ಯೆಹೆಜ್ಕೇಲನು 34 : 1 (IRVKN)
{ಇಸ್ರಾಯೇಲೆಂಬ ಮಂದೆಯ ಕುರುಬರ ಸ್ವಾರ್ಥತೆ} [PS] ಯೆಹೋವನು ಈ ಮಾತನ್ನು ನನಗೆ ದಯಪಾಲಿಸಿದನು,
ಯೆಹೆಜ್ಕೇಲನು 34 : 2 (IRVKN)
“ನರಪುತ್ರನೇ, ಇಸ್ರಾಯೇಲಿನ ಮಂದೆಯ ಕುರುಬರಿಗೆ ಈ ಪ್ರವಾದನೆಯನ್ನು ನುಡಿ, ಪ್ರವಾದಿಸಿ ಹೀಗೆ ನುಡಿ, ಕರ್ತನಾದ ಯೆಹೋವನು ಇಂತೆನ್ನುತ್ತಾನೆ, ‘ಅಯ್ಯೋ, ಸ್ವಂತ ಹೊಟ್ಟೆಯನ್ನು ತುಂಬಿಸಿಕೊಳ್ಳುವ ಇಸ್ರಾಯೇಲಿನ ಕುರುಬರ ಗತಿಯನ್ನು ಏನು ಹೇಳಲಿ! ಕುರಿಗಳನ್ನು ಮೇಯಿಸುವುದು ಕುರುಬರ ಧರ್ಮವಲ್ಲವೋ?
ಯೆಹೆಜ್ಕೇಲನು 34 : 3 (IRVKN)
ನೀವು ಕೊಬ್ಬಿನ ಮಾಂಸವನ್ನು ತಿನ್ನುತ್ತೀರಿ, ಉಣ್ಣೆಯ ಬಟ್ಟೆಯನ್ನು ಹಾಕುತ್ತೀರಿ, ಕೊಬ್ಬಿದ ಕುರಿಗಳನ್ನು ಕೊಲ್ಲುತ್ತೀರಿ; ಆದರೆ ಕುರಿಗಳನ್ನು ಮೇಯಿಸುವುದಿಲ್ಲ.
ಯೆಹೆಜ್ಕೇಲನು 34 : 4 (IRVKN)
ನೀವು ದುರ್ಬಲವಾದವುಗಳನ್ನು ಬಲಗೊಳಿಸುವುದಿಲ್ಲ, ರೋಗದವುಗಳನ್ನು ಸ್ವಸ್ಥಮಾಡುವುದಿಲ್ಲ, ಮುರಿದ ಅಂಗಗಳನ್ನು ಕಟ್ಟುವುದಿಲ್ಲ, ಕಳೆದು ಹೋದವುಗಳನ್ನು ಹುಡುಕುವುದಿಲ್ಲ, ಓಡಿಸಿದನ್ನು ನೀವು ಹಿಂದಕ್ಕೆ ತರುವುದಿಲ್ಲ, ಆದರೆ ಬಲಾತ್ಕಾರದಿಂದ ಮತ್ತು ಕ್ರೂರತನದಿಂದ ಅವುಗಳ ಮೇಲೆ ದೊರೆತನ ಮಾಡುತ್ತೀರಿ.
ಯೆಹೆಜ್ಕೇಲನು 34 : 5 (IRVKN)
ಕುರುಬರು ಇಲ್ಲವಾದುದರಿಂದ ಅವು ಚದುರಿ ಹೋದವು; ಚದುರಿ ಹೋಗಿ, ಕಾಡಿನ ಸಕಲ ಮೃಗಗಳಿಗೆ ತುತ್ತಾದವು.
ಯೆಹೆಜ್ಕೇಲನು 34 : 6 (IRVKN)
ನನ್ನ ಕುರಿಗಳು ಪರ್ವತಗಳ ಮೇಲೆಯೂ, ಎತ್ತರವಾದ ಪ್ರತಿಯೊಂದು ಬೆಟ್ಟದ ಮೇಲೆಯೂ ಅಲೆದಾಡುತ್ತಿವೆ; ಹೌದು, ನನ್ನ ಮಂದೆಯು ಭೂಮಂಡಲದಲ್ಲೆಲ್ಲಾ ಚದುರಿಹೋಗಿದೆ; ಯಾರೂ ಅವುಗಳ ಹಿಂದೆ ಹೋಗಿ ಹುಡುಕಲಿಲ್ಲ. [PE][PS]
ಯೆಹೆಜ್ಕೇಲನು 34 : 7 (IRVKN)
“ ‘ಆದುದರಿಂದ ಕುರುಬರೇ, ಯೆಹೋವನ ಮಾತನ್ನು ಕೇಳಿರಿ,
ಯೆಹೆಜ್ಕೇಲನು 34 : 8 (IRVKN)
ಕರ್ತನಾದ ಯೆಹೋವನು ಇಂತೆನ್ನುತ್ತಾನೆ “ಅಯ್ಯೋ, ನನ್ನ ಮಂದೆಯು ಕೊಳ್ಳೆಯಾದವು, ಕಾಡಿನ ಸಕಲ ಮೃಗಗಳಿಗೆ ತುತ್ತಾದವು, ಕುರುಬನಿಲ್ಲದೆ ಬಯಲಿನ ಮೃಗಗಳಿಗೆಲ್ಲಾ ಆಹಾರವಾಯಿತು, ನನ್ನ ಕುರುಬರು ನನ್ನ ಕುರಿಗಳನ್ನು ಹುಡುಕಲಿಲ್ಲ, ಅವರು ಸ್ವಂತ ಹೊಟ್ಟೆಯನ್ನು ತುಂಬಿಸಿಕೊಂಡರೇ ಹೊರತು ನನ್ನ ಕುರಿಗಳ ಹೊಟ್ಟೆಯನ್ನು ನೋಡಲೇ ಇಲ್ಲ.” [PE][PS]
ಯೆಹೆಜ್ಕೇಲನು 34 : 9 (IRVKN)
“ ‘ಆದಕಾರಣ, ಕುರುಬರೇ, ಯೆಹೋವನ ವಾಕ್ಯವನ್ನು ಕೇಳಿರಿ,
ಯೆಹೆಜ್ಕೇಲನು 34 : 10 (IRVKN)
ಕರ್ತನಾದ ಯೆಹೋವನು ಇಂತೆನ್ನುತ್ತಾನೆ, “ಆಹಾ, ನನ್ನ ಜೀವದಾಣೆ, ನಾನು ಕುರುಬರಿಗೆ ವಿರುದ್ಧವಾಗಿದ್ದೇನೆ; ಅವರು ನನ್ನ ಕುರಿಗಳ ಲೆಕ್ಕವನ್ನು ನನಗೆ ಒಪ್ಪಿಸಬೇಕು; ನನ್ನ ಕುರಿಗಳನ್ನು ಮೇಯಿಸುವ ಕೆಲಸದಿಂದ ಅವರನ್ನು ತೆಗೆದುಬಿಡುವೆನು; ಆ ಕುರುಬರು ಇನ್ನು ಸ್ವಂತ ಹೊಟ್ಟೆಯನ್ನು ತುಂಬಿಸಿಕೊಳ್ಳುವುದಿಲ್ಲ; ನನ್ನ ಕುರಿಗಳು ಆಹಾರವಾಗಿ, ಅವರ ಬಾಯಿಗೆ ಬೀಳದಂತೆ ಅವುಗಳನ್ನು ರಕ್ಷಿಸುವೆನು.” [PS]
ಯೆಹೆಜ್ಕೇಲನು 34 : 11 (IRVKN)
{ಯೆಹೋವನೇ ಒಳ್ಳೆಯ ಕುರುಬನು} [PS] “ ‘ಕರ್ತನಾದ ಯೆಹೋವನು ಇಂತೆನ್ನುತ್ತಾನೆ, “ಆಹಾ, ನಾನೇ ನನ್ನ ಕುರಿಗಳನ್ನು ಹಿಂಬಾಲಿಸಿ ಹುಡುಕುವೆನು.
ಯೆಹೆಜ್ಕೇಲನು 34 : 12 (IRVKN)
ಮಂದೆಯ ಕುರುಬನು ಸುತ್ತುಮುತ್ತಲು ಚದುರಿ ಹೋದ ತನ್ನ ಕುರಿಗಳನ್ನು ಹುಡುಕುವ ಹಾಗೆ, ನಾನು ನನ್ನ ಕುರಿಗಳನ್ನು ಹುಡುಕುವೆನು; ಕಾರ್ಮುಗಿಲಿನ ದುರ್ದಿನದಲ್ಲಿ ಚದುರಿಹೋದ ಎಲ್ಲಾ ಸ್ಥಳಗಳಿಂದ ಅವುಗಳನ್ನು ರಕ್ಷಿಸುವೆನು. [PE][PS]
ಯೆಹೆಜ್ಕೇಲನು 34 : 13 (IRVKN)
“ ‘ “ಜನಾಂಗಗಳ ವಶದಿಂದ ಅವುಗಳನ್ನು ತಪ್ಪಿಸಿ ದೇಶಗಳಿಂದ ಒಟ್ಟುಗೂಡಿಸಿ, ಸ್ವದೇಶಕ್ಕೆ ಬರಮಾಡಿ, ಇಸ್ರಾಯೇಲಿನ ಪರ್ವತಗಳ ಮೇಲೆಯೂ, ಹಳ್ಳಗಳ ಬಳಿಯಲ್ಲಿಯೂ, ದೇಶದ ಎಲ್ಲಾ ಪ್ರದೇಶಗಳಲ್ಲಿಯೂ ಮೇಯಿಸುವೆನು.
ಯೆಹೆಜ್ಕೇಲನು 34 : 14 (IRVKN)
ಅವುಗಳನ್ನು ಒಳ್ಳೆಯ ಮೇವಿನಿಂದ ಮೇಯಿಸುವೆನು; ಅವುಗಳ ಹುಲ್ಲುಗಾವಲು ಇಸ್ರಾಯೇಲಿನ ಎತ್ತರವಾದ ಬೆಟ್ಟಗಳಲ್ಲಿರುವುದು; ಅವು ಒಳ್ಳೆಯ ಮಂದೆಯಲ್ಲಿ ಮಲಗಿ; ಇಸ್ರಾಯೇಲಿನ ಪರ್ವತಗಳಲ್ಲಿ ಪುಷ್ಟಿಯುಳ್ಳ ಮೇವನ್ನು ಮೇಯುವವು.
ಯೆಹೆಜ್ಕೇಲನು 34 : 15 (IRVKN)
ನಾನೇ ನನ್ನ ಕುರಿಗಳನ್ನು ಮೇಯಿಸಿ, ಹಾಯಾಗಿ ಮಲಗುವಂತೆ ಮಾಡುವೆನು” ಇದು ಕರ್ತನಾದ ಯೆಹೋವನ ನುಡಿ.
ಯೆಹೆಜ್ಕೇಲನು 34 : 16 (IRVKN)
“ತಪ್ಪಿಸಿಕೊಂಡದ್ದನ್ನು ಹುಡುಕುವೆನು, ಓಡಿಸಿದ್ದನ್ನು ಮಂದೆಗೆ ಸೇರಿಸುವೆನು, ದುರ್ಬಲವಾದದ್ದನ್ನು ಬಲಗೊಳಿಸುವೆನು, ಮುರಿದ ಅಂಗವನ್ನು ಕಟ್ಟುವೆನು; ಬಲಿತ ಕೊಬ್ಬಿದ ಕುರಿಗಳನ್ನು [* ಅಥವಾ ಸಂರಕ್ಷಿಸುವೆನು.] ಸಂಹರಿಸುವೆನು; ನಾನೇ ಅವುಗಳಿಗೆ ನ್ಯಾಯದಂಡನೆ ಎಂಬ ಮೇವನ್ನು ತಿನ್ನಿಸುವೆನು.” [PS]
ಯೆಹೆಜ್ಕೇಲನು 34 : 17 (IRVKN)
{ದುರ್ಬಲರಿಗೆ ಪ್ರಬಲರ ಹಿಂಸೆ} [PS] “ ‘ಕರ್ತನಾದ ಯೆಹೋವನು ಇಂತೆನ್ನುತ್ತಾನೆ, “ನನ್ನ ಹಿಂಡೇ, ಇಗೋ, ನಾನು ನಿಮ್ಮಲ್ಲಿನ ಕುರಿಮೇಕೆಗಳಿಗೂ, ಟಗರುಹೋತಗಳಿಗೂ ಮಧ್ಯವರ್ತಿಯಾಗಿ ನ್ಯಾಯ ತೀರಿಸುವೆನು.
ಯೆಹೆಜ್ಕೇಲನು 34 : 18 (IRVKN)
(ಟಗರುಹೋತಗಳೇ,) ಒಳ್ಳೆಯ ಮೇವನ್ನು ನೀವು ಮೇದುಬಿಟ್ಟು ಉಳಿದ ಮೇವನ್ನು ತುಳಿದು ಕಾಲಕಸ ಮಾಡಿದ್ದು ಅಲ್ಪಕಾರ್ಯವೋ? ತಿಳಿನೀರನ್ನು ಕುಡಿದುಬಿಟ್ಟು, ಉಳಿದದ್ದನ್ನು ಕಾಲಿನಿಂದ ಕಲಕಿ ಹೊಲಸು ಮಾಡಿದ್ದು ಸಣ್ಣ ಕೆಲಸವೋ?
ಯೆಹೆಜ್ಕೇಲನು 34 : 19 (IRVKN)
ನೀವು ತುಳಿದು ಕಾಲಕಸ ಮಾಡಿದ್ದನ್ನು ನನ್ನ ಕುರಿಗಳು ಮೇಯಬೇಕಾಯಿತು; ನೀವು ಕಾಲಿನಿಂದ ಕಲಕಿ ಹೊಲಸು ಮಾಡಿದ್ದನ್ನು ಅವು ಕುಡಿಯಬೇಕಾಯಿತು.” [PE][PS]
ಯೆಹೆಜ್ಕೇಲನು 34 : 20 (IRVKN)
“ ‘ಹೀಗಿರಲು ಕರ್ತನಾದ ಯೆಹೋವನು ಇಂತೆನ್ನುತ್ತಾನೆ, “ಇಗೋ, ನಾನೇ ಕೊಬ್ಬಿದ ಟಗರುಹೋತಗಳಿಗೂ, ಬಡ ಕುರಿಮೇಕೆಗಳಿಗೂ ನ್ಯಾಯತೀರಿಸುತ್ತೇನೆ.
ಯೆಹೆಜ್ಕೇಲನು 34 : 21 (IRVKN)
ಏಕೆಂದರೆ (ಟಗರುಹೋತಗಳೇ,) ನೀವು ಕುರಿಮೇಕೆಗಳನ್ನು ಪಕ್ಕೆಯಿಂದಲೂ, ಹೆಗಲಿನಿಂದಲೂ ನೂಕುತ್ತಾ, ದುರ್ಬಲವಾದವುಗಳನ್ನು ಕೊಂಬುಗಳಿಂದ ಹಾಯುತ್ತಾ, ನನ್ನ ಹಿಂಡನ್ನು ಚದುರಿಸಿಬಿಟ್ಟಿರಿ.
ಯೆಹೆಜ್ಕೇಲನು 34 : 22 (IRVKN)
ಆದಕಾರಣ ನನ್ನ ಹಿಂಡು ಇನ್ನೆಂದಿಗೂ ಕೊಳ್ಳೆಯಾಗದಂತೆ ನಾನು ಅದನ್ನು ರಕ್ಷಿಸಿ, ಟಗರುಹೋತಗಳಿಗೂ, ಕುರಿಮೇಕೆಗಳಿಗೂ ನ್ಯಾಯತೀರಿಸುವೆನು.” [PS]
ಯೆಹೆಜ್ಕೇಲನು 34 : 23 (IRVKN)
{ದೇವರ ಕೃಪಾಪೂರ್ಣವಾದ ಒಡಂಬಡಿಕೆ} [PS] “ ‘ನನ್ನ ಹಿಂಡನ್ನು ಕಾಯಲಿಕ್ಕೆ ಒಬ್ಬನೇ ಕುರುಬನನ್ನು ನೇಮಿಸುವೆನು; ನನ್ನ ಸೇವಕನಾದ ದಾವೀದನೆಂಬ ಆ ಕುರುಬನು ಅದನ್ನು ಮೇಯಿಸುವನು; ಹೌದು, ಅದರ ಕುರುಬನಾಗಿ ಅದನ್ನು ಮೇಯಿಸುತ್ತಾ ಬರುವನು.
ಯೆಹೆಜ್ಕೇಲನು 34 : 24 (IRVKN)
ಯೆಹೋವನಾದ ನಾನು ನನ್ನ ಜನರ ದೇವರಾಗಿರುವೆನು; ನನ್ನ ಸೇವಕನಾದ ದಾವೀದನು ಅವರನ್ನಾಳುವ ಅರಸನಾಗಿರುವನು; ಯೆಹೋವನಾದ ನಾನೇ ಇದನ್ನು ನುಡಿದಿದ್ದೇನೆ. [PE][PS]
ಯೆಹೆಜ್ಕೇಲನು 34 : 25 (IRVKN)
“ ‘ನಾನು ಅವರೊಂದಿಗೆ ಸಮಾಧಾನದ ಒಡಂಬಡಿಕೆಯನ್ನು ಮಾಡಿಕೊಳ್ಳುವೆನು; ದುಷ್ಟಮೃಗಗಳು ದೇಶದಲ್ಲಿ ಇನ್ನಿರದಂತೆ ಮಾಡುವೆನು; ನನ್ನ ಜನರು ಕಾಡಿನಲ್ಲಿ ನಿರ್ಭಯವಾಗಿ ವಾಸಿಸುವರು, ಅರಣ್ಯದಲ್ಲಿ ಹಾಯಾಗಿ ನಿದ್ರಿಸುವರು.
ಯೆಹೆಜ್ಕೇಲನು 34 : 26 (IRVKN)
ನಾನು ಅವರನ್ನೂ, ನನ್ನ ಪರ್ವತದ ಸುತ್ತಣ ಪ್ರದೇಶಗಳನ್ನೂ ಆಶೀರ್ವದಿಸಿ ಸುಖಪಡಿಸುವೆನು; ಕಾಲಕ್ಕೆ ಸರಿಯಾಗಿ ಮಳೆಯನ್ನು ಸುರಿಸುವೆನು; ದಿವ್ಯಾಶೀರ್ವಾದದ ಮಳೆಯು ಆಗುವುದು.
ಯೆಹೆಜ್ಕೇಲನು 34 : 27 (IRVKN)
ತೋಟದ ಮರಗಳು ಹಣ್ಣುಬಿಡುವುದು; ಹೊಲಗಳು ಒಳ್ಳೆಯ ಬೆಳೆಯನ್ನು ಕೊಡುವುದು; ಜನರು ಸ್ವದೇಶದಲ್ಲಿ ನೆಮ್ಮದಿಯಾಗಿರುವರು; ಅವರ ಮೇಲೆ ಹೇರಿದ ನೊಗದ ಬಂಧನಗಳನ್ನು ಮುರಿದು ಹಾಕಿ, ಅವರನ್ನು ದಾಸರಾಗಿ ಮಾಡಿಕೊಂಡವರ ಅಧೀನದಿಂದ ಬಿಡಿಸಿದಾಗ ನಾನೇ ಯೆಹೋವನು ಎಂದು ಅವರಿಗೆ ದೃಢವಾಗುವುದು. [PE][PS]
ಯೆಹೆಜ್ಕೇಲನು 34 : 28 (IRVKN)
“ ‘ಅಂದಿನಿಂದ ಅವರನ್ನು ಅನ್ಯಜನರು ಸೂರೆಮಾಡುವುದಿಲ್ಲ, ಕಾಡು ಮೃಗಗಳು ಅವರನ್ನು ತಿನ್ನುವುದಿಲ್ಲ; ಅವರು ಯಾರಿಗೂ ಹೆದರದೆ ನೆಮ್ಮದಿಯಾಗಿ ವಾಸಿಸುವರು.
ಯೆಹೆಜ್ಕೇಲನು 34 : 29 (IRVKN)
ನಾನು ಅವರಿಗಾಗಿ ಪ್ರಸಿದ್ಧ ಫಲವೃಕ್ಷಗಳನ್ನು ಬೆಳೆಯಿಸುವೆನು, ಕ್ಷಾಮವು ಅವರ ದೇಶವನ್ನು ಇನ್ನು ಹಾಳುಮಾಡುವುದಿಲ್ಲ, ಅವರು ಅನ್ಯಜನರ ತಿರಸ್ಕಾರಕ್ಕೆ ಗುರಿಯಾಗುವುದಿಲ್ಲ. [PE][PS]
ಯೆಹೆಜ್ಕೇಲನು 34 : 30 (IRVKN)
“ ‘ಆಗ ಅವರು ತಮ್ಮ ದೇವರಾದ ಯೆಹೋವನೆಂಬ ನಾನು ತಮ್ಮೊಂದಿಗೆ ಇದ್ದೇನೆಂತಲೂ, ಇಸ್ರಾಯೇಲ್ ವಂಶದವರಾದ ತಾವು ತನ್ನ ಜನರಾಗಿದ್ದೇವೆಂತಲೂ ತಿಳಿದುಕೊಳ್ಳುವರು’ ” ಇದು ಕರ್ತನಾದ ಯೆಹೋವನ ನುಡಿ.
ಯೆಹೆಜ್ಕೇಲನು 34 : 31 (IRVKN)
“ನೀವು ನನ್ನ ಕುರಿಗಳು, ನನ್ನ ಮೇವಿನ ಮಂದೆಯ ಕುರಿಗಳು; ನರಪ್ರಾಣಿಗಳಾದ ನಿಮಗೆ ನಾನು ದೇವರು ಎಂದು ಕರ್ತನಾದ ಯೆಹೋವನು ಅನ್ನುತ್ತಾನೆ.” [PE]

1 2 3 4 5 6 7 8 9 10 11 12 13 14 15 16 17 18 19 20 21 22 23 24 25 26 27 28 29 30 31

BG:

Opacity:

Color:


Size:


Font: