ಗಲಾತ್ಯದವರಿಗೆ 5 : 1 (IRVKN)
ಗಲಾತ್ಯದವರಿಗೆ 5 : 2 (IRVKN)
ಕ್ರಿಸ್ತನು ನಮ್ಮನ್ನು * ಗಲಾ. 2:4; 5:13 ಸ್ವತಂತ್ರರಾಗಿರಿಸಬೇಕೆಂದೇ ನಮಗೆ ಬಿಡುಗಡೆ ಮಾಡಿದನು. ಅದರಲ್ಲಿ ಸ್ಥಿರವಾಗಿ ನಿಲ್ಲಿರಿ, † ಅ. ಕೃ. 15:10 ದಾಸತ್ವದ ನೊಗದಲ್ಲಿ ತಿರುಗಿ ಸಿಕ್ಕಿಕೊಳ್ಳಬೇಡಿರಿ. ನೋಡಿರಿ, ಪೌಲನೆಂಬ ನಾನು ನಿಮಗೆ ಹೇಳುತ್ತೇನೆ, ‡ ಅ. ಕೃ. 15:1; 1 ಕೊರಿ 7:18; ಗಲಾ. 5:3-11 ನೀವು ಸುನ್ನತಿಮಾಡಿಸಿಕೊಂಡರೆ ಕ್ರಿಸ್ತನಿಂದ ನಿಮಗೆ ಏನೂ ಪ್ರಯೋಜನವಿಲ್ಲ.
ಗಲಾತ್ಯದವರಿಗೆ 5 : 3 (IRVKN)
§ ರೋಮಾ. 2:25 ಸುನ್ನತಿ ಮಾಡಿಸಿಕೊಳ್ಳುವ ಪ್ರತಿಯೊಬ್ಬನಿಗೆ, ನೀನು ಧರ್ಮಶಾಸ್ತ್ರದಲ್ಲಿ ಹೇಳಿರುವುದನ್ನೆಲ್ಲಾ ಮಾಡುವ ಹಂಗಿನಲ್ಲಿದ್ದೀ ಎಂದು ತಿರುಗಿ ಪ್ರಮಾಣವಾಗಿ ಹೇಳುತ್ತೇನೆ.
ಗಲಾತ್ಯದವರಿಗೆ 5 : 4 (IRVKN)
* ಗಲಾ. 2:21; 3:10; ರೋಮಾ. 9:31,32 ನಿಮ್ಮಲ್ಲಿ ಯಾರಾರು ಧರ್ಮಶಾಸ್ತ್ರದಿಂದ ನೀತಿವಂತರಾಗಬೇಕೆಂದು ಬಯಸಿದ್ದೀರೋ ಅವರು ಕ್ರಿಸ್ತನಿಂದ ಅಗಲಿಹೋದವರಾಗಿದ್ದೀರಿ. ಕೃಪೆಯಿಂದ ಬಿದ್ದಹೋದವರಾಗಿದ್ದೀರಿ.
ಗಲಾತ್ಯದವರಿಗೆ 5 : 5 (IRVKN)
ನಾವಾದರೋ ದೇವರಾತ್ಮನ ಮೂಲಕ ನಂಬಿಕೆಯಿಂದ ನೀತಿವಂತರಾಗುತ್ತೇವೆಂಬುವ † ರೋಮಾ. 8:23,25 ನಿರೀಕ್ಷೆ ಸಫಲವಾಗುವುದೆಂದು ಎದುರುನೋಡುವವರಾಗಿದ್ದೇವೆ.
ಗಲಾತ್ಯದವರಿಗೆ 5 : 6 (IRVKN)
ಕ್ರಿಸ್ತ ಯೇಸುವಿನಲ್ಲಿರುವವರಿಗೆ ‡ ಗಲಾ. 6:15; 1 ಕೊರಿ 7:19; ಕೊಲೊ 3:11; ಗಲಾ. 3:28 ಸುನ್ನತಿಯಾದರೂ ಆಗದಿದ್ದರೂ ಪ್ರಯೋಜನವಿಲ್ಲ, ಆದರೆ § ಎಫೆ 6:23; 1 ಥೆಸ. 1:3; ಯಾಕೋಬ 2:18,20,22 ಅವರಲ್ಲಿ ಪ್ರೀತಿಯಿಂದ ಹೊರಹೊಮ್ಮುವ ನಂಬಿಕೆಯೇ ಪ್ರಯೋಜನವಾಗಿದೆ.
ಗಲಾತ್ಯದವರಿಗೆ 5 : 7 (IRVKN)
ಚೆನ್ನಾಗಿ ಓಡುತ್ತಾ ಇದ್ದೀರಿ. ಆದರೆ ನೀವು ಸತ್ಯವನ್ನು ಅನುಸರಿಸದಂತೆ ನಿಮ್ಮನ್ನು ತಡೆದವರು ಯಾರು?
ಗಲಾತ್ಯದವರಿಗೆ 5 : 8 (IRVKN)
ಈ ಮನವೊಲಿಕೆಯು ನಿಮ್ಮನ್ನು ಕರೆದಾತನಿಂದ ಹುಟ್ಟಿದ್ದಲ್ಲ.
ಗಲಾತ್ಯದವರಿಗೆ 5 : 9 (IRVKN)
* 1 ಕೊರಿ 5:6 ಸ್ವಲ್ಪ ಹುಳಿಯಿಂದ ಕಣಕವೆಲ್ಲಾ ಹುಳಿಯಾಗುವುದು.
ಗಲಾತ್ಯದವರಿಗೆ 5 : 10 (IRVKN)
ನಿಮ್ಮಲ್ಲಿ ಭಿನ್ನಾಭಿಪ್ರಾಯಗಳು ಉಂಟಾಗುವುದಿಲ್ಲವೆಂದು ಕರ್ತನಲ್ಲಿ ನಿಮ್ಮನ್ನು ಕುರಿತಾಗಿ ನನಗೆ ಭರವಸೆ ಉಂಟು. † ಗಲಾ. 1:; 5:12 ನಿಮ್ಮಲ್ಲಿ ಬೇಧವನ್ನು ಹುಟ್ಟಿಸುವವನು ಯಾವನಾದರೂ ಸರಿಯೇ, ಅವನು ದಂಡನೆಯನ್ನು ಅನುಭವಿಸುವನು.
ಗಲಾತ್ಯದವರಿಗೆ 5 : 11 (IRVKN)
ಸಹೋದರರೇ, ನಾನಾದರೋ ಸುನ್ನತಿಯಾಗಬೇಕೆಂದು ಇನ್ನೂ ಸಾರುವವನಾಗಿದ್ದರೆ ‡ ಗಲಾ. 4:29; 6:12 ನನಗೆ ಹಿಂಸೆಯಾಗುವುದಾದರೂ ಯಾಕೆ? § 1 ಕೊರಿ 1:23 ಹಾಗಿದ್ದ ಪಕ್ಷದಲ್ಲಿ ಶಿಲುಬೆಯ ದೆಸೆಯಿಂದ ಉಂಟಾಗುವ ತೊಂದರೆಗಳು ನೀಗಿ ಹೋಯಿತಲ್ಲಾ?
ಗಲಾತ್ಯದವರಿಗೆ 5 : 12 (IRVKN)
* ಗಲಾ. 5:10, 2:4 ನಿಮ್ಮನ್ನು ಕಳವಳಪಡಿಸುವವರು ತಮ್ಮನೇ ತಾವು † ಕಸಿ ಮಾಡುವುದು ಅಂಗಚ್ಛೇದನೆಯನ್ನಾದರೂ ಮಾಡಿಕೊಂಡರೆ ಚೆನ್ನಾಗಿತ್ತು.
ಗಲಾತ್ಯದವರಿಗೆ 5 : 13 (IRVKN)
ಸಹೋದರರೇ, ‡ ಗಲಾ. 5:1 ನೀವು ಸ್ವತಂತ್ರರಾಗಿರಬೇಕೆಂದು ದೇವರು ನಿಮ್ಮನ್ನು ಕರೆದನು. ಆದರೆ § 1 ಪೇತ್ರ. 2:1; ಯೂದ. 4 ನಿಮಗಿರುವ ಸ್ವಾತಂತ್ರ್ಯವನ್ನು ಶರೀರಾಧೀನ ಸ್ವಭಾವಕ್ಕೆ ಆಸ್ಪದವಾಗಿ ಬಳಸದೆ, * 1 ಕೊರಿ 9:19 ಪ್ರೀತಿಯಿಂದ ಒಬ್ಬರಿಗೊಬ್ಬರು ಸೇವೆ ಮಾಡಿರಿ.
ಗಲಾತ್ಯದವರಿಗೆ 5 : 14 (IRVKN)
“ನಿನ್ನ ನೆರೆಯವನನ್ನು ನಿನ್ನಂತೆಯೇ ಪ್ರೀತಿಸು” ಎಂಬ ಒಂದೇ ಮಾತಿನಲ್ಲಿ ಧರ್ಮಶಾಸ್ತ್ರವೆಲ್ಲಾ ಅಡಗಿದೆ.
ಗಲಾತ್ಯದವರಿಗೆ 5 : 15 (IRVKN)
ಆದರೆ ನೀವು ಒಬ್ಬರನ್ನೊಬ್ಬರು ಕಚ್ಚಾಡಿ, ಹರಕೊಂಡು, ತಿನ್ನುವವರಾದರೆ ಒಬ್ಬರಿಂದೊಬ್ಬರು ನಾಶವಾದೀರಿ, ಎಚ್ಚರಿಕೆ.
ಗಲಾತ್ಯದವರಿಗೆ 5 : 16 (IRVKN)
ಆತ್ಮನ ಫಲವು ಮತ್ತು ದೇಹದ ದುಷ್ಫಲಗಳು ನಾನು ಹೇಳುವುದೇನಂದರೆ † ಗಲಾ. 5:24,25; ರೋಮಾ. 8:4 ಪವಿತ್ರಾತ್ಮನನ್ನು ಅನುಸರಿಸಿ ನಡೆದುಕೊಳ್ಳಿರಿ, ಆಗ ನೀವು ‡ ಎಫೆ 2:3 ಶರೀರಭಾವದ ಅಭಿಲಾಷೆಗಳನ್ನು ಎಷ್ಟು ಮಾತ್ರಕ್ಕೂ ನೆರವೇರಿಸುವುದಿಲ್ಲ.
ಗಲಾತ್ಯದವರಿಗೆ 5 : 17 (IRVKN)
ಏಕೆಂದರೆ ಶರೀರಾಭಿಲಾಷೆಯೂ ಆತ್ಮನಿಗೆ ವಿರುದ್ಧವಾಗಿದೆ, ಆತ್ಮನ ಅಭಿಲಾಷೆಯು ಶರೀರಭಾವಕ್ಕೆ ವಿರುದ್ಧವಾಗಿದೆ. § ರೋಮಾ. 7:15, 18-20 ನೀವು ಮಾಡಲಿಚ್ಚಿಸುವುದನ್ನು ಮಾಡದಂತೆ ಇವು ಒಂದಕ್ಕೊಂದು ಹೋರಾಡುತ್ತವೆ.
ಗಲಾತ್ಯದವರಿಗೆ 5 : 18 (IRVKN)
ಆದರೆ * ರೋಮಾ. 8:14 ನೀವು ಆತ್ಮನಿಂದ ನಡಿಸಿಕೊಳ್ಳುವವರಾದರೆ † ರೋಮಾ. 7:4 ಧರ್ಮಶಾಸ್ತ್ರಕ್ಕೆ ಅಧೀನರಲ್ಲ.
ಗಲಾತ್ಯದವರಿಗೆ 5 : 19 (IRVKN)
ಶರೀರಭಾವದ ಸ್ವಭಾವಗಳು ಪ್ರತ್ಯಕ್ಷವಾಗಿಯೇ ಇವೆ, ಅದು ಯಾವುವೆಂದರೆ, ಜಾರತ್ವ, ಬಂಡುತನ, ನಾಚಿಕೆಗೇಡಿತನ,
ಗಲಾತ್ಯದವರಿಗೆ 5 : 20 (IRVKN)
ವಿಗ್ರಹಾರಾಧನೆ, ಮಾಟ, ಹಗೆತನ, ಜಗಳ, ಹೊಟ್ಟೆಕಿಚ್ಚು, ಸಿಟ್ಟು, ಪಕ್ಷಪಾತ, ‡ 1 ಕೊರಿ 11:19 ಭಿನ್ನಮತ,
ಗಲಾತ್ಯದವರಿಗೆ 5 : 21 (IRVKN)
ಮತ್ಸರ, ಕುಡುಕುತನ, ಗಲಭೆ, ಢಂಭಾಚಾರ ಇಂಥವುಗಳೇ. § ಕೊಲೊ 3:6; 1 ಕೊರಿ 6:9 ಇಂಥ ಕಾರ್ಯಗಳನ್ನು ನಡಿಸುವವರು ದೇವರ ರಾಜ್ಯಕ್ಕೆ ಬಾಧ್ಯಸ್ಥರಾಗುವುದಿಲ್ಲವೆಂದು ನಾನು ಈ ಮೊದಲು ಹೇಳಿದಂತೆಯೇ ಈಗಲೂ ನಿಮ್ಮನ್ನು ಎಚ್ಚರಿಸುತ್ತೇನೆ.
ಗಲಾತ್ಯದವರಿಗೆ 5 : 22 (IRVKN)
ಆದರೆ * ರೋಮಾ. 7:4; 8:5; ಎಫೆ 5:9 ದೇವರಾತ್ಮನಿಂದ ಉಂಟಾಗುವ ಫಲವೇನಂದರೆ, ಪ್ರೀತಿ, ಸಂತೋಷ, ಸಮಾಧಾನ, ದೀರ್ಘಶಾಂತಿ, † 2 ಕೊರಿ 6:6 ದಯೆ, ಪರೋಪಕಾರ, ನಂಬಿಕೆ,
ಗಲಾತ್ಯದವರಿಗೆ 5 : 23 (IRVKN)
ಸಾಧುತ್ವ, ‡ ಅ. ಕೃ. 24:5; 2 ಪೇತ್ರ 1:6 ಶಮೆದಮೆ ಇಂಥವುಗಳೇ. § 1 ತಿಮೊ. 1:9 ಇವುಗಳಿಗೆ ವಿರುದ್ಧವಾಗಿ ಯಾವ ಧರ್ಮಶಾಸ್ತ್ರವೂ ಇಲ್ಲ.
ಗಲಾತ್ಯದವರಿಗೆ 5 : 24 (IRVKN)
ಕ್ರಿಸ್ತ ಯೇಸುವಿನಲ್ಲಿರುವವರು * ಗಲಾ. 5:16; ರೋಮಾ. 6:6 ತಮ್ಮ ಶರೀರಭಾವವನ್ನು ಅದರ ವಿಷಯಾಭಿಲಾಷೆ, ಸ್ವೇಚ್ಛಾಭಿಲಾಷೆಗಳ ಸಹಿತವಾಗಿ ಶಿಲುಬೆಗೆ ಹಾಕಿದವರಾಗಿದ್ದಾರೆ.
ಗಲಾತ್ಯದವರಿಗೆ 5 : 25 (IRVKN)
† ಗಲಾ. 5:16 ನಾವು ಆತ್ಮನಿಂದ ಜೀವಿಸುತ್ತಿರಲಾಗಿ ಆತ್ಮನನ್ನನುಸರಿಸಿ ನಡೆಯೋಣ.
ಗಲಾತ್ಯದವರಿಗೆ 5 : 26 (IRVKN)
‡ ಫಿಲಿ. 2:3 ಅಹಂಕಾರಿಗಳೂ, ಒಬ್ಬರನ್ನೊಬ್ಬರು ಕೆಣಕುವವರೂ, ಒಬ್ಬರ ಮೇಲೊಬ್ಬರು ಮತ್ಸರವುಳ್ಳವರೂ ಆಗದೆ ಇರೋಣ.
❮
❯