ಇಬ್ರಿಯರಿಗೆ 9 : 1 (IRVKN)
{ಭೂಲೋಕದ ಮತ್ತು ಪರಲೋಕದ ಆಲಯ} [PS] ಹೀಗಿದ್ದರೂ ಮೊದಲನೆಯ ಒಡಂಬಡಿಕೆಗೂ ದೇವಾರಾಧನೆಯ ವಿಧಿವಿಧಾನಗಳಿದ್ದವು ಮತ್ತು ಇಹಲೋಕ ಸಂಬಂಧವಾದ [* ವಿಮೋ 25:8:] ದೇವಾಲಯವಿತ್ತು.
ಇಬ್ರಿಯರಿಗೆ 9 : 2 (IRVKN)
[† ವಿಮೋ 26:1:] ಒಂದು ದೇವದರ್ಶನ ಗುಡಾರವು ಕಟ್ಟಲ್ಪಟ್ಟು, ಅದರ ಮೊದಲನೆಯ ಭಾಗದಲ್ಲಿ [‡ ವಿಮೋ 25:31-39; 26:35; 40. 4:] ದೀಪಸ್ತಂಭ, [§ ವಿಮೋ 25:23-29:] ಮೇಜು, ಮತ್ತು [* ವಿಮೋ 25:30; ಯಾಜ 24:5-8:] ಸಮರ್ಪಿಸಿದ ರೊಟ್ಟಿ ಇವುಗಳಿದ್ದವು. ಅದನ್ನು ಪವಿತ್ರಸ್ಥಳ ಎಂದು ಕರೆಯಲಾಗುತ್ತಿತು.
ಇಬ್ರಿಯರಿಗೆ 9 : 3 (IRVKN)
ಮತ್ತು [† ವಿಮೋ 26:31-33; 40. 3, 21:] ಎರಡನೆಯ ಪರದೆಯ ಹಿಂದೆ ಇನ್ನೊಂದು ಕೋಣೆಗೆ, ಅತಿ ಪವಿತ್ರ ಸ್ಥಳ ಎಂದು ಕರೆಯಲಾಗುತ್ತಿತು.
ಇಬ್ರಿಯರಿಗೆ 9 : 4 (IRVKN)
ಅದರಲ್ಲಿ ಚಿನ್ನದ [‡ ಯಜ್ಞವೇದಿ] ಧೂಪಾರತಿಯು ಮತ್ತು [§ ಯಾಜ 16:12,13. ವಿಮೋ 30:1 ] ಚಿನ್ನದ ತಗಡಿನಿಂದ ಹೊದಿಸಿದ [* ವಿಮೋ 25:10; 26:33; 40. 3, 21; ಪ್ರಕ 11:19:] ಒಡಂಬಡಿಕೆಯ ಮಂಜೂಷಗಳಿದ್ದವು. ಆ ಮಂಜೂಷದೊಳಗೆ ಮನ್ನ ಇಟ್ಟಿದ್ದ [† ವಿಮೋ 16:33, 34:] ಚಿನ್ನದ ಪಾತ್ರೆಯೂ, [‡ ಅರಣ್ಯ 17:10:] ಆರೋನನ ಚಿಗುರಿದ ಕೋಲೂ, ಒಡಂಬಡಿಕೆಯ ಕಲ್ಲಿನ ಹಲಿಗೆಗಳೂ ಇದ್ದವು.
ಇಬ್ರಿಯರಿಗೆ 9 : 5 (IRVKN)
ಅದರ ಮೇಲೆ [§ ಯಾಜ 16:2:] ಕೃಪಾಸನವನ್ನು ಮುಚ್ಚುವ [* ವಿಮೋ 25:18-22; 1 ಅರಸು. 8:6, 7:] ತೇಜಸ್ಸಿನ ಕೆರೂಬಿಗಳೂ ಇದ್ದವು. ಅದನ್ನು ಈಗ ಒಂದೊಂದಾಗಿ ವಿವರಿಸಲು ಸಾಧ್ಯವಿಲ್ಲ. [PE][PS]
ಇಬ್ರಿಯರಿಗೆ 9 : 6 (IRVKN)
ಹೀಗೆ ಇವುಗಳನ್ನು ಸಿದ್ಧಮಾಡಿದ ನಂತರ ಯಾಜಕರು ನಿತ್ಯವೂ ದೇವದರ್ಶನ ಗುಡಾರದ ಮೊದಲನೆಯ ಭಾಗದೊಳಗೆ ಮಾತ್ರ ಪ್ರವೇಶಿಸಿ, ಅಲ್ಲಿ ದೇವರ ಸೇವೆಯ ವಿಧಿಗಳನ್ನು ನಿರಂತರವಾಗಿ ಮಾಡುತ್ತಿದ್ದರು.
