ಧರ್ಮೋಪದೇಶಕಾಂಡ 33 : 1 (IRVKN)
{ಮೋಶೆಯ ಆಶೀರ್ವಚನಗಳು} [PS] ದೇವಪುರುಷನಾದ ಮೋಶೆ ದೇಹವನ್ನು ಬಿಡುವುದಕ್ಕಿಂತ ಮುಂಚೆ ಇಸ್ರಾಯೇಲರ ವಿಷಯವಾಗಿ ಹೇಳಿದ ಆಶೀರ್ವಾದವು: [PE][PS]
ಧರ್ಮೋಪದೇಶಕಾಂಡ 33 : 2 (IRVKN)
“ಯೆಹೋವನು ಸೀನಾಯಿಬೆಟ್ಟದಿಂದ ಬಂದು ಸೇಯೀರ್ ಎಂಬ ಬೆಟ್ಟದ ಸೀಮೆಯೊಳಗಿಂದ ಪ್ರಕಾಶಿಸಿ ಪಾರಾನ್ ಪರ್ವತದಿಂದ ಪ್ರಜ್ವಲಿಸಿ, ಲಕ್ಷಾಂತರ ಪರಿಶುದ್ಧದೂತರ ಮಧ್ಯದಿಂದ ಅವರಿಗೋಸ್ಕರ ದಯಮಾಡಿದನು; ಆತನ ಬಲಪಾರ್ಶ್ವದಲ್ಲಿ ಅಗ್ನಿಸದೃಶವಾದ ಧರ್ಮಶಾಸ್ತ್ರವಿತ್ತು. [PE][PS]
ಧರ್ಮೋಪದೇಶಕಾಂಡ 33 : 3 (IRVKN)
“ಆತನು ತನ್ನ ಜನರನ್ನು ಪ್ರೀತಿಸುತ್ತಾನೆ. ಯೆಹೋವನೇ, ನಿನ್ನ ಪರಿಶುದ್ಧ ಜನರು ನಿನ್ನ ಆಶ್ರಯದಲ್ಲಿಯೇ ಇದ್ದಾರೆ; ನಿನ್ನ ಚರಣಸನ್ನಿಧಾನದಲ್ಲಿ ಕುಳಿತಿರುವರು; ನೀನು ಹೇಳುವ ಆಜ್ಞೆಗಳನ್ನು ತಪ್ಪದೆ ಪಾಲಿಸಿದರು.
ಧರ್ಮೋಪದೇಶಕಾಂಡ 33 : 4 (IRVKN)
ಮೋಶೆಯಾದ, ನಾನು ಯಾಕೋಬನ ಸಂತತಿಯವರಾದ ನಿಮಗೆ ಧರ್ಮಶಾಸ್ತ್ರವನ್ನು ಸ್ವತ್ತಾಗಿ ಕೊಟ್ಟಿದ್ದೇನೆ.
ಧರ್ಮೋಪದೇಶಕಾಂಡ 33 : 5 (IRVKN)
ಇಸ್ರಾಯೇಲರ ಕುಲಗಳು ಅವರ ಅಧಿಪತಿಗಳೊಡನೆ ಒಟ್ಟಾಗಿ ಸೇರಿಬಂದಾಗ ಯೆಹೋವನು ತಾನೇ ಯೆಶುರೂನಿನಲ್ಲಿ ಅರಸನಾದನು. [PE][PS]
ಧರ್ಮೋಪದೇಶಕಾಂಡ 33 : 6 (IRVKN)
“ರೂಬೇನ್ ಕುಲದ ವಿಷಯದಲ್ಲಿ, ‘ರೂಬೇನ್ ಕುಲವು ನಾಶವಾಗದೆ ಉಳಿಯಲಿ; ಆದರೆ ಅದು ಸ್ವಲ್ಪ ಜನರುಳ್ಳದ್ದಾಗಿರುವುದು’ ಎಂದು ಹೇಳಿದನು. [PE][PS]
ಧರ್ಮೋಪದೇಶಕಾಂಡ 33 : 7 (IRVKN)
“ಯೆಹೂದ ಕುಲದ ವಿಷಯದಲ್ಲಿ, ‘ಯೆಹೋವನೇ, ಯೆಹೂದ ಕುಲದವರ ಮೊರೆಯನ್ನು ಲಾಲಿಸಿ ಅವರನ್ನು ಅವರ ಬಂಧುಗಳೊಡನೆ ಸೇರಿಸು. ಅವರಿಗೋಸ್ಕರ ಯುದ್ಧಮಾಡಿದರಲ್ಲಾ; ಅವರ ಶತ್ರುಗಳಿಂದ ಅವರನ್ನು ರಕ್ಷಿಸು’ ” ಎಂದು ಹೇಳಿದನು. [PE][PS]
ಧರ್ಮೋಪದೇಶಕಾಂಡ 33 : 8 (IRVKN)
ಲೇವಿ ಕುಲದ ವಿಷಯದಲ್ಲಿ, “ಯೆಹೋವನೇ ನಿನ್ನ ನಿರ್ಣಯವನ್ನು ತಿಳಿಸುವ ಊರೀಮ್ ಮತ್ತು ತುಮ್ಮೀಮ್ ಎಂಬ ವಸ್ತುಗಳು ನಿನ್ನ ಭಕ್ತರಾದ ಇವರ ವಶದಲ್ಲಿ ಉಂಟಷ್ಟೆ. ನೀನು ಮಸ್ಸದಲ್ಲಿ ಅವರನ್ನು ಪರೀಕ್ಷಿಸಿದಿಯಲ್ಲಾ; ಮೆರೀಬದಲ್ಲಿ ನೀರು ಹೊರಟ ಸ್ಥಳದ ಹತ್ತಿರ ಅವರೊಡನೆ ವಿವಾದಮಾಡಿದಿ.
ಧರ್ಮೋಪದೇಶಕಾಂಡ 33 : 9 (IRVKN)
ಅವರು ನಿನ್ನ ಆಜ್ಞೆಯನ್ನು ಅನುಸರಿಸುತ್ತಾ ನಿನ್ನ ನಿಬಂಧನೆಯನ್ನು ಕೈಕೊಳ್ಳುವವರಾಗಿ ತಾಯಿತಂದೆಗಳನ್ನು ‘ಪರಿಚಯವಿಲ್ಲವೆಂದೂ, ಅಣ್ಣತಮ್ಮಂದಿರನ್ನು ಅರಿಯವೆಂದೂ ಮತ್ತು ಸ್ವಂತ ಮಕ್ಕಳನ್ನು ಗುರುತಿಲ್ಲವೆಂದೂ’ ಹೇಳಿಬಿಟ್ಟರಲ್ಲಾ.
ಧರ್ಮೋಪದೇಶಕಾಂಡ 33 : 10 (IRVKN)
ಅವರು ಯಾಕೋಬ್ ವಂಶದವರಿಗೆ ನಿನ್ನ ನಿರ್ಣಯಗಳನ್ನು ತಿಳಿಸುವರು; ಇಸ್ರಾಯೇಲರಿಗೆ ನಿನ್ನ ಧರ್ಮಶಾಸ್ತ್ರವನ್ನು ಕಲಿಸುವರು. ನಿನ್ನ ಸನ್ನಿಧಿಯಲ್ಲಿ ಧೂಪಹಾಕುವರು; ನಿನ್ನ ಯಜ್ಞವೇದಿಯ ಮೇಲೆ ಸರ್ವಾಂಗಹೋಮಗಳನ್ನು ಸಮರ್ಪಿಸುವರು.
ಧರ್ಮೋಪದೇಶಕಾಂಡ 33 : 11 (IRVKN)
ಯೆಹೋವನೇ, ಅವರ ಆಸ್ತಿಯನ್ನು ವೃದ್ಧಿಪಡಿಸು; ಅವರ ಸೇವೆಯು ನಿನಗೆ ಸಮರ್ಪಕವಾಗಿರಲಿ; ಅವರಿಗೆ ವಿರುದ್ಧವಾಗಿ ಬರುವವರ ನಡುವನ್ನು ಮುರಿದು ಅವರ ವೈರಿಗಳು ಪುನಃ ಎದ್ದು ಬಾರದಂತೆ ಮಾಡು” ಎಂದು ಹೇಳಿದನು. [PE][PS]
ಧರ್ಮೋಪದೇಶಕಾಂಡ 33 : 12 (IRVKN)
ಬೆನ್ಯಾಮೀನ್ ಕುಲದವರ ವಿಷಯದಲ್ಲಿ, “ಯೆಹೋವನು ಇವರ ಬೆಟ್ಟಗಳ ತಪ್ಪಲುಗಳಲ್ಲೇ ವಾಸಿಸುತ್ತಾ ಇವರನ್ನು ಯಾವಾಗಲೂ ಆವರಿಸಿಕೊಂಡಿರುವುದರಿಂದ ಆತನ ಪ್ರಿಯರಾದ ಇವರು ನಿರ್ಭಯವಾಗಿ ವಾಸಿಸುವರು” ಎಂದು ಹೇಳಿದನು. [PE][PS]
ಧರ್ಮೋಪದೇಶಕಾಂಡ 33 : 13 (IRVKN)
ಯೋಸೇಫ್ ಕುಲಗಳ ವಿಷಯದಲ್ಲಿ, “ಅವರ ಸೀಮೆಗೆ ಯೆಹೋವನ ಆಶೀರ್ವಾದವಾಗಲಿ. ಮೇಲಣ ಆಕಾಶದಿಂದುಂಟಾಗುವ ಮಂಜು, ಕೆಳಗಣ ಸಾಗರದ ಸೆಲೆ,
ಧರ್ಮೋಪದೇಶಕಾಂಡ 33 : 14 (IRVKN)
ವರ್ಷ ವರ್ಷಕ್ಕೂ, ತಿಂಗಳು ತಿಂಗಳಿಗೂ ಆಗುವ ಬೆಳೆ,
ಧರ್ಮೋಪದೇಶಕಾಂಡ 33 : 15 (IRVKN)
ಅನಾದಿಯಾದ ಪರ್ವತಗಳ ಉತ್ಪನ್ನ, ಶಾಶ್ವತವಾದ ಬೆಟ್ಟಗಳಿಂದುಂಟಾಗುವ ಮೇಲು,
ಧರ್ಮೋಪದೇಶಕಾಂಡ 33 : 16 (IRVKN)
ಭೂಮಿಯಲ್ಲಿ ಸಮೃದ್ಧಿಯಾಗಿ ಬೆಳೆಯುವ ಫಲ ಇವೆಲ್ಲವುಗಳಲ್ಲಿ ಶ್ರೇಷ್ಠವಾದದ್ದೂ ಮತ್ತು (ಹೋರೇಬ್ ಬೆಟ್ಟದಲ್ಲಿನ) ಪೊದೆಯಲ್ಲಿ ವಾಸಿಸಿದಾತನ ದಯೆಯೂ ಯೋಸೇಫ್ ವಂಶದವರ ಪಾಲಿಗೆ ಬರಲಿ; ಅಣ್ಣತಮ್ಮಂದಿರಿಗೆ ಪ್ರಭುವಾಗಿರುವ ಮತ್ತು ಕುಲದವರ ಶಿರಸ್ಸಾಗಿರುವ ಇವನ ಮೇಲೆ ಆಶೀರ್ವಾದ ಉಂಟಾಗಲಿ.
ಧರ್ಮೋಪದೇಶಕಾಂಡ 33 : 17 (IRVKN)
ಯೋಸೇಫನ ಜ್ಯೇಷ್ಠಸಂತತಿಯವರು ಗೂಳಿಯೋಪಾದಿಯಲ್ಲಿ ಗಾಂಭೀರ್ಯವುಳ್ಳವರು. ಅವರ ಕೊಂಬುಗಳು ಕಾಡುಕೋಣದ ಕೊಂಬುಗಳಷ್ಟು (ಬಲವುಳ್ಳವು); ಅವುಗಳಿಂದ ಭೂಮಂಡಲದ ಜನಾಂಗಗಳನ್ನೆಲ್ಲಾ ಇರಿದು ಓಡಿಸುವರು. ಎಫ್ರಾಯೀಮ್ ಕುಲದ ಕೊಟ್ಯಾಂತರ ಜನರೂ ಮನಸ್ಸೆ ಕುಲದ ಲಕ್ಷಾಂತರ ಮಂದಿಯೂ ಇಂಥವರೇ” ಎಂದು ಹೇಳಿದನು. [PE][PS]
ಧರ್ಮೋಪದೇಶಕಾಂಡ 33 : 18 (IRVKN)
ಜೆಬುಲೂನ್ಯರ ಮತ್ತು ಇಸ್ಸಾಕಾರ್ಯರ ವಿಷಯದಲ್ಲಿ, “ಜೆಬುಲೂನ್ಯರೇ, ನಿಮ್ಮ ಪ್ರಯಾಣಗಳಲ್ಲಿ ಸಂತೋಷವಾಗಿರಿ; ಇಸ್ಸಾಕಾರ್ಯರೇ, ನಿಮ್ಮ ಪಾಳೆಯಗಳಲ್ಲಿ ಆನಂದವಾಗಿರಿ.
ಧರ್ಮೋಪದೇಶಕಾಂಡ 33 : 19 (IRVKN)
ಅವರು ಸಮುದ್ರದಿಂದ ಐಶ್ವರ್ಯವನ್ನು ಹೊಂದಿ ಮರಳಿನಲ್ಲಿ, ಭೂಮಿಯೊಳಗೆ ಅಡಗಿರುವ ಸಂಪತ್ತನ್ನು ಪಡೆಯುವರು. ಅನ್ಯಜನಗಳನ್ನು ತಮ್ಮ ಬೆಟ್ಟದ ಸೀಮೆಗೆ ಕರೆಯಿಸಿ ಅಲ್ಲಿ ನ್ಯಾಯವಾದ ಯಜ್ಞಗಳನ್ನು ಸಮರ್ಪಿಸುವರು” ಎಂದು ಹೇಳಿದನು. [PE][PS]
ಧರ್ಮೋಪದೇಶಕಾಂಡ 33 : 20 (IRVKN)
ಗಾದ್ ಕುಲದವರ ವಿಷಯದಲ್ಲಿ, “ಗಾದ್ಯರ ಪ್ರದೇಶವನ್ನು ವಿಸ್ತಾರಮಾಡಿದ ಯೆಹೋವನಿಗೆ ಸ್ತೋತ್ರ. ಅವರು ಸಿಂಹದಂತೆ ಹೊಂಚಿಕೊಂಡು (ಶತ್ರುಗಳ) ಭುಜವನ್ನೂ ಅಥವಾ ಶಿರಸ್ಸನ್ನೂ ಮುರಿಯುತ್ತಾರೆ.
ಧರ್ಮೋಪದೇಶಕಾಂಡ 33 : 21 (IRVKN)
ಅವರು ದೇಶದ ಮೊದಲನೆಯ ಭಾಗವನ್ನು ತಮಗೋಸ್ಕರ ತೆಗೆದುಕೊಂಡರು; ಅಲ್ಲಿ ಪ್ರಧಾನನಿಗೆ ಯೋಗ್ಯವಾದ ಸ್ವತ್ತು ದೊರಕಿತು. ಅವರು ಜನಾಧಿಪತಿಗಳ ಜೊತೆಯಲ್ಲಿ ಬಂದು ಇಸ್ರಾಯೇಲರೊಡನೆ ಯೆಹೋವನ ಆಜ್ಞೆಯನ್ನು ನೆರವೇರಿಸಿ ಆತನ ನ್ಯಾಯವನ್ನು ಸ್ಥಾಪಿಸಿದರು” ಎಂದು ಹೇಳಿದನು. [PE][PS]
ಧರ್ಮೋಪದೇಶಕಾಂಡ 33 : 22 (IRVKN)
ದಾನ್ ಕುಲದ ವಿಷಯದಲ್ಲಿ, “ದಾನ್ ಕುಲವು ಬಾಷಾನ್ ಸೀಮೆಯಿಂದ ಹೊರಟು ಹಾರಿಬರುವ ಪ್ರಾಯದ ಸಿಂಹದಂತಿದೆ” ಎಂದು ಹೇಳಿದನು. [PE][PS]
ಧರ್ಮೋಪದೇಶಕಾಂಡ 33 : 23 (IRVKN)
ನಫ್ತಾಲಿ ಕುಲದ ವಿಷಯದಲ್ಲಿ, “ನಫ್ತಾಲಿ ಕುಲವೇ, ನೀನು ಯೆಹೋವನ ದಯೆಯನ್ನು ಹೊಂದಿ ಸಂತೃಪ್ತನಾದೆ; ಆತನ ಆಶೀರ್ವಾದದಿಂದ ನಿನಗೆ ಸಮೃದ್ಧಿಯುಂಟು. (ಕಿನ್ನೆರೆತ್) ಸಮುದ್ರವೂ ದಕ್ಷಿಣಪ್ರದೇಶವೂ ನಿನಗೆ ಸ್ವಾಸ್ತ್ಯವಾಗಲಿ” ಎಂದು ಹೇಳಿದನು. [PE][PS]
ಧರ್ಮೋಪದೇಶಕಾಂಡ 33 : 24 (IRVKN)
ಆಶೇರ್ ಕುಲದ ವಿಷಯದಲ್ಲಿ, “ಪುತ್ರಶ್ರೇಷ್ಠರಾದ ಆಶೇರ್ಯರು ಭಾಗ್ಯವನ್ನು ಹೊಂದಲಿ; ಅವರು ಸಹೋದರರ ದಯೆಯನ್ನು ಪಡೆಯಲಿ; ಅವರು ಎಣ್ಣೆಯಲ್ಲೇ ಕಾಲನ್ನು ಅದ್ದಲಿ.
ಧರ್ಮೋಪದೇಶಕಾಂಡ 33 : 25 (IRVKN)
ನಿಮ್ಮ ಕೋಟೆಯ ಬಾಗಿಲುಗಳಿಗೆ ಕಬ್ಬಿಣದ ಮತ್ತು ತಾಮ್ರದ ಅಗುಳಿಗಳು ಇರಲಿ; ನೀವು ಇರುವವರೆಗೂ ನಿಮಗೆ ಬಲವಿರಲಿ” ಎಂದು ಹೇಳಿದನು. [PE][PS]
ಧರ್ಮೋಪದೇಶಕಾಂಡ 33 : 26 (IRVKN)
ಯೆಶುರೂನೇ, ನಿಮ್ಮ ದೇವರಿಗೆ ಸಮಾನರು ಯಾರು ಇಲ್ಲ; ಆತನು ಆಕಾಶವನ್ನೇರಿ ಮೇಘಾರೂಢನಾಗಿ ಮಹಾಗಾಂಭೀರ್ಯದಿಂದ ನಿಮ್ಮ ಸಹಾಯಕ್ಕೆ ಬರುವನು.
ಧರ್ಮೋಪದೇಶಕಾಂಡ 33 : 27 (IRVKN)
ಆದಿಯಿಂದಲೂ ದೇವರೇ ನಿಮಗೆ ನಿವಾಸಸ್ಥಾನವಾಗಿದ್ದಾನಲ್ಲಾ; ಸದಾ ದೇವರ ಹಸ್ತವೇ ನಿಮಗೆ ಆಧಾರ. ಆತನು “ನಿಮ್ಮೆದುರಿನಿಂದ ಶತ್ರುಗಳನ್ನು ಹೊರಡಿಸಿ ಅವರನ್ನು ಸಂಹರಿಸಿರಿ” ಎಂದು ಆಜ್ಞಾಪಿಸಿದನು;
ಧರ್ಮೋಪದೇಶಕಾಂಡ 33 : 28 (IRVKN)
ಆದಕಾರಣ ಇಸ್ರಾಯೇಲರು ಆಕಾಶದಿಂದ ಮಂಜು ಸುರಿದು, ಧಾನ್ಯವೂ ಮತ್ತು ದ್ರಾಕ್ಷಾರಸವೂ ಸಮೃದ್ಧಿಯಾಗಿರುವ ದೇಶದಲ್ಲೇ ಸೇರಿ ನಿರ್ಭಯವಾಗಿ ವಾಸಿಸುವವರಾದರು, ಯಾಕೋಬನ [* ಅಥವಾ ವಾಸಸ್ಥಳ.] ವಂಶದವರು ಸುರಕ್ಷಿತರಾದರು. [PE][PS]
ಧರ್ಮೋಪದೇಶಕಾಂಡ 33 : 29 (IRVKN)
“ಇಸ್ರಾಯೇಲರೇ, ನೀವು ಎಷ್ಟೋ ಧನ್ಯರು; ನಿಮ್ಮಷ್ಟು ಭಾಗ್ಯವಂತರು ಯಾರಿದ್ದಾರೆ? ನೀವು ಯೆಹೋವನ ಅನುಗ್ರಹದಿಂದ ಜಯವನ್ನು ಹೊಂದಿದವರು. ಆತನೇ ನಿಮ್ಮನ್ನು ಕಾಯುವ ಗುರಾಣಿಯು, ನಿಮ್ಮ ಗೌರವವನ್ನು ಕಾಪಾಡುವ ಕತ್ತಿಯೂ ಆಗಿದ್ದಾನೆ. ಆದ್ದರಿಂದ ನಿಮ್ಮ ಶತ್ರುಗಳು ನಿಮ್ಮ ಮುಂದೆ ಮುದುರಿಕೊಳ್ಳುತ್ತಾರೆ; ನೀವೋ [† ಅಥವಾ ಅವರ ಬೆನ್ನಿನ ಮೇಲೆ.] ಅವರಿಗಿದ್ದ ಎತ್ತರವಾದ ಸೀಮೆಯಲ್ಲಿ ಜಯಶಾಲಿಗಳಾಗಿ ಸಂಚರಿಸುತ್ತೀರಿ” ಎಂಬುದೇ. [PE]

1 2 3 4 5 6 7 8 9 10 11 12 13 14 15 16 17 18 19 20 21 22 23 24 25 26 27 28 29

BG:

Opacity:

Color:


Size:


Font: