2 ತಿಮೊಥೆಯನಿಗೆ 2 : 1 (IRVKN)
* 2 ತಿಮೊ. 1:2 ನನ್ನ ಮಗನೇ, ನೀನು ಕ್ರಿಸ್ತ ಯೇಸುವಿನಲ್ಲಿರುವ ಕೃಪೆಯಿಂದ † ಎಫೆ 6:10 ಬಲಹೊಂದಿದವನಾಗು.
2 ತಿಮೊಥೆಯನಿಗೆ 2 : 2 (IRVKN)
ನೀನು ಅನೇಕ ಸಾಕ್ಷಿಗಳ ಮುಂದೆ ನನ್ನಿಂದ ಕೇಳಿದ ಉಪದೇಶವನ್ನು ‡ ತೀತ 1:5 ಇತರರಿಗೆ ಬೋಧಿಸಲು ಶಕ್ತರಾದ, ನಂಬಿಗಸ್ತರಾದ ಜನರಿಗೆ ಅದನ್ನು ಒಪ್ಪಿಸಿಕೊಡು.
2 ತಿಮೊಥೆಯನಿಗೆ 2 : 3 (IRVKN)
§ 1 ತಿಮೊ 1:18; 2 ತಿಮೊ. 1:; 4:5 ಕ್ರಿಸ್ತ ಯೇಸುವಿನ ಒಳ್ಳೆಯ ಸೈನಿಕನಂತೆ ನನ್ನೊಂದಿಗೆ ಕಷ್ಟವನ್ನನುಭವಿಸು.
2 ತಿಮೊಥೆಯನಿಗೆ 2 : 4 (IRVKN)
ಯುದ್ಧಕ್ಕೆ ಹೋಗುವ ಸೈನಿಕನು ಲೋಕವ್ಯವಹಾರದಲ್ಲಿ ಸಿಕ್ಕಿಕೊಳ್ಳದೆ, ತನ್ನನ್ನು ಸೈನ್ಯದಲ್ಲಿ ಸೇರಿಸಿಕೊಂಡವನನ್ನು ಮೆಚ್ಚಿಸುವುದಕ್ಕಾಗಿ ಪ್ರಯಾಸ ಪಡುತ್ತಿರುವನಲ್ಲವೇ.
2 ತಿಮೊಥೆಯನಿಗೆ 2 : 5 (IRVKN)
ಇದಲ್ಲದೆ * 1 ಕೊರಿ 9:25 ಯಾವನಾದರೂ ಸ್ಪರ್ಧೆಯಲ್ಲಿ ಎದುರಾಳಿಯೊಡನೆ ಹೋರಾಡುವಾಗ ನಿಯಮದ ಪ್ರಕಾರ ಹೋರಾಡದಿದ್ದರೆ ಅವನಿಗೆ † 2 ತಿಮೊ. 4:8 ಜಯಮಾಲೆಯು ದೊರಕುವುದಿಲ್ಲ.
2 ತಿಮೊಥೆಯನಿಗೆ 2 : 6 (IRVKN)
‡ 1 ಕೊರಿ 9:10; ಇಬ್ರಿ. 6:7; ಯಾಕೋಬ 5:7 ವ್ಯವಸಾಯದ ಹುಟ್ಟುವಳಿಯಲ್ಲಿ ಮೊದಲನೆಯ ಪಾಲು ಕಷ್ಟಪಟ್ಟ ಕೃಷಿಕನಿಗೆ ದೊರೆಯುತ್ತದೆ.
2 ತಿಮೊಥೆಯನಿಗೆ 2 : 7 (IRVKN)
ನಾನು ಹೇಳುವುದನ್ನು ಯೋಚಿಸು. ಕರ್ತನು ಎಲ್ಲಾದರಲ್ಲಿಯೂ ನಿನಗೆ ವಿವೇಕವನ್ನು ದಯಪಾಲಿಸುವನು.
2 ತಿಮೊಥೆಯನಿಗೆ 2 : 8 (IRVKN)
§ ದಾವೀದನ ವಂಶದವನಾದ ಯೇಸು ಕ್ರಿಸ್ತನು ಸತ್ತವರೊಳಗಿಂದ ಎಬ್ಬಿಸಲ್ಪಟ್ಟವನೆಂಬುದನ್ನು ಜ್ಞಾಪಕಮಾಡಿಕೋ; 1 ಕೊರಿ 15:20 ಸತ್ತವರೊಳಗಿಂದ ಎಬ್ಬಿಸಲ್ಪಟ್ಟವನೂ * ಮತ್ತಾ 1:1 ದಾವೀದನ ವಂಶದವನೂ ಆಗಿರುವ ಯೇಸು ಕ್ರಿಸ್ತನನ್ನು ಜ್ಞಾಪಕಮಾಡಿಕೋ, † ರೋಮಾ. 2:16 ಇದೇ ನಾನು ಸಾರುವ ಸುವಾರ್ತೆ.
2 ತಿಮೊಥೆಯನಿಗೆ 2 : 9 (IRVKN)
ಇದರಲ್ಲಿ ‡ 2 ತಿಮೊ. 1:8, 12 ನಾನು ಕಷ್ಟವನ್ನನುಭವಿಸಿ ದುಷ್ಕರ್ಮಿಯಂತೆ § ಫಿಲಿ. 1:7 ಸಂಕೋಲೆಯಿಂದ ಬಂಧಿಸಲ್ಪಟ್ಟವನಾಗಿದ್ದೇನೆ. * 2 ತಿಮೊ. 4:17; ಫಿಲಿ 1:13 ಆದರೆ ದೇವರ ವಾಕ್ಯಕ್ಕೆ ಬಂಧನವಿಲ್ಲ.
2 ತಿಮೊಥೆಯನಿಗೆ 2 : 10 (IRVKN)
ಆದಕಾರಣ ದೇವರು ಆರಿಸಿಕೊಂಡವರು ಸಹ ಕ್ರಿಸ್ತ ಯೇಸುವಿನಲ್ಲಿರುವ ರಕ್ಷಣೆಯನ್ನು † 1 ಪೇತ್ರ 5:10 ನಿತ್ಯ ಮಹಿಮೆಯ ಸಹಿತವಾಗಿ ಹೊಂದಬೇಕೆಂದು ‡ ಎಫೆ 3:13; ಕೊಲೊ 1:24; 1 ಕೊರಿ 3:7 ನಾನು ಅವರಿಗೋಸ್ಕರ ಎಲ್ಲವನ್ನು ತಾಳಿಕೊಳ್ಳುತ್ತೇನೆ.
2 ತಿಮೊಥೆಯನಿಗೆ 2 : 11 (IRVKN)
§ 1 ತಿಮೊ. 1:15 ಈ ಮಾತು ನಂಬತಕ್ಕದ್ದಾಗಿದೆ, ಅದೇನೆಂದರೆ “ * 1 ಥೆಸ. 5:10; ರೋಮಾ. 6:8 ನಾವು ಆತನೊಡನೆ ಸತ್ತಿದ್ದರೆ † ಪ್ರಕ 20:4 ಆತನೊಡನೆ ಜೀವಿಸುವೆವು,
2 ತಿಮೊಥೆಯನಿಗೆ 2 : 12 (IRVKN)
‡ 2 ಥೆಸ. 1:4,5; ರೋಮಾ. 8:17; ಇಬ್ರಿ. 10:36; ಪ್ರಕ 20:4 ಸಹಿಸಿಕೊಳ್ಳುವವರಾಗಿದ್ದರೆ ಆತನೊಡನೆ ಆಳುವೆವು. § ಮತ್ತಾ 10:33; ಮಾರ್ಕ 8:38; 2 ಪೇತ್ರ 2:1; 1 ಯೋಹಾ 2:23 ನಾವು ಯೇಸುವಿನವರಲ್ಲವೆಂದು ಹೇಳಿದರೆ * ಮತ್ತಾ 7:23; 10:33; 25:12; ಲೂಕ 13:25 ಆತನು ನಮ್ಮನ್ನು ತನ್ನವರಲ್ಲವೆಂದು ಹೇಳುವನು.
2 ತಿಮೊಥೆಯನಿಗೆ 2 : 13 (IRVKN)
ನಾವು ಅಪನಂಬಿಗಸ್ತರಾಗಿದ್ದರೂ † 1 ಕೊರಿ 1:9 ಆತನು ನಂಬಿಗಸ್ತನಾಗಿಯೇ ಇರುವನು. ಆತನು ‡ ಅರಣ್ಯ 23:19; ತೀತ 3:9 ತನ್ನ ಸ್ವಭಾವವನ್ನು ನಿರಾಕರಿಸಲು ಆಗುವುದಿಲ್ಲ.”
2 ತಿಮೊಥೆಯನಿಗೆ 2 : 14 (IRVKN)
ಅನುಮೋದಿತನಾದ ಸೇವಕನು ಈ ಸಂಗತಿಗಳನ್ನು ಸಭೆಯವರ ಜ್ಞಾಪಕಕ್ಕೆ ತರಬೇಕು. ಕೇಳುವವರಿಗೆ ಕೇಡನ್ನುಂಟುಮಾಡುವುದಲ್ಲದೇ, ಯಾವ ಪ್ರಯೋಜನಕ್ಕೂ ಬಾರದ ತರ್ಕ § 1 ತಿಮೊ. 6:4; ವ. 23 ವಾಗ್ವಾದಗಳನ್ನು ಮಾಡಬಾರದೆಂದು, ಅವರಿಗೆ ದೇವರ ಸನ್ನಿಧಿಯಲ್ಲಿ ಖಂಡಿತವಾಗಿ ಹೇಳು.
2 ತಿಮೊಥೆಯನಿಗೆ 2 : 15 (IRVKN)
ನೀನು ದೇವರಿಗೆ ಯೋಗ್ಯನಾಗಿ ಕಾಣಿಸಿಕೊಳ್ಳುವುದಕ್ಕೆ ಪ್ರಯಾಸಪಡು. ಅವಮಾನಕ್ಕೆ ಗುರಿಯಾಗದ ಕೆಲಸದವನೂ ಸತ್ಯವಾಕ್ಯವನ್ನು ಸರಿಯಾಗಿ ಉಪದೇಶಿಸುವವನೂ ಆಗಿರು.
2 ತಿಮೊಥೆಯನಿಗೆ 2 : 16 (IRVKN)
* 1 ತಿಮೊ. 6:20 ಪ್ರಾಪಂಚಿಕವಾದ ವ್ಯರ್ಥ ಹರಟೆ ಮಾತುಗಳಿಂದ † ತೀತ 3:9 ದೂರವಾಗಿರು, ಅವುಗಳಿಗೆ ಮನಸ್ಸುಕೊಡುವವರು ಹೆಚ್ಚೆಚ್ಚಾಗಿ ಭಕ್ತಿಹೀನರಾಗುವರು.
2 ತಿಮೊಥೆಯನಿಗೆ 2 : 17 (IRVKN)
ಅವರ ಮಾತು ಹುಣ್ಣುವ್ಯಾಧಿಯಂತೆ ಹರಡಿಕೊಳ್ಳುವುದು. ಅವರಲ್ಲಿ ‡ 1 ತಿಮೊ. 1:20 ಹುಮೆನಾಯನೂ ಪಿಲೇತನೂ ಇದ್ದಾರೆ.
2 ತಿಮೊಥೆಯನಿಗೆ 2 : 18 (IRVKN)
ಅವರು ಸತ್ಯಭ್ರಷ್ಟರಾಗಿ § 1 ಕೊರಿ 15:12 ಪುನರುತ್ಥಾನವು ಆಗಿಹೋಯಿತೆಂದು ಹೇಳುತ್ತಾ ಹಲವರ ನಂಬಿಕೆಯನ್ನು ಕೆಡಿಸುವವರಾಗಿದ್ದಾರೆ.
2 ತಿಮೊಥೆಯನಿಗೆ 2 : 19 (IRVKN)
ಆದರೂ ದೇವರ ಸ್ಥಿರವಾದ ಅಸ್ತಿವಾರವು ನಿಲ್ಲುತ್ತದೆ. ಅದರ ಮೇಲೆ * ಅರಣ್ಯ 16:5; ನಹೂ. 1:7; ಯೋಹಾ 10:14, 27; 1 ಕೊರಿ 8:3 “ತನ್ನವರು ಯಾರೆಂಬುದನ್ನು ಕರ್ತನು ತಿಳಿದಿದ್ದಾನೆ” ಎಂತಲೂ “ಕರ್ತನ ನಾಮವನ್ನು ಹೇಳಿಕೊಳ್ಳುವವರೆಲ್ಲರು ದುರ್ಮಾರ್ಗತನವನ್ನು ಬಿಟ್ಟುಬಿಡಬೇಕು” ಎಂತಲೂ ಲಿಖಿತವಾಗಿದೆ.
2 ತಿಮೊಥೆಯನಿಗೆ 2 : 20 (IRVKN)
† 1 ತಿಮೊ. 3:15 ದೊಡ್ಡ ಮನೆಯಲ್ಲಿ ಬೆಳ್ಳಿ ಬಂಗಾರದ ಪಾತ್ರೆಗಳಲ್ಲದೆ, ಮರದ ಪಾತ್ರೆಗಳೂ, ಮಣ್ಣಿನ ಪಾತ್ರೆಗಳೂ ಇರುತ್ತವೆ. ಅವುಗಳಲ್ಲಿ ‡ ರೋಮಾ. 9:21 ಕೆಲವನ್ನು ಉತ್ತಮವಾದ ಬಳಕೆಗೂ ಕೆಲವನ್ನು ಹೀನವಾದ ಬಳಕೆಗೂ ಬಳಸಲಾಗುತ್ತದೆ.
2 ತಿಮೊಥೆಯನಿಗೆ 2 : 21 (IRVKN)
§ ಜ್ಞಾ. 25:4; ಯೆಶಾ 52:11 ಹೀಗಿರಲಾಗಿ ಒಬ್ಬನು ಹೀನ ನಡತೆಯುಳ್ಳವರ ಸಹವಾಸವನ್ನು ಬಿಟ್ಟು ತನ್ನನ್ನು ಶುದ್ಧಮಾಡಿಕೊಂಡರೆ, ಅವನು ಉತ್ತಮವಾದ ಬಳಕೆಗೆ ಯೋಗ್ಯನಾಗಿರುವನು. ಅವನು ದೇವರ ಸೇವೆಗೆ ಪ್ರತಿಷ್ಠಿತನಾಗಿಯೂ, ಯಜಮಾನನಿಗೆ ಉಪಯುಕ್ತನಾಗಿಯೂ, * 2 ತಿಮೊ. 3:17; ತೀತ 3:1 ಸಕಲ ಸತ್ಕ್ರಿಯೆಗಳನ್ನು ಮಾಡುವುದಕ್ಕೆ ಸಿದ್ಧನಾಗಿಯೂ ಇರುವನು.
2 ತಿಮೊಥೆಯನಿಗೆ 2 : 22 (IRVKN)
ನೀನು ಯೌವನದ ಮೋಹಗಳಿಗೆ ದೂರವಾಗಿರು. ಶುದ್ಧಹೃದಯವುಳ್ಳವರಾಗಿ ಕರ್ತನನ್ನು ಬೇಡಿಕೊಳ್ಳುವವರ ಸಂಗಡ ನೀತಿ, ನಂಬಿಕೆ, ಪ್ರೀತಿ ಮತ್ತು ಸಮಾಧಾನಗಳನ್ನು ಸಂಪಾದಿಸುವುದಕ್ಕೆ ಪ್ರಯಾಸಪಡು.
2 ತಿಮೊಥೆಯನಿಗೆ 2 : 23 (IRVKN)
† 1 ತಿಮೊ. 6:4 ಮೂಢರ ಬುದ್ಧಿಹೀನರ ವಿಚಾರಗಳು ಜಗಳಗಳಿಗೆ ಕಾರಣವಾಗುತ್ತವೆಯೆಂದು ತಿಳಿದು ಅವುಗಳ ಗೊಡವೆಗೆ ಹೋಗಬೇಡ.
2 ತಿಮೊಥೆಯನಿಗೆ 2 : 24 (IRVKN)
‡ ಮತ್ತಾ 12:18 ಕರ್ತನ ಸೇವಕನು ಜಗಳವಾಡದೆ, § 1 ಥೆಸ. 2:7 ಎಲ್ಲರ ವಿಷಯದಲ್ಲಿ ಸಾಧುವೂ, * 1 ತಿಮೊ. 3:2 ಬೋಧಿಸುವುದರಲ್ಲಿ ಪ್ರವೀಣನ್ನೂ, ತಾಳ್ಮೆಯುಳ್ಳವನ್ನೂ
2 ತಿಮೊಥೆಯನಿಗೆ 2 : 25 (IRVKN)
ಎದುರಿಸುವವರನ್ನು † ಗಲಾತ್ಯ. 6:1; ತೀತ 3:2 ಸೌಮ್ಯತೆಯಿಂದ ತಿದ್ದುವವನೂ ಆಗಿರಬೇಕು. ‡ ಅ. ಕೃ. 8:22 ಬಹುಶಃ ದೇವರು ಆ ಎದುರಿಸುವವರ ಮನಸ್ಸನ್ನು ತನ್ನ ಕಡೆಗೆ ತಿರುಗಿಸಿ § 1 ತಿಮೊ. 2:4 ಸತ್ಯದ ಜ್ಞಾನವನ್ನು ಅವರಿಗೆ ಕೊಟ್ಟಾನು.
2 ತಿಮೊಥೆಯನಿಗೆ 2 : 26 (IRVKN)
* 1 ತಿಮೊ. 3:7 ಸೈತಾನನ ಬಲೆಗೆ ಬಿದ್ದವರಾದ ಇವರು ಒಂದು ವೇಳೆ ತಪ್ಪಿಸಿಕೊಂಡು ದೇವರ ಚಿತ್ತವನ್ನು ಅನುಸರಿಸುವುದಕ್ಕೆ ಶಕ್ತರಾದಾರು.
❮
❯