ವಿಮೋಚನಕಾಂಡ 31 : 1 (IRVKN)
ಗುಡಾರದ ನಿರ್ಮಾಣಕ್ಕೆ ಕೆಲಸಗಾರರ ಆಯ್ಕೆ
ವಿಮೋ 35:30-36:1
ಯೆಹೋವನು ಮೋಶೆಗೆ ಹೀಗೆಂದನು,
ವಿಮೋಚನಕಾಂಡ 31 : 2 (IRVKN)
“ನೋಡು, ನಾನು ಯೆಹೂದ ಕುಲದವನಾದ ಹೂರನ ಮೊಮ್ಮಗನೂ, ಊರಿಯನ ಮಗನೂ ಆಗಿರುವ ಬೆಚಲೇಲನೆಂಬುವನನ್ನು ಹೆಸರು ಹಿಡಿದು ಕರೆದಿದ್ದೇನೆ.
ವಿಮೋಚನಕಾಂಡ 31 : 3 (IRVKN)
ಕಲಾತ್ಮಕವಾದ ವಿನ್ಯಾಸಗಳನ್ನು ಮಾಡುವುದಕ್ಕೂ, ಚಿನ್ನ, ಬೆಳ್ಳಿ ಹಾಗು ತಾಮ್ರಗಳಿಂದ ಕೆಲಸ ಮಾಡುವುದಕ್ಕೂ,
ವಿಮೋಚನಕಾಂಡ 31 : 4 (IRVKN)
ರತ್ನಗಳನ್ನು ಕೆತ್ತುವುದಕ್ಕೂ, ಮರದಲ್ಲಿ ಕೆತ್ತನೇ ಕೆಲಸಗಳನ್ನು ಮಾಡುವುದಕ್ಕೂ,
ವಿಮೋಚನಕಾಂಡ 31 : 5 (IRVKN)
ಅವನಿಗೆ ದೇವರಾತ್ಮವನ್ನು ದಯಪಾಲಿಸಿ, ಅದಕ್ಕೆ ಬೇಕಾದ ಜ್ಞಾನ, ವಿದ್ಯೆ, ವಿವೇಕಗಳನ್ನೂ ಸಕಲ ಶಿಲ್ಪ ಕಲಾಜ್ಞಾನವನ್ನೂ ಅನುಗ್ರಹಿಸಿದ್ದೇನೆ.
ವಿಮೋಚನಕಾಂಡ 31 : 6 (IRVKN)
ಅವನೊಂದಿಗೆ ದಾನ್ ಕುಲದವನಾದ ಅಹೀಸಾಮಾಕನ ಮಗನಾದ ಒಹೋಲೀಯಾಬನನ್ನೂ ನೇಮಿಸಿದ್ದೇನೆ. ಅದಲ್ಲದೆ ನಾನು ನಿನಗೆ ಆಜ್ಞಾಪಿಸಿದ್ದೆಲ್ಲವನ್ನೂ ಮಾಡುವುದಕ್ಕೆ ಜ್ಞಾನಿಗಳಾದವರೆಲ್ಲರ ಹೃದಯಗಳಲ್ಲಿ ಜ್ಞಾನವನ್ನುಂಟುಮಾಡಿದ್ದೇನೆ.
ವಿಮೋಚನಕಾಂಡ 31 : 7 (IRVKN)
ದೇವದರ್ಶನದ ಗುಡಾರ, ಆಜ್ಞಾಶಾಸನಗಳನ್ನು ಇಟ್ಟಿರುವ ಮಂಜೂಷ ಅದರ ಮೇಲಿರುವ ಕೃಪಾಸನ, ಗುಡಾರದ ಎಲ್ಲಾ ಉಪಕರಣಗಳು,
ವಿಮೋಚನಕಾಂಡ 31 : 8 (IRVKN)
ಮೇಜು ಅದರ ಉಪಕರಣಗಳು, ಚೊಕ್ಕ ಬಂಗಾರದ ದೀಪಸ್ತಂಭ ಅದರ ಉಪಕರಣಗಳು,
ವಿಮೋಚನಕಾಂಡ 31 : 9 (IRVKN)
ಧೂಪವೇದಿ, ಯಜ್ಞವೇದಿ ಅದರ ಉಪಕರಣಗಳು, ನೀರಿನ ತೊಟ್ಟಿ ಅದರ ಪೀಠ,
ವಿಮೋಚನಕಾಂಡ 31 : 10 (IRVKN)
ಅಲಂಕಾರವಾದ ದೀಕ್ಷಾವಸ್ತ್ರಗಳು ಅಂದರೆ ಆರೋನನಿಗೂ ಅವನ ಮಕ್ಕಳಿಗೂ ಬೇಕಾದ ಪವಿತ್ರ ಯಾಜಕವಸ್ತ್ರಗಳು,
ವಿಮೋಚನಕಾಂಡ 31 : 11 (IRVKN)
ಅಭಿಷೇಕತೈಲ ಮತ್ತು ಪವಿತ್ರಸ್ಥಾನದ ಸೇವೆಗೆ ಬೇಕಾದ ಪರಿಮಳಧೂಪ ಇವುಗಳನ್ನೆಲ್ಲಾ ನಾನು ನಿನಗೆ ಆಜ್ಞಾಪಿಸಿದಂತೆಯೇ ಅವರು ಮಾಡುವರು.”
ವಿಮೋಚನಕಾಂಡ 31 : 12 (IRVKN)
ಸಬ್ಬತ್ ದಿನದ ನಿಯಮ ಯೆಹೋವನು ಮತ್ತೆ ಮೋಶೆಗೆ ಹೀಗೆಂದನು,
ವಿಮೋಚನಕಾಂಡ 31 : 13 (IRVKN)
“ನೀನು ಇಸ್ರಾಯೇಲರಿಗೆ ಆಜ್ಞಾಪಿಸಬೇಕಾದದ್ದೇನೆಂದರೆ: ನಾನು ನೇಮಿಸಿದ ಪವಿತ್ರ ಸಬ್ಬತ್ ದಿನಗಳನ್ನು ನೀವು ತಪ್ಪದೇ ಆಚರಿಸಬೇಕು. ನಿಮ್ಮನ್ನು ಶುದ್ಧಿಪಡಿಸುವ ಯೆಹೋವನು ನಾನೇ ಎಂದು ನೀವು ತಿಳಿದುಕೊಳ್ಳುವಂತೆ ಇದೇ ನನಗೂ ನಿಮಗೂ ನಿಮ್ಮ ಸಂತತಿಯವರ ಮಧ್ಯ ಇರುವ ಗುರುತು.
ವಿಮೋಚನಕಾಂಡ 31 : 14 (IRVKN)
ಆದಕಾರಣ ನೀವು ಸಬ್ಬತ್ ದಿನವನ್ನು ಪರಿಶುದ್ಧವಾದ ದಿನವೆಂದು ಎಣಿಸಿ ಆಚರಿಸಬೇಕು. ಅದನ್ನು ಅಶುದ್ಧಪಡಿಸುವ ಪ್ರತಿಯೊಬ್ಬನಿಗೆ ಮರಣಶಿಕ್ಷೆಯಾಗಬೇಕು. ಆ ದಿನದಲ್ಲಿ ಯಾವನಾದರೂ ಕೆಲಸವನ್ನು ಮಾಡಿದರೆ ಅವನನ್ನು ಕುಲದಿಂದ ತೆಗೆದುಹಾಕಬೇಕು.
ವಿಮೋಚನಕಾಂಡ 31 : 15 (IRVKN)
ಆರು ದಿನಗಳು ಕೆಲಸ ಮಾಡಬೇಕು. ಏಳನೆಯ ದಿನ ಸಂಪೂರ್ಣವಾಗಿ ಕೆಲಸವನ್ನು ನಿಲ್ಲಿಸಬೇಕಾದ ಸಬ್ಬತ್ ದಿನವಾಗಿದೆ. ಅದು ಯೆಹೋವನಿಗೆ ಪರಿಶುದ್ಧವಾದ ದಿನ. ಇಂಥ ಸಬ್ಬತ್ ದಿನದಲ್ಲಿ ಕೆಲಸವೇನಾದರೂ ಮಾಡುವವನಿಗೆ ಮರಣಶಿಕ್ಷೆಯಾಗಬೇಕು.
ವಿಮೋಚನಕಾಂಡ 31 : 16 (IRVKN)
ಆದುದರಿಂದ ಇಸ್ರಾಯೇಲರು ಸಬ್ಬತ್ ದಿನವನ್ನು ಆಚರಿಸಬೇಕು. ಈ ಆಚರಣೆಯು ಅವರಿಗೂ, ಅವರ ಸಂತತಿಯವರಿಗೂ ಶಾಶ್ವತವಾದ ನಿಯಮವಾಗಿದೆ.
ವಿಮೋಚನಕಾಂಡ 31 : 17 (IRVKN)
ಇದು ನನಗೂ ಇಸ್ರಾಯೇಲರಿಗೂ ನಡುವೆಯಿರುವ ಸದಾಕಾಲದ ಗುರುತು. ಏಕೆಂದರೆ ಆರು ದಿನಗಳಲ್ಲಿ ಯೆಹೋವನು ಭೂಮ್ಯಾಕಾಶಗಳನ್ನು ಉಂಟುಮಾಡಿ ಏಳನೆಯ ದಿನದಲ್ಲಿ ಕೆಲಸವನ್ನು ಮಾಡದೇ ವಿಶ್ರಮಿಸಿಕೊಂಡನಲ್ಲವೇ?”
ವಿಮೋಚನಕಾಂಡ 31 : 18 (IRVKN)
ಯೆಹೋವನು ಸೀನಾಯಿ ಬೆಟ್ಟದಲ್ಲಿ ಮೋಶೆಯ ಸಂಗಡ ಮಾತನಾಡುವುದನ್ನು ಮುಗಿಸಿದ ಮೇಲೆ ಅವನಿಗೆ ಆ ಎರಡು ಆಜ್ಞಾಶಾಸನಗಳನ್ನು ಕೊಟ್ಟನು. ಅವು ದೇವರ ಕೈಯಿಂದ ಬರೆಯಲ್ಪಟ್ಟ ಶಿಲಾಶಾಸನಗಳಾಗಿವೆ.

1 2 3 4 5 6 7 8 9 10 11 12 13 14 15 16 17 18