2 ಥೆಸಲೊನೀಕದವರಿಗೆ 3 : 1 (IRVKN)
ಪ್ರಾರ್ಥನೆಗಾಗಿ ವಿನಂತಿ ಕಡೆಯದಾಗಿ, * 1 ಥೆಸ. 5:25: ಸಹೋದರರೇ, ನಮಗೋಸ್ಕರ ಪ್ರಾರ್ಥನೆಮಾಡಿರಿ. ಕರ್ತನ ವಾಕ್ಯವು ನಿಮ್ಮಲ್ಲಿ ಹಬ್ಬಿಹರಡಿದ ಪ್ರಕಾರವೇ † ಕೀರ್ತ 147:15; 1 ಥೆಸ. 1:8: ಅದು ಬೇಗನೆ ಪಸರಿಸಿ ಮಹಿಮೆ ಹೊಂದಲಿ,
2 ಥೆಸಲೊನೀಕದವರಿಗೆ 3 : 2 (IRVKN)
ರೋಮಾ. 15:31: ದೇವರು ನಮ್ಮನ್ನು ಮೂರ್ಖರಾದ ದುಷ್ಟಜನರ ಕೈಯಿಂದ ತಪ್ಪಿಸುವ ಹಾಗೆಯೂ ಪ್ರಾರ್ಥಿಸಿರಿ, ಕ್ರಿಸ್ತ ನಂಬಿಕೆಯು ಎಲ್ಲರಲ್ಲಿ ಇರುವುದಿಲ್ಲವಲ್ಲಾ.
2 ಥೆಸಲೊನೀಕದವರಿಗೆ 3 : 3 (IRVKN)
ಆದರೆ § 1 ಕೊರಿ 1:9: ಕರ್ತನು ನಂಬಿಗಸ್ತನು, ಆತನು ನಿಮ್ಮನ್ನು ದೃಢಪಡಿಸಿ ನೀವು * 1 ಯೋಹಾ 2:14: ಕೆಡುಕನ ಕೈಗೆ † ಮತ್ತಾ 6:13; ಯೋಹಾ 17:15: ಸಿಕ್ಕದಂತೆ ಕಾಪಾಡುವನು.
2 ಥೆಸಲೊನೀಕದವರಿಗೆ 3 : 4 (IRVKN)
ನಾವು ಆಜ್ಞಾಪಿಸುವ ಪ್ರಕಾರ ನೀವು ಮಾಡುತ್ತೀರೆಂತಲೂ ಮುಂದೆಯೂ ಮಾಡುವಿರೆಂತಲೂ, ನಿಮ್ಮ ವಿಷಯದಲ್ಲಿ ಕರ್ತನ ಮೂಲಕವಾಗಿ ನಮಗೆ ಭರವಸವುಂಟು.
2 ಥೆಸಲೊನೀಕದವರಿಗೆ 3 : 5 (IRVKN)
ನೀವು ದೇವರ ಪ್ರೀತಿಯಲ್ಲಿಯೂ ಅಥವಾ, ಕ್ರಿಸ್ತನನ್ನು ಎದುರುನೋಡುವ. ಕ್ರಿಸ್ತನ ತಾಳ್ಮೆಯಲ್ಲಿಯೂ ಸೇರುವಂತೆ ಕರ್ತನೇ ನಿಮ್ಮನ್ನು ನಡೆಸಲಿ.
2 ಥೆಸಲೊನೀಕದವರಿಗೆ 3 : 6 (IRVKN)
ಮೈಗಳ್ಳರಿಗೆ ಎಚ್ಚರಿಕೆ ಸಹೋದರರೇ, ನಾವು ಬೋಧಿಸಿದ ಸಂಪ್ರದಾಯವನ್ನು ಅನುಸರಿಸದೆ § ವ. 11; 1 ಥೆಸ. 5:14: ಸೋಮಾರಿಯಾಗಿ ಜೀವಿಸುವ ಪ್ರತಿಯೊಬ್ಬ * 1 ಕೊರಿ 5:11: ಸಹೋದರನಿಂದ ನೀವು † ವ. 14; ಮತ್ತಾ 18:17; 2 ತಿಮೊ. 3:5; 1 ಕೊರಿ 5:9; 2 ಯೋಹಾ 10: ದೂರವಾಗಿರಬೇಕೆಂದು ‡ 1 ಕೊರಿ 5:4: ನಮ್ಮ ಕರ್ತನಾದ ಯೇಸು ಕ್ರಿಸ್ತನ ಹೆಸರಿನಲ್ಲಿ ನಿಮಗೆ ಆಜ್ಞಾಪಿಸುತ್ತೇವೆ.
2 ಥೆಸಲೊನೀಕದವರಿಗೆ 3 : 7 (IRVKN)
§ ಅ. ಕೃ. 20:35; 1 ಥೆಸ. 1:6: ನೀವು ನಮ್ಮನ್ನು ಅನುಸರಿಸಿ ಹೇಗೆ ನಡೆಯಬೇಕೆಂಬುದನ್ನು ನೀವೇ ಬಲ್ಲಿರಿ, * 1 ಥೆಸ. 1:5 ನಾವು ನಿಮ್ಮಲ್ಲಿ ಸೋಮಾರಿಯಾಗಿ ನಡೆಯಲಿಲ್ಲ.
2 ಥೆಸಲೊನೀಕದವರಿಗೆ 3 : 8 (IRVKN)
ನಾವು ಹಣಕೊಡದೆ ಯಾರ ಬಳಿಯಲ್ಲಿಯೂ ಊಟ ಮಾಡಲಿಲ್ಲ, 1 ಥೆಸ. 2:9: ನಿಮ್ಮಲ್ಲಿ ಯಾರಿಗೂ ಭಾರವಾಗಬಾರದೆಂದು ಹಗಲಿರುಳು ಕಷ್ಟದಿಂದಲೂ ಪ್ರಯಾಸದಿಂದಲೂ ದುಡಿದು ಜೀವನ ಮಾಡಿದೆವು.
2 ಥೆಸಲೊನೀಕದವರಿಗೆ 3 : 9 (IRVKN)
1 ಕೊರಿ 9:4; 1 ಥೆಸ. 2:6: ನಿಮ್ಮಿಂದ ಪೋಷಣೆ ಹೊಂದುವುದಕ್ಕೆ ನಮಗೆ ಹಕ್ಕಿಲ್ಲವೆಂದು ಹಾಗೆ ಮಾಡಲಿಲ್ಲ, § ವ. 7; 1 ಪೇತ್ರ. 5:3: ನೀವು ನಮ್ಮನ್ನು ಅನುಸರಿಸುವುದಕ್ಕಾಗಿ ನಿಮಗೆ ಮಾದರಿಯಾಗಿರಬೇಕೆಂದೇ ಹಾಗೆ ಮಾಡಿದೆವು.
2 ಥೆಸಲೊನೀಕದವರಿಗೆ 3 : 10 (IRVKN)
ಇದಲ್ಲದೆ ನಾವು ನಿಮ್ಮ ಸಂಗಡ ಇದ್ದಾಗ, * ಆದಿ 3:19; 1 ಥೆಸ. 4:11: “ಕೆಲಸ ಮಾಡಲೊಲ್ಲದವನು ಊಟಮಾಡಬಾರದು” ಎಂದು ನಿಮಗೆ ಆಜ್ಞಾಪಿಸಿದೆವಷ್ಟೆ.
2 ಥೆಸಲೊನೀಕದವರಿಗೆ 3 : 11 (IRVKN)
ಆದರೆ ನಿಮ್ಮಲ್ಲಿ ಕೆಲವರು ಯಾವ ಕೆಲಸವನ್ನೂ ಮಾಡದೆ, 1 ತಿಮೊ. 5:13; 1 ಪೇತ್ರ. 4:15: ಇತರರ ವಿಷಯದಲ್ಲಿ ಮಾತ್ರ ತಲೆ ಹಾಕಿ ಸೋಮಾರಿಯಾಗಿ ನಡೆಯುತ್ತಾರೆಂಬ ಸುದ್ದಿಯನ್ನು ಕೇಳಿದ್ದೇವೆ.
2 ಥೆಸಲೊನೀಕದವರಿಗೆ 3 : 12 (IRVKN)
ಇಂಥವರು ತಮ್ಮ ಕೆಲಸಕಾರ್ಯಗಳನ್ನು ನೋಡುತ್ತಾ ತಾವೇ ಸಂಪಾದಿಸಿದ್ದನ್ನು ಊಟಮಾಡಬೇಕೆಂದು ಕರ್ತನಾದ ಯೇಸು ಕ್ರಿಸ್ತನಲ್ಲಿ ನಾವು ಆಜ್ಞಾಪಿಸಿ ಬುದ್ಧಿ ಹೇಳುತ್ತೇವೆ.
2 ಥೆಸಲೊನೀಕದವರಿಗೆ 3 : 13 (IRVKN)
ಸಹೋದರರೇ, ಗಲಾ. 6:9; 1 ಕೊರಿ 15:58: ನೀವಾದರೋ ಒಳ್ಳೆಯದನ್ನು ಮಾಡುವುದರಲ್ಲಿ ಬೇಸರಗೊಳ್ಳಬೇಡಿರಿ.
2 ಥೆಸಲೊನೀಕದವರಿಗೆ 3 : 14 (IRVKN)
ಈ ಪತ್ರಿಕೆಯ ಮೂಲಕವಾಗಿ ಹೇಳಿರುವ ನಮ್ಮ ಮಾತಿಗೆ ಯಾವನಾದರೂ ಒಳಗಾಗದಿದ್ದರೆ ಅವನನ್ನು ಗುರುತಿಸಿ ಅವನಿಗೆ ನಾಚಿಕೆಯಾಗುವಂತೆ § ವ. 6: ಅವನ ಸಹವಾಸದಲ್ಲಿ ಸೇರಬೇಡಿರಿ.
2 ಥೆಸಲೊನೀಕದವರಿಗೆ 3 : 15 (IRVKN)
ಆದರೂ * ಯಾಜಕ. 19:17; ಮತ್ತಾ 18:15: ಅವನನ್ನು ವೈರಿಯೆಂದು ಭಾವಿಸದೆ ಸಹೋದರನೆಂದು ಎಣಿಸಿಕೊಂಡು ಬುದ್ಧಿಹೇಳಿರಿ.
2 ಥೆಸಲೊನೀಕದವರಿಗೆ 3 : 16 (IRVKN)
ಸಮಾಪ್ತಿ ವಾಕ್ಯಗಳು
2 ಥೆಸಲೊನೀಕದವರಿಗೆ 3 : 17 (IRVKN)
ರೋಮಾ. 15:33: ಶಾಂತಿದಾಯಕನಾದ ಕರ್ತನು ತಾನೇ ಸದಾಕಾಲದಲ್ಲಿಯೂ ಸಕಲವಿಧದಲ್ಲಿಯೂ ‡ ಅರಣ್ಯ 6:26: ನಿಮಗೆ ಶಾಂತಿಯನ್ನು ದಯಪಾಲಿಸಲಿ. ಕರ್ತನು ನಿಮ್ಮೆಲ್ಲರೊಂದಿಗಿರಲಿ.
2 ಥೆಸಲೊನೀಕದವರಿಗೆ 3 : 18 (IRVKN)
§ 1 ಕೊರಿ 16:21: ಪೌಲನೆಂಬ ನಾನು ಸ್ವಂತ ಕೈಯಿಂದ ವಂದನೆಯನ್ನು ಬರೆದಿದ್ದೇನೆ. ಎಲ್ಲಾ ಪತ್ರಿಕೆಗಳಲ್ಲಿಯೂ ಇದೇ ನನ್ನ ಗುರುತು, ಹೀಗೆಯೇ ನನ್ನ ಕೈ ಬರಹ. * ರೋಮಾ. 16:20: ನಮ್ಮ ಕರ್ತನಾದ ಯೇಸು ಕ್ರಿಸ್ತನ ಕೃಪೆಯು ನಿಮ್ಮೆಲ್ಲರ ಸಂಗಡವಿರಲಿ.

1 2 3 4 5 6 7 8 9 10 11 12 13 14 15 16 17 18