ಪ್ರಸಂಗಿ 12 : 1 (IRVKN)
[QS]ಕಷ್ಟದ ದಿನಗಳು ಬರುವುದಕ್ಕೆ ಮೊದಲು, [QE][QS2]“ಇವುಗಳಲ್ಲಿ ನನಗೆ ಸಂತೋಷವಿಲ್ಲ” ಎಂದು, [QE][QS2]ನೀನು ಹೇಳುವ ವರ್ಷಗಳು ಸಮೀಪಿಸುವುದರೊಳಗಾಗಿ, [QE][QS3]ಯೌವನದಲ್ಲಿಯೇ ನಿನ್ನ ಸೃಷ್ಟಿಕರ್ತನನ್ನು ಸ್ಮರಿಸು. [QE]
ಪ್ರಸಂಗಿ 12 : 2 (IRVKN)
[QS]ಸೂರ್ಯನೂ, ಚಂದ್ರನೂ ಮತ್ತು ನಕ್ಷತ್ರಗಳೂ ಕತ್ತಲಾಗುವ ಮೊದಲೇ, [QE][QS2]ಮಳೆಯ ಮೋಡಗಳು ಹಿಂತಿರುಗಿ ಬರುವವು. [QE]
ಪ್ರಸಂಗಿ 12 : 3 (IRVKN)
[QS] [* ಇಲ್ಲಿ ಮನೆ ಮಾನವ ಶಾರೀರಿಕ ದೇಹವೆಂಬ, ಗಾವಲಿನವರು ಕೈಗಳೆಂಬ, ಬಲಿಷ್ಠರು ಕಾಲುಗಳೆಂಬ, ಅರೆಯುವವರು ಹಲ್ಲುಗಳೆಂಬ, ಮತ್ತು ನೋಡುವವರು ಕಣ್ಣುಗಳೆಂಬ ಅರ್ಥವನ್ನು ನೀಡುತ್ತದೆ. ಈ ಉದಾಹರಣೆಗಳು ಮರಣದ ಅರ್ಥವನ್ನು ಸಹ ತೋರಿಸುತ್ತವೆ ಎಂದು ಕೆಲವು ಪಂಡಿತರು ಹೇಳುತ್ತಾರೆ. ]ಅದೇ ಕಾಲದಲ್ಲಿ ಮನೆಗಾವಲಿನವರು ನಡುಗುವರು, [QE][QS2]ಬಲಿಷ್ಠರು ಬಗ್ಗುವರು, [QE][QS]ಅರೆಯುವವರು ಕಡಿಮೆ ಜನರಿರುವುದರಿಂದ ಕೆಲಸವನ್ನು ನಿಲ್ಲಿಸಿಬಿಡುವರು, [QE][QS2]ಕಿಟಕಿಗಳಿಂದ ನೋಡುವವರು ಮಂಕಾಗುವರು. [QE]
ಪ್ರಸಂಗಿ 12 : 4 (IRVKN)
[QS]ಬೀದಿಯ ಬಾಗಿಲುಗಳು ಮುಚ್ಚಿರುವವು, [QE][QS2]ಅರೆಯುವ ಶಬ್ದವು ನಿಲ್ಲುವುದು, [QE][QS]ಮನುಷ್ಯನು ಹಕ್ಕಿಯ ಧ್ವನಿಗೆ ಎದ್ದೇಳುವನು, [QE][QS2]ಗಾಯಕಿಯರೆಲ್ಲಾ ಕುಗ್ಗುವರು. [QE]
ಪ್ರಸಂಗಿ 12 : 5 (IRVKN)
[QS]ಇದಲ್ಲದೆ ಆ ದಿನಗಳಲ್ಲಿ ಮನುಷ್ಯನಿಗೆ ದಿನ್ನೆಯನ್ನು ಕಂಡರೆ ಭಯ, [QE][QS2]ಮತ್ತು ದಾರಿಯಲ್ಲಿ ಅಪಾಯ, [QE][QS]ಬಾದಾಮಿಯ ಮರವು ಹೂ ಬಿಡುವುದು, [QE][QS2]ಮಿಡತೆಯು ಕೂಡಾ ಭಾರವಾಗಿರುವುದು, [QE][QS2]ಆಶೆಯು ಕುಂದುವುದು. [QE][QS]ಮನುಷ್ಯನು ತನ್ನ ನಿತ್ಯ ಗೃಹಕ್ಕೆ ಹೊರಡುವನು, [QE][QS2]ಗೋಳಾಟದವರು ಬೀದಿಯಲ್ಲಿ ತಿರುಗುವರು. [QE]
ಪ್ರಸಂಗಿ 12 : 6 (IRVKN)
[QS]ಇನ್ನು ಮುಂದೆ ಬೆಳ್ಳಿಯ ತಂತಿಯು ಕಿತ್ತುಹೋಗುವುದು, [QE][QS2]ಚಿನ್ನದ ಬಟ್ಟಲು ಜಜ್ಜಿಹೋಗುವುದು, [QE][QS2]ಮಡಿಕೆಯು ಬುಗ್ಗೆಯ ಹತ್ತಿರ ಒಡೆಯುವುದು, [QE][QS2]ಬಾವಿಯ ರಾಟೆ ಮುರಿಯುವುದು, [QE]
ಪ್ರಸಂಗಿ 12 : 7 (IRVKN)
[QS]ಮಣ್ಣು ಭೂಮಿಗೆ ಸೇರಿ ಇದ್ದ ಹಾಗಾಗುವುದು, [QE][QS2]ಆತ್ಮವು ತನ್ನನ್ನು ದಯಪಾಲಿಸಿದ ದೇವರ ಬಳಿಗೆ ಸೇರುವುದು. ಇಷ್ಟರೊಳಗಾಗಿ ನಿನ್ನ ಸೃಷ್ಟಿ ಕರ್ತನನ್ನು ಸ್ಮರಿಸದಿರಬೇಡ. [QE]
ಪ್ರಸಂಗಿ 12 : 8 (IRVKN)
[QS]“ವ್ಯರ್ಥವೇ ವ್ಯರ್ಥ, ಸಮಸ್ತವೂ ವ್ಯರ್ಥ” ಎಂದು ಪ್ರಸಂಗಿಯು ಹೇಳುತ್ತಾನೆ. [QE]
ಪ್ರಸಂಗಿ 12 : 9 (IRVKN)
{#1ಸಮಾಪ್ತಿ }
ಪ್ರಸಂಗಿ 12 : 10 (IRVKN)
[PS]ಪ್ರಸಂಗಿಯು ಜ್ಞಾನಿಯಾಗಿದ್ದು, ಜನರಿಗೆ ತಿಳಿವಳಿಕೆಯನ್ನು ಬೋಧಿಸುತ್ತಾ ಬಂದನು, ಅನೇಕಾನೇಕ ಜ್ಞಾನೋಕ್ತಿಗಳನ್ನು ಧ್ಯಾನಿಸಿ, ಪರೀಕ್ಷಿಸಿ ಕ್ರಮಪಡಿಸಿದನು. [PE][PS]ಪ್ರಸಂಗಿಯು ಯಥಾರ್ಥ ಭಾವದಿಂದ ರಚಿಸಿದ ಒಪ್ಪಿಗೆಯ ಸತ್ಯದ ಮಾತುಗಳನ್ನು ಹುಡುಕಿ ಆರಿಸಿದನು.
ಪ್ರಸಂಗಿ 12 : 11 (IRVKN)
ಜ್ಞಾನಿಗಳ ಮಾತುಗಳು ಮುಳ್ಳುಗೋಲುಗಳು, ಸಂಗ್ರಹ ವಾಕ್ಯಗಳು ಬಿಗಿಯಾಗಿ ಬಡಿದ ಮೊಳೆಗಳು ಇವೆರಡು ಒಬ್ಬನೇ ಕುರುಬನಿಂದ ಕೊಡಲ್ಪಟ್ಟಿದೆ. [PE]
ಪ್ರಸಂಗಿ 12 : 12 (IRVKN)
ಪ್ರಸಂಗಿ 12 : 13 (IRVKN)
[PS]ನನ್ನ ಕಂದಾ, ಇವುಗಳಲ್ಲದೆ ಉಳಿದವುಗಳಲ್ಲಿಯೂ ಎಚ್ಚರದಿಂದಿರು. ಬಹಳ ಗ್ರಂಥಗಳ ರಚನೆಗೆ ಮಿತಿಯಿಲ್ಲ. ಅತಿವ್ಯಾಸಂಗವು ದೇಹಕ್ಕೆ ಆಯಾಸ. [PE][QS]ವಿಷಯವು ತೀರಿತು, [QE][QS2]ಎಲ್ಲವೂ ಕೇಳಿ ಮುಗಿಯಿತು, [QE][QS]ದೇವರಿಗೆ ಭಯಪಟ್ಟು ಆತನ ಆಜ್ಞೆಗಳನ್ನು ಕೈಕೊಳ್ಳು, [QE][QS2]ಮನುಷ್ಯರೆಲ್ಲರ ಕರ್ತವ್ಯವು ಇದೇ. [QE]
ಪ್ರಸಂಗಿ 12 : 14 (IRVKN)
[QS]ಒಳ್ಳೆಯದಾಗಲೀ ಅಥವಾ ಕೆಟ್ಟದ್ದಾಗಲೀ, [QE][QS2]ಸಕಲ ರಹಸ್ಯ ಸಂಗತಿಗಳನ್ನು ವಿಮರ್ಶಿಸಿ, [QE][QS]ನ್ಯಾಯವಿಚಾರಣೆಗೆ ದೇವರು ಪ್ರತಿಯೊಂದು ಕಾರ್ಯವನ್ನು ಗುರಿಮಾಡುವನು.[QE]

1 2 3 4 5 6 7 8 9 10 11 12 13 14

BG:

Opacity:

Color:


Size:


Font: