ಎಫೆಸದವರಿಗೆ 4 : 1 (IRVKN)
ಕ್ರಿಸ್ತನ ದೇಹದಲ್ಲಿನ ಐಕ್ಯತೆ ನೀವು ದೇವರಿಂದ * ರೋಮಾ. 8:28: ಕರೆಯಲ್ಪಟ್ಟವರಾದ ಕಾರಣ ಆ ಕರೆಗೆ † ಕೊಲೊ 2:6; 1 ಥೆಸ. 2:12; ಫಿಲಿ. 1:27: ಯೋಗ್ಯರಾಗಿ ಜೀವಿಸಬೇಕೆಂದು, ಕರ್ತನ ಸೇವೆಯಲ್ಲಿ ‡ ಎಫೆ 3:1: ಸೆರೆಯವನಾದ ನಾನು ನಿಮ್ಮನ್ನು ಬೇಡಿಕೊಳ್ಳುತ್ತೇನೆ.
ಎಫೆಸದವರಿಗೆ 4 : 2 (IRVKN)
ನೀವು ಪೂರ್ಣ [§ ಫಿಲಿ. 2:3; ಕೊಲೊ 3:12; 1 ಪೇತ್ರ. 3: 5 ]ವಿನಯ, ಸಾತ್ವಿಕತ್ವಗಳಿಂದಲೂ * ಕೊಲೊ 1:11: ದೀರ್ಘಶಾಂತಿಯಿಂದಲೂ ಕೂಡಿದವರಾಗಿ, † ಕೊಲೊ 3:13: ಪ್ರೀತಿಯಿಂದ ಒಬ್ಬರನ್ನೊಬ್ಬರು ಸಹಿಸಿಕೊಳ್ಳಿರಿ.
ಎಫೆಸದವರಿಗೆ 4 : 3 (IRVKN)
ಕೊಲೊ 3:14,15: ಸಮಾಧಾನವೆಂಬ ಬಂಧನದಿಂದ ಕಟ್ಟಲ್ಪಟ್ಟವರಾಗಿದ್ದು ಪವಿತ್ರಾತ್ಮನಿಂದುಂಟಾಗುವ ಐಕ್ಯವನ್ನು ಕಾಪಾಡಿಕೊಳ್ಳುವುದಕ್ಕೆ ಆಸಕ್ತರಾಗಿರಿ.
ಎಫೆಸದವರಿಗೆ 4 : 4 (IRVKN)
ನೀವು ಕರೆಯಲ್ಪಟ್ಟಾಗ § ಎಫೆ 1:18: ಒಂದೇ ನಿರೀಕ್ಷೆಗಾಗಿ ಕರೆಯಲ್ಪಟ್ಟವರಂತೆಯೇ, * ಎಫೆ 2:16: ನೀವೆಲ್ಲರೂ ಒಂದೇ ದೇಹಕ್ಕೆ ಸೇರಿದವರು, † ಎಫೆ 2:18: ಒಬ್ಬನೇ ಆತ್ಮನನ್ನು ಹೊಂದಿದವರು,
ಎಫೆಸದವರಿಗೆ 4 : 5 (IRVKN)
ನಿಮ್ಮೆಲ್ಲರಿಗೂ ಜೆಕ. 14:9; 1 ಕೊರಿ 8:6: ಕರ್ತನು ಒಬ್ಬನೇ, § ಎಫೆ 4:13; ಯೂದ. 3: ನಂಬಿಕೆಯು ಒಂದೇ, * ಗಲಾ. 3:27,28: ದೀಕ್ಷಾಸ್ನಾನ ಒಂದೇ,
ಎಫೆಸದವರಿಗೆ 4 : 6 (IRVKN)
1 ಕೊರಿ 12:5,6: ಎಲ್ಲರಿಗೂ ತಂದೆಯಾಗಿರುವ ದೇವರು ಒಬ್ಬನೇ. ‡ ರೋಮಾ. 9:5: ಆತನು ಎಲ್ಲರ ಮೇಲಿರುವವನೂ, ಎಲ್ಲರ ಮುಖಾಂತರ ಕಾರ್ಯ ನಡಿಸುವವನೂ, ಎಲ್ಲರಲ್ಲಿ ವಾಸಿಸುವವನೂ ಆಗಿದ್ದಾನೆ.
ಎಫೆಸದವರಿಗೆ 4 : 7 (IRVKN)
ಆದರೆ § ರೋಮಾ. 12:3; ಎಫೆ 4:16; 1 ಕೊರಿ 12:7; ಮತ್ತಾ 25 15: ಕ್ರಿಸ್ತನ ವರದ ಅಳತೆಯ ಪ್ರಕಾರವೇ ಪ್ರತಿಯೊಬ್ಬರಿಗೆ ಕೃಪಾವರವು ಕೊಡಲ್ಪಟ್ಟಿದೆ.
ಎಫೆಸದವರಿಗೆ 4 : 8 (IRVKN)
ಆದ್ದರಿಂದ ದೇವರವಾಕ್ಯದಲ್ಲಿ ಹೀಗೆ ಹೇಳಿದೆ, * ಕೀರ್ತ 68:18: “ಆತನು ಉನ್ನತ ಸ್ಥಾನಕ್ಕೆ ಏರಿಹೋದಾಗ ನ್ಯಾಯ 5:12; ಕೊಲೊ 2:15: ತಾನು ಸೆರೆಯಾಳುಗಳನ್ನು ಸೆರೆಹಿಡಿದುಕೊಂಡು ಹೋಗಿ ಮನುಷ್ಯರಿಗೆ ವರಗಳನ್ನು ಕೊಟ್ಟನು.”
ಎಫೆಸದವರಿಗೆ 4 : 9 (IRVKN)
ಯೋಹಾ 3:13: “ಏರಿಹೋದನೆಂದು” ಹೇಳಿದ್ದರ ಅರ್ಥವೇನು? ಭೂಮಿಯ ಅಧೋಭಾಗಕ್ಕೆ ಇಳಿದಿದ್ದನೆಂತಲೂ ಹೇಳಿದ ಹಾಗಾಯಿತಲ್ಲಾ?
ಎಫೆಸದವರಿಗೆ 4 : 10 (IRVKN)
ಇಳಿದು ಬಂದಾತನು, § ಎಫೆ 1:23: ಸಮಸ್ತವನ್ನು ತುಂಬುವುದಕ್ಕಾಗಿ ಮೇಲಣ * ಇಬ್ರಿ. 4:14; 7:26; 9:24: ಎಲ್ಲಾ ಲೋಕಗಳಿಗಿಂತಲೂ ಉನ್ನತಕ್ಕೆ ಏರಿಹೋದವನು ಆಗಿದ್ದಾನೆ.
ಎಫೆಸದವರಿಗೆ 4 : 11 (IRVKN)
ಆತನು 1 ಕೊರಿ 12:28: ಕೆಲವರನ್ನು ಅಪೊಸ್ತಲರನ್ನಾಗಿಯೂ, ಕೆಲವರನ್ನು ಪ್ರವಾದಿಗಳನ್ನಾಗಿಯೂ, ‡ ಅ. ಕೃ. 21:8; 2 ತಿಮೊ. 4:5: ಕೆಲವರನ್ನು ಸುವಾರ್ತಿಕರನ್ನಾಗಿಯೂ, ಕೆಲವರನ್ನು § ಯೆರೆ 3:15; ಅ. ಕೃ 20:28: ಸಭಾಪಾಲಕರನ್ನಾಗಿಯೂ, ಬೋಧಕರನ್ನಾಗಿಯೂ ನೇಮಿಸಿದನು.
ಎಫೆಸದವರಿಗೆ 4 : 12 (IRVKN)
ನಾವೆಲ್ಲರೂ ನಂಬಿಕೆಯಿಂದಲೂ ದೇವಕುಮಾರನ ವಿಷಯವಾದ ಜ್ಞಾನದಿಂದಲೂ ಉಂಟಾಗುವ ಐಕ್ಯತೆಯನ್ನು ಹೊಂದಿ, ಪರಿಪಕ್ವತೆಯನ್ನು ಪಡೆದು,* ಎಫೆ 1:23: ಕ್ರಿಸ್ತನ ಪರಿಪೂರ್ಣತೆಯ ಮಟ್ಟವನ್ನು ತಲುಪುವ ತನಕ,
ಎಫೆಸದವರಿಗೆ 4 : 13 (IRVKN)
ದೇವಜನರನ್ನು ದೇವರ ಸೇವೆಗೆ ಸಿದ್ಧಗೊಳಿಸುವುದಕ್ಕೂ, 1 ಕೊರಿ 12:27; ಎಫೆ 4:16,29: ಕ್ರಿಸ್ತನ ದೇಹವೆಂಬ ಸಭೆಯು ಅಭಿವೃದ್ಧಿಯಾಗುವುದಕ್ಕೋಸ್ಕರವೂ ಆತನು ಇವರನ್ನು ನೇಮಿಸಿದನು.
ಎಫೆಸದವರಿಗೆ 4 : 14 (IRVKN)
ಆದ್ದರಿಂದ ನಾವು ಇನ್ನು ಮೇಲೆ ಕೂಸುಗಳಾಗಿರದೇ, ದುರ್ಜನರ ವಂಚನೆಗಳಿಗೂ, ಕುಯುಕ್ತಿಗೂ ಒಳಬಿದ್ದು, ನಾನಾ ಉಪದೇಶಗಳಿಂದ ಕಂಗೆಟ್ಟು [‡ ಮತ್ತಾ 11:7; ಇಬ್ರಿ 13:9; ಯಾಕೋಬ. 1:6; ಯೂದ. 12 ]ಗಾಳಿಯಿಂದ ಅತ್ತಿತ್ತ ಓಲಾಡುವವರ ಹಾಗಿರದೇ,
ಎಫೆಸದವರಿಗೆ 4 : 15 (IRVKN)
[§ 1 ಯೋಹಾ 3: 18 ]ಪ್ರೀತಿಯಲ್ಲಿ ಸತ್ಯವನ್ನು ಮಾತನಾಡುತ್ತಾ * ಎಫೆ 2:21 ಎಲ್ಲಾ ವಿಷಯಗಳಲ್ಲಿಯೂ † ಎಫೆ 1:22: ತಲೆಯಾಗಿರುವ ಕ್ರಿಸ್ತನಲ್ಲಿ ಬೆಳೆಯುವವರಾಗಿರೋಣ.
ಎಫೆಸದವರಿಗೆ 4 : 16 (IRVKN)
ಕೊಲೊ 2:19: ದೇಹವೆಲ್ಲಾ ಆತನ ಮುಖಾಂತರ ಪ್ರತಿ ಕೀಲಿನಿಂದ ಬಿಗಿಯಾಗಿ ಜೋಡಿಸಲ್ಪಟ್ಟು ಐಕ್ಯವಾಗಿದ್ದು, § ವ. 7 ನೋಡಿರಿ ಪ್ರತಿಯೊಂದು ಅಂಗವು ತನ್ನ ಕೆಲಸವನ್ನು ಮಾಡುವುದರಿಂದ ದೇಹವು ಪ್ರೀತಿಯಲ್ಲಿ ಬೆಳೆದು ಕ್ಷೇಮಾಭಿವೃದ್ಧಿಯನ್ನು ಹೊಂದುತ್ತದೆ.
ಎಫೆಸದವರಿಗೆ 4 : 17 (IRVKN)
ಕ್ರಿಸ್ತನಲ್ಲಿ ಹೊಸ ಜೀವನ
ಕೊಲೊ 3:5-17
ಆದ್ದರಿಂದ ನಾನು ಕರ್ತನಲ್ಲಿ ಹೇಳುವುದೇನಂದರೆ * ಎಫೆ 4:22; 2:1-3 ಕೊಲೊ 3:7; 1 ಪೇತ್ರ. 4:3: ಅನ್ಯಜನರು ನಡೆದುಕೊಳ್ಳುವ ಹಾಗೆ ನೀವು ಇನ್ನು ಮುಂದೆ ನಡೆದುಕೊಳ್ಳಬಾರದು. † ರೋಮಾ. 1:21; ಕೊಲೊ 2:18: ಅವರು ನಿಷ್ಪ್ರಯೋಜನವಾದ ಬುದ್ಧಿಯುಳ್ಳವರಾಗಿ ನಡೆದುಕೊಳ್ಳುತ್ತಾರೆ.
ಎಫೆಸದವರಿಗೆ 4 : 18 (IRVKN)
ರೋಮಾ. 11:10: ಅವರ ಮನಸ್ಸಿಗೆ ಕತ್ತಲು ಕವಿದಿದೆ, ಅವರು § ಮಾರ್ಕ 3:5: ತಮ್ಮ ಕಠಿಣವಾದ ಹೃದಯದ ನಿಮಿತ್ತದಿಂದಲೂ ಮತ್ತು ತಮ್ಮಲ್ಲಿರುವ ಅಜ್ಞಾನದ ನಿಮಿತ್ತದಿಂದಲೂ ದೇವರಿಂದಾಗುವ ಜೀವಕ್ಕೆ * ಎಫೆ 2:12: ದೂರವಾಗಿದ್ದಾರೆ.
ಎಫೆಸದವರಿಗೆ 4 : 19 (IRVKN)
ಅವರು ಲಜ್ಜೆಗೆಟ್ಟವರಾಗಿ ರೋಮಾ. 1:24,26,28: ತಮ್ಮನ್ನು ಬಂಡುತನಕ್ಕೆ ಒಪ್ಪಿಸಿಕೊಟ್ಟು ಎಲ್ಲಾ ವಿಧವಾದ ಅಶುದ್ಧ ಕೃತ್ಯಗಳನ್ನು ಅತ್ಯಾಶೆಯಿಂದ ನಡೆಸುವವರಾಗಿದ್ದಾರೆ.
ಎಫೆಸದವರಿಗೆ 4 : 20 (IRVKN)
ನೀವಾದರೋ ಮೂಲ, ಕ್ರಿಸ್ತನನ್ನು. ಮತ್ತಾ 11:29: ಕ್ರಿಸ್ತನ ಬೋಧನೆಯನ್ನು ಅಂಥದೆಂದು ಕಲಿತುಕೊಳ್ಳಲಿಲ್ಲ.
ಎಫೆಸದವರಿಗೆ 4 : 21 (IRVKN)
ಆತನಿಂದಲೇ ಕೇಳಿ § ಕೊಲೊ 2:7: ಆತನಲ್ಲಿಯೇ ಉಪದೇಶವನ್ನು ಹೊಂದಿದ್ದೀರಲ್ಲಾ.
ಎಫೆಸದವರಿಗೆ 4 : 22 (IRVKN)
ಯೇಸುವಿನಲ್ಲಿರುವ ಸತ್ಯೋಪದೇಶವು ಯಾವುದೆಂದರೆ * ಕೊಲೊ 3:8; ಇಬ್ರಿ. 12:1; ಯಾಕೋಬ. 1:21; 1 ಪೇತ್ರ. 2:1: ನೀವು ನಿಮ್ಮ ಹಿಂದಿನ ನಡತೆಯನ್ನು ಅನುಸರಿಸದೇ † ರೋಮಾ. 6:6; ಕೊಲೊ 3:9: ಪೂರ್ವಸ್ವಭಾವವನ್ನು ತೆಗೆದುಹಾಕಿಬಿಡಬೇಕು. ಅದು ಮೋಸಕರವಾದ ದುರಾಶೆಗಳಿಂದ ಕೆಟ್ಟುಹೋಗುವಂಥದ್ದು.
ಎಫೆಸದವರಿಗೆ 4 : 23 (IRVKN)
ರೋಮಾ. 12:2: ನೀವು ನಿಮ್ಮ ಹೃನ್ಮನಗಳನ್ನು ನವೀಕರಿಸಿ, § ರೋಮಾ. 16:4: ನೂತನ ಸ್ವಭಾವವನ್ನು ಧರಿಸಿಕೊಳ್ಳಿರಿ.
ಎಫೆಸದವರಿಗೆ 4 : 24 (IRVKN)
ಆ ಸ್ವಭಾವವು ದೇವರ ಹೋಲಿಕೆಯ ಮೇರೆಗೆ * ಎಫೆ 2:10: ಸತ್ಯಕ್ಕನುಗುಣವಾಗಿ ನೀತಿಯುಳ್ಳದ್ದಾಗಿಯೂ, ಪರಿಶುದ್ಧತೆಯುಳ್ಳದ್ದಾಗಿಯೂ ನಿರ್ಮಿಸಲ್ಪಟ್ಟಿದೆ.
ಎಫೆಸದವರಿಗೆ 4 : 25 (IRVKN)
ಆದಕಾರಣ ಸುಳ್ಳಾಡುವುದನ್ನು ಬಿಟ್ಟುಬಿಟ್ಟು ಜೆಕ. 8:16; ಕೊಲೊ 3:9: “ಪ್ರತಿಯೊಬ್ಬನು ತನ್ನ ನೆರೆಯವನ ಸಂಗಡ ಸತ್ಯವನ್ನೇ ನುಡಿಯಲಿ.” ಏಕೆಂದರೆ ‡ ರೋಮಾ. 12:5: ನಾವು ಪ್ರತಿಯೊಬ್ಬರೂ ಒಂದೇ ದೇಹದ ಅಂಗಗಳಾಗಿದ್ದೇವಲ್ಲಾ.
ಎಫೆಸದವರಿಗೆ 4 : 26 (IRVKN)
[§ ಕೀರ್ತ 4: 4 ]“ಕೋಪಗೊಳ್ಳಬೇಕಾಗಿ ಬಂದರೂ ಪಾಪಮಾಡಬೇಡಿರಿ,” ಸೂರ್ಯನು ಮುಳುಗುವುದಕ್ಕಿಂತ ಮೊದಲೇ ನಿಮ್ಮ ಸಿಟ್ಟು ತೀರಿಹೋಗಲಿ.
ಎಫೆಸದವರಿಗೆ 4 : 27 (IRVKN)
* ಯಾಕೋಬ. 4:7: ಸೈತಾನನಿಗೆ ಅವಕಾಶಕೊಡಬೇಡಿರಿ.
ಎಫೆಸದವರಿಗೆ 4 : 28 (IRVKN)
ಕಳವು ಮಾಡುವವನು ಇನ್ನು ಮುಂದೆ ಕಳವು ಮಾಡದೇ ಸ್ವಂತ 1 ಥೆಸ. 4:11; 2 ಥೆಸ. 3:8, 11: ಕೈಯಿಂದ ಒಳ್ಳೇ ಉದ್ಯೋಗವನ್ನು ಮಾಡಿ ದುಡಿಯಲಿ. ಆಗ ಕೊರತೆಯಲ್ಲಿರುವವರಿಗೆ ಕೊಡುವುದಕ್ಕೆ ಅವನಿಂದಾಗುವದು.
ಎಫೆಸದವರಿಗೆ 4 : 29 (IRVKN)
ಎಫೆ 5:4; ಕೊಲೊ 3:8; ಮತ್ತಾ 12:34: ನಿಮ್ಮ ಬಾಯೊಳಗಿಂದ ಯಾವ ಕೆಟ್ಟ ಮಾತು ಹೊರಡಬಾರದು. ಭಕ್ತಿಯನ್ನು ವೃದ್ಧಿ ಮಾಡುವಂತಹ ಸಮಯೋಚಿತವಾದ ಮಾತನ್ನು ಆಡಿದರೆ § ಕೊಲೊ 4:6: ಕೇಳುವವರಿಗೆ ಹಿತವಾಗಿ ತೋರುವುದು.
ಎಫೆಸದವರಿಗೆ 4 : 30 (IRVKN)
* ಯೆಶಾ 63:10; 1 ಥೆಸ. 5:19: ದೇವರ ಪವಿತ್ರಾತ್ಮನನ್ನು ದುಃಖಪಡಿಸಬೇಡಿರಿ. ಆತನಲ್ಲಿಯೇ ವಿಮೋಚನೆಯ ದಿನಕ್ಕಾಗಿ † ಎಫೆ 1:13: ಮುದ್ರೆ ಹೊಂದಿದ್ದೀರಲ್ಲಾ.
ಎಫೆಸದವರಿಗೆ 4 : 31 (IRVKN)
ಕೊಲೊ 3:8: ಎಲ್ಲಾ ದ್ವೇಷ, ಕೋಪ, ಕ್ರೋಧ, ಕಲಹ, ದೂಷಣೆ ಇವುಗಳನ್ನೂ ಸಕಲ ವಿಧವಾದ ದುಷ್ಟತನಗಳನ್ನೂ ನಿಮ್ಮಿಂದ ದೂರ ಮಾಡಿರಿ.
ಎಫೆಸದವರಿಗೆ 4 : 32 (IRVKN)
§ ಕೊಲೊ 3:12,3; 1 ಪೇತ್ರ. 3:8: ಒಬ್ಬರಿಗೊಬ್ಬರು ದಯೆಯುಳ್ಳವರಾಗಿಯೂ, ಕರುಣೆಯುಳ್ಳವರಾಗಿಯೂ ಇರಿ. ದೇವರು ನಿಮ್ಮನ್ನು ಕ್ರಿಸ್ತನಲ್ಲಿ ಕ್ಷಮಿಸಿದಂತೆ ನೀವು ಒಬ್ಬರನ್ನೊಬ್ಬರು * 2 ಕೊರಿ 2:7,10; ಮತ್ತಾ 6:14: ಕ್ಷಮಿಸಿರಿ.

1 2 3 4 5 6 7 8 9 10 11 12 13 14 15 16 17 18 19 20 21 22 23 24 25 26 27 28 29 30 31 32