ಕೊಲೊಸ್ಸೆಯವರಿಗೆ 3 : 1 (IRVKN)
ನೂತನ ಸ್ವಭಾವವನ್ನು ಧರಿಸಿಕೊಳ್ಳಿರಿ
ಎಫೆ 4:17-6:9
* ಕೊಲೊ 2:12 ನೀವು ಕ್ರಿಸ್ತನೊಂದಿಗೆ ಎಬ್ಬಿಸಲ್ಪಟ್ಟಿರುವುದಾದರೆ † ಫಿಲಿ. 3:14 ಮೇಲಿನವುಗಳನ್ನೇ ಹುಡುಕಿರಿ, ‡ ಎಫೆ 1:20 ಅಲ್ಲಿ ಕ್ರಿಸ್ತನು ದೇವರ ಬಲಗಡೆಯಲ್ಲಿ ಕುಳಿತುಕೊಂಡಿದ್ದಾನೆ.
ಕೊಲೊಸ್ಸೆಯವರಿಗೆ 3 : 2 (IRVKN)
ಭೂಲೋಕದಲ್ಲಿರುವಂಥವುಗಳ ಬಗ್ಗೆ ಅಲ್ಲ, § ಮತ್ತಾ 16:23; ರೋಮಾ. 8:5; ಫಿಲಿ. 3:19 ಪರಲೋಕದಲ್ಲಿರುವಂಥವುಗಳ ಬಗ್ಗೆ ಯೋಚಿಸಿರಿ.
ಕೊಲೊಸ್ಸೆಯವರಿಗೆ 3 : 3 (IRVKN)
* ಕೊಲೊ 2:20; ರೋಮಾ. 6:2 ಯಾಕೆಂದರೆ ನೀವು ಸತ್ತು ಮತ್ತು ನಿಮ್ಮ ಜೀವವು ಕ್ರಿಸ್ತನೊಂದಿಗೆ ದೇವರಲ್ಲಿ ಮರೆಯಾಗಿದೆ.
ಕೊಲೊಸ್ಸೆಯವರಿಗೆ 3 : 4 (IRVKN)
ನಿಮಗೆ ಜೀವವಾಗಿರುವ ಕ್ರಿಸ್ತನು ಫಿಲಿ. 3:21; 1 ಪೇತ್ರ 1:7,3; 1 ಯೋಹಾ 2:28; 3:2 ಪ್ರತ್ಯಕ್ಷನಾಗುವಾಗ ನೀವು ಸಹ ಆತನೊಂದಿಗೆ ‡ 1 ಕೊರಿ 15:43 ಮಹಿಮೆಯಲ್ಲಿ ಪ್ರತ್ಯಕ್ಷರಾಗುವಿರಿ.
ಕೊಲೊಸ್ಸೆಯವರಿಗೆ 3 : 5 (IRVKN)
ಆದುದರಿಂದ ನಿಮ್ಮಲ್ಲಿರುವ ಲೌಕಿಕ § ಅಂಗಗಳು ಆಸೆಗಳು ಅಂದರೆ, * ಎಫೆ 56:3-5 ಜಾರತ್ವ, ಅಶುದ್ಧತ್ವ, † ರೋಮಾ. 1:26 ಕಾಮಾಭಿಲಾಷೆ, ಕೆಟ್ಟ ಅಭಿಲಾಷೆ ಮತ್ತು ‡ ಎಫೆ 5:6 ವಿಗ್ರಹಾರಾಧನೆಗೆ ಸಮವಾಗಿರುವ ದುರಾಶೆ ಇಂಥವುಗಳನ್ನು ರೋಮಾ. 8:13; ಗಲಾ. 5:24 ಸಾಯಿಸಿರಿ.
ಕೊಲೊಸ್ಸೆಯವರಿಗೆ 3 : 6 (IRVKN)
* ದೇವರ ಕೋಪವು ಆತನಿಗೆ ಅವಿಧೇಯರಾಗಿರುವವರ ಮೇಲೆ ಉಂಟಾಗುತ್ತದೆ. ಎಫೆ 5:6 ಇವುಗಳ ನಿಮಿತ್ತ ಅವಿಧೇಯರಾಗುವವರ ಮೇಲೆ ದೇವರ ಕೋಪವು ಉಂಟಾಗುತ್ತದೆ.
ಕೊಲೊಸ್ಸೆಯವರಿಗೆ 3 : 7 (IRVKN)
ಎಫೆ 2:2,11 ಹಿಂದೆ ನೀವು ಸಹ ಅಂಥವುಗಳಲ್ಲಿ ಜೀವಿಸುತ್ತಿದ್ದು ಅವುಗಳನ್ನು ನಡಿಸುತ್ತಿದ್ದಿರಿ.
ಕೊಲೊಸ್ಸೆಯವರಿಗೆ 3 : 8 (IRVKN)
ಆದರೆ ಎಫೆ 4:22,29,31 ಈಗಲಾದರೋ ಕ್ರೋಧ, ಕೋಪ, ಮತ್ಸರ, ದೂಷಣೆ ಮತ್ತು ಬಾಯಿಂದ ಹೊರಡುವ ದುರ್ಭಾಷೆ ಇವುಗಳನ್ನು ಬಿಟ್ಟುಬಿಡಿರಿ.
ಕೊಲೊಸ್ಸೆಯವರಿಗೆ 3 : 9 (IRVKN)
§ ಯಾಜ 19:11; ಎಫೆ 4:25 ಒಬ್ಬರಿಗೊಬ್ಬರು ಸುಳ್ಳಾಡಬೇಡಿರಿ, ಯಾಕೆಂದರೆ ನೀವು * ರೋಮಾ. 6:6; ಎಫೆ 4:22 ಹಿಂದಿನಸ್ವಭಾವವನ್ನು ಅದರ ಕೃತ್ಯಗಳೊಂದಿಗೆ ತೆಗೆದುಹಾಕಿ † ರೋಮಾ. 6:4 ನೂತನಸ್ವಭಾವವನ್ನು ಧರಿಸಿಕೊಂಡಿದ್ದೀರಲ್ಲವೇ.
ಕೊಲೊಸ್ಸೆಯವರಿಗೆ 3 : 10 (IRVKN)
ರೋಮಾ. 8:29; 12:2 ಈ ನೂತನ ಸ್ವಭಾವವು ಸೃಷ್ಟಿಸಿದಾತನ ಹೋಲಿಕೆಯ ಜ್ಞಾನದ ಮೇರೆಗೆ ಅದು ನೂತನವಾಗುತ್ತಾ ಬರುತ್ತದೆ.
ಕೊಲೊಸ್ಸೆಯವರಿಗೆ 3 : 11 (IRVKN)
§ ರೋಮಾ. 10:12; 1 ಕೊರಿ 12:13 ಈ ಜ್ಞಾನದಲ್ಲಿ ಗ್ರೀಕನು ಮತ್ತು ಯೆಹೂದ್ಯನು ಎಂಬ ಭೇದವಿಲ್ಲ, * ಗಲಾ. 5:6 ಸುನ್ನತಿಮಾಡಿಸಿಕೊಂಡವರು ಮತ್ತು ಸುನ್ನತಿ ಮಾಡಿಸಿಕೊಳ್ಳದವರು ಎಂಬ ಭೇದವಿಲ್ಲ, ನಾಗರಿಕ, ಅನಾಗರಿಕನು ಎಂಬ ಭೇದವಿಲ್ಲ, ದಾಸನು, ಸ್ವತಂತ್ರನು ಎಂಬ ಭೇದವಿಲ್ಲ, ಆದರ ಬದಲಾಗಿ † ಎಫೆ 1:23 ಕ್ರಿಸ್ತನೇ ಸಮಸ್ತವೂ ಹಾಗೂ ಸಮಸ್ತರಲ್ಲಿಯೂ ಇರುವಾತನಾಗಿದ್ದಾನೆ.
ಕೊಲೊಸ್ಸೆಯವರಿಗೆ 3 : 12 (IRVKN)
ಹೀಗಿರಲಾಗಿ ದೇವರಿಂದ ರೋಮಾ. 8:33 ಆರಿಸಿಕೊಂಡವರಾಗಿ, ಪರಿಶುದ್ಧರೂ ಹಾಗೂ ಪ್ರಿಯರೂ ಆಗಿರುವುದರಿಂದ § ಫಿಲಿ. 2:1; ಎಫೆ 4:32 ಕನಿಕರ, ದಯೆ, * ಎಫೆ 4:12 ದೀನತೆ, ಸಾತ್ವಿಕತ್ವ ಮತ್ತು ಸಹನೆ ಎಂಬ ಸದ್ಗುಣಗಳನ್ನು ಧರಿಸಿಕೊಳ್ಳಿರಿ.
ಕೊಲೊಸ್ಸೆಯವರಿಗೆ 3 : 13 (IRVKN)
ಒಬ್ಬರನ್ನೊಬ್ಬರು ಸೈರಿಸಿಕೊಂಡು ಯಾರಿಗಾದರೂ ಮಾರ್ಕ 11:25 ಮತ್ತೊಬ್ಬನ ಮೇಲೆ ತಪ್ಪುಹೊರಿಸುವುದಕ್ಕೆ ಕಾರಣವಿದ್ದರೂ, ತಪ್ಪುಹೊರಿಸದೆ ಕ್ಷಮಿಸಿರಿ, ‡ ಎಫೆ 4:32 ಕರ್ತನು ನಿಮ್ಮನ್ನು ಕ್ಷಮಿಸಿದಂತೆಯೇ ನೀವೂ ಕ್ಷಮಿಸಿರಿ.
ಕೊಲೊಸ್ಸೆಯವರಿಗೆ 3 : 14 (IRVKN)
ಇವೆಲ್ಲಕ್ಕಿಂತ ಮಿಗಿಲಾಗಿ ಸಂಪೂರ್ಣತೆಯ ಬಂಧವಾಗಿರುವ § ಎಫೆ 5:2 ಪ್ರೀತಿಯನ್ನು ಧರಿಸಿಕೊಳ್ಳಿರಿ.
ಕೊಲೊಸ್ಸೆಯವರಿಗೆ 3 : 15 (IRVKN)
* ಫಿಲಿ. 4:7 ಕ್ರಿಸ್ತನ ಸಮಾಧಾನವು ನಿಮ್ಮ ಹೃದಯಗಳಲ್ಲಿ ಆಳಲಿ. ಇದೇ ಸಮಾಧಾನದಲ್ಲಿ † ಎಫೆ 2:16 ಏಕ ದೇಹವಾಗಿರುವಂತೆ ನೀವು ಕರೆಯಲ್ಪಟ್ಟಿರುವಿರಿ ಇದಲ್ಲದೆ ಕೃತಜ್ಞತೆಯುಳ್ಳವರಾಗಿರಿ.
ಕೊಲೊಸ್ಸೆಯವರಿಗೆ 3 : 16 (IRVKN)
ಯೋಹಾ 15:3 ಕ್ರಿಸ್ತನ ವಾಕ್ಯವು ನಿಮ್ಮಲ್ಲಿ ಸಮೃದ್ಧಿಯಾಗಿ ವಾಸಿಸಲಿ. ಸಕಲಜ್ಞಾನದಿಂದ ಒಬ್ಬರಿಗೊಬ್ಬರು ಉಪದೇಶಮಾಡಿಕೊಂಡು ಬುದ್ಧಿಹೇಳಿಕೊಳ್ಳಿರಿ. § ಎಫೆ 5:19 ಕೀರ್ತನೆಗಳಿಂದಲೂ, ಸ್ತುತಿಪದಗಳಿಂದಲೂ ಮತ್ತು ಆತ್ಮೀಕವಾದ ಗೀತೆಗಳಿಂದಲೂ ಹಾಗೂ ನಿಮ್ಮ ಹೃದಯಗಳಲ್ಲಿ ದೇವರಿಗೆ ಕೃತಜ್ಞತೆಯಿಂದಲೂ ಹಾಡಿರಿ.
ಕೊಲೊಸ್ಸೆಯವರಿಗೆ 3 : 17 (IRVKN)
ನೀವು ನುಡಿಯಿಂದಾಗಲಿ ನಡೆಯಿಂದಾಗಲಿ ಏನೇ ಮಾಡಿದರೂ ಅದೆಲ್ಲವನ್ನೂ ಕರ್ತನಾದ ಯೇಸುವಿನ ಹೆಸರಿನಲ್ಲಿಯೇ ಮಾಡಿರಿ ಮತ್ತು ತಂದೆಯಾದ ದೇವರಿಗೆ * ಎಫೆ 5:20 ಆತನ ಮೂಲಕ ಕೃತಜ್ಞತಾಸ್ತುತ್ತಿಯನ್ನು ಸಲ್ಲಿಸಿರಿ.
ಕೊಲೊಸ್ಸೆಯವರಿಗೆ 3 : 18 (IRVKN)
ಕ್ರೈಸ್ತೀಯ ಕುಟುಂಬದ ನಿಯಮಗಳು ಕೊಲೊ 3:18, 4:1; ಎಫೆ 5:22 ಸತಿಯರೇ, ಕರ್ತನಿಗೆ ಯೋಗ್ಯವಾದ ರೀತಿಯಲ್ಲಿ ನಿಮ್ಮ ಗಂಡಂದಿರಿಗೆ ಅಧೀನರಾಗಿರಿ.
ಕೊಲೊಸ್ಸೆಯವರಿಗೆ 3 : 19 (IRVKN)
ಗಂಡಂದಿರೇ, ನಿಮ್ಮ ಹೆಂಡತಿಯರನ್ನು ಪ್ರೀತಿಸಿರಿ, ಅವರೊಂದಿಗೆ ಕಠಿಣವಾಗಿ ವರ್ತಿಸಬೇಡಿರಿ.
ಕೊಲೊಸ್ಸೆಯವರಿಗೆ 3 : 20 (IRVKN)
ಮಕ್ಕಳೇ, ಎಲ್ಲಾ ವಿಷಯಗಳಲ್ಲಿ ನಿಮ್ಮ ತಂದೆತಾಯಿಗಳಿಗೆ ವಿಧೇಯರಾಗಿರಿ, ಯಾಕೆಂದರೆ ಇದು ಕರ್ತನ ದೃಷ್ಟಿಯಲ್ಲಿ ಮೆಚ್ಚಿಕೆಯಾಗಿದೆ.
ಕೊಲೊಸ್ಸೆಯವರಿಗೆ 3 : 21 (IRVKN)
ತಂದೆಗಳೇ, ನಿಮ್ಮ ಮಕ್ಕಳನ್ನು ಕೆಣಕಿ ಅವರನ್ನು ಮನಗುಂದಿಸಿಬೇಡಿರಿ.
ಕೊಲೊಸ್ಸೆಯವರಿಗೆ 3 : 22 (IRVKN)
ದಾಸರೇ, ಈ ಲೋಕದಲ್ಲಿರುವ ನಿಮ್ಮ ಯಜಮಾನರಿಗೆ ಎಲ್ಲಾ ವಿಷಯಗಳಲ್ಲಿ ವಿಧೇಯರಾಗಿರಿ, ಮನುಷ್ಯರನ್ನು ಮೆಚ್ಚಿಸುವವರು ಮಾಡುವ ಹಾಗೆ ನಿಮ್ಮ ಯಜಮಾನರು ನೋಡುತ್ತಿರುವಾಗ ಮಾತ್ರ ಕೆಲಸಮಾಡದೆ, ಕರ್ತನಿಗೆ ಭಯಪಡುವ ಪ್ರಾಮಾಣಿಕವಾದ ಹೃದಯದಿಂದ ಕೆಲಸ ಮಾಡಿರಿ.
ಕೊಲೊಸ್ಸೆಯವರಿಗೆ 3 : 23 (IRVKN)
ನೀವು ಯಾವ ಕೆಲಸವನ್ನು ಮಾಡಿದರೋ ಅದನ್ನು ಮನುಷ್ಯರಿಗೋಸ್ಕರವೆಂದು ಮಾಡದೇ ಫಿಲೆ. 16 ಕರ್ತನಿಗೋಸ್ಕರವೇ ಎಂದು ಮನಃಪೂರ್ವಕವಾಗಿ ಮಾಡಿರಿ.
ಕೊಲೊಸ್ಸೆಯವರಿಗೆ 3 : 24 (IRVKN)
ಕರ್ತನಿಂದ ಬಾಧ್ಯತೆಯೆಂಬ § ಎಫೆ 6:8 ಪ್ರತಿಫಲವನ್ನು ಹೊಂದುವಿರೆಂದು ತಿಳಿದುಕೊಂಡು ಕರ್ತನಾದ ಕ್ರಿಸ್ತನನ್ನು * 1 ಕೊರಿ 7:22 ಸೇವಿಸುವವರಾಗಿರಿ.
ಕೊಲೊಸ್ಸೆಯವರಿಗೆ 3 : 25 (IRVKN)
ಅನ್ಯಾಯಮಾಡುವವನು ತಾನು ಮಾಡಿದ ಅನ್ಯಾಯಕ್ಕೆ ತಕ್ಕ ದಂಡನೆಯನ್ನು ಹೊಂದುವನಷ್ಟೆ ಮತ್ತು ಅದರಲ್ಲಿ ಪಕ್ಷಪಾತವಿರುವುದಿಲ್ಲ.

1 2 3 4 5 6 7 8 9 10 11 12 13 14 15 16 17 18 19 20 21 22 23 24 25