ಎಫೆಸದವರಿಗೆ 6 : 1 (IRVKN)
ತಂದೆತಾಯಿಗಳೂ ಮಕ್ಕಳೂ * ಜ್ಞಾ. 1:8; 6:20; 23:22; ಕೊಲೊ 3:20: ಮಕ್ಕಳೇ, ನೀವು ಕರ್ತನಲ್ಲಿರುವವರಿಗೆ ತಕ್ಕ ಹಾಗೆ ನಿಮ್ಮ ತಂದೆತಾಯಿಗಳ ವಿಧೇಯರಾಗಿರಿ. ಇದು ನ್ಯಾಯವಾದದ್ದು.
ಎಫೆಸದವರಿಗೆ 6 : 2 (IRVKN)
ವಾಗ್ದಾನಸಹಿತವಾದ ಮೊದಲನೆಯ ಆಜ್ಞೆಯನ್ನು ಕೇಳಿರಿ, † ವಿಮೋ 20:12; ಧರ್ಮೋ 5:16: “ನಿನ್ನ ತಂದೆತಾಯಿಗಳನ್ನು ಗೌರವಿಸಬೇಕು,
ಎಫೆಸದವರಿಗೆ 6 : 3 (IRVKN)
ಗೌರವಿಸಿದರೆ ನಿನಗೆ ಶುಭವಾಗುವುದು, ನೀನು ಭೂಮಿಯ ಮೇಲೆ ಬಹುಕಾಲ ಬದುಕುವಿ.”
ಎಫೆಸದವರಿಗೆ 6 : 5 (IRVKN)
‡ ಆದಿ 18:19; ಧರ್ಮೋ 4:9; 6:7; 11:19; ಜ್ಞಾ. 19:18; 22:6; 29:17 ಇತ್ಯಾದಿ. ತಂದೆಗಳೇ, ನಿಮ್ಮ ಮಕ್ಕಳಿಗೆ ಕೋಪವನ್ನೆಬ್ಬಿಸದೆ, ಕರ್ತನಿಗೆ ಮೆಚ್ಚಿಗೆಯಾಗುವ ರೀತಿಯಲ್ಲಿ ಅವರನ್ನು ಶಿಸ್ತಿನಲ್ಲಿಯೂ ಉಪದೇಶದಲ್ಲಿಯೂ ಸಾಕಿ ಸಲಹಿರಿ. ಯಜಮಾನರೂ ದಾಸರೂ § ಅಥವಾ. ಗುಲಾಮರೇ, ದಾಸರೇ. ಕೊಲೊ 3:22; ತಿಮೊ. 6:1; 1 ಪೇತ್ರ. 2:18: ದಾಸರೇ, ಈ ಲೋಕದಲ್ಲಿ ನಿಮಗೆ ಯಜಮಾನರಾಗಿರುವವರಿಗೆ * ಎಫೆ 5:22: ಕ್ರಿಸ್ತನಿಗೆ ವಿಧೇಯರಾಗುವ ಹಾಗೆಯೇ ಮನೋಭೀತಿಯಿಂದ ನಡುಗುವವರಾಗಿಯೂ ಸರಳಹೃದಯರಾಗಿಯೂ ವಿಧೇಯರಾಗಿರಿ.
ಎಫೆಸದವರಿಗೆ 6 : 6 (IRVKN)
[† ಗಲಾ. 1: 10 ]ಮನುಷ್ಯರನ್ನು ಮೆಚ್ಚಿಸುವವರಂತೆ ತೋರಿಕೆಗೆ ಯಜಮಾನರು ನೋಡುತ್ತಿರುವಾಗ ಮಾತ್ರ ಸೇವೆಮಾಡದೇ, ಕ್ರಿಸ್ತನ ದಾಸರಿಗೆ ತಕ್ಕ ಹಾಗೆ ದೇವರ ಚಿತ್ತವನ್ನು ಮನಃಪೂರ್ವಕವಾಗಿ ನಡಿಸಿರಿ.
ಎಫೆಸದವರಿಗೆ 6 : 7 (IRVKN)
ಮನುಷ್ಯರಿಗೋಸ್ಕರವಲ್ಲ, ಕರ್ತನಿಗೋಸ್ಕರ ಸೇವೆಮಾಡುತ್ತೇವೆಂದು ಮನಃಪೂರ್ವಕವಾಗಿ ಸೇವೆಮಾಡಿರಿ.
ಎಫೆಸದವರಿಗೆ 6 : 8 (IRVKN)
ಯಾಕೆಂದರೆ [‡ ಗಲಾ. 3: 28 ಕೊಲೊ 3: 11. ]ಒಬ್ಬನು ದಾಸನಾಗಲಿ ಸ್ವತಂತ್ರನಾಗಲಿ § ಕೀರ್ತ 62: 12. ತಾನು ಯಾವ ಸತ್ಕಾರ್ಯವನ್ನು ಮಾಡುತ್ತಾನೋ ಅದರ ಪ್ರತಿಫಲವನ್ನು ಕರ್ತನಿಂದ ಹೊಂದುವನೆಂಬುದನ್ನು ನೀವು ತಿಳಿದವರಾಗಿದ್ದೀರಿ.
ಎಫೆಸದವರಿಗೆ 6 : 10 (IRVKN)
ಯಜಮಾನರೇ, ನಿಮ್ಮ ದಾಸರ ವಿಷಯದಲ್ಲಿ ಅದೇ ರೀತಿಯಾಗಿ ನಡೆದುಕೊಳ್ಳಿರಿ. [* ಯೋಹಾ 13: 13 ಯೋಬ. 31:13- 15. ]ಪರಲೋಕದಲ್ಲಿ ನಿಮಗೂ ಅವರಿಗೂ ಯಜಮಾನನಾಗಿರುವಾತನು ಇದ್ದಾನೆಂತಲೂ † ರೋಮಾ. 2:11; ಗಲಾ. 2:6: ಆತನಲ್ಲಿ ಪಕ್ಷಪಾತವಿಲ್ಲವೆಂತಲೂ ತಿಳಿದು ನಿಮ್ಮ ದಾಸರನ್ನು ಬೆದರಿಸುವ ಪದ್ಧತಿಯನ್ನು ಬಿಟ್ಟುಬಿಡಿರಿ. ದೇವರ ಸರ್ವಾಯುಧಗಳು ಕಡೆಯದಾಗಿ, ನೀವು ‡ 2 ತಿಮೊ. 2:1; 1 ಯೊಹಾ. 2:14; ಎಫೆ 3:16: ಕರ್ತನಲ್ಲಿಯೂ § ಎಫೆ 1:19: ಆತನ ಅತ್ಯಧಿಕವಾದ ಶಕ್ತಿಯಲ್ಲಿಯೂ ಬಲಗೊಳ್ಳಿರಿ.
ಎಫೆಸದವರಿಗೆ 6 : 11 (IRVKN)
ಸೈತಾನನ ತಂತ್ರೋಪಾಯಗಳನ್ನು ನೀವು ಎದುರಿಸಿ ನಿಲ್ಲುವುದಕ್ಕೆ ಶಕ್ತರಾಗುವಂತೆ ದೇವರು ದಯಪಾಲಿಸುವ * ಎಫೆ 6:13; 2 ಕೊರಿ 10:4: ಸರ್ವಾಯುಧಗಳನ್ನು [† ವ. 14 ರೋಮಾ. 13:12: ]ಧರಿಸಿಕೊಳ್ಳಿರಿ.
ಎಫೆಸದವರಿಗೆ 6 : 12 (IRVKN)
ನಮಗೆ ಹೋರಾಟವಿರುವುದು ಮನುಷ್ಯಮಾತ್ರದವರ ಸಂಗಡವಲ್ಲ. ‡ ಎಫೆ 1:21: ರಾಜತ್ವಗಳ ಮೇಲೆಯೂ, ಅಧಿಕಾರಿಗಳ ಮೇಲೆಯೂ, § ಲೂಕ 22:53; ಕೊಲೊ 1:13: ಈ ಅಂಧಕಾರದ * ಎಫೆ 2:2: ಲೋಕಾಧಿಪತಿಗಳ ಮೇಲೆಯೂ, † ಎಫೆ 3:10: ಆಕಾಶ ಮಂಡಲಗಳಲ್ಲಿರುವ ದುರಾತ್ಮಗಳ ಸೇನೆಯ ಮೇಲೆಯೂ ನಾವು ಹೋರಾಡುವವರಾಗಿದ್ದೇವೆ.
ಎಫೆಸದವರಿಗೆ 6 : 13 (IRVKN)
ಆದ್ದರಿಂದ ಆ ದುಷ್ಟ ದಿನದಲ್ಲಿ ವೈರಿಗಳನ್ನು ಎದುರಿಸುವುದಕ್ಕೂ ಮಾಡಬೇಕಾದದ್ದೆಲ್ಲವನ್ನು ಮಾಡಿ ದೃಢವಾಗಿ ನಿಲ್ಲುವುದಕ್ಕೂ ಶಕ್ತರಾಗುವಂತೆ ದೇವರು ದಯಪಾಲಿಸುವ ಸರ್ವಾಯುಧಗಳನ್ನು ಧರಿಸಿಕೊಳ್ಳಿರಿ.
ಎಫೆಸದವರಿಗೆ 6 : 14 (IRVKN)
‡ 1 ಪೇತ್ರ. 1:13; ಯೆಶಾ 11:5 ಸತ್ಯವೆಂಬ ನಡುಕಟ್ಟನ್ನು ಸೊಂಟಕ್ಕೆ ಕಟ್ಟಿಕೊಂಡು, § ಯೆಶಾ 59:17; 1 ಥೆಸ. 5:8; ಯೆಶಾ 61:10; 2 ಕೊರಿ 6:7: ನೀತಿಯೆಂಬ ಎದೆಕವಚವನ್ನು ಧರಿಸಿಕೊಂಡು,
ಎಫೆಸದವರಿಗೆ 6 : 15 (IRVKN)
* ಯೆಶಾ 52:7; ರೋಮಾ. 10:15: ಸಮಾಧಾನದ ಸುವಾರ್ತೆಯನ್ನು ಪ್ರಚುರಪಡಿಸುವುದಕ್ಕೆ ಸಿದ್ಧ ಮನಸ್ಸೆಂಬ ಕೆರಗಳನ್ನು ಮೆಟ್ಟಿಕೊಂಡು ನಿಲ್ಲಿರಿ.
ಎಫೆಸದವರಿಗೆ 6 : 16 (IRVKN)
ಎಲ್ಲಾದಕ್ಕಿಂತ ಹೆಚ್ಚಾಗಿ † 1 ಯೊಹಾ. 5:4: ನಂಬಿಕೆಯೆಂಬ ಗುರಾಣಿಯನ್ನು ಹಿಡಿದುಕೊಳ್ಳಿರಿ. ಅದರಿಂದ ನೀವು ‡ ಮತ್ತಾ 13:19; 1 ಯೊಹಾ. 2:14: ಕೆಡುಕನ ಅಗ್ನಿಬಾಣಗಳನ್ನೆಲ್ಲಾ ನಂದಿಸುವುದಕ್ಕೆ ಶಕ್ತರಾಗುವಿರಿ.
ಎಫೆಸದವರಿಗೆ 6 : 17 (IRVKN)
ಇದಲ್ಲದೆ § ಯೆಶಾ 59:17; 1 ಥೆಸ. 5:8: ರಕ್ಷಣೆಯೆಂಬ ಶಿರಸ್ತ್ರಾಣವನ್ನು ಇಟ್ಟುಕೊಂಡು * ಇಬ್ರಿ. 4:12; ಯೆಶಾ 11:4; 49:2: ಪವಿತ್ರಾತ್ಮನು ಕೊಡುವ ದೇವರ ವಾಕ್ಯವೆಂಬ ಕತ್ತಿಯನ್ನು ಹಿಡಿದುಕೊಳ್ಳಿರಿ.
ಎಫೆಸದವರಿಗೆ 6 : 18 (IRVKN)
ನೀವು † ಯೂದ. 20: ಪವಿತ್ರಾತ್ಮಪ್ರೇರಿತರಾಗಿ ‡ ಲೂಕ 18:1: ಎಲ್ಲಾ ಸಮಯಗಳಲ್ಲಿ § ಕೊಲೊ 4:2-4: ಸಕಲವಿಧವಾದ ಪ್ರಾರ್ಥನೆಯಿಂದಲೂ ವಿಜ್ಞಾಪನೆಗಳಿಂದಲೂ ದೇವರನ್ನು ಪ್ರಾರ್ಥಿಸಿರಿ. ಇದರಲ್ಲಿ ಪೂರ್ಣ ಸ್ಥಿರಚಿತ್ತರಾಗಿದ್ದು ದೇವಜನರೆಲ್ಲರ ವಿಷಯದಲ್ಲಿ * 1 ತಿಮೊ. 2:1: ವಿಜ್ಞಾಪನೆಮಾಡುತ್ತಾ ಮಾರ್ಕ 13:33: ಎಚ್ಚರವಾಗಿರಿ. ನನಗಾಗಿಯೂ ಪ್ರಾರ್ಥನೆ ಮಾಡಿರಿ.
ಎಫೆಸದವರಿಗೆ 6 : 19 (IRVKN)
ನಾನು ಮಾತನಾಡಲು ಬಾಯಿ ತೆರೆಯುವಾಗ ಪೂರ್ವಕಾಲದಲ್ಲಿ ಗುಪ್ತವಾಗಿದ್ದ [‡ ಎಫೆ 4: 3 ]ಸುವಾರ್ತಾಸತ್ಯಗಳನ್ನು ಭಯವಿಲ್ಲದೆ ತಿಳಿಸುವುದಕ್ಕೆ ಬೇಕಾದ ಮಾತುಗಳನ್ನು ದೇವರು § ಕೊಲೊ 4:3; 1 ಥೆಸ. 5:25; 2 ಥೆಸ. 3: 1. ನನಗೆ ಅನುಗ್ರಹಿಸಬೇಕೆಂದು ಪ್ರಾರ್ಥಿಸಿರಿ.
ಎಫೆಸದವರಿಗೆ 6 : 20 (IRVKN)
ಆ ಸುವಾರ್ತೆಯ ನಿಮಿತ್ತವಾಗಿ [* 2 ಕೊರಿ 5: 20 ]ರಾಯಭಾರಿಯಾದ ನಾನು ಸೆರೆಮನೆಯಲ್ಲಿ ಬಿದ್ದಿದ್ದೇನಲ್ಲಾ. ಅದರ ವಿಷಯದಲ್ಲಿ ನಾನು ಮಾತನಾಡಬೇಕಾದ [† ಅ. ಕೃ. 28: 20 ]ಹಾಗೆಯೇ ಧೈರ್ಯವಾಗಿ ನಾನು ಮಾತನಾಡುವಂತೆ ನನಗಾಗಿ ಬೇಡಿಕೊಳ್ಳಿರಿ.
ಎಫೆಸದವರಿಗೆ 6 : 21 (IRVKN)
ಕಡೆ ಮಾತುಗಳು ‡ ಕೊಲೊ 4:7-9: ನನ್ನ ವಿಷಯಗಳು ನನ್ನ ಕೆಲಸಕಾರ್ಯಗಳು ನಿಮಗೆ ಗೊತ್ತಾಗುವ ಹಾಗೆ ಪ್ರಿಯ ಸಹೋದರನೂ ಕರ್ತನಲ್ಲಿ ನಂಬಿಗಸ್ತ ಸೇವಕನಾಗಿರುವ [§ ಅ. ಕೃ. 20: 4 2 ತಿಮೊ. 4:12; ತೀತ. 3:12: ]ತುಖಿಕನು ನಿಮಗೆ ಎಲ್ಲವನ್ನೂ ತಿಳಿಸಿಕೊಡುವನು.
ಎಫೆಸದವರಿಗೆ 6 : 22 (IRVKN)
ನೀವು ನಮ್ಮ ಸಂಗತಿಗಳನ್ನು ತಿಳಿದುಕೊಳ್ಳುವಂತೆಯೂ, ಅವನು ನಿಮ್ಮ ಹೃದಯಗಳನ್ನು ಸಂತೈಸುವಂತೆಯೂ ಅವನನ್ನು ನಿಮ್ಮ ಬಳಿಗೆ ಕಳುಹಿಸಿದ್ದೇನೆ.
ಎಫೆಸದವರಿಗೆ 6 : 23 (IRVKN)
ತಂದೆಯಾದ ದೇವರಿಂದಲೂ ಕರ್ತನಾದ ಯೇಸು ಕ್ರಿಸ್ತನಿಂದಲೂ * ಗಲಾ. 6:16; ಥೆಸ. 3:16: ಶಾಂತಿಯೂ, ನಂಬಿಕೆಯಿಂದ ಕೂಡಿದ ಪ್ರೀತಿಯೂ ಸಹೋದರರೆಲ್ಲರಿಗೆ ಉಂಟಾಗಲಿ.
ಎಫೆಸದವರಿಗೆ 6 : 24 (IRVKN)
ನಮ್ಮ ಕರ್ತನಾದ ಯೇಸು ಕ್ರಿಸ್ತನನ್ನು ನಿರಂತರವಾಗಿ † 1 ಕೊರಿ 16:22 ಪ್ರೀತಿಸುವವರೆಲ್ಲರ ಮೇಲೆ ದೇವರ ಕೃಪೆಯು ಇರಲಿ.
❮
❯
1
2
3
4
5
6
7
8
9
10
11
12
13
14
15
16
17
18
19
20
21
22
23
24