ಇಬ್ರಿಯರಿಗೆ 3 : 1 (IRVKN)
{ಮೋಶೆಗಿಂತ ಯೇಸು ಶ್ರೇಷ್ಠನು} [PS] ಆದ್ದರಿಂದ ಪರಿಶುದ್ಧರಾದ ಸಹೋದರರೇ, ಪರಲೋಕದ [* ಎಫೆ 4:1; ಫಿಲಿ. 3:14; 2 ತಿಮೊ. 1:9:] ಕರೆಯುವಿಕೆಗೆ ಪಾಲುಗಾರರಾಗಿರುವವರೇ, ನಾವು ಒಪ್ಪಿಕೊಂಡಿರುವ [† ಯೋಹಾ 20:21. ಅಥವಾ ದೇವಪ್ರೇಷಿತನೂ, ದೇವರಿಂದ ಕಳುಹಿಸಲ್ಪಟ್ಟವನು. ] ಅಪೊಸ್ತಲನೂ ಮತ್ತು ಮಹಾಯಾಜಕನೂ ಆಗಿರುವ ಯೇಸುವನ್ನು ಗಮನವಿಟ್ಟು ಯೋಚಿಸಿರಿ. [PE][PS]
ಇಬ್ರಿಯರಿಗೆ 3 : 2 (IRVKN)
[‡ ಅರಣ್ಯ 12:7; ಇಬ್ರಿ. 5:5:] ಮೋಶೆಯು ದೇವರ ಮನೆಯಲ್ಲೆಲ್ಲಾ ನಂಬಿಗಸ್ತನಾಗಿದ್ದಂತೆಯೇ, ಯೇಸುವೂ ತನ್ನನ್ನು ನೇಮಕ ಮಾಡಿರುವಾತನಿಗೆ ನಂಬಿಗಸ್ತನಾಗಿದ್ದಾನೆ.
ಇಬ್ರಿಯರಿಗೆ 3 : 3 (IRVKN)
ಮನೆಗಿಂತ ಮನೆಕಟ್ಟಿದವನಿಗೆ ಹೆಚ್ಚಾದ ಗೌರವವಿರುವುದರಿಂದ ಮೋಶೆಗಿಂತ ಯೇಸು ಹೆಚ್ಚಾದ ಗೌರವಕ್ಕೆ ಯೋಗ್ಯನೆಂದೆಣಿಸಲ್ಪಟ್ಟಿದ್ದಾನೆ.
ಇಬ್ರಿಯರಿಗೆ 3 : 4 (IRVKN)
ಪ್ರತಿಯೊಂದು ಮನೆಯನ್ನು ಯಾರೊಬ್ಬನು ಕಟ್ಟಿರುವನು, ಆದರೆ [§ ಎಫೆ 2:10; 3:9:] ಸಮಸ್ತವನ್ನು ಕಟ್ಟಿದಾತನು ದೇವರೇ.
ಇಬ್ರಿಯರಿಗೆ 3 : 5 (IRVKN)
ಮೋಶೆಯು ದೇವರ ಮನೆಯಲ್ಲೆಲ್ಲಾ ನಂಬಿಗಸ್ತನಾದ [* ವಿಮೋ 14:31; ಧರ್ಮೋ 34:5; ಯೆಹೋ. 1:2; 8:31; ಕೀರ್ತ 105:26; ಪ್ರಕ 15:3:] ಸೇವಕನಾಗಿದ್ದನು. ಅವನು ಮುಂದೆ ಪ್ರಕಟವಾಗಬೇಕಾಗಿದ್ದಂಥ ವಿಷಯಗಳಿಗೆ [† ಧರ್ಮೋ 18:15,18,19:] ಸಾಕ್ಷಿಕೊಟ್ಟಿದ್ದಾನೇ.
ಇಬ್ರಿಯರಿಗೆ 3 : 6 (IRVKN)
ಆದರೆ ಕ್ರಿಸ್ತನಾದರೋ [‡ ಇಬ್ರಿ. 1:2:] ಮಗನಾಗಿ ದೇವರ ಮನೆಯ ಮೇಲೆ ಅಧಿಕಾರಿಯಾಗಿದ್ದಾನೆ. ನಾವು ನಮ್ಮ ಭರವಸೆಯನ್ನೂ, ನಿರೀಕ್ಷೆಯ ಮಹತ್ವವನ್ನೂ, [§ ಇಬ್ರಿ. 3:14; 6:11; ಮತ್ತಾ 10:22; ಪ್ರಕ 2:26:] ಕಡೆ ತನಕ ಗಟ್ಟಿಯಾಗಿ ಹಿಡಿದುಕೊಂಡಿದ್ದರೆ [* 1 ಕೊರಿ 3:16; 6:19; 2 ಕೊರಿ 6:16; ಎಫೆ 2:21; 1 ತಿಮೊ. 3:15; 1 ಪೇತ್ರ 2:5:] ನಾವೇ ದೇವರ ಮನೆಯಾಗಿರುತ್ತೇವೆ. [PS]
ಇಬ್ರಿಯರಿಗೆ 3 : 7 (IRVKN)
{ದೇವರು ಮಕ್ಕಳಿಗಿರುವ ವಿಶ್ರಾಂತಿ} [PS] ಆದ್ದರಿಂದ ಪವಿತ್ರಾತ್ಮನು ಹೇಳುವ ಪ್ರಕಾರ, [QBR] “ [† ಕೀರ್ತ 95:7-11; ಇಬ್ರಿ. 3:15:] ನೀವು ಈ ದಿನ ದೇವರ ಸ್ವರಕ್ಕೆ ಕಿವಿಗೊಡುವುದಾದರೆ, [QBR2]
ಇಬ್ರಿಯರಿಗೆ 3 : 8 (IRVKN)
[‡ ವಿಮೋ 17:7:] ಇಸ್ರಾಯೇಲ್ಯರು ಅರಣ್ಯದಲ್ಲಿ, ದೇವರನ್ನು ಪರೀಕ್ಷಿಸಿದ ದಿನದಲ್ಲಿ ಹಠಮಾರಿಗಳಾದಂತೆ [QBR2] ನಿಮ್ಮ ಹೃದಯಗಳನ್ನು ಕಠಿಣಮಾಡಿಕೊಳ್ಳಬೇಡಿರಿ. [QBR]
ಇಬ್ರಿಯರಿಗೆ 3 : 9 (IRVKN)
ನಿಮ್ಮ ಹಿರಿಯರು ಮೊಂಡುತನದಿಂದ ನನ್ನನ್ನು ಪರೀಕ್ಷಿಸಿ, [QBR2] [§ ವಿಮೋ 16:35; ಅರಣ್ಯ 14:33,34; ಅ. ಕೃ. 7:36,42:] ನಲವತ್ತು ವರ್ಷ ನನ್ನ ಕೃತ್ಯಗಳನ್ನು ನೋಡಿದರು. [QBR]
ಇಬ್ರಿಯರಿಗೆ 3 : 10 (IRVKN)
ಆದ್ದರಿಂದ, ನಾನು ಈ ಸಂತತಿಯವರ ಮೇಲೆ ಬಹಳ ಬೇಸರಗೊಂಡು, [QBR2] ‘ಅವರು ಯಾವಾಗಲೂ ತಪ್ಪಿಹೋಗುವ ಹೃದಯವುಳ್ಳವರೂ, [QBR2] ಅವರು ನನ್ನ ಮಾರ್ಗಗಳನ್ನು ತಿಳಿಯದವರೂ’ ಎಂದು ನಾನು ಹೇಳಿದೆ. [QBR]
ಇಬ್ರಿಯರಿಗೆ 3 : 11 (IRVKN)
ಹೀಗಿರಲು ‘ಅವರು ನನ್ನ ವಿಶ್ರಾಂತಿಯಲ್ಲಿ ಸೇರುವುದೇ ಇಲ್ಲವೆಂದು [QBR2] [* ಇಬ್ರಿ. 4:3,5:] ಕೋಪಗೊಂಡು ಪ್ರಮಾಣಮಾಡಿದೆನು.’ ” [PE][PS]
ಇಬ್ರಿಯರಿಗೆ 3 : 12 (IRVKN)
ಸಹೋದರರೇ, [† ಮತ್ತಾ 16:16; 2 ಕೊರಿ 3:3; 1 ತಿಮೊ. 4:10:] ಜೀವಸ್ವರೂಪನಾದ ದೇವರನ್ನು ತ್ಯಜಿಸಿ ಬಿಡುವ ಅಪನಂಬಿಕೆಯುಳ್ಳ ದುಷ್ಟ ಹೃದಯವು ನಿಮ್ಮೊಳಗೆ ಯಾವನಲ್ಲಿಯೂ ಇರದಂತೆ ಜಾಗರೂಕರಾಗಿ ನೋಡಿಕೊಳ್ಳಿರಿ.
ಇಬ್ರಿಯರಿಗೆ 3 : 13 (IRVKN)
ನಿಮ್ಮಲ್ಲಿ ಒಬ್ಬರಾದರೂ ಪಾಪದಲ್ಲಿ ಸಿಕ್ಕಿ [‡ ಯೆಶಾ 44:20; ರೋಮಾ. 7:11; ಎಫೆ 4:22:] ಮೋಸಹೋಗಿ ಕಠಿಣರಾಗದಂತೆ, ‘ಇಂದು’ ಎಂದು ಕರೆಯಲ್ಪಡುವ ಅವಕಾಶ ಇನ್ನೂ ಇರುವಾಗಲೇ, ಪ್ರತಿದಿನವೂ ಒಬ್ಬರನ್ನೊಬ್ಬರು ಪ್ರೋತ್ಸಾಹಿಸಿರಿ.
ಇಬ್ರಿಯರಿಗೆ 3 : 14 (IRVKN)
ಮೊದಲಿನಿಂದಲೂ ಇರುವ ನಮ್ಮ ಭರವಸೆಯನ್ನು [§ ಇಬ್ರಿ. 3:6; 10:23; 1 ಕೊರಿ 15:2:] ಅಂತ್ಯದ ವರೆಗೂ ದೃಢವಾಗಿ ಹಿಡಿದುಕೊಳ್ಳುವುದಾದರೆ [* ಅಥವಾ, ನಮ್ಮ ಹಿರಿಯರು ಎದುರು ನೋಡುತ್ತಿದ್ದ ಕ್ರಿಸ್ತನಲ್ಲಿ. ] ನಾವು ಕ್ರಿಸ್ತನಲ್ಲಿ ಪಾಲುಗಾರರಾಗುತ್ತೇವೆ. [QBR]
ಇಬ್ರಿಯರಿಗೆ 3 : 15 (IRVKN)
“ [† ಕೀರ್ತ 95:7-11; ಇಬ್ರಿ. 3:7; 4:7:] ನೀವು ಈ ಹೊತ್ತು ದೇವರ ಸ್ವರವನ್ನು ಕೇಳುವುದಾದರೆ, [QBR2] ಪೂರ್ವಿಕರು ಮೊಂಡುತನದಿಂದ ಮಾಡಿದಂತೆ, [QBR2] ನಿಮ್ಮ ಹೃದಯಗಳನ್ನು ಕಠಿಣಮಾಡಿಕೊಳ್ಳಬೇಡಿರಿ.” [PE][PS]
ಇಬ್ರಿಯರಿಗೆ 3 : 16 (IRVKN)
[‡ ಅರಣ್ಯ 14:2,23,24,30; ಧರ್ಮೋ 1:34-38:] ಆತನು ನುಡಿದದ್ದನ್ನು ಕೇಳಿ ವಿರೋಧಿಸಿದವರು ಯಾರು? ಮೋಶೆಯ ಮೂಲಕ ಐಗುಪ್ತದೊಳಗಿಂದ ಹೊರಗೆ ಕರೆತರಲ್ಪಟ್ಟವರೆಲ್ಲರೂ ಅಲ್ಲವೇ?
ಇಬ್ರಿಯರಿಗೆ 3 : 17 (IRVKN)
ಮತ್ತು ದೇವರು ನಲವತ್ತು ವರ್ಷ ಯಾರ ಮೇಲೆ ಬಹಳವಾಗಿ ಕೋಪಗೊಂಡನು? ಪಾಪ ಮಾಡಿದವರ ಮೇಲೆ ಅಲ್ಲವೇ? [§ ಅರಣ್ಯ 14:29; 1 ಕೊರಿ 10:5:] ಅವರ ಶವಗಳು ಅರಣ್ಯದಲ್ಲಿ ಬಿದ್ದುಹೋದವು.
ಇಬ್ರಿಯರಿಗೆ 3 : 18 (IRVKN)
ನನ್ನ ವಿಶ್ರಾಂತಿಯಲ್ಲಿ [* ಧರ್ಮೋ 1:34,35; ಇಬ್ರಿ. 4:2:] ನೀವು ಸೇರುವುದೇ ಇಲ್ಲವೆಂದು ಯಾರನ್ನು ಕುರಿತು ಆತನು ಪ್ರಮಾಣಮಾಡಿದನೂ? ಅವಿಧೇಯರನ್ನು ಕುರಿತಲ್ಲವೇ?
ಇಬ್ರಿಯರಿಗೆ 3 : 19 (IRVKN)
[† ಇಬ್ರಿ. 4:6; ಕೀರ್ತ 78:21; 106:24] ಅವರು ವಿಶ್ರಾಂತಿಯಲ್ಲಿ ಸೇರಲಾರದೇ ಹೋದದ್ದು ಅವರ ಅಪನಂಬಿಕೆಯಿಂದಲೇ ಎಂದು ನಾವು ಅರಿತಿದ್ದೇವೆ. [PE]

1 2 3 4 5 6 7 8 9 10 11 12 13 14 15 16 17 18 19

BG:

Opacity:

Color:


Size:


Font: