ಇಬ್ರಿಯರಿಗೆ 10 : 1 (IRVKN)
ಧರ್ಮಶಾಸ್ತ್ರವು ಮುಂದೆ ಬರಬೇಕಾಗಿದ್ದ ಉತ್ತಮ ಸಂಗತಿಗಳ [* ಇಬ್ರಿ. 8:5; ಕೊಲೊ 2:17:] ಛಾಯೆಯೇ ಹೊರತು ಅವುಗಳ ನಿಜ ಸ್ವರೂಪವಲ್ಲ. ಆದ್ದರಿಂದ ಆ ಧರ್ಮಶಾಸ್ತ್ರವು ಪ್ರತಿ ವರ್ಷವೂ ಯಾವಾಗಲೂ ಅರ್ಪಿತವಾಗುವ ಒಂದೇ ವಿಧವಾದ ಯಜ್ಞಗಳನ್ನು ಅರ್ಪಿಸಿ, ದೇವರ ಸಮೀಪಕ್ಕೆ ಬರುವವರನ್ನು [† ಇಬ್ರಿ. 9:9:] ಎಂದಿಗೂ ಪರಿಪೂರ್ಣತೆಗೆ ತರಲಾರದು.
ಇಬ್ರಿಯರಿಗೆ 10 : 2 (IRVKN)
ತಂದಿದ್ದ ಪಕ್ಷದಲ್ಲಿ ಯಜ್ಞಗಳ ನಿಂತು ಹೋಗುತ್ತಿದ್ದವು, ಏಕೆಂದರೆ ಆರಾಧನೆ ಮಾಡುವವರು ಒಂದು ಸಾರಿ ಶುದ್ಧೀಕರಿಸಲ್ಪಟ್ಟ ಮೇಲೆ, ಅವರಿಗೆ ಪಾಪದ ಪ್ರಜ್ಞೆ ಎಂದಿಗೂ ಕಾಡುತ್ತಿರಲಿಲ್ಲ.
ಇಬ್ರಿಯರಿಗೆ 10 : 3 (IRVKN)
ಈಗಲಾದರೋ ಆ ಯಜ್ಞಗಳಿಂದ ಪ್ರತಿ ವರ್ಷದಲ್ಲಿಯೂ [‡ ಇಬ್ರಿ. 9:7; ಯಾಜ 16:21:] ಪಾಪಗಳ ಜ್ಞಾಪಕವಾಗುವುದುಂಟು,
ಇಬ್ರಿಯರಿಗೆ 10 : 4 (IRVKN)
ಯಾಕೆಂದರೆ [§ ವ. 11. ಯೆಶಾ 1:11-15; ಮೀಕ. 6:6-8:] ಹೋರಿಗಳ ಮತ್ತು ಕುರಿಗಳ ರಕ್ತದಿಂದ ಪಾಪಗಳನ್ನು ಪರಿಹಾರಮಾಡುವುದು ಅಸಾಧ್ಯವಾಗಿದೆ.
ಇಬ್ರಿಯರಿಗೆ 10 : 5 (IRVKN)
ಆದ್ದರಿಂದ ಕ್ರಿಸ್ತನು ಭೂಲೋಕದೊಳಗೆ ಬರುವಾಗ, [QBR] [* ಕೀರ್ತ 40. 6-8 ] “(ದೇವರೇ,) ಯಜ್ಞಗಳೂ ಕಾಣಿಕೆಗಳೂ ನಿನಗೆ ಇಷ್ಟವಾಗಿರಲಿಲ್ಲ, [QBR2] ಆದರೆ ನನಗೆ ಒಂದು ದೇಹವನ್ನು ಸಿದ್ಧಮಾಡಿಕೊಟ್ಟಿರುವೆ, [QBR]
ಇಬ್ರಿಯರಿಗೆ 10 : 6 (IRVKN)
ಸರ್ವಾಂಗಹೋಮಗಳಲ್ಲಿಯೂ ಪಾಪಪರಿಹಾರಕ ಯಜ್ಞಗಳಲ್ಲಿಯೂ ನೀನು ಸಂತೋಷಪಡುವುದಿಲ್ಲ. [QBR]
ಇಬ್ರಿಯರಿಗೆ 10 : 7 (IRVKN)
ಆಗ ನಾನು, ಇಗೋ, ದೇವರೇ, ಗ್ರಂಥದ ಸುರುಳಿಯಲ್ಲಿ ನನ್ನನ್ನು ಕುರಿತು ಬರೆದಿರುವ ಪ್ರಕಾರ [QBR2] ನಿನ್ನ ಚಿತ್ತವನ್ನು ನೆರವೇರಿಸುವುದಕ್ಕೆ ಬಂದಿದ್ದೇನೆ” ಎಂದು ಹೇಳಿದೆನು.
ಇಬ್ರಿಯರಿಗೆ 10 : 8 (IRVKN)
ಧರ್ಮಶಾಸ್ತ್ರದ ಪ್ರಕಾರ ಅರ್ಪಿಸಲ್ಪಟ್ಟ ಯಜ್ಞಗಳು, “ಸರ್ವಾಂಗಹೋಮಗಳು ಮತ್ತು ಪಾಪಪರಿಹಾರಕ ಯಜ್ಞಗಳು ನಿನಗೆ ಇಷ್ಟವಾಗಿರಲಿಲ್ಲ. ನೀನು ಅವುಗಳಲ್ಲಿ ಸಂತೋಷಪಡುವುದಿಲ್ಲ” ಎಂದು ಹೇಳಿದ್ದಾನೆ.
ಇಬ್ರಿಯರಿಗೆ 10 : 9 (IRVKN)
ತರುವಾಯ ಆತನು [† ವ. 7:] “ಇಗೋ, ನಿನ್ನ ಚಿತ್ತವನ್ನು ನೆರವೇರಿಸುವುದಕ್ಕೆ ಬಂದಿದ್ದೇನೆ” ಎಂದು ಹೇಳಿದ್ದಾನೆ. ಆತನು ಎರಡನೆಯದನ್ನು ಸ್ಥಾಪಿಸುವುದಕ್ಕಾಗಿ ಮೊದಲನೆಯದನ್ನು ತೆಗೆದುಬಿಡುತ್ತಾನೆ.
ಇಬ್ರಿಯರಿಗೆ 10 : 10 (IRVKN)
ಯೇಸು ಕ್ರಿಸ್ತನು [‡ ಇಬ್ರಿ. 7:27; 9:12:] ಒಂದೇ ಸಾರಿ [§ ಮತ್ತಾ 26:26; ಮಾರ್ಕ 14:22; ಲೂಕ 22:19; 1 ಕೊರಿ 11:24:] ದೇಹ ಸಮರ್ಪಣೆ ಮಾಡಿ ದೇವರ ಚಿತ್ತವನ್ನು ನೆರವೇರಿಸಿದ್ದರಿಂದಲೇ [* ಇಬ್ರಿ. 10:5; 2:11; 13:12:] ನಾವು ಶುದ್ಧೀಕರಿಸಲ್ಪಟ್ಟವರಾಗಿರುವೆವು. [PE][PS]
ಇಬ್ರಿಯರಿಗೆ 10 : 11 (IRVKN)
ಇದಲ್ಲದೆ ಪ್ರತಿಯೊಬ್ಬ ಯಾಜಕನು [† ಅರಣ್ಯ 28:3:] ಪ್ರತಿದಿನ ಸೇವೆಮಾಡುತ್ತಾ, [‡ ಇಬ್ರಿ. 9:9; 10:1, 4:] ಎಂದಿಗೂ ಪಾಪಗಳನ್ನು ತೆಗೆದು ಹಾಕಲಾರದಂಥ, ಒಂದೇ ವಿಧವಾದ ಯಜ್ಞಗಳನ್ನು ಪದೇ ಪದೇ ಸಮರ್ಪಿಸುತ್ತಾ ನಿಂತುಕೊಂಡಿರುವನು.
ಇಬ್ರಿಯರಿಗೆ 10 : 12 (IRVKN)
ಆದರೆ ಕ್ರಿಸ್ತನು ಪಾಪಗಳಿಗೋಸ್ಕರ ಸದಾಕಾಲಕ್ಕೂ ಒಂದೇ ಯಜ್ಞವನ್ನು ಸಮರ್ಪಿಸಿದ ಮೇಲೆ [§ ಇಬ್ರಿ. 1:3; ಮಾರ್ಕ 16:19:] ದೇವರ ಬಲಗಡೆಯಲ್ಲಿ ಕುಳಿತುಕೊಂಡನು.
ಇಬ್ರಿಯರಿಗೆ 10 : 13 (IRVKN)
[* ಕೀರ್ತ 110:1; ಇಬ್ರಿ. 1:13. 1 ಕೊರಿ 15:25-28:] ಅಂದಿನಿಂದ ತನ್ನ ವಿರೋಧಿಗಳು ತನ್ನ ಪಾದಪೀಠವಾಗಿ ಮಾಡಲ್ಪಡುವ ತನಕ ಆತನು ಕಾಯುತ್ತಿರುವನು.
ಇಬ್ರಿಯರಿಗೆ 10 : 14 (IRVKN)
ಆತನು ಶುದ್ಧೀಕರಿಸಲ್ಪಡುವವರನ್ನು ಒಂದೇ ಸಮರ್ಪಣೆಯಿಂದ ನಿರಂತರವಾಗಿ [† ವ. 1:] ಪರಿಪೂರ್ಣರನ್ನಾಗಿ ಮಾಡಿದ್ದಾನೆ. [PE][PS]
ಇಬ್ರಿಯರಿಗೆ 10 : 15 (IRVKN)
ಪವಿತ್ರಾತ್ಮನು ಸಹ ನಮಗೆ ಸಾಕ್ಷಿಕೊಡುವಾತನಾಗಿ, [QBR]
ಇಬ್ರಿಯರಿಗೆ 10 : 16 (IRVKN)
[‡ ಯೆರೆ 31:33; ಇಬ್ರಿ. 8:10; ರೋಮಾ. 11:27:] “ಆ ದಿನಗಳು ಬಂದ ಮೇಲೆ [QBR2] ನಾನು ಅವರ ಸಂಗಡ ಮಾಡಿಕೊಳ್ಳುವ ಒಡಂಬಡಿಕೆಯು ಹೀಗಿರುವುದು, [QBR] ನನ್ನ ಆಜ್ಞೆಗಳನ್ನು ಅವರ ಹೃದಯಗಳಲ್ಲಿ ಇಡುವೆನು, [QBR2] ಅವರ ಮನಸ್ಸಿನಲ್ಲಿ ಅವುಗಳನ್ನು ಬರೆಯುವೆನು ಎಂದು ಕರ್ತನು ನುಡಿಯುತ್ತಾನೆ.” ಎಂಬುದಾಗಿ ಹೇಳಿದ ತರುವಾಯ ಇನ್ನು,
ಇಬ್ರಿಯರಿಗೆ 10 : 17 (IRVKN)
[§ ಯೆರೆ 31:34; ಇಬ್ರಿ. 8:12:] “ಅವರ ಪಾಪಗಳನ್ನೂ ಅವರ ದುಷ್ಕೃತ್ಯಗಳನ್ನೂ ನನ್ನ ನೆನಪಿಗೆ ಎಂದಿಗೂ ತಂದುಕೊಳ್ಳುವುದಿಲ್ಲ.” ಎಂದು ಹೇಳುತ್ತಾನೆ.
ಇಬ್ರಿಯರಿಗೆ 10 : 18 (IRVKN)
ಪಾಪ ಕ್ಷಮಾಪಣೆಯಾದಲ್ಲಿ ಇನ್ನೂ ಅವುಗಳ ವಿಷಯದಲ್ಲಿ ಯಜ್ಞಗಳನ್ನು ಸಮರ್ಪಣೆಮಾಡುವಂಥ ಅವಶ್ಯಕತೆ ಇಲ್ಲ. [PS]
ಇಬ್ರಿಯರಿಗೆ 10 : 19 (IRVKN)
{ಯೇಸುವಿನ ಮೂಲಕ ದೇವಸನ್ನಿಧಾನವನ್ನು ಯೋಗ್ಯರಾಗಿ ಸೇರೋಣ} [PS] (19-20) [* ಇಬ್ರಿ. 9:8; ಯೋಹಾ 10:9; 14:6.] ಹೀಗಿರುವಲ್ಲಿ ಸಹೋದರರೇ, ಯೇಸು ತನ್ನ ರಕ್ತದಿಂದ [† ಇಬ್ರಿ. 9:3:] ಆತನ ದೇಹವೆಂಬ ಪರದೆಯ ಮೂಲಕ ನಮಗೆ ಹೊಸದಾದ ಸಜೀವ ಮಾರ್ಗವನ್ನು ತೆರೆದಿಟ್ಟಿದ್ದಾನೆ. ಅದರ ಮೂಲಕ ಅತಿ [‡ ಇಬ್ರಿ. 4:16:] ಪರಿಶುದ್ಧ ಸ್ಥಳವನ್ನು ಪ್ರವೇಶಿಸಲು ನಮಗೆ ಭರವಸೆ ದೊರೆತಿದೆ.
ಇಬ್ರಿಯರಿಗೆ 10 : 20 (IRVKN)
ಮತ್ತು [§ ಜೆಕ. 6:11-13; ಇಬ್ರಿ. 2:17; 4:14:] ದೇವರ ಮನೆತನದ ಮೇಲೆ ಅಧಿಕಾರವಿರುವ ಶ್ರೇಷ್ಠ ಯಾಜಕನು ನಮಗಿದ್ದಾನೆ.
ಇಬ್ರಿಯರಿಗೆ 10 : 21 (IRVKN)
ಆದಕಾರಣ ಕೆಟ್ಟ ಮನಸ್ಸಾಕ್ಷಿಯನ್ನು ಪ್ರೋಕ್ಷಿಸಿ ಶುದ್ಧೀಕರಿಸಿಕೊಂಡು, [* ಇಬ್ರಿ. 9:14:] ತಿಳಿನೀರಿನಿಂದ ತೊಳೆದ ದೇಹದಿಂದಲೂ, [† ಯೆಹೆ. 36:25; ಇಬ್ರಿ. 12:24. 2 ಕೊರಿ 7:1; 1 ಪೇತ್ರ 1:2:] ಯಥಾರ್ಥಹೃದಯದಿಂದಲೂ, ನಂಬಿಕೆಯ ಪೂರ್ಣನಿಶ್ಚಯದಿಂದಲೂ ದೇವರ ಸಮೀಪಕ್ಕೆ ಬರೋಣ.
ಇಬ್ರಿಯರಿಗೆ 10 : 22 (IRVKN)
ನಾವು ನಮ್ಮ ನಿರೀಕ್ಷೆಯನ್ನು ಕುರಿತು ಮಾಡಿದ [‡ ಇಬ್ರಿ. 4:14:] ಅರಿಕೆಯನ್ನು ನಿಶ್ಚಂಚಲದಿಂದ ಬಿಗಿಯಾಗಿ ಹಿಡಿಯೋಣ, ಯಾಕೆಂದರೆ [§ ಇಬ್ರಿ. 11:11; 1 ಕೊರಿ 1:9:] ವಾಗ್ದಾನ ಮಾಡಿದಾತನು ನಂಬಿಗಸ್ತನು.
ಇಬ್ರಿಯರಿಗೆ 10 : 23 (IRVKN)
ನಾವು ಪರಸ್ಪರ ಹಿತಚಿಂತಕರಾಗಿದ್ದು ಪ್ರೀತಿಸುತ್ತಿರಬೇಕೆಂತಲೂ ಸತ್ಕಾರ್ಯಮಾಡಬೇಕೆಂತಲೂ [* ಇಬ್ರಿ. 3:13:] ಒಬ್ಬರನ್ನೊಬ್ಬರು ಹುರಿದುಂಬಿಸೋಣ.
ಇಬ್ರಿಯರಿಗೆ 10 : 24 (IRVKN)
[† ಅ. ಕೃ. 2:42:] ಸಭೆಯಾಗಿ ಸೇರುವ ರೂಢಿಯನ್ನು ಕೆಲವರು ಬಿಟ್ಟಂತೆ ನಾವು ಬಿಟ್ಟು ಬಿಡದೆ, [‡ ರೋಮಾ. 13:11-13; ಯಾಕೋಬ 5:8:] ಆ ದಿನವು ಸಮೀಪಿಸುತ್ತಾ ಬರುತ್ತದೆಂದು ನೀವು ತಿಳಿದುಕೊಂಡಿರುವುದರಿಂದ ಒಬ್ಬರನ್ನೊಬ್ಬರು ಮತ್ತಷ್ಟು ಹೆಚ್ಚಾಗಿಯೇ ಪ್ರೋತ್ಸಾಹಿಸುತ್ತಿರೋಣ. [PE][PS]
ಇಬ್ರಿಯರಿಗೆ 10 : 25 (IRVKN)
ನಾವು [§ ಇಬ್ರಿ. 6:4; 2 ಪೇತ್ರ. 2:20, 21:] ಸತ್ಯದ ಪರಿಜ್ಞಾನವನ್ನು ಹೊಂದಿದ ಮೇಲೂ [* ಅರಣ್ಯ 15:30; ಧರ್ಮೋ 17:12:] ಬೇಕೆಂದು ಪಾಪಮಾಡಿದರೆ [† ಇಬ್ರಿ. 6:6; 1 ಯೋಹಾ 5:16:] ಪಾಪಪರಿಹಾರಕ್ಕಾಗಿ ಇನ್ನಾವ ಯಜ್ಞವೂ ಉಳಿದಿರುವುದಿಲ್ಲ.
ಇಬ್ರಿಯರಿಗೆ 10 : 26 (IRVKN)
ಬದಲಿಗೆ, ಅತ್ಯಂತ [‡ ಇಬ್ರಿ. 2:3; 12:25:] ಭಯಂಕರವಾದ ನ್ಯಾಯತೀರ್ಪಿನ ನಿರೀಕ್ಷೆ ಹಾಗೂ [§ ಯೆಶಾ 26:11; ಚೆಫ. 1:18; 3:8. 2 ಥೆಸ. 1:8:] ದೇವರ ವಿರೋಧಿಗಳನ್ನು ದಹಿಸುವ ಕೋಪಾಗ್ನಿಯೂ ಮಾತ್ರ ಇರುವವು.
ಇಬ್ರಿಯರಿಗೆ 10 : 27 (IRVKN)
[* ಧರ್ಮೋ 17:2-6:] ಮೋಶೆಯ ಧರ್ಮಶಾಸ್ತ್ರವನ್ನು ತಿರಸ್ಕಾರ ಮಾಡಿದವನಿಗೆ [† ಅರಣ್ಯ 35:30. ] ಇಬ್ಬರ ಇಲ್ಲವೆ ಮೂವರ ಸಾಕ್ಷ್ಯಧಾರದ ಮೇಲೆ ಕರುಣೆಯಿಲ್ಲದೆ ಮರಣದಂಡನೆ ಆಗುತ್ತಿತಷ್ಟೆ.
ಇಬ್ರಿಯರಿಗೆ 10 : 28 (IRVKN)
ಹೀಗಿರುವಲ್ಲಿ, [‡ ಇಬ್ರಿ. 6:6:] ದೇವಕುಮಾರನನ್ನು ತುಳಿದು, [§ ಇಬ್ರಿ. 9:13, 14:] ತನ್ನನ್ನು ಶುದ್ಧೀಕರಿಸಿದ [* ಇಬ್ರಿ. 13:20; ಜೆಕ. 9:11:] ಒಡಂಬಡಿಕೆಯ ರಕ್ತವನ್ನು [† ಮೂಲ. ಸಾಧಾರಣವೆಂದೆಣಿಸಿ. ] ಅಶುದ್ಧವೆಂದೆಣಿಸಿ, [‡ ಮೂಲ. ಕೃಪೆಯ ಆತ್ಮನನ್ನು. ] ದೇವರ ಕೃಪಾವರವಾಗಿರುವ ಆತ್ಮನನ್ನು [§ ಮತ್ತಾ 12:31, 32; ಎಫೆ 4:30. ] ತಿರಸ್ಕರಿಸುವವನೋ, ಇನೆಂಥ ಕ್ರೂರದಂಡನೆಗೆ ಗುರಿ ಆಗುತ್ತಾನೆಂದು ನೀವೇ ಯೋಚಿಸಿನೋಡಿ?
ಇಬ್ರಿಯರಿಗೆ 10 : 29 (IRVKN)
[* ಧರ್ಮೋ 32:35; ರೋಮಾ. 12:19:] “ಮುಯ್ಯಿಗೆ ಮುಯ್ಯಿ ತೀರಿಸುವುದು ನನ್ನ ಕೆಲಸ, ನಾನೇ ಪ್ರತಿಫಲವನ್ನು ಕೊಡುವೆನೆಂದು” ಹೇಳಿದಾತನನ್ನು ಬಲ್ಲೆವು. ಇದಲ್ಲದೆ [† ಧರ್ಮೋ 32:36; ಕೀರ್ತ 50. 4:] “ಕರ್ತನು ತನ್ನ ಜನರಿಗೆ ನ್ಯಾಯ ತೀರಿಸುವನು” ಎಂದು ಹೇಳಿಯದೆ.
ಇಬ್ರಿಯರಿಗೆ 10 : 30 (IRVKN)
[‡ ಯೆಶಾ 33:14; ಲೂಕ 12:5:] ಜೀವಸ್ವರೂಪನಾದ ದೇವರ ಕೈಯಲ್ಲಿ ಸಿಕ್ಕಿಬೀಳುವುದು ಎಷ್ಟೋ ಭಯಂಕರವಾದದ್ದು. [PE][PS]
ಇಬ್ರಿಯರಿಗೆ 10 : 31 (IRVKN)
ಹೀಗಿರಲಾಗಿ [§ ಇಬ್ರಿ. 6:4:] ನೀವು ಜ್ಞಾನಪ್ರಕಾಶವನ್ನು ಹೊಂದಿದ ಮೇಲೆ [* ಫಿಲಿ. 1:30. ] ಕಷ್ಟಾನುಭವವೆಂಬ ಬಹು ಹೋರಾಟವನ್ನು ಸಹಿಸಿಕೊಂಡ ಹಿಂದಿನ ದಿನಗಳನ್ನು ನೆನಪಿಗೆ ತಂದುಕೊಳ್ಳಿರಿ.
ಇಬ್ರಿಯರಿಗೆ 10 : 32 (IRVKN)
ಕೆಲವು ಸಾರಿ ನೀವು ನಿಂದೆಗಳನ್ನೂ, ಸಂಕಟಗಳನ್ನೂ, ಅನುಭವಿಸಿ [† 1 ಕೊರಿ 4:9:] ಹಾಸ್ಯಕ್ಕೆ ಗುರಿಯಾದಿರಿ. [‡ ಇಬ್ರಿ. 13:3; ಮತ್ತಾ 25:36; 2 ತಿಮೊ. 1:16:] ಕೆಲವು ಸಾರಿ ಅಂಥವುಗಳನ್ನು ಅನುಭವಿಸಿದವರಲ್ಲಿ ಪಾಲುಗಾರರಾಗಿದ್ದು ಕಷ್ಟಾನುಭವಿಗಳಾದಿರಿ.
ಇಬ್ರಿಯರಿಗೆ 10 : 33 (IRVKN)
ನೀವು ಸೆರೆಯವರಿಗೆ ಅನುತಾಪ ತೋರಿಸಿ, ನಿಮಗೋಸ್ಕರವಾಗಿ [§ 1 ಪೇತ್ರ. 1:14:] ಉತ್ತಮವಾಗಿಯೂ, ಸ್ಥಿರವಾಗಿಯೂ ಇರುವ ಆಸ್ತಿಯುಂಟೆಂದು ಚೆನ್ನಾಗಿ ಅರಿತುಕೊಂಡು, ನಿಮ್ಮ ಸೊತ್ತನ್ನು ಸುಲುಕೊಳ್ಳುವವರಿಗೆ [* ಮತ್ತಾ 5:12:] ಸಂತೋಷದಿಂದ ಬಿಟ್ಟು ಕೊಟ್ಟಿದ್ದೀರಿ.
ಇಬ್ರಿಯರಿಗೆ 10 : 34 (IRVKN)
ಆದ್ದರಿಂದ ನಿಮ್ಮ ಧೈರ್ಯವನ್ನು ಬಿಟ್ಟುಬಿಡಬೇಡಿರಿ. ಅದಕ್ಕೆ [† ಇಬ್ರಿ. 2:2; 11:26:] ಮಹಾ ಪ್ರತಿಫಲ ಉಂಟು.
ಇಬ್ರಿಯರಿಗೆ 10 : 35 (IRVKN)
ನೀವು [‡ ಇಬ್ರಿ. 13:21:] ದೇವರ ಚಿತ್ತವನ್ನು ನೆರವೇರಿಸಿದ ಮೇಲೆ [§ ಇಬ್ರಿ. 11:39:] ವಾಗ್ದಾನವನ್ನು ಹೊಂದಬೇಕಾದರೆ [* ಇಬ್ರಿ. 12:1-7; ಲೂಕ 21:19; ರೋಮಾ. 2:7; 12:12; ಮತ್ತಾ 10:22:] ನಿಮಗೆ ತಾಳ್ಮೆಯು ಅವಶ್ಯವಾಗಿದೆ. [QBR]
ಇಬ್ರಿಯರಿಗೆ 10 : 36 (IRVKN)
[† ಹಬ 2:3, 4:] “ಬರುವಾತನು [‡ ಹಗ್ಗಾ. 2:6; ಲೂಕ 18:8:] ಇನ್ನು ಸ್ವಲ್ಪ ಕಾಲದಲ್ಲಿ [QBR2] ಬರುವನು ತಡಮಾಡುವುದಿಲ್ಲ. [QBR]
ಇಬ್ರಿಯರಿಗೆ 10 : 37 (IRVKN)
ಆದರೆ ನನ್ನವನಾಗಿರುವ [§ ರೋಮಾ. 1:17; ಗಲಾ. 3:11:] ನೀತಿವಂತನು ನಂಬಿಕೆಯಿಂದಲೇ ಬದುಕುವನು, [QBR2] ಅವನು ಅದರಿಂದ ಹಿಂಜರಿದರೆ ಅವನಲ್ಲಿ ನನಗೆ ಮೆಚ್ಚಿಕೆಯಿರುವುದಿಲ್ಲ.”
ಇಬ್ರಿಯರಿಗೆ 10 : 38 (IRVKN)
ನಾವಾದರೋ ಹಿಂಜರಿದವರಾಗಿ ನಾಶವಾಗುವವರಲ್ಲ, ನಂಬುವವರಾಗಿ ಆತ್ಮರಕ್ಷಣೆಯನ್ನು ಹೊಂದುವವರಾಗಿದ್ದೇವೆ. [PE]
ಇಬ್ರಿಯರಿಗೆ 10 : 39 (IRVKN)

1 2 3 4 5 6 7 8 9 10 11 12 13 14 15 16 17 18 19 20 21 22 23 24 25 26 27 28 29 30 31 32 33 34 35 36 37 38 39

BG:

Opacity:

Color:


Size:


Font: