ಆದಿಕಾಂಡ 28 : 1 (IRVKN)
ಆಗ ಇಸಾಕನು ಯಾಕೋಬನನ್ನು ಕರೆದು ಆಶೀರ್ವದಿಸಿ ಅವನಿಗೆ ಆಜ್ಞಾಪಿಸಿದ್ದೇನೆಂದರೆ, “ನೀನು ಕಾನಾನ್ಯರ ಹೆಣ್ಣನ್ನು ಮದುವೆಯಾಗಬಾರದು.
ಆದಿಕಾಂಡ 28 : 2 (IRVKN)
ಪದ್ದನ್ ಅರಾಮ್ ದೇಶದಲ್ಲಿರುವ ನಿನ್ನ ತಾಯಿಯ ತಂದೆಯಾದ ಬೆತೂವೇಲನ ಮನೆಗೆ ಹೊರಟು ಹೋಗು. ಅಲ್ಲಿ ನಿನ್ನ ತಾಯಿಯ ಸಹೋದರನಾದ ಲಾಬಾನನ ಹೆಣ್ಣು ಮಕ್ಕಳಲ್ಲಿ ಒಬ್ಬಳನ್ನು ಮದುವೆ ಮಾಡಿಕೋ.
ಆದಿಕಾಂಡ 28 : 3 (IRVKN)
ಸರ್ವಶಕ್ತನಾದ ದೇವರು ನಿನ್ನನ್ನು ಆಶೀರ್ವದಿಸಿ ನಿನಗೆ ಬಹಳ ಸಂತತಿಯನ್ನು ಕೊಟ್ಟು ನಿನ್ನಿಂದ ಅನೇಕ ಜನಾಂಗಗಳು ಹುಟ್ಟುವಂತೆ ಅನುಗ್ರಹಿಸಲಿ.
ಆದಿಕಾಂಡ 28 : 4 (IRVKN)
ದೇವರು ಅಬ್ರಹಾಮನಿಗೆ ಕೊಟ್ಟಿರುವ ಆಶೀರ್ವಾದವನ್ನು ನಿನಗೂ, ನಿನ್ನ ಸಂತತಿಗೂ ಕೊಡಲಿ, ದೇವರು ಅಬ್ರಹಾಮನಿಗೆ ವಾಗ್ದಾನ ಮಾಡಿದ ಹಾಗೆ, ನೀನು ಈಗ ಪ್ರವಾಸಿಯಾಗಿರುವ ದೇಶವನ್ನು ಸ್ವತ್ತಾಗಿ ಹೊಂದುವಂತೆ ದೇವರು ನಿನ್ನನ್ನು ಆಶೀರ್ವದಿಸಿ ನಿನಗೂ ನಿನ್ನ ಸಂತತಿಗೂ ಕೊಡಲಿ” ಎಂದನು.
ಆದಿಕಾಂಡ 28 : 5 (IRVKN)
ಇಸಾಕನು ಯಾಕೋಬನನ್ನು ಕಳುಹಿಸಿದಾಗ ಅವನು ಪದ್ದನ್ ಅರಾಮನಲ್ಲಿದ್ದ ಯಾಕೋಬನ ಮತ್ತು ಏಸಾವನ ತಾಯಿಯಾದ ರೆಬೆಕ್ಕಳ ಅಣ್ಣನಾದ ಅರಾಮಿನವನಾದ ಬೆತೂವೇಲನ ಮಗನಾಗಿದ್ದ ಲಾಬಾನನ ಬಳಿಗೆ ಹೋದನು.
ಆದಿಕಾಂಡ 28 : 6 (IRVKN)
ಏಸಾವನು ಇಷ್ಮಾಯೇಲನ ತಂಗಿಯನ್ನು ಮದುವೆಯಾದದ್ದು ಇಸಾಕನು ಯಾಕೋಬನನ್ನು ಆಶೀರ್ವದಿಸಿ ಪದ್ದನ್ ಅರಾಮಿನಲ್ಲಿ ಹೆಣ್ಣನ್ನು ಹುಡುಕಿ ಮದುವೆ ಮಾಡಿಕೊಳ್ಳಲು ಕಳುಹಿಸಿದ್ದನ್ನೂ, ಅವನು ಯಾಕೋಬನನ್ನು ಆಶೀರ್ವದಿಸುವಾಗ ಅವನಿಗೆ, ನೀನು ಕಾನಾನ್ಯರ ಹೆಣ್ಣನ್ನು ತೆಗೆದುಕೊಳ್ಳಬಾರದೆಂದು ಅಪ್ಪಣೆಕೊಟ್ಟದ್ದನ್ನೂ, ಏಸಾವನು ನೋಡಿದನು.
ಆದಿಕಾಂಡ 28 : 7 (IRVKN)
ಯಾಕೋಬನು ತನ್ನ ತಂದೆತಾಯಿಗಳ ಮಾತಿಗೆ ವಿಧೇಯನಾಗಿ ಪದ್ದನ್ ಅರಾಮಿಗೆ ಹೋದದ್ದನ್ನೂ ಸಹ ಏಸಾವನು ನೋಡಿದನು.
ಆದಿಕಾಂಡ 28 : 8 (IRVKN)
ಕಾನಾನ್ಯರ ಹೆಣ್ಣು ಮಕ್ಕಳು ತನ್ನ ತಂದೆಯಾದ ಇಸಾಕನಿಗೆ ಇಷ್ಟವಿಲ್ಲವೆಂದು ಏಸಾವನು ತಿಳಿದುಕೊಂಡನು.
ಆದಿಕಾಂಡ 28 : 9 (IRVKN)
ಏಸಾವನು ಇಷ್ಮಾಯೇಲನ ಬಳಿಗೆ ಹೋಗಿ ಅಬ್ರಹಾಮನ ಮಗನೂ ಇಷ್ಮಾಯೇಲನ ಮಗಳೂ ನೆಬಾಯೋತನ ತಂಗಿಯೂ ಆಗಿರುವ ಮಹಲತಳನ್ನು ಮದುವೆ ಮಾಡಿಕೊಂಡನು.
ಆದಿಕಾಂಡ 28 : 10 (IRVKN)
ಯಾಕೋಬನ ಕನಸು ಆಗ ಯಾಕೋಬನು ಹಾರಾನಿಗೆ ಹೋಗಬೇಕೆಂದು ಬೇರ್ಷೆಬದಿಂದ ಹೊರಟನು.
ಆದಿಕಾಂಡ 28 : 11 (IRVKN)
ಅವನು ಪ್ರಯಾಣಾರ್ಥವಾಗಿ ಹೋಗುತ್ತಿರುವಾಗ ಹೊತ್ತು ಮುಳುಗಿದ್ದರಿಂದ ಆ ರಾತ್ರಿ ಅಲ್ಲಿಯೇ ಉಳಿದುಕೊಂಡನು. ಅವನು ಅಲ್ಲಿದ್ದ ಕಲ್ಲುಗಳಲ್ಲಿ ಒಂದು ಕಲ್ಲನ್ನು ತಲೆದಿಂಬಾಗಿ ಇಟ್ಟುಕೊಂಡು ಆ ಸ್ಥಳದಲ್ಲಿ ಮಲಗಿಕೊಂಡನು.
ಆದಿಕಾಂಡ 28 : 12 (IRVKN)
ಆ ರಾತ್ರಿ ಅವನು ಒಂದು ಕನಸು ಕಂಡನು. ಆ ಕನಸಿನಲ್ಲಿ ಒಂದು ಏಣಿಯು ಭೂಮಿಯ ಮೇಲೆ ನಿಂತಿತು. ಅದರ ತುದಿ ಆಕಾಶವನ್ನು ಮುಟ್ಟಿತು. ಅದರ ಮೇಲೆ ದೇವ ದೂತರು ಏರುತ್ತಾ ಇಳಿಯುತ್ತಾ ಇದ್ದರು.
ಆದಿಕಾಂಡ 28 : 13 (IRVKN)
ಇದಲ್ಲದೆ ಯೆಹೋವನು * ಅಥವಾ ಅವನ ಬಳಿಯಲ್ಲಿ ನಿಂತು. ಅದರ ಮೇಲೆ ನಿಂತುಕೊಂಡು, “ನಿನ್ನ ತಂದೆಯಾದ ಅಬ್ರಹಾಮನ ದೇವರೂ, ಇಸಾಕನ ದೇವರೂ ಆಗಿರುವ ಯೆಹೋವನು ನಾನೇ. ನೀನು ಮಲಗಿರುವ ಭೂಮಿಯನ್ನು ನಿನಗೂ, ನಿನ್ನ ಸಂತತಿಗೂ ಕೊಡುವೆನು.
ಆದಿಕಾಂಡ 28 : 14 (IRVKN)
ನಿನ್ನ ಸಂತತಿಯು ಭೂಮಿಯ ಧೂಳಿನಷ್ಟು ಅಸಂಖ್ಯವಾಗುವುದು. ನೀನು ಪೂರ್ವ, ಪಶ್ಚಿಮ, ದಕ್ಷಿಣ ಉತ್ತರ ದಿಕ್ಕುಗಳಿಗೆ ಹರಡಿಕೊಳ್ಳುವಿ. ನಿನ್ನಿಂದಲೂ, ನಿನ್ನ ಸಂತತಿಯಿಂದಲೂ, ಭೂಮಿಯ ಎಲ್ಲಾ ಕುಲದವರು ಆಶೀರ್ವಾದ ಹೊಂದುವರು.
ಆದಿಕಾಂಡ 28 : 15 (IRVKN)
ಇಗೋ, ನಾನು ನಿನ್ನ ಸಂಗಡ ಇದ್ದು ನೀನು ಹೋಗುವಲ್ಲೆಲ್ಲಾ ನಿನ್ನನ್ನು ಕಾಪಾಡಿ, ಪುನಃ ಈ ದೇಶಕ್ಕೆ ಬರಮಾಡುವೆನು. ಏಕೆಂದರೆ ನಾನು ನಿನಗೆ ಹೇಳಿದ್ದನ್ನೆಲ್ಲಾ ನೆರವೇರಿಸದ ಹೊರತು ಬಿಡುವುದಿಲ್ಲ” ಎಂದನು.
ಆದಿಕಾಂಡ 28 : 16 (IRVKN)
ಯಾಕೋಬನು ನಿದ್ದೆಯಿಂದ ಎಚ್ಚೆತ್ತು, “ನಿಜವಾಗಿ ಯೆಹೋವನು ಈ ಸ್ಥಳದಲ್ಲಿ ನೆಲೆಸಿದ್ದಾನೆ. ಇದು ನನಗೆ ತಿಳಿಯದೆ ಹೋಯಿತು” ಎಂದನು.
ಆದಿಕಾಂಡ 28 : 17 (IRVKN)
ಅವನು ಭಯಪಟ್ಟವನಾಗಿ, “ಈ ಸ್ಥಳವು ಪವಿತ್ರವಾದ್ದದು. ಇದು ದೇವರ ಮನೆಯೇ ಹೊರತು ಬೇರೆಯಲ್ಲ, ಇದು ಪರಲೋಕದ ಬಾಗಿಲು” ಎಂದನು.
ಆದಿಕಾಂಡ 28 : 18 (IRVKN)
ಯಾಕೋಬನು ಬೆಳಗ್ಗೆ ಎದ್ದು ತಾನು ತಲೆದಿಂಬಾಗಿ ಇಟ್ಟುಕೊಂಡಿದ್ದ ಕಲ್ಲನ್ನು ತೆಗೆದುಕೊಂಡು ಅದನ್ನು ಸ್ತಂಭವಾಗಿ ನಿಲ್ಲಿಸಿ ಅದರ ಮೇಲೆ ಎಣ್ಣೆಯನ್ನು ಹೊಯ್ದನು.
ಆದಿಕಾಂಡ 28 : 19 (IRVKN)
ಇದಲ್ಲದೆ ಅವನು ಆ ಸ್ಥಳಕ್ಕೆ “ ಬೇತೇಲ್ ಅಂದರೆ ದೇವರ ಮನೆ. ಬೇತೇಲ್” ಎಂದು ಹೆಸರಿಟ್ಟನು. ಅದಕ್ಕಿಂತ ಮೊದಲು ಆ ಪಟ್ಟಣಕ್ಕೆ “ಲೂಜ್” ಎಂದು ಹೆಸರಿತ್ತು.
ಆದಿಕಾಂಡ 28 : 20 (IRVKN)
ಯಾಕೋಬನು ಅಲ್ಲಿ ಪ್ರಮಾಣ ಮಾಡಿ, “ದೇವರು ನನ್ನ ಸಂಗಡ ಇದ್ದು ನಾನು ಹೋಗುವ ಈ ಮಾರ್ಗದಲ್ಲಿ ನನ್ನನ್ನು ಕಾಪಾಡಿ ಉಣ್ಣುವುದಕ್ಕೆ ಆಹಾರವನ್ನೂ, ಉಡುವುದಕ್ಕೆ ವಸ್ತ್ರವನ್ನೂ, ನನಗೆ ಕೊಟ್ಟು,
ಆದಿಕಾಂಡ 28 : 21 (IRVKN)
ತಿರುಗಿ ನನ್ನನ್ನು ನನ್ನ ತಂದೆಯ ಮನೆಗೆ ಸುರಕ್ಷಿತವಾಗಿ ಬರಮಾಡಿದರೆ ಯೆಹೋವನೇ ನನಗೆ ದೇವರಾಗಿರುವನು.
ಆದಿಕಾಂಡ 28 : 22 (IRVKN)
ಇದಲ್ಲದೆ ನಾನು ಸ್ತಂಭವಾಗಿ ನಿಲ್ಲಿಸಿದ ಈ ಕಲ್ಲು ದೇವರ ಮನೆಯಾಗುವುದು. ಆಗ ನೀನು ನನಗೆ ಕೊಡುವುದರಲ್ಲೆಲ್ಲಾ ಹತ್ತರಲ್ಲಿ ಒಂದು ಭಾಗವನ್ನು ನಿನಗೆ ನಾನು ಖಂಡಿತವಾಗಿ ಕೊಡುವೆನು” ಎಂದು ಹರಕೆಮಾಡಿಕೊಂಡನು.

1 2 3 4 5 6 7 8 9 10 11 12 13 14 15 16 17 18 19 20 21 22