ಕೊಲೊಸ್ಸೆಯವರಿಗೆ 4 : 1 (IRVKN)
ಕೊಲೊಸ್ಸೆಯವರಿಗೆ 4 : 2 (IRVKN)
ಯಜಮಾನರೇ, ಪರಲೋಕದಲ್ಲಿ ನಿಮಗೂ ಯಜಮಾನನೊಬ್ಬನಿದ್ದಾನೆಂದು ತಿಳಿದು ನಿಮ್ಮ ದಾಸರೊಂದಿಗೆ ನೀತಿಯಿಂದಲೂ ನ್ಯಾಯದಿಂದಲೂ ವರ್ತಿಸಿರಿ. ಪ್ರಾರ್ಥಿಸಲು ಉತ್ತೇಜನ * ವ. 2-4; ಎಫೆ 6:18-20 ಪ್ರಾರ್ಥನೆಯನ್ನು ತಪ್ಪದೆ ಮಾಡುವವರಾಗಿ, ಎಚ್ಚರವಾಗಿದ್ದು ದೇವರಿಗೆ ಕೃತಜ್ಞತಾಸ್ತುತಿಮಾಡಿರಿ.
ಕೊಲೊಸ್ಸೆಯವರಿಗೆ 4 : 3 (IRVKN)
ಕ್ರಿಸ್ತನ ಮರ್ಮವನ್ನು ಅಂದರೆ ಸುರ್ವಾತೆಯನ್ನು ನಾವು ಸಾರುವುದಕ್ಕೆ ದೇವರು ನಮಗೆ ಬಾಗಿಲನ್ನು ತೆರೆದು ಕೊಡುವುದಕ್ಕಾಗಿ ನಮಗೋಸ್ಕರವಾಗಿ ಪ್ರಾರ್ಥಿಸಿರಿ. ಈ ಸುರ್ವಾತೆಯ ನಿಮಿತ್ತವೇ ಕೊಲೊ 4:18; ಎಫೆ 6:20; ಫಿಲಿ. 1:7 ನಾನು ಸೆರೆಯಲ್ಲಿದ್ದೇನಲ್ಲಾ.
ಕೊಲೊಸ್ಸೆಯವರಿಗೆ 4 : 4 (IRVKN)
ನಾನು ಆ ರೋಮಾ. 16:25 ಸತ್ಯಾರ್ಥವನ್ನು ಹೇಳಬೇಕಾದ ರೀತಿಯಲ್ಲಿ ಸ್ಪಷ್ಟವಾಗಿ ಹೇಳುವಂತೆ ಪ್ರಾರ್ಥಿಸಿರಿ.
ಕೊಲೊಸ್ಸೆಯವರಿಗೆ 4 : 5 (IRVKN)
ಸಮಯವನ್ನು ಸದುಪಯೋಗಿಸಿಕೊಂಡು § ಮಾರ್ಕ 4:11 ಹೊರಗಿನವರೊಂದಿಗೆ * ಎಫೆ 5:15-17 ಜ್ಞಾನವುಳ್ಳವರಾಗಿ ನಡೆದುಕೊಳ್ಳಿರಿ.
ಕೊಲೊಸ್ಸೆಯವರಿಗೆ 4 : 6 (IRVKN)
ನಿಮ್ಮ ಸಂಭಾಷಣೆಯು ಯಾವಾಗಲೂ ಕೃಪೆಯುಳ್ಳದ್ದಾಗಿಯೂ, ಉಪ್ಪಿನಂತೆ ಉಪ್ಪಾಗಿಯೂ ರುಚಿಕರವಾಗಿಯೂ ಇರಲಿ. ‡ 1 ಪೇತ್ರ 3:15 ಹೀಗೆ ನೀವು ಪ್ರತಿಯೊಬ್ಬರಿಗೂ ಯಾವಾವ ರೀತಿಯಲ್ಲಿ ಉತ್ತರಹೇಳಬೇಕು ಎಂಬುದನ್ನು ತಿಳಿದುಕೊಳ್ಳುವಿರಿ.
ಕೊಲೊಸ್ಸೆಯವರಿಗೆ 4 : 7 (IRVKN)
ವಂದನೆಗಳು ಹಾಗೂ ಕಡೆ ಮಾತುಗಳು § ವ. 7-9; ಎಫೆ 6:21-22 ಪ್ರಿಯ ಸಹೋದರನೂ, ನಂಬಿಗಸ್ತನಾದ ಸೇವಕನೂ ಮತ್ತು ಕರ್ತನಲ್ಲಿ ಜೊತೆಯ ದಾಸನೂ ಆಗಿರುವ ತುಖಿಕನು ನನ್ನ ವಿಷಯಗಳನ್ನೆಲ್ಲಾ ನಿಮಗೆ ತಿಳಿಸುವನು.
ಕೊಲೊಸ್ಸೆಯವರಿಗೆ 4 : 8 (IRVKN)
ನೀವು ನಮ್ಮ ಕುರಿತು ತಿಳಿದುಕೊಳ್ಳುವಂತೆ, ಅವನು ನಿಮ್ಮ ಹೃದಯಗಳನ್ನು ಉರಿದುಂಬಿಸುವಂತೆ,
ಕೊಲೊಸ್ಸೆಯವರಿಗೆ 4 : 9 (IRVKN)
ಅವನನ್ನು ನಂಬಿಗಸ್ತನು ಮತ್ತು* ಫಿಲೆ. 16 ಪ್ರಿಯ ಸಹೋದರನಾಗಿರುವ ನಿಮ್ಮ ಊರಿನವನೇ ಆದ † ಫಿಲೆ. 10 ಓನೇಸಿಮನ ಜೊತೆಯಲ್ಲಿ ಕಳುಹಿಸಿದ್ದೇನೆ. ಅವರು ಇಲ್ಲಿ ನಡೆಯುತ್ತಿರುವ ವಿಷಯಗಳನ್ನೆಲ್ಲಾ ನಿಮಗೆ ತಿಳಿಸುವರು.
ಕೊಲೊಸ್ಸೆಯವರಿಗೆ 4 : 10 (IRVKN)
ನನ್ನ ಜೊತೆ ಸೆರೆಯವನಾದ ಅ. ಕೃ. 19:29; 20:4; 7:2; ಫಿಲೆ. 24 ಅರಿಸ್ತಾರ್ಕನೂ ಮತ್ತು § ಅ. ಕೃ. 15:37-39 ಬಾರ್ನಬನ ಸೋದರಸಂಬಂಧಿಯಾಗಿರುವ ಮಾರ್ಕನೂ ನಿಮಗೆ ವಂದನೆ ಹೇಳುತ್ತಾರೆ. * ಅ. ಕೃ. 12:12 ಅವನು ನಿಮ್ಮ ಬಳಿಗೆ ಬಂದರೆ ಅವನನ್ನು ಸೇರಿಸಿಕೊಳ್ಳಿರಿ. ಅವನ ವಿಷಯದಲ್ಲಿ ಅಪ್ಪಣೆಗಳನ್ನು ಹೊಂದಿದ್ದೀರಲ್ಲಾ.
ಕೊಲೊಸ್ಸೆಯವರಿಗೆ 4 : 11 (IRVKN)
ಯುಸ್ತನೆನಿಸಿಕೊಳ್ಳುವ ಯೇಸು ಸಹ ನಿಮಗೆ ವಂದನೆ ಹೇಳುತ್ತಾನೆ. ಅ. ಕೃ. 11:2 ಸುನ್ನತಿಯವರೊಳಗೆ ಇವರು ಮಾತ್ರವೇ ದೇವರ ರಾಜ್ಯಕ್ಕಾಗಿ ನನ್ನ ಜೊತೆಸೇವಕರಾಗಿದ್ದಾರೆ, ಇವರಿಂದ ನನಗೆ ಆದರಣೆ ಉಂಟಾಯಿತು.
ಕೊಲೊಸ್ಸೆಯವರಿಗೆ 4 : 12 (IRVKN)
ಕ್ರಿಸ್ತಯೇಸುವಿನ ದಾಸನಾಗಿರುವ ನಿಮ್ಮ ಊರಿನವನಾದ ಕೊಲೊ 1:7; ಫಿಲೆ. 23 ಎಪಫ್ರನು ನಿಮಗೆ ವಂದನೆ ಹೇಳುತ್ತಾನೆ, ನೀವು § ಮತ್ತಾ 5:48 ಪ್ರವೀಣರಾಗಿಯೂ ದೇವರ ಎಲ್ಲಾ ಚಿತ್ತದಲ್ಲಿ ಪೂರ್ಣ ನಿಶ್ಚಯವುಳ್ಳವರಾಗಿರಬೇಕೆಂದು ನಿಮಗೋಸ್ಕರ ಯಾವಾಗಲೂ ಪ್ರಾರ್ಥನೆಯಲ್ಲಿ ಹೋರಾಡುತ್ತಾನೆ.
ಕೊಲೊಸ್ಸೆಯವರಿಗೆ 4 : 13 (IRVKN)
ಇವನು ನಿಮಗಾಗಿಯೂ, ಲವೊದಿಕೀಯದವರಿಗಾಗಿಯೂ ಮತ್ತು ಹಿರಿಯಾಪೋಲಿಯದವರಿಗಾಗಿಯೂ ಬಹಳ ಪ್ರಯಾಸ ಪಡುತ್ತಾನೆಂದು ನಾನು ಸಾಕ್ಷಿಹೇಳುತ್ತೇನೆ.
ಕೊಲೊಸ್ಸೆಯವರಿಗೆ 4 : 14 (IRVKN)
ಪ್ರಿಯ ವೈದ್ಯನಾಗಿರುವ * 2 ತಿಮೊ. 4:11; ಅ. ರು. 16:10 ಲೂಕನು ಮತ್ತು † 2 ತಿಮೊ. 4:10; ಫಿಲೆ. 24 ದೇಮನು ನಿಮಗೆ ವಂದನೆ ಹೇಳುತ್ತಾರೆ.
ಕೊಲೊಸ್ಸೆಯವರಿಗೆ 4 : 15 (IRVKN)
ಲವೊದಿಕೀಯದಲ್ಲಿರುವ ಸಹೋದರರಿಗೂ ಮತ್ತು ನುಂಫಳಿಗೂ ಹಾಗೂ ಆಕೆಯ ರೋಮಾ. 16:5 ಮನೆಯಲ್ಲಿ ಸೇರಿಬರುವ ಸಭೆಯವರಿಗೂ ವಂದನೆ ಹೇಳಿರಿ.
ಕೊಲೊಸ್ಸೆಯವರಿಗೆ 4 : 16 (IRVKN)
ನಿಮ್ಮಲ್ಲಿ ಈ ಪತ್ರವನ್ನು ಓದಿದ ತರುವಾಯ ಲವೊದಿಕೀಯದವರ ಸಭೆಯಲ್ಲಿಯೂ ಇದನ್ನು ಓದಿಸಿರಿ ಮತ್ತು ನಾನು ಬರೆದ ಪತ್ರವನ್ನು ಲವೊದಿಕೀಯದಿಂದ ತರಿಸಿ ನೀವೂ ಓದಿಕೊಳ್ಳಿರಿ.
ಕೊಲೊಸ್ಸೆಯವರಿಗೆ 4 : 17 (IRVKN)
§ ಫಿಲೆ. 2 ಅರ್ಖಿಪ್ಪನಿಗೆ, “ನೀನು ಕರ್ತನಿಂದ ಹೊಂದಿರುವ ಸೇವೆಯನ್ನು ಎಚ್ಚರವಾಗಿದ್ದು ನೆರವೇರಿಸಬೇಕೆಂದು” ಹೇಳಿರಿ.
ಕೊಲೊಸ್ಸೆಯವರಿಗೆ 4 : 18 (IRVKN)
* 1 ಕೊರಿ 16:21 ಇದು ಪೌಲನೆಂಬ ನಾನು ಸ್ವಂತ ಕೈಯಿಂದಲೇ ಬರೆದ ವಂದನೆ. † ಫಿಲಿ. 1:7; ಕೊಲೊ 4:3; ಇಬ್ರಿ. 13:3 ನಾನು ಸೆರೆಯಲ್ಲಿದ್ದೇನೆಂಬುದನ್ನು ಜ್ಞಾಪಕ ಮಾಡಿಕೊಳ್ಳಿರಿ. ‡ 1 ತಿಮೊ. 6:21; 2 ತಿಮೊ. 4:22; ತೀತ. 3:15; ಇಬ್ರಿ. 13:25 ಕೃಪೆಯು ನಿಮ್ಮೊಂದಿಗಿರಲಿ.

1 2 3 4 5 6 7 8 9 10 11 12 13 14 15 16 17 18