ಇಬ್ರಿಯರಿಗೆ 9 : 7 (IRVKN)
ಆದರೆ [† ಯಾಜ 16:15, 34; ಇಬ್ರಿ. 10:3; ವಿಮೋ 30. 10:] ಎರಡನೆಯ ಕೋಣೆಯೊಳಗೆ ಮಹಾಯಾಜಕನೊಬ್ಬನೇ ವರ್ಷಕ್ಕೊಮ್ಮೆ ಪ್ರವೇಶಿಸುತ್ತಿದ್ದನು. ತನ್ನೊಡನೆ ಬಲಿರಕ್ತವನ್ನು ತೆಗೆದುಕೊಳ್ಳದೆ ಹೋಗುತ್ತಿರಲಿಲ್ಲ. [‡ ಇಬ್ರಿ. 5:3:] ಆ ರಕ್ತವನ್ನು ತನ್ನಗಾಗಿಯೂ ಮತ್ತು ಜನರ ಉದ್ದೇಶಪೂರ್ವಕವಲ್ಲದ ಅಪರಾಧಗಳಿಗೋಸ್ಕರವೂ ಸಮರ್ಪಿಸಬೇಕಾಗಿತ್ತು.
ಇಬ್ರಿಯರಿಗೆ 9 : 8 (IRVKN)
ಈ ಗುಡಾರದ ಮೊದಲನೆಯ ಭಾಗವು [§ ಇಬ್ರಿ. 10:20; ಯೋಹಾ 14:6:] ಇನ್ನೂ ಇರುವ ತನಕ ಅತಿ ಪರಿಶುದ್ಧ ಸ್ಥಳಕ್ಕೆ ಹೋಗುವ ಮಾರ್ಗವು ಇದುವರೆಗೂ ಪ್ರಕಟವಾಗಲಿಲ್ಲ ಎಂಬುದನ್ನು ಪವಿತ್ರಾತ್ಮನು ವ್ಯಕ್ತಪಡಿಸುತ್ತಾನೆ.
ಇಬ್ರಿಯರಿಗೆ 9 : 9 (IRVKN)
ಇದು ಈಗಿನ ಕಾಲಕ್ಕೆ ಒಂದು ನಿದರ್ಶನವಾಗಿದೆ. ಅದೇನೆಂದರೆ ಅದರ ಕ್ರಮದ ಮೇರೆಗೆ ಸಮರ್ಪಣೆಯಾಗುವ ಕಾಣಿಕೆಗಳೂ ಮತ್ತು ಯಜ್ಞಗಳೂ [* ಇಬ್ರಿ. 7:19:] ಆರಾಧನೆ ಮಾಡುವವರ ಮನಸ್ಸಾಕ್ಷಿಯನ್ನು ಪರಿಪೂರ್ಣಗೊಳಿಸಲು ಆಗಲಿಲ್ಲ.
ಇಬ್ರಿಯರಿಗೆ 9 : 10 (IRVKN)
ಅವು [† ಯಾಜ 11:2:] ಅನ್ನಪಾನಗಳೂ ಮತ್ತು [‡ ಮಾರ್ಕ 7:4, 8; ಯಾಜ 11:25:] ವಿವಿಧ ಆಚರಣೆಗಳಿಗೂ ಒಳಪಟ್ಟಿರುವ ಸ್ನಾನಗಳು ಸಹಿತವಾಗಿ ದೇಹಕ್ಕೆ ಮಾತ್ರ ಸಂಬಂಧಪಟ್ಟ ನಿಯಮಗಳಾಗಿದ್ದು. ಇವು ಸುಧಾರಣೆಯ ಕಾಲದವರೆಗೆ ಮಾತ್ರ ನೇಮಕವಾಗಿದ್ದವು. [PE][PS]
ಇಬ್ರಿಯರಿಗೆ 9 : 11 (IRVKN)
ಕ್ರಿಸ್ತನಾದರೋ [§ ಕೆಲವು ಪ್ರತಿಗಳಲ್ಲಿ, ಮುಂದೆ ದೊರೆಯಬೇಕಾಗಿದ್ದ ಎಂದು ಬರೆದದೆ. ಇಬ್ರಿ. 10:1:] ಈಗ ದೊರೆತಿರುವ ಶುಭಗಳ ಮಹಾಯಾಜಕನಾಗಿ ಬಂದು, ಮನುಷ್ಯರ [* ಮಾರ್ಕ 14:58; ಅ. ಕೃ. 7:48; 17:24:] ಕೈಯಿಂದ ಕಟ್ಟಲ್ಪಡದಂಥದೂ, ಇಹಲೋಕದ ಸೃಷ್ಟಿಗೆ ಸಂಬಂಧಪಡದಂಥದೂ, [† ಇಬ್ರಿ. 8:2; 9:24:] ಶ್ರೇಷ್ಠವಾದುದೂ, ಬಹು ಪರಿಪೂರ್ಣವಾದುದೂ ಆಗಿರುವ ಗುಡಾರದಲ್ಲಿ ಸೇವೆ ಮಾಡುವವನಾಗಿ,
ಇಬ್ರಿಯರಿಗೆ 9 : 12 (IRVKN)
[‡ ಇಬ್ರಿ. 10:4:] ಹೋತಗಳ ಮತ್ತು ಹೋರಿಕರುಗಳ ರಕ್ತದ ಮೂಲಕವಲ್ಲ ತನ್ನ [§ ಅ. ಕೃ. 20:28:] ಸ್ವಂತ ರಕ್ತದ ಮೂಲಕ [* ಇಬ್ರಿ. 7:27; 10:10:] ಒಂದೇ ಸಾರಿ ಎಲ್ಲರಿಗೋಸ್ಕರ ಪರಿಶುದ್ಧ ಸ್ಥಳದೊಳಗೆ ಪ್ರವೇಶಿಸಿ [† 1 ಕೊರಿ 6:20:] ನಿತ್ಯ ವಿಮೋಚನೆಯನ್ನು ಸಾಧಿಸಿದನು.
ಇಬ್ರಿಯರಿಗೆ 9 : 13 (IRVKN)
[‡ ಯಾಜ 16:14-16:] ಹೋತ ಹೋರಿಗಳ ರಕ್ತವೂ [§ ಅರಣ್ಯ 19:2, 17, 18:] ಅಶುದ್ಧರಾದವರ ಮೇಲೆ ಚಿಮುಕಿಸುವ [* ಎಳೆ ಕರುವಿನ, ಮಣಕ, ಪಡ್ಡೆ. ] ಕಡಸಿನ ಬೂದಿಯೂ ಶರೀರವನ್ನು ಶುದ್ಧೀಕರಿಸುವುದಾದರೆ,
ಇಬ್ರಿಯರಿಗೆ 9 : 14 (IRVKN)
ನಿತ್ಯಾತ್ಮನಿಂದ [† ಇಬ್ರಿ. 7:27; 8:3:] ತನ್ನನ್ನು ತಾನೇ ನಿರ್ದೋಷಿಯನ್ನಾಗಿ, ದೇವರಿಗೆ ಸಮರ್ಪಿಸಿಕೊಂಡ [‡ ಇಬ್ರಿ. 9:12; 1 ಯೋಹಾ 1:7; ಪ್ರಕ 7:14:] ಕ್ರಿಸ್ತನ ರಕ್ತವು ಎಷ್ಟೋ ಹೆಚ್ಚಾಗಿ, [§ ಕೆಲವು ಪ್ರತಿಗಳಲ್ಲಿ, ನಿಮ್ಮನ್ನು, ನೀವು ಮತ್ತು ನಿಮ್ಮ ಎಂದು ಬರೆದದೆ. ] ನಮ್ಮನ್ನು [* ಇಬ್ರಿ. 6:1:] ನಿರ್ಜೀವ ಕ್ರಿಯೆಗಳಿಂದ ಬಿಡಿಸಿ, ನಾವು ಜೀವವುಳ್ಳ ದೇವರನ್ನು ಆರಾಧಿಸುವಂತೆ ನಮ್ಮ ಮನಸ್ಸಾಕ್ಷಿಯನ್ನು [† ಇಬ್ರಿ. 1:3; 10:22:] ಶುದ್ಧೀಕರಿಸುತ್ತದಲ್ಲವೇ? [PE][PS]
ಇಬ್ರಿಯರಿಗೆ 9 : 15 (IRVKN)
[‡ ಇಬ್ರಿ. 3:1; ರೋಮಾ. 8:28:] ದೇವರಿಂದ ಕರೆಯಲ್ಪಟ್ಟ ಜನರು, ದೇವರ [§ ಇಬ್ರಿ. 10:36; ವಿಮೋ 32:13:] ವಾಗ್ದಾನವಾದ ನಿತ್ಯಬಾಧ್ಯತೆಯನ್ನು ಹೊಂದಿಕೊಳ್ಳಲೆಂದು [* ಇಬ್ರಿ. 8:6; 12:24:] ಕ್ರಿಸ್ತನು ಈ ಹೊಸ ಒಡಂಬಡಿಕೆಗೆ ಮಧ್ಯಸ್ಥನಾದನು. ಏಕೆಂದರೆ ಮೊದಲನೆ ಒಡಂಬಡಿಕೆಯ ಕಾಲದಲ್ಲಿ ಮಾಡಿದ ಪಾಪಗಳಿಂದ ಅವರನ್ನು ಬಿಡುಗಡೆಗೊಳಿಸುವುದಕ್ಕಾಗಿ [† ರೋಮಾ. 3:24, 25; 5:6; ಪ್ರಕ 5:9:] ಕ್ರಿಸ್ತನು ಮರಣ ಹೊಂದಿದನು.
ಇಬ್ರಿಯರಿಗೆ 9 : 16 (IRVKN)
[‡ ಅಥವಾ. ಒಡಂಬಡಿಕೆಯಿರುವಲ್ಲಿ ಅದನ್ನು ನಿಶ್ಚಯಪಡಿಸುವ ಪಶುವಿನ ಮರಣವು ಪ್ರಸಿದ್ಧವಾಗಿರಬೇಕಷ್ಟೆ. ಪಶುವಿನ ಮರಣವಾದ ಮೇಲೆ ಒಡಂಬಡಿಕೆಯು ದೃಢವಾಗುವುದೇ ಹೊರತು ನಿಶ್ಚಯಪಡಿಸುವ ಆ ಪಶು ಜೀವದಿಂದಿರುವಾಗ ಆ ಒಡಂಬಡಿಕೆ ಎಂದಿಗೂ ಪ್ರಯೋಜನಕ್ಕೆ ಬರುವುದಿಲ್ಲ. ಗಲಾ. 3:15:] ಮರಣ ಶಾಸನವು ಇರುವಲ್ಲಿ ಆದನ್ನು ಬರೆಸಿದ ವ್ಯಕ್ತಿಯ ಸಾವನ್ನು ಸಾಬೀತಪಡಿಸುವುದು ಅಗತ್ಯ.
ಇಬ್ರಿಯರಿಗೆ 9 : 17 (IRVKN)
ಮರಣ ಶಾಸನವು ವ್ಯಕ್ತಿಯ ಮರಣವಾದ ಮೇಲೆ ಕಾರ್ಯರೂಪಕ್ಕೆ ಬರುತ್ತದೆಯೇ ಹೊರತು ಬರೆದವನು ಜೀವದಿಂದಿರುವಾಗ ಎಂದಿಗೂ ಜಾರಿಗೆ ಬರುವುದಿಲ್ಲ. [PE][PS]
ಇಬ್ರಿಯರಿಗೆ 9 : 18 (IRVKN)
ಹೀಗಿರಲಾಗಿ ಮೊದಲನೆಯ ಒಡಂಬಡಿಕೆಯು ಸಹ ರಕ್ತವಿಲ್ಲದೆ ಸ್ಥಾಪಿತವಾಗಲಿಲ್ಲ.
ಇಬ್ರಿಯರಿಗೆ 9 : 19 (IRVKN)
[§ ವಿಮೋ 24:6, 8:] ಮೋಶೆಯು ದೇವರ ಪ್ರತಿಯೊಂದು ಆಜ್ಞೆಯನ್ನು ಧರ್ಮಶಾಸ್ತ್ರದ ಪ್ರಕಾರ ಜನರೆಲ್ಲರಿಗೆ ತಿಳಿಸಿದ ಮೇಲೆ, ಅವನು [* ಯಾಜ 14:4, 7; ಅರಣ್ಯ 19:6, 17:] ನೀರು, ಕೆಂಪು ಉಣ್ಣೆ, ಹಿಸ್ಸೋಪುಕಡ್ಡಿ ಇವುಗಳೊಂದಿಗೆ [† ವ. 12:] ಹೋರಿಕರುಗಳ ಮತ್ತು ಹೋತಗಳ ರಕ್ತವನ್ನು ತೆಗೆದುಕೊಂಡು ಸುರುಳಿಗಳ ಮೇಲೆಯೂ ಎಲ್ಲಾ ಜನರ ಮೇಲೆಯೂ ಪ್ರೋಕ್ಷಿಸಿದನು.
ಇಬ್ರಿಯರಿಗೆ 9 : 20 (IRVKN)
“ [‡ ವಿಮೋ 24:8; ಮತ್ತಾ 26:28:] ಇದು ದೇವರು ನಿಮಗೋಸ್ಕರ ಆಜ್ಞಾಪಿಸಿದ ಒಡಂಬಡಿಕೆಯ ರಕ್ತವಾಗಿದೆ” ಎಂದು ಹೇಳಿದನು.
ಇಬ್ರಿಯರಿಗೆ 9 : 21 (IRVKN)
ಇದಲ್ಲದೆ [§ ವಿಮೋ 29:12, 36; ಯಾಜ 8:15, 19; 16:14, 16; 2 ಪೂರ್ವ 29:22:] ಗುಡಾರದ ಮೇಲೆಯೂ ದೇವರ ಸೇವೆಗೆ ಬೇಕಾಗಿರುವ ಎಲ್ಲಾ ಪಾತ್ರೆಗಳ ಮೇಲೆಯೂ ಅದೇ ರೀತಿಯಾಗಿ ರಕ್ತವನ್ನು ಪ್ರೋಕ್ಷಿಸಿದನು.
ಇಬ್ರಿಯರಿಗೆ 9 : 22 (IRVKN)
ಧರ್ಮಶಾಸ್ತ್ರದ ಪ್ರಕಾರ ಹೆಚ್ಚು ಕಡಿಮೆ ಎಲ್ಲಾ ವಸ್ತುಗಳು ರಕ್ತದಿಂದಲೇ ಶುದ್ಧೀಕರಿಸಲ್ಪಡುವವು. [* ಯಾಜ 17:11:] ರಕ್ತಧಾರೆ ಇಲ್ಲದೆ ಪಾಪ ಕ್ಷಮಾಪಣೆಯು ಉಂಟಾಗುವುದಿಲ್ಲ. [PS]
ಇಬ್ರಿಯರಿಗೆ 9 : 23 (IRVKN)
{ಯೇಸುವಿನ ಯಜ್ಞ ಪಾಪವನ್ನು ನಿವಾರಿಸುತ್ತದೆ} [PS] ಆದ್ದರಿಂದ ಪರಲೋಕದಲ್ಲಿರುವ ವಸ್ತುಗಳ [† ಇಬ್ರಿ. 8:5:] ಛಾಯೆಯಂತಿರುವ ವಸ್ತುಗಳ ಶುದ್ಧೀಕರಣಕ್ಕಾಗಿ ಇಂಥಾ ಯಜ್ಞಗಳು ಅವಶ್ಯವಾದರೂ, ಪರಲೋಕದವುಗಳನ್ನು ಶುದ್ಧೀಕರಿಸಲು ಇವುಗಳಿಗಿಂತ ಉತ್ತಮವಾದ ಯಜ್ಞಗಳು ಅವಶ್ಯ.
ಇಬ್ರಿಯರಿಗೆ 9 : 24 (IRVKN)
ಯಾಕೆಂದರೆ ಕ್ರಿಸ್ತನು [‡ ಇಬ್ರಿ. 8:2; 9:11:] ನಿಜವಾದ ದೇವಾಲಯಕ್ಕೆ ಪ್ರತಿಬಿಂಬವಾಗಿ ಕೈಯಿಂದ ಕಟ್ಟಲ್ಪಟ್ಟ [§ ವ. 7:] ಪವಿತ್ರ ಸ್ಥಳವನ್ನು ಪ್ರವೇಶಿಸದೆ, ದೇವರ ಸನ್ನಿಧಿಯಲ್ಲಿ [* ಇಬ್ರಿ. 7:25; ರೋಮಾ. 8:34:] ನಮಗೋಸ್ಕರ ಈಗ ಪ್ರತ್ಯಕ್ಷನಾಗಲು ಪರಲೋಕದೊಳಗೆ ಪ್ರವೇಶಿಸಿದನು.
ಇಬ್ರಿಯರಿಗೆ 9 : 25 (IRVKN)
ಇದಲ್ಲದೆ, ಮಹಾಯಾಜಕನು ವರ್ಷ ವರ್ಷವೂ ಪ್ರಾಣಿಗಳ ರಕ್ತವನ್ನು ತೆಗೆದುಕೊಂಡು ಅತಿ ಪರಿಶುದ್ಧ ಸ್ಥಳದಲ್ಲಿ ಪ್ರವೇಶಿಸುವ ಪ್ರಕಾರ, ಕ್ರಿಸ್ತನು ತನ್ನನ್ನು ಅನೇಕ ಸಾರಿ ಸಮರ್ಪಿಸುವುದಕ್ಕೆ ಅಲ್ಲಿಗೆ ಪ್ರವೇಶಿಸಲಿಲ್ಲ.
ಇಬ್ರಿಯರಿಗೆ 9 : 26 (IRVKN)
ಹಾಗೆ ಸಮರ್ಪಿಸಬೇಕಾಗಿದ್ದ ಪಕ್ಷದಲ್ಲಿ ಆತನು ಲೋಕಾದಿಯಿಂದ ಎಷ್ಟೋ ಸಾರಿ ಬಾಧೆಪಡಬೇಕಾಗಿತ್ತು. ಆದರೆ [† ಇಬ್ರಿ. 7:27; 9:12; 10:10; 1 ಪೇತ್ರ 3:18:] ಒಂದೇ ಸಾರಿ, [‡ ಇಬ್ರಿ. 1:2; 1 ಕೊರಿ 10:11:] ಯುಗಗಳ ಸಮಾಪ್ತಿಯವರೆಗೂ, [§ ಯೋಹಾ 1:29; 1 ಯೋಹಾ 3:5:] ಆತನು ಪಾಪ ನಿವಾರಣೆ ಮಾಡುವ ಉದ್ದೇಶದಿಂದ ತನ್ನನ್ನು ತಾನೇ ಯಜ್ಞಮಾಡಿಕೊಳ್ಳುವವನಾಗಿ ಪ್ರತ್ಯಕ್ಷನಾದನು.
ಇಬ್ರಿಯರಿಗೆ 9 : 27 (IRVKN)
ಒಂದೇ ಸಾರಿ ಸಾಯುವುದೂ [* ಮತ್ತಾ 16:27; 2 ಕೊರಿ 5:10:] ಆ ಮೇಲೆ ನ್ಯಾಯತೀರ್ಪು ಮನುಷ್ಯರಿಗೆ ಹೇಗೆ ನೇಮಕವಾಗಿದೆಯೋ,
ಇಬ್ರಿಯರಿಗೆ 9 : 28 (IRVKN)
ಹಾಗೆಯೇ ಕ್ರಿಸ್ತನು ಸಹ [† ಯೆಶಾ 53:12; 1 ಪೇತ್ರ. 2:24; 3:18; ಮತ್ತಾ 20:28; 26:28; ಮಾರ್ಕ 10:45; ಪ್ರಕ 5:9:] ಬಹು ಜನರ ಪಾಪಗಳನ್ನು ಹೊತ್ತು ಕೊಳ್ಳುವುದಕ್ಕೊಸ್ಕರ ಒಂದೇ ಸಾರಿ ಸಮರ್ಪಿತನಾದನು. ಆತನು [‡ ಅ. ಕೃ. 1:11:] ಎರಡನೆಯ ಸಾರಿ ಪ್ರತ್ಯಕ್ಷನಾಗುವಂಥದ್ದು [§ ಇಬ್ರಿ. 4:15:] ಪಾಪವನ್ನು ಪರಿಹರಿಸುವುದಕ್ಕಾಗಿಯಲ್ಲ [* ತೀತ. 2:13:] ತನ್ನನ್ನು ನಿರೀಕ್ಷಿಸಿಕೊಂಡಿರುವವರಿಗೆ ರಕ್ಷಣೆಯನ್ನು ಉಂಟುಮಾಡುವುದಕ್ಕಾಗಿಯೇ. [PE]

1 2 3 4 5 6 7 8 9 10 11 12 13 14 15 16 17 18 19 20 21 22 23 24 25 26 27 28

BG:

Opacity:

Color:


Size:


Font: