ವಿಮೋಚನಕಾಂಡ 28 : 1 (IRVKN)
ಯಾಜಕರ ದೀಕ್ಷಾವಸ್ತ್ರಗಳು
ವಿಮೋ 39:1-7
ನನಗೆ ಯಾಜಕನ ಸೇವೆ ಮಾಡುವುದಕ್ಕೆ ನೀನು ನಿನ್ನ ಅಣ್ಣನಾದ ಆರೋನನನ್ನೂ, ಅವನ ಮಕ್ಕಳಾದ ನಾದಾಬ್, ಅಬೀಹೂ, ಎಲ್ಲಾಜಾರ್, ಈತಾಮಾರ್ ಎಂಬುವರನ್ನೂ ಇಸ್ರಾಯೇಲ್ಯರಿಂದ ನಿನ್ನ ಹತ್ತಿರಕ್ಕೆ ಕರೆದುಕೊಂಡು ಬಾ.
ವಿಮೋಚನಕಾಂಡ 28 : 2 (IRVKN)
ನಿನ್ನ ಅಣ್ಣನಾದ ಆರೋನನಿಗೆ ಗೌರವವೂ, ಅಲಂಕಾರವೂ ಉಂಟಾಗುವಂತೆ ಅವನಿಗೆ ದೀಕ್ಷಾವಸ್ತ್ರಗಳನ್ನು (ಪರಿಶುದ್ಧವಸ್ತುಗಳು) ಮಾಡಿಸಬೇಕು.
ವಿಮೋಚನಕಾಂಡ 28 : 3 (IRVKN)
ಯಾರಿಗೆ ನಾನು ಜ್ಞಾನದ ವರವನ್ನು ಪರಿಪೂರ್ಣವಾಗಿ ಅನುಗ್ರಹಿಸಿದ್ದೇನೋ ಅಂಥ ಜ್ಞಾನಿಗಳೆಲ್ಲರ ಸಂಗಡ ನೀನು ಮಾತನಾಡಿ ಅವರ ಕೈಯಿಂದ ಆ ವಸ್ತ್ರಗಳನ್ನು ಸಿದ್ಧಪಡಿಸಬೇಕು. ಆರೋನನು ಅವುಗಳನ್ನು ಧರಿಸಿಕೊಂಡು ನನ್ನ ಯಾಜಕನಾಗುವುದಕ್ಕೆ ಪ್ರತಿಷ್ಠಿತನಾಗುವನು.
ವಿಮೋಚನಕಾಂಡ 28 : 4 (IRVKN)
ಅವರು ಮಾಡಬೇಕಾದ ವಸ್ತ್ರಗಳು ಯಾವುವೆಂದರೆ; ಎದೆಯ ಪದಕದ ಚೀಲ* ಎದೆಯ ಪದಕದ ಚೀಲ ಎದೆಯ ಕವಚ. , ಏಫೋದ್, † ಏಫೋದ್, ಮಹಾಯಾಜಕನ ಕವಚ ನಿಲುವಂಗಿ, ಕಸೂತಿ ಕೆಲಸದ ಮೇಲಂಗಿ, ಮುಂಡಾಸ ಹಾಗೂ ನಡುಕಟ್ಟು ಇವುಗಳೇ. ನಿನ್ನ ಸಹೋದರನಾದ ಆರೋನನೂ ಅವನ ಮಕ್ಕಳೂ ನನ್ನ ಯಾಜಕರಾಗುವುದಕ್ಕೆ ಅವರಿಗೋಸ್ಕರ ಈ ದೀಕ್ಷಾವಸ್ತ್ರಗಳನ್ನು ಮಾಡಿಸಬೇಕು.
ವಿಮೋಚನಕಾಂಡ 28 : 5 (IRVKN)
ಜನರು ಕಾಣಿಕೆಯಾಗಿ ಕೊಡುವ ಚಿನ್ನವನ್ನು, ನೀಲಿ, ನೇರಳೆ, ಕಡುಗೆಂಪು ವರ್ಣಗಳುಳ್ಳ ದಾರವನ್ನು, ಹಾಗೂ ನಾರಿನ ಬಟ್ಟೆಯನ್ನು ಆ ಕೆಲಸಕ್ಕಾಗಿ ಉಪಯೋಗಿಸಬೇಕು.
ವಿಮೋಚನಕಾಂಡ 28 : 6 (IRVKN)
ಏಫೋದ್ ಏಫೋದೆಂಬ ಕವಚವನ್ನು ನಯವಾಗಿ ಹೊಸೆದ ಹತ್ತಿಯ ದಾರದಿಂದ ಮಾಡಿಸಿ ಅದನ್ನು ಚಿನ್ನ, ನೀಲಿ, ನೇರಳೆ ಹಾಗೂ ಕಡುಗೆಂಪು ದಾರಗಳಿಂದಲೂ ಕಸೂತಿ ಹಾಕಿಸಿ ಅಲಂಕರಿಸಬೇಕು.
ವಿಮೋಚನಕಾಂಡ 28 : 7 (IRVKN)
ಆ ಕವಚಕ್ಕೆ ಹೆಗಲಿನ ಮೇಲೆ ಎರಡು ಪಟ್ಟಿಗಳು ಇರಬೇಕು. ಅದರ ಎರಡು ತುದಿಗಳು ಜೋಡಿಸಲ್ಪಟ್ಟಿರಬೇಕು.
ವಿಮೋಚನಕಾಂಡ 28 : 8 (IRVKN)
ಕವಚದ ಮೇಲಿರುವ ಕಸೂತಿ ಕೆಲಸದ ನಡುಕಟ್ಟು ಏಕವಾಗಿದ್ದು ಅದರಂತೆಯೇ ನಯವಾಗಿ ಹೊಸೆದ ಹತ್ತಿಯ ದಾರದಿಂದ ಮಾಡಲ್ಪಟ್ಟು ಚಿನ್ನದ ದಾರದಿಂದಲೂ ನೀಲಿ, ನೇರಳೆ, ಕಡುಗೆಂಪು ವರ್ಣಗಳುಳ್ಳ ದಾರದಿಂದಲೂ ಅಲಂಕೃತವಾಗಿರಬೇಕು.
ವಿಮೋಚನಕಾಂಡ 28 : 9 (IRVKN)
ಮತ್ತು ನೀನು ಎರಡು ಗೋಮೇಧಕ ಅಮೂಲ್ಯರತ್ನಗಳನ್ನು ತೆಗೆದುಕೊಂಡು ಅವುಗಳಲ್ಲಿ ಇಸ್ರಾಯೇಲರ ಕುಲಗಳ ಹೆಸರುಗಳನ್ನು ಕೆತ್ತಿಸಬೇಕು.
ವಿಮೋಚನಕಾಂಡ 28 : 10 (IRVKN)
ಒಂದು ರತ್ನದಲ್ಲಿ ಆರು ಹೆಸರುಗಳನ್ನೂ ಮತ್ತೊಂದು ರತ್ನದಲ್ಲಿ ಮಿಕ್ಕ ಆರು ಹೆಸರುಗಳನ್ನು ಅವರವರ ಜನನ ಕ್ರಮದ ಪ್ರಕಾರ ಕೆತ್ತಿಸಬೇಕು.
ವಿಮೋಚನಕಾಂಡ 28 : 11 (IRVKN)
ಮುದ್ರೆಗಳನ್ನು ಕೆತ್ತುವ ಹಾಗೆ ಆ ಶಿಲ್ಪಿಗರಿಂದ ಎರಡೂ ರತ್ನಗಳಲ್ಲಿ ಇಸ್ರಾಯೇಲರ ಕುಲಗಳ ಹೆಸರುಗಳನ್ನು ಕೆತ್ತಿಸಿ, ಅದಕ್ಕೆ ಚಿನ್ನವನ್ನು ಆ ಮುದ್ರೆಗಳ ಮೇಲೆ ಇರಿಸಬೇಕು.
ವಿಮೋಚನಕಾಂಡ 28 : 12 (IRVKN)
ಆ ಎರಡು ರತ್ನಗಳನ್ನು ಹೆಗಲಿನ ಮೇಲಿರುವ ಏಫೋದಿನ ಪಟ್ಟಿಗಳಲ್ಲಿ ಹಾಕಿಸಬೇಕು. ಅವು ಇಸ್ರಾಯೇಲರ ಜ್ಞಾಪಕಾರ್ಥವಾದ ರತ್ನಗಳಾಗಿರುವವು. ಆರೋನನು ಯೆಹೋವನ ಸನ್ನಿಧಿಯಲ್ಲಿ ಹೋಗುವಾಗೆಲ್ಲಾ ಇಸ್ರಾಯೇಲರ ಕುಲಗಳ ಹೆಸರುಗಳನ್ನು ಆತನ ನೆನಪಿಗೆ ತರುವುದಕ್ಕಾಗಿ ತನ್ನ ಎರಡೂ ಭುಜಗಳ ಮೇಲೆ ಅವುಗಳನ್ನು ಧರಿಸಿಕೊಂಡು ಹೋಗುವನು.
ವಿಮೋಚನಕಾಂಡ 28 : 13 (IRVKN)
ಆ ರತ್ನಗಳನ್ನು ಜೋಡಿಸುವುದಕ್ಕೆ ಚಿನ್ನದ ಸರಿಗೆಯನ್ನು ಹೆಣೆದು ಗೂಡುಗಳನ್ನು ಮಾಡಿಸಬೇಕು.
ವಿಮೋಚನಕಾಂಡ 28 : 14 (IRVKN)
ಮತ್ತು ಹೆಣಿಗೆ ಕೆಲಸದಿಂದ ಹುರಿಗಳಂತಿರುವ ಎರಡು ಚೊಕ್ಕ ಬಂಗಾರದ ಸರಪಣಿಗಳನ್ನು ಮಾಡಿಸಿ ರತ್ನಗಳ ಗೂಡುಗಳಿಗೆ ಸಿಕ್ಕಿಸಬೇಕು.
ವಿಮೋಚನಕಾಂಡ 28 : 15 (IRVKN)
ಎದೆಯ ಪದಕದ ಕವಚ
ವಿಮೋ 39:8-21
ನ್ಯಾಯತೀರ್ಪಿನ ಎದೆಯ ಪದಕದ ಕವಚವನ್ನು ಕಸೂತಿ ಕೆಲಸದಿಂದ ಮಾಡಿಸಬೇಕು. ಅದನ್ನು ಏಫೋದ್ ಅನ್ನು ಮಾಡಿಸಿದ ಹಾಗೆಯೇ ಚಿನ್ನದ ದಾರದಿಂದಲೂ ನೀಲಿ, ನೇರಳೆ, ಕಡುಗೆಂಪು ವರ್ಣಗಳುಳ್ಳ ದಾರದಿಂದಲೂ ನಯವಾಗಿ ಹೊಸೆದ ಹತ್ತಿಯ ದಾರದಿಂದ ಮಾಡಿಸಬೇಕು.
ವಿಮೋಚನಕಾಂಡ 28 : 16 (IRVKN)
ಅದು ಒಂದು ಗೇಣುದ್ದವಾಗಿಯೂ ಮತ್ತು ಒಂದು ಗೇಣಗಲವಾಗಿಯೂ ಎರಡು ಪದರುಳ್ಳದ್ದಾಗಿ ಚಚ್ಚೌಕವಾಗಿರಬೇಕು.
ವಿಮೋಚನಕಾಂಡ 28 : 17 (IRVKN)
ಅದರ ಮುಂಭಾಗದಲ್ಲಿ ನಾಲ್ಕು ಸಾಲುಗಳಾಗಿ ರತ್ನಗಳನ್ನು ಹೆಚ್ಚಿಸಿರಬೇಕು. ಮೊದಲನೆಯ ಸಾಲಿನಲ್ಲಿ ಮಾಣಿಕ್ಯ, ಪುಷ್ಯರಾಗ ಮತ್ತು ಸ್ಫಟಿಕಗಳು ಇರಬೇಕು.
ವಿಮೋಚನಕಾಂಡ 28 : 18 (IRVKN)
ಎರಡನೆಯ ಸಾಲಿನಲ್ಲಿ ಪಚ್ಚೆ, ನೀಲರತ್ನ ಮತ್ತು ವಜ್ರಗಳಿರಬೇಕು.
ವಿಮೋಚನಕಾಂಡ 28 : 19 (IRVKN)
ಮೂರನೆಯ ಸಾಲಿನಲ್ಲಿ ಸುವರ್ಣರತ್ನ, ಸುಗಂಧಿ ಮತ್ತು ಪದ್ಮರಾಗಗಳು ಇರಬೇಕು.
ವಿಮೋಚನಕಾಂಡ 28 : 20 (IRVKN)
ನಾಲ್ಕನೆಯ ಸಾಲಿನಲ್ಲಿ ಪೀತರತ್ನ, ಬೆರುಲ್ಲ, ವೈಡೂರ್ಯಗಳನ್ನೂ ಚಿನ್ನದ ಮಣಿಗಳಲ್ಲಿ ಸೇರಿಸಬೇಕು.
ವಿಮೋಚನಕಾಂಡ 28 : 21 (IRVKN)
ಇಸ್ರಾಯೇಲರ ಕುಲಗಳ ಸಂಖ್ಯೆಗೆ ಅನುಗುಣವಾಗಿ ಹನ್ನೆರಡು ರತ್ನಗಳಿರಬೇಕು. ಮುದ್ರೆಗಳನ್ನು ಕೆತ್ತುವ ರೀತಿಯಲ್ಲಿ ಒಂದೊಂದು ರತ್ನದಲ್ಲಿ ಒಂದೊಂದು ಕುಲದ ಹೆಸರನ್ನು ಕೆತ್ತಿಸಬೇಕು.
ವಿಮೋಚನಕಾಂಡ 28 : 22 (IRVKN)
ಅದಲ್ಲದೆ ಆ ಪದಕದ ಮೇಲ್ಗಡೆಯಲ್ಲಿ ಹುರಿಗಳಂತಿರುವ ಚೊಕ್ಕ ಬಂಗಾರದ ಸರಪಣಿಗಳನ್ನು ಹೆಣಿಗೆ ಕೆಲಸಗಳಿಂದ ಮಾಡಿಸಿಡಬೇಕು.
ವಿಮೋಚನಕಾಂಡ 28 : 23 (IRVKN)
ಎರಡು ಚಿನ್ನದ ಕೊಂಡಿಗಳನ್ನು ಮಾಡಿಸಿ ಎದೆಯ ಪದಕದ ಕವಚದ ಎರಡು ಮೂಲೆಗಳಿಗೆ ಜೋಡಿಸಬೇಕು.
ವಿಮೋಚನಕಾಂಡ 28 : 24 (IRVKN)
ಆ ಎರಡು ಸರಪಣಿಗಳನ್ನು ಎದೆಯ ಪದಕದ ಕವಚದ ಮೂಲೆಗಳಲ್ಲಿರುವ ಕೊಂಡಿಗಳಿಗೆ ಸಿಕ್ಕಿಸಬೇಕು.
ವಿಮೋಚನಕಾಂಡ 28 : 25 (IRVKN)
ಆ ಸರಪಣಿಗಳ ಕೊನೆಗಳನ್ನು ಏಫೋದ್ ಕವಚದ ಹೆಗಲಿನ ಪಟ್ಟಿಗಳಲ್ಲಿರುವ ಎರಡು ಕೊಂಡಿಗಳಲ್ಲಿ ಸಿಕ್ಕಿಸಿ ಮುಂಭಾಗದಲ್ಲಿರಿಸಬೇಕು.
ವಿಮೋಚನಕಾಂಡ 28 : 26 (IRVKN)
ಅದಲ್ಲದೆ ಎರಡು ಚಿನ್ನದ ಕೊಂಡಿಗಳನ್ನು ಮಾಡಿಸಿ ಎದೆ ಪದಕದ ಒಳಗಣ ಅಂಚಿನ ಮೂಲೆಗಳಲ್ಲಿ ಕವಚದ ಹತ್ತಿರದಲ್ಲೆ ಇಡಿಸಬೇಕು.
ವಿಮೋಚನಕಾಂಡ 28 : 27 (IRVKN)
ಮತ್ತು ಬೇರೆ ಎರಡು ಚಿನ್ನದ ಕೊಂಡಿಗಳನ್ನು ಮಾಡಿಸಿ ಏಫೋದ್ ಕವಚದ ಎರಡು ಹೆಗಲಿನ ಪಟ್ಟಿಗಳ ಮುಂಭಾಗದ ಕೆಳಗೆ ಕವಚವನ್ನು ಜೋಡಿಸಿರುವ ಸ್ಥಳದ ಹತ್ತಿರ ಕಸೂತಿ ಹಾಕಿಸಿದ ನಡುಕಟ್ಟಿನ ಮೇಲ್ಗಡೆಯಲ್ಲಿ ಇರಿಸಬೇಕು.
ವಿಮೋಚನಕಾಂಡ 28 : 28 (IRVKN)
ಎದೆಯ ಪದಕವು ಕಸೂತಿಹಾಕಿದ ನಡುಕಟ್ಟಿನ ಮೇಲ್ಗಡೆಯಲ್ಲಿ ಬಿಗಿಯಾಗಿರುವಂತೆಯೂ, ಏಫೋದ್ ಕವಚದಿಂದ ಕಳಚಿಬೀಳದಂತೆಯೂ ಅದರ ಕೊಂಡಿಗಳನ್ನು ಏಫೋದ್ ಕವಚದ ಕೊಂಡಿಗಳಿಗೆ ನೀಲಿ ದಾರದಿಂದ ಕಟ್ಟಿಸಬೇಕು.
ವಿಮೋಚನಕಾಂಡ 28 : 29 (IRVKN)
ನ್ಯಾಯತೀರ್ಪಿನ ಎದೆಯ ಪದಕದ ಮೇಲೆ ಇಸ್ರಾಯೇಲರ ಕುಲಗಳ ಹೆಸರುಗಳು ಬರೆದಿರುವುದರಿಂದ ಆರೋನನು ಪವಿತ್ರಸ್ಥಾನದೊಳಗೆ ಹೋಗುವಾಗೆಲ್ಲಾ ಆ ಹೆಸರುಗಳನ್ನು ಸತತವಾಗಿ ಯೆಹೋವನ ನೆನಪಿಗೆ ತರುವುದಕ್ಕಾಗಿ ಅದನ್ನು ತನ್ನ ಎದೆಯ ಮೇಲೆ ನಿತ್ಯವೂ ಧರಿಸುವನು.
ವಿಮೋಚನಕಾಂಡ 28 : 30 (IRVKN)
ದೈವನಿರ್ಣಯವನ್ನು ತಿಳಿಸುವ ಅಥವಾ ದೈವನಿರ್ಣಯವನ್ನು ತಿಳಿದುಕೊಳ್ಳಲು ಯಾಜಕರಿಗೆ ಉಪಯುಕ್ತವಾಗಿರುವ ವಸ್ತು. ಊರೀಮ್ ತುಮ್ಮೀಮ್‌ ಆ ಎದೆಯ ಪದಕದಲ್ಲಿ ಇಡಬೇಕು. ಆರೋನನು ಯೆಹೋವನ ಸನ್ನಿಧಿಗೆ ಹೋಗುವಾಗ ಅವು ಅವನ ಎದೆಯ ಮೇಲೆ ಇರುವವು. ಇಸ್ರಾಯೇಲರು ಕೈಕೊಳ್ಳಬೇಕಾದ ದೈವನಿರ್ಣಯವನ್ನು ಆರೋನನು ಹೀಗೆ ತನ್ನ ಹೃದಯದ ಮೇಲೆ ಯೆಹೋವನ ಸನ್ನಿಧಿಯಲ್ಲಿ ಯಾವಾಗಲೂ ಧರಿಸಿಕೊಂಡಿರಬೇಕು.
ವಿಮೋಚನಕಾಂಡ 28 : 31 (IRVKN)
ಯಾಜಕರ ಇತರ ವಸ್ತ್ರಗಳು
ವಿಮೋ 39:22-31
ಮಹಾಯಾಜಕನು ಏಫೋದ್ ಕವಚದ ಸಂಗಡ ಧರಿಸಿಕೊಳ್ಳಬೇಕಾದ ಮೇಲಂಗಿಯನ್ನು ನೀನು ನೀಲಿಬಣ್ಣದ ಬಟ್ಟೆಯಿಂದಲೇ ಮಾಡಿಸಬೇಕು.
ವಿಮೋಚನಕಾಂಡ 28 : 32 (IRVKN)
ತಲೆತೂರಿಸುವುದಕ್ಕೆ ಅದರಲ್ಲಿ ಸಂದು ಇರಬೇಕು. ಅದು ಹರಿಯದಂತೆ ಆ ಸಂದಿನ ಸುತ್ತಲೂ ನೇಯಿಗೆ ಕಸೂತಿಯನ್ನು ಅದರೊಂದಿಗೆ ಒಂದು ಪಟ್ಟಿಯನ್ನು ಹಾಕಿಸಬೇಕು.
ವಿಮೋಚನಕಾಂಡ 28 : 33 (IRVKN)
ನಿಲುವಂಗಿಯ ಅಂಚಿನ ಸುತ್ತಲೂ ನೀಲಿ, ನೇರಳೆ, ಕಡುಗೆಂಪು ವರ್ಣಗಳುಳ್ಳ ದಾರದಿಂದ ದಾಳಿಂಬ ಹಣ್ಣುಗಳನ್ನು ಅವುಗಳ ನಡುವೆ ಚಿನ್ನದ ಗೆಜ್ಜೆಗಳನ್ನು ಹಾಕಿಸಬೇಕು.
ವಿಮೋಚನಕಾಂಡ 28 : 34 (IRVKN)
ಚಿನ್ನದ ಗೆಜ್ಜೆಯೂ ದಾಳಿಂಬೆಯೂ ಒಂದಾದ ಮೇಲೆ ಒಂದು ಆ ನಿಲುವಂಗಿಯ ಅಂಚಿನ ಸುತ್ತಲೂ ಇರಬೇಕು.
ವಿಮೋಚನಕಾಂಡ 28 : 35 (IRVKN)
ಆರೋನನು ಯಾಜಕ ಸೇವೆ ಮಾಡುವ ಸಮಯದಲ್ಲಿ ಅದನ್ನು ಧರಿಸಿಕೊಳ್ಳಬೇಕು. ಅವನು ಯೆಹೋವನ ಸನ್ನಿಧಿಗೆ ಪವಿತ್ರಸ್ಥಾನದೊಳಗೆ ಹೋಗುವಾಗಲೂ ಬರುವಾಗಲೂ ಸಾಯದಂತಿರಲು ಆ ಗೆಜ್ಜೆಗಳ ಶಬ್ದವು ಕೇಳಿಸಬೇಕು.
ವಿಮೋಚನಕಾಂಡ 28 : 36 (IRVKN)
ಚೊಕ್ಕ ಬಂಗಾರದಿಂದ ಒಂದು ಪಟ್ಟಿಯನ್ನು ಮಾಡಿಸಿ ಮುದ್ರೆಯನ್ನು ಕೆತ್ತಿಸುವ ರೀತಿಯಲ್ಲಿ ಅದರ ಮೇಲೆ “ಯೆಹೋವನಿಗೆ ಮೀಸಲು” ಎಂಬ ಲಿಪಿಯನ್ನು ಕೆತ್ತಿಸಬೇಕು.
ವಿಮೋಚನಕಾಂಡ 28 : 37 (IRVKN)
ಅದನ್ನು ಮುಂಡಾಸಕ್ಕೆ ಬಿಗಿಯುವುದಕ್ಕಾಗಿ ನೀಲಿ ದಾರವನ್ನು ಅದಕ್ಕೆ ಕಟ್ಟಿಸಬೇಕು. ಅದು ಮುಂಡಾಸದ ಮುಂಭಾಗದಲ್ಲಿ ಇರಬೇಕು.
ವಿಮೋಚನಕಾಂಡ 28 : 38 (IRVKN)
ಇಸ್ರಾಯೇಲ್ಯರು ಕಾಣಿಕೆಯಾಗಿ ಸಮರ್ಪಿಸುವ ದೇವರ ಎಲ್ಲಾ ಪವಿತ್ರವಸ್ತುಗಳ ವಿಷಯದಲ್ಲಿ ದೋಷವೇನಾದರೂ ಇದ್ದರೆ ಆರೋನನು ಆ ಪಟ್ಟವನ್ನು ಯಾವಾಗಲೂ ಹಣೆಯ ಮೇಲೆ ಧರಿಸಿ ಆ ದೋಷ ಫಲವನ್ನು ವಹಿಸಿಕೊಳ್ಳುವುದರಿಂದ ಅವರು ಯೆಹೋವನಿಗೆ ಮೆಚ್ಚಿಕೆಯುಳ್ಳವರಾಗಿರುವರು.
ವಿಮೋಚನಕಾಂಡ 28 : 39 (IRVKN)
ಆರೋನನು ಧರಿಸಬೇಕಾದ ಒಳ ಅಂಗಿಯನ್ನು ಹತ್ತಿಯ ನೂಲಿನಿಂದ ಕಸೂತಿ ಹಾಕಿಸಿ ನೇಯಿಸಬೇಕು. ಅವನ ಮುಂಡಾಸವನ್ನು ಹತ್ತಿಯ ನೂಲಿನಿಂದ ಮಾಡಿಸಬೇಕು. ಅವನ ನಡುಕಟ್ಟನ್ನು ಕಸೂತಿ ಕೆಲಸದಿಂದ ಮಾಡಿಸಬೇಕು.
ವಿಮೋಚನಕಾಂಡ 28 : 40 (IRVKN)
ಆರೋನನ ಮಕ್ಕಳಿಗೆ ತಕ್ಕ ಗೌರವಕ್ಕಾಗಿಯೂ, ಅಲಂಕಾರಕ್ಕಾಗಿಯೂ ಅವರಿಗೆ ಮೇಲಂಗಿಗಳನ್ನು, ನಡುಕಟ್ಟುಗಳನ್ನು ಮತ್ತು ಮುಂಡಾಸಗಳನ್ನು ಮಾಡಿಸಬೇಕು.
ವಿಮೋಚನಕಾಂಡ 28 : 41 (IRVKN)
ವಿಮೋಚನಕಾಂಡ 28 : 42 (IRVKN)
ಅವರು ನನಗೆ ಯಾಜಕಸೇವೆ ಮಾಡುವುದಕ್ಕಾಗಿ ಆ ವಸ್ತ್ರಗಳನ್ನು ನಿನ್ನ ಅಣ್ಣನಾದ ಆರೋನನಿಗೂ, ಅವನ ಮಕ್ಕಳಿಗೂ ತೊಡಿಸಿ, ಅವರನ್ನು ಅಭಿಷೇಕಿಸಿ, ಸೇವೆಗಾಗಿ ಪ್ರತಿಷ್ಠಿಸಿ ಶುದ್ಧೀಕರಿಸಿಬೇಕು. ಅದಲ್ಲದೆ ಅವರ ನಗ್ನತೆಯನ್ನು ಮರೆಮಾಡುವುದಕ್ಕಾಗಿ ಅವರಿಗೆ ಸೊಂಟದಿಂದ ತೊಡೆಯ ತನಕ ಇರುವ ನಾರಿನ ಚಡ್ಡಿಗಳನ್ನು ಸಣಬಿನ ದಾರದಿಂದ ಮಾಡಿಸಬೇಕು.
ವಿಮೋಚನಕಾಂಡ 28 : 43 (IRVKN)
ಆರೋನನೂ, ಅವನ ಮಕ್ಕಳೂ ದೇವದರ್ಶನ ಗುಡಾರದೊಳಗೆ ಹೋಗುವಾಗಲೂ, ಪವಿತ್ರಸ್ಥಾನದಲ್ಲಿ ಸೇವೆಮಾಡುವುದಕ್ಕೆ ಯಜ್ಞವೇದಿಯ ಹತ್ತಿರಕ್ಕೆ ಬರುವಾಗಲೂ ಇವುಗಳನ್ನು ಧರಿಸಿಕೊಂಡಿರಬೇಕು. ಇಲ್ಲವಾದರೆ ಅವರು ಆ ಅಪರಾಧದ ಫಲವನ್ನು ಅನುಭವಿಸಿ ಸತ್ತಾರು. ಅವನಿಗೂ ಅವನ ವಂಶಸ್ಥರಿಗೂ ಇದು ಶಾಶ್ವತವಾದ ನಿಯಮವಾಗಿದೆ.

1 2 3 4 5 6 7 8 9 10 11 12 13 14 15 16 17 18 19 20 21 22 23 24 25 26 27 28 29 30 31 32 33 34 35 36 37 38 39 40 41 42 43