ವಿಮೋಚನಕಾಂಡ 25 : 1 (IRVKN)
ದೇವದರ್ಶನದ ಗುಡಾರವೂ ಅದರ ಕಾಣಿಕೆಗಳೂ ಯೆಹೋವನು ಮೋಶೆಗೆ ಹೇಳಿದ್ದೇನೆಂದರೆ,
ವಿಮೋಚನಕಾಂಡ 25 : 2 (IRVKN)
“ಇಸ್ರಾಯೇಲರು ನನಗಾಗಿ ಕಾಣಿಕೆಯನ್ನು ತರಬೇಕೆಂದು ಅವರಿಗೆ ಹೇಳು. ಮನಃಪೂರ್ವಕವಾಗಿ ಕೊಡುವವರಿಂದಲೇ ಆ ಕಾಣಿಕೆಯನ್ನು ತೆಗೆದುಕೊಳ್ಳಬೇಕು.
ವಿಮೋಚನಕಾಂಡ 25 : 3 (IRVKN)
ನೀನು ಅವರಿಂದ ತೆಗೆದುಕೊಳ್ಳಬೇಕಾದ ಕಾಣಿಕೆಗಳು ಯಾವುವೆಂದರೆ, ಚಿನ್ನ, ಬೆಳ್ಳಿ, ಹಾಗೂ ತಾಮ್ರ ಎಂಬ ಲೋಹಗಳು,
ವಿಮೋಚನಕಾಂಡ 25 : 4 (IRVKN)
ನೀಲಿ, ನೇರಳೆ, ರಕ್ತಗೆಂಪು ವರ್ಣಗಳುಳ್ಳ ದಾರಗಳೂ, ನಾರುಬಟ್ಟೆಗಳೂ, ಆಡು ಕೂದಲಿನ ಉಣ್ಣೆಯ ಬಟ್ಟೆಗಳೂ,
ವಿಮೋಚನಕಾಂಡ 25 : 5 (IRVKN)
ಹದಮಾಡಿರುವ ಕೆಂಪುಬಣ್ಣದ ಟಗರಿನ ತೊಗಲುಗಳು, * ಕೆಲವು ಅನುವಾದಗಳಲ್ಲಿ ಕಡಲ ಹಂದಿ. ಕಡಲಪ್ರಾಣಿಯ ತೊಗಲುಗಳೂ, ಜಾಲೀಮರವೂ,
ವಿಮೋಚನಕಾಂಡ 25 : 6 (IRVKN)
ದೀಪಕ್ಕೆ ಬೇಕಾದ ಎಣ್ಣೆಯೂ, ಅಭಿಷೇಕ ತೈಲಕ್ಕೆ ಮತ್ತು ಪರಿಮಳಧೂಪಕ್ಕೆ ಬೇಕಾದ ಸುಗಂಧದ್ರವ್ಯಗಳೂ,
ವಿಮೋಚನಕಾಂಡ 25 : 7 (IRVKN)
ಮಹಾಯಾಜಕನ ಏಫೊದ್. ಕವಚಕ್ಕೆ ಹಾಗೂ ಎದೆಗೆ ಧರಿಸುವ ಪದಕದ ಮೇಲೆ ಇರಿಸಲು ಬೇಕಾಗಿರುವ ಗೋಮೇಧಕರತ್ನಗಳು ಹಾಗೂ ಇತರ ರತ್ನಗಳೂ ಇವೇ.
ವಿಮೋಚನಕಾಂಡ 25 : 8 (IRVKN)
“ನಾನು ಅವರ ಮಧ್ಯದಲ್ಲಿ ವಾಸಮಾಡುವುದಕ್ಕೆ ನನಗೆ ಒಂದು ಗುಡಾರವನ್ನು ಕಟ್ಟಿಸಬೇಕು.
ವಿಮೋಚನಕಾಂಡ 25 : 9 (IRVKN)
ನಾನು ನಿನಗೆ ತೋರಿಸುವ ಮಾದರಿಯಲ್ಲಿಯೇ ಗುಡಾರವನ್ನೂ ಅದರಲ್ಲಿರುವ ಎಲ್ಲಾ ಸಾಮಾನುಗಳನ್ನೂ ಮಾಡಿಸಬೇಕು.
ವಿಮೋಚನಕಾಂಡ 25 : 10 (IRVKN)
ಒಡಂಬಡಿಕೆಯ ಪೆಟ್ಟಿಗೆ “ನೀನು ಜಾಲೀಮರದಿಂದ ಒಂದು ಮಂಜೂಷವನ್ನು ಮಾಡಿಸಬೇಕು. ಅದು ಎರಡುವರೆ ಮೊಳ ಉದ್ದವು, ಒಂದುವರೆ ಮೊಳ ಅಗಲವು ಹಾಗೂ ಒಂದುವರೆ ಮೊಳ ಎತ್ತರವು ಆಗಿರಬೇಕು.
ವಿಮೋಚನಕಾಂಡ 25 : 11 (IRVKN)
ಚೊಕ್ಕ ಬಂಗಾರದ ತಗಡುಗಳನ್ನು ಅದರ ಹೊರಗಡೆಯೂ ಹಾಗೂ ಒಳಗಡೆಯೂ ಹೊದಿಸಬೇಕು. ಅದರ ಮೇಲೆ ಸುತ್ತಲೂ ಚಿನ್ನದ ತೋರಣ ಕಟ್ಟಿಸಬೇಕು.
ವಿಮೋಚನಕಾಂಡ 25 : 12 (IRVKN)
ನಾಲ್ಕು ಬಂಗಾರದ ಬಳೆಗಳನ್ನು ಅದರ ನಾಲ್ಕು ಮೂಲೆಗಳಲ್ಲಿರುವ ಒಂದೊಂದು ಕಾಲಿಗೂ ಎರಡೆರಡು ಬಳೆಗಳನ್ನು ಹಾಕಬೇಕು.
ವಿಮೋಚನಕಾಂಡ 25 : 13 (IRVKN)
ಆ ಮಂಜೂಷವನ್ನು ಹೊರುವುದಕ್ಕಾಗಿ ನೀನು ಜಾಲೀಮರದ ಕಂಬಗಳನ್ನು ಮಾಡಿಸಿ ಅವುಗಳಿಗೆ ಚಿನ್ನದ ತಗಡುಗಳನ್ನು ಹೊದಿಸಿ,
ವಿಮೋಚನಕಾಂಡ 25 : 14 (IRVKN)
ಮಂಜೂಷದ ಎರಡು ಕಡೆಗಳಲ್ಲಿರುವ ಬಳೆಗಳಲ್ಲಿ ಸೇರಿಸಬೇಕು.
ವಿಮೋಚನಕಾಂಡ 25 : 15 (IRVKN)
ಆ ಕಂಬಗಳನ್ನು ಮಂಜೂಷದ ಬಳೆಗಳಿಂದ ತೆಗೆಯದೇ ಅವುಗಳಲ್ಲಿಯೇ ಬಿಟ್ಟಿರಬೇಕು.
ವಿಮೋಚನಕಾಂಡ 25 : 16 (IRVKN)
ಆ ಮಂಜೂಷದಲ್ಲಿ ನಾನು ನಿನಗೆ ಕೊಡುವ ಆಜ್ಞಾಶಾಸನವನ್ನು ಇಡಬೇಕು.
ವಿಮೋಚನಕಾಂಡ 25 : 17 (IRVKN)
ಚೊಕ್ಕ ಬಂಗಾರದ ಮುಚ್ಚಳ. ಕೃಪಾಸನವನ್ನು ಮಾಡಿಸಬೇಕು. ಅದು ಎರಡುವರೆ ಮೊಳ ಉದ್ದವು, ಒಂದುವರೆ ಮೊಳ ಅಗಲವೂ ಆಗಿರಬೇಕು.
ವಿಮೋಚನಕಾಂಡ 25 : 18 (IRVKN)
ಕೃಪಾಸನದ ಎರಡು ಕೊನೆಗಳಲ್ಲಿ ಎರಡು ಬಂಗಾರದ ಕೆರೂಬಿಗಳನ್ನು ಕೆತ್ತನೆ ಕೆಲಸದಿಂದ ಮಾಡಿಸಬೇಕು.
ವಿಮೋಚನಕಾಂಡ 25 : 19 (IRVKN)
ಕೃಪಾಸನದ ಒಂದೊಂದು ಕೊನೆಯಲ್ಲಿ ಒಂದೊಂದು ಕೆರೂಬಿಯನ್ನು ಮಾಡಿಸಿ ಅವುಗಳನ್ನು ಕೃಪಾಸನಕ್ಕೆ ಜೋಡಿಸಬೇಕು.
ವಿಮೋಚನಕಾಂಡ 25 : 20 (IRVKN)
ಆ ಕೆರೂಬಿಗಳು ಮೇಲಕ್ಕೆ ರೆಕ್ಕೆಗಳನ್ನು ಚಾಚಿರುವಂತೆಯೂ ಮತ್ತು ಕೃಪಾಸನವನ್ನು ತಮ್ಮ ರೆಕ್ಕೆಗಳಿಂದ ಮುಚ್ಚಿರುವಂತೆಯೂ ಇರಿಸಬೇಕು. ಅವುಗಳ ಮುಖಗಳು ಎದುರುಬದುರಾಗಿ ಕೃಪಾಸನವನ್ನು ನೋಡುವಂತಿರಬೇಕು.
ವಿಮೋಚನಕಾಂಡ 25 : 21 (IRVKN)
ಆ ಕೃಪಾಸನವನ್ನು ಮಂಜೂಷದ ಮೇಲಿರಿಸಬೇಕು. ನಾನು ನಿನಗೆ ಕೊಡುವ ಆಜ್ಞಾಶಾಸನಗಳನ್ನು ಆ ಮಂಜೂಷದೊಳಗೆ ಇರಿಸಬೇಕು
ವಿಮೋಚನಕಾಂಡ 25 : 22 (IRVKN)
ಅಲ್ಲಿಯೇ ನಾನು ನಿನಗೆ ದರ್ಶನವನ್ನು ಕೊಡುವೆನು. ಕೃಪಾಸನದ ಮೇಲೆ ಆಜ್ಞಾಶಾಸನಗಳನ್ನು ಇಟ್ಟಿರುವ ಮಂಜೂಷದ ಮೇಲಣ ಎರಡು ಕೆರೂಬಿಗಳ ನಡುವೆಯೇ ನಾನು ಇದ್ದು ನಿನ್ನ ಸಂಗಡ ಮಾತನಾಡಿ ನೀನು ಇಸ್ರಾಯೇಲರಿಗೆ ಆಜ್ಞಾಪಿಸಬೇಕಾಗಿರುವ ಎಲ್ಲಾ ಸಂಗತಿಗಳನ್ನು ತಿಳಿಸುವೆನು.
ವಿಮೋಚನಕಾಂಡ 25 : 23 (IRVKN)
ರೊಟ್ಟಿಯ ಮೇಜು “ನೀನು ಜಾಲೀಮರದಿಂದ ಒಂದು ಮೇಜನ್ನು ಮಾಡಿಸಬೇಕು. ಅದು ಎರಡು ಮೊಳ ಉದ್ದವಾಗಿಯೂ, ಒಂದು ಮೊಳ ಅಗಲವಾಗಿಯೂ, ಒಂದುವರೆ ಮೊಳ ಎತ್ತರವಾಗಿಯೂ ಇರಬೇಕು.
ವಿಮೋಚನಕಾಂಡ 25 : 24 (IRVKN)
ಅದಕ್ಕೆ ಚೊಕ್ಕ ಬಂಗಾರದ ತಗಡುಗಳನ್ನು ಹೊದಿಸಿ, ಸುತ್ತಲೂ ಚಿನ್ನದ ತೋರಣ ಕಟ್ಟಿಸಬೇಕು.
ವಿಮೋಚನಕಾಂಡ 25 : 25 (IRVKN)
ಮೇಜಿನ ಸುತ್ತಲೂ ಅಂಗೈ ಅಗಲದ ಅಡ್ಡ ಪಟ್ಟಿಯನ್ನು ಮಾಡಿಸಿ ಅದಕ್ಕೂ ಚಿನ್ನದ ತೋರಣ ಕಟ್ಟಿಸಬೇಕು.
ವಿಮೋಚನಕಾಂಡ 25 : 26 (IRVKN)
ನಾಲ್ಕು ಚಿನ್ನದ ಬಳೆಗಳನ್ನು ಮಾಡಿಸಿ ಮೇಜಿನ ನಾಲ್ಕು ಕಾಲುಗಳಿಗೆ ಹಾಕಬೇಕು.
ವಿಮೋಚನಕಾಂಡ 25 : 27 (IRVKN)
ಆ ಬಳೆಗಳು ಅಡ್ಡಪಟ್ಟಿಗೆಗೆ ಅಂಟಿಕೊಂಡಿರಬೇಕು. ಮೇಜನ್ನು ಎತ್ತುವುದಕ್ಕಾಗಿ ಕೋಲುಗಳನ್ನು ಅವುಗಳಲ್ಲಿ ಸೇರಿಸಬೇಕು.
ವಿಮೋಚನಕಾಂಡ 25 : 28 (IRVKN)
ಆ ಕೋಲುಗಳನ್ನು ಜಾಲೀಮರದಿಂದ ಮಾಡಿಸಿ ಅವುಗಳಿಗೆ ಚಿನ್ನದ ತಗಡುಗಳನ್ನು ಹೊದಿಸಬೇಕು. ಅವುಗಳಿಂದಲೇ ಮೇಜನ್ನು ಎತ್ತಬೇಕು.
ವಿಮೋಚನಕಾಂಡ 25 : 29 (IRVKN)
ಮೇಜಿನ ಮೇಲಿಡಬೇಕಾದ ಹರಿವಾಣಗಳನ್ನು, ಧೂಪಾರತಿಗಳನ್ನು, ಹೂಜಿಗಳನ್ನು, ಪಾನದ್ರವ್ಯವನ್ನು ಅರ್ಪಿಸುವುದಕ್ಕೆ ಬೇಕಾದ ಬಟ್ಟಲುಗಳನ್ನು ಚೊಕ್ಕ ಬಂಗಾರದಿಂದಲೇ ಮಾಡಿಸಬೇಕು.
ವಿಮೋಚನಕಾಂಡ 25 : 30 (IRVKN)
ನೈವೇದ್ಯದ ರೊಟ್ಟಿಗಳು ಪ್ರತಿದಿನ ಆ ಮೇಜಿನ ಮೇಲೆ ನನ್ನ ಸಮ್ಮುಖದಲ್ಲಿಯೇ ಇಟ್ಟಿರಬೇಕು.
ವಿಮೋಚನಕಾಂಡ 25 : 31 (IRVKN)
ದೀಪ ಸ್ತಂಭ “ಚೊಕ್ಕ ಬಂಗಾರದ ದೀಪಸ್ತಂಭವನ್ನು ಮಾಡಿಸಬೇಕು. ಅದರ ಕೆಳಭಾಗವನ್ನು ಕಂಬವನ್ನೂ ನಕಾಸಿ ಕೆಲಸದಿಂದ ಮಾಡಿಸಬೇಕು. ಆ ದೀಪಸ್ತಂಭದ ಬುಡದಿಂದಲೇ ಅಖಂಡವಾಗಿ ಪುಷ್ಪದ ಗೊಂಚಲುಗಳು, ಅರಳಿದ ಪುಷ್ಪಗಳು ಮೊಗ್ಗುಗಳು ಅಲಂಕಾರವಾಗಿ ಕೆತ್ತಿರಬೇಕು.
ವಿಮೋಚನಕಾಂಡ 25 : 32 (IRVKN)
ಕಂಬದ ಒಂದೊಂದು ಪಾರ್ಶ್ವದಲ್ಲಿಯೂ ಮೂರು ಮೂರು ಕೊಂಬೆಗಳಂತೆ ಹಾಗೆ ಆರು ಕೊಂಬೆಗಳೂ ಇರಬೇಕು.
ವಿಮೋಚನಕಾಂಡ 25 : 33 (IRVKN)
ಪ್ರತಿಯೊಂದು ಕೊಂಬೆಗಳಲ್ಲಿ ಬಾದಾಮಿ ಹೂವುಗಳಂತಿರುವ ಮೂರು ಮೂರು ಹೂವುಗಳೂ ಮೊಗ್ಗುಗಳೂ ಇರಬೇಕು. ದೀಪಸ್ತಂಭದಿಂದ ಬರುವ ಆರು ಕೊಂಬೆಗಳನ್ನು ಹಾಗೆಯೇ ಮಾಡಿಸಬೇಕು.
ವಿಮೋಚನಕಾಂಡ 25 : 34 (IRVKN)
ದೀಪಸ್ತಂಭದ ಕಂಬದಲ್ಲಿ ಪುಷ್ಪಗುಚ್ಛಗಳೂ, ಪುಷ್ಪಗಳೂ, ಮೊಗ್ಗುಗಳು ಇರುವ ಬಾದಾಮಿ ಹೂವುಗಳಂತೆ ನಾಲ್ಕು ಪುಷ್ಪಾಲಂಕಾರಗಳೂ ಇರಬೇಕು.
ವಿಮೋಚನಕಾಂಡ 25 : 35 (IRVKN)
ಎರಡೆರಡು ಕೊಂಬೆಗಳು ಕವಲು ಒಡೆದಿರುವ ಸ್ಥಳಗಳಲ್ಲೆಲ್ಲಾ ಒಂದೊಂದು ಮೊಗ್ಗು ಇರಬೇಕು.
ವಿಮೋಚನಕಾಂಡ 25 : 36 (IRVKN)
ಪುಷ್ಪಪಾತ್ರೆಗಳೂ, ಕೊಂಬುಗಳೂ ಸಹಿತವಾದ ದೀಪಸ್ತಂಭವನ್ನೆಲ್ಲಾ ಒಟ್ಟಿಗೆ ಚೊಕ್ಕ ಬಂಗಾರದಿಂದ ನಕಾಸಿ ಕೆಲಸದಿಂದ ಮಾಡಿಸಬೇಕು.
ವಿಮೋಚನಕಾಂಡ 25 : 37 (IRVKN)
ಅದಕ್ಕೆ ಏಳು ಹಣತೆಗಳನ್ನು ಮಾಡಿಸಬೇಕು. ಆ ಹಣತೆಗಳ ಬೆಳಕು ಎದುರಿನಿಂದ ಬೀಳುವಂತೆ ಅವುಗಳನ್ನು ಹಚ್ಚಿರಬೇಕು.
ವಿಮೋಚನಕಾಂಡ 25 : 38 (IRVKN)
ದೀಪದ ಕುಡಿತೆಗೆಯುವ ಕತ್ತರಿಗಳೂ, ಕತ್ತರಿಸಿದ ಕುಡಿಗಳನ್ನು ಹಾಕುವ ಬಟ್ಟಲುಗಳನ್ನೂ ಚೊಕ್ಕ ಬಂಗಾರದಿಂದಲೇ ಮಾಡಿಸಬೇಕು.
ವಿಮೋಚನಕಾಂಡ 25 : 39 (IRVKN)
ದೀಪಸ್ತಂಭವೂ ಅದರ ಎಲ್ಲಾ ಉಪಕರಣಗಳೂ ಒಂದು § 35 ಕಿಲೋಗ್ರಾಂ. ತಲಾಂತು ಚೊಕ್ಕ ಬಂಗಾರವಾಗಿರಬೇಕು.
ವಿಮೋಚನಕಾಂಡ 25 : 40 (IRVKN)
ನೋಡು, ಬೆಟ್ಟದಲ್ಲಿ ನಾನು ನಿನಗೆ ತೋರಿಸಿದ ಮಾದರಿಯಲ್ಲಿಯೇ ಎಲ್ಲವನ್ನು ಎಚ್ಚರಿಕೆಯಿಂದ ಮಾಡಿಸಬೇಕು.”

1 2 3 4 5 6 7 8 9 10 11 12 13 14 15 16 17 18 19 20 21 22 23 24 25 26 27 28 29 30 31 32 33 34 35 36 37 38 39 40