ಆದಿಕಾಂಡ 10 : 1 (IRVKN)
{ನೋಹನ ಮಕ್ಕಳ ಸಂತಾನ} (1ಪೂರ್ವ 1:5-23) [PS] ನೋಹನ ಮಕ್ಕಳಾದ ಶೇಮ್, ಹಾಮ್, ಯೆಫೆತ್ ಎಂಬುವವರ ಸಂತಾನದವರ ಚರಿತ್ರೆ: ಜಲಪ್ರಳಯದ ನಂತರ ಅವರಿಗೆ ಮಕ್ಕಳು ಹುಟ್ಟಿದರು. [PE][PS]
ಆದಿಕಾಂಡ 10 : 2 (IRVKN)
ಯೆಫೆತನ ಸಂತಾನದವರು ಯಾರೆಂದರೆ - ಗೋಮೆರ್, ಮಾಗೋಗ್, ಮಾದಯ್, ಯಾವಾನ್, ತೂಬಲ್, ಮೆಷೆಕ್, ತೀರಾಸ್ ಎಂಬವರು. [PE][PS]
ಆದಿಕಾಂಡ 10 : 3 (IRVKN)
ಗೋಮೆರನ ಸಂತಾನದವರು - ಅಷ್ಕೆನಸ್, ರೀಫತ್, ತೋಗರ್ಮ ಎಂಬವರು. [PE][PS]
ಆದಿಕಾಂಡ 10 : 4 (IRVKN)
ಯಾವಾನನ ಸಂತಾನದವರು - ಎಲೀಷಾ, ತಾರ್ಷೀಷ್, ಕಿತ್ತೀಮ್, ದೋದಾ ಎಂಬ ಸ್ಥಳದವರು. ಇವರು ಸಮುದ್ರದ ರೇವು ಪ್ರದೇಶಗಳಲ್ಲಿ ಹರಡಿಕೊಂಡರು.
ಆದಿಕಾಂಡ 10 : 5 (IRVKN)
ದೇಶ, ಭಾಷೆ, ಕುಲ, ಜನಾಂಗಗಳ ಪ್ರಕಾರ ಇವರೇ ಯೆಫೆತನ ವಂಶದವರು. [PE][PS]
ಆದಿಕಾಂಡ 10 : 6 (IRVKN)
ಹಾಮನ ಸಂತಾನದವರು ಯಾರೆಂದರೆ - ಕೂಷ್, ಮಿಚ್ರಯಿಮ್, ಪೂತ್, ಕಾನಾನ್ ಎಂಬುವವರು. [PE][PS]
ಆದಿಕಾಂಡ 10 : 7 (IRVKN)
ಕೂಷನ ಸಂತಾನದವರು ಯಾರೆಂದರೆ - ಸೆಬಾ, ಹವೀಲ, ಸಬ್ತಾ, ರಗ್ಮ, ಸಬ್ತಕಾ ಎಂಬವರು. ರಗ್ಮ ಸಂತಾನದವರು - ಶೆಬಾ, ದೆದಾನ್ ಎಂಬುವವರು. [PE][PS]
ಆದಿಕಾಂಡ 10 : 8 (IRVKN)
ಕೂಷನು ನಿಮ್ರೋದನನ್ನು ಪಡೆದನು. ಅವನು ಭೂಮಿಯ ಮೇಲಿನ ಮೊದಲನೆಯ ಪರಾಕ್ರಮಶಾಲಿಯಾಗಿದ್ದನು.
ಆದಿಕಾಂಡ 10 : 9 (IRVKN)
ಯೆಹೋವನ ದೃಷ್ಟಿಯಲ್ಲಿ ನಿಮ್ರೋದನು ದಿಟ್ಟ ಬೇಟೆಗಾರನಾಗಿದ್ದನು. ಆದುದರಿಂದ “ಯೆಹೋವನು ನಿನ್ನನ್ನು ದಿಟ್ಟ ಬೇಟೆಗಾರನಾಗಿಸಲಿ” ಎಂಬ ಗಾದೆ ಇಂದಿನವರೆಗೂ ಹೇಳುವುದುಂಟು.
ಆದಿಕಾಂಡ 10 : 10 (IRVKN)
ಶಿನಾರ್ ದೇಶದಲ್ಲಿರುವ [* ಬಾಬಿಲೋನ್] ಬಾಬೆಲ್, ಯೆರೆಕ್, ಅಕ್ಕದ್, ಕಲ್ನೇ ಎಂಬ ಪಟ್ಟಣಗಳೇ ಅವನ ರಾಜ್ಯದ ಮೂಲ ಪಟ್ಟಣಗಳು.
ಆದಿಕಾಂಡ 10 : 11 (IRVKN)
ಅವನು ಆ ದೇಶದಿಂದ ಹೊರಟು ಅಶ್ಶೂರ್ ದೇಶಕ್ಕೆ ಬಂದು ನಿನೆವೆ, ರೆಹೋಬೋತೀರ್, ಕೆಲಹ ಎಂಬ ಪಟ್ಟಣಗಳನ್ನೂ,
ಆದಿಕಾಂಡ 10 : 12 (IRVKN)
ನಿನೆವೆಗೂ ಕೆಲಹಕ್ಕೂ ಮಧ್ಯದಲ್ಲಿ ಇರುವ ರೆಸೆನ್ ಪಟ್ಟಣವನ್ನೂ ಕಟ್ಟಿಸಿದನು. ರೆಸೆನ್ ಮಹಾಪಟ್ಟಣವೆಂದು ಪ್ರಸಿದ್ಧವಾಗಿದೆ. [PE][PS]
ಆದಿಕಾಂಡ 10 : 13 (IRVKN)
ಮಿಚ್ರಯಿಮ್ಯರಿಂದ ಲೂದ್ಯರು, ಅನಾಮ್ಯರು, ಲೆಹಾಬ್ಯರು, ನಫ್ತುಹ್ಯರು, ಹುಟ್ಟಿದರು.
ಆದಿಕಾಂಡ 10 : 14 (IRVKN)
ಪತ್ರುಸ್ಯರು, ಕಸ್ಲುಹ್ಯರು, ಕಫ್ತೋರ್ಯರು ಫಿಲಿಷ್ಟಿಯರಿಂದ ಹುಟ್ಟಿದರು. [PE][PS]
ಆದಿಕಾಂಡ 10 : 15 (IRVKN)
ಕಾನಾನ್ ವಂಶದಲ್ಲಿ ಮೊದಲು ಹುಟ್ಟಿದವನು ಸೀದೋನ್; ಆ ಮೇಲೆ ಹೇತ್ ಹುಟ್ಟಿದನು.
ಆದಿಕಾಂಡ 10 : 16 (IRVKN)
ಇದಲ್ಲದೆ ಯೆಬೂಸಿಯರು, ಅಮೋರಿಯರು, ಗಿರ್ಗಾಷಿಯರು,
ಆದಿಕಾಂಡ 10 : 17 (IRVKN)
ಹಿವ್ವಿಯರು, ಅರ್ಕಿಯರು, ಸೀನಿಯರು ಕಾನಾನನಿಂದ ಹುಟ್ಟಿದರು.
ಆದಿಕಾಂಡ 10 : 18 (IRVKN)
ಕಾಲ ಕ್ರಮೇಣವಾಗಿ ಈ ಕಾನಾನ್ಯರ ವಂಶಸ್ಥರಾದ ಸೀನಿಯರು, ಅರ್ವಾದಿಯರು, ಚೆಮಾರಿಯರು, ಹದೋರಾಮರು, ಹಮಾತಿಯರು ಹರಡಿ ಕಾನಾನನಿಂದ ಹುಟ್ಟಿದರು. [PE][PS]
ಆದಿಕಾಂಡ 10 : 19 (IRVKN)
ಕಾನಾನ್ಯರ ಸೀಮೆಯು ಸೀದೋನ್ ಪಟ್ಟಣದಿಂದ ಗೆರಾರಿಗೆ ಹೋಗುವ ದಾರಿಯಲ್ಲಿರುವ ಗಾಜಾ ಪಟ್ಟಣದ ವರೆಗೂ ಮತ್ತು ಸೊದೋಮ್, ಗೊಮೋರ, ಅದ್ಮಾ, ಚೆಬೋಯಿಮ್ ಎಂಬ ಪಟ್ಟಣಗಳಿಗೆ ಹೋಗುವ ದಾರಿಯಲ್ಲಿರುವ ಲೆಷಾ ಊರಿನವರೆಗೂ ಇರುತ್ತದೆ. [PE][PS]
ಆದಿಕಾಂಡ 10 : 20 (IRVKN)
ಕುಲ, ಭಾಷೆ, ದೇಶ, ಜನಾಂಗಗಳ ಪ್ರಕಾರ ಇವರೇ ಹಾಮನ ವಂಶದವರು. [PE][PS]
ಆದಿಕಾಂಡ 10 : 21 (IRVKN)
ಇಬ್ರಿಯರೆಲ್ಲರಿಗೆ ಮೂಲಪುರುಷನನೂ, ಯೆಫೆತನ ಅಣ್ಣನೂ ಆಗಿದ್ದ ಶೇಮನಿಗೂ ಮಕ್ಕಳು ಹುಟ್ಟಿದರು. [PE][PS]
ಆದಿಕಾಂಡ 10 : 22 (IRVKN)
ಶೇಮನ ಮಕ್ಕಳು - ಏಲಾಮ್, ಅಶ್ಶೂರ್, ಅರ್ಪಕ್ಷದ್, ಲೂದ್, ಅರಾಮ್ ಎಂಬವರು. [PE][PS]
ಆದಿಕಾಂಡ 10 : 23 (IRVKN)
ಅರಾಮ್ ಸಂತಾನದವರು - ಊಸ್, ಹೂಲ್, ಗೆತೆರ್, ಮಷ್ ಎಂಬವರು. [PE][PS]
ಆದಿಕಾಂಡ 10 : 24 (IRVKN)
ಅರ್ಪಕ್ಷದನಿಂದ ಶೆಲಹನೂ, ಶೆಲಹನಿಂದ ಎಬರನೂ ಹುಟ್ಟಿದನು. [PE][PS]
ಆದಿಕಾಂಡ 10 : 25 (IRVKN)
ಎಬರನಿಗೆ ಇಬ್ಬರು ಮಕ್ಕಳು ಹುಟ್ಟಿದರು. ಒಬ್ಬನಿಗೆ ಪೆಲೆಗೆಂಬ ಹೆಸರು; ಅವನ ಕಾಲದಲ್ಲಿ ಭೂಮಿಯು ವಿಭಾಗಿಸಲ್ಪಟ್ಟಿತ್ತು. ಅವನ ತಮ್ಮನ ಹೆಸರು ಯೊಕ್ತಾನ್. [PE][PS]
ಆದಿಕಾಂಡ 10 : 26 (IRVKN)
ಯೊಕ್ತಾನನ ಸಂತಾನದವರು - ಅಲ್ಮೋದಾದ್, ಶೆಲೆಪ್, ಹಚರ್ಮಾವೆತ್, ಯೆರಹ,
ಆದಿಕಾಂಡ 10 : 27 (IRVKN)
ಹದೋರಾಮ್, ಊಜಾಲ್, ದಿಕ್ಲಾ,
ಆದಿಕಾಂಡ 10 : 28 (IRVKN)
ಓಬಾಲ್, ಅಬೀಮಯೇಲ್, ಶೆಬಾ, ಓಫೀರ್, ಹವೀಲ, ಯೋಬಾಬ್ ಎಂಬವರು.
ಆದಿಕಾಂಡ 10 : 29 (IRVKN)
ಹದೋರಾಮ್, ಊಜಾಲ್, ದಿಕ್ಲಾ, ಓಬಾಲ್, ಅಬೀಮಯೇಲ್, ಶೆಬಾ, ಓಫೀರ್, ಹವೀಲ, ಯೋಬಾಬ್ ಈ ಕುಲಗಳೆಲ್ಲಾ ಯೊಕ್ತಾನನಿಂದ ಹುಟ್ಟಿದವು. [PE][PS]
ಆದಿಕಾಂಡ 10 : 30 (IRVKN)
ಇವರ ನಿವಾಸವು ಮೇಶಾ ಸೀಮೆ ಮೊದಲುಗೊಂಡು ಪೂರ್ವ ದಿಕ್ಕಿನಲ್ಲಿರುವ ಸೆಫಾರ್ ಎಂಬ ಬೆಟ್ಟದ ವರೆಗೂ ಇತ್ತು. [PE][PS]
ಆದಿಕಾಂಡ 10 : 31 (IRVKN)
ಕುಲ, ಭಾಷೆ, ಜನಾಂಗಗಳ ಪ್ರಕಾರ ಇವರೇ ಶೇಮನ ವಂಶದವರು. [PE][PS]
ಆದಿಕಾಂಡ 10 : 32 (IRVKN)
ಜನಾಂಗಗಳ ಸಂತತಿಯ ಪ್ರಕಾರ ಇವರೇ ನೋಹನ ವಂಶದವರು. ಜಲಪ್ರಳಯವಾದ ನಂತರ ಭೂಮಿಯ ಮೇಲೆ ಹರಡಿಕೊಂಡ ಜನಾಂಗಗಳು ಇವರೇ. [PE]

1 2 3 4 5 6 7 8 9 10 11 12 13 14 15 16 17 18 19 20 21 22 23 24 25 26 27 28 29 30 31 32

BG:

Opacity:

Color:


Size:


Font: