2 ತಿಮೊಥೆಯನಿಗೆ 4 : 1 (IRVKN)
ನಾನು ದೇವರ ಸಮಕ್ಷಮದಲ್ಲಿ ಮತ್ತು * ಅ. ಕೃ 10:42; 17:31; 24:25; ಯೋಹಾ 5:22, 27; 2 ಕೊರಿ 5:10; 1 ಪೇತ್ರ 4:5 ಜೀವಿಸುವವರಿಗೂ ಸತ್ತವರಿಗೂ ನ್ಯಾಯತೀರಿಸುವುದಕ್ಕೆ ಬರುವ ಕ್ರಿಸ್ತ ಯೇಸುವಿನ ಪ್ರತ್ಯಕ್ಷತೆಯನ್ನೂ, † ವ. 8; 2 ಥೆಸ. 2:8 ಆತನ ರಾಜ್ಯವನ್ನೂ ಮುಂದಿಟ್ಟು ನಿನಗೆ ಖಂಡಿತವಾಗಿ ಹೇಳುವುದೇನಂದರೆ,
2 ತಿಮೊಥೆಯನಿಗೆ 4 : 2 (IRVKN)
ದೇವರ ವಾಕ್ಯವನ್ನು ಸಾರು, ಅನುಕೂಲವಾದ ಕಾಲದಲ್ಲಿಯೂ ಅನುಕೂಲವಿಲ್ಲದ ಕಾಲದಲ್ಲಿಯೂ ಅದರಲ್ಲಿ ಆಸಕ್ತನಾಗಿರು. ಪೂರ್ಣ ದೀರ್ಘಶಾಂತಿಯಿಂದ ಉಪದೇಶಿಸುತ್ತಾ 1 ತಿಮೊ 5:20; ತೀತ 1:13; 2:15 ಖಂಡಿಸು, ಗದರಿಸು, ಎಚ್ಚರಿಸು.
2 ತಿಮೊಥೆಯನಿಗೆ 4 : 3 (IRVKN)
ಯಾಕೆಂದರೆ ಜನರು § 1 ತಿಮೊ 1:10 ಸ್ವಸ್ಥಬೋಧನೆಯನ್ನು ಒಪ್ಪಲಾರದ * 2 ತಿಮೊ 3:1 ಕಾಲವು ಬರುತ್ತದೆ. ಅದರಲ್ಲಿ ಅವರು ಕಿವಿಗೆ ಇಂಪಾಗುವ ಹಾಗೆ ತಮ್ಮ ದುರಾಶೆಗಳಿಗೆ ಅನುಕೂಲವಾದ ಉಪದೇಶಗಳನ್ನು ನೀಡುವ ಅನೇಕ ಉಪದೇಶಕರನ್ನು ಇಟ್ಟುಕೊಳ್ಳುವರು.
2 ತಿಮೊಥೆಯನಿಗೆ 4 : 4 (IRVKN)
ಅವರು ಸತ್ಯ ಬೋಧನೆಗೆ ಕಿವಿಗೊಡದೆ 1 ತಿಮೊ 1:4,6 ಕಟ್ಟುಕಥೆಗಳನ್ನು ಕೇಳುವುದಕ್ಕೆ ಇಚ್ಛಿಸುವರು.
2 ತಿಮೊಥೆಯನಿಗೆ 4 : 5 (IRVKN)
ಆದರೆ ನೀನು ಎಲ್ಲಾ ವಿಷಯಗಳಲ್ಲಿಯೂ 1 ಪೇತ್ರ 1:13 ಸ್ವಸ್ಥಚಿತ್ತನಾಗಿರು, § 2 ತಿಮೊ 1:8; 2:3; 9 ಹಿಂಸೆಯನ್ನು ತಾಳಿಕೋ, * ಅ. ಕೃ 21:8; ಎಫೆ 4:11 ಸುವಾರ್ತಿಕನ ಕೆಲಸವನ್ನು ಮಾಡು, ನಿನಗೆ ನೇಮಿಸಿರುವ ಸೇವೆಯನ್ನು ಲೋಪವಿಲ್ಲದೆ ಮಾಡು.
2 ತಿಮೊಥೆಯನಿಗೆ 4 : 6 (IRVKN)
ಯಾಕೆಂದರೆ ನಾನಂತೂ ಫಿಲಿ 2:17 ಈಗಲೇ ಪಾನದ್ರವ್ಯವಾಗಿ ಅರ್ಪಿತನಾಗುತ್ತಾ ಇದ್ದೇನೆ. ‡ ಫಿಲಿ 1:23 ನನ್ನ ನಿರ್ಗಮನದ ಸಮಯವು ಸಮೀಪವಾಗುತ್ತಾ ಬಂದಿದೆ.
2 ತಿಮೊಥೆಯನಿಗೆ 4 : 7 (IRVKN)
§ 1 ತಿಮೊ 6:12 ಶ್ರೇಷ್ಠ ಹೋರಾಟವನ್ನು ಮಾಡಿದ್ದೇನೆ, * ಅ ಕೃ 20:24 ನನ್ನ ಓಟವನ್ನು ಓಡಿಮುಗಿಸಿದ್ದೇನೆ, ಕ್ರಿಸ್ತ ನಂಬಿಕೆಯನ್ನು ಕಾಪಾಡಿಕೊಂಡಿದ್ದೇನೆ.
2 ತಿಮೊಥೆಯನಿಗೆ 4 : 8 (IRVKN)
ಮೂಲ: ನೀತಿಯೆಂಬ ನೀತಿವಂತರಿಗೆ ದೊರಕುವ ಜಯಮಾಲೆಯು ಮುಂದೆ ನನಗಾಗಿ ಸಿದ್ಧವಾಗಿದೆ, ಅದನ್ನು ‡ ಕೀರ್ತ 7:11 ನೀತಿವಂತನಾದ ನ್ಯಾಯಾಧಿಪತಿಯಾಗಿರುವ ಕರ್ತನು § 2 ತಿಮೊ 1:12 ಆ ದಿನದಲ್ಲಿ ನನಗೆ ಕೊಡುವನು, ನನಗೆ ಮಾತ್ರವಲ್ಲದೆ ತನ್ನ ಪ್ರತ್ಯಕ್ಷತೆಯನ್ನು ಪ್ರೀತಿಸುವವರೆಲ್ಲರಿಗೂ ಕೊಡುವನು.
2 ತಿಮೊಥೆಯನಿಗೆ 4 : 9 (IRVKN)
ಪೌಲನ ವೈಯುಕ್ತಿಕ ಆದೇಶಗಳು ನೀನು * 2 ತಿಮೊ. 1:4 ನನ್ನ ಬಳಿಗೆ ಬೇಗನೇ ಬರುವುದಕ್ಕೆ ಪ್ರಯತ್ನಪಡು,
2 ತಿಮೊಥೆಯನಿಗೆ 4 : 10 (IRVKN)
ಯಾಕೆಂದರೆ ಕೊಲೊ 4:14; ಫಿಲಿ 24 ದೇಮನು ಇಹಲೋಕವನ್ನು ‡ 1 ಯೋಹಾ 2:15 ಪ್ರೀತಿಸಿ, § 2 ತಿಮೊ 1:15 ನನ್ನನ್ನು ಬಿಟ್ಟು ಥೆಸಲೋನಿಕಕ್ಕೆ ಹೋದನು. ಕ್ರೆಸ್ಕನು ಗಲಾತ್ಯಕ್ಕೂ * ತೀತ 3:12 ತೀತನು ದಲ್ಮಾತ್ಯಕ್ಕೂ ಹೋದರು.
2 ತಿಮೊಥೆಯನಿಗೆ 4 : 11 (IRVKN)
1 ತಿಮೊ 1:15 ಲೂಕನು ಮಾತ್ರ ನನ್ನ ಜೊತೆಯಲ್ಲಿದ್ದಾನೆ. ‡ ಅ. ಕೃ 12:12 ಮಾರ್ಕನನ್ನು ನಿನ್ನ ಸಂಗಡ ಕರೆದುಕೊಂಡು ಬಾ, ಅವನು ನನಗೆ ಸೇವೆಯಲ್ಲಿ ಉಪಯುಕ್ತನಾಗಿದ್ದಾನೆ.
2 ತಿಮೊಥೆಯನಿಗೆ 4 : 12 (IRVKN)
(12-13) § ಅ. ಕೃ 20:4; ಎಫೆ 6:21; ಕೊಲೊ 4:7; ತೀತ 3:12 ತುಖಿಕನನ್ನು ಎಫೆಸಕ್ಕೆ ಕಳುಹಿಸಿದೆನು. ತ್ರೋವದಲ್ಲಿ ನಾನು ಕರ್ಪನ ಬಳಿಯಲ್ಲಿ ಬಿಟ್ಟು ಬಂದ ಮೇಲಂಗಿಯನ್ನೂ, ಪುಸ್ತಕಗಳನ್ನೂ, ಮುಖ್ಯವಾಗಿ ಚರ್ಮದ ಕಾಗದಗಳನ್ನೂ ನೀನು ಬರುವಾಗ ತೆಗೆದುಕೊಂಡು ಬಾ.
2 ತಿಮೊಥೆಯನಿಗೆ 4 : 13 (IRVKN)
2 ತಿಮೊಥೆಯನಿಗೆ 4 : 14 (IRVKN)
* 1 ತಿಮೊ 1:20 ಕಂಚುಗಾರನಾದ ಅಲೆಕ್ಸಾಂದ್ರನು ನನಗೆ ಬಹಳ ಕೇಡುಮಾಡಿದನು. † ಕೀರ್ತ 62:12; ಜ್ಞಾ 24:12 ಕರ್ತನು ಅವನ ಕೃತ್ಯಗಳಿಗೆ ತಕ್ಕ ಪ್ರತಿಫಲವನ್ನು ಅವನಿಗೆ ಕೊಡುವನು.
2 ತಿಮೊಥೆಯನಿಗೆ 4 : 15 (IRVKN)
ನೀನು ಸಹ ಅವನ ವಿಷಯದಲ್ಲಿ ಎಚ್ಚರಿಕೆಯಾಗಿರು, ಅವನು ನಮ್ಮ ಮಾತುಗಳನ್ನು ಬಹಳವಾಗಿ ಎದುರಿಸಿದನು.
2 ತಿಮೊಥೆಯನಿಗೆ 4 : 16 (IRVKN)
ನಾನು ಮೊದಲನೆ ಸಾರಿ ಪ್ರತಿವಾದ ಮಾಡಿದಾಗ ಯಾರೂ ನನ್ನ ಸಂಗಡ ಇರಲಿಲ್ಲ, ಎಲ್ಲರೂ ನನ್ನನ್ನು ಕೈಬಿಟ್ಟರು. ಅ. ಕೃ 7:60 ಇದು ಅವರಿಗೆ ದೋಷವಾಗಿ ಎಣಿಸಲ್ಪಡದೆ ಇರಲಿ.
2 ತಿಮೊಥೆಯನಿಗೆ 4 : 17 (IRVKN)
§ ಅ. ಕೃ 23:11; 27:23; ಮತ್ತಾ 10:19 ಆದರೆ ಕರ್ತನು ನನ್ನ ಬಳಿಯಲ್ಲಿ ನಿಂತು ನನ್ನನ್ನು ಬಲಪಡಿಸಿ ನನ್ನ ಮೂಲಕ ಸುವಾರ್ತೆಯು ಸಂಪೂರ್ಣವಾಗಿ ಸಾರಲ್ಪಡುವಂತೆಯೂ, * ಅ. ಕೃ 9:15 ಅನ್ಯ ಜನರೆಲ್ಲರೂ ಅದನ್ನು ಕೇಳುವಂತೆಯೂ ಮಾಡಿದನು. ಇದಲ್ಲದೆ ಆತನು ನನ್ನನ್ನು † 1 ಪೇತ್ರ 5:8; ಕೀರ್ತ 22:21 ಸಿಂಹದ ಬಾಯೊಳಗಿಂದ ತಪ್ಪಿಸಿದನು.
2 ತಿಮೊಥೆಯನಿಗೆ 4 : 18 (IRVKN)
ಮತ್ತಾ 6:13 ಪ್ರತಿಯೊಂದು ದುಷ್ಕೃತ್ಯದಿಂದ ಕರ್ತನು ನನ್ನನ್ನು ಕಾಪಾಡಿ ತನ್ನೊಂದಿಗೆ ಪರಲೋಕ ರಾಜ್ಯಕ್ಕೆ ಸೇರಿಸುವನು. § ರೋಮಾ 11:36 ಯುಗಯುಗಾಂತರಗಳಲ್ಲಿಯೂ ಆತನಿಗೆ ಸ್ತೋತ್ರ. ಆಮೆನ್.
2 ತಿಮೊಥೆಯನಿಗೆ 4 : 19 (IRVKN)
ಅಂತಿಮ ವಂದನೆಗಳು * ಅ. ಕೃ. 18:2 ಪ್ರಿಸ್ಕಿಲ್ಲಳಿಗೂ, ಅಕ್ವಿಲ್ಲನಿಗೂ, † 2 ತಿಮೊ 1:16 ಒನೇಸಿಪೊರನ ಮನೆಯವರಿಗೂ ವಂದನೆಹೇಳು.
2 ತಿಮೊಥೆಯನಿಗೆ 4 : 20 (IRVKN)
ಅ. ಕೃ. 19:22; ರೋಮಾ 16:23 ಎರಸ್ತನು ಕೊರಿಂಥದಲ್ಲಿ ನಿಂತನು. § ಅ. ಕೃ 20:4; 21:29 ತ್ರೊಫಿಮನು ಅಸ್ವಸ್ಥನಾಗಿದ್ದುದರಿಂದ ಅವನನ್ನು ಮಿಲೇತದಲ್ಲಿ ಬಿಟ್ಟೆನು.
2 ತಿಮೊಥೆಯನಿಗೆ 4 : 21 (IRVKN)
* ವ. 9 ಚಳಿಗಾಲಕ್ಕೆ ಮುಂಚೆಯೇ ಬರುವುದಕ್ಕೆ ಪ್ರಯತ್ನಿಸು. ಯುಬೂಲನು, ಪೊದೆಯನೂ, ಲೀನನೂ, ಕ್ಲೌದ್ಯಳೂ ಉಳಿದ ಸಹೋದರರೆಲ್ಲರೂ ನಿನಗೆ ವಂದನೆ ಹೇಳುತ್ತಾರೆ.
2 ತಿಮೊಥೆಯನಿಗೆ 4 : 22 (IRVKN)
ಕರ್ತನು ಗಲಾ 6:18; ಫಿಲಿ 25 ನಿನ್ನ ಆತ್ಮದೊಂದಿಗೆ ಇರಲಿ. ಆತನ ‡ ಕೊಲೊ 4:18 ಕೃಪೆಯು ನಿಮ್ಮೊಂದಿಗಿರಲಿ.

1 2 3 4 5 6 7 8 9 10 11 12 13 14 15 16 17 18 19 20 21 22