ಇಬ್ರಿಯರಿಗೆ 4 : 1 (IRVKN)
ಹೀಗಿರಲಾಗಿ, ದೇವರ ವಿಶ್ರಾಂತಿಯಲ್ಲಿ ಸೇರಬಹುದೆಂಬ ವಾಗ್ದಾನ ಇನ್ನೂ ಇರುವುದರಿಂದ ನಿಮ್ಮಲ್ಲಿ ಯಾವನಾದರೂ [* ಇಬ್ರಿ. 12:15:] ಅದರಿಂದ ತಪ್ಪಿಹೋಗದಂತೆ ನಾವು ಭಯಭಕ್ತಿಯಿಂದ ಇರೋಣ.
ಇಬ್ರಿಯರಿಗೆ 4 : 2 (IRVKN)
ಇಸ್ರಾಯೇಲ್ಯರಿಗೆ ದೇವರ ವಿಶ್ರಾಂತಿಯ ಶುಭವರ್ತಮಾನವು ಸಾರೋಣವಾದಂತೆಯೇ ನಮಗೂ ಸಾರೋಣವಾಯಿತು. ಆದರೆ ಆ ಕಾಲದಲ್ಲಿ ಕೇಳಿದವರ [† ರೋಮಾ. 3:3:] ನಂಬಿಕೆಯೊಂದಿಗೆ ಇವರು ಪಾಲುಗಾರರಾಗದ ಕಾರಣ [‡ 1 ಥೆಸ. 2:13:] ಆ ಸಂದೇಶದಿಂದ ಅವರಿಗೆ ಪ್ರಯೋಜನವಾಗಲಿಲ್ಲ.
ಇಬ್ರಿಯರಿಗೆ 4 : 3 (IRVKN)
ಈಗ ನಂಬುವವರಾದ ನಾವುಗಳೇ ಆ [§ ಕೀರ್ತ 95:11; ಇಬ್ರಿ. 3:11:] ವಿಶ್ರಾಂತಿಯಲ್ಲಿ ಸೇರುವವರು. ಏಕೆಂದರೆ ಲೋಕಾದಿಯಿಂದ ತನ್ನ ಸೃಷ್ಟಿಯ ಕಾರ್ಯಗಳು ಮುಗಿದುಹೋದಾಗ್ಯೂ [QBR] “ಅವರು ನನ್ನ ವಿಶ್ರಾಂತಿಯಲ್ಲಿ ಸೇರುವುದೇ ಇಲ್ಲ ಎಂದು [QBR2] ನಾನು ಕೋಪದಿಂದ ಪ್ರಮಾಣ ಮಾಡಿದೆನು” ಎಂದು ಹೇಳಿದೆಯಲ್ಲಾ. [PE][PS]
ಇಬ್ರಿಯರಿಗೆ 4 : 4 (IRVKN)
ಎಲ್ಲಿಯೋ ಒಂದು ಕಡೆ ಏಳನೆಯ ದಿನವನ್ನು ಕುರಿತಾಗಿ, [* ಆದಿ 2:2; ವಿಮೋ 20:11; 31:17:] “ದೇವರು ತನ್ನ ಕಾರ್ಯಗಳನ್ನೆಲ್ಲಾ ಮುಗಿಸಿಬಿಟ್ಟು, ಏಳನೆಯ ದಿನದಲ್ಲಿ ವಿಶ್ರಮಿಸಿಕೊಂಡನೆಂದು” ಬರೆದದೆ.
ಇಬ್ರಿಯರಿಗೆ 4 : 5 (IRVKN)
[† ಇಬ್ರಿ. 4:3:] “ಇವರು ನನ್ನ ವಿಶ್ರಾಂತಿಯಲ್ಲಿ ಸೇರುವುದೇ ಇಲ್ಲವೆಂದು” ಎಂದು ಭಾಗದಲ್ಲಿ ಆತನು ಪುನಃ ಹೇಳಿದ್ದಾನೆ.
ಇಬ್ರಿಯರಿಗೆ 4 : 6 (IRVKN)
ಆದ್ದರಿಂದ, ಕೆಲವರು ದೇವರ ವಿಶ್ರಾಂತಿಯಲ್ಲಿ ಸೇರುವುದಕ್ಕೆ ದೇವರು ಇನ್ನೂ ಅನುಮತಿಸುವವನಾಗಿದ್ದಾನೆ. ಮೊದಲು ಶುಭವರ್ತಮಾನವನ್ನು ಕೇಳಿದವರು ಅವಿಧೇಯರಾದ ಕಾರಣ ಅದರಲ್ಲಿ ಸೇರದೆಹೋದರು.
ಇಬ್ರಿಯರಿಗೆ 4 : 7 (IRVKN)
ಪುನಃ ಬಹುಕಾಲದ ನಂತರ ಆತನು ದಾವೀದನ ಮೂಲಕ ‘ಈ ಹೊತ್ತೇ’ ಎಂದು ಬೇರೊಂದು ದಿನವನ್ನು ಗೊತ್ತುಮಾಡಿದ್ದಾನೆ. ಹೇಗೆಂದರೆ, [QBR] [‡ ಇಬ್ರಿ. 3:7, 8:] “ನೀವು ಈ ಹೊತ್ತು ದೇವರ ಸ್ವರಕ್ಕೆ ಕಿವಿಗೊಡುವುದಾದರೆ, [QBR2] ನಿಮ್ಮ ಹೃದಯಗಳನ್ನು ಕಠಿಣ ಮಾಡಿಕೊಳ್ಳಬೇಡಿರಿ!” ಎಂದು ಹೇಳುತ್ತಾನಷ್ಟೆ. [PE][PS]
ಇಬ್ರಿಯರಿಗೆ 4 : 8 (IRVKN)
[§ ಯೆಹೋ. 3:10, 14-17; ಅ. ಕೃ. 7:45:] ಯೆಹೋಶುವನು ಅವರನ್ನು ಆ ವಿಶ್ರಾಂತಿಯಲ್ಲಿ ಸೇರಿಸಿದ್ದಾದರೆ, ಬೇರೊಂದು ದಿನವನ್ನು ಕುರಿತು ದೇವರು ಹೇಳುತ್ತಿರಲಿಲ್ಲವಲ್ಲಾ.
ಇಬ್ರಿಯರಿಗೆ 4 : 9 (IRVKN)
ಆದಕಾರಣ ದೇವರ ಜನರಿಗೆ ಸಬ್ಬತೆಂಬ ವಿಶ್ರಾಂತಿಯು ಇನ್ನೂ ಉಂಟು.
ಇಬ್ರಿಯರಿಗೆ 4 : 10 (IRVKN)
ಹೇಗೆಂದರೆ ದೇವರು ತನ್ನ ಕೆಲಸಗಳನ್ನು ಮುಗಿಸಿ ಹೇಗೆ ವಿಶ್ರಮಿಸಿಕೊಂಡನೋ ಹಾಗೆಯೇ ಆತನ ವಿಶ್ರಾಂತಿಯಲ್ಲಿ ಸೇರಿರುವವನು ಸಹ ತನ್ನ ಕೆಲಸಗಳನ್ನು ಮುಗಿಸಿ ವಿಶ್ರಮಿಸಿಕೊಂಡಿದ್ದಾನೆ.
ಇಬ್ರಿಯರಿಗೆ 4 : 11 (IRVKN)
ಆದ್ದರಿಂದ ನಾವು ಈ ವಿಶ್ರಾಂತಿಯಲ್ಲಿ ಸೇರುವುದಕ್ಕೆ ಪ್ರಯತ್ನಿಸೋಣ. [* ಇಬ್ರಿ. 3:12:] ನಮ್ಮಲ್ಲಿ ಒಬ್ಬರಾದರೂ ಅವರಂತೆ ಅವಿಧೇಯರಾಗಿ ಬಿದ್ದುಹೋಗದೆ ಇರೋಣ.
ಇಬ್ರಿಯರಿಗೆ 4 : 12 (IRVKN)
ಏಕೆಂದರೆ [† 1 ಪೇತ್ರ. 1:23:] ದೇವರ ವಾಕ್ಯವು ಸಜೀವವಾದದ್ದು, [‡ ಯೆರೆ 23:29; ಅ. ಕೃ. 2:37; 1 ಥೆಸ. 2:13:] ಸಕ್ರಿಯವಾದದ್ದು ಮತ್ತು ಯಾವ [§ ಪ್ರಕ 1:16; 2:12:] ಇಬ್ಬಾಯಿ ಕತ್ತಿಗಿಂತಲೂ [* ಯೆಶಾ 49:2; ಎಫೆ 6:17:] ಹರಿತವಾದದ್ದು ಆಗಿದ್ದು, ಪ್ರಾಣ ಆತ್ಮಗಳನ್ನೂ ಕೀಲುಮಜ್ಜೆಗಳನ್ನೂ ವಿಭಾಗಿಸುವಷ್ಟು ಮಟ್ಟಿಗೂ ತೂರಿಹೋಗುವಂಥದಾಗಿದ್ದು, [† 1 ಕೊರಿ 14:24, 25:] ಹೃದಯದ ಆಲೋಚನೆಗಳನ್ನೂ ಉದ್ದೇಶಗಳನ್ನೂ ವಿವೇಚಿಸುವಂಥದ್ದೂ ಆಗಿದೆ.
ಇಬ್ರಿಯರಿಗೆ 4 : 13 (IRVKN)
[‡ 2 ಪೂರ್ವ 16:9; ಯೋಬ. 34:21; ಕೀರ್ತ 33:13-15; ಜ್ಞಾ. 15:11:] ಆತನ ದೃಷ್ಟಿಗೆ ಮರೆಯಾಗಿರುವ ಒಂದು ಸೃಷ್ಟಿಯೂ ಇಲ್ಲ. [§ ಯೋಬ. 26:6:] ಆತನ ಕಣ್ಣಿಗೆ ಮರೆಯಾದದ್ದು ಒಂದೂ ಇಲ್ಲ ಎಲ್ಲವೂ ನಗ್ನವಾಗಿಯೂ ಬಟ್ಟಬಯಲಾಗಿಯೂ ಇದೆ. ಅಂಥವನಿಗೆ ನಾವು ಲೆಕ್ಕಕೊಡಬೇಕಾಗಿದೆ. [PS]
ಇಬ್ರಿಯರಿಗೆ 4 : 14 (IRVKN)
{ಯೇಸು ಶ್ರೇಷ್ಠನಾದ ಮಹಾಯಾಜಕನು} [PS] [* ಇಬ್ರಿ. 7:26; 9:24; ಎಫೆ 4:10:] ಆಕಾಶಗಳನ್ನು ದಾಟಿಹೋದ ದೇವಕುಮಾರನಾದ ಯೇಸುವೆಂಬ [† ಇಬ್ರಿ. 2:17, 3:1; ಇಬ್ರಿ. 10:21:] ಶ್ರೇಷ್ಠ ಮಹಾಯಾಜಕನು ನಮಗಿದ್ದಾನೆ. ಆದುದರಿಂದ ನಮಗಿರುವ [‡ ಇಬ್ರಿ. 10:23:] ನಂಬಿಕೆಯನ್ನು ದೃಢವಾಗಿ ಹಿಡಿಯೋಣ.
ಇಬ್ರಿಯರಿಗೆ 4 : 15 (IRVKN)
ಏಕೆಂದರೆ ನಮಗಿರುವ ಮಹಾಯಾಜಕನು ನಮ್ಮ [§ ಯೆಶಾ 53:3; ಇಬ್ರಿ. 5:2:] ಬಲಹೀನತೆಗಳಲ್ಲಿ ಅನುಕಂಪ ತೋರಿಸುವವನಾಗಿದ್ದಾನೆ. [* ಇಬ್ರಿ. 2:17, 18:] ಆತನು ಸರ್ವ ವಿಷಯಗಳಲ್ಲಿಯೂ ನಮ್ಮ ಹಾಗೆ ಶೋಧನೆಗೆ ಗುರಿಯಾದವನು, [† ಇಬ್ರಿ. 7:26; 9:28; 2 ಕೊರಿ 5:21; 1 ಪೇತ್ರ. 2:22; 1 ಯೋಹಾ 3:5; ಯೋಹಾ 8:46; 14:30. ] ಪಾಪ ಮಾತ್ರ ಮಾಡಲಿಲ್ಲವಷ್ಟೇ.
ಇಬ್ರಿಯರಿಗೆ 4 : 16 (IRVKN)
ಆದುದರಿಂದ [‡ ಇಬ್ರಿ. 7:19, 25; 10:19; ಎಫೆ 2:18; 3:12:] ನಾವು ತಕ್ಕ ಸಮಯದಲ್ಲಿ ಕರುಣೆಯನ್ನು ಹೊಂದುವಂತೆಯೂ ಆತನ ಕೃಪೆಯಿಂದ ಸಮಯೋಚಿತವಾದ ಸಹಾಯವು ನಮಗೆ ದೊರೆಯುವಂತೆಯೂ ಧೈರ್ಯದಿಂದ ಆತನ ಕೃಪಾಸನದ ಮುಂದೆ ಬರೋಣ. [PE]

1 2 3 4 5 6 7 8 9 10 11 12 13 14 15 16

BG:

Opacity:

Color:


Size:


Font: