ವಿಮೋಚನಕಾಂಡ 27 : 1 (IRVKN)
ಯಜ್ಞವೇದಿ
ವಿಮೋ 38:1-7
ಯಜ್ಞವೇದಿಯನ್ನು ಜಾಲೀಮರದಿಂದ ಐದು ಮೊಳ ಉದ್ದವಾಗಿಯೂ, ಐದು ಮೊಳ ಅಗಲವಾಗಿಯೂ ಚಚ್ಚೌಕವಾಗಿ ಮಾಡಿಸಬೇಕು. ಅದರ ಎತ್ತರವು ಮೂರು ಮೊಳವಿರಬೇಕು.
ವಿಮೋಚನಕಾಂಡ 27 : 2 (IRVKN)
ಅದರ ನಾಲ್ಕು ಮೂಲೆಗಳಲ್ಲಿ ನಾಲ್ಕು ಕೊಂಬುಗಳನ್ನು ಮಾಡಿಸಬೇಕು. ಆ ಕೊಂಬುಗಳು ಯಜ್ಞವೇದಿಯಿಂದಲೇ ಬಂದವುಗಳಾಗಿರಬೇಕು. ಆ ಯಜ್ಞವೇದಿಗೆ ತಾಮ್ರದ ತಗಡುಗಳನ್ನು ಹೊದಿಸಬೇಕು.
ವಿಮೋಚನಕಾಂಡ 27 : 3 (IRVKN)
ಅದರಲ್ಲಿರುವ ಬೂದಿಯನ್ನು ತೆಗೆಯುವುದಕ್ಕಾಗಿ ತಟ್ಟೆಗಳನ್ನೂ, ಸಲಿಕೆಗಳನ್ನೂ, ಬೋಗುಣಿಗಳನ್ನೂ, ಮುಳ್ಳುಚಮಚಗಳನ್ನೂ, ಹಾಗೂ ಅಗ್ಗಿಷ್ಟಿಕೆಗಳನ್ನೂ ಮಾಡಿಸಬೇಕು. ಆ ಉಪಕರಣಗಳೆಲ್ಲಾ ತಾಮ್ರದವುಗಳಾಗಿರಬೇಕು.
ವಿಮೋಚನಕಾಂಡ 27 : 4 (IRVKN)
ಯಜ್ಞವೇದಿಗೆ ಹೆಣಿಗೆ ಕೆಲಸದಿಂದ ತಾಮ್ರದ ಜಾಲರಿಯನ್ನು ಮಾಡಿಸಬೇಕು, ಆ ಜಾಲರಿಯ ನಾಲ್ಕು ಮೂಲೆಗಳಿಗೆ ತಾಮ್ರದ ಬಳೆಗಳನ್ನು ಹಾಕಿಸಬೇಕು.
ವಿಮೋಚನಕಾಂಡ 27 : 5 (IRVKN)
ಆ ಜಾಲರಿಯು ಯಜ್ಞವೇದಿಯ ಸುತ್ತಲಿರುವ ಕಟ್ಟೆಯ ಕೆಳಗಿನವರೆಗೆ ಇದ್ದು ಯಜ್ಞವೇದಿಯ ಅಡಿಯಿಂದ ನಡುವಿನ ತನಕ ಇರುವಂತೆ ಹಾಕಿಸಬೇಕು.
ವಿಮೋಚನಕಾಂಡ 27 : 6 (IRVKN)
ಯಜ್ಞವೇದಿಯನ್ನು ಹೊರುವ ಕೋಲುಗಳನ್ನು ಜಾಲೀಮರದಿಂದ ಮಾಡಿಸಿ, ತಾಮ್ರದ ತಗಡುಗಳನ್ನು ಹೊದಿಸಬೇಕು.
ವಿಮೋಚನಕಾಂಡ 27 : 7 (IRVKN)
ಆ ಕೋಲುಗಳನ್ನು ಆ ಬಳೆಗಳಲ್ಲಿ ಸೇರಿಸಿದಾಗ ಅವು ಯಜ್ಞವೇದಿಯನ್ನು ಹೊರುವುದಕ್ಕಾಗಿ ಅದರ ಎರಡೂ ಕಡೆಗಳಲ್ಲಿ ಇರಬೇಕು.
ವಿಮೋಚನಕಾಂಡ 27 : 8 (IRVKN)
ಆ ಯಜ್ಞವೇದಿಯನ್ನು ಹಲಗೆಗಳಿಂದ ಟೊಳ್ಳಾದ ಪೆಟ್ಟಿಗೆಯಂತೆ ಮಾಡಿಸಬೇಕು. ನಾನು ಬೆಟ್ಟದಲ್ಲಿ ನಿನಗೆ ತೋರಿಸಿದಂತೆ ಅದನ್ನು ಮಾಡಿಸಬೇಕು.
ವಿಮೋಚನಕಾಂಡ 27 : 9 (IRVKN)
ಗುಡಾರದ ಅಂಗಳ
ವಿಮೋ 38:9-20
ಪರಿಶುದ್ಧ ಗುಡಾರಕ್ಕೆ ಅಂಗಳವನ್ನು ಮಾಡಿಸಬೇಕು. ಆ ದಕ್ಷಿಣ ಭಾಗದ ಅಂಗಳಕ್ಕೆ ಪರದೆಗಳು ಇರಬೇಕು. ಆ ಪರದೆಗಳನ್ನು ನಯವಾಗಿ ಹೊಸೆದ ಹತ್ತಿಯ ನೂಲಿನಿಂದ ಬಟ್ಟೆಯಿಂದ ಮಾಡಿಸಬೇಕು. ಅವು ನೂರು ಮೊಳ ಉದ್ದವಾಗಿರಬೇಕು.
ವಿಮೋಚನಕಾಂಡ 27 : 10 (IRVKN)
ಆ ಕಡೆಯಲ್ಲಿ ಇಪ್ಪತ್ತು ಕಂಬಗಳು. ಅವುಗಳಿಗೆ ಇಪ್ಪತ್ತು ತಾಮ್ರದ ಗದ್ದಿಗೆ ಕಲ್ಲುಗಳು ಇರಬೇಕು. ಕಂಬಗಳಿಗೆ ಬೆಳ್ಳಿಯ ಕೊಂಡಿಗಳೂ ಪಟ್ಟಿಗಳೂ ಇರಬೇಕು.
ವಿಮೋಚನಕಾಂಡ 27 : 11 (IRVKN)
ಅದೇ ರೀತಿಯಲ್ಲಿ ಉತ್ತರ ಕಡೆಯಲ್ಲಿಯೂ ನೂರು ಮೊಳ ಉದ್ದವಾದ ಪರದೆಗಳೂ, ಇಪ್ಪತ್ತು ಕಂಬಗಳು, ಇಪ್ಪತ್ತು ತಾಮ್ರದ ಗದ್ದಿಗೆ ಕಲ್ಲುಗಳು ಇರಬೇಕು ಕಂಬಗಳ ಕೊಂಡಿಗಳೂ, ಪಟ್ಟಿಗಳೂ ಬೆಳ್ಳಿಯವಾಗಿರಬೇಕು.
ವಿಮೋಚನಕಾಂಡ 27 : 12 (IRVKN)
ಪಶ್ಚಿಮ ಕಡೆಯಲ್ಲಿ ಅಂಗಳದ ಅಗಲಕ್ಕೆ ಐವತ್ತು ಮೊಳ ಉದ್ದವಾದ ಪರದೆಗಳೂ ಹತ್ತು ಕಂಬಗಳೂ, ಹತ್ತು ಗದ್ದಿಗೆ ಕಲ್ಲುಗಳೂ ಇರಬೇಕು.
ವಿಮೋಚನಕಾಂಡ 27 : 13 (IRVKN)
ಪೂರ್ವದ ದಿಕ್ಕಿನಲ್ಲಿಯೂ ಅಂಗಳದ ಅಗಲವು ಐವತ್ತು ಮೊಳವಿರಬೇಕು.
ವಿಮೋಚನಕಾಂಡ 27 : 14 (IRVKN)
ಒಂದು ಕಡೆಯಲ್ಲಿ ಹದಿನೈದು ಮೊಳ ಉದ್ದವಾದ ಪರದೆಗಳಿದ್ದು ಅವುಗಳಿಗೆ ಮೂರು ಸ್ತಂಭಗಳೂ, ಮೂರು ಗದ್ದಿಗೆ ಕಲ್ಲುಗಳು ಇರಬೇಕು.
ವಿಮೋಚನಕಾಂಡ 27 : 15 (IRVKN)
ಮತ್ತೊಂದು ಕಡೆಯಲ್ಲಿ ಹದಿನೈದು ಮೊಳ ಉದ್ದವಾದ ಪರದೆಗಳಿದ್ದು ಅವುಗಳಿಗೆ ಮೂರು ಸ್ತಂಭಗಳೂ, ಮೂರು ಗದ್ದಿಗೆ ಕಲ್ಲುಗಳು ಇರಬೇಕು
ವಿಮೋಚನಕಾಂಡ 27 : 16 (IRVKN)
ಅಂಗಳದ ಬಾಗಿಲಲ್ಲೇ ಇಪ್ಪತ್ತು ಮೊಳದ ಪರದೆಯೂ ಇರಬೇಕು. ಅದನ್ನು ನಯವಾಗಿ ಹೊಸೆದ ನಾರಿನ ನೂಲು, ನೀಲಿ, ನೇರಳೆ, ಕಡುಗೆಂಪು ವರ್ಣಗಳುಳ್ಳ ದಾರದಿಂದ ಕಸೂತಿ ಕೆಲಸದವರ ಕೈಯಿಂದ ಮಾಡಿಸಬೇಕು. ಬಾಗಿಲಿಗೆ ನಾಲ್ಕು ಕಂಬಗಳೂ ನಾಲ್ಕು ಗದ್ದಿಗೆ ಕಲ್ಲುಗಳು ಇರಬೇಕು.
ವಿಮೋಚನಕಾಂಡ 27 : 17 (IRVKN)
ಅಂಗಳದ ಸುತ್ತಲಿರುವ ಎಲ್ಲಾ ಕಂಬಗಳಿಗೂ, ಬೆಳ್ಳಿಯ ಪಟ್ಟಿಗಳೂ, ಬೆಳ್ಳಿಯ ಕೊಂಡಿಗಳೂ, ತಾಮ್ರದ ಗದ್ದಿಗೆ ಕಲ್ಲುಗಳು ಇರಬೇಕು.
ವಿಮೋಚನಕಾಂಡ 27 : 18 (IRVKN)
ಅಂಗಳವು ನೂರು ಮೊಳ ಉದ್ದವಾಗಿಯೂ ಸುತ್ತಲೂ ಐವತ್ತು ಮೊಳ ಅಗಲವಾಗಿಯೂ ಇರಬೇಕು. ಅದರ ಸುತ್ತಲಿರುವ ಪರದೆಯು ನಯವಾಗಿ ಹೊಸೆದ ಹತ್ತಿಯ ನೂಲಿನಿಂದ ಬಟ್ಟೆಯಿಂದ ಮಾಡಿದ್ದು ಅದಕ್ಕೆ ಐದು ಮೊಳ ಎತ್ತರವಿರಬೇಕು. ಅದಕ್ಕೆ ತಾಮ್ರದ ಗದ್ದಿಗೆ ಕಲ್ಲುಗಳಿರಬೇಕು.
ವಿಮೋಚನಕಾಂಡ 27 : 19 (IRVKN)
ಗುಡಾರದ ಸಕಲವಿಧವಾದ ಕೆಲಸಕ್ಕೆ ಬೇಕಾದ ಉಪಕರಣಗಳೂ, ಗುಡಾರದ ಗೂಟಗಳೂ, ಅಂಗಳದ ಗೂಟಗಳೂ ತಾಮ್ರದವುಗಳಾಗಿರಬೇಕು.
ವಿಮೋಚನಕಾಂಡ 27 : 20 (IRVKN)
ದೀಪಸ್ತಂಭದ ಎಣ್ಣೆ
ಯಾಜ 24:1-4
ದೀಪವು ಯಾವಾಗಲೂ ಉರಿಯುವಂತೆ ಇಸ್ರಾಯೇಲ್ಯರು ಒಲಿವ್ ಮರದ ಕಾಯಿಗಳನ್ನು ಕುಟ್ಟಿ ನಿರ್ಮಲವಾದ ಒಲಿವ್ ಎಣ್ಣೆಯನ್ನು ತೆಗೆದುಕೊಂಡು ಬರುವಂತೆ ಅವರಿಗೆ ಅಪ್ಪಣೆಕೊಡಬೇಕು.
ವಿಮೋಚನಕಾಂಡ 27 : 21 (IRVKN)
ದೇವದರ್ಶನ ಗುಡಾರದಲ್ಲಿ ಆಜ್ಞಾಶಾಸನಗಳ ಮಂಜೂಷದ ಮುಂದಿರುವ ಪರದೆಯ ಹೊರಗೆ ಆರೋನನೂ, ಅವನ ಮಕ್ಕಳೂ ಅದನ್ನು ಸಾಯಂಕಾಲದಿಂದ ಉದಯದವರೆಗೆ ಯೆಹೋವನ ಸನ್ನಿಧಿಯಲ್ಲಿ ಆ ದೀಪವು ಉರಿಯುತ್ತಿರುವಂತೆ ಸರಿಪಡಿಸುತ್ತಿರಬೇಕು. ಇಸ್ರಾಯೇಲ್ಯರು ಅವರ ಸಂತತಿಯವರು ಈ ನಿಯಮವನ್ನು ತಲತಲಾಂತರದವರೆಗೆ ಶಾಶ್ವತವಾಗಿ ಅನುಸರಿಸಬೇಕು. ಅದು ಅವರಿಗೆ ನಿತ್ಯ ನಿಯಮವಾಗಿರಬೇಕು.

1 2 3 4 5 6 7 8 9 10 11 12 13 14 15 16 17 18 19 20 21