ಇಬ್ರಿಯರಿಗೆ 5 : 1 (IRVKN)
ಮನುಷ್ಯರೊಳಗಿಂದ ಪ್ರತಿಯೊಬ್ಬ ಮಹಾಯಾಜಕನೂ ಆರಿಸಲ್ಪಟ್ಟು ಮನುಷ್ಯರಿಗೋಸ್ಕರ [* ಇಬ್ರಿ. 2:17:] ದೇವರ ಕಾರ್ಯಗಳನ್ನು ನಡೆಸುವುದಕ್ಕಾಗಿ [† ಇಬ್ರಿ. 8:3:] ನೇಮಿಸಲಾಗಿದ್ದು. [‡ ಇಬ್ರಿ. 8:3, 4; 9:9; 10:11:] ಅವನು ಪಾಪಗಳ ನಿವಾರಣೆಗಾಗಿ ಕಾಣಿಕೆಗಳನ್ನು ಮತ್ತು ಯಜ್ಞಗಳನ್ನು ಸಮರ್ಪಿಸಬೇಕು.
ಇಬ್ರಿಯರಿಗೆ 5 : 2 (IRVKN)
[§ ಇಬ್ರಿ. 7:28:] ತಾನೂ ಸಹ ಬಲಹೀನನಾಗಿರುವುದರಿಂದ [* ಇಬ್ರಿ. 2:18; 4:15:] ಅವನು ಅಜ್ಞಾನಿಗಳಿಗೂ ಮತ್ತು ಮಾರ್ಗತಪ್ಪಿದವರಿಗೂ ದಯಾಪರನಾಗಿ ನಡೆದುಕೊಳ್ಳುವುದಕ್ಕೆ ಶಕ್ತನಾಗಿರುವನು.
ಇಬ್ರಿಯರಿಗೆ 5 : 3 (IRVKN)
ಆದ್ದರಿಂದ, [† ಯಾಜ 4:3; 9:7; 16:6; ಇಬ್ರಿ. 7:27; 9:7:] ಅವನು ಜನರಿಗೋಸ್ಕರ ಹೇಗೋ ಹಾಗೆಯೇ ತನಗೋಸ್ಕರವೂ ಪಾಪನಿವಾರಣೆಗಾಗಿ ಯಜ್ಞಗಳನ್ನು ಸಮರ್ಪಿಸಬೇಕು.
ಇಬ್ರಿಯರಿಗೆ 5 : 4 (IRVKN)
[‡ ಅರಣ್ಯ 16:5, 40; 18:7; 2 ಪೂರ್ವ 26:18:] ಯಾವನೂ ತನ್ನಷ್ಟಕ್ಕೆ ತಾನೇ ಈ ಗೌರವ ಪದವಿಯನ್ನು ವಹಿಸಿಕೊಳ್ಳುವುದಕ್ಕಾಗುವುದಿಲ್ಲ, ಆದರೆ [§ ವಿಮೋ 28:1; 1ಪೂರ್ವ 23:13:] ಆರೋನನಂತೆ ದೇವರಿಂದ ಕರೆಯಲ್ಪಟ್ಟು ವಹಿಸಿಕೊಳ್ಳುತ್ತಾನೆ. [PE][PS]
ಇಬ್ರಿಯರಿಗೆ 5 : 5 (IRVKN)
[* ಯೋಹಾ 8:54:] ಅದೇ ರೀತಿಯಾಗಿ ಕ್ರಿಸ್ತನು, ಸಹ ತನ್ನನ್ನು ಘನಪಡಿಸಿಕೊಂಡು ತಾನೇ ಮಹಾಯಾಜಕನನ್ನಾಗಿ ಮಾಡಿಕೊಳ್ಳಲಿಲ್ಲ. ಆದರೆ [QBR] [† ಇಬ್ರಿ. 1:5 ] “ನೀನು ನನ್ನ ಮಗನು, [QBR2] ಈ ಹೊತ್ತು ನಾನು ನಿನಗೆ ತಂದೆಯಾದೆನು” ಎಂದು ದೇವರೇ ಹೇಳಿದನು.
ಇಬ್ರಿಯರಿಗೆ 5 : 6 (IRVKN)
ಆತನು ಇನ್ನೊಂದು ಕಡೆಯಲ್ಲಿ, [QBR] “ನೀನು [‡ ಕೀರ್ತ 110:4; ಇಬ್ರಿ. 7:17, 21:] ಸದಾಕಾಲವೂ ಮೆಲ್ಕಿಜೆದೇಕನ ತರಹದ ಮಹಾಯಾಜಕನು” ಎಂದು ಹೇಳುತ್ತಾನೆ. [PE][PS]
ಇಬ್ರಿಯರಿಗೆ 5 : 7 (IRVKN)
ಕ್ರಿಸ್ತನು ತಾನೇ ಭೂಲೋಕದಲ್ಲಿ ಮನುಷ್ಯನಾಗಿ ಜೀವಿಸಿದ್ದ ಕಾಲದಲ್ಲಿ, [§ ಮಾರ್ಕ 14:36:] ಮರಣದಿಂದ ತಪ್ಪಿಸಿ ಕಾಪಾಡಲು ಶಕ್ತನಾಗಿರುವಾತನಿಗೆ [* ಕೀರ್ತ 22:1, 2; ಮತ್ತಾ 27:46, 50; ಮಾರ್ಕ 15:34, 37; ಲೂಕ 23:46:] ಗಟ್ಟಿಯಾಗಿ ಮೊರೆಯಿಡುತ್ತಾ, ಕಣ್ಣೀರನ್ನು ಸುರಿಸುತ್ತಾ, [† ಮತ್ತಾ 26:39, 44; ಮಾರ್ಕ 14:36, 39; ಲೂಕ 22:41, 44:] ಪ್ರಾರ್ಥನೆ ವಿಜ್ಞಾಪನೆಗಳನ್ನು [‡ ಅಥವಾ, ಸಮರ್ಪಿಸಿ ಕೇಳಲ್ಪಟ್ಟು ಭಯದಿಂದ ಬಿಡುಗಡೆ ಹೊಂದಿದನು. ] ಸಮರ್ಪಿಸಿದನು. ದೇವರ ಮೇಲಣ ಭಯಭಕ್ತಿಯ ನಿಮಿತ್ತ ಆತನ ಪ್ರಾರ್ಥನೆಯನ್ನು ದೇವರು ಕೇಳಿದನು.
ಇಬ್ರಿಯರಿಗೆ 5 : 8 (IRVKN)
ಹೀಗೆ [§ ಇಬ್ರಿ. 1:2:] ಆತನು ಮಗನಾಗಿದ್ದರೂ ತಾನು [* ಫಿಲಿ. 2:8:] ಅನುಭವಿಸಿದ ಬಾಧೆಗಳಿಂದಲೇ ವಿಧೇಯತೆಯನ್ನು ಕಲಿತುಕೊಂಡನು.
ಇಬ್ರಿಯರಿಗೆ 5 : 9 (IRVKN)
ಇದಲ್ಲದೆ [† ಇಬ್ರಿ. 2:10:] ಆತನು ಪರಿಪೂರ್ಣನಾಗಿ, ತನಗೆ ವಿಧೇಯರಾಗಿರುವ ಎಲ್ಲರಿಗೂ [‡ ಯೆಶಾ 45:17:] ನಿತ್ಯ ರಕ್ಷಣೆಗೆ ಕಾರಣನಾದನು.
ಇಬ್ರಿಯರಿಗೆ 5 : 10 (IRVKN)
ಅಲ್ಲದೆ ಆತನು [§ ಇಬ್ರಿ. 5:6; 6:20:] ಮೆಲ್ಕಿಜೆದೇಕನ ತರಹದ ಮಹಾಯಾಜಕನಾಗಿ ದೇವರಿಂದ ನೇಮಿಸಲ್ಪಟ್ಟನು. [PS]
ಇಬ್ರಿಯರಿಗೆ 5 : 11 (IRVKN)
{ನಂಬಿಕೆಯನ್ನು ತ್ಯಜಿಸುವುದರ ಕುರಿತು ಎಚ್ಚರಿಕೆ} [PS] ಈ ವಿಷಯದಲ್ಲಿ ನಾವು ಹೇಳಬೇಕಾದದ್ದು ಎಷ್ಟೋ ಇದೆ. ಆದರೆ ನಿಮ್ಮ ಕಿವಿಗಳು ಮಂದವಾಗಿರುವುದರಿಂದ ಅದನ್ನು ವಿವರಿಸುವುದು ಕಷ್ಟವಾಗಿದೆ.
ಇಬ್ರಿಯರಿಗೆ 5 : 12 (IRVKN)
ನೀವು ಇಷ್ಟರೊಳಗೆ ಬೋಧಕರಾಗಿರಬೇಕಾಗಿದ್ದರೂ, ದೇವರ ವಾಕ್ಯಗಳ [* ಇಬ್ರಿ. 6:1:] ಮೂಲಪಾಠಗಳನ್ನು ಒಬ್ಬನು ನಿಮಗೆ ಪುನಃ ಕಲಿಸಿಕೊಡಬೇಕಾಗಿದೆ. ನಿಮಗೆ ಇನ್ನೂ [† 1 ಕೊರಿ 3:2:] ಹಾಲಿನ ಅವಶ್ಯಕತೆಯಿದೆಯೇ ಹೊರತು ಗಟ್ಟಿಯಾದ ಆಹಾರವಲ್ಲ.
ಇಬ್ರಿಯರಿಗೆ 5 : 13 (IRVKN)
ಹಾಲು ಕುಡಿಯುವವನು [‡ 1 ಕೊರಿ 3:1:] ಕೂಸಿನಂತಿದ್ದು ನೀತಿಯ ಸಂದೇಶದಲ್ಲಿ ಅನುಭವ ಇಲ್ಲದವನಾಗಿದ್ದಾನೆ.
ಇಬ್ರಿಯರಿಗೆ 5 : 14 (IRVKN)
ಗಟ್ಟಿಯಾದ ಆಹಾರವು [§ ಎಫೆ 4:12, 13. ಇಬ್ರಿ. 6:1:] ಪ್ರಾಯಸ್ಥರಿಗೋಸ್ಕರ, ಅಂದರೆ [* ಆದಿ 3:22; 1 ಅರಸು. 3:9; ಯೆಶಾ 7:15:] ತಪ್ಪು ಮತ್ತು ಸರಿಯಾದ್ದದನ್ನು ಗುರುತಿಸಲು, ಅಭ್ಯಾಸದ ಮೂಲಕ ನೈಪುಣ್ಯತೆಯನ್ನು ಹೊಂದಿದವರಿಗೋಸ್ಕರವಾಗಿದೆ. [PE]

1 2 3 4 5 6 7 8 9 10 11 12 13 14

BG:

Opacity:

Color:


Size:


Font: