ಇಬ್ರಿಯರಿಗೆ 6 : 1 (IRVKN)
(1-2) ಆದುದರಿಂದ ಕ್ರಿಸ್ತನ ವಿಷಯವಾದ ಪ್ರಾಥಮಿಕ ಉಪದೇಶವನ್ನು ಬಿಟ್ಟು, [* ಇಬ್ರಿ. 9:14:] ನಿರ್ಜೀವ ಕ್ರಿಯೆಗಳಿಂದ ಮಾನಸಾಂತರವೂ, ದೇವರಲ್ಲಿ ನಂಬಿಕೆಯೂ, [† ಅ. ಕೃ. 19:4,5.] ದೀಕ್ಷಾಸ್ನಾನಗಳ ಬೋಧನೆಯೂ, [‡ ಅ. ಕೃ. 8:17; 19:6:] ಹಸ್ತಾರ್ಪಣೆಯೂ, [§ ಅ. ಕೃ. 17:31, 32:] ಸತ್ತವರಿಗೆ ಪುನರುತ್ಥಾನವೂ ಮತ್ತು [* ಅ. ಕೃ. 10:42; 17:31; 2 ಕೊರಿ 5:10:] ನಿತ್ಯವಾದ ನ್ಯಾಯತೀರ್ಪೂ ಉಂಟೆಂಬುದರ ಕುರಿತು ಪದೇಪದೇ ಅಸ್ತಿವಾರವನ್ನೆ ಹಾಕುತಿರದೆ ನಾವು ಪರಿಪಕ್ವತೆಯೆಡೆಗೆ [† ಇಬ್ರಿ. 5:12; ಫಿಲಿ. 3:12-14:] ಸಾಗೋಣ.
ಇಬ್ರಿಯರಿಗೆ 6 : 2 (IRVKN)
ದೇವರು ಅನುಮತಿಸುವುದಾದರೆ ನಾವು ಇವುಗಳನ್ನು ಮಾಡುವೆವು.
ಇಬ್ರಿಯರಿಗೆ 6 : 3 (IRVKN)
ಒಂದು ಸಾರಿ [‡ ಇಬ್ರಿ. 10:32:] ಬೆಳಕಿನಲ್ಲಿ ಸೇರಿದವರು ಸ್ವರ್ಗೀಯ [§ ಯೋಹಾ 4:10; ಎಫೆ 2:8:] ದಾನವನ್ನು ಅನುಭವಿಸಿದವರು, [* ಗಲಾ. 3:2, 5:] ಪವಿತ್ರಾತ್ಮನಲ್ಲಿ ಪಾಲುಗಾರರಾದವರು,
ಇಬ್ರಿಯರಿಗೆ 6 : 4 (IRVKN)
ದೇವರ ವಾಕ್ಯದ ಶ್ರೇಷ್ಠತೆಯನ್ನೂ ಮುಂದಣ ಯುಗದ ಶಕ್ತಿಯನ್ನೂ ಅನುಭವಿಸಿದವರು ಅದರಿಂದ ಹಿಂಜಾರಿಹೋದರೆ,
ಇಬ್ರಿಯರಿಗೆ 6 : 5 (IRVKN)
[† 1 ಯೋಹಾ 5:16:] ಅವರಲ್ಲಿ ತಿರುಗಿ ಮಾನಸಾಂತರವನ್ನು ಹುಟ್ಟಿಸುವುದು ಅಸಾಧ್ಯ, ಯಾಕೆಂದರೆ [‡ ಇಬ್ರಿ. 10:29:] ಅವರು ತಾವಾಗಿಯೇ ದೇವರ ಮಗನನ್ನು ಪುನಃ ಶಿಲುಬೆಗೆ ಹಾಕುವವರೂ ಆತನನ್ನು ಬಹಿರಂಗವಾಗಿ ಅವಮಾನಪಡಿಸುವವರೂ ಆಗಿರುತ್ತಾರೆ.
ಇಬ್ರಿಯರಿಗೆ 6 : 6 (IRVKN)
ಭೂಮಿಯು ತನ್ನ ಮೇಲೆ ಅನೇಕಾವರ್ತಿ ಸುರಿಯುವ ಮಳೆಯನ್ನು ಹೀರಿಕೊಂಡು, ಅದು ಯಾರ ನಿಮಿತ್ತವಾಗಿ ವ್ಯವಸಾಯ ಮಾಡಲ್ಪಡುತ್ತದೋ, ಅವರಿಗೆ ಅನುಕೂಲವಾದ ಬೆಳೆಯನ್ನು ಕೊಡುತ್ತದೆ, ಅದು ದೇವರ ಆಶೀರ್ವಾದವನ್ನು ಹೊಂದುತ್ತದೆ.
ಇಬ್ರಿಯರಿಗೆ 6 : 7 (IRVKN)
[§ ಯೆಶಾ 5:1-7; ಲೂಕ 13:6-9:] ಆದರೆ ಅದು ಮುಳ್ಳುಗಿಡಗಳನ್ನೂ ಕಳೆಗಳನ್ನೂ ಬೆಳೆಸಿದರೆ, ಅಯೋಗ್ಯವಾದದ್ದಾಗಿ ಶಾಪಕ್ಕೆ ಗುರಿಯಾಗುತ್ತದೆ. [* ಮಲಾ. 4:1; ಯೋಹಾ 15:6:] ಕೊನೆಗದು ಸುಡಲ್ಪಡುತ್ತದೆ.
ಇಬ್ರಿಯರಿಗೆ 6 : 8 (IRVKN)
ಪ್ರಿಯರೇ, ಈ ರೀತಿಯಾಗಿ ನಾವು ಮಾತನಾಡಿದರೂ ನಿಮ್ಮ ವಿಷಯವಾಗಿಯೂ ರಕ್ಷಣೆಗೆ ಸಂಬಂಧಿಸಿದವುಗಳಲ್ಲಿಯೂ ನೀವು ಉತ್ತಮರಾಗಿದ್ದೀರೆಂದು ನಂಬಿದ್ದೇವೆ.
ಇಬ್ರಿಯರಿಗೆ 6 : 9 (IRVKN)
[† ರೋಮಾ. 15:31; 2 ಕೊರಿ 8:4; 9:1, 12; 2 ತಿಮೊ. 1:18; ಪ್ರಕ 2:19:] ನೀವು ದೇವಜನರಿಗೆ ಉಪಚಾರ ಮಾಡಿದ್ದೀರಿ, ಇನ್ನೂ ಮಾಡುತ್ತಾ ಇದ್ದಿರಿ. ಈ ಕೆಲಸವನ್ನು ಮತ್ತು ಇದರಲ್ಲಿ ನೀವು ಆತನ ನಾಮದ ಕಡೆಗೆ ತೋರಿಸಿದ ಪ್ರೀತಿಯನ್ನು [‡ ಜ್ಞಾ. 19:17; ಮತ್ತಾ 10:42; 25:40; ಮಾರ್ಕ 9:41:] ಆತನು ಮರೆಯುವುದಿಲ್ಲ, ಯಾಕೆಂದರೆ ದೇವರು ಅನೀತಿಯುಳ್ಳವನಲ್ಲ.
ಇಬ್ರಿಯರಿಗೆ 6 : 10 (IRVKN)
ನಿರೀಕ್ಷೆಯ ಸಂಪೂರ್ಣ ನಿಶ್ಚಯತ್ವವನ್ನು ಹೊಂದುವುದಕ್ಕಾಗಿ ಅಂತ್ಯದವರೆಗೂ ನೀವು ಅದೇ [§ ರೋಮಾ. 5:2-5:] ಶ್ರದ್ಧೆಯನ್ನು ತೋರಿಸಬೇಕೆಂದು ನಾನು ಬಹಳವಾಗಿ ಅಪೇಕ್ಷಿಸುತ್ತೇವೆ.
ಇಬ್ರಿಯರಿಗೆ 6 : 11 (IRVKN)
ನೀವು ಸೋಮಾರಿಗಳಾಗಿರಬೇಕೆಂದು ಅಪೇಕ್ಷಿಸುವುದಿಲ್ಲ, ಬದಲಿಗೆ ನಂಬಿಕೆಯಿಂದಲೂ, ತಾಳ್ಮೆಯಿಂದಲೂ, ವಾಗ್ದಾನಗಳನ್ನು ಬಾಧ್ಯವಾಗಿ [* ಇಬ್ರಿ. 13:7; ಇಬ್ರಿ. 10:36; 13:7:] ಹೊಂದುವವರನ್ನು ಅನುಸರಿಸುವವರಾಗಬೇಕೆಂದು ಕೋರುತ್ತೇನೆ. [PS]
ಇಬ್ರಿಯರಿಗೆ 6 : 12 (IRVKN)
{ದೇವರ ವಾಗ್ದಾನಗಳು ಎಷ್ಟು ಮಾತ್ರಕ್ಕೂ ತಪ್ಪುವುದಿಲ್ಲ} [PS] ದೇವರು ಅಬ್ರಹಾಮನಿಗೆ ವಾಗ್ದಾನ ಮಾಡಿದಾಗ ತನಗಿಂತಲೂ ಹೆಚ್ಚಿನವರು ಯಾರೂ ಇಲ್ಲದ್ದರಿಂದ [† ಆದಿ 22:16, 17:] ತನ್ನ ಮೇಲೆ ಆಣೆಯಿಟ್ಟು,
ಇಬ್ರಿಯರಿಗೆ 6 : 13 (IRVKN)
“ಖಂಡಿತವಾಗಿಯೂ ನಾನು ನಿನ್ನನ್ನು ಆಶೀರ್ವದಿಸುವೆನು. ನಿನ್ನ ಸಂತಾನವನ್ನು ಅಭಿವೃದ್ಧಿಪಡಿಸುವೆನು” ಎಂದು ಹೇಳಿದನಷ್ಟೆ.
ಇಬ್ರಿಯರಿಗೆ 6 : 14 (IRVKN)
ಹೀಗೆ [‡ ರೋಮಾ. 4:13:] ಅಬ್ರಹಾಮನು ತಾಳ್ಮೆಯಿಂದ ಕಾದುಕೊಂಡಿದ್ದು ವಾಗ್ದಾನವನ್ನು ಪಡೆದುಕೊಂಡನು.
ಇಬ್ರಿಯರಿಗೆ 6 : 15 (IRVKN)
ಮನುಷ್ಯರು ತಮಗಿಂತಲೂ ಹೆಚ್ಚಿನವನ ಮೇಲೆ ಆಣೆಯಿಡುತ್ತಾರಷ್ಟೆ, [§ ವಿಮೋ 22:11:] ಆಣೆಯನ್ನು ದೃಢಪಡಿಸಿದ ಮೇಲೆ ವಿವಾದವು ಅಂತ್ಯವಾಗುವುದು.
ಇಬ್ರಿಯರಿಗೆ 6 : 16 (IRVKN)
ಹಾಗೆಯೇ ದೇವರು [* ವ. 18; ಕೀರ್ತ 110:4; ಜ್ಞಾ. 19:21:] ತನ್ನ ಸಂಕಲ್ಪವು ಬದಲಾಗಲಾರದ್ದೆಂಬುದನ್ನು, [† ಇಬ್ರಿ. 11:9:] ವಾಗ್ದಾನದ ಬಾಧ್ಯಸ್ಥರಿಗೆ ಬಹು ಸ್ಪಷ್ಟವಾಗಿ ತೋರಿಸಬೇಕೆಂದು ಆಣೆಯಿಟ್ಟು ಸ್ಥಿರಪಡಿಸಿದನು.
ಇಬ್ರಿಯರಿಗೆ 6 : 17 (IRVKN)
ದೇವರ ವಾಗ್ದಾನ ಮತ್ತು ಆಣೆ ಇವೆರಡೂ ನಿಶ್ಚಲವಾದ ಆಧಾರಗಳು ಏಕೆಂದರೆ ದೇವರು ಸುಳ್ಳಾಡುವವನಲ್ಲ. ಅದುದರಿಂದ ಆಶ್ರಯವನ್ನು ಹೊಂದಬೇಕೆಂದು ಓಡಿಬಂದು, [‡ ಇಬ್ರಿ. 12:1,2.] ನಮ್ಮ ಮುಂದೆ ಇಟ್ಟಿರುವ ನಿರೀಕ್ಷೆಯನ್ನು ಹಿಡಿದುಕೊಂಡವರಾದ ನಮಗೆ ಬಲವಾದ ಪ್ರೋತ್ಸಾಹ ಉಂಟಾಯಿತು.
ಇಬ್ರಿಯರಿಗೆ 6 : 18 (IRVKN)
[§ ತೀತ. 1:2:] ಆ ನಿರೀಕ್ಷೆಯು ನಮ್ಮ ಪ್ರಾಣಕ್ಕೆ ವಿಶ್ವಾಸಾರ್ಹವಾದದ್ದೂ ಸ್ಥಿರವಾದದ್ದೂ ಆದ [* ಅಂದರೆ ಆಧಾರವಾಗಿರುವುದು. ] ಲಂಗರವಾಗಿದೆ. ಅದು ಅತಿ ಪರಿಶುದ್ಧ ಸ್ಥಳದ [† ಇಬ್ರಿ. 9:7; ಯಾಜ 16:15:] ತೆರೆಯ ಒಳಗಡೆ ಪ್ರವೇಶಿಸುವಂಥದ್ದಾಗಿದೆ.
ಇಬ್ರಿಯರಿಗೆ 6 : 19 (IRVKN)
ಅಲ್ಲಿಗೆ [‡ ಇಬ್ರಿ. 3:1; 5:6, 10; 7:17, 21] ಯೇಸು ಸದಾಕಾಲವೂ ಮೆಲ್ಕಿಜೆದೇಕನ ತರಹದ ಮಹಾಯಾಜಕನಾಗಿ, [§ ಇಬ್ರಿ. 4:14; 8:1; 9:24:] ನಮಗೋಸ್ಕರ ಮುಂಚಿತವಾಗಿಯೇ ಹೋಗಿ ಆ ಸಾನ್ನಿಧ್ಯವನ್ನು ಪ್ರವೇಶಿಸಿದ್ದಾನೆ. [PE]
ಇಬ್ರಿಯರಿಗೆ 6 : 20 (IRVKN)

1 2 3 4 5 6 7 8 9 10 11 12 13 14 15 16 17 18 19 20

BG:

Opacity:

Color:


Size:


Font: