ಗಲಾತ್ಯದವರಿಗೆ 6 : 1 (IRVKN)
ಪರಸ್ಪರ ಭಾರವನ್ನು ಹೊತ್ತುಕೊಳ್ಳಿರಿ ಸಹೋದರರೇ, * 2 ಕೊರಿ 2:7, ಇಬ್ರಿ. 12:13, ಯಾಕೋಬ. 5:19 ನಿಮ್ಮಲ್ಲಿ ಯಾರಾದರೂ ಯಾವುದಾದರೂ ಪಾಪದಲ್ಲಿ ಸಿಕ್ಕಿಹಾಕಿಕೊಂಡಿದ್ದರೆ † ರೋಮಾ. 15:1 ಅಂಥವರನ್ನು ಆತ್ಮಭರಿತರಾದ ನೀವು ಶಾಂತಭಾವದಿಂದ ತಿದ್ದಿ ಸರಿಮಾಡಿರಿ. ನೀವಾದರೂ ಶೋಧನೆಗೆ ಒಳಗಾಗದಂತೆ ನಿಮ್ಮ ವಿಷಯದಲ್ಲಿ ಎಚ್ಚರಿಕೆಯಾಗಿರಿ.
ಗಲಾತ್ಯದವರಿಗೆ 6 : 2 (IRVKN)
ಒಬ್ಬರು ಮತ್ತೊಬ್ಬರ ಭಾರವನ್ನು ಹೊತ್ತುಕೊಳ್ಳಲಿ, ಹೀಗೆ ಕ್ರಿಸ್ತನ ‡ ಧರ್ಮಶಾಸ್ತ್ರವನ್ನು, ಗಲಾ. 5:14 ನೀತಿನಿಯಮಗಳನ್ನು ನೆರವೇರಿಸಿರಿ.
ಗಲಾತ್ಯದವರಿಗೆ 6 : 3 (IRVKN)
§ 1 ಕೊರಿ 3:18 ಯಾವನಾದರೂ ಅಲ್ಪನಾಗಿದ್ದು ತಾನು ದೊಡ್ಡವನೆಂದು ಭಾವಿಸಿಕೊಂಡರೆ ತನ್ನನ್ನು ತಾನೇ ಮೋಸಗೊಳಿಸಿಕೊಳ್ಳುವನಾಗಿದ್ದಾನೆ.
ಗಲಾತ್ಯದವರಿಗೆ 6 : 4 (IRVKN)
* 1 ಕೊರಿ 11:28, 2 ಕೊರಿ 13:5 ಪ್ರತಿಯೊಬ್ಬನು ತಾನು ಮಾಡಿದ ಕೆಲಸವನ್ನು ಪರೀಕ್ಷಿಸಿಕೊಳ್ಳಲಿ. ಆಗ ಅವನು ತನ್ನ ನಿಮಿತ್ತದಿಂದ ಹೆಚ್ಚಳಪಡಬಹುದೇ ಹೊರತು ಮತ್ತೊಬ್ಬನೊಂದಿಗೆ ಹೋಲಿಸಿಕೊಂಡು ಹೆಚ್ಚಳಪಡಬೇಕಾಗಿರುವುದಿಲ್ಲ.
ಗಲಾತ್ಯದವರಿಗೆ 6 : 5 (IRVKN)
ಏಕೆಂದರೆ † ರೋಮಾ. 14:12 ಪ್ರತಿಯೊಬ್ಬನು ತನ್ನ ಸ್ವಂತ ಹೊರೆಯನ್ನು ತಾನೇ ಹೊತ್ತುಕೊಳ್ಳಬೇಕು.
ಗಲಾತ್ಯದವರಿಗೆ 6 : 6 (IRVKN)
‡ ರೋಮಾ. 15:27, 1 ಕೊರಿ 9:11 ದೇವರ ವಾಕ್ಯವನ್ನು ಕಲಿಯುವವನು, ಅದನ್ನು ಕಲಿಸುವವನಿಗೆ ತನ್ನಲ್ಲಿರುವ ಎಲ್ಲಾ ಮೇಲುಗಳಲ್ಲಿಯೂ ಪಾಲನ್ನು ಕೊಡಬೇಕು.
ಗಲಾತ್ಯದವರಿಗೆ 6 : 7 (IRVKN)
ಮೋಸಹೋಗಬೇಡಿರಿ. § ಯೋಬ. 13:9 ದೇವರನ್ನು ಅಪಹಾಸ್ಯ ಮಾಡಲಾಗುವುದಿಲ್ಲ. * 2 ಕೊರಿ 9:6 ಮನುಷ್ಯನು ತಾನು ಏನು ಬಿತ್ತುತ್ತಾನೋ ಅದನ್ನೇ ಕೊಯ್ಯಬೇಕು.
ಗಲಾತ್ಯದವರಿಗೆ 6 : 8 (IRVKN)
ತನ್ನ † ಶರೀರಭಾವದಲ್ಲಿ, ಹೋಶೇ. 8:7, ಯೋಬ. 4:8 ಶರೀರಭಾವವನ್ನು ಕುರಿತು ಬಿತ್ತುವವನು ‡ ರೋಮಾ. 6:21 ಆ ಭಾವದಿಂದ ನಾಶವನ್ನು ಕೊಯ್ಯುವನು. § ಯಾಕೋಬ. 3:18 ಆತ್ಮನ ಕುರಿತಾಗಿ ಬಿತ್ತುವವನು ಆತ್ಮನಿಂದ ನಿತ್ಯಜೀವವನ್ನು ಕೊಯ್ಯುವನು.
ಗಲಾತ್ಯದವರಿಗೆ 6 : 9 (IRVKN)
* 2 ಥೆಸ. 3:13, 1 ಕೊರಿ 15:58 ಒಳ್ಳೆಯದನ್ನು ಮಾಡುವುದರಲ್ಲಿ ಬೇಸರಗೊಳ್ಳದೇ ಇರೋಣ. ಏಕೆಂದರೆ ಮನಗುಂದದಿದ್ದರೆ ತಕ್ಕ ಸಮಯದಲ್ಲಿ ಬೆಳೆಯನ್ನು ಕೊಯ್ಯುವೆವು.
ಗಲಾತ್ಯದವರಿಗೆ 6 : 10 (IRVKN)
ಆದ್ದರಿಂದ ಅವಕಾಶ ಸಿಕ್ಕಿದಾಗಲೆಲ್ಲಾ ಎಲ್ಲರಿಗೂ ಒಳ್ಳೆಯದನ್ನು ಮಾಡೋಣ, ವಿಶೇಷವಾಗಿ † ಎಫೆ 2:19, ಇಬ್ರಿ. 3:6 ಒಂದೇ ಮನೆಯವರಂತಿರುವ ಕ್ರೈಸ್ತ ವಿಶ್ವಾಸಿಗಳಿಗೆ ಮಾಡೋಣ.
ಗಲಾತ್ಯದವರಿಗೆ 6 : 11 (IRVKN)
ಕಡೆ ಎಚ್ಚರಿಕೆಗಳು ಮತ್ತು ವಂದನೆಗಳು ಇಗೋ ನೋಡಿರಿ, ‡ 1 ಕೊರಿ 16:21 ಸ್ವಂತ ಕೈಯಿಂದ ಎಂಥಾ ದೊಡ್ಡ ಅಕ್ಷರಗಳಲ್ಲಿ ನಿಮಗೆ ಬರೆಯುತ್ತಾ ಇದ್ದೇನೆ.
ಗಲಾತ್ಯದವರಿಗೆ 6 : 12 (IRVKN)
ದೈಹಿಕವಾಗಿ ಪ್ರಶಂಸೆಯನ್ನು ಹೊಂದಬೇಕೆಂದಿರುವವರು ಸುನ್ನತಿ ಮಾಡಿಸಿಕೊಳ್ಳಿರಿ ಎಂಬುದಾಗಿ ನಿಮ್ಮನ್ನು ಒತ್ತಾಯಿಸುತ್ತಾರೆ. § ಗಲಾ. 5:11 ಏಕೆಂದರೆ ಕ್ರಿಸ್ತನ ಶಿಲುಬೆಯ ದೆಸೆಯಿಂದ ತಮಗೆ ಹಿಂಸೆಯಾಗಬಾರದೆಂಬುದೇ ಅವರ ಉದ್ದೇಶ.
ಗಲಾತ್ಯದವರಿಗೆ 6 : 13 (IRVKN)
ಸುನ್ನತಿ ಮಾಡಿಸಿಕೊಂಡವರೇ ಧರ್ಮಶಾಸ್ತ್ರವನ್ನು ಕೈಕೊಂಡು ನಡೆಯುತ್ತಿಲ್ಲವಲ್ಲಾ. ಅವರು ನಿಮ್ಮ ಶರೀರದ ವಿಷಯದಲ್ಲಿ ಹೆಚ್ಚಳಪಡುವುದಕ್ಕಾಗಿ ನಿಮಗೆ ಸುನ್ನತಿಯಾಗಬೇಕೆಂದು ಅಪೇಕ್ಷಿಸುತ್ತಾರೆ.
ಗಲಾತ್ಯದವರಿಗೆ 6 : 14 (IRVKN)
* 1 ಕೊರಿ 2:2, ಫಿಲಿ. 3:3, 7-8 ನನಗಾದರೋ ನಮ್ಮ ಕರ್ತನಾದ ಯೇಸು ಕ್ರಿಸ್ತನ ಶಿಲುಬೆಯ ವಿಷಯದಲ್ಲಿಯೇ ಹೊರತು ಬೇರೆ ಯಾವ ವಿಷಯದಲ್ಲಿಯೂ ಹೆಚ್ಚಳಪಡುವುದು ಬೇಕಾಗಿಲ್ಲ. ಆತನ ಮೂಲಕ † ರೋಮಾ. 6:6 ನಾನು ಲೋಕಕ್ಕೂ, ಲೋಕವು ನನಗಾಗಿಯೂ ಶಿಲುಬೆಗೆ ಹಾಕಿಕೊಂಡು ಸತ್ತಿತು.
ಗಲಾತ್ಯದವರಿಗೆ 6 : 15 (IRVKN)
‡ ರೋಮಾ. 2:28, ಗಲಾ. 5:6 ಸುನ್ನತಿ ಮಾಡಿಸಿಕೊಳ್ಳುವುದೋ ಅಥವಾ ಮಾಡಿಸಿಕೊಳ್ಳದಿರುವುದೋ ಏನು ಅಲ್ಲ, ಆದರೆ § ಯೋಹಾ 3:5-7, ರೋಮಾ. 6:4, 2 ಕೊರಿ 5:17 ಹೊಸ ಸೃಷ್ಟಿಯಾಗುವುದೇ ಪ್ರಮುಖವಾದುದು.
ಗಲಾತ್ಯದವರಿಗೆ 6 : 16 (IRVKN)
ಈ ನಿಯಮಗಳನ್ನು ಸರಿಯಾಗಿ ನಡೆಯುವವರೆಲ್ಲರಿಗೂ ಮತ್ತು ದೇವರ * ಗಲಾ. 3:7-9,29; ರೋಮಾ. 2:29, 4:12, 9:6-8 ಇಸ್ರಾಯೇಲ್ಯರಿಗೆ ಶಾಂತಿಯೂ, ಕರುಣೆಯೂ ಉಂಟಾಗಲಿ.
ಗಲಾತ್ಯದವರಿಗೆ 6 : 17 (IRVKN)
ಇನ್ನು ಮೇಲೆ ಯಾರೂ ನನಗೆ ತೊಂದರೆಪಡಿಸಬಾರದು, † ಯೆಶಾ 44:5, ಯೆಹೆ. 9:4, ಪ್ರಕ 13:16 ನನ್ನ ದೇಹದಲ್ಲಿ ಯೇಸುಕ್ರಿಸ್ತನ ಗುರುತುಗಳನ್ನು ಮುದ್ರಿಸಿಕೊಂಡಿದ್ದೇನೆ.
ಗಲಾತ್ಯದವರಿಗೆ 6 : 18 (IRVKN)
ಸಹೋದರರೇ, ‡ ಫಿಲೆ. 25, ರೋಮಾ. 16:20 ನಮ್ಮ ಕರ್ತನಾದ ಯೇಸು ಕ್ರಿಸ್ತನ ಕೃಪೆಯು § 2 ತಿಮೊ. 4:22 ನಿಮ್ಮ ಆತ್ಮದೊಂದಿಗಿರಲಿ. ಆಮೆನ್.
❮
❯
1
2
3
4
5
6
7
8
9
10
11
12
13
14
15
16
17
18