ಆದಿಕಾಂಡ 48 : 1 (IRVKN)
ಯಾಕೋಬನು ಯೋಸೇಫನ ಮಕ್ಕಳನ್ನು ಆಶೀರ್ವದಿಸಿದ್ದು ಕೆಲವು ಕಾಲವಾದ ಮೇಲೆ ಯೋಸೇಫನಿಗೆ, “ಅವನ ತಂದೆಯು ಅಸ್ವಸ್ಥನಾಗಿದ್ದಾನೆ” ಎಂಬ ವಾರ್ತೆಯು ದೊರಕಿತು. ಆಗ ಯೋಸೇಫನು ಮನಸ್ಸೆ ಎಫ್ರಾಯೀಮರೆಂಬ ತನ್ನಿಬ್ಬರು ಮಕ್ಕಳನ್ನು ತನ್ನ ಸಂಗಡ ಕರೆದುಕೊಂಡು ತಂದೆಯ ಬಳಿಗೆ ಬಂದನು.
ಆದಿಕಾಂಡ 48 : 2 (IRVKN)
“ನಿನ್ನ ಮಗನಾದ ಯೋಸೇಫನು ನಿನ್ನ ಬಳಿಗೆ ಬಂದಿದ್ದಾನೆ” ಎಂದು ಯಾಕೋಬನಿಗೆ ತಿಳಿಸಲು, ಇಸ್ರಾಯೇಲನು ಚೇತರಿಸಿಕೊಂಡು ಹಾಸಿಗೆಯ ಮೇಲೆ ಎದ್ದು ಕುಳಿತುಕೊಂಡನು.
ಆದಿಕಾಂಡ 48 : 3 (IRVKN)
ಯಾಕೋಬನು, ಯೋಸೇಫನಿಗೆ, “ಸರ್ವಶಕ್ತನಾದ ದೇವರು ಕಾನಾನ್ ದೇಶದ ಲೂಜ್ ಎಂಬಲ್ಲಿ ನನಗೆ ದರ್ಶನ ಕೊಟ್ಟು ಆಶೀರ್ವದಿಸಿದನು.
ಆದಿಕಾಂಡ 48 : 4 (IRVKN)
ಆತನು ನನಗೆ, ‘ನಿನ್ನನ್ನು ಅಭಿವೃದ್ಧಿಪಡಿಸಿ ನಿನ್ನ ಸಂತತಿಯನ್ನು ಹೆಚ್ಚಿಸುವೆನು. ಅನೇಕ ಜನಾಂಗಗಳು ನಿನ್ನಿಂದುಟಾಗುವಂತೆ ಮಾಡುವೆನು. ನಿನ್ನ ತರುವಾಯ ನಿನ್ನ ಸಂತತಿಗೆ ಈ ದೇಶವನ್ನು ಶಾಶ್ವತ ಸೊತ್ತನ್ನಾಗಿ ಕೊಡುವೆನು’ ” ಎಂದು ಹೇಳಿದನು.
ಆದಿಕಾಂಡ 48 : 5 (IRVKN)
ಐಗುಪ್ತ ದೇಶಕ್ಕೆ ನಿನ್ನ ಬಳಿಗೆ ಬರುವುದಕ್ಕಿಂತ ಮೊದಲು ಇಲ್ಲಿ ಹುಟ್ಟಿದ ನಿನ್ನಿಬ್ಬರು ಮಕ್ಕಳು ನನಗೆ ಮಕ್ಕಳಾಗಿರಬೇಕು. ರೂಬೇನ್ ಸಿಮೆಯೋನರು ನನ್ನ ಮಕ್ಕಳಾಗಿರುವಂತೆಯೆ ಎಫ್ರಾಯೀಮ್ ಮನಸ್ಸೆಯರೂ ನನ್ನ ಮಕ್ಕಳಾಗಿರಲಿ.
ಆದಿಕಾಂಡ 48 : 6 (IRVKN)
ಅವರ ತರುವಾಯ ನೀನು ಪಡೆದ ಮಕ್ಕಳು ನಿನ್ನವರಾಗಿರಲಿ. ಅವರು ತಮ್ಮ ಅಣ್ಣಂದಿರ ಸ್ವತ್ತಿನಲ್ಲಿ ಬಾಧ್ಯತೆ ಹೊಂದಿ, ಅವರ ಕುಲದ ಹೆಸರನ್ನೇ ಇಟ್ಟುಕೊಳ್ಳಲಿ.
ಆದಿಕಾಂಡ 48 : 7 (IRVKN)
ನಾನು ಪದ್ದನ್ ಅರಾಮಿನಿಂದ ಬರುವಾಗ ಕಾನಾನ್ ದೇಶದಲ್ಲಿ ಎಫ್ರಾತನ್ನು ಸೇರುವುದಕ್ಕೆ ಇನ್ನೂ ಸ್ವಲ್ಪ ದೂರವಿದ್ದಾಗ ರಾಹೇಲಳು ದಾರಿಯಲ್ಲೇ ಸತ್ತುಹೋದಳು. ಬೇತ್ಲೆಹೇಮ್ ಎಂಬ ಎಫ್ರಾತಿಗೆ ಹೋಗುವ ಮಾರ್ಗದಲ್ಲಿ ಆಕೆಗೆ ಸಮಾಧಿ ಮಾಡಿದೆನು ಎಂದನು.
ಆದಿಕಾಂಡ 48 : 8 (IRVKN)
ಆದಿಕಾಂಡ 48 : 9 (IRVKN)
ನಂತರ ಇಸ್ರಾಯೇಲನು ಯೋಸೇಫನ ಮಕ್ಕಳನ್ನು ನೋಡಿ, “ಇವರು ಯಾರು?” ಎಂದು ಕೇಳಲು, ಯೋಸೇಫನು ತನ್ನ ತಂದೆಗೆ, “ಇವರು ಈ ದೇಶದಲ್ಲಿ ನನಗೆ ದೇವರು ಅನುಗ್ರಹಿಸಿದ ಮಕ್ಕಳು” ಎಂದು ಹೇಳಿದನು. ಅದಕ್ಕವನು, “ನಾನು ಇವರನ್ನು ಆಶೀರ್ವದಿಸುತ್ತೇನೆ. ನನ್ನ ಹತ್ತಿರ ಕರೆದುಕೊಂಡು ಬಾ” ಎಂದನು.
ಆದಿಕಾಂಡ 48 : 10 (IRVKN)
ಇಸ್ರಾಯೇಲನು ವೃದ್ಧಾಪ್ಯದಿಂದ ಮೊಬ್ಬು ಕಣ್ಣುಳ್ಳವನಾಗಿ ನೋಡಲಾರದೆ ಇದ್ದನು. ಯೋಸೇಫನು ಅವರನ್ನು ಅವನ ಬಳಿಗೆ ಕರೆದುಕೊಂಡು ಬರಲು ಅವನು ಅವರನ್ನು ಮುದ್ದಿಟ್ಟು ಅಪ್ಪಿಕೊಂಡನು.
ಆದಿಕಾಂಡ 48 : 11 (IRVKN)
ಆದಿಕಾಂಡ 48 : 12 (IRVKN)
ಆಗ ಇಸ್ರಾಯೇಲನು ಯೋಸೇಫನಿಗೆ, “ನಿನ್ನ ಮುಖವನ್ನು ತಿರುಗಿ ನೋಡುವೆನೆಂದು ನಾನು ನೆನಸಿರಲಿಲ್ಲ. ಆದರೆ ನಾನು ನಿನ್ನನ್ನು ಮಾತ್ರವಲ್ಲದೆ ನಿನ್ನ ಸಂತಾನವನ್ನೂ ನೋಡುವಂತೆ ದೇವರು ಅನುಗ್ರಹಿಸಿದ್ದಾನೆ” ಎಂದನು. ಆಗ ಯೋಸೇಫನು ಅವರನ್ನು ತಂದೆಯ ಮಡಿಲಿನಿಂದ ಎತ್ತಿಕೊಂಡು ತನ್ನ ತಂದೆಗೆ ತಲೆಬಾಗಿ ನಮಸ್ಕರಿಸಿದನು.
ಆದಿಕಾಂಡ 48 : 13 (IRVKN)
ತರುವಾಯ ಯೋಸೇಫನು ತನ್ನ ಬಲಗಡೆಯಲ್ಲಿ ಇಸ್ರಾಯೇಲನ ಎಡಗೈಗೆ ಎದುರಾಗಿ ಎಫ್ರಾಯೀಮನನ್ನೂ, ತನ್ನ ಎಡಗಡೆಯಲ್ಲಿ ಇಸ್ರಾಯೇಲನ ಬಲಗೈಗೆ ಎದುರಾಗಿ ಮನಸ್ಸೆಯನ್ನೂ ನಿಲ್ಲಿಸಿ, ಅವರಿಬ್ಬರನ್ನೂ ತನ್ನ ತಂದೆಯ ಬಳಿ ನಿಲ್ಲಿಸಿದನು.
ಆದಿಕಾಂಡ 48 : 14 (IRVKN)
ಮನಸ್ಸೆಯು ಚೊಚ್ಚಲ ಮಗನಾಗಿದ್ದರೂ, ಇಸ್ರಾಯೇಲನು ತನ್ನ ಕೈಗಳನ್ನು ಅಡ್ಡವಾಗಿ ಚಾಚಿ ಕಿರಿಯವನಾದ ಎಫ್ರಾಯೀಮನ ತಲೆಯ ಮೇಲೆ ಬಲಗೈಯನ್ನೂ, ಮನಸ್ಸೆಯ ತಲೆಯ ಮೇಲೆ ಎಡಗೈಯನ್ನೂ ಇಟ್ಟನು.
ಆದಿಕಾಂಡ 48 : 15 (IRVKN)
ನಂತರ ಅವನು ಯೋಸೇಫನನ್ನು, ಆಶೀರ್ವದಿಸಿ, “ನನ್ನ ಪೂರ್ವಿಕರಾದ ಅಬ್ರಹಾಮ ಇಸಾಕರು ಸೇವಿಸಿದ ದೇವರೇ, ನನ್ನನ್ನು ಚಿಕ್ಕಂದಿನಿಂದ ಈ ದಿನದ ವರೆಗೂ ಪರಾಂಬರಿಸುತ್ತಾ ಬಂದ ದೇವರು,
ಆದಿಕಾಂಡ 48 : 16 (IRVKN)
ನನ್ನನ್ನು ಎಲ್ಲಾ ಕೇಡುಗಳಿಂದ ತಪ್ಪಿಸಿ ಕಾಪಾಡುತ್ತಾ ಬಂದ ದೂತನಾಗಿಯೂ ಇರುವಾತನು ಈ ಹುಡುಗರನ್ನು ಆಶೀರ್ವದಿಸಲಿ. ಇವರು ನನ್ನ ಹೆಸರನ್ನು, ನನ್ನ ಪೂರ್ವಿಕರಾದ ಅಬ್ರಹಾಮ ಇಸಾಕರ ಹೆಸರಿನಿಂದ ಇವರ ಹೆಸರುಗಳು ನೆಲೆಗೊಳ್ಳಲಿ, QS4 ಇವರು ಭೂಮಿಯ ಮೇಲೆ ಹೆಚ್ಚಿ ಬಹು ಸಂತಾನವನ್ನು ಪಡೆಯಲಿ” ಎಂದನು.
ಆದಿಕಾಂಡ 48 : 17 (IRVKN)
ತನ್ನ ತಂದೆಯು ಬಲಗೈಯನ್ನು ಎಫ್ರಾಯೀಮನ ತಲೆಯ ಮೇಲೆ ಇಡುವುದನ್ನು ಯೋಸೇಫನು ಕಂಡು ಅಸಮಾಧಾನಪಟ್ಟು ಅವನ ಕೈಯನ್ನು ಎಫ್ರಾಯೀಮನ ತಲೆಯಿಂದ ಎತ್ತಿ ಮನಸ್ಸೆಯ ತಲೆಯ ಮೇಲೆ ಇಟ್ಟು,
ಆದಿಕಾಂಡ 48 : 18 (IRVKN)
ಯೋಸೇಫನು ತಂದೆಗೆ, “ಅಪ್ಪಾ, ಇವನೇ ಚೊಚ್ಚಲ ಮಗನು ಬಲಗೈಯನ್ನು ಇವನ ತಲೆಯ ಮೇಲೆ ಇಡಬೇಕು” ಎಂದು ಹೇಳಿದನು.
ಆದಿಕಾಂಡ 48 : 19 (IRVKN)
ಆದರೆ ಅವನ ತಂದೆ ಒಪ್ಪದೆ, “ಮಗನೇ ನಾನು ಬಲ್ಲೆ. ನನಗೆ ಗೊತ್ತು. ಇವನಿಂದಲೂ ಜನಾಂಗವುಂಟಾಗುವುದು. ಇವನು ಬಲಿಷ್ಠನಾಗುವನು. ಆದರೂ ಇವನಿಗಿಂತಲೂ ಇವನ ತಮ್ಮನು ಬಲಿಷ್ಠನಾಗುವನು. ತಮ್ಮನ ಸಂತತಿಯಲ್ಲಿಯೇ ಜನರು ಹೇರಳವಾಗಿ ಹುಟ್ಟುವರು” ಎಂದು ಹೇಳಿದನು.
ಆದಿಕಾಂಡ 48 : 20 (IRVKN)
ಆ ದಿನದಲ್ಲಿ ಅವನು ಅವರನ್ನು ಆಶೀರ್ವದಿಸಿ, “ನಿಮ್ಮ ಹೆಸರಿನಲ್ಲಿ ಇಸ್ರಾಯೇಲರು ಆಶೀರ್ವದಿಸಲ್ಪಡುವರು. ಎಫ್ರಾಯೀಮ್ ಹಾಗೂ ಮನಸ್ಸೆಯ ಹಾಗೆ ದೇವರು ನಿಮ್ಮನ್ನೂ ಆಶೀರ್ವದಿಸಲಿ” ಎಂದು ಹೇಳಿ ಎಫ್ರಾಯೀಮನನ್ನು ಮನಸ್ಸೆಯ ಮುಂದೆ ನಿಲ್ಲಿಸಿದನು.
ಆದಿಕಾಂಡ 48 : 21 (IRVKN)
ಇಸ್ರಾಯೇಲನು ಯೋಸೇಫನಿಗೆ, “ನನಗೆ ಮರಣವು ಸಮೀಪಿಸಿದೆ, ಆದರೆ ದೇವರು ನಿಮ್ಮೊಂದಿಗಿದ್ದು, ನಿಮ್ಮನ್ನು ಪೂರ್ವಿಕರ ದೇಶಕ್ಕೆ ಪುನಃ ಬರಮಾಡುವನು.
ಆದಿಕಾಂಡ 48 : 22 (IRVKN)
ಇದಲ್ಲದೆ, ನಾನು ನಿನ್ನ ಅಣ್ಣಂದಿರಿಗೆ ಕೊಟ್ಟ ಪಾಲಿಗಿಂತ ಹೆಚ್ಚಾಗಿ ನಾನು ಕತ್ತಿ ಬಿಲ್ಲುಗಳಿಂದ ಅಮೋರಿಯರ ವಶದಿಂದ ತಪ್ಪಿಸಿ ಪಡೆದ ಬೆಟ್ಟದ ತಪ್ಪಲನ್ನು ನಿನಗೆ ಕೊಟ್ಟಿದ್ದೇನೆ” ಎಂದು ಹೇಳಿದನು.

1 2 3 4 5 6 7 8 9 10 11 12 13 14 15 16 17 18 19 20 21 22