ಗಲಾತ್ಯದವರಿಗೆ 4 : 1 (IRVKN)
[PS]ಆದರೆ ನಾನು ಹೇಳುವುದೇನಂದರೆ, ವಾರಸುದಾರನು, ತಾನು ಆಸ್ತಿಗೆಲ್ಲಾ ಒಡೆಯನಾಗಿದ್ದರೂ ಬಾಲಕನಾಗಿರುವ ತನಕ ದಾಸನಂತೆಯೇ ಇರುವನು.
ಗಲಾತ್ಯದವರಿಗೆ 4 : 2 (IRVKN)
ತಂದೆಯು ಗೊತ್ತುಮಾಡಿದ ಸಮಯದವರೆಗೂ ಪಾಲಕರ ಮತ್ತು ಕಾರ್ಯನಿರ್ವಾಹಕರ ಅಧೀನದಲ್ಲಿರುವನು.
ಗಲಾತ್ಯದವರಿಗೆ 4 : 3 (IRVKN)
ಹಾಗೆಯೇ ನಾವು ಸಹ ಬಾಲಕರಾಗಿದ್ದಾಗ [* ಕೊಲೊ 2:8,20 ]ಲೋಕದ ಮೂಲತತ್ವಗಳಿಗೆ ಅಧೀನರಾಗಿದ್ದೆವು.
ಗಲಾತ್ಯದವರಿಗೆ 4 : 4 (IRVKN)
(4-5)ಆದರೆ[† ಮಾರ್ಕ 1:15 ] ಸೂಕ್ತಸಮಯ ಬಂದಾಗ ದೇವರು ತನ್ನ ಮಗನನ್ನು ಕಳುಹಿಸಿಕೊಟ್ಟನು. ಧರ್ಮಶಾಸ್ತ್ರಕ್ಕೆ ಅಧೀನರಾದವರನ್ನು [‡ ಗಲಾ. 3:13 ]ಬಿಡಿಸಬೇಕೆಂತಲೂ, [§ ಗಲಾ. 3:26; ರೋಮಾ. 8:16 ]ಪುತ್ರರ ಬಾಧ್ಯತೆಯ ಪದವಿಯನ್ನು ನಮಗೆ ದೊರಕಿಸಿಕೊಡಬೇಕೆಂತಲೂ ಆತನು [* ಫಿಲಿ. 2:7, ಯೋಹಾ 1:14 ]ಸ್ತ್ರೀಯಲ್ಲಿ ಹುಟ್ಟಿದವನಾಗಿಯೂ, [† ಲೂಕ 2:21-22,27 ]ಧರ್ಮಶಾಸ್ತ್ರಾಧೀನನಾಗಿಯೂ ಬಂದನು.
ಗಲಾತ್ಯದವರಿಗೆ 4 : 5 (IRVKN)
ಗಲಾತ್ಯದವರಿಗೆ 4 : 6 (IRVKN)
ನೀವು ಪುತ್ರರಾಗಿರುವುದರಿಂದ ದೇವರು, “ಅಪ್ಪಾ ತಂದೆಯೇ” ಎಂದು ಕೂಗುವ [‡ ಅ. ಕೃ. 16:7, ರೋಮಾ. 5:5; 8:9,15. 2 ಕೊರಿ 3:17 ]ತನ್ನ ಮಗನ ಆತ್ಮನನ್ನು ನಮ್ಮ ಹೃದಯಗಳಲ್ಲಿ ಕಳುಹಿಸಿಕೊಟ್ಟನು.
ಗಲಾತ್ಯದವರಿಗೆ 4 : 7 (IRVKN)
ಹೀಗಿರುವಲ್ಲಿ ಇನ್ನು ನೀನು ಸೇವಕನಲ್ಲ, ಮಗನಾಗಿದ್ದೀ. ಮಗನೆಂದ ಮೇಲೆ [§ ಗಲಾ. 3:29 ]ದೇವರ ಮೂಲಕ ವಾರಸುದಾರನು ಆಗಿದ್ದೀ. [PE]
ಗಲಾತ್ಯದವರಿಗೆ 4 : 8 (IRVKN)
{#1ಗಲಾತ್ಯದವರ ಕುರಿತು ಪೌಲನ ಕಾಳಜಿ } [PS]ಹಿಂದೆ [* 1 ಕೊರಿ 1:21, 2 ಥೆಸ. 1:8 ]ನೀವು ದೇವರನ್ನು ಅರಿಯದೆ, ಸ್ವಾಭಾವಿಕವಾಗಿ [† ಎಫೆ 2:11-12, 1 ಥೆಸ. 1:9 ]ದೇವರಲ್ಲದವರುಗಳಿಗೆ ದಾಸರಾಗಿದ್ದೀರಿ.
ಗಲಾತ್ಯದವರಿಗೆ 4 : 9 (IRVKN)
ಈಗಲಾದರೋ ನೀವು ದೇವರನ್ನು ತಿಳಿದುಕೊಂಡಿದ್ದೀರಿ, ಅಥವಾ [‡ 1 ಕೊರಿ 8:3 ]ದೇವರು ನಿಮ್ಮನ್ನು ತಿಳಿದುಕೊಂಡಿದ್ದಾನೆ. ಹೀಗಿರಲಾಗಿ ನೀವು ಬಲವಿಲ್ಲದ, [§ ರೋಮಾ. 8:3, ಇಬ್ರಿ. 7:18 ]ಕೆಲಸಕ್ಕೆ ಬಾರದ, ದರಿದ್ರವಾದ ಮೂಲತತ್ವಗಳಿಗೆ [* ಗಲಾ. 3:3 ]ಹಿಂತಿರುಗಿ ಅದಕ್ಕೆ ದಾಸರಾಗುವುದಕ್ಕೆ ಏಕೆ ಬಯಸುತ್ತೀರಿ?
ಗಲಾತ್ಯದವರಿಗೆ 4 : 10 (IRVKN)
[† ರೋಮಾ. 14:5, ಕೊಲೊ 2:16 ]ನೀವು ಆಯಾ ದಿನಗಳನ್ನೂ, ತಿಂಗಳುಗಳನ್ನೂ, ಕಾಲಗಳನ್ನೂ, ಸಂವತ್ಸರಗಳನ್ನೂ ನಿಷ್ಠೆಯಿಂದ ಆಚರಿಸಿದ್ದೀರಿ.
ಗಲಾತ್ಯದವರಿಗೆ 4 : 11 (IRVKN)
[‡ ಗಲಾ. 2:2, 5:2-4, 1 ಥೆಸ. 3:5 ]ನಾನು ನಿಮಗೋಸ್ಕರ ಪ್ರಯಾಸಪಟ್ಟದ್ದು ನಿಷ್ಫಲವಾಯಿತೋ ಏನೋ ಎಂದು ನಿಮ್ಮ ಕುರಿತು ಭಯಪಡುತ್ತೇನೆ. [PE]
ಗಲಾತ್ಯದವರಿಗೆ 4 : 12 (IRVKN)
[PS]ಸಹೋದರರೇ, ನಾನು ನಿಮ್ಮಂತೆ ಆದಹಾಗೆ ನೀವು ನನ್ನಂತೆ ಹಾಗೆ ಆಗಬೇಕೆಂದು ನಿಮ್ಮನ್ನು ಬೇಡಿಕೊಳ್ಳುತ್ತೇನೆ. ನೀವು ನನಗೇನೂ ಅನ್ಯಾಯ ಮಾಡಲಿಲ್ಲ.
ಗಲಾತ್ಯದವರಿಗೆ 4 : 13 (IRVKN)
ನಾನು ದೈಹಿಕವಾಗಿ ಅಸ್ವಸ್ಥನಾಗಿದ್ದುದರಿಂದ ನಿಮ್ಮಲ್ಲಿದ್ದು ಮೊದಲನೆಯ ಬಾರಿಗೆ ನಿಮಗೆ ಸುವಾರ್ತೆ ಸಾರಿದ್ದನ್ನು ನೀವು ಬಲ್ಲಿರಿ.
ಗಲಾತ್ಯದವರಿಗೆ 4 : 14 (IRVKN)
ನನ್ನ ದೇಹಸ್ಥಿತಿಯಿಂದ ನಿಮಗೆ ಸಮಸ್ಯೆಗಳು ಬಂದಾಗ್ಯೂ ಕೂಡ, ನೀವು ನನ್ನನ್ನು ಹೀನೈಸಲಿಲ್ಲ, ತಿರಸ್ಕರಿಸಲಿಲ್ಲ. ನನ್ನನ್ನು [§ 2 ಕೊರಿ 5:20 ]ದೇವದೂತನಂತೆ, [* ಮತ್ತಾ 10:40 ]ಕ್ರಿಸ್ತ ಯೇಸುವಿನಂತೆ ಸೇರಿಸಿಕೊಂಡಿದ್ದೀರಿ.
ಗಲಾತ್ಯದವರಿಗೆ 4 : 15 (IRVKN)
ಆಗ ನಮಗೆ ಶುಭವಾಯಿತೆಂದು ನೀವು ಅಂದುಕೊಂಡಿರಲ್ಲಾ, ಆ ನಿಮ್ಮ ಶುಭವು ಎಲ್ಲಿ ಹೋಯಿತು? ಸಾಧ್ಯವಾಗಿದ್ದರೆ ನಿಮ್ಮ ಕಣ್ಣುಗಳನ್ನಾದರೂ ಕಿತ್ತು ನನಗೆ ಕೊಡುತ್ತಿದ್ದಿರೆಂದು ನಿಮ್ಮನ್ನು ಕುರಿತು ಸಾಕ್ಷಿ ಹೇಳುತ್ತೇನೆ.
ಗಲಾತ್ಯದವರಿಗೆ 4 : 16 (IRVKN)
ಹೀಗಿರಲಾಗಿ ನಾನು ನಿಮಗೆ ಸತ್ಯವನ್ನು ಹೇಳುವುದರಿಂದ ನಿಮಗೆ ಶತ್ರುವಾಗಿದ್ದೇನೋ? [PE]
ಗಲಾತ್ಯದವರಿಗೆ 4 : 17 (IRVKN)
[PS]ಅವರು ನಿಮ್ಮನ್ನು ಮೆಚ್ಚಿಸುವುದಕ್ಕೆ ಆಸಕ್ತಿಯನ್ನು ತೋರಿಸುತ್ತಿರುವುದು ಒಳಿತಾಗಿ ಅಲ್ಲ, ನೀವು ಅವರಿಗೆ ಆಸಕ್ತಿಯನ್ನು ತೋರಿಸಬೇಕೆಂದು ಅವರು ನಿಮ್ಮನ್ನು ನನ್ನಿಂದ ಆಗಲಿಸುವುದಕ್ಕೆ ಬಯಸುತ್ತಿದ್ದಾರೆ.
ಗಲಾತ್ಯದವರಿಗೆ 4 : 18 (IRVKN)
ನಾನು ನಿಮ್ಮ ಸಂಗಡ ಇರುವಾಗ ಮಾತ್ರವಲ್ಲದೆ ಯಾವಾಗಲೂ ಒಳ್ಳೆಯ ವಿಷಯಕ್ಕಾಗಿ ನೀವು ಆಸಕ್ತಿಯನ್ನು ತೋರಿಸುವುದು ಒಳ್ಳೆಯದೇ.
ಗಲಾತ್ಯದವರಿಗೆ 4 : 19 (IRVKN)
[† 1 ಕೊರಿ 4:15, ಫಿಲೆ. 10 ನೋಡಿರಿ ]ನನ್ನ ಪ್ರಿಯರಾದ ಮಕ್ಕಳೇ, [‡ ರೋಮಾ. 8:10, 2 ಕೊರಿ 13:5 ]ಕ್ರಿಸ್ತನ ಸಾರೂಪ್ಯವು ನಿಮ್ಮಲ್ಲಿ ಉಂಟಾಗುವ ತನಕ ನಾನು ನಿಮಗಾಗಿ ಪ್ರಸವವೇದನೆ ಪಡುತ್ತಿರುವೆನು.
ಗಲಾತ್ಯದವರಿಗೆ 4 : 20 (IRVKN)
ನಿಮ್ಮ ವಿಷಯದಲ್ಲಿ ಏನು ಮಾಡಬೇಕೋ ನನಗೆ ತೋಚುತ್ತಿಲ್ಲ. ಬಹುಶಃ ನೇರವಾಗಿ ನಿಮ್ಮ ಬಳಿಗೆ ಬಂದು, ನಿಮ್ಮ ಮಧ್ಯದಲ್ಲೇ ಇದ್ದು ನನ್ನ ಮಾತಿನ ರೀತಿಯನ್ನು ಬದಲಾಯಿಸಿದ್ದರೆ ಚೆನ್ನಾಗಿರುತ್ತಿತ್ತೇನೋ! [PE]
ಗಲಾತ್ಯದವರಿಗೆ 4 : 21 (IRVKN)
{#1ಸಾರಳ ಮತ್ತು ಹಾಗರಳ ದೃಷ್ಟಾಂತ } [PS]ಧರ್ಮಶಾಸ್ತ್ರಕ್ಕೆ ಅಧೀನರಾಗಿರುವುದಕ್ಕೆ ಬಯಸುವವರೇ, ಧರ್ಮಶಾಸ್ತ್ರವು ಏನು ಹೇಳುತ್ತದೆಂದು ನಿಮಗೆ ತಿಳಿದಿಲ್ಲವೋ? ನನಗೆ ತಿಳಿಯಪಡಿಸಿರಿ.
ಗಲಾತ್ಯದವರಿಗೆ 4 : 22 (IRVKN)
ಅದರಲ್ಲಿ ಬರೆದಿರುವುದೇನಂದರೆ, ಅಬ್ರಹಾಮನಿಗೆ ಇಬ್ಬರು ಮಕ್ಕಳಿದ್ದರು. [§ ಆದಿ 16:5,15 ]ಒಬ್ಬನು ದಾಸಿಯಲ್ಲಿ ಹುಟ್ಟಿದವನು, [* ಆದಿ 21:2 ]ಮತ್ತೊಬ್ಬನು ಸ್ವತಂತ್ರಳಾದವಳಲ್ಲಿ ಹುಟ್ಟಿದವನು.
ಗಲಾತ್ಯದವರಿಗೆ 4 : 23 (IRVKN)
[† ರೋಮಾ. 9:7-8 ]ದಾಸಿಯ ಮಗನು ಶರೀರಕ್ಕನುಸಾರವಾಗಿ ಹುಟ್ಟಿದವನು, [‡ ವ. 28, ಆದಿ 17:16-19, 18:10,14, ಇಬ್ರಿ. 11:11 ]ಸ್ವತಂತ್ರಳಾದವಳ ಮಗನಾದರೋ ವಾಗ್ದಾನದ ಮೂಲಕ ಹುಟ್ಟಿದವನು.
ಗಲಾತ್ಯದವರಿಗೆ 4 : 24 (IRVKN)
ಈ ಸಂಗತಿಗಳು ಹೋಲಿಕೆಗಳಾಗಿವೆ. ಹೇಗೆಂದರೆ ಆ ಇಬ್ಬರು ಸ್ತ್ರೀಯರು ಎರಡು ಒಡಂಬಡಿಕೆಗಳೇ, [§ ಧರ್ಮೋ 33:2 ]ಒಂದು ಒಡಂಬಡಿಕೆಯು ಸೀನಾಯಿ ಪರ್ವತದಿಂದ ಉಂಟಾಗಿ ದಾಸತ್ವದಲ್ಲಿರಬೇಕಾದ ಮಕ್ಕಳನ್ನು ಹೆರುವಂಥದು, ಅದೇ ಹಾಗರಳು.
ಗಲಾತ್ಯದವರಿಗೆ 4 : 25 (IRVKN)
ಹಾಗರಳು ಅಂದರೆ ಅರಬಸ್ಥಾನದಲ್ಲಿರುವ ಸೀನಾಯಿ ಪರ್ವತವನ್ನು ಸೂಚಿಸುವಂತಹದ್ದು ಈಗಿನ ಯೆರೂಸಲೇಮಿಗೆ ಎಂಬುವಳಿಗೆ ಹೋಲಿಕೆಯಾಗಿದ್ದಾಳೆ, ಏಕೆಂದರೆ ಆಕೆಯು ತನ್ನ ಮಕ್ಕಳೊಂದಿಗೆ ಈಗ ದಾಸತ್ವದಲ್ಲಿದ್ದಾಳೆ.
ಗಲಾತ್ಯದವರಿಗೆ 4 : 26 (IRVKN)
ಆದರೆ [* ಇಬ್ರಿ. 12:22, ಪ್ರಕ 3:12, 21:2,10 ]ಮೇಲಣ ಯೆರೂಸಲೇಮ್ ಎಂಬವಳು ಸ್ವತಂತ್ರಳು, ಇವಳೇ ನಮಗೆ ತಾಯಿ. [PE]
ಗಲಾತ್ಯದವರಿಗೆ 4 : 27 (IRVKN)
[QS] [† ಯೆಶಾ 54:1 ]“ಹೆರದ ಬಂಜೆಯೇ, ಆನಂದಿಸು. [QE][QS2]ಪ್ರಸವವೇದನೆಯಿಲ್ಲದವಳೇ, ಹರ್ಷೋದ್ಗಾರಮಾಡು, [QE][QS]ಗಂಡನುಳ್ಳವಳಿಗಿಂತ ಗಂಡಬಿಟ್ಟವಳಿಗೆ ಮಕ್ಕಳು ಹೆಚ್ಚು” [QE][MS]ಎಂದು ಬರೆದಿದೆಯಲ್ಲಾ. [ME]
ಗಲಾತ್ಯದವರಿಗೆ 4 : 28 (IRVKN)
[PS]ಸಹೋದರರೇ, [‡ ಗಲಾ. 4:23, ರೋಮಾ. 9:8 ]ನಾವು ಇಸಾಕನಂತೆ ವಾಗ್ದಾನದ ಫಲವಾಗಿ ಹುಟ್ಟಿದ ಮಕ್ಕಳಾಗಿದ್ದೇವೆ.
ಗಲಾತ್ಯದವರಿಗೆ 4 : 29 (IRVKN)
ಆದರೆ ಪೂರ್ವದಲ್ಲಿ ಶಾರೀರಿಕವಾಗಿ ಹುಟ್ಟಿದವನು, ದೇವರಾತ್ಮಬಲದಿಂದ ಹುಟ್ಟಿದವನನ್ನು [§ ಆದಿ 21:9, ಗಲಾ. 5:11 ]ಹಿಂಸೆಪಡಿಸಿದಂತೆಯೇ ಈಗಲೂ ಆಗುತ್ತಿದೆ.
ಗಲಾತ್ಯದವರಿಗೆ 4 : 30 (IRVKN)
ಆದರೆ ದೇವರ ವಾಕ್ಯವು ಏನು ಹೇಳುತ್ತದೆ? [* ಆದಿ 21:10 ]“ದಾಸಿಯನ್ನೂ ಅವಳ ಮಗನನ್ನೂ ಹೊರಗೆ ಹಾಕು. ದಾಸಿಯ ಮಗನು [† ಸ್ವತಂತ್ರಳು ]ಸ್ವತಂತ್ರಳ ಮಗನೊಂದಿಗೆ ಎಷ್ಟು ಮಾತ್ರಕ್ಕೂ ಬಾಧ್ಯಸ್ಥನಾಗಬಾರದು” ಎಂದು ಹೇಳುತ್ತದೆ.
ಗಲಾತ್ಯದವರಿಗೆ 4 : 31 (IRVKN)
ಸಹೋದರರೇ, ನಾವು ದಾಸಿಯ ಮಕ್ಕಳಲ್ಲ, [‡ 1 ಪೇತ್ರ. 3:6 ]ಸ್ವತಂತ್ರಳಾದವಳ ಮಕ್ಕಳೇ ಎಂದು ತಿಳಿದುಕೊಳ್ಳಿರಿ. [PE]

1 2 3 4 5 6 7 8 9 10 11 12 13 14 15 16 17 18 19 20 21 22 23 24 25 26 27 28 29 30 31

BG:

Opacity:

Color:


Size:


Font: