ಇಬ್ರಿಯರಿಗೆ 1 : 1 (IRVKN)
ದೇವರು ತನ್ನ ಮಗನ ಮೂಲಕ ಮಾತನಾಡಿದ್ದು ದೇವರು ಪುರಾತನ ಕಾಲದಲ್ಲಿ ನಮ್ಮ ಪೂರ್ವಿಕರ ಸಂಗಡ ಪ್ರವಾದಿಗಳ ಮುಖಾಂತರ ಹಲವಾರು ವಿಧದಲ್ಲಿ, ಅನೇಕಸಾರಿ ಮಾತನಾಡಿದ್ದಾನೆ.
ಇಬ್ರಿಯರಿಗೆ 1 : 2 (IRVKN)
ಆದರೆ * 1 ಪೇತ್ರ. 1:20; ಇಬ್ರಿ. 9:26; ಅ. ಕೃ. 2:17: ಈ ಅಂತ್ಯ ದಿನಗಳಲ್ಲಿ ನಮ್ಮ ಸಂಗಡ † ಇಬ್ರಿ. 3:6; 4:14; 5:8: ಮಗನ ಮುಖಾಂತರ ಮಾತನಾಡಿದ್ದಾನೆ. ‡ ಕೀರ್ತ 2:8; ಮತ್ತಾ 21:38; 28:18: ಆತನನ್ನು ಎಲ್ಲದಕ್ಕೂ ಬಾಧ್ಯಸ್ಥನನ್ನಾಗಿ ನೇಮಿಸಿದನು ಮತ್ತು ಆತನ ಮೂಲಕವೇ § ಮೂಲ: ಯುಗಗಳನ್ನು. ಯೋಹಾ 1:3: ಇಡೀ ವಿಶ್ವವನ್ನು ಉಂಟುಮಾಡಿದನು.
ಇಬ್ರಿಯರಿಗೆ 1 : 3 (IRVKN)
ಈತನು ದೇವರ ಮಹಿಮೆಯ ಪ್ರಕಾಶವೂ, * 2 ಕೊರಿ 4:4: ಆತನ ವ್ಯಕ್ತಿತ್ವದ ಪ್ರತಿರೂಪವೂ, † ಇಬ್ರಿ. 11:3; ಕೊಲೊ 1:17: ತನ್ನ ಶಕ್ತಿಯುಳ್ಳ ವಾಕ್ಯದಿಂದ ಸಮಸ್ತಕ್ಕೆ ಆಧಾರವೂ ಆಗಿದ್ದು ತಾನೇ ನಮ್ಮ ‡ ಇಬ್ರಿ. 9:14: ಪಾಪಗಳನ್ನು ಶುದ್ಧಿಮಾಡಿ, § ಮಾರ್ಕ 16:19; ಲೂಕ 22:69: ಉನ್ನತದಲ್ಲಿರುವ ಮಹೋನ್ನತನಾದ ದೇವರ ಬಲಗಡೆಯಲ್ಲಿ ಕುಳಿತುಕೊಂಡನು.
ಇಬ್ರಿಯರಿಗೆ 1 : 4 (IRVKN)
ಯೇಸು ದೇವರ ಮಗನಾಗಿದ್ದು ದೇವದೂತರಿಗಿಂತಲೂ ಶ್ರೇಷ್ಠನು ಈತನು ದೇವದೂತರಿಗಿಂತಲೂ ಉನ್ನತನಾಗಿದ್ದು. * ಎಫೆ 1:21; ಫಿಲಿ. 2:9: ಅವರಿಗಿಂತ ಅತಿ ಶ್ರೇಷ್ಠವಾದ ಹೆಸರನ್ನು ಬಾಧ್ಯವಾಗಿ ಹೊಂದಿದನು.
ಇಬ್ರಿಯರಿಗೆ 1 : 5 (IRVKN)
ಹೇಗೆಂದರೆ, ದೇವರು ತನ್ನ ದೇವದೂತರೊಳಗೆ ಯಾರಿಗಾದರೂ ಎಂದಾದರೂ ಈ ರೀತಿಯಾಗಿ ಹೇಳಿದ್ದುಂಟೋ?, “ನೀನು ಕೀರ್ತ 2:7; ಇಬ್ರಿ. 5:5; ಅ. ಕೃ. 13:33: ನನ್ನ ಮಗನು, ನಾನೇ ಈ ಹೊತ್ತು ನಿನ್ನನ್ನು ಪಡೆದಿದ್ದೇನೆ.” 2 ಸಮು 7:14; ಕೀರ್ತ 89:26,27: “ನಾನು ಅವನಿಗೆ ತಂದೆಯಾಗಿರುವೆನು, ಅವನು ನನಗೆ ಮಗನಾಗಿರುವನು.”
ಇಬ್ರಿಯರಿಗೆ 1 : 6 (IRVKN)
6 § ಅಥವಾ, ಹಾಗೆ ಹೇಳದೆ ಆತನು ತನ್ನ ಚೊಚ್ಚಲ ಮಗನನ್ನು ಭೂಲೋಕದೊಳಗೆ ಬರಮಾಡುವಾಗ. ಇದಲ್ಲದೆ ದೇವರು ತನ್ನ ಚೊಚ್ಚಲು ಮಗನನ್ನು ಭೂಲೋಕಕ್ಕೆ ತಿರುಗಿ ಬರಮಾಡುವಾಗ * ಧರ್ಮೋ 32:43; ಕೀರ್ತ 97:7: “ದೇವದೂತರೆಲ್ಲರೂ ಆತನನ್ನು ಆರಾಧಿಸಬೇಕು” ಎಂದು ಆಜ್ಞಾಪಿಸಿದ್ದಾನೆ.
ಇಬ್ರಿಯರಿಗೆ 1 : 7 (IRVKN)
ದೇವದೂತರ ವಿಷಯದಲ್ಲಿ, ಕೀರ್ತ 104:4: “ದೇವರು ತನ್ನ ದೂತರನ್ನು ಗಾಳಿಯನ್ನಾಗಿಯೂ, ತನ್ನ ಸೇವಕರನ್ನು ಅಗ್ನಿಜ್ವಾಲೆಯನ್ನಾಗಿಯೂ ಮಾಡುತ್ತಾನೆ” ಎಂದು ಹೇಳಿದ್ದಾನೆ.
ಇಬ್ರಿಯರಿಗೆ 1 : 8 (IRVKN)
8 ಆದರೆ ಮಗನ ವಿಷಯದಲ್ಲಿಯಾದರೋ, “ದೇವರೇ ಕೀರ್ತ 45:6,7: ನಿನ್ನ ಸಿಂಹಾಸನವು ಯುಗಯುಗಾಂತರಗಳಲ್ಲಿಯೂ ಇರುವುದು. ನೀತಿದಂಡವೇ ನಿನ್ನ ರಾಜದಂಡವಾಗಿದೆ.
ಇಬ್ರಿಯರಿಗೆ 1 : 9 (IRVKN)
ನೀನು ನೀತಿಯನ್ನು ಪ್ರೀತಿಸಿದ್ದೀ ಮತ್ತು ಅನ್ಯಾಯವನ್ನು ದ್ವೇಷಿಸಿದ್ದೀ. ಆದುದರಿಂದ ದೇವರು, ನಿನ್ನ ದೇವರೇ, ನಿನ್ನನ್ನು ನಿನ್ನ ಜೊತೆಗಾರರಿಗಿಂತ § ಯೆಶಾ 61:1,3: ಅಧಿಕವಾಗಿ ಪರಮಾನಂದ ತೈಲದಿಂದ ಅಭಿಷೇಕಿಸಿದ್ದಾನೆ” ಎಂದು ಹೇಳಿದ್ದಾನೆ.
ಇಬ್ರಿಯರಿಗೆ 1 : 10 (IRVKN)
* ಕೀರ್ತ 102:25-27: “ಕರ್ತನೇ ಆದಿಯಲ್ಲಿ ನೀನು ಭೂಮಿಗೆ ಅಸ್ತಿವಾರವನ್ನು ಹಾಕಿದ್ದೀ. ಆಕಾಶವು ನಿನ್ನ ಕೈಕೆಲಸವಾಗಿದೆ,
ಇಬ್ರಿಯರಿಗೆ 1 : 11 (IRVKN)
ಅವು ನಾಶವಾಗುವವು. ಆದರೆ ನೀನು ಶಾಶ್ವತವಾಗಿರುತ್ತೀ. ಅವೆಲ್ಲವೂ ವಸ್ತ್ರದಂತೆ ಹಳೆಯದಾಗುವವು.
ಇಬ್ರಿಯರಿಗೆ 1 : 12 (IRVKN)
ಅವುಗಳನ್ನು ಮೇಲಂಗಿಯಂತೆ ಮಡಿಸುತ್ತೀ ಮತ್ತು ಅವು ವಸ್ತ್ರದಂತೆ ಬದಲಾಗುವವು. ಇಬ್ರಿ. 13:8: ನೀನಾದರೂ ಅನನ್ಯನು. ನಿನ್ನ ವರ್ಷಗಳಿಗೆ ಅಂತ್ಯವೇ ಇಲ್ಲ” ಎಂತಲೂ ಹೇಳುತ್ತಾನೆ.
ಇಬ್ರಿಯರಿಗೆ 1 : 13 (IRVKN)
13 ಆದರೆ ಯಾವ ದೇವದೂತನಿಗಾದರೂ ದೇವರು, ಕೀರ್ತ 110:1; ಇಬ್ರಿ. 10:13: “ನಾನು ನಿನ್ನ ವಿರೋಧಿಗಳನ್ನು ನಿನಗೆ ಪಾದಪೀಠವನ್ನಾಗಿ ಮಾಡುವ ತನಕ ನೀನು ನನ್ನ ಬಲಗಡೆಯಲ್ಲಿ ಕುಳಿತುಕೊಂಡಿರು” ಎಂಬುದಾಗಿ ಎಂದಾದರೂ ಹೇಳಿದ್ದಾನೋ?
ಇಬ್ರಿಯರಿಗೆ 1 : 14 (IRVKN)
ಈ ಎಲ್ಲಾ ದೇವದೂತರು ರಕ್ಷಣೆಯನ್ನು § ಮತ್ತಾ 19:29; 25:34; ರೋಮಾ. 8:17; ಯಾಕೋಬ 2:5; ಪ್ರಕ 21:7: ಬಾಧ್ಯವಾಗಿ ಹೊಂದಬೇಕಾಗಿರುವವರ ಸೇವೆಗೋಸ್ಕರ ಕಳುಹಿಸಲ್ಪಟ್ಟ * ಆದಿ 19:16; ನ್ಯಾಯ 6:11; ದಾನಿ. 3:28; ಅ. ಕೃ. 12:7: ಸೇವಕಾತ್ಮಗಳಲ್ಲವೋ?

1 2 3 4 5 6 7 8 9 10 11 12 13 14