಿರುತ್ತಾನೆ.
ಯಾಕೋಬನು 1 : 7 (IRVKN)
ಇಂಥವನು ತಾನು ಕರ್ತನಿಂದ ಬೇಡಿಕೊಂಡಿದ್ದೆಲ್ಲವನ್ನು ಹೊಂದುವೆನೆಂದು ಭಾವಿಸದೆ ಇರಲಿ.
ಯಾಕೋಬನು 1 : 8 (IRVKN)
ಏಕೆಂದರೆ ಅವನು [‡ ಯಾಕೋಬ. 4:8:] ಎರಡು ಮನಸ್ಸುಳ್ಳವನು, ತನ್ನ ನಡತೆಯಲ್ಲಿ ಚಂಚಲನಾಗಿದ್ದಾನೆ. [PE][PS]
ಯಾಕೋಬನು 1 : 9 (IRVKN)
ದೀನಸ್ಥಿತಿಯಲ್ಲಿರುವ ಸಹೋದರನು ತಾನು ಉನ್ನತ ಸ್ಥಿತಿಗೆ ಬಂದೆನೆಂದು ಉಲ್ಲಾಸಪಡಲಿ.
ಯಾಕೋಬನು 1 : 10 (IRVKN)
[§ ಯೆರೆ 9:23:] ಐಶ್ವರ್ಯವಂತನಾದ ಸಹೋದರನು ತಾನು ದೀನಸ್ಥಿತಿಗೆ ಬಂದೆನೆಂದು ಉಲ್ಲಾಸಪಡಲಿ; ಏಕೆಂದರೆ ಐಶ್ವರ್ಯವಂತನು [* ಕೀರ್ತ 102:11; 1 ಕೊರಿ 7:31; 1 ಪೇತ್ರ. 1:24:] ಹುಲ್ಲಿನ ಹೂವಿನಂತೆ ಗತಿಸಿ ಹೋಗುವನು.
ಯಾಕೋಬನು 1 : 11 (IRVKN)
[† ಯೆಶಾ 40. 7:] ಸೂರ್ಯನು ಉದಯಿಸಿದ ಮೇಲೆ ಸುಡುವ ಬಿಸಿಲಿಗೆ ಹುಲ್ಲು ಬಾಡಿ, ಹೂವು ಉದುರಿ ಅದರ ರೂಪದ ಸೊಗಸು ನಾಶವಾಗುತ್ತದೆ; ಹಾಗೆಯೇ ಐಶ್ವರ್ಯವಂತನು ತನ್ನ ಪ್ರಯತ್ನಗಳಲ್ಲಿ ಕುಂದಿಹೋಗುವನು. [PE][PS]
ಯಾಕೋಬನು 1 : 12 (IRVKN)
[‡ ಯಾಕೋಬ. 5:11; ಮತ್ತಾ 10:22; 1 ಪೇತ್ರ. 3:14:] ಕಷ್ಟಗಳನ್ನು ಸಹಿಸಿಕೊಳ್ಳುವವನು ಧನ್ಯನು. ಅವನು ಪರಿಶೋಧಿತನಾದ ಮೇಲೆ ಕರ್ತನು [§ ಯಾಕೋಬ. 2:5:] ತನ್ನನ್ನು ಪ್ರೀತಿಸುವವರಿಗೆ ವಾಗ್ದಾನಮಾಡಿದಂತೆ [* ಪ್ರಕ 2:10; 3:11; 1 ಕೊರಿ 9:25; 1 ಪೇತ್ರ. 5:4] ಜೀವದ ಕಿರೀಟವನ್ನು ಹೊಂದುವನು.
ಯಾಕೋಬನು 1 : 13 (IRVKN)
ಯಾರಾದರೂ ಶೋಧನೆಗೆ ಪ್ರೇರೇಪಿಸಲ್ಪಡುವಾಗ “ಈ ಪ್ರೇರಣೆಯು ತನಗೆ ದೇವರಿಂದ ಉಂಟಾಯಿತೆಂದು” ಹೇಳಬಾರದು. ಏಕೆಂದರೆ ದೇವರು ಕೆಟ್ಟದ್ದಕ್ಕೆ ಪ್ರೇರಣೆ ನೀಡುವವನಲ್ಲ. ಮತ್ತು ಆತನು ಯಾರನ್ನೂ ಪಾಪಕ್ಕೆ ಪ್ರೇರೇಪಿಸಿ ಶೋಧಿಸುವುದೂ ಇಲ್ಲ.
ಯಾಕೋಬನು 1 : 14 (IRVKN)
ಆದರೆ ಪ್ರತಿಯೊಬ್ಬನು ತನ್ನ ಸ್ವಂತ ದುರಾಶೆಗಳಿಂದ ಸೆಳೆಯಲ್ಪಟ್ಟು ಮರುಳುಗೊಂಡವನಾಗಿ ಶೋಧಿಸಲ್ಪಡುತ್ತಾನೆ.
ಯಾಕೋಬನು 1 : 15 (IRVKN)
ಆ ಮೇಲೆ [† ರೋಮಾ. 5:12; 6:23:] ದುರಾಶೆಯು ಗರ್ಭಧರಿಸಿ ಪಾಪವನ್ನು ಹೆರುತ್ತದೆ. ಪಾಪವು [‡ ಯೋಬ. 15:35; ಕೀರ್ತ 7:14; ಯೆಶಾ 59:4:] ಪೂರ್ಣವಾಗಿ ಬೆಳೆದು ಮರಣವನ್ನು ತರುತ್ತದೆ. [PE][PS]
ಯಾಕೋಬನು 1 : 16 (IRVKN)
ನನ್ನ ಪ್ರಿಯ ಸಹೋದರರೇ, ಮೋಸಹೋಗಬೇಡಿರಿ.
ಯಾಕೋಬನು 1 : 17 (IRVKN)
[§ ಯೋಹಾ 3:27; 1 ಕೊರಿ 4:7:] ಎಲ್ಲಾ ಒಳ್ಳೆಯ ವರಗಳು ಮತ್ತು ಪರಿಪೂರ್ಣವಾದ ವರಗಳು ಮೇಲಿನಿಂದ ಬಂದವುಗಳೇ, ಅವು [* 1 ಯೋಹಾ 1:5 ] ಸಕಲ ವಿಧವಾದ ಬೆಳಕಿಗೆ ಮೂಲಕರ್ತನಾದ ದೇವರಿಂದ ಇಳಿದು ಬರುತ್ತವೆ; [† ಮಲಾ. 3:6:] ಆತನು ನೆರಳಿನಂತೆ [‡ ಅಥವಾ, ಗ್ರಹಣದಂತಿರುವ ನೆರಳೂ. ] ಬದಲಾಗುವವನಲ್ಲ, ಚಂಚಲಚಿತ್ತನೂ ಅಲ್ಲ.
ಯಾಕೋಬನು 1 : 18 (IRVKN)
ದೇವರು [§ ಯೋಹಾ 1:13:] ತನ್ನ ಸುಚಿತ್ತದ ಪ್ರಕಾರ ಸತ್ಯವಾಕ್ಯದ ಮೂಲಕ ಜೀವಕೊಟ್ಟಿವುದರಿಂದ [* ಯೆರೆ 2:3; ಪ್ರಕ 14:4; ರೋಮಾ. 8:19-23; ಎಫೆ 1:12:] ನಾವು ಆತನ ಸರ್ವ ಸೃಷ್ಟಿಯಲ್ಲಿ ಪ್ರಥಮ ಫಲವಾದೆವು. [PS]
ಯಾಕೋಬನು 1 : 19 (IRVKN)
{ದೇವರ ವಾಕ್ಯವನ್ನು ಕೇಳಿ ಅದನ್ನು ಅನುಸರಿಸುವ ವಿಧಾನ} [PS] [† 1 ಯೋಹಾ 2:21:] ನನ್ನ ಪ್ರಿಯ ಸಹೋದರರೇ, ನೀವು ಇದನ್ನು ಚೆನ್ನಾಗಿ ತಿಳಿದುಕೊಳ್ಳಿರಿ, ಪ್ರತಿಯೊಬ್ಬನೂ [‡ ಪ್ರಸಂಗಿ 5:1,2:] ಕಿವಿಗೊಡುವುದರಲ್ಲಿ ಚುರುಕಾಗಿಯೂ, [§ ಜ್ಞಾ. 10:19; 17:27:] ಮಾತನಾಡುವುದರಲ್ಲಿ ನಿಧಾನವಾಗಿಯೂ ಮತ್ತು [* ಜ್ಞಾ. 14:29:] ಕೋಪಿಸುವುದರಲ್ಲಿ ನಿಧಾನವಾಗಿಯೂ ಇರಲಿ.
ಯಾಕೋಬನು 1 : 20 (IRVKN)
ಏಕೆಂದರೆ ಮನುಷ್ಯನು ಕೋಪಗೊಂಡಾಗ ದೇವರು ಬಯಸುವ ನೀತಿ ಕಾರ್ಯಗಳನ್ನು ಮಾಡಲು ಸಾಧ್ಯವಾಗುವುದಿಲ್ಲ.
ಯಾಕೋಬನು 1 : 21 (IRVKN)
ಆದಕಾರಣ [† ಕೊಲೊ 3:8; 1 ಪೇತ್ರ. 2:1:] ಎಲ್ಲಾ ನೀಚತನವನ್ನೂ, ಎಲ್ಲಾ ದುಷ್ಟತನವನ್ನೂ ತೆಗೆದುಹಾಕಿ ಮನಸ್ಸಿನೊಳಗೆ ಬೇರೂರಿರುವ ದೇವರ ವಾಕ್ಯವನ್ನು ನಮ್ರತೆಯಿಂದ ಸ್ವೀಕರಿಸಿರಿ. [‡ 1 ಕೊರಿ 15:2; ಎಫೆ 1:13:] ಅದು ನಿಮ್ಮ ಆತ್ಮಗಳನ್ನು ರಕ್ಷಿಸುವುದಕ್ಕೆ ಸಾಮರ್ಥ್ಯವುಳ್ಳದ್ದಾಗಿರುತ್ತದೆ.
ಯಾಕೋಬನು 1 : 22 (IRVKN)
ದೇವರ ವಾಕ್ಯದ ಪ್ರಕಾರ ನಡೆಯುವವರಾಗಿರಿ, ಅದನ್ನು ಕೇವಲ [§ ರೋಮಾ. 2:13; ಮತ್ತಾ 7:21,24-27; ಯೋಹಾ 13:17:] ಕೇಳುವವರು ಮಾತ್ರವೇ ಆಗಿದ್ದು ನಿಮ್ಮನ್ನು ನೀವೇ ಮೋಸಗೊಳಿಸಿಕೊಳ್ಳಬೇಡಿರಿ.
ಯಾಕೋಬನು 1 : 23 (IRVKN)
ಯಾವನಾದರೂ ವಾಕ್ಯವನ್ನು ಕೇಳುವವನಾಗಿದ್ದು ಅದರ ಪ್ರಕಾರ ನಡೆಯದಿದ್ದರೆ ಅವನು ಕನ್ನಡಿಯಲ್ಲಿ ತನ್ನ ಸಹಜ ಮುಖವನ್ನು ನೋಡಿದ ಮನುಷ್ಯನಂತಿರುವನು.
ಯಾಕೋಬನು 1 : 24 (IRVKN)
ಏಕೆಂದರೆ ಇವನು ತನ್ನನ್ನು ತಾನೇ ನೋಡಿ ನಂತರ ತಾನು ಹೀಗಿದ್ದೇನೆಂಬುದನ್ನು ಆ ಕ್ಷಣವೇ ಮರೆತುಬಿಡುವನು.
ಯಾಕೋಬನು 1 : 25 (IRVKN)
ಆದರೆ [* ಅಥವಾ, ಬಿಡುಗಡೆಯಾದವರಿಗೆ ಇರುವ. ಯೋಹಾ 8:32; ಗಲಾ. 2:4; 1 ಪೇತ್ರ. 2:16:] ಬಿಡುಗಡೆಯನ್ನು ಉಂಟುಮಾಡುವ ಪರಿಪೂರ್ಣವಾದ ಧರ್ಮಶಾಸ್ತ್ರವನ್ನು ಲಕ್ಷ್ಯಕೊಟ್ಟು ಓದಿ, ಮನನ ಮಾಡಿ ಅದನ್ನು ಅನುಸರಿಸುವವನು ವಾಕ್ಯವನ್ನು ಕೇಳಿ ಮರೆತು ಹೋಗದೆ ಅದರ ಪ್ರಕಾರ ನಡೆಯುತ್ತಾ [† ಕೀರ್ತ 1:1; ಲೂಕ 11:28:] ತನ್ನ ನಡತೆಯಿಂದ, ಕ್ರಿಯೆಗಳಿಂದ ಧನ್ಯನಾಗುವನು.
ಯಾಕೋಬನು 1 : 26 (IRVKN)
ತನ್ನನ್ನು ಸದ್ಭಕ್ತನೆಂದೆಣಿಸಿಕೊಳ್ಳುವ ಯಾವನಾದರೂ [‡ ಕೀರ್ತ 39:1; 141:3:] ತನ್ನ ನಾಲಿಗೆಯನ್ನು ಹತೋಟಿಯಲ್ಲಿ ಇಟ್ಟುಕೊಳ್ಳದೆ ತನ್ನ ಹೃದಯವನ್ನು ಮೋಸಗೊಳಿಸುವವನಾದರೆ ಅವನ ಭಕ್ತಿಯು ವ್ಯರ್ಥವಾಗಿದೆ.
ಯಾಕೋಬನು 1 : 27 (IRVKN)
ಸಂಕಟದಲ್ಲಿ ಬಿದ್ದಿರುವ [§ ಯೋಬ. 31:17,18; ಯೆಶಾ 1:7,23:] ದಿಕ್ಕಿಲ್ಲದವರನ್ನೂ, ವಿಧವೆಯರನ್ನೂ ಪರಾಂಬರಿಸಿ ತನಗೆ [* 1 ತಿಮೊ. 5:22; 2 ಪೇತ್ರ. 3:14; 1 ಯೋಹಾ 5:18:] ಇಹಲೋಕದ ದೋಷವು ಹತ್ತದಂತೆ ತನ್ನನ್ನು ತಾನು ಕಾಪಾಡಿಕೊಳ್ಳುವುದೇ ತಂದೆಯಾದ ದೇವರ ಸನ್ನಿಧಾನದಲ್ಲಿ ಶುದ್ಧವೂ, ನಿರ್ಮಲವೂ ಆಗಿರುವ ಭಕ್ತಿ. [PE]

1 2 3 4 5 6 7 8 9 10 11 12 13 14 15 16 17 18 19 20 21 22 23 24 25 26 27

BG:

Opacity:

Color:


Size:


Font: