ಇಬ್ರಿಯರಿಗೆ 12 : 1 (IRVKN)
ದೇವರು ನಮ್ಮ ತಂದೆ (1-2)ಆದಕಾರಣ ಇಷ್ಟು ಸಾಕ್ಷಿಗಳ ದೊಡ್ಡ ಗುಂಪು ಮೇಘದಂತೆ ನಮ್ಮ ಸುತ್ತಲು ಇರುವುದರಿಂದ ನಮಗೆ ಅಭ್ಯಂತರಪಡಿಸುವ ಎಲ್ಲಾ ಭಾರವನ್ನೂ, ಸುಲಭವಾಗಿ * ಎಫೆ 4:22: ಮುತ್ತಿಕೊಳ್ಳುವ ಪಾಪವನ್ನು ಸಹ ನಾವು ತೆಗೆದಿಟ್ಟು, † ಇಬ್ರಿ. 2:10: ನಂಬಿಕೆಯನ್ನು ಹುಟ್ಟಿಸುವಾತನೂ ಅದನ್ನು ಪರಿಪೂರ್ಣಗೊಳಿಸುವಾತನೂ ಆಗಿರುವ ಯೇಸುವಿನ ಮೇಲೆ ದೃಷ್ಟಿಯಿಟ್ಟು ನಮಗೆ ನೇಮಕವಾದ ‡ 1 ಕೊರಿ 9:24: ಓಟವನ್ನು ಸಹನೆಯಿಂದ ಓಡೋಣ. § ಲೂಕ 24:26; ಫಿಲಿ. 2:8; ಯೆಶಾ 53:11: ಆತನು ತನ್ನ ಮುಂದೆ ಇಟ್ಟಿದ್ದ ಸಂತೋಷಕ್ಕೋಸ್ಕರ ಕೀರ್ತ 22:6,7; 69:19; ಯೆಶಾ 53:3: ಅಪಮಾನವನ್ನು ಅಲಕ್ಷ್ಯಮಾಡಿ, ಶಿಲುಬೆಯ ಮರಣವನ್ನು ಸಹಿಸಿಕೊಂಡು, † ಇಬ್ರಿ. 1:3: ದೇವರ ಸಿಂಹಾಸನದ ಬಲಗಡೆಯಲ್ಲಿ ಆಸೀನನಾಗಿದ್ದಾನೆ.
ಇಬ್ರಿಯರಿಗೆ 12 : 2 (IRVKN)
ಇಬ್ರಿಯರಿಗೆ 12 : 3 (IRVKN)
ನೀವು ಮನಗುಂದಿದವರಾಗಿ ‡ ಗಲಾ. 6:9: ಬೇಸರಗೊಳ್ಳದಂತೆ § ಮತ್ತಾ 10:24: ಯೇಸುವನ್ನು ಕುರಿತು ಯೋಚಿಸಿರಿ. * ಕೆಲವು ಪ್ರತಿಗಳಲ್ಲಿ, ಪಾಪಿಗಳು ತಮ್ಮ ಸ್ವಂತ ಹಾನಿಗೆ ಮಾಡಿದ ವಿರೋಧವನ್ನು ಎಷ್ಟಾಗಿ ಸಹಿಸಿಕೊಂಡನು ಎಂದು ಬರೆದದೆ. ಆತನು ಪಾಪಿಗಳಿಂದ ಎಷ್ಟೋ ವಿರೋಧವನ್ನು ಸಹಿಸಿಕೊಂಡನು.
ಇಬ್ರಿಯರಿಗೆ 12 : 4 (IRVKN)
ನೀವು ಪಾಪಕ್ಕೆ ವಿರೋಧವಾಗಿ ಹೋರಾಡುವುದರಲ್ಲಿ ರಕ್ತವನ್ನು ಸುರಿಸುವಷ್ಟು ಹೋರಾಡಲಿಲ್ಲವಲ್ಲ.
ಇಬ್ರಿಯರಿಗೆ 12 : 5 (IRVKN)
ಮಕ್ಕಳಿಗೆ ಹೇಳುವಂತೆ ನಿಮಗೆ ಹೇಳಿದ ಎಚ್ಚರಿಕೆಯ ಮಾತುಗಳನ್ನು ಮರೆತುಬಿಟ್ಟಿದ್ದೀರೋ? ಅದೇನೆಂದರೆ, “ನನ್ನ † ಜ್ಞಾ. 3:11,12; ಯೋಬ 5:17: ಮಗನೇ, ಕರ್ತನ ಶಿಕ್ಷೆಯನ್ನು ಕಡೆಗಣಿಸಬೇಡ. ಆತನು ನಿನ್ನನ್ನು ಗದರಿಸುವಾಗ ಬೇಸರಗೊಳ್ಳಬೇಡ.”
ಇಬ್ರಿಯರಿಗೆ 12 : 6 (IRVKN)
ಏಕೆಂದರೆ ‡ ಕೀರ್ತ 94:12; 119:67,75; ಪ್ರಕ 3:19: ಕರ್ತನು ಯಾರನ್ನು ಪ್ರೀತಿಸುತ್ತಾನೋ ಅವರನ್ನು ಶಿಕ್ಷಿಸುತ್ತಾನೆ. ತಾನು ಮಗನಂತೆ ಸ್ವೀಕರಿಸುವ ಪ್ರತಿಯೊಬ್ಬನನ್ನು ದಂಡಿಸುತ್ತಾನೆ ಎಂಬುದಾಗಿದೆ.
ಇಬ್ರಿಯರಿಗೆ 12 : 7 (IRVKN)
7 ನಿಮ್ಮ ಶಿಸ್ತಿಗಾಗಿಯೇ, ನಿಮಗೆ ಶಿಕ್ಷೆಯಾಗುತ್ತದೆಂದು ಅದನ್ನು ಸಹಿಸಿಕೊಳ್ಳಿರಿ. § ಧರ್ಮೋ 8:5; 2 ಸಮು 7:14; ಜ್ಞಾ. 13:24: ದೇವರು ನಿಮ್ಮನ್ನು ಮಕ್ಕಳೆಂದು ನಡೆಸುತ್ತಾನೆ. ಯಾಕೆಂದರೆ ತಂದೆಯಿಂದ ಶಿಕ್ಷೆ ಹೊಂದದ ಮಗನೆಲ್ಲಿದ್ದಾನೆ?
ಇಬ್ರಿಯರಿಗೆ 12 : 8 (IRVKN)
ಎಲ್ಲರೂ ಪಾಲುಗಾರರಬೇಕಾದ * 1 ಪೇತ್ರ. 5:9: ಶಿಕ್ಷೆಯು ನಿಮಗುಂಟಾಗದಿದ್ದರೆ ನೀವು ಹಾದರದಿಂದ ಹುಟ್ಟಿದವರೇ ಹೊರತು ಆತನ ಮಕ್ಕಳಲ್ಲ.
ಇಬ್ರಿಯರಿಗೆ 12 : 9 (IRVKN)
ಇದು ಮಾತ್ರವಲ್ಲದೆ ನಮ್ಮನ್ನು ಶಿಕ್ಷಿಸಿದ ಲೌಕಿಕ ತಂದೆಗಳನ್ನು ನಾವು ಸನ್ಮಾನಿಸಿತ್ತೇವಲ್ಲ. ನಮ್ಮ ಆತ್ಮಗಳಿಗೆ † ಅರಣ್ಯ 16:22: ತಂದೆಯಾಗಿರುವಾತನಿಗೆ ನಾವು ಇನ್ನೂ ಹೆಚ್ಚಾಗಿ ಅಧೀನರಾಗಿ ‡ ಯೆಶಾ 38:16: ಜೀವಿಸಬೇಕಲ್ಲವೇ?
ಇಬ್ರಿಯರಿಗೆ 12 : 10 (IRVKN)
ನಮ್ಮ ಲೌಕಿಕ ತಂದೆಗಳು § ಅಥವಾ, ಕೆಲವು ದಿನಗಳ ತನಕ. ಮನಸ್ಸಿಗೆ ಸರಿದೋರಿದಂತೆ ಕೆಲವು ಕಾಲ ಮಾತ್ರ ನಮ್ಮನ್ನು ಶಿಕ್ಷಿಸಿದರು. ಆದರೆ * 2 ಪೇತ್ರ. 1:4; ಯಾಜ 11:44: ದೇವರು ತನ್ನ ಪರಿಶುದ್ಧತೆಯಲ್ಲಿ ನಾವು ಪಾಲುಗಾರರಾಗಬೇಕೆಂದು ನಮ್ಮ ಹಿತಕ್ಕಾಗಿಯೇ ಶಿಕ್ಷಿಸುತ್ತಾನೆ.
ಇಬ್ರಿಯರಿಗೆ 12 : 11 (IRVKN)
ಯಾವ ಶಿಕ್ಷೆಯಾದರೂ † 1 ಪೇತ್ರ. 1:6: ತತ್ಕಾಲಕ್ಕೆ ಸಂತೋಷಕರವಾಗಿ ತೋರದೆ, ದುಃಖಕರವಾಗಿ ತೋರುತ್ತದೆ. ಆದರೆ ಶಿಸ್ತಿನ ಅಭ್ಯಾಸವನ್ನು ಹೊಂದಿದವರು, ಮುಂದೆ ‡ ಯಾಕೋಬ. 3:17,18: ಸಮಾಧಾನವುಳ್ಳ ನೀತಿಯ ಫಲವನ್ನು ಪಡೆಯುತ್ತಾರೆ.
ಇಬ್ರಿಯರಿಗೆ 12 : 12 (IRVKN)
ಆದುದ್ದರಿಂದ § ಯೆಶಾ 35:3; ಯೋಬ. 4:3,4: ಜೋಲುಬಿದ್ದ ಕೈಗಳನ್ನೂ ಮತ್ತು ನಡುಗುವ ಮೊಣಕಾಲುಗಳನ್ನೂ ಬಲಪಡಿಸಿರಿ.
ಇಬ್ರಿಯರಿಗೆ 12 : 13 (IRVKN)
* ಜ್ಞಾ. 4:26,27: ನಿಮ್ಮ ಪಾದಗಳಿಗೆ ನೇರವಾದ ದಾರಿಯನ್ನು ಮಾಡಿಕೊಳ್ಳಿರಿ. ಹೀಗೆ ಮಾಡಿದರೆ ಕುಂಟುವ ಕಾಲು ಉಳುಕಿ ಹೋಗದೇ ವಾಸಿಯಾಗುವುದು.
ಇಬ್ರಿಯರಿಗೆ 12 : 14 (IRVKN)
ದೇವರ ಕೃಪೆಯನ್ನು ತಿರಸ್ಕರಿಸುವುದರ ಬಗ್ಗೆ ಎಚ್ಚರಿಕೆ † ರೋಮಾ. 14:19: ಎಲ್ಲರೊಂದಿಗೆ ಸಮಾಧಾನದಿಂದ ಜೀವಿಸಲು ಮತ್ತು ‡ 1 ಥೆಸ. 4:7: ಪರಿಶುದ್ಧರಾಗಿರಲು ಪ್ರಯತ್ನಮಾಡಿರಿ. ಪರಿಶುದ್ಧತೆಯಿಲ್ಲದೆ ಯಾವನೂ ಕರ್ತನನ್ನು ಕಾಣುವುದಿಲ್ಲ.
ಇಬ್ರಿಯರಿಗೆ 12 : 15 (IRVKN)
ನಿಮ್ಮಲ್ಲಿ ಯಾವನೂ § ಇಬ್ರಿ. 4:1; 2 ಕೊರಿ 6:1; ಗಲಾ. 5:4: ದೇವರ ಕೃಪೆಯಿಂದ ತಪ್ಪಿ ಹಿಂಜಾರಿ ಹೋಗದಂತೆಯೂ, * ಧರ್ಮೋ 29:18; ಅ. ಕೃ. 8:23: ಯಾವ ಕಹಿಯಾದ ಬೇರೂ ನಿಮ್ಮಲ್ಲಿ ಚಿಗುರಿ ಅಸಮಾಧಾನವನ್ನು ಹುಟ್ಟಿಸಿ ಅನೇಕರನ್ನು ಮಲಿನಪಡಿಸದಂತೆ ನೋಡಿಕೊಳ್ಳಿರಿ.
ಇಬ್ರಿಯರಿಗೆ 12 : 16 (IRVKN)
ಯಾವ ಜಾರನಾಗಲಿ, ಏಸಾವನಂಥ ಪ್ರಾಪಂಚಿಕನಾಗಲಿ ನಿಮ್ಮಲ್ಲಿ ಇರದಂತೆ ಜಾಗ್ರತೆ ವಹಿಸಿಕೊಳ್ಳಿರಿ. † ಆದಿ 25:33: ಆ ಏಸಾವನು ಒಂದೇ ಒಂದು ಊಟಕ್ಕೋಸ್ಕರ ತನ್ನ ಚೊಚ್ಚಲುತನದ ಹಕ್ಕನ್ನು ಮಾರಿಬಿಟ್ಟನು.
ಇಬ್ರಿಯರಿಗೆ 12 : 17 (IRVKN)
[‡ ಆದಿ 27:34,36, 38 ]ಅನಂತರದಲ್ಲಿ ತನ್ನ ತಂದೆಯ ಆಶೀರ್ವಾದವನ್ನು ಬಾಧ್ಯವಾಗಿ ಹೊಂದಬೇಕೆಂದು ಕಣ್ಣೀರು ಸುರಿಸುತ್ತಾ ಬೇಡಿಕೊಂಡರೂ, ಪಶ್ಚಾತ್ತಾಪಕ್ಕೆ § ಅಥವಾ. ಮಾನಸಾಂತರಕ್ಕೆ. ಮಾರ್ಗವಿಲ್ಲದೆ ನಿರಾಕರಿಸಲ್ಪಟ್ಟನೆಂದು ನೀವು ಬಲ್ಲವರಾಗಿದ್ದೀರಿ.
ಇಬ್ರಿಯರಿಗೆ 12 : 18 (IRVKN)
(18-19)ನೀವು * ವಿಮೋ 19:18; 20:18; ಧರ್ಮೋ 4:11; 5:22: ಮುಟ್ಟಬಹುದಾದ ಮತ್ತು ಬೆಂಕಿ ಹೊತ್ತಿದಂಥ ಬೆಟ್ಟಕ್ಕೂ, ಕಾರ್ಮೋಡ, ಕಗ್ಗತ್ತಲೆ, ಬಿರುಗಾಳಿ, † ವಿಮೋ 19:16,19: ತುತ್ತೂರಿಯ ಶಬ್ದ, ಮಾತುಗಳ ಧ್ವನಿ ಎಂಬಿವುಗಳ ಬಳಿಗಲ್ಲ ನೀವು ಬಂದಿರುವುದು. ಆ ಧ್ವನಿಯನ್ನು ಕೇಳಿದವರು ಇನ್ನೆಂದಿಗೂ ಆ ಧ್ವನಿ ‡ ವಿಮೋ 20:19; ಧರ್ಮೋ 5:5,23,25; 18:16: ತಮ್ಮೊಂದಿಗೆ ಮಾತನಾಡುವುದೇ ಬೇಡವೆಂದು ಕೇಳಿಕೊಂಡರು.
ಇಬ್ರಿಯರಿಗೆ 12 : 19 (IRVKN)
ಇಬ್ರಿಯರಿಗೆ 12 : 20 (IRVKN)
ಏಕೆಂದರೆ, § ವಿಮೋ 19:12,13: “ಒಂದು ಮೃಗವಾದರೂ ಬೆಟ್ಟವನ್ನು ಮುಟ್ಟಿದರೆ ಅದನ್ನು ಕಲ್ಲೆಸೆದು ಕೊಲ್ಲಬೇಕೆಂಬ” ವಿಧಿಯನ್ನು ಅವರಿಂದ ತಾಳಲಾಗಲಿಲ್ಲ.
ಇಬ್ರಿಯರಿಗೆ 12 : 21 (IRVKN)
ಇದಲ್ಲದೆ ಆ ದೃಶ್ಯವು ಅತಿ ಭಯಾನಕವಾಗಿದ್ದದರಿಂದ ಮೋಶೆಯು, * ವಿಮೋ 19:16; ಧರ್ಮೋ 9:19: “ನಾನು ಹೆದರಿ, ನಡುಗುತ್ತಿದ್ದೇನೆ” ಎಂದು ಹೇಳಿದನು.
ಇಬ್ರಿಯರಿಗೆ 12 : 22 (IRVKN)
ಆದರೆ ನೀವು † ಪ್ರಕ 14:1: ಚೀಯೋನ್ ಪರ್ವತಕ್ಕೂ, ಜೀವಸ್ವರೂಪನಾದ ದೇವರ ಪಟ್ಟಣವಾಗಿರುವ ‡ ಗಲಾ. 4:26: ಪರಲೋಕದ ಯೆರೂಸಲೇಮಿಗೂ, ಉತ್ಸವ ಸಂಘದಲ್ಲಿ ಕೂಡಿರುವ § ಯೂದ. 14: ಕೋಟ್ಯಾನುಕೋಟಿ ದೇವದೂತರ ಬಳಿಗೂ,
ಇಬ್ರಿಯರಿಗೆ 12 : 23 (IRVKN)
ಪರಲೋಕದಲ್ಲಿ * ಲೂಕ 10:20: ಹೆಸರು ಬರೆಸಿಕೊಂಡಿರುವ † ಇಬ್ರಿ. 2:12: ಚೊಚ್ಚಲ ಮಕ್ಕಳ ಸಭೆಗೂ, ‡ ಆದಿ 18:25; ಕೀರ್ತ 58:11: ಎಲ್ಲರಿಗೆ ನ್ಯಾಯಾಧಿಪತಿಯಾಗಿರುವ ದೇವರ ಬಳಿಗೂ, ಪರಿಪೂರ್ಣರಾಗಿರುವ ನೀತಿವಂತರ ಆತ್ಮಗಳ ಬಳಿಗೂ,
ಇಬ್ರಿಯರಿಗೆ 12 : 24 (IRVKN)
§ ಇಬ್ರಿ. 8:6; 9:15 ಹೊಸ ಒಡಂಬಡಿಕೆಗೆ ಮಧ್ಯಸ್ಥನಾಗಿರುವ ಯೇಸುವಿನ ಬಳಿಗೂ, * ಇಬ್ರಿ. 11:4; ಆದಿ 4:10: ಹೇಬೆಲನ ರಕ್ತಕ್ಕಿಂತ ಉತ್ತಮವಾಗಿ ಮಾತನಾಡುವ † ಇಬ್ರಿ. 10:22: ಪ್ರೋಕ್ಷಣ ರಕ್ತದ ಬಳಿಗೂ ಬಂದಿದ್ದೀರಿ.
ಇಬ್ರಿಯರಿಗೆ 12 : 25 (IRVKN)
ಮಾತನಾಡುತ್ತಿರುವಾತನನ್ನು ನೀವು ಅಸಡ್ಡೆ ಮಾಡದಂತೆ ನೋಡಿಕೊಳ್ಳಿರಿ. ಏಕೆಂದರೆ ‡ ಅರಣ್ಯ 16:24-35; ಇಬ್ರಿ. 2:3: ಭೂಮಿಯ ಮೇಲೆ ದೈವೋಕ್ತಿಗಳನ್ನಾಡಿದವನನ್ನು ಅಸಡ್ಡೆಮಾಡಿದವರು ದಂಡನೆಗೆ ತಪ್ಪಿಸಿಕೊಳ್ಳಲಾಗದಿದ್ದರೆ, ಪರಲೋಕದಿಂದ ಮಾತನಾಡುವಾತನನ್ನು ಬಿಟ್ಟು ದೂರವಾಗಿ ನಾವು ಹೋದರೆ ದಂಡನೆಯಿಂದ ಹೇಗೆ ತಪ್ಪಿಸಿಕೊಂಡೆವು?
ಇಬ್ರಿಯರಿಗೆ 12 : 26 (IRVKN)
§ ವಿಮೋ 19:18: ಆತನ ಧ್ವನಿಯು ಆಗ ಭೂಮಿಯನ್ನು ಕದಲಿಸಿತು. ಈಗಲಾದರೋ ಆತನು, * ಹಗ್ಗಾ. 2:6: “ಇನ್ನೊಂದೇ ಸಾರಿ ನಾನು ಭೂಮಿಯನ್ನು ಮಾತ್ರವಲ್ಲದೆ ಪರಲೋಕವನ್ನೂ ಕದಲಿಸುತ್ತೇನೆ” ಎಂದು ವಾಗ್ದಾನಮಾಡಿ ಹೇಳಿದ್ದಾನೆ.
ಇಬ್ರಿಯರಿಗೆ 12 : 27 (IRVKN)
“ಇನ್ನೊಂದೇ ಸಾರಿ,” ಎಂಬ ಈ ಮಾತನ್ನು ಯೋಚಿಸಿದರೆ, ಕದಲಿಸಿರುವ ವಸ್ತುಗಳು ನಿರ್ಮಿತವಾದವುಗಳಾದ್ದರಿಂದ ತೆಗೆದುಹಾಕಲ್ಪಡುತ್ತವೆಂಬುದು ಸ್ಪಷ್ಟವಾಗುತ್ತದೆ. † ಕೀರ್ತ 102:26: ಆಗ, ಕದಲಿಸದೇ ಇರುವ ವಸ್ತುಗಳು ಸ್ಥಿರವಾಗಿ ನಿಲ್ಲುವವು.
ಇಬ್ರಿಯರಿಗೆ 12 : 28 (IRVKN)
ಆದ್ದರಿಂದ ‡ ದಾನಿ. 2:44: ಯಾರೂ ಕದಲಿಸಲಾರದ ರಾಜ್ಯವನ್ನು ಪಡೆದುಕೊಳ್ಳುವವರಾದ ನಾವು § ಅಥವಾ, ದೇವರ ಕೃಪೆಯನ್ನು ಹಿಡಿದುಕೊಂಡು. ಕೃತಜ್ಞತೆಯುಳ್ಳವರಾಗಿ, ಆತನಿಗೆ ಸಮರ್ಪಕವಾದ ಆರಾಧನೆಯನ್ನು ಭಕ್ತಿಯಿಂದಲೂ ಮತ್ತು ಭಯದಿಂದಲೂ ಮಾಡೋಣ.
ಇಬ್ರಿಯರಿಗೆ 12 : 29 (IRVKN)
ಏಕೆಂದರೆ * ಧರ್ಮೋ 4:24; 2 ಥೆಸ. 1:8: ನಮ್ಮ ದೇವರು ದಹಿಸುವ ಅಗ್ನಿಯಾಗಿದ್ದಾನೆ.
❮
❯