ಪ್ರಸಂಗಿ 1 : 1 (IRVKN)
{#1ಎಲ್ಲವೂ ವ್ಯರ್ಥ } [PS]ಯೆರೂಸಲೇಮಿನಲ್ಲಿ ಅರಸನಾಗಿದ್ದ ದಾವೀದನ ಮಗನಾದ ಪ್ರಸಂಗಿಯ ಮಾತುಗಳು.
ಪ್ರಸಂಗಿ 1 : 2 (IRVKN)
ಪ್ರಸಂಗಿಯು ಹೀಗೆ ಹೇಳುತ್ತಾನೆ. [PE][QS]“ವ್ಯರ್ಥವೇ ವ್ಯರ್ಥ, [QE][QS2]ವ್ಯರ್ಥವೇ ವ್ಯರ್ಥ, [QE][QS]ಸಮಸ್ತವೂ ವ್ಯರ್ಥ. [QE]
ಪ್ರಸಂಗಿ 1 : 3 (IRVKN)
[QS]ಈ ಲೋಕದಲ್ಲಿ[* ಈ ಲೋಕದಲ್ಲಿ ಅಥವಾ ಸೂರ್ಯನ ಕೆಳಗೆ. ] ಮನುಷ್ಯನು ಪಡುವ ಎಲ್ಲಾ ಪ್ರಯಾಸದಿಂದ ಅವನಿಗೆ ಲಾಭವೇನು? [QE]
ಪ್ರಸಂಗಿ 1 : 4 (IRVKN)
[QS]ಒಂದು ಸಂತತಿಯು ಹೋಗುವುದು, [QE][QS2]ಇನ್ನೊಂದು ಸಂತತಿಯು ಬರುವುದು, [QE][QS]ಆದರೆ ಭೂಮಿಯು ಶಾಶ್ವತವಾಗಿ ನಿಲ್ಲುವುದು. [QE]
ಪ್ರಸಂಗಿ 1 : 5 (IRVKN)
[QS]ಸೂರ್ಯನು ಉದಯಿಸುತ್ತಾನೆ. [QE][QS2]ಸೂರ್ಯನು ಮುಳುಗುತ್ತಾನೆ. [QE][QS]ತಾನು ಉದಯಿಸುವ ಸ್ಥಾನಕ್ಕೆ ಅವಸರವಾಗಿ ಹಿಂತಿರುಗಿ ಹೋಗುತ್ತಾನೆ. [QE]
ಪ್ರಸಂಗಿ 1 : 6 (IRVKN)
[QS]ಗಾಳಿಯು ದಕ್ಷಿಣದ ಕಡೆಗೆ ಬೀಸುತ್ತದೆ. [QE][QS2]ಉತ್ತರದ ಕಡೆಗೆ ತಿರುಗುವುದು. [QE][QS]ಅದು ಸುತ್ತುತ್ತಾ ಸುತ್ತುತ್ತಾ ಹೋಗಿ, [QE][QS2]ಗಾಳಿ ಸುತ್ತಳತೆಯ ಪ್ರಕಾರ ಹಿಂದಿರುಗುತ್ತವೆ. [QE]
ಪ್ರಸಂಗಿ 1 : 7 (IRVKN)
[QS]ನದಿಗಳೆಲ್ಲಾ ಸಮುದ್ರಕ್ಕೆ ಹರಿದು ಹೋಗುತ್ತವೆ. [QE][QS2]ಆದರೂ ಸಮುದ್ರವು ತುಂಬುವುದಿಲ್ಲ. [QE][QS]ನದಿಗಳು ಎಲ್ಲಿಂದ ಬಂದಿವೆಯೋ [QE][QS2]ಅದೇ ಸ್ಥಳಕ್ಕೆ ಹಿಂತಿರುಗುತ್ತವೆ. [QE]
ಪ್ರಸಂಗಿ 1 : 8 (IRVKN)
[QS]ಎಲ್ಲಾ ಕಾರ್ಯಗಳು ಪ್ರಯಾಸದಿಂದ ತುಂಬಿದೆ. [QE][QS2]ಇದನ್ನು ಮನುಷ್ಯನು ವಿವರಿಸಲಾರನು. [QE][QS]ನೋಡುವುದರಿಂದ ಕಣ್ಣು ತೃಪ್ತಿಗೊಳ್ಳದು, [QE][QS2]ಕೇಳುವುದರಿಂದ ಕಿವಿಯು ದಣಿಯದು. [QE]
ಪ್ರಸಂಗಿ 1 : 9 (IRVKN)
[QS]ಇದ್ದದ್ದೇ ಇರುವುದು, [QE][QS2]ನಡೆದದ್ದೇ ನಡೆಯುವುದು. [QE][QS]ಸೂರ್ಯನ ಕೆಳಗೆ ಹೊಸದಾದದ್ದು ಯಾವುದೂ ಇಲ್ಲ. [QE]
ಪ್ರಸಂಗಿ 1 : 10 (IRVKN)
[QS]‘ನೋಡು, ಇದು ಹೊಸದು’ ಎಂದು ಯಾವ ವಿಷಯದಲ್ಲಾದರೂ ಹೇಳಬಹುದೋ? [QE][QS2]ನಮಗಿಂತ ಮೊದಲು ಇದ್ದದ್ದು, [QE][QS]ಪುರಾತನ ಕಾಲದಿಂದ ಇದ್ದದ್ದೇ. [QE]
ಪ್ರಸಂಗಿ 1 : 11 (IRVKN)
[QS]ಪುರಾತನ ಕಾಲದಲ್ಲಿ ನಡೆದ ಸಂಗತಿಗಳ ಜ್ಞಾಪಕವು ಈಗಿನ ಜನರಿಗೆ ಇಲ್ಲ. [QE][QS2]ಮುಂದಿನ ಕಾಲದಲ್ಲಿ ನಡೆಯುವ ಸಂಗತಿಗಳ ಜ್ಞಾಪಕವು ಮುಂದಿನ ಕಾಲದ ಜನರಿಗೆ ಇರುವುದಿಲ್ಲ.” [QE]
ಪ್ರಸಂಗಿ 1 : 12 (IRVKN)
[PS]ಪ್ರಸಂಗಿಯಾದ ನಾನು ಯೆರೂಸಲೇಮಿನಲ್ಲಿ ಇಸ್ರಾಯೇಲರಿಗೆ ಅರಸನಾಗಿದ್ದೆನು.
ಪ್ರಸಂಗಿ 1 : 13 (IRVKN)
ಆಕಾಶದ ಕೆಳಗಡೆ ನಡೆಯುವ ಎಲ್ಲಾ ಕೆಲಸಗಳನ್ನು ಜ್ಞಾನದಿಂದ ವಿಚಾರಿಸಿ ವಿಮರ್ಶಿಸುವುದಕ್ಕೆ ನನ್ನ ಮನಸ್ಸನ್ನು ಇಟ್ಟೆನು. ದೇವರು ಮನುಷ್ಯರ ಮೇಲೆ ನೇಮಿಸಿರುವ ಕೆಲಸವೆಲ್ಲಾ ಬಹು ಪ್ರಯಾಸವೇ.
ಪ್ರಸಂಗಿ 1 : 14 (IRVKN)
ಲೋಕದಲ್ಲಿ ನಡೆಯುವ ಎಲ್ಲಾ ಕೆಲಸಗಳನ್ನು ನೋಡಿದ್ದೇನೆ. ಆಹಾ, ಗಾಳಿಯನ್ನು ಹಿಂದಟ್ಟುವ[† ಗಾಳಿಯನ್ನು ಹಿಂದಟ್ಟುವ ಅಥವಾ ಗಾಳಿಯನ್ನು ತಿನ್ನುವ ಹಾಗೆ. ] ಹಾಗೆ ಸಮಸ್ತವೂ ವ್ಯರ್ಥ. [PE]
ಪ್ರಸಂಗಿ 1 : 15 (IRVKN)
[QS]ವಕ್ರವಾದದ್ದನ್ನು ಸರಿಮಾಡುವುದಕ್ಕೆ ಆಗುವುದಿಲ್ಲ! [QE][QS2]ಇಲ್ಲದ್ದನ್ನು ಲೆಕ್ಕಿಸುವುದಕ್ಕೆ ಅಸಾಧ್ಯ! [QE]
ಪ್ರಸಂಗಿ 1 : 16 (IRVKN)
{#1ಜ್ಞಾನಿಯ ಅನಿಸಿಕೆ } [PS]ನಾನು ನನ್ನ ಮನಸ್ಸಿನಲ್ಲಿ ಯೋಚಿಸುತ್ತಾ, “ನೋಡು, ನನಗಿಂತ ಮೊದಲು ಯೆರೂಸಲೇಮನ್ನು ಆಳಿದವರೆಲ್ಲರಿಗಿಂತಲೂ ಹೆಚ್ಚು ಜ್ಞಾನವನ್ನು ಸಂಪಾದಿಸಿಕೊಂಡಿದ್ದೇನೆ. ನನ್ನ ಹೃದಯವು ಜ್ಞಾನವನ್ನೂ, ತಿಳಿವಳಿಕೆಯನ್ನೂ ವಿಶೇಷವಾಗಿ ಹೊಂದಿದೆ” ಎಂದುಕೊಂಡೆನು.
ಪ್ರಸಂಗಿ 1 : 17 (IRVKN)
ಆಗ ಜ್ಞಾನವನ್ನೂ, ಹುಚ್ಚುತನವನ್ನೂ, ಬುದ್ಧಿಹೀನತೆಯನ್ನೂ ಗ್ರಹಿಸಲು ನಾನು ಮನಸ್ಸಿಟ್ಟೆನು. ಇದು ಸಹ ಗಾಳಿಯನ್ನು ಹಿಂದಟ್ಟುವ ಹಾಗೆ ಎಂದು ನಾನು ಅರಿತುಕೊಂಡೆನು.
ಪ್ರಸಂಗಿ 1 : 18 (IRVKN)
ಏಕೆಂದರೆ ಬಹಳ ಜ್ಞಾನವಿದ್ದಲ್ಲಿ ಬಹಳ ಸಂಕಟ. ಹೆಚ್ಚು ತಿಳಿವಳಿಕೆಯನ್ನು ಪಡೆದವನಿಗೆ ಹೆಚ್ಚು ವ್ಯಥೆ ಇದೆ. [PE]
❮
❯