ಇಬ್ರಿಯರಿಗೆ 1 : 1 (IRVKN)
{ದೇವರು ತನ್ನ ಮಗನ ಮೂಲಕ ಮಾತನಾಡಿದ್ದು} [PS] ದೇವರು ಪುರಾತನ ಕಾಲದಲ್ಲಿ ನಮ್ಮ ಪೂರ್ವಿಕರ ಸಂಗಡ ಪ್ರವಾದಿಗಳ ಮುಖಾಂತರ ಹಲವಾರು ವಿಧದಲ್ಲಿ, ಅನೇಕಸಾರಿ ಮಾತನಾಡಿದ್ದಾನೆ.
ಇಬ್ರಿಯರಿಗೆ 1 : 2 (IRVKN)
ಆದರೆ [* 1 ಪೇತ್ರ. 1:20; ಇಬ್ರಿ. 9:26; ಅ. ಕೃ. 2:17:] ಈ ಅಂತ್ಯ ದಿನಗಳಲ್ಲಿ ನಮ್ಮ ಸಂಗಡ [† ಇಬ್ರಿ. 3:6; 4:14; 5:8:] ಮಗನ ಮುಖಾಂತರ ಮಾತನಾಡಿದ್ದಾನೆ. [‡ ಕೀರ್ತ 2:8; ಮತ್ತಾ 21:38; 28:18:] ಆತನನ್ನು ಎಲ್ಲದಕ್ಕೂ ಬಾಧ್ಯಸ್ಥನನ್ನಾಗಿ ನೇಮಿಸಿದನು ಮತ್ತು ಆತನ ಮೂಲಕವೇ [§ ಮೂಲ: ಯುಗಗಳನ್ನು. ಯೋಹಾ 1:3:] ಇಡೀ ವಿಶ್ವವನ್ನು ಉಂಟುಮಾಡಿದನು.
ಇಬ್ರಿಯರಿಗೆ 1 : 3 (IRVKN)
ಈತನು ದೇವರ ಮಹಿಮೆಯ ಪ್ರಕಾಶವೂ, [* 2 ಕೊರಿ 4:4:] ಆತನ ವ್ಯಕ್ತಿತ್ವದ ಪ್ರತಿರೂಪವೂ, [† ಇಬ್ರಿ. 11:3; ಕೊಲೊ 1:17:] ತನ್ನ ಶಕ್ತಿಯುಳ್ಳ ವಾಕ್ಯದಿಂದ ಸಮಸ್ತಕ್ಕೆ ಆಧಾರವೂ ಆಗಿದ್ದು ತಾನೇ ನಮ್ಮ [‡ ಇಬ್ರಿ. 9:14:] ಪಾಪಗಳನ್ನು ಶುದ್ಧಿಮಾಡಿ, [§ ಮಾರ್ಕ 16:19; ಲೂಕ 22:69:] ಉನ್ನತದಲ್ಲಿರುವ ಮಹೋನ್ನತನಾದ ದೇವರ ಬಲಗಡೆಯಲ್ಲಿ ಕುಳಿತುಕೊಂಡನು. [PS]
ಇಬ್ರಿಯರಿಗೆ 1 : 4 (IRVKN)
{ಯೇಸು ದೇವರ ಮಗನಾಗಿದ್ದು ದೇವದೂತರಿಗಿಂತಲೂ ಶ್ರೇಷ್ಠನು} [PS] ಈತನು ದೇವದೂತರಿಗಿಂತಲೂ ಉನ್ನತನಾಗಿದ್ದು. [* ಎಫೆ 1:21; ಫಿಲಿ. 2:9:] ಅವರಿಗಿಂತ ಅತಿ ಶ್ರೇಷ್ಠವಾದ ಹೆಸರನ್ನು ಬಾಧ್ಯವಾಗಿ ಹೊಂದಿದನು.
ಇಬ್ರಿಯರಿಗೆ 1 : 5 (IRVKN)
ಹೇಗೆಂದರೆ, ದೇವರು ತನ್ನ ದೇವದೂತರೊಳಗೆ ಯಾರಿಗಾದರೂ ಎಂದಾದರೂ ಈ ರೀತಿಯಾಗಿ ಹೇಳಿದ್ದುಂಟೋ?, [QBR] “ನೀನು [† ಕೀರ್ತ 2:7; ಇಬ್ರಿ. 5:5; ಅ. ಕೃ. 13:33:] ನನ್ನ ಮಗನು, [QBR2] ನಾನೇ ಈ ಹೊತ್ತು ನಿನ್ನನ್ನು ಪಡೆದಿದ್ದೇನೆ.” [QBR] [‡ 2 ಸಮು 7:14; ಕೀರ್ತ 89:26,27:] “ನಾನು ಅವನಿಗೆ ತಂದೆಯಾಗಿರುವೆನು, [QBR2] ಅವನು ನನಗೆ ಮಗನಾಗಿರುವನು.”
ಇಬ್ರಿಯರಿಗೆ 1 : 6 (IRVKN)
[§ ಅಥವಾ, ಹಾಗೆ ಹೇಳದೆ ಆತನು ತನ್ನ ಚೊಚ್ಚಲ ಮಗನನ್ನು ಭೂಲೋಕದೊಳಗೆ ಬರಮಾಡುವಾಗ. ] ಇದಲ್ಲದೆ ದೇವರು ತನ್ನ ಚೊಚ್ಚಲು ಮಗನನ್ನು ಭೂಲೋಕಕ್ಕೆ ತಿರುಗಿ ಬರಮಾಡುವಾಗ [QBR] [* ಧರ್ಮೋ 32:43; ಕೀರ್ತ 97:7:] “ದೇವದೂತರೆಲ್ಲರೂ ಆತನನ್ನು ಆರಾಧಿಸಬೇಕು” ಎಂದು ಆಜ್ಞಾಪಿಸಿದ್ದಾನೆ. [PE][PS]
ಇಬ್ರಿಯರಿಗೆ 1 : 7 (IRVKN)
ದೇವದೂತರ ವಿಷಯದಲ್ಲಿ, [QBR] [† ಕೀರ್ತ 104:4:] “ದೇವರು ತನ್ನ ದೂತರನ್ನು ಗಾಳಿಯನ್ನಾಗಿಯೂ, [QBR2] ತನ್ನ ಸೇವಕರನ್ನು ಅಗ್ನಿಜ್ವಾಲೆಯನ್ನಾಗಿಯೂ ಮಾಡುತ್ತಾನೆ” ಎಂದು ಹೇಳಿದ್ದಾನೆ.
ಇಬ್ರಿಯರಿಗೆ 1 : 8 (IRVKN)
ಆದರೆ ಮಗನ ವಿಷಯದಲ್ಲಿಯಾದರೋ, [QBR] “ದೇವರೇ [‡ ಕೀರ್ತ 45:6,7:] ನಿನ್ನ ಸಿಂಹಾಸನವು ಯುಗಯುಗಾಂತರಗಳಲ್ಲಿಯೂ ಇರುವುದು. [QBR2] ನೀತಿದಂಡವೇ ನಿನ್ನ ರಾಜದಂಡವಾಗಿದೆ. [QBR]
ಇಬ್ರಿಯರಿಗೆ 1 : 9 (IRVKN)
ನೀನು ನೀತಿಯನ್ನು ಪ್ರೀತಿಸಿದ್ದೀ ಮತ್ತು ಅನ್ಯಾಯವನ್ನು ದ್ವೇಷಿಸಿದ್ದೀ. [QBR] ಆದುದರಿಂದ ದೇವರು, ನಿನ್ನ ದೇವರೇ, [QBR2] ನಿನ್ನನ್ನು ನಿನ್ನ ಜೊತೆಗಾರರಿಗಿಂತ [§ ಯೆಶಾ 61:1,3:] ಅಧಿಕವಾಗಿ ಪರಮಾನಂದ ತೈಲದಿಂದ ಅಭಿಷೇಕಿಸಿದ್ದಾನೆ” ಎಂದು ಹೇಳಿದ್ದಾನೆ. [QBR]
ಇಬ್ರಿಯರಿಗೆ 1 : 10 (IRVKN)
[* ಕೀರ್ತ 102:25-27:] “ಕರ್ತನೇ ಆದಿಯಲ್ಲಿ ನೀನು ಭೂಮಿಗೆ ಅಸ್ತಿವಾರವನ್ನು ಹಾಕಿದ್ದೀ. [QBR2] ಆಕಾಶವು ನಿನ್ನ ಕೈಕೆಲಸವಾಗಿದೆ, [QBR]
ಇಬ್ರಿಯರಿಗೆ 1 : 11 (IRVKN)
ಅವು ನಾಶವಾಗುವವು. ಆದರೆ ನೀನು ಶಾಶ್ವತವಾಗಿರುತ್ತೀ. [QBR2] ಅವೆಲ್ಲವೂ ವಸ್ತ್ರದಂತೆ ಹಳೆಯದಾಗುವವು. [QBR]
ಇಬ್ರಿಯರಿಗೆ 1 : 12 (IRVKN)
ಅವುಗಳನ್ನು ಮೇಲಂಗಿಯಂತೆ ಮಡಿಸುತ್ತೀ ಮತ್ತು [QBR2] ಅವು ವಸ್ತ್ರದಂತೆ ಬದಲಾಗುವವು. [QBR] [† ಇಬ್ರಿ. 13:8:] ನೀನಾದರೂ ಅನನ್ಯನು. [QBR2] ನಿನ್ನ ವರ್ಷಗಳಿಗೆ ಅಂತ್ಯವೇ ಇಲ್ಲ” ಎಂತಲೂ ಹೇಳುತ್ತಾನೆ.
ಇಬ್ರಿಯರಿಗೆ 1 : 13 (IRVKN)
ಆದರೆ ಯಾವ ದೇವದೂತನಿಗಾದರೂ ದೇವರು, [QBR] [‡ ಕೀರ್ತ 110:1; ಇಬ್ರಿ. 10:13:] “ನಾನು ನಿನ್ನ ವಿರೋಧಿಗಳನ್ನು ನಿನಗೆ ಪಾದಪೀಠವನ್ನಾಗಿ ಮಾಡುವ ತನಕ [QBR2] ನೀನು ನನ್ನ ಬಲಗಡೆಯಲ್ಲಿ ಕುಳಿತುಕೊಂಡಿರು” ಎಂಬುದಾಗಿ ಎಂದಾದರೂ ಹೇಳಿದ್ದಾನೋ? [PE][PS]
ಇಬ್ರಿಯರಿಗೆ 1 : 14 (IRVKN)
ಈ ಎಲ್ಲಾ ದೇವದೂತರು ರಕ್ಷಣೆಯನ್ನು [§ ಮತ್ತಾ 19:29; 25:34; ರೋಮಾ. 8:17; ಯಾಕೋಬ 2:5; ಪ್ರಕ 21:7:] ಬಾಧ್ಯವಾಗಿ ಹೊಂದಬೇಕಾಗಿರುವವರ ಸೇವೆಗೋಸ್ಕರ ಕಳುಹಿಸಲ್ಪಟ್ಟ [* ಆದಿ 19:16; ನ್ಯಾಯ 6:11; ದಾನಿ. 3:28; ಅ. ಕೃ. 12:7:] ಸೇವಕಾತ್ಮಗಳಲ್ಲವೋ? [PE]

1 2 3 4 5 6 7 8 9 10 11 12 13 14

BG:

Opacity:

Color:


Size:


Font